Tuesday, December 29, 2009
ರಾಯರು ಹೋದರು ದೇವರ ಮನೆಗೆ
Saturday, October 24, 2009
ಲೋಕದಲ್ಲಿ ಯಾರು ಸಾಯುವದಿಲ್ಲ
ನೆನಪುಗಳು ಎಂದೂ ಸಾಯುವದಿಲ್ಲ, ನಮ್ಮ ಹಿರಿಯರ ನೆನಪು, ಕಂಡ ವ್ಯಕ್ತಿಗಳ ಮಾತು, ನಡುವಳಿಕೆ ಎಲ್ಲವೂ ಹೀಗೆ. ಅವು ಸಾಯುವದಿಲ್ಲ. ನೋಡಿ ಆ ಬಾವಲಿಯಂತೆ ನೇತಾಡಿಕೊಂಡಿರುತ್ತದೆ. ಸಂಧರ್ಬ ನೋಡಿ ನಮ್ಮ ಮನಸ್ಸಿಗೆ ಕೊಂಬೆಗೆ ಹಾರಿಕೊಳ್ಳುತ್ತವೆ. ಲೋಕದಲ್ಲಿ ಯಾವುದಕ್ಕೂ ಸಾವಿಲ್ಲ. ರಾಲೋ,ಎಂ ಹಿರಿಯಣ್ಣ, ಡಾ.ರಾಧಾಕೃಷ್ನನ್, ಗೌರಜ್ಜಿ ಎಲ್ಲಾ ಹೀಗೆ ನನಗೆ ಅಂಟಿಕೊಂಡಿರುತ್ತಾರೆ. ಅರಿಸ್ಟಾಟಲ್, ವೃದ್ಧ ಲಿಯರ್ ಮಹರಾಜ ಇಂತ ಹಳಬರು ಕೂಡ ಹೀಗೆ ನಿರ್ಧಯಿಗಳಾಗಿ ನಮಗೆ ಅಂಟಿಕೊಳ್ಳುತ್ತಾರೆ. ಅದ್ದರಿಂದ ನನಗೆ ಅನಿಸೊತ್ತೆ ಲೋಕದಲ್ಲಿ ಯಾರು ಸಾಯುವದಿಲ್ಲ, ಇಲ್ಲೆ ನೇತಾಡುತ್ತಿತ್ತು ಯಾರಿಗಾದರೂ ಅಂಟಿಕೊಳ್ಳುತ್ತಾರೆ.
ಇದು ಶತಮಾನದ ಕನ್ನಡಿಗ ಎ ಎನ್ ಮೂರ್ತಿರಾಪ್ ಆರ ಮಿತ್ರರಿಗೆ ಹೇಳಿದ ಮಾತುಗಳು ಇವತ್ತು ನೇತಾಡುತ್ತಿತ್ತ ಬಾವಲಿ ತರ ಜ್ಞಾಪಕ ಬಂತು. ಎಷ್ಟು ನಿಜವಾದ ಮಾತುಗಳು ಇವು ,ಲೋಕದಲ್ಲಿ ಯಾರಿಗೂ ಸಾವಿಲ್ಲ ಎಲ್ಲೋ ಒಂದು ವಸ್ತು, ಅಣುವಿನಲ್ಲಿ ಅವರ ಛಾಯೆ ಇದ್ದೆ ಇರುತ್ತದೆ. ಆ ವಸ್ತು ನೋಡಿದಾಗ ಅವರ ಜ್ಞಾಪಕ ಚಕ್ಕನೆ ಆವರಿಸುತ್ತದೆ.
ನಾನು ಎಷ್ಟೋ ಸಾರಿ ಇದನ್ನು ಅಂದುಕೊಂಡಿದ್ದೇನೆ, ಎಷ್ಟೊ ಬಾರಿ ಕೆಲವರನ್ನು ಮರೆತಿದ್ದೇನೆ ಅಂತ ಭಾವಿಸಿದ್ದೇನೆ, ಅವರನ್ನು ನನ್ನ ಜೀವನದಲ್ಲಿ ಬಂದಿದ್ದರ ಅಂತ ಯೋಚಿಸಿದ್ದೇನೆ. ಯಾವುದು ಒಂದು ದಿನ, ಆ ಕ್ಷಣ ಅವರು ಜ್ಞಾಪಕಕ್ಕೆ ಬಂದೂ ಅಣಿಕಿಸುತ್ತ ಇರುತ್ತಾರೆ.
ಇನ್ನು ನಮ್ಮ ಜೀವನದಲ್ಲಿ ಆಪ್ತರ ಬಗ್ಗೆ ಎನು ಹೇಳೋದು ??. ಮೂರ್ತಿ ರಾಯರ ಮಾತು ಸರಿ ಅನಿಸುತ್ತಲೆ ಇರುತ್ತದೆ.
Sunday, October 11, 2009
ಬ್ಲಾಗ್ ಪದಗಳು ..
Blog – ಬ್ಲಾಗ್
Blog Post – ಬ್ಲಾಗ್ ಸುದ್ದಿ
Blogroll – ಬ್ಲಾಗ್ ಸುಳಿ
Blogsite – ಬ್ಲಾಗ್ತಣ
Category: - ಬಗೆ
Hits – ನೊಡ್ಬಂದವರ ಸಂಖ್ಯೆ
Permalink – ಬ್ಲಾಗಚ್ಚೆ
Template – ಮಾದರಿ
Feeds – ಬ್ಲಾಗಮೇವು
Subscribe – ನೊಂದಾಯ್ಸು
Sunday, October 04, 2009
ಕರ್ನಾಟಕದಲ್ಲಿ ನೆರೆ -ಮುಂದೇನು ??
ಹಿಂದೆಂದೂ ಕಂಡಿರದ ನೆರೆ ಪ್ರವಾಹ ನಮ್ಮ ರಾಜ್ಯವನ್ನು ಕಾಡುತ್ತಿದೆ, ಇಲ್ಲಿಯವರೆಗೆ ೨೦೦ಕ್ಕೂ ಹೆಚ್ಚು ಪ್ರಾಣ ಹಾನಿ ಆಗಿದೆ, ಕೋಟ್ಯಾಂತರ ರೂಪಾಯಿ ನಷ್ಟ ಆಗಿದೆ.
ಉತ್ತರ ಕನ್ನಡ,ಧಾರವಾಡದಲ್ಲಿ,ಹಾವೇರಿ ಜಿಲ್ಲೆಯಲ್ಲೂ ನಾಳೆ ಅತಿಯಾದ ಮಳೆ( ೩೨ mm ಕ್ಕಿಂತ ಹೆಚ್ಚು), ನಾಳಿದ್ದು ೧೧+ ಕ್ಕಿಂತ ಹೆಚ್ಚು,ಆಚೆ ನಾಳಿದ್ದು ೯mm ಕ್ಕಿಂತ ಹೆಚ್ಚು ಹೀಗೆ ಸತತವಾಗಿ ೫ ದಿನ ಮಳೆ ಬೀಳುತ್ತಲೆ ಇರುತ್ತದೆ. ಅದ್ದರಿಂದ ಇದರ ತೀವ್ರತೆ ಇನ್ನು ಹೆಚ್ಚಬಹುದು. ಎಲ್ಲೊ ಕ್ಯಾಟರೀನ, ಸುನಾಮಿ ಆದರೆ ಇಲ್ಲಿ ಚಂದಾ ಎತ್ತುವ ನಮ್ಮ ರಾಜ್ಯದ ಸಂಸ್ಥೆಗಳು ಇದನ್ನು ಗಮನಿಸಿಲ್ಲ, ಇನ್ನು ಆಂಗ್ಲ ಮಾಧ್ಯಮಗಳು ಕೂಡ ಇದನ್ನು ದೊಡ್ಡ ಸುದ್ದಿ ಮಾಡದೇ ಇದ್ದಾರೆ.
ಇವತ್ತು ಆಗಬೇಕಾಗಿರುವುದು ಎನು ?
ಇದನ್ನು 3R ಅನ್ನಬಹುದು , ೧)Rescue 2) Relief 3) Rebuild.
Rescue ( ರಕ್ಷಣೆ)
ಮೊದಲು ಇದರಲ್ಲಿ ಸಿಕ್ಕಿ ಹಾಕಿಕೊಂಡವರ ಜೀವ ಉಳಿಸಬೇಕು, ಇದಕ್ಕೆ ಎಲ್ಲಾ ರೀತಿಯ ನೆರವನ್ನು ಪಡೆಯಬೇಕು. ಇದರಲ್ಲಿ ಹೆಚ್ಚ್ಜು ಸಹಾಯ ಆಗೋದು, ಮಿಲಿಟರಿ ಮತ್ತು ಅಗ್ನಿಶಾಮಕ ದಳ ಮತ್ತು ಸಾರ್ವಜನಿಕರು. ಮುಖ್ಯವಾಗಿ ಜಲಾವೃತ ಆಗಿರುವ ಹಳ್ಳಿಗಳಿಂದ ಜನರನ್ನು ಸುರಕ್ಷಿತ ಜಾಗಕ್ಕೆ ತಲುಪಿಸಬೇಕು. ಇಲ್ಲದಿದ್ದಲ್ಲಿ ಗುಡಿಸಲು ಬಿದ್ದು ಹೆಚ್ಚು ಸಾವು ನೋವು ಆಗುತ್ತದೆ
Relief( ಸಹಾಯ)
ನೆರೆ ಬಂದಾಗ ಅದು ರೋಗಗಳ ಅಗರ ಆಗುತ್ತದೆ, ಮುಖ್ಯವಾಗಿ ಎಲ್ಲೆಲ್ಲೂ ನೀರಿದ್ದರು ಕುಡಿಯಲು ಆಗುವದಿಲ್ಲ. ಅದ್ದರಿಂದ ನೀರು ಮತ್ತು ಅಲ್ಲಿಯ ಜನ ತಿನ್ನಲು ಅನಕೂಲ ಮತ್ತು ಹೆಚ್ಚು ದಿನ ಉಳಿಯುವ ಆಹಾರ ಕೊಡಬೇಕು. ಇವತ್ತು ಅಲ್ಲಿ ಜನರಿಗೆ ಅಕ್ಕಿ,ಗೋದಿ ಕೊಟ್ಟರೆ ಅಲ್ಲಿ ಅಡಿಗೆ ಮಾಡಿಕೊಳ್ಳಲು ಪಾತ್ರೆಗಳಿಲ್ಲ. ಅದ್ದರಿಂದ ತಿಂಡಿ ಪೊಟ್ಟಣಗಳನ್ನು ಕಳಿಸುವಾಗ ಹುಶಾರಾಗಿ ಇರಬೇಕು.
Rebuild( ಮರುನಿರ್ಮಾಣ)
ಮನೆ ಜೀವನ ನೆಲೆಸಮ ಆದ ಹಳ್ಳಿಗಳನ್ನು ಕಾಲಕ್ರಮೇಣ ಮರು ಕಟ್ಟಬೇಕು. ಮುಂದೆ ಪ್ರವಾಹ ಜಾಗದಿಂದ ಸ್ವಲ್ಪ ದೂರ ಇದ್ದರೆ ಅನಕೂಲ. ಶಾಲೆಗಳು, ಶೌಚಾಲಯ ಇವುಗಳಿಗೆ ಹೆಚ್ಚು ಗಮನ ಕೊಡಬೇಕು.
ಆಯ್ಕೆಯಾದವರು ಎನು ಮಾಡಬೇಕು...
೧) ಕಾಂಗ್ರೆಸ್, ಜೆಡಿಎಸ್ ಪಕ್ಷಭೇದ ಮರೆತು ನೆರೆವಿನ ಕೆಲ್ಸದಲ್ಲಿ ಸರ್ಕಾರದ ಜೊತೆ ನಿಲ್ಲಬೇಕು. ಕೇಂದ್ರದ ಮೇಲೆ ಒತ್ತಡ ತಂದು ಪರಿಹಾರ ಧನವನ್ನು ಹೆಚ್ಚು ತರಬೇಕು. ಹಿಂದೆ ಮ.ರಾ, ಆಂಧ್ರಗೆ ಕೊಟ್ಟ ಹಾಗೆ ..
೨) ಇವತ್ತು ಸಂತ್ರಸ್ಥರಿಗೆ ಸರ್ಕಾರದ ಸೌಲಭ್ಯ ಸರಿಯಾಗಿ ತಲುಪುವ ಹಾಗೆ ಮಾಡಬೇಕು. ಇದು ಉತ್ತಮ ಅವಕಾಶ ಎಲ್ಲಾ ನಾಯಕರಿಗೂ ಗ್ರಾಮವಾಸ್ತವ್ಯ ಹೂಡಲು. ಎಲ್ಲರೂ ಅಲ್ಲಿ ತಂಗಿ , ನಿಂತು ಕೆಲ್ಸಗಳನ್ನು ನೋಡಿಕೊಳ್ಳಬೇಕು.
೩) ಇದೇ ಹಬ್ಬ ಅಂತ ಚೆನ್ನಾಗಿ ತಿನ್ನುಭಾಕರ ಕೈಗೆ ಈ ನೆರವಿನ ಕೆಲಸ ಸಿಗದೇ, ಪ್ರತಿ ಜಿಲ್ಲೆ,ತಾಲೂಕಿನಲ್ಲಿ ಸಂಸ್ಥೆಗಳು ಅದರಲ್ಲು ಕನ್ನಡ ಸಂಘಟನೆಗಳು ಹಿಂದೆ ಮಾಡಿದ ಹಾಗೆ ವ್ಯವಸ್ಥೆಯನ್ನು ಸರಿಯಾದವರಿಗೆ ಸಿಗುವ ರೀತಿ ನೋಡಿಕೊಳ್ಳಬೇಕು.
೪) ಪರರಾಜ್ಯದಿಂದ ನೆರವು ಬರಬಹುದು, ಅದಕ್ಕೆ ಮೊದಲೇ ತೆಗೆದುಕೊಳ್ಳುವ ಮತ್ತು ನಮಗೆ ಬೇಕಾದ ನೆರವನ್ನು ಅವರಿಗೆ ತಿಳಿಪಡಿಸಬೇಕು.
೫) ಸರ್ಕಾರ ಸಾರ್ವಜನಿಕರಲ್ಲಿ ವಿನಂತಿ ಮಾಡಿ, ಜನರು ಇದಕ್ಕೆ ಯಾವ ರೀತಿ ಸಹಾಯ ಮಾಡಬಹುದು ಎಂದು ಪ್ರಕಟಣೆ ಮಾಡಬೇಕು.
ಒಂದು ವ್ಯವಸ್ಥೆ ಇಲ್ಲದಿದ್ದರೆ ಬಹಳ ಕಷ್ಟ ಆಗುತ್ತದೆ, ಆದ್ದರಿಂದ ಸರಕಾರದ ಒಂದು ವಾಹಿನಿ ಮಾಡಿ ಅದರ ಮೂಲಕ ನಿಗ್ರಹಣೆ ಮಾಡಬೇಕು.
೬) ಸರ್ಕಾರ ಇ ಕೆಲ್ಸಗಳಿಗೆ ಯಾವ ಸಂಸ್ಥೆಗಳ ಸಹಾಯಬೇಕೆಂದೆ ಬಾಯಿಬಿಟ್ಟು ಕೇಳಿ, ಅವರಿಗೆ ಒಂದೊಂದು ಜವಾಬ್ದಾರಿ ಕೊಡಬೇಕು.
೬) ದುಂದುವೆಚ್ಚದ ಎಲ್ಲಾ ಕಾರ್ಯಕ್ರಮಗಳು ರದ್ದಾಗಿ, ಆ ದುಡ್ಡು ಇದಕ್ಕೆ ಹರಿಯಬೇಕು.
೭) ಮಠಗಳು ಜನರಿಗೆ ಆಶ್ರಯ ಕೊಡಬೇಕು ಮತ್ತು ಆಹಾರ,ನೆಲೆ ಜವಾದ್ಬಾರಿ ತೆಗೆದುಕೊಳ್ಲಬೇಕು.
೮) ಸರಕಾರಿ ಅಧಿಕಾರಿಗಳ ರಜೆ ವಜಾ ಮಾಡಿ,ಎಲ್ಲರೂ ಕಾರ್ಯಚರಣೆಗೆ ತಯಾರು ಇರುವ ಹಾಗೆ ಇರಬೇಕು.
೭) ಮುಖ್ಯವಾಗಿ ಮುಂದೆ ಈ ಮಟ್ಟದ ಹಾನಿಯನ್ನು ತಡೆಯುವ ಕ್ರಮಕ್ಕೆ ಮುಂದಾಗಬೇಕು. ಇದು ಯಾವಾಗಲೂ ನೆರೆ ಸಂತ್ರಸ್ಥರ ಪರಿಹಾರ ಆಗದೇ, ನೆರೆ ಸಮಸ್ಯೆಯ ಪರಿಹಾರ ಆದರೆ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬರುವ ಮುಂಚೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ಧ್ಯಾನ,ಶವಾಸನ ಅಂತ ಸಮಯ ಹಾಳು ಮಾಡದೆ
Sunday, September 20, 2009
ಬೊಂಬೆಯಾಟವಯ್ಯ...
Wednesday, September 16, 2009
World Wide survey by UN
Worldwide survey was conducted by the UN. The only question asked was:
"Would you please give your honest opinion about solutions to the food shortage in the rest of the world?"
The survey was a huge failure, In Africa they didn't know what 'food' meant, In India they didn't know what 'honest' meant, In Europe they didn't know what 'shortage' meant, In China they didn't know what 'opinion' meant, In the Middle East they didn't know what 'solution' meant, In South America they didn't know what 'please' meant, And in the USA they didn't know what 'the rest of the world' meant!
Saturday, September 12, 2009
ಪ್ರೇಮಕಹಾನಿ - Prem Kahani Film Review
" ಲೇ ಮಂಜ ನೀನಾ ಇದು, ಸಿಗರೇಟ್ ಸೇದಿಕೊಂಡು ರಿಂಗ್ ಬಿಡುತ್ತಾ ಹೀರೋ ತರ ಇದ್ದೇಯಲ್ಲೊ ಇವತ್ತು ಮೋಟು ಬೀಡಿ ಸೇದೊ ಲೆವಲ್ಲಿಗೆ ಬಂದಿದ್ದೀಯಾ. ಅಲ್ಲ ಆ ದೇವತೆ ಅಂತ ಹುಡುಗಿ ನಿನಗೆ ಎಲ್ಲಾ ತ್ಯಾಗ ಮಾಡಿದಳು, ನೀನು ಎನು ಕೊಟ್ಟೆ. ಅವಳನ್ನು ಡಿಟಿಪಿ ಕೆಲ್ಸಕ್ಕೆ ಹಾಕಿ ಅವಳ ದುಡ್ಡಿನಲ್ಲಿ ಮಜಾ ಮಾಡ್ತಾ ಇದ್ದೀಯಾ. ಬೆನ್ನ ಹಿಂದೆ ಬಂದ ಹೆಣ್ಣನ್ನು ಕಣ್ಣಿಗೆ ಕಣ್ಣು ಹಾಗೆ ಕಾಪಾಡೊನೆ ಗಂಡಸು, ನೀನು ಅಲ್ಲಬದಕಿದ್ದು ನೀನು ಅವಳನ್ನು ಮಗನನ್ನು ಬದುಕೊಕ್ಕೆ ಬಿಡೊಲ್ಲ, ಸಾಯಿ ಆಗ ಅವಳು ತನ್ನ ಅಪ್ಪನ ಮನೆಗೆ ಹೋಗುತ್ತಾಳೆ "
"ಚೀ,,ನೀನು ಒಬ್ಬ ಗಂಡಸಾ, ನಿನ್ನ ನಂಬಿಕೊಂಡು ಎಲ್ಲಾ ಬಿಟ್ಟು ಬಂದನಲ್ಲೊ , ಆದ್ರೆ ನೀನು ಹೇಡಿ ತರ ಸತ್ತಿದ್ದೀಯಾ. ನಾಚಿಕೆ ಆಗೊತ್ತೆ ನನಗೆ, ನಿನಗೆ ಒಂದು ಕಣ್ಣಿರು ಹಾಕಿದರು ಅದೂ ವೇಸ್ಟೇ. ಪ್ರೇಮಿಗಳೆಲ್ಲಾಸತ್ತು ಲೈಲಾ ಮಜನು,ಶಹಜಹಾನ ಆಗಬೇಕಾಗಿಲ್ಲ, ಬದುಕಿದ್ದು ಎನಾದರು ಸಾಧಿಸಬೇಕು. ನನ್ನ ಮಗನನ್ನುನಿನ್ನ ತರ ಮಾಡೊಲ್ಲ. ಅವನನ್ನು ಐನಸ್ಟೈನ್ ಮಾಡುತ್ತೆನೆ ಅಂತ ಶಪಥ ಮಾಡಿ ನಿನಗೆ ಒಂದು ಹಿಡಿ ಮಣ್ಣು ಹಾಕೊಲ್ಲ ಅಂತ ಹೋಗುತ್ತಾಳೆ.
Saturday, August 22, 2009
ಮಂತ್ರಗಳಿಂದ ಅಭಿವೃದ್ದಿ ಸಾಧ್ಯ- ಸಂಸ್ಕೃತ ವಿವಿ ಬೇಕೇ ಬೇಕು!!!
ಬ್ಲಾಗ್,ಕಾಮೆಂಟ್ ಮತ್ತು ಸುತ್ತಮುತ್ತ
Friday, August 21, 2009
ಕರ್ನಾಟಕದ ಮತ್ತೊಂದು ಮರುಚುನಾವಣೆ-ವಿಶ್ಲೇಷಣೆ
ಬಿಜೆಪಿಗೆ ಇದು ಮಿಶ್ರ ಫಲಿತಾಂಶ, ಅನೇಕ ಕಡೆ ಬಿಜೆಪಿ ಖ್ತಾತೆ ತೆರೆದಿದೆ, ಜನರಿಗೆ ಒಮ್ಮೆ ಇವರಿಗೂ ಕೊಟ್ಟು ನೋಡೊಣ ಅನ್ನೊ ಮನಸ್ಸು ಬಂದಿದೆ,ಅದರಲ್ಲೂ ಹಿಂದುಳಿದ ಮಿಸಲು ಕ್ಷೇತ್ರದಲ್ಲಿ ಗೆದ್ದಿರುವುದು ಸಂತೋಷದ ವಿಷಯ ಅವರಿಗೆ, ಮುಂದೆ ಇದಕ್ಕೆ ಹೆಚ್ಚು ಒತ್ತು ಕೊಟ್ಟರೆ ಕೇವಲ ಮುಂದುವರೆದ ವರ್ಗಗಳ ಪಕ್ಷ ಅನ್ನೋ ಹಣೆಪಟ್ಟಿ ಬದಲಾಯಿಸಬಹುದು.
Sunday, August 09, 2009
ತಪ್ಪನ್ನು ಮತ್ತೆ ಮಾಡುವುದು ದೊಡ್ಡ ತಪ್ಪು..
Saturday, August 08, 2009
ಶೀರ್ಷಿಕೆ ಇಲ್ಲದ ಕವಿತೆ
ನಾನು ಯಾರು ?
ನಲ್ಲ ಕಾತುರದಲ್ಲಿ, ಆತುರಲ್ಲಿ ಬಾಗಿಲನ್ನು ತಟ್ಟಿದ
ಯಾರದು ಎಂದು ಒಳಗಿನಿಂದ ಮಧುರ ದನಿ
ನಾನು ಎಂದ ನಲ್ಲ.
ಹೋಗಾಚೆ, ಈ ಮನೆಯಲ್ಲಿ ನನಗೆ ನಿನಗೆ ಅಂತ ಇಲ್ಲ
ದು:ಖತಪ್ತನಾಗಿ ಊರುರು ಅಲೆದಾ,ಸುತ್ತಿದ, ಬಳಲಿದ
ಕೊನೆಗೆ ಮತ್ತೆ ಬಂದು ಬಾಗಿಲು ತಟ್ಟಿದ
ಯಾರದು ??
ನಿನ್ನ ಪ್ರೀತಿ ಎಂದ, ಬಾಗಿಲು ತೆರೆಯಿತು.
ಕ್ಷಮೆ
ಸದಾ ನನ್ನ ತಪ್ಪನ್ನೇ ಕೆದಕುತ್ತ ಇರುವೆಯಲ್ಲ,
ನೀನು ಕ್ಷಮಿಸಿದ್ದೀಯಾ, ಮರೆತಿದ್ದೀಯಾ ಅಂತ ಅಂದುಕೊಂಡಿರುವೆ
ಎಂದ ಗಂಡ
ಹೌದು, ಆದರೆ ನೀನು ಕ್ಷಮಿಸಿದ್ದೀನಿ, ಮರೆತಿದ್ದೀನಿ
ಎಂಬುದನ್ನು ಮರೆಯಬಾರದು
ಎಂದು ಹೇಳಿದಳು ಹೆಂಡತಿ.
ಶ್ರೀಮಂತಿಕೆ
ಹಗಲು ರಾತ್ರಿ ದುಡಿಯುವೆ, ಬೆವರು ಹರಿಸುವೆ
ಒಂದು ದಿನ ನಾವು ಶ್ರೀಮಂತರಾಗುತ್ತೆವೆ ಚಿನ್ನ ಎಂದ ಗಂಡ,
ನಾವು ಶ್ರೀಮಂತರೇ, ನಿನಗೆ ನಾನು, ನನಗೆ ನೀನು, ನಮಗೆ ಪ್ರೀತಿ ಇದೆ
ಮುಂದೊಂದು ದಿನ ಅದರ ಜೊತೆ ದುಡ್ಡು ಬರಬಹುದು ಅಷ್ತೆ ಎಂದಳು ಹೆಂಡತಿ
Thursday, August 06, 2009
SWINE FLU-Interesting facts...
Swine Flu: Pigs to fly soon?
Vaccine May Be More Dangerous Than Swine Flu
New Threat: Antibiotic-resistant Bacteria Causes Deadly Pneumonia
H1N1 Swine Flu Appears Similar to 1918 Pandemic Virus; WHO Recommends Vaccines Use Live (Attenuated) Influenza
Children and Pregnant Women Targeted in U.S. Swine Flu Mass Vaccination Program
India likely to develop swine flu vaccine in 4-6 months
Startling New Evidence That The 'Swine Flu' Pandemic Is Man-Made
Government Swine Flu Advisor On Vaccine Maker Payroll
371-D ಮತ್ತು ಹೈದರಬಾದ್ ಕರ್ನಾಟಕ
371-2 ಹೆಚ್ಚು ಲಾಭವಿಲ್ಲ, ಅದ್ದರಿಂದ ೩೭೧-ಡಿ ಗೆ ಬದಲಾವಣೆ ತಂದು, ಅದರ ಮುಖಾಂತರ ಹೆಚ್ಚಿನ ಅನುದಾನ ಮತ್ತು ವಿದ್ಯಾಭ್ಯಾಸ ಮತ್ತು ಸರಕಾರಿ ನೌಕರಿಗಳಲ್ಲಿ ಮಿಸಲಾತಿ ಹೆಚ್ಚಿನದು ಸಿಗಬೇಕು, ಇದು ತೆಲಂಗಾಣ ಮಾದರಿಯಲ್ಲಿ ಇರಬೇಕು, ವಿಧರ್ಬ ಮಾದರಿಯಲ್ಲಿ ಅಲ್ಲ ಅನ್ನುವ ಮುಖ್ಯಮಂತ್ರಿ ಯಡಿಯುರಪ್ಪ ಅವರ ಮಾತುಗಳು ಸರಿಯಾಗಿದೆ.
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡ ...
ಬೆಳಿಗ್ಗೆ ಎದ್ದ ಕೂಡಲೇ ವಿಕ ಓದದೇ, ಕಾಫಿ ಕುಡಿಯದೇ ದಿನ ಆರಂಭಿಸುವದಿಲ್ಲ. ಇವತ್ತು ಮುಖಪುಟದಲ್ಲಿ ಮತ್ತೊಂದು ಪ್ರಾಯೋಜಿತ ಲೇಖನ ಮತ್ತು ಬಾಕ್ಸ ಐ.ಟಂನಲ್ಲಿ ಬುದ್ದಿವಾದ ಬೇರೆ ಹೇಳಿದ್ದಾರೆ, ಇದನ್ನು ನೋಡಿ ನಗು ಬಂತು
* ಲೇಖನವನ್ನು ಹೊಗಳೀಯೇ ಬರೆಯಬೇಕು ಅಂತ ಹೊರಟಿದ್ದ ಹಾಗಿದ್ದ ಕಾರಣ, ಪೂರ್ವದಲ್ಲಿ ಇರುವ ಬೇವಿನ ಮರ, ಮೇಲೆ ಇರುವ ನೀಲಾಕಾಶ, ಉತ್ತರದಲ್ಲಿ ಇರುವ ಕನ್ನಡ ಶಾಲೆ, ಆಲ್ಲಿಂದ ಕೇಳಿ ಬರುವ ಕನ್ನಡ ಮಾತುಗಳು, ಅದಕ್ಕೆ ದನಿಗೂಡಿಸುವ ಹಕ್ಕಿಗಳ ಕಲರವ ಎಲ್ಲವೂ ಕಂಡಿದೆ. ಅಪರೂಪದ ಈ ತಾಣ ಪಡೆಯಲು ನಾವು ಪುಣ್ತ್ಯ ಮಾಡಿರಬೇಕು ಬಿಡಿ, ಪಾಪ ಯಾಕೋ ದಕ್ಷಿಣದಲ್ಲಿ ಸಮುದ್ರದ ಅಲೆ,ಉಕ್ಕಿ ಹರಿಯುವ ಭೋರ್ಗೆರತ ವಿಮರ್ಶಕರಿಗೆ ಬೀಳದೆ ಇದ್ದಿದ್ದು ಆಶ್ಚರ್ಯವೇ ಸರಿ.
ಅಬ್ಬಾ ಕನ್ನಡಿಗನಿಗೆ ಅದರಲ್ಲು ಸರ್ವಜ್ಞನಿಗೆ ಎನು ಬೇಕು ಕೇಳಿ. ಇದನ್ನು ಓದಿ ಅನೇಕ ಕನ್ನಡಿಗರಿಗೆ ಇದ್ದ ಆತಂಕ ಮರೆಯಾಯಿತು ಬಿಡಿ. ಇನ್ನು ಒಂದು ವಾರ ಪೋಲಿಸರ ಸರ್ಪಗಾವಲು ಇದಕ್ಕೆ ಬೇರೆ,
ಇದು ಎಲ್ಲೊ ದೇವಿಶೆಟ್ಟಿ ಮಹೇಶ್ ಬರೆಯುವ ಚಿತ್ರ ವಿಮರ್ಶೆ ಇದ್ದ ಹಾಗೆ ಇದೆ ಅನಿಸೊದು ಸಹಜವೇ, ಅದರಲ್ಲು ಇದೇ ರೀತಿ
ಶಿವಾಜಿ ಚಿತ್ರದ ಪ್ರಯೋಜಿತ ಲೇಖನ ನೆನಪಿಗೆ ನಿಮಗೆ ಬಂದರೆ ಅದು ನಿಮ್ಮ ಅತೀ ಜ್ಞಾಪಕದ ರೋಗ ಅಷ್ಟೆ.
ಇದನ್ನು ಮುಖಪುಟದಲ್ಲಿ ಹಾತೊರೆದು ಪ್ರತ್ಯಕ್ಷ ವರದಿ ಎಂದು ಪ್ರಕಟಿಸಿರುವ ಕನ್ನಡಿಗರ ಹೆಮ್ಮೆಯ ಪತ್ರಿಕೆಗೆ, ಮತ್ತೊಂದು ರಾಜ್ಯಗಳ ಭಾಂದವ್ಯ ಬೆಸೆಯುವ ,ರಚನಾತ್ಮಕ ಕಾರ್ಯ ಕಾಣಲಿಲ್ಲ ಅನಿಸೊತ್ತೆ. ಕೊನೆಗೆ ಪುಟದವರೆಗೂ ಹುಡುಕಿದೆ, ಆದರೆ ಎಲ್ಲೂ ಅದರ ಬಗ್ಗೆ ಚಕಾರ ಇಲ್ಲ...
* ನಮ್ಮ ಭಾಂದವ್ಯ ಬೆಸಯಲು ಹೊರಟ ತಮಿಳುನಾಡು ಸರಕಾರ ನಮ್ಮ ೩ ಜಲಾಶಯಗಳ ವಿರುದ್ಧ ತಕರಾರು ಅರ್ಜಿ ಸಲ್ಲಿಸಿತ್ತು, ಅದು ಹಿಯರಿಂಗ ಬಂದಿದೆ, ಯಾಕೆ ಅಂದರೆ ತಮಿಳರಿಗೆ ಅದಷ್ಟು ಬೇಗ ಇದನ್ನು ಪರಿಹರಿಸಬೇಕು , ತಮಿಳರಿಗೆ ಆದ ಅನ್ಯಾಯವನ್ನು
ಸರಿ ಮಾಡಬೇಕು ಅಂತ ಕಾಳಜಿ ಇದೆ. ಇದು ನಮ್ಮ ಕನ್ನಡದ ಒಂದು ಪತ್ರಿಕೆಯಲ್ಲಿ ಪ್ರಕಟಿಸದೇ ಕನ್ನಡಿಗರನ್ನು
ಕತ್ತಲೆಯಲ್ಲಿ ಇಟ್ಟು , ನಮ್ಮ ಕನ್ನಡ ಹೋರಾಟಗಾರರಿಗೆ ಬುದ್ಧಿ ಹೇಳಲು ಹೋರಟಿದ್ದಾರೆ.
* ೯೫% ಪ್ರತಿಶತ ಜನರ ಬೆಂಬಲ ಇದೆ, ಇದು ಜನಮನ್ನಣೆ ಅನ್ನೊ ಮಾತುಗಳನ್ನು ಓದುತ್ತ ಇದ್ದೇವೆ, ಹಾಗಿದ್ದಲ್ಲಿ ಯಾಕೆ ಬೇಕು ಈ ಪ್ರಾಯೋಜಿತ ಲೇಖನಗಳು ಮತ್ತು ಮಹನೀಯರ ಉಕ್ತಿಗಳು. ಅಷ್ಟಕ್ಕು ೫% ವಿರೋಧಿಸುತ್ತ ಇರುವರ ಬಗ್ಗೆ ಯಾಕೆ ಬುದ್ಧಿವಾದ ಹೇಳಬೇಕು ಇಲ್ಲ ಅವರ ಬಗ್ಗೆ ತಲೆ ಕೆಡಿಸಿಕೊಳ್ಲಬೇಕು ಅಂತ ಅರ್ಥ ಆಗುತ್ತಿಲ್ಲ.
ಇದಕ್ಕೆ ಹೇಳುವುದು ಪ್ರತ್ಯಕ್ಶವಾಗಿ ಕಂಡರೂ ಪ್ರಮಾಣಿಸಿ ನೊಡಬೇಕು ಅಂತ ..
ಅದನ್ನು ಅಯನಾವರಂನಲ್ಲಿ ಯಾಕೆ ಬೇಡ? ಅಂತ ಅವಿ ಬಹಳ ಚೆನ್ನಾಗಿ ಹೇಳಿದ್ದಾರೆ...
ಓದುವಾದಗಳೇಕೆ | ಗಾದೆಯ ಮಾತೇಕೆ
ವೇದ-ಪುರಾಣ ನಿನಗೇಕೆ - ಲಿಂಗದ
ಹಾದಿಯನರಿದವಗೆ ಸರ್ವಜ್ಞ
ಭಾಷ ಅಲ್ಪ ಸಂಖ್ಯಾತರ ಒಲೈಕೆ- ಹೊಸ ಮಂತ್ರ
ಇತ್ತಿಚಿಗೆ ನಡೆಯುತ್ತಿರುವ ವಿದ್ಯಾಮಾನಗಳನ್ನು ನೊಡುತ್ತ ಇದ್ದರೆ,ಅದರಲ್ಲೂ ಬೇರೆ ಭಾಷಿಕರನ್ನು ಮುಖ್ಯವಾಹಿನಿಗೆ ಸೇರಲು ಬಿಡದೆ ಅವರನ್ನು ಹಾಗೆ ಇರುವ ಹಾಗೆ ಮಾಡಿ, ಅವರನ್ನು ವೋಟಬ್ಯಾಂಕಾಗಿ ಪರಿವರ್ತಿಸುವ ಕೆಲ್ಸ ಬಹಳ ವ್ಯವಸ್ಥಿತವಾಗಿ ನಡೆಯುತ್ತಿದೆ.ಇದು ಒಂದು ಕಡೆ ಮತ ರಾಜಕಾರಣ ಅನಿಸಿದರೆ ಇನ್ನೊಂದು ಕಡೆ ಕನ್ನಡ ಸಂಘಟನೆಗಳನ್ನು ಮಟ್ಟ ಹಾಕುವ ಪ್ರಕ್ರಿಯೆ.
ತಮಿಳು ಸಮಾವೇಶ
ಮಾರ್ಚ್ 29ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತಮಿಳು ಸಮಾವೇಶದಲ್ಲಿ ಕೂಡ ನಡೆದಿದ್ದು ಅದೇ,
ಸುಮಾರು ೨೫ ಲಕ್ಷ ಕೊಟ್ಟಿದ್ದಾರೆ ತಮಿಳು ಸಂಘಕ್ಕೆ ಅಂತ. ಇದರಲ್ಲಿ ಕೇವಲ ಬಿಜೆಪಿಗೆ ಮಾತ್ರ ಆಹ್ವಾನವಿತ್ತು, ಕಾರಣ ಆಡಳಿತ ಸರಕರವನ್ನು ಕರೆದಿದ್ದೆವು ಅಂತ. ಶಂಕರ ಮೂರ್ತಿ, ಜೂ.ಯಡಿಯೂರಪ್ಪ, ಹಾಲಪ್ಪ, ಕುಮಾರಸ್ವಾಮಿ ಆಗಿ ಎಲ್ಲರು ಪಾಲ್ಗೋಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು. ಈ ತಮಿಳು ಸಂಘ ೭೦ ಲಕ್ಷ ವೆಚ್ಚದಲ್ಲಿ ತಮಿಳು ಭವನ ಕಟ್ಟಿಸುತ್ತ ಇದೆ, ಇದಕ್ಕೂ ಕೂಡ ನಮ್ಮ ಕನ್ನಡ ಸರಕಾರವೆ ಹಣ ಕೊಟ್ಟಿರುತ್ತದೆ. ಇದನ್ನು ಕಾರ್ಯಕ್ರಮದ ವ್ಯವಸ್ಥಾಪಕರೇ ಹೇಳುವ ಹಾಗೆ ಸಮಾಜದ ಸಂಘಟನೆ ಅಂತ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಹೊಂದಿರುವ ತಮಿಳು ಜನರನ್ನು ತಮ್ಮಡೆ ಸೆಳೆದುಕೊಳ್ಳಲು ಚಿಕ್ಕ ಕಾಣಿಕೆ ಕೊಟ್ಟಿದ್ದಾರೆ ಅಂತ ಬಂಗಾರಪ್ಪ ಆದಿ ಎಲ್ಲರೂ ಹೇಳಿದ್ದು.
ಮರಾಠಿ ಮೇಳ
ಅದೇ ಸಮಯದಲ್ಲಿ ಬೆಳಗಾವಿಯಲ್ಲಿ ಭಾರತೀಯ ಜನತಾ ಪಕ್ಷದ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಕನ್ನಡಗರಿಗೆ ಭಾರಿ ಅಘಾತ ನೀಡಿದ್ದರು.ಕನ್ನಡಿಗರು ವಿರೊಧಿಸುತ್ತ ಇದ್ದ ವಿಷಯವನ್ನು ಸಂಸದ ಅಂಗಡಿ ಹಾಗೂ ಶಾಸಕ ಸಂಜಯ ಪಾಟೀಲ್ ಕೈಗೆತ್ತಿ ಕೊಂಡು, ಭಗವಾಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬಹಿರಂಗವಾಗಿಯೇ ಬೆಂಬಲ ನೀಡಿದ್ದರು. ಇದು ಕೂಡ ಅಲ್ಲಿ ನೆಲಸಿರುವ ಮರಾಠಿ ಜನರನ್ನು ಸೆಳೆಯಲು ಅಂತ ಹೇಳಬೇಕಾಗಿಲ್ಲ. ಮರಾಠಿ ಮತಗಳು ಬೇಕು ಎಂದರೆ, ಕನ್ನಡಿಗರೇ ನಮ್ಮ ಕಾಲಿಗೆ ಬೀಳುತ್ತಾರೆ, ನಮ್ಮನ್ನು ಬೆಂಬಲಿಸುತ್ತಾರೆ ಅಂತ ಮನವರಿಕೆ ಮಾಡಿಕೊಂಡ
ಆಟಕ್ಕುಂಟು ಲೆಕ್ಕಕಿಲ್ಲ ಅನ್ನೊ ಹಾಗೆ ಆಗಿದ್ದ ಎಂ.ಇ.ಎಸ್ ಇದರಿಂದ ಚೇತರಿಕೆ ಕಂಡಿತು.
ಪಾಡುತ ತೀಯಗ
ಮತ್ತೆ ಎಪ್ರಿಲ್ ಮೊದಲ ವಾರದಲ್ಲಿ ಇದೇ ಬಿಜೆಪಿ ಪಕ್ಷ ತೆಲುಗು ಭಾಷಿಕರ ಸಮಾವೇಶವನ್ನು ಮಾಡಿ ತೆಲುಗು ಮತಗಳನ್ನು ತನ್ನಡೆ ಸೆಳೆಯಲು ಪ್ರಯತ್ನಿಸಿತು. ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಸ್ನೇಹ ಮಿಲನ ಅಂತ ಮಾಡಿತ್ತು. ಕಟ್ಟಾ, ವೆಂಕಯ್ಯ ನಾಯ್ಡು ಎಲ್ಲರೂ ಪಾಲ್ಗೊಂಡಿದ್ದರು ಇದರಲ್ಲಿ. ಕಾರ್ಯಕ್ರಮ ಸಂಪೂರ್ಣ ತೆಲುಗುನಲ್ಲಿ ನಡೆಯಿತು.
ūṭaluvakai
ತಮಿಳುನಾಡು ಶಾಸ್ತ್ರೀಯ ಭಾಷೆ ವಿಚಾರದಲ್ಲಿಯಾಗಲಿ, ಕಾವೇರಿ ವಿಚಾರದಲ್ಲಿಯಾಗಲಿ, ಹೊಗೇನಕಲ್ ವಿಚಾರದಲ್ಲಿಯಾಗಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ ಎಸಗಿದರೂ ಸಹ ನಮ್ಮ ಬಿಜೆಪಿ ರಾಜ್ಯ ಸರಕಾರ ಇವನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಮುಂದಾಗಿದೆ. ಮತ್ತದೇ ಬೆಂಗಳೂರಿನಲ್ಲಿ ತಮಿಳರನ್ನು ಒಲೈಸಲು ಮಾಡಿರುವ ಕೆಲ್ಸ ಇದು.
ಕಳೆದ ೬ ತಿಂಗಳಲ್ಲಿ ಇವೆಲ್ಲಾ ವಿದ್ಯಾಮಾನಗಳನ್ನು ನೊಡುತ್ತ ಇದ್ದರೆ ನನಗೆ ಅನಿಸುವುದು ಒಂದೇ
೧) ಪರ ಭಾಷಿಕರನ್ನು ಒಲೈಸುವಿಕೆ
೨) ಇವೆಲ್ಲಾ ಕಾರ್ಯಕ್ರಮಗಳ ಮುಂದೆ ಒಂದು ಚುನಾವಣೆ ಇರುತ್ತದೆ.
೩) ಕನ್ನಡಿಗರ ಪ್ರತಿರೋಧವನ್ನು ಲೆಕ್ಕಿಸದೇ, ಕನ್ನಡ ವಿರೋಧಿ ಕೆಲ್ಸ ಮಾಡುವುದು.
೪) ತಮ್ಮ ಈ ಕ್ರಮಗಳನ್ನು ಸಮರ್ಥಿಸಿಕೊಳ್ಳಲು ಪತ್ರಿಕೆಗಳಲ್ಲಿ ಪ್ರಾಯೋಜಿತ ಲೇಖನಗಳನ್ನು ಬರೆಸುವುದು.
ಕನ್ನಡದ ಚಿಂತಕರು, ಸಾಹಿತಿಗಳು, ರಾಷ್ಟ್ರಕವಿಗಳು, ಯಿಗದ ಕವಿಗಳು ಇದನ್ನು ಸಮರ್ಥಿಸಿಕೊಳ್ಳುತ್ತ ಕನ್ನಡಿಗರಿಗೆ ಅನ್ಯಾಯ ಮಾಡುವುದು.
೫) ಕನ್ನಡ ಸಂಘಟನೆಗಳ ವಿರುದ್ಧ ಪರಭಾಷಿಕರನ್ನು ಸಂಘಟಿಸಿ ಅವರ ಬೆಂಬಲಕ್ಕೆ ನಿಂತಿರುವುದು.
ದೇಶ ಮೊದಲು, ಭಾಷೆ ಅಂತ ಹೇಳುವುದು ರಾಷ್ಟೀಯತೆ ವಿರುದ್ಧ ಅಂತ ನಂಬಿರುವ ಪಕ್ಷದಿಂದ
ಮುಂದಿನ ದಿನಗಳಲ್ಲಿ ಇನ್ನೇನು ಕನ್ನಡಿಗ ನೋಡಬೇಕೋ ನಾ ಕಾಣೆ.ಅದಕ್ಕಿಂತ ಭಯ ಆಗುವುದು ನಮ್ಮ ಕನ್ನಡ ಚಿಂತಕರ, ಪತ್ರಕರ್ತರ,ಅವತಾರ ಪುರುಷಗಳ ಸಮರ್ಥನೆ.
Monday, August 03, 2009
ಕನ್ನಡಿಗ ಸಣ್ಣವ, ಅಸಹನೆಯುಳ್ಳವ, ಭಾಷಾಂದ, ಕನ್ನಡೇತರರ ವಿರೋಧಿ, ಸದಾ ದ್ವೇಷ ಸಾಧನೆಯ ಗುರಿಯುಳ್ಳವ!!
ಇದು ನನಗೆ ಬಂದ ಮಿಂಚೆ, ಇದನ್ನು ನಾವು ಕನ್ನಡ ಮಾಧ್ಯಮಗಳlli ನೋಡಲು ಆಗುವದಿಲ್ಲ. ಯಾಕೆಂದರೆ ಪ್ರಾಯೋಜಿತ ಲೇಕನಗಳನ್ನು ಬರೆಸಿ ಹಾಕುವ ಆ ಮಂದಿಗೆ ಇ ತರಹದ ಪತ್ರಗಳನ್ನು ಕಸದ ಬುಟ್ಟಿಗೆ ಹಾಕಿ , ಜನರನ್ನು ತಪ್ಪು ದಾರಿಗೆ ತಳ್ಳುತ್ತಿದ್ದಾರೆ, ಆದ್ದರಿಂದ ಇದನ್ನು ಪ್ರತಿಯೊಬ್ಬ ಕನ್ನಡ ಬ್ಲಾಗಿಗ ಪ್ರಕಟಿಸಬೇಕು.
೨೦೦೯ ವರ್ಷವನ್ನು ಕನ್ನಡ ಅನುಷ್ಠಾನ ವರ್ಷವನ್ನಾಗಿ ಘೋಷಿಸಿ! ಬೆಂಗಳೂರಿನ ಹಲಸೂರು ಕೆರೆ ಅಂಗಳದಲ್ಲಿ ತಿರುವಳ್ಳುವರ್ ಪ್ರತೆಮೆ ಅನಾವರಣಕ್ಕೆ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ಪಣ ತೊಟ್ಟು ನಿಂತಿದೆ. ಕಳೆದೆರಡು ವಾರಗಳಿಂದ ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ನಮ್ಮ ಸಾಹಿತಿ ಬುದ್ದಿ ಜೀವಿಗಳು! ಕನ್ನಡ ಪರ ಚಿಂತಕರು! ಕರ್ನಾಟಕದ ಬಹುತೇಕ ಎಲ್ಲಾ ಕನ್ನಡ ಪತ್ರಿಕೆಗಳವರು ಸರ್ಕಾರದ ಈ ಯೋಚನೆಗೆ ಬೆಂಬಲ ಸೂಚಿಸಿ ಹೇಳಿಕೆಗಳನ್ನು ನೀಡುತ್ತ, ಸಮಸ್ತ ಕನ್ನಡಿಗರು ತಮ್ಮ ಸಣ್ಣತನ, ಅಸಹನೆ, ಸಂಕುಚಿತತೆ, ವಿರೋಧ, ವೈಮನಸ್ಯ ತೊರೆದು ಸರಕಾರದ ಈ ನಿಲುವಿಗೆ ಬೆಂಬಲ ತೋರಬೇಕೆಂದು ಕರೆ ನೀಡುತ್ತಿದ್ದಾರೆ.
ಈ ನಿಟ್ಟಿನಲ್ಲಿ ನಾವೆಲ್ಲ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣವನ್ನು ಏಕೆ ತಡೆ ಹಿಡಿಯಲಾಗಿದೆ ಎಂಬುದನ್ನು ಒಮ್ಮೆ ಹಿಂತಿರುಗಿ ನೋಡಬೇಕಿದೆ:
೧೯೯೧ರಲ್ಲಿ ಬೆಂಗಳೂರಿನ ಹಲಸೂರು ಕೆರೆ ಅಂಗಳದಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಕೆಲವು ತಮಿಳು ಹಿತಾಸಕ್ತಿದಾರರು ಮುಂದಾಗಿದ್ದಾಗ, ಕನ್ನಡಪರ ಸಂಘಟನೆಗಳ ಒಗ್ಗೂಡಿದ ಪ್ರತಿಭಟನೆಯಿಂದಾಗಿ ಅನಾವರಣ ಸ್ಥಗಿತಗೊಂಡಿತ್ತು. ಈ ೧೮ ವರ್ಷಗಳಲ್ಲಿ ತಮಿಳರ ಪರವಾದ (ಸಂಕೇತವಾದ!) ಈ ಪ್ರತಿಮೆ ಅನಾವರಣದ ವಿರೋಧಕ್ಕೆ ಕಾಲಾನುಕಾಲವಾಗಿ ಪಟ್ಟಿ ಮಾಡಬಹುದಾದ ಕಾರಣಗಳು:
ತಮಿಳರು ನಾವು ಬೆಂಗಳೂರಿನವರು ಆದರೆ ಕರ್ನಾಟಕಕ್ಕೆ ಸೇರಿದವರಲ್ಲ ಎಂಬ ಭಾವನೆ ಇಟ್ಟುಕೊಂಡಿರುವುದು, ಇಲ್ಲಿ ನೆಲೆಸಿರುವ ತಮಿಳರ ಉದ್ದೇಶ ಬೆಂಗಳೂರನ್ನು ಕೇಂದ್ರಾಡಳಿತಕ್ಕೆ ಒಳಪಡಿಸುವುದಾಗಿರುವುದು , ತಿರುವಳ್ಳುವರ್ "ರಾಷ್ಟ್ರ ಕವಿ" ಅವರ ಪ್ರತಿಮೆ ಸ್ಥಾಪನೆ ಬೇಡ ಎನ್ನುವ ಕನ್ನಡಿಗರು ಎಂತಹ ದೇಶ ಭಕ್ತರು ಎಂದು ಸಹೃದಯಿಗಳಾದ ಕನ್ನಡಿಗರನ್ನೇ ಪ್ರಶ್ನಿಸಿದ್ದು,
ಅಂದು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಿ ಎಂದು ಬರಹಗಳನ್ನು ಬರೆಸಿ, ಸರ್ಕಾರವನ್ನು ಆಗ್ರಹಿಸಿ, ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಭರವಸೆ ನೀಡುವ, ಅದಕ್ಕೆ ಪ್ರಯತ್ನಿಸುವ ಸದಸ್ಯನಿಗೆ ಮಾತ್ರ ಚುನಾವಣೆಗಳಲ್ಲಿ ಮತ ಹಾಕಿ ಎಂದು ಇಲ್ಲಿನ ತಮಿಳು ಸಮುದಾಯಕ್ಕೆ ಆದೇಶ ಹೊರಡಿಸಿದ್ದು,
ವೀರಪ್ಪನ್ ಒತ್ತಾಸೆಯಿಂದ ರಾಜಕುಮಾರ್ ಬಿಡುಗಡೆ ಆಗಬೇಕಾದ್ರೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಆಗಬೇಕು ಎಂಬ ಹಠ ಮಾಡಿದ್ದು.
ಇದರ ಜತೆಗೆ ಇತ್ತೀಚಿನ ದಿನಗಳಲ್ಲಿ ಕನ್ನಡಿಗರನ್ನು ಒದೆಯಬೇಕು ಎಂದು ಹೇಳಿಕೆ ನೀಡಿದ್ದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗದಂತೆ ತೊಡರುಗಾಲು ಹಾಕಿರುವುದು, ತಮ್ಮ ರಾಜ್ಯದ ಯೋಜನೆಗಳ ಅನುಷ್ಠಾನಕ್ಕಾಗಿ ಕರ್ನಾಟಕದ ಹಿತಾಸಕ್ತಿಯನ್ನು ಬಲಿಗೊಡುತ್ತಿರುವುದು.ಹೀಗೆ ಕನ್ನಡಿ ಗನ ಸ್ವಾಭಿಮಾನ ಮತ್ತು ಸಾರ್ವಭೌಮತ್ವವನ್ನು ಪದೆ ಪದೆ ಕೆಣಕಲು ಪ್ರಯತ್ನಿಸುತ್ತಿರುವುದೇ ಆಗಿದೆ.
ಮೇಲಿನ ತಮಿಳರ ಈ ಎಲ್ಲ ಸಣ್ಣತನಗಳನ್ನು ಸಹಿಸಿಕೊಂಡು ಅವರೊಡನೆ ಇನ್ನೂ ಸಹಬಾಳ್ವೆ ನಡೆಸುತ್ತಿರುವ ಕನ್ನಡಿಗನದು ಸಂಕುಚಿತ ಸ್ವಭಾವ ಎನ್ನುವುದಾದರೆ ಕನ್ನಡಿಗ ಸಣ್ಣವ, ಅಸಹನೆಯುಳ್ಳವ, ಭಾಷಾಂದ, ಕನ್ನಡೇತರರ ವಿರೋಧಿ, ಸದಾ ದ್ವೇಷ ಸಾಧನೆಯ ಗುರಿಯುಳ್ಳವ ಎಂದು ಒಪ್ಪಿಕೊಳ್ಳಬಹುದಾಗಿದೆ.
ಈ ಕುರಿತಾಗಿ ಇಂದು ಪ್ರಜಾವಾಣಿ - ವಾಚಕರ ವಾಣಿಯಲ್ಲಿ ಪ್ರಕಟವಾಗಿರುವ ಲೇಖನವನ್ನು ನೋಡಿ.... ಕರ್ನಾಟಕದಲ್ಲಿ ತಿರುವಳ್ಳುವರ್ ಕುರಿತಾಗಿ ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿರುವಾಗ, ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಬೆಂಗಳೂರಿನಲ್ಲಿಯೇ ಆರಾಮವಾಗಿ ಕಾಲ ಕಳೆಯುತ್ತಿದ್ದು ನಮ್ಮ ನಮ್ಮವರೆ ಕಿತ್ತಾಡುವುದನ್ನು ನೋಡಿ ಪುಳಕಿತಗೊಂಡಿರುವುದು ಸತ್ಯ.
ತಮಿಳರು ತಮ್ಮ ದೊಡ್ಡತನ ಮೆರೆಯುವ ಒಂದು ಹೇಳಿಕೆ ನೀಡುವ ಬಗ್ಗೆ ತಲೆಯೆ ಕೆಡಿಸಿಕೊಂಡಿಲ್ಲ. ತಮಿಳರು ಎಂದಿಗೂ ಸ್ವಾಭಿಮಾನಿಗಳು, ದೊಡ್ಡತನ ಮೆರೆದು ದಡ್ಡರಾಗುವವರಲ್ಲ ಎಂದು ಮಾತ್ರ ಇದರಿಂದ ಸಾಬೀತಾಗುತ್ತಿದೆ. ಯಾವ ಕಾರಣಕ್ಕಾಗಿ ನಮ್ಮನ್ನಾಳುತ್ತಿರುವವರು ಅವರ ಹಿಂಬಾಲಕರು ಈ ನಿಲುವಿಗೆ ತಲೆಬಾಗಿದ್ದಾರೆ? ಉತ್ತರವಿದೆಯೇ ??
ಕಲ್ಯಾಣ ರಾಮನ್
Monday, July 27, 2009
ವಿಕ ಭಟ್ಟರ ಇಬ್ಬಂದಿತನ ...
ನಿನ್ನೆ ವಿಜಯ ಕರ್ನಾಟಕದಲ್ಲಿ ಹುಟ್ಟುಹಬ್ಬದ ಫ್ಲೆಕ್ಸ ಸಂಸ್ಕೃತಿ ಬಗ್ಗೆ ಖಾರವಾಗಿ ಭಟ್ಟರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಹುಟ್ಟುಹಬ್ಬದ ನೆಪದಲ್ಲಿ ಅವರ ರಾಜಕೀಯ ನಾಯಕರ ಚೇಲಾಗಳು ಹಾಕಿಸುವ ಶುಭಾಷಯ ಬ್ಯಾನರ್ ಒಂದು ಕಡೆ ಆದರೆ ಇನ್ನೊಂದು ಕಡೆ ವಿಜಯ ಕರ್ನಾಟಕದ ಪುಟಗಳಲ್ಲಿ ಪೇಜು ಪೇಜು ಉಘೇ ಉಘೇ ಪ್ರಾಯೋಜಿತ ಲೇಖನಗಳು ಮತ್ತು ಭಟ್ಟರು ಯಾರನ್ನು ಬೈದು ಉಗಿದು ಹಾಕಿದ್ದಾರೋ ಅವರದೇ ಹುಟ್ಟುಹಬ್ಬದ ಶುಭಾಯಗಳು ರಾರಾಜಿಸುತ್ತವೆ.
ಆಚೆ ಕಡೆ ಫ್ರೀ ಆಗಿ ಕಾಣುವ ಅವು ಅಸಹ್ಯವಾದರೆ, ಇನ್ನೌ ದುಡ್ಡು ಕೊಟ್ಟೂ ಕೊಂಡುಕೊಳ್ಳುವ ಓದುಗರಿಗೆ ಬೇಡವೆಂದರೂ ಅದು ಪತ್ರಿಕೆಗಳಲ್ಲಿ ಕಣ್ಣಿಗೆ ಬೀಳುವುದು ಪರಮ-ಅಸಹ್ಯವೇ ಸರಿ. ಇನ್ನು ಮುಂದಾದರೂ ಭಟ್ಟರು ಹೇಳುವುದು ಮತ್ತು ಮಾಡುವುದು ಒಂದೇ ಮಾಡಲಿ ...
Sunday, July 19, 2009
ತಮಿಳ್ ಓಟಿಗೆ ಕನ್ನಡಿಗರ ಸ್ವಾಭಿಮಾನ ಹರಾಜು..
ಬೆಂಗಳೂರಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸುಮಾರು ೩೦-೪೦ ಸ್ಥಾನಗಳಲ್ಲಿ ತಮಿಳರ ಪ್ರಾಭಲ್ಯ ಇದೆ, ಯಡಿಯೂರಪ್ಪ ಶತಾಯ-ಗತಾಯ ಅದನ್ನು ಗೆದ್ದು ಹಾಟ್ರಿಕ್ ಹಿರೋ ಆಗಲು
ಬಲಿ ಕೊಟ್ಟಿರುವುದು ಕನ್ನಡಿಗರ ಸ್ವಾಭಿಮಾನವನ್ನು ಮತ್ತು ಕನ್ನಡಿಗರ ಮಾಡಿದ ಹೋರಾಟಗಳನ್ನು.
ಮೊನ್ನೆ ಅದೇನು ಅನಿಸಿತೊ ನಮ್ಮ ಮಾನ್ಯ ಮು.ಮಗಳಿಗೆ, ಎಕಾಎಕಿ ಕರುಣಾ ನಿಧಿಯನ್ನು ಬೇಟಿ ಮಾಡಿ ಬಂದಿದ್ದಾರೆ. ಅವರು ಅಲ್ಲಿಗೆ ಹೋದಾಗ ಕರ್ನಾಟಕದ ಯಾವ ವಿಚಾರವನ್ನು ಮಾತನಾಡಿದ್ದಾರೆ ಗೊತ್ತ ??
ಈ ಸಲದ ಪ್ರಸ್ತುತ ಬಜೆಟನಲ್ಲಿ ತಮಿಳುನಾಡಿನ ೧೮೦೦ ಕೋಟಿ ಪ್ರಾಜೆಕ್ಟ್ ಹೊಗೆನೆಕಲ್ ಯೋಜನೆಗೆ ಕೇಂದ್ರ ಶ್ಯೂರಿಟಿ ನೀಡಿದೆ. ಕರ್ನಾಟಕವನ್ನು ಲೆಕ್ಕಿಸದೆ ಕೆಲಸ ನಡೆಯುತ್ತಿದೆ, ಅದನ್ನು ಪ್ರಶ್ನೆ ಮಾಡಲಿಲ್ಲ.
ಶಾಸ್ತ್ರೀಯ ಭಾಷೆ ನಮ್ಮಿಂದಲೇ ಬಂತು ಅನ್ನುವ ಹಾಗೆ ಬೀಗುವ ಬಿಜೆಪಿ, ಗಾಂಧಿ ಅನ್ನುವ ವಕೀಲ ಹಾಕಿರುವ ರಿಟ್ ವಜಾ ಮಾಡಿಸಿ, ಕನ್ನಡಕ್ಕೆ ೧೫ ಕೋಟಿ ಅನುದಾನ ಬರುವ ಬಗ್ಗೆ ಮಾತನಾಡಿದರೆ
ಅದು ಇಲ್ಲ ...
೧೮ ವರುಷಗಳಿಂದ ನೆನೆಗುದಿಗೆ ಬಿದ್ದಿದ್ದ ತಿರುವಳ್ಳುವವರ್ ಅವರ ಮೂರ್ತಿಯನ್ನು ಕರ್ನಾಟಕದಲ್ಲಿ ಉದ್ಘಾಟನೆ ಮಾಡುತ್ತೆವೆ, ನೀವು ಸರ್ವಜ್ಞನ ಪ್ರತಿಮೆಯನ್ನು ಮದ್ರಾಸಿನಲ್ಲಿ ಹಾಕಲು ಬಿಡಿ ಅಂತ ಅಂಗಲಾಚಿದ್ದಾರೆ.
ಇದರಿಂದ ತಮಿಳರ ವೋಟುಗಳನ್ನು ಗೆಲ್ಲಬಹುದು ಎಂಬುದೇ ಇವರ ದೂರಾಲೋಚನೆ.
ಕರುಣಾನಿಧಿ ಬಹಳ ಒಳ್ಳೆಯ ರಾಜಕಾರಿಣಿ, ಮಹಾನ್ ಚತುರ, ರಾಜಕೀಯದ ಗಂಧಗಾಳಿಯನ್ನು ಅರಿತಿರುವ, ತನ್ನ ಕುಟುಂಬದವರಿಗೆ ಕೇಂದ್ರ ಮಂತ್ರಿಗಳನ್ನು ಹಂಚಿದ , ಅನೇಕ ವಿಷಯಗಳನ್ನು ತಿಳಿದುಕೊಂಡಿರುವ ಪ್ರಚಂಡ. ಸುಮ್ಮನೇ ಬಿಡುತ್ತಾರೆಯೇ, ಸರಿ ಊರ ಆಚೆ ಮಾಡಿಕೊಳ್ಳಿ ಬೆಂಗಳೂರಿನಲ್ಲಿ ಮಾತ್ರ ಅಲಸೂರಿನಲ್ಲೇ ಆಗಬೇಕು ಅಂತ ಹೇಳಿದ್ದಾರೆ. ಅದನ್ನೇ ಯಶಸ್ಸು ಎಂಬತೆ ಮಾಧ್ಯವದವರ ಮ್ಜುಂದೆ ನಮ್ಮ ಮು.ಮ ಹೇಳಿಕೊಂಡಿದ್ದಾರೆ. ಇದಕ್ಕೆ ಅವರು ಕೊಡುವ ಕಾರಣ
ಕನ್ನಡಿಗರ ಮತ್ತು ತಮಿಳರ ಸಾಮರಸ್ಯವನ್ನು ಹೆಚ್ಚು ಮಾಡುವುದು ಎಂದು.
ನಮಗೆ ನೀರು ಬೇಕಾದಾಗ ನೀರು ಕೊಡದೆ, ತಮಗೆ ಸಿಕ್ಕ ಮೇಲೆ ನಮಗೆ ಶಾಸ್ಕ್ರೀಯ ಸ್ಥಾನ ಮಾನ ಕೊಡಿಸುವದಕ್ಕೆ ನಾನ ಅಡೆ-ತಡೆಗಳನ್ನು ತಂದು ಕೊನೆಗೆ ರಿಟ್ ಹಾಕಿರುವ ಆ ಜನರ ಜೊತೆ ನಾವು ಒಂದು ಮೂರ್ತಿ ಅನವರಣ ಮಾಡುವದರಿಂದ ಸಾಮರಸ್ಯ ಬರುತ್ತದೆ ಅಂದರೆ ಹೇಗೆ ಸ್ವಾಮಿ ??
ತಿರುವಳ್ಳುವವರ್ ತಮಿಳರ ಪಾಲಿಗೆ ಸಂತ ದಾರ್ಶನಿಕ ಕವಿ, ಹಾಗೆಂತ ನಮ್ಮ ನಾಡಿನಲ್ಲಿ ಅವರ ಪ್ರತಿಮೆ ಬೇಕಾಗಿರಲಿಲ್ಲ. ಆದರೆ ಹಿಂದೆ ಅವರದೇ ಕಾರುಬಾರು ಇದ್ದ ಮಹಾನಗರ ಪಾಲಿಕೆಯಲ್ಲಿ
ಎಲ್ಲ ಅಧಿನಿಯಮಗಳನ್ನು ಗಾಳಿಗೆ ತೂರಿ, ರಾತ್ರೊರಾತ್ರಿ ಅನವರಣ ಮಾಡಲು ಹೊರಟಿದ್ದರು. ರಣದೀರ ಪಡೆ ಮತ್ತು ಪ್ರಮೀಳಾ ನೇಸರ್ಗಿ ಅವರ ಕಾನೂನು ಹೋರಾಟದಿಂದ ಅದಕ್ಕೆ ತಡೆಯಾಜ್ಞೆ ಬಂತು.ಇದು ನಡೆದಿದ್ದು ೧೭ ವರುಷಗಳ ಹಿಂದೆ, ಅಂದಿನ ಮೊಯಲಿ ಸರಕಾರವಿದ್ದಾಗ. ತದನಂತರ ಅದನ್ನು ಶತಾಯಗತಾಯ ಮಾಡಿಯೇ ತೀರಬೇಕೆಂಬ ಕೆಲಸದಲ್ಲಿ ನಾನ ರೀತಿ ತಂತ್ರಗಾರಿಕೆ ಮಾಡಿದ್ದಾರೆ ಈ ತಮಿಳು ಜನ.
ರಾಜಕುಮಾರ್ ಅಪಹರಣ ಸಮಯದಲ್ಲೂ ಕೂಡ ಈ ಬೇಡಿಕೆಯನ್ನು ವೀರಪ್ಪನ್ ಅನ್ನುವ ದಂತಚೋರನ ಕೈನಲ್ಲಿ ಮುಂದಿಟ್ಟು ತಮ್ಮ ಬೇಳೆ ಕಾಳು ಬೇಯಿಸಲು ನೋಡಿದರು. ಆದರೆ ಅದು ಸಾಧ್ಯವಾಗಲಿಲ್ಲ.
ನಂತರ ನಮ್ಮ ಬುದ್ದೀಜೀವಿಗಳ ಬಾಯಲ್ಲಿ ಇದು ಆಗಬೇಕು, ಇದು ಸಾಮರಸ್ಯ ಆಗುತ್ತದೆ ಎಂದು ಹಿಂಬಾಗಿಲಿನಿಂದ ತಂದರು.ಆದರೆ ಕನ್ನಡ ಸಂಘಟನೆಗಳ ಒಗಟ್ಟಿನ ಫಲ ಅದನ್ನು ನಡೆಸಲಾಗಲಿಲ್ಲ.
ಮಧ್ಯೆ ಸರ್ವಜ್ಞನ ಪ್ರತಿಮೆ ಚನ್ನೈಯಲ್ಲಿ ಮಾಡೊಣ,ಇಲ್ಲಿ ತಿರುವಳ್ಳುವವರ್ ಪ್ರತಿಮೆ ಮಾಡೋಣ ಅನ್ನೊ ಸಂಧಾನ ಆಯಿತು, ಆದ್ರೆ ಅದಕ್ಕೆ ಚನ್ನೈಯಲ್ಲಿ ನಿರ್ಧಿಷ್ಟವಾದ ಜಾಗ ಸಿಕ್ಕಿರಲಿಲ್ಲ. ಈಗ ತರಾತುರಿಯಲ್ಲಿ
ಅಯ್ಯವರಮ್ ನಲ್ಲಿ ಕರ್ನಾಟಕ ಸರ್ಕಾರ ಪ್ರತಿಮೆಯನ್ನು ಅನುಷ್ಥಾನ ಮಾಡಲು ಹೋಗಿದೆ. ನಿಜಕ್ಕು ಇದಕ್ಕೆ ನಮ್ಮ ಸರ್ಕಾರಕ್ಕೆ ಅಭಿನಂದನೆ ಮಾಡಬೇಕು ಯಾಕೆ ಅಂದರೆ ಊರಾಚೆ ಯಾರು ಇಲ್ಲದ ಸ್ಥಳದಲ್ಲಿ ಎಲ್ಲಾ ಕನ್ನಡಿಗರನ್ನು ಕತ್ತಲೆಯಲ್ಲಿ ಇಟ್ಟು ಮಾಡಲು ಹೋಗುತ್ತ ಇರುವುದು ಮೆಚ್ಚಬೇಕಾದ ಅಂಶವೇ ಸರಿ.
ಅಯ್ಯವರಮ್ ಎಲ್ಲಿ ಬರುತ್ತದೆ ಅಂದರೆ ಮದ್ರಾಸಿನ ಊರಾಚೆ, ಬೆಂಗಳೂರಿನ ಭಾಷೆಯಲ್ಲಿ ಹೇಳಬೇಕು ಎಂದರೆ ಸರ್ಜಾಪುರದ ಹತ್ತಿರ ಅನ್ನಬಹುದು. ಅಲ್ಲಿ ಇರುವುದು ಪೆರೆಂಬೂರು ಲೊಕೊ ವರ್ಕ್ಸ ಮತ್ತು ಅವರ ಕ್ವಾಟರ್ಸ. ಅಲ್ಲಿ ಒಂದು ಪಾರ್ಕ ಇದೆ, ಅದನ್ನು LIC ಉಸ್ತುವಾರಿ ನೋಡಿಕೊಳ್ಳುತ್ತಿದೆ. ಆ ಪಾರ್ಕಿನ ಆಚೆ ಒಂದು ತ್ರಿಕೋನದ ಜಾಗದಲ್ಲಿ ನಮ್ಮ ಸರ್ವಜ್ಞ ಮೂರ್ತಿ ಇಡಲು ನಮ್ಮ ರಾಜ್ಯ ಸರಕಾರ ಚಿಂತನೆ ಮಾಡಿದೆ.
ಇಲ್ಲಿ ತಿರುವಳ್ಳುವವರ್ ಪ್ರತಿಮೆ ನೋಡಿಕೊಳ್ಳಲು bbmp ಇದೆ, ಅದನ್ನು ಕಾಯಲು ೧೦೦ ಜನ ಪೋಲಿಸ್ ಇದ್ದಾರೆ, ಆದರೆ ಅಲ್ಲಿ ನಮ್ಮ ಸರ್ವಜ್ಞ ಅನಾಥ.
ಈ ರೀತಿಯ ಅವಸರದ ವ್ಯವಹಾರ ಮಾಡಿಕೊಂಡು ಬಂದಿದೆ ನಮ್ಮ ಸರಕಾರ.
ಪ್ರತಿಮೆ ಬೇಕಾಗಿದ್ದಿದ್ದು ಅವರಿಗೆ, ನಾವು ನಮ್ಮ ಶರತ್ತು ಇಟ್ಟು ಅದನ್ನು ಈಡೇರಿಸುವರೆಗೆ ಮಾಡುವದಿಲ್ಲ ಅಂತ ಪಟ್ಟು ಹಿಡಿದಿದ್ದರೆ ಆಗುತ್ತಿತ್ತು, ಆದರೆ ತಮಿಳ್ ಓಟಿನ ಮುಂದೆ ಕನ್ನಡಿಗರನ್ನು ಕೇವಲ ಮಾಡಿದ್ದಾರೆ
ಈ ನಿಟ್ಟಿನಲ್ಲಿ ಸರಕಾರ ಮಾಡಬೇಕಗಿರುವನ್ನು ನಮ್ಮ ಕನ್ನಡ ಸಂಘಟನೆಗಳ ಒಕ್ಕೂಟ ಕರವೇ ಮಾಡಿದೆ. ಅದು ಇಟ್ಟಿರುವ ಷರತ್ತುಗಳು ತುಂಬಾ ಅರ್ಥಪೂರ್ಣ ಆಗಿದೆ.
೧) ಕನ್ನಡ ಶಾಸ್ತ್ರೀಯ ಭಾಷೆಯ ಬಗ್ಗೆ ರಿಟ್ ತೆಗೆಯಬೇಕು.
೨) ಹೊಗೆನೆಕಲ್ ಜಂಟಿ ಅಧ್ಯಯನ ಸರ್ವೆ ಮಾಡಿದ ನಂತರವೇ ಕಾಮಗಾರಿಕೆ ಮಾಡಬೇಕು.
೩) ಸರ್ವಜ್ಞ ಮೂರ್ತಿಗೆ ಮೌಂಟ್ ರೋಡ್ ಇಲ್ಲ ಸುತ್ತ ಮುತ್ತ ಜಾಗದಲ್ಲಿ ಸ್ಥಳ ಕೋಡಬೇಕು.
ಇಲ್ಲಾ ಇದು ಎನು ಬೇಡ ಅಂದರೆ ಗೌರವ ಆದರಗಳಿಂದ ತಿರುವಳ್ಳುವವರ್ ಮೂರ್ತಿಯನ್ನು ವಾಪಿಸ್ ಕಳಿಸೋಣ, ಅಲ್ಲಿನ ಕನ್ನಡ ಸಂಘದಲ್ಲಿ ಅದನ್ನು ಅನವರಣ ಮಾಡೊಣ, ಹಾಗೆ
ಸರ್ವಜ್ಞ ಮೂರ್ತಿಯನ್ನು ಅಲಸೂರಿನಲ್ಲಿ ಪ್ರತಾಪಿಸೋಣ. ತಮಿಳು ಸಂಘ ನಮ್ಮ ಸರ್ವಜ್ಞ ಮೂರ್ತಿಯನ್ನು ಕೂರಿಸದರೇನೆ ನಿಜವಾದ ಸಾಮರಸ್ಯ ಅಲ್ಲವೇ ?
Saturday, July 18, 2009
ಬದಲಾವಣೆ ಬೇಡ ಅನ್ನುವುದೇ ಅವನತಿ ....
ಇವರಿಗೆ ಯಾವಾಗ ನೀವು ಕಡೆಯ ಚಿತ್ರ ನೋಡಿದ್ದು ಅಂದ್ರೆ , ಮುಂಗಾರು ಮಳೆ ಅಂತಾರೆ. ಆ ಚಿತ್ರನೂ ಕೂಡ ಅವರು ಮೊದಲು ನೋಡಿರೊಲ್ಲ, ಅದರಲ್ಲೂ ಕಲ್ಲು ಹುಡುಕುವ ಪ್ರಯತ್ನ ಮಾಡಿರುತ್ತಾರೆ. ತುಂಬಾ ಪ್ರಚಾರ ಬಂದ ಮೇಲೆ, ಗೆದ್ದಿತ್ತಿನ ಬಾಲ ಹಿಡಿಯುವ ಹಾಗೆ ಈ ಜನ ಪಂಚವಾರ್ಷಿಕ ಯೋಜನೆಯಲ್ಲಿ ಒಂದು ಕನ್ನಡ ಚಿತ್ರ ನೋಡಿರುತ್ತಾರೆ. ಆದ್ರೆ ಇಡೀ ಶತಮಾನದ ಕನ್ನಡ ಚಿತ್ರ ಬಗ್ಗೆ ನೋಡದೆ , ಸರಿಯಾಗಿ ಅರ್ಥ ಮಾಡಿಕೊಳ್ಳದೇ ದಿವ್ಯ ದೃಷ್ಟಿಯಿಂದ ತಮ್ಮ ಫರ್ಮಾನು ಕೊಡುತ್ತಾರೆ. ಅಷ್ಟಕ್ಕೂ ಈ ಜನ ನೋಡೊದು ಇದೇ ತರ ಬೇರೆ ಭಾಷೆಯ ಚಿತ್ರಗಳನ್ನು, ಕೇಳುವುದು ಬೇರೆ ಭಾಷೆಯ ಅರ್ಥವಾಗದ ಸಂಗೀತವನ್ನು . ಮನರಂಜನೆಗೆ ಭಾಷೆ ಇಲ್ಲ ಅಂತ ಒಣ ಮಾತುಗಳು ಬೇರೆ ...
ಅದರಲ್ಲಿ ಒಬ್ಬ ಮಹತಾಯಿ ಹೀಗೆ ಹೇಳುತ್ತಾಳೆ ...
i really really feel ashamed to watch kannada channels in tv except chandana and mukta mukta serial in etv..
ಇದೆಲ್ಲಾ ನೋಡಿದರೆ ನನಗೆ ಅನಿಸುವುದು ಎನಪ್ಪ ಅಂದರೆ, ಇವರು LIC ಇಂದ ಬಳಲುತ್ತ ಇದ್ದಾರೆ, ಇಲ್ಲ ಇವರಿಗೆ ಕನ್ನಡ ಬಗ್ಗೆ ಮಡಿವಂತಿಕೆ ಇದೆ, ಇಲ್ಲ ಬದಲಾವಣೆಯನ್ನು ಜನರೇಷನ್ ಗ್ಯಾಪನಿಂದ ಸ್ವೀಕರಿಸದ ಜನ.
೧೪ ಜುಲೈ ವಿಜಯ ಕರ್ನಾಟಕದಲ್ಲಿ ಅರ್ಚನಾ ಹೆಬ್ಬಾರ್ ಅವರ ಲೇಖನ ಇದಕ್ಕೆ ಹೊರತಲ್ಲ ಬಿಡಿ. ಅವಸರದ ಅವನತಿಯತ್ತ ಕನ್ನಡ ಚಿತ್ರ ಸಾಹಿತ್ಯ ಅಂತ ಲೇಖನದಲ್ಲಿ ಅವರ ಅಭಿಪ್ರಾಯಗಳು ನಾನು ಮೇಲೆ ಹೇಳಿದಕ್ಕೆ ವಿಭಿನ್ನ ಅಲ್ಲ ಬಿಡಿ. ಇನ್ನು ಒಂದು ಹೆಜ್ಜೆ ಮುಂದೆ ಹೋದರೆ ಆ ಲೇಖನ ಮುಕ್ಕಾಲು ಭಾಗ ನೀರು ಇರುವ ಗ್ಲಾಸಿನಲ್ಲಿ ಕಾಲು ಭಾಗ ನೀರು ಇಲ್ಲವಲ್ಲ ಅನ್ನೊ ಪ್ರಲಾಪ ಇದೆ.
ಅದರಿಂದ ೭೫% ನೀರು ಇರುವ ವಾಸ್ತ್ವವ ಮರೆಯಾಗುತ್ತ, ಎನು ಇಲ್ಲ ಎಲ್ಲಾ ಮುಗಿದೇ ಹೊಯಿತು, ಅವಸರ,ಅವನತಿ ಅನ್ನೊ ಪದ ಪುಂಜಕ್ಕೆ ಹೋಗಿ ಓದುಗರನ್ನು ಬೆಚ್ಚಿ ಬೀಳಿಸುತ್ತದೆ.
ಇವರು ಹೇಳೊ ಹಾಗೆ ಇವರು ಕನ್ನಡ ಚಿತ್ರದ ಹಾಡುಗಳನ್ನು ಕೇಳುವುದೇ ಆಫಿಸಿಗೆ ಹೋಗುವ ಕ್ಯಾಬಿನಲ್ಲಿ ( ಅಂದರೆ ಬೇರೆ ಸಮಯದಲ್ಲಿ ಕೇಳುವದಿಲ್ಲ ಅಂತ ಅಂದುಕೊಳ್ಖ್ಳಬಹುದೇ ??), ಆ ಒಂದು ಗಂಟೆಯಲ್ಲಿ ಎಷ್ತು ಕೇಳಬಹುದು ??, ಎನೋ ಒಂದು ಕನ್ನಡ ಹಾಡುಗಳನ್ನು ಕೇಳಿಸುವ ಅವರ ಡ್ರೈವರ ಅಣ್ಣಾಗೆ ಒಂದು ಥ್ಯಾಂಕ್ಸ ಹೇಳಬೇಕು. ಈ ಒಂದು ಗಂಟೆಯಲ್ಲಿ ಕನ್ನಡ ಹಾಡುಗಳನ್ನು ಕೇಳಿ ಇವರಿಗೆ ಮಾನಸಿಕ ತುಮುಲ ಆಗುವ ಹಾಗೆ ಆಗಿದೆ ಅಂದರೆ ನಂಬಲೇಬೇಕು..
ಯಾಕೆ ಆ ಮಾನಸಿಕ ತುಮುಲ ಆಗಿದೆ ಅಂತ ಸ್ವಲ್ಪ ತಿಳಿದುಕೊಳ್ಳೊಣ...
ಹಾಡುಗಳು ಕೇವಲ flowery words ನಲ್ಲಿ ಇರಬೇಕು
ಹಾಡುಗಳ ಸಾಹಿತ್ಯದಲ್ಲಿ ಪದಪುಂಜಗಳು ಹೇರಳ ಇರಬೇಕು, ಉಪಮಾ-ಉಪಮೇಯ ಇರಬೇಕು.
ಸಂಸ್ಕೃತಮಯ ಶಭ್ದಗಳು ಇರಬೇಕು. ಅವುಗಳ ಅರ್ಥ ಕೇವಲ ಒಂದು ವರ್ಗಕ್ಕೆ ಮಾತ್ರ ಆಗಬೇಕು ಅನ್ನೊದು ಇವರ ಅಭಿಮತ. ಚಿತ್ರದಲ್ಲಿ ಹೀರೋ ಹಳ್ಳಿ ಹೈದ ಆದರೂ ಇಂಪಾಲ ಜೇನಿನ ಕಂಪಾಲಾ ಅಂತ ಹಾಡಬೇಕು. ಈ ಸಾಹಿತ್ಯ ನಮ್ಮ ಆಡು ಭಾಷೆಯಲ್ಲಿ ಇದ್ದರೆ ಅದು ತಪ್ಪು. ಲಗ್ನ ಆಗುಮ ಅನ್ನಬಾರದು , ಕಲ್ಯಾಣ ಆಗೋಣವೇ ಅನ್ನಬೇಕು, ಆಗಲೇ ಅದು ಶಿಷ್ತಾಚಾರ. ಸ್ವಾಮಿ ಇದು ಯಾವ ನ್ಯಾಯ. ??
ಇನ್ನೊ ಒಂದು ಸನಾತನಿ ವರ್ಗ ಇದೆ, ಇವರಿಗೆ ಸಂಸ್ಕೃತದಿಂದ ಬಂದರೇನೆ ತೀರ್ಥ, ಇಕ್ಕು ಮಡಗು, ಮಾಡ್ಲ ಅನ್ನೊ ಗ್ರಾಮ್ಯ ಪದಗಳ ಬಗ್ಗೆ ತುಂಬಾ ಸಿಟ್ಟು, ಬರುತ್ತದೆ, ಹೊಗುತ್ತದೆ ಅನ್ನೊ ಮಾತುಗಳು weird ಅನಿಸುತ್ತದೆ ಅಂತೆ.
ನಿಜಕ್ಕೂ ಹೇಳಬೇಕು ಎಂದರೆ ಅಚ್ಚ ಕನ್ನಡ ಶಬ್ದಗಳೇ ಎಂದರೆ ಹಳ್ಳಿ ಶಭ್ದಗಳು, ಹಾಕ್ಮ, ಬಾರ್ಮ,ಆಗುಮ ಅನ್ನೊ ಕ್ರಿಯಾಪದಳನ್ನು ಹಾಡಿನಲ್ಲಿ ಬಳಸಿದರೆ ತಪ್ಪೇನು.
ಗ್ರಾಹಕ ಆಧರಿತ ವ್ಯಾಪಾರ
ಚಲನಚಿತ್ರ ಅನ್ನುವುದು ಒಂದು ವ್ಯಾಪಾರ, ಇದರಲ್ಲಿ ಎಲ್ಲಾ ಸಾಲ ಹಾಕಿ ದುಡ್ದು ಹಾಕುವವರು ಜುಟ್ಟಿಗೆ ಮಲ್ಲಿಗೆ ಹೂವಿನ ಬಗ್ಗೆ ಯೋಚನೆ ಮಾಡುವದಿಲ್ಲ, ಅವರಿಗೆ ಹೊಟ್ಟೆ ಹಿಟ್ಟಿನ ಚಿಂತೆ. ಅವರ ಗಮನ ಹೆಚ್ಚು ಜನರಿಗೆ ಮುಟ್ಟಬೇಕು ಅವರಿಗೆ ಹತ್ತಿರ ಆಗಿರಬೇಕು ಅಂತ ಆಗಿರುತ್ತದೆ.
ಕನ್ನಡ ಚಲನಚಿತ್ರಗಳಲ್ಲಿ ಕ್ಲಾಸ್ ಮತ್ತು ಮಾಸ್ ಅಂತ ಎರಡು ಕ್ಯಾಟಾಗರಿ ಇದೆ, ಅವುಗಳ ಪ್ಯಾಕೇಜ್ ಭಿನ್ನ ಆಗಿರುತ್ತದೆ ಮತ್ತು ಅವುಗಳ target audience ಕೂಡ ಬೇರೆ ಇರುತ್ತದ ಅಂತ ಮರೆಯಬಾರದು.
ಸುಮ್ಮನೆ ಚಿತ್ರಗಳನ್ನು ನೊಡದೆ ಕ್ವಾಲಿಟಿ ಇಲ್ಲ ಅಂತ ತೀರ್ಮಾನು ಕೊಡುವ, ಎಮಪಿ೩ ಮಾಡಿಕೊಂಡು ಪೈರಸಿಗೆ ಸಹಾಯ ಮಾಡುತ್ತಿರುವ ಐಟಿ-ಬಿಟಿ ಜನಗಳಿಗಿಂತ , ಹಳ್ಳಿ ಜನರೇ ವಾಸಿ. ತಮಗೆ ಬರುವ ಅಲ್ಪ ಸ್ವಲ್ಪ ಸಂಬಳದಲ್ಲಿ ತಪ್ಪದೇ ಚಲನಚಿತ್ರಗಳನ್ನು ನೋಡುತ್ತಾರೆ, ಸಿ,ಡಿಯನ್ನು ಕೊಂಡುಕೊಳ್ಳುತ್ತಾರೆ.
ಅಂತಹ ಸಕ್ಕರೆ ಮನಸ್ಸಿನ ಜನರ ಭಾಷೆ-ಸಾಹಿತ್ಯ ಬಳಸಿದರೆ ತಪ್ಪೇನು ??.
ಗ್ರಾಹಕ ಆಧರಿತ ಸೇವೆ ಜಗತ್ತಿನಲ್ಲಿ ಎಲ್ಲಾ ಕಡೆ ಇದೆ, ಅದಕ್ಕೆ ಕನ್ನಡ ಚಿತ್ರ ಹೊರತಲ್ಲ. ಹಾಗೆಂದ ಮಾತ್ರಕ್ಕೆ ಕನ್ನಡದಲ್ಲಿ ಅದೇ ರೀತಿ ಹಾಡು ಬರುತ್ತ ಇದೆ ಅಂತ ಅರ್ಥ ಅಲ್ಲ.
ಉಚ್ಚಾರಣೆ ಸುಲಭ ಇರಬೇಕು, ಜನಸಾಮನ್ಯರು ಹಾಡು ಗುಂಗುವ ಹಾಗೆ ಇರಬೇಕು.
ಉಪಮಾ-ಉಪಮೇ ಪದಗಳನ್ನು ಬಳಸದೇ ನಮ್ಮ ಸಾಮನ್ಯ ಜನರ ಬಾಯಲ್ಲಿ ಉಚ್ಚಾರಣೆ ಆಗುವ ಹಾಡುಗಳೇ ನಂಬರ್ ಒನ್ ಆಗುವುದು. ಅದೇ ಹೆಚ್ಚು ಜನರಿಗೆ ಇಷ್ತ ಆಗುವುದು. ಹಾಡುಗಳು ಜನಸಾಮನ್ಯರನ್ನು ಮುಟ್ಟಬೇಕೇ ವಿನಹ ಜ್ಞಾನಪೀಠ ಸಾಹಿತ್ಯಕ್ಕೆ ಸ್ಪರ್ಧೆಗೆ ಅಲ್ಲ. ಹಾಗೆ ಅಂತ ಜನಸಾಮನ್ಯ ಮೆಚ್ಚಿದ್ದನ್ನು (ಉದಾ ಜಿಂಕೆ ಮರೀನಾ ಹಾಡು) ಕಳಪೆ ಗುಣಮಟ್ಟ ಅಂತ ಮೂದಲಿಸುವುದು ಮೆಜಾರಿಟಿಗೆ ಮಾಡಿದ ಅವಮಾನವೇ ಸರಿ , ಜನಸಾಮನ್ಯರಲ್ಲಿ ಒಬ್ಬರು ಆಗದೇ ಇರುವದಕ್ಕೆ , ಇಲ್ಲ ಇವರು ಇಷ್ಟ ಪಡದೇ ಇರುವದಕ್ಕೆ ಆ ಹಾಡುಗಳು ಕಳಪೆ ಮಟ್ಟದ್ದು ಆಗಲು ಸಾಧ್ಯವಿಲ್ಲ. ಹಾಗೇ ಉತ್ತಮ ಗುಣಮಟ್ಟದ್ದು
ಯಾವುದು ಅಂತ ಬರೆದು ಸ್ವಲ್ಪ ನಮ್ಮ ಜನಸಾಮನ್ಯರಿಗೆ ತಿಳಿಸಿದರೆ ಬಹಳ ಸಹಾಯ ಆಗುತ್ತದೆ.
ಹಿಂದೆ ತಮ್ಮ ಪಾಂಡಿತ್ಯವನ್ನು ಹಾಡುಗಳ ಸಾಹಿತ್ಯದ ಮೂಲಕ ಅನೇಕ ಜನರು ಹರಿದುಬಿಟ್ಟರು, ಕನ್ನಡದಲ್ಲಿ ಅನೇಕ ಒಳ್ಳೆ ಹಾಡುಗಳು ಅವರ ದಸೆಯಿಂದ ಬಂದವು. ಮೊದಲ ಬಾರಿಗೆ ಆ ತರಹದ ಸಾಹಿತ್ಯವನ್ನು ಬದಿಗರಿಸಿ ಜನಸಾಮನ್ಯರು ಬಳಸುವ ಆಡುಭಾಷೆಯನ್ನೇ ಚಿತ್ರ ಸಾಹಿತ್ಯ ಮಾಡಿದ ಕೀರ್ತಿ ಹಂಸಲೇಖ ಅವರಿಗೆ ಸಲ್ಲುತ್ತದೆ.
ಅರ್ಚಾನ ರಾಜ್-showman ಚಿತ್ರದ ಹಾಡುಗಳನ್ನು ದೂರಿದ್ದಾರೆ, ಅದರೇ ಅವರು ಆ ಚಿತ್ರದಲ್ಲಿ ನಾಯಕ ಒಬ್ಬ ಸಾಮನ್ಯ ಮನುಷ್ಯ, ಇಂಜಿನಿಯರ್ ಓದುಗನಲ್ಲ, ಕನ್ನಡ ಸಾಹಿತ್ಯದ ಗಂಧ ಗಾಳಿ ಅರಿತಿರುವನಲ್ಲ. ಅವನು ಹಾಡಿದರೆ ಪಾರೋ ..ಹೇ ಪಾರೋ ಅಂತ ಹಾಡುಗಳೆ ಬರುವುದು. ಅದರಲ್ಲಿ ನಾಯಕ ತನ್ನ ಪ್ರೇಮದ ಬಗ್ಗೆ ಹೇಳುತ್ತ ಇರುತ್ತಾನೆ,ಅವನ ಮನಸಿನ ತುಮಲವನ್ನು ಅವನ ಭಾಷೆಯಲ್ಲಿ ಹೇಳಿದರೆ ತಪ್ಪಾ.
ಅಷ್ಟಕ್ಕೂ ಚಿತ್ರ ಸಾಹಿತ್ಯ ಎನು GMS/UMTSaa 3GPP standardsaa ಫಾಲೊ ಮಾಡೊಕ್ಕೆ, ಹೀಗೆ ಇರಬೇಕು ಅಂತ ಹೇಳೊಕ್ಕೆ ...
ಕರ್ನಾಟಕ ಸಂಗೀತವು ಕಳಪೇಯೇ ??
ಕರ್ನಾಟಕ ಸಂಗೀತದ ದಾಸರ ಪದಗಳು ಕೂಡ ತಮಿಳ್-ತೆಲ್ಗು ಜನರ ನಾಲಿಗೆಗೆ ಸಿಕ್ಕಿ ಸಿಲುಕಿ, ಎಳೆದು , ಹರೆದು ಆಆಅ-ಉಉಉ ಅಂತ ಕೇಳುವುದು ಬಿಟ್ಟರೆ ಅರ್ಥ ಜನಸಾಮನ್ಯರಿಗೆ ಅರ್ಥ ಆಗುವುದೇ
ಇಲ್ಲ. ರಾಗ,ತಾಳದ ಗಂಧ ಇಲ್ಲದವರಿಗೆ ಎನೆಂದರೆ ಎನೂ ಅರ್ಥ ಆಗುವದಿಲ್ಲ, ಹಾಗೆಂದ ಮಾತ್ರಕ್ಕೆ ಅವು ಕಳಪೇಯೇ ??
Gen X
ಇಲ್ಲಿ ಇನ್ನೊಂದು ಅಂಶ ಇದೆ, ಅದು ಎನೆಂದರೆ ಅರ್ಚನ ಅವರ ಯುಗಕ್ಕೂ ಇಂದಿನ ಯುಗಕ್ಕೂ ಇರುವ ವಯಸ್ಸಿನ ಅಂತರ. ಇವತ್ತಿಗೂ ನಾವು ಶಿಲಾಯುಗದಲ್ಲೇ ಇರಬೇಕು ಅಂದರೆ ಆಗುತ್ತದೆಯೇ, ಕಾಲಕ್ಕೆ ತಕ್ಕ
ಹಾಗೆ ನಡೆಯಬೇಕು ಅಲ್ಲವೇ ?.
ಇವತ್ತು ಹಾಡುಗಳು ಬರೀ ಕ್ಯಾಬಿನಲ್ಲಿ ಒಂದು ಗಂಟೆ ಕುಳಿತು ಕೇಳಿ ಹೋಗುವದಕ್ಕೆ ಸೀಮಿತವಾಗಿಲ್ಲ. ಅದರ ಬಳಕೆ ಅನೇಕ ಕಡೆ ಆಗುತ್ತ ಇದೆ, ಕಾಲೇಜಿನ ಡ್ಯಾನ್ಸ, ಮೊಬೈಲ್ ಟ್ಯೂನ್, ಕಾಲರ್ ಟ್ಯೂನ್ ಅಷ್ಟು ಯಾಕೆ
ಪಬ್ಬಿನ ಡ್ಯಾನ್ಸ ಫ್ಲೋರ್ನನಲ್ಲೂ ಹಾಡುಗಳು ಬೇಕು. ಇಂತಹ ಕಡೆ ಇವರು ಮೆಚ್ಚಿದ ಮಾನಸ ಸರೋವರ ಹಾಡು ಹಾಕಲು ಆಗುತ್ತದೆಯೇ ?. ಕನ್ನಡ ಹಾಡುಗಳು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತ ಇರಬೇಕು
ಅಂತ ಹೇಳುವುದು ಯಾವ ನ್ಯಾಯ ??
ಹಾಗೆ ಒಂದು ವೇಳೆ ನಮ್ಮ ಭಾಷೆ ಆದನ್ನು ಪೂರೈಸದಿದ್ದರೆ ಜನ ಬೇರೆ ಭಾಷೆ ಕಡೆ ವಾಲುತ್ತಾರೆ ಅಷ್ಟೇ...
ಶೇಕ್ ಶೇಕ್ ಶೇಕ್ ಇವರ್ ಬಾಡಿ ಇದು ಸಂಪೂರ್ಣ ಆಂಗ್ಲಪದಗಳೇ ಇರುವ ಹಾಡು. ಇದು ಸೇಜ ಸೇಜ ಸೇಜ ಬಾರೆ ಅನ್ನೋ ಕನ್ನಡಿಕರೀಣ ಆಗಿ ಅರ್ಚನ ಅವರಿಗೆ ಕಿವಿಗೆ
ಹೇಗೆ ಬಿತ್ತೊ ನಾ ಕಾಣೆ... ಅಣ್ಣಮ್ಮನ ಡ್ಯಾನ್ಸ, ಟಪಾಲಗೋಚಿಯಲ್ಲಿ ಹೊಸ ರಿಮಿಕ್ಸ ನಮಗೆ ಬೇಕು. ಬೇರೆ ಭಾಷೆಯವರು ತಮ್ಮ ಹಾಡುಗಳಿಗೆ ಹುಚ್ಚೆದ್ದು ಕುಣಿಯುತ್ತ ಇದ್ದರೆ
ನಾವು ಪ್ಯಾದೆಗಳ ತರಹ ಇರಬೇಕಾ ?
ರಘು ದಿಕ್ಷೀತ್, ಅರ್ಬನ್ ಲ್ಯಾಡ್ಸ್, ಅಶ್ವಾಸ, ಜಂಭ ಹೊಸ ರಾಕ್ ಬ್ರಾಂಡಗಳು ಕನ್ನಡ ಹಾಡನ್ನು ಹಾಡಬಾರದೇ ??
ಕಲ್ಪನೆಗಳು-ವಾಸ್ತವಗಳು
ಮುಂದುವರೆಯುತ್ತ ಅವರ ಕಲ್ಪನೆಗಳಿಗೆ ಅವರೇ ಉತ್ತರ ಕಂಡುಕೊಳ್ಳಲು ಹೊರಟಿದ್ದಾರೆ, ಅದರ ಪ್ರಕಾರ ಹೀಗೆ ನಮ್ಮ ಸಾಹಿತ್ಯ್ವವು ಹೀಗೆ ಅವನತಿಗೊಳ್ಳಲು ಇವು ಕಾರಣವಂತೆ ...
೧) ಕನ್ನಡ ಭಾಷೆಯ ಪಾಶ್ಚತೀಕರಣ
ಕನ್ನಡ ಭಾಷೆಯ ಹಾಡುಗಳನ್ನು ಬೇರೆ ಬೇರೆ ರೀತಿಯಲ್ಲಿ ಹಾಡಬಹುದು, ಉದಾ ದಾಸರ ನಾಮಗಳನ್ನು ಅರ್ಥ ಆಗದ ಹಾಗೆ ಕರ್ನಾಟಕ ಸಂಗೀತದಲ್ಲಿ, ಇಲ್ಲ ರಾಕ್ ರೀತಿಯಲ್ಲಿ ಇಲ್ಲಾ ರೆಗ್ಗೆ ರೀತಿಯಲ್ಲಿ ಹಾಡಬಹುದು.
ಇಲ್ಲಿ ನನಗೆ ಅರ್ಥ ಆಗದ ಒಂದು ಪ್ರಶ್ನೆ ಇದೆ, ಮೇಲೆ ಅರ್ಚನ ಹಳ್ಳಿ ಭಾಷೆ ಬಳಸಿ ಹೇಳಿರುವದನ್ನು ಕಳಪೆ ಅಂತ ಹೇಳಿದ್ದಾರೆ, ಅದರಲ್ಲಿ ಪಾಶ್ಚತ್ಯ ಎನು ಕಾಣಿಸಿತೋ ನಾ ಕಾಣೆನು. ಹಳ್ಳಿ ಬೇಡ ದಿಲ್ಲಿ ಜನರಲ್ಲಿ
ಇವತ್ತು ಎಸಿಡಿಸಿ-GUNIT-Eminiem ಹಾಡುಗಳನ್ನು ಕೇಳುತ್ತ ಬೆಳೆಯುವ ಯುವ ಸಮಾಜ ಇದೆ, ಅವರಿಗೆ ಮಾನಸ ಸರೋವರ ಬೇಡ, ಇದು ವಾಸ್ತವ ಅವರಿಗೆ ಶೇಕ್-ರಾಕ್ ಶೈಲಿನಲ್ಲಿ ಬೇಕು, ಆ ರೀತಿಯಲ್ಲಿ ಹಾಡುಗಳು ಬಂದರೆ ತಪ್ಪೇನಿದೆ, ಎಲ್ಲಾ ಒಂದೇ ರೀತಿಯಲ್ಲಿ ಹಾಡುವದಕ್ಕೆ ಚಿತ್ರಹಾಡುಗಳು ಭಾವಗೀತೆ ಅಲ್ಲವಲ್ಲ.
ನಮ್ಮ ಜನಪದ ಗೀತೆಗಳು ಪಾಶ್ಚತ್ಯಗೊಂಡಿರುವದಕ್ಕೆಯೇ ಗುಡುಗುಡಿಯಾ ಹಾಡಿಗೆ ವಿದೇಶದಲ್ಲಿ ಹುಚ್ಚೆದ್ದು ಕುಣಿದಿದ್ದು. ನಮ್ಮ ಭಾಷೆಯ ಹಾಡುಗಳನ್ನು ಬೇರೆಯವರಿಗೆ ಹಂಚಲು,ಅವರನ್ನು ನಮ್ಮ ಸಂಗೀತ ಸಮಾಜಕ್ಕೆ ತರಲು ಇದು ಅವಶ್ಯ. ಇಲ್ಲದಿದ್ದರೆ ನಾವು ಭಾವಗೀತೆಗಳ ತರ ಮಾತ್ರ ಹಾಡ್ತಿವಿ ಅಂತ ಪಟ್ಟು ಹಿಡಿದರೆ ಲಾಸ್ ಆಗುವುದು ನಮ್ಮ ಭಾಷೆಗೆ ಮತ್ತು ನಮ್ಮ ಸಂಸ್ಕೃತಿಗೆ.
ಇಂಗ್ಲೀಷ ಹಾಡಿನಲ್ಲಿ ಎಷ್ತೋಂದು ವೈವಿಧ್ಯತೆ ಇದೆ, ಎಕೆಂದರೆ ಅದು ಬೇರೆ ಬೇರೆ ರೀತಿಯಲ್ಲಿ ಇರುವದನ್ನು ಒಪ್ಪಿದೆ ಮತ್ತು ಹಾಗೆ ಬೆಳದಿದೆ. ಇವತ್ತಿನ ಸಮಾಜದಲ್ಲಿ ವೈವಿಧ್ಯತೆ ಇರುವ ಮತ್ತು ಕಾಲಕ್ಕೆ ತಕ್ಕ ಹಾಗೆ
ಭಾಷೆ ಮಾತ್ರ ಬದುಕಲು ಸಾಧ್ಯ.
೨) ಹಾಡು ಬರೆಯುವವರ ಕನ್ನಡ ಶಬ್ಧಗಳ ಕೊರತೆ.
ಇಲ್ಲಿ ಕೂಡ ಅರ್ಚನ ಹೇಳುತ್ತ ಇರುವುದು ಅದನ್ನೇ ಸನಾತನಿ ಸಂಸ್ಕ್ರುತ ಪದಗಳನ್ನು ಮಾತ್ರ ಬಳಸಬೇಕು, ಸ್ಲ್ಯಾಂಗ್ ಬಳಸಬಾರದು ಅಂತ. ಇವತ್ತು ಕನ್ನಡದಲ್ಲಿ ಸ್ಲಾಂಗ್ ಭಾಷೆಗೆ
ಮಹತ್ತರ ಸ್ಥಾನ ಇದೆ, ಆ ಕಾರಣಕ್ಕೆ ೧ ದಶಕದ ಹಿಂದೆ ನಾನು ಅದರ ಪ್ರಚಾರಕ್ಕೆ ಮೊದಲಾದೆ. ಬೇರೆ ಭಾಷೆಯವರು ನಮ್ಮಿಂದ ಆಮದು ಪಡೆಯಬಹುದಾದ ಸ್ವಂತಿಕೆ ಇರುವ
ಶಭ್ದಗಳು ಅಂದರೆ ಇವೆ. ನೈಜ ಆ ಪದಗಳನ್ನು ಬಿಟ್ಟು ಉಪಸರ್ಗಹೊಂದಿದ ಸಂಸ್ಕೃತ ಪದಗಳನ್ನೇ ಬಳಸಬೇಕು ಅವು ಮಾತ್ರ ಕನ್ನಡ ಶಭ್ದಗಳು ಅಂತ ಹೇಳುವುದು ಯಾವ ಪರಿಯ
ನ್ಯಾಯ.
ಕಿಚಾಕಾಯಿಸು,ಜಮಾಯಿಸು, ಪಟಾಯಿಸು ಇದು ನೈಜ ಕನ್ನಡ ಪದಗಳು. ಇವುಗಳಲ್ಲಿ ಸಂಸ್ಕೃತ ಅಂಶ ಇಲ್ಲದೇ ಇರುವುದೇ , ಅರ್ಚನ ಅವರಿಗೆ ಈ ಪದಗಳನ್ನು ಬಳಸಿದರೆ ಗಲಾಟೆ ವಾತವರಣ ಅಗುತ್ತದೆ ಅಂತ ಅನಿಸಿದೆ ಅಂತ ಕಾಣೊತ್ತೆ. ನನಗೂ ಈ ಮೊದಲು ಗೊತ್ತಿರಲಿಲ್ಲ, ಮೊಸ್ಟಲೀ ಜನಸಾಮನ್ಯರಿಗೂ ಗೊತ್ತಿರಲಿಲ್ಲ. ಮುಂದೆ ಇದು ನಿಜವಾದರೆ
ಈ ಪದಗಳನ್ನು ತೆಗೆದು ಹಾಕಿ, ಬ್ಯಾನ್ ಮಾಡಿ, ಇದರಿಂದ ಶಭ್ದ ಮಾಲಿನ್ಯ ಆಗುತ್ತಿದೆ ಅಂತ ಪರಿಸರವಾದಿಗಳು ಮುಗ್ಗಿ ಬಿದ್ದರೆ ಆಶ್ಛರ್ಯವಿಲ್ಲ ಬಿಡಿ.
೩) ಕಥಾವಸ್ತುವಿನ ಕೊರತೆ
ಇದಕ್ಕೂ ಚಿತ್ರ ಸಾಹಿತ್ಯಕ್ಕೂ ಸಂಗೀತಕ್ಕೂ ಸಂಭಂದವಿಲ್ಲ, ಎಷ್ಟೋ ಚಿತ್ರಗಳ ಸಂಗೀತ ಉತ್ತಮವಾಗಿದ್ದರೂ ಪೇಲವ ಕಥಯಿಂದ ಇಷ್ತ ಆಗಿರೊಲ್ಲ, ಉದ್ ಪಟ್ರೆ ಲವ್ಸ ಪದ್ಮ. ಹಾಗೆ ಕಥೆ ಚೆನ್ನಾಗಿದ್ದು ಸಂಗೀತ ಚೆನ್ನಾಗಿರುವದಿಲ್ಲ.
೩ಅ) ಹೆಸರು
ಮೇಲೆ ನಾನು ಹೇಳಿದ ಹಾಗೆ ಅರ್ಚನ ಕೂಡ ಚಿತ್ರ ನೋಡದೇಯೆ ಹೆಸರಿಂದಲೇ ಕನ್ನಡದಲ್ಲಿ ಬರುವ ೯೯% ಪ್ರತಿಶತ ಚಿತ್ರಗಳು ಕುಟುಂಬ ಸಮೇತ ನೋಡುವ ಹಾಗೆ ಇರುವದಿಲ್ಲ ಅನ್ನುತ್ತಾರೆ. ಅದಕ್ಕೆ ಅವರೂ ಕೊಡುವ ಹೆಸರೂ ಸ್ಲಂಬಾಲ. ಚಿತ್ರದ ಬಗ್ಗೆ ಸ್ವಲ್ಪವೂ ಗೊತ್ತಿರದೇ ಪೂರ್ವಪೀಡಿತರಾಗಿ(prejudice) ಆಗಿ ಯೋಚಿಸಿದರೆ ಹೀಗೆ ಆಗುವುದು. ಆ ಚಿತ್ರ ಕುಟುಂಬ ಸಮೇತರಾಗಿ ನೋಡಲು ಇಲ್ಲವೇ, ಆ ಹೆಸರು ಯಾಕೆ ಬಂತು ಅಂತ ಒಂದು ಹೇಳುವದಕ್ಕೆ ಆ ಚಿತ್ರದಲ್ಲಿ ಒಂದು ಸನ್ನೀವೇಶವೇ ಇದೆ.
೩ಬ) ಅಸಹಜತೆ
ಇದು ಒಳ್ಳೆ ironic ಆಯಿತು, ಮೇಲೆ ಆಗುಮ,ಹೋಗುಮಾ ಅಂತ ಪದಗಳು ಬರುತ್ತ ಇವೆ, ಮಾನಸ ಸರೋವರ ತರ ಸಾಗಲಿ ತೇಲು ತರಂಗದೋಳು ಬರುತ್ತ ಇಲ್ಲ ಅನ್ನುತ್ತಾರೆ. ಅಲ್ಲ ಹಾಗೆ ಬಂದರೆ ಅಲ್ಲವೇ ಅಸಹಜತೆ ಉಂಟಾಗುವುದು. ಇವರೇ ಹೇಳಿದ ಹಾಗೆ ವ್ಯವಸ್ಥಯಲ್ಲಿ ಸಿಕ್ಕ ರೌಡಿ ಸಾಗಲಿ ತರ ಹಾಡು ಹಾಡಿದರೆ ಅದನ್ನು ಹೇಗೆ ಸ್ವೀಕರಿಸಬೇಕೋ ನಾ ಕಾಣೆ.
೩ಡಿ) ಕಲಾಮಾಧ್ಜ್ಯಮ ಅಲ್ಲ ವ್ಯಾಪಾರ ಆಗಿದೆ.
ಅದರಲ್ಲಿ ತಪ್ಪೇನಿದೆ ??? ಚಿತ್ರಗಳು ಒಂದು ಮನರಂಜಾನ ಉದ್ಯಮಗಳ ಸರಕೇ. ಹಾಲಿವುಡನಲ್ಲಿ ಕೂಡ ಅದನ್ನು ಹಾಗೆ ಕಂಡಿರುವುದು, ಅದಕ್ಕೆ ಅಷ್ತು ಯಶಸ್ಸು ಆಗಿರುವುದು. commericia;l ಚಿತ್ರಗಳು ಕಮ್ಮಿ ಆಗಬೇಕು, ಕಲಾತ್ಮಕ ಚಿತ್ರಗಳು , ಥಿಯೇಟರಿನಲ್ಲಿ ಪ್ರದರ್ಶನ ಅಗದೇ ಸ್ವರ್ಣಕಮಲ ಗೆಲ್ಲುವ ಹಾಗೆ ಬರಬೇಕು ಎಂಬುದು ಲೇಖರ ಅಂಬೋಣ. ಕಲಾತ್ಮಕ ಚಿತ್ರಗಳು ಮುಖ್ಯ, ಅವು ಊಟಕ್ಕೆ ಉಪ್ಪಿದ್ದ ಹಾಗೆ, ಆದರೆ ಅದೇ ಊಟ ಆಗಲು ಸಾಧ್ಯವಿಲ್ಲ ನೋಡಿ....
ಬರೀ ೨೫% ಖಾಲಿ ಯಾಕೆ ಕಾಣುತ್ತದೆ ??
ಲೇಖಕರು ಹೇಳುವಾ ಹಾಗೆ ಕನ್ನಡದಲ್ಲಿ ಸಾಹಿತ್ಯ ಅವನತಿ ಅಲ್ಲ ನಿಜಕ್ಕೂ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಬೇಕಿದ್ದರೆ ಒಮ್ಮೆ ಬೇರೆ ಭಾಷೆಗಳ ಹಾಡು ಕೇಳಲಿ, ಅವರಿಗೆ ತಿಳಿಯುತ್ತದೆ. ಜಯಂತ ಕಾಯ್ಕಿಣಿ ಬರೆದಿರುವ ಪ್ರತಿ ಹಾಡಿನಲ್ಲು ಒಂದು ಮಾಂತ್ರಿಕತೆ ಇದೆ. ಇದರಿಂದ ಪ್ರಭಾವಿತಗೊಂಡು ಯೋಗರಾಜ್ ಭಟ, ಕಲ್ಯಾಣ್, ಕವಿರಾಜ್, ಹೃದಯಶಿವ ಕೂಡ ತುಂಬಾ ಚೆನ್ನಾಗಿ ಬರೆಯುತ್ತಿದ್ದಾರೆ. ತೆರೆಗೊಂಡ ಪ್ರತಿಚಿತ್ರದಲ್ಲೂ ೨-೩ ಹಾಡು ಜನಪ್ರಿಯ ಆಗುತ್ತ ಇರುವುದೇ ಇದಕ್ಕೆ ಸಾಕ್ಷಿ. ಹಳೆ ಪಾತ್ರೆ ಅಂತ ಮೂದಲಿಸಿದ್ದ ಜಂಗ್ಲಿ ಚಿತ್ರದಲ್ಲೂ ನೀನೆಂದರೆ ನನ್ನೊಳಗೆ, ಈ ಮಜವಾದ ಮಬ್ಬು ಕವಿದ ಸಂಜೆಗೆ ಉತ್ತಮ ಸಾಹಿತ್ಯ ಇರುವ ಹಾಡುಗಳು ಇವೆ.ಅದೇ ನಿರ್ದೇಶಕರ ಇಂತಿ ನಿನ್ನ ಪ್ರೀತಿಯ ಹಾಡುಗಳನ್ನು ಕೇಳಿಲ್ಲವೇ ??. ಉತ್ತಮ ಸಾಹಿತ್ಯ ಇರುವ ಕನ್ನಡ ಹಾಡುಗಳು ಅರ್ಚನ ಅವರಿಗೆ ಕಿವಿಗೆ ಬೀಳದ್ದೆ ಇರುವುದು ಜಾಣಕಿವುಡೇ ಸರಿ ಬಿಡಿ.
ಕೊಸರು
ಕನ್ನಡ ಚಿತ್ರ ಹಾಡುಗಳು ಎನ್ನುವುದು ಒಂದು ಮದುವೆ ಊಟ ಇದ್ದ ಹಾಗೆ, ಅದರಲ್ಲಿ ಕೊಸಂಬರಿ,ಪಲ್ಯ,ಗೊಜ್ಜು,ಅನ್ನ ಎಲ್ಲ ಬೇರೆ ಬೇರೆಯಾಗಿ ಇರುತ್ತದೆ. ನಿಮಗೆ ಕೊಸಂಬರಿ ಬೇಡವಾದರೆ ತಿನ್ನಬೇಡಿ, ಹಾಗೆಂದ ಮಾತ್ರಕ್ಕೆ ಊಟದಲ್ಲಿ ಬರೀ ಅನ್ಬ ಮಾತ್ರ ಇರಬೇಕು ಬೇರೆನೂ ಇರಬಾರದು ಎನ್ನಬೇಕೆ ??
Friday, July 17, 2009
ಎದ್ದೇಳು ಮಂಜುನಾಥ- Review
ಒಳ್ಳೆ ಕೆಲ್ಸಕ್ಕೆ ೧೦೮ ವಿಷ್ನ ಅನ್ನೊ ಹಾಗೆ ಮೊದಲ ದಿನ ಚಿತ್ರ ನೋಡಬೇಕು ಅಂತ ಹೊರಟವನಿಗೆ ದೊಡ್ಡ ಟ್ರಾಫಿಕ್ ಜ್ಯಾಮ್ ಎದುರಾಯಿತು, ಶೋ ಶುರುವಾಗುವದಕ್ಕೆ ಕೇವಲ ೩೦ ನಿಮಿಷ ಇತ್ತು.
ಆದರೂ ತಲುಪುವೆ ಅನ್ನೊ ಆತ್ಮವಿಶ್ವಾಸ ಇತ್ತು. ಹೇಗೋ ಸರಿಯಾಗಿ ತಲುಪಿದೆ ಕೂಡ, ಜೊತೆಗೆ ಟಿಕೆಟ್ ಬೇರೆ ಸಿಕ್ಕಿತು. ಒಂದು ಸಣ್ಣ ವಿಶಿಲ್ ಹಾಕುತ್ತ ಒಳೆಗೆ ಹೋದೆ.
ಇಷ್ಟೆಲ್ಲಾ ಕಷ್ಟ ಪಟ್ಟಿದ್ದು ಎದ್ದೇಳು ಮಂಜುನಾಥ ಚಿತ್ರ ನೋಡೊಕ್ಕೆ. ಸುಮಾರು ೨ ವರುಶಗಳಿಂದ ಈ ಚಿತ್ರಕ್ಕೆ ಕಾಯುತ್ತ ಇದ್ದೆ, ಅದು ಮಠ ನೋಡಿದ ಮೇಲೆ ಮುಂದೆ ಗುರು-ಜಗ್ಗಿ ಯಾವ ಚಿತ್ರ ಬರುತ್ತದೆ ಅಂತ
ಕಾಯುತ್ತ ಕುಳಿತವರಲ್ಲಿ ನಾನು ಒಬ್ಬ. ಅದೂ ದಿನ ಕಳೆದ ಹಾಗೆ ನಿರೀಕ್ಷೆ ಹೆಚ್ಚಾಗೊತ್ತೆ, ಹಾಗೆ ಆಗಿ ನೋಡಿದ ಗಾಳಿಪಟ ಇಷ್ಟ ಆದರೆ, ಪ್ರೀತಿ ಯಾಕೆ ಭೂಮಿ ಮೇಲೆ ಇದೆ ಸಾಕಪ್ಪ ಸಾಕು ಅನಿಸಿತ್ತು.
ಹೆಸರೇ ಹೇಳುವ ಹಾಗೆ ಇದು ಮಂಜನ ಚಿತ್ರ, ಜಗ್ಗೇಶ್ ಅವರ ೨೫ನೇ ಚಿತ್ರ, ಅದ್ದರಿಂದ ಎಂದು ಕೊಡದ ಅಭಿನಯ ಕೊಟ್ಟಿರುತ್ತಾರೆ ಅಂತ ಅನಿಸುತ್ತ ಇತ್ತು. ಚಿತ್ರ ಶುರುವಾಗುವುದೇ ಯಜ್ಞಾ ಶೆಟ್ಟಿಯಿಂದ.
ಹಳೇ ಬಟ್ಟೆಯಲ್ಲಿ ಸೊರಗಿದ ಮುಖದಲ್ಲಿ ನನ್ನ ಗಂಡನನ್ನು ನೋಡಿದಿರಾ ಅಂತ ಎಲ್ಲಾ ಕಡೆ ಕೇಳುತ್ತ ಹೋಗುತ್ತಾಳೆ. ಮೊದಲ ಶಾಟಿನಲ್ಲೇ ಹಾಗೆ ಹುಡುಕುವ ಹೆಣ್ಣುಮಗಳ ಕಷ್ಟ ಮತ್ತೆ ಅನುಭವಿಸುವ ಮುಜುಗರ ತೋರಿಸಿದ್ದಾರೆ.
ಅಲ್ಲಿ ಅವಳು ಹುಡುಕುತ್ತ ಇದ್ದರೆ , ಇಲ್ಲಿ ನಾಯಕ ಗಾಂಧಿನಗರದ ಒಂದು ಲಾಡ್ಜನಲ್ಲಿ ಚೆನ್ನಾಗಿ ರಗ್ಗು ಹೊದ್ದುಕೊಂಡು ಮಲಗಿರುತ್ತಾನೆ..ಆಗ ಶುರುವಾಗುವುದೇ ಆರತಿ ಎತ್ತಿರೇ ಕಳ್ಳ ಮಂಜನಿಗೆ, ಸುಳ್ಳಮಂಜನಿಗೆ. ಮುತ್ತದೈಯರು ಈ ಶೋಬಾನೆ ಹಾಡು ಹಾಡುತ್ತ ಇದ್ದರೆ, ರಾಜನ ವೇಷದಲ್ಲಿ ಜಗ್ಗಿ ಬರುತ್ತಾರೆ. ಪ್ರತಿ ಸಾಲಿನಲ್ಲೂ ಅವನ ಕಲ್ಯಾಣ ಗುಣಗಳನ್ನು ಹೇಳುತ್ತ ಇದ್ದರೆ
ಜಗ್ಗಿ ಅದಕ್ಕೆ ತಕ್ಕ ಮುಖ ಅಭಿನಯ ಕೋಡುವುದೇ ನಗೆ ತರುತ್ತದೆ. ಆ ಹಾಡಿನಲ್ಲಿ ಅವನ intro ಬಹಳ ಚೆನ್ನಾಗಿ ತೋರಿಸಿದ್ದಾರೆ ಅನಿಸುತ್ತದೆ. ಅದರಲ್ಲೂ ಹಾಡಿನ ಕೊನೆಗೆ ಬರುವ ಸಾಲು " ರಾಜ್ಯ ಪ್ರಶಸ್ತಿ ವಂಚಿತ"
ಅನ್ನೊದು ಸರಿಯಾಗಿ ಹಾಕಿದ್ದರೆ. ಮಠ ಚಿತ್ರಕ್ಕೆ ಪ್ರಶಸ್ತಿ ಬರದೇ ಇರುವುದು ನಿಜಕ್ಕೂ ಮರುಕ ತರುತ್ತದೆ ಬಿಡಿ.
ಅವನನ್ನು ಎಬ್ಬಿಸಲು ಒಬ್ಬ ಕುರುಡ ಬರುತ್ತಾನೆ, ಮಠದಲ್ಲಿ quater ಪಾತ್ರ ಮಾಡಿದ್ದ ತಬಲಾ ನಾಣಿ ಎಂಟ್ರಿ ಕೊಡುತ್ತಾನೆ. ಒಬ್ಬರ ಒಬ್ಬರ ಪರಿಚಯ ಆಗಿ ತಬಲಾ ನಾಣಿ ತಾನು ಒಬ್ಬ ನಿರ್ದೇಶಕ , ನಿರ್ಮಾಪಕ ಮೋಸ
ಮಾಡಿ ಹೋಗಿದ್ದಾನೆ. ಲಾಡ್ಜ ದುಡ್ಡು ಕೊಡಲು ಆಗದೇ ಇಲ್ಲಿ ತಂದು ಹಾಕಿದ್ದಾರೆ ಅಂತ ಹೇಳುತ್ತಾನೆ. ಇವರಿಬ್ಬರೇ ಸಂಭಾಷಣೆಯೇ ಕಥೆಯನ್ನು ಮುಂದುವರೆಸಿಕೊಂಡು ಹೋಗುತ್ತದೆ.
ಒಬ್ಬೊಬ್ಬರು ಹೊಡೆಯುವ ಡೈಲಾಗ್ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ಕೆಲವು ಕಡೆ ಅರ್ಥ ಆಗಿ ನಗಬೇಕಾದರೆ ಸಮಯ ಹಿಡಿಸುತ್ತದೆ, ಹಾಗೆ ಇದೆ ಡಬಲ್ ಮೀನಿಂಗ. ಇನ್ನು ಕೆಲವು ಕಡೆ ಸೆನ್ಸಾರ್ ಆಗಿದೆ, ಅಯ್ಯೊ
ಮಿಸ್ ಆಯಿತಲ್ಲ ಅನಿಸುತ್ತದೆ. ಅದರಲ್ಲಿ ಒಂದು ಹೀಗಿದೆ ..
ಜಗ್ಗೇಶ್ ;- ನೀವು ಹಿರೋ ಅಂತ ಹೇಗೆ ಆಯ್ಕೆ ಮಾಡುತ್ತಿರಿ
ನಾಣಿ ;- ಎನಿಲ್ಲ ನಿಮ್ಮಂತವರ ಕೈನಲ್ಲಿ ಪೋಟೊ ತೊರಿಸುತ್ತಿವಿ
ಜಗ್ಗೇಶ್ ;- ತೋರಿಸಿ
ನಾಣಿ;- ನೀವು ನಾಲ್ಕು ಜನ ಆರಿಸಿದ ಫೋಟೊ ತೊಗೊತ್ತಿವಿ.
ಜಗ್ಗೇಶ್ ;- ಅದನ್ನೇ ಆರಿಸ್ತಿರಾ
ನಾಣಿ;- ಇಲ್ಲ ಅದನ್ನು ಬಿಟ್ಟು ಬೇರೆದನ್ನು ಮಾಡ್ತಿವಿ. ...ಹ್ಹಹಹಹ
ಚಿತ್ರಕಥೆಯಲ್ಲಿ ಇದೇ ರೀತಿ ನಗೆ ಬರೆಸುವ ಮಾತುಗಳು ಇವೆ, ಆ ಡೈಲಾಗಿನಲ್ಲಿ ದೇವೆಗೌಡ್ರು, ಯಡಿಯೂರಪ್ಪ, ಸಿದ್ದರಾಮಯ್ಯ, ಪ್ರಮಿಳಾ ನೇಸರ್ಗಿ ಹಾಸುಹೋಗುತ್ತಾರೆ. ಸಮಿಶ್ರ ಸರಕಾರ, ಸುವರ್ಣ ಕರ್ನಾಟಕ
ಕನ್ನಡ ಭಕ್ತಿ, ಪಕ್ಶಾಂತರ , ಮಾಟ ಮಂತ್ರ , ಶ್ರೀನಗರ ಕಿಟ್ಟಿ, ಹಾಯ್ ಬೆಂಗಳೂರು ಬರುತ್ತವೆ. ಅವುಗಳನ್ನು ಸರಿಯಾಗಿ ಬಳಸಿಕೊಂಡ ಕೀರ್ತಿ ಗುರುವಿಗೆ ಹೋಗುತ್ತದೆ.
ಮುಖ್ಯ ಕಥೆ ಜಗ್ಗೇಶ್ ಅಲಿಯಾಸ್ ಮಂಜನ ಹುಟ್ಟಿನಿಂದ ಶುರುವಾಗಿ ಅವನು ಲಾಡ್ಜಗೆ ಹೇಗೆ ಸೇರಿಕೊಂಡ ಅನ್ನೊ ತನಕ ಸಾಗುತ್ತದೆ. ಸೊಂಬೇರಿಗಳ ಲೀಡರ್ ಮತ್ತು ಪ್ರತಿ ಮನೆಯಲ್ಲಿ
ತನ್ನ ಹಾಗೆ ಇರುವ ಮಂಜನ ಕಥೆ ಎಂದು ಅದು ಸಾರುತ್ತದೆ. ಚಿಕ್ಕ ವಯಸ್ಸಿನಿಂದ ಸದಾ ಪೋಲಿ ಅಲೆದುಕೊಂಡು, ಅಪ್ಪ ಅಮ್ಮನಿಗೆ ಕಾಟ ಕೊಡುತ್ತ, ಎಲ್ಲಾ ದುಶ್ಚಟಗಳ ದಾಸನಾಗಿ ಗುಂಡಾಡಿ ಗುಂಡ ಆಗಿರುತ್ತಾನೆ.
ಇವನನ್ನು ಹೀಗೆ ಬಿಟ್ಟರೆ ಹಾಳಾಗುತ್ತಾನೆ ಅಂತ ಅವನ ಅಪ್ಪ ಅಮ್ಮ ಅವನಿಗೆ ಗಂಟು ಹಾಕುತ್ತಾರೆ. ೧೦X೧೨ ಒಂದು ಮನೆಯನ್ನು ವರದಕ್ಷಿಣೆ ಆಸೆಗಾಗು ಮದುವೆಯಾಗುತ್ತಾನೆ. ಅಲ್ಲಿಗೆ ಅವನ ಸಂಸಾರ ಆರಂಭ. ಸಂಸಾರ ಸಾಗಿಸಲು
ಹೆಂಡತಿ ಪಟ್ಟ ಪಾಡಿಲ್ಲ, ಇವನ ಊಟ ಉಪಚಾರ ಮಾಡಿ, ಗಾರ್ಮೆಂಟ್ಸನಲ್ಲಿ ಕೆಲಸ ಮಾಡಿಕೊಂಡು, ಅವನಿಗೆ ಮೂಡ್ ಬಂದರೆ ರಾತ್ರಿ ಸಹಕರಿಸುತ್ತ , ಇವನ ಎಲ್ಲಾ ಹುಚ್ಚಾಟಗಳನ್ನು ಸಹಿಸಿಕೊಂಡು ..
ಕಾರ್ಯೇಷು ದಾಸಿ, ಶಯನೇಶು ರಂಭ, ಕ್ಷಮಯಾಧರಿತ್ರಿ ಆಗಿರುತ್ತಾಳೆ. ಎಲ್ಲರ ಕೈ ಕಾಲು ಕಟ್ಟಿ ಇವನಿಗೆ ಕೆಲಸ ಕೊಡಿಸಿದರೆ ಈ ಪುಣ್ಯಾತ್ಮ ಒಂದೇ ದಿನದಲ್ಲಿ ಅಲ್ಲಿಂದ ಓಡಿ ಬರುತ್ತ ಇರುತ್ತಾನೆ.
ಒಟ್ಟಿನಲ್ಲಿ ಹೆಂಡತಿಯ ದುಡ್ಡು ಖರ್ಚು ಮಾಡುತ್ತ, ಮನೆ ಎದುರಿಗೆ ಇರುವ ಹುಡುಗಿಗೆ ಲೈನ್ ಹೊಡೆಯುತ್ತ, ಎಲ್ಲಾ ಕಡೆ ಸಾಲ ಮಾಡಿ, ರಾತ್ರಿ ಆದರೆ ಕಾರ್ಡ್ಸ ಮತ್ತು ಎಣ್ಣೆ ಹಾಕಿ ೨ ಗಂಟೆಗೆ ಬರುತ್ತ ಇರುತ್ತಾನೆ.
ಅವನ ಒಂದೇ ಆಸ್ತಿ ಎಂದರೆ ಅವನ ಮಾತು.
ಗುರು ಇದರಲ್ಲೂ ಉಪಕಥೆಯಲ್ಲೇ ಚಿತ್ರ ಕಥೆ ಹೇಳಿದ್ದಾರೆ, ಕಥೆ ಪ್ರಸ್ತುತದಿಂದ ಶುರು ಆಗಿ, ಫ್ಲಾಶಬ್ಯಾಕ್ ಮತ್ತು ಪ್ರಸ್ತುತಕ್ಕೆ ಗಿರಕಿ ಹೊಡೆಯುತ್ತ ಇರುತ್ತದೆ. ಇವನ ಕಥೆಯಲ್ಲಿ ಇವನ ಅಕ್ಷರಭ್ಯಾಸ, ಮನೆಬಿಟ್ಟುಹೋದ ಕಥೆ
ಇವನ ಅಜ್ಜಿ ಶೀತಕ್ಕೆ ಬ್ರಾಂದಿ ಅಂತ ಕೊಟ್ಟು ಹೇಗೆ ಕುಡುಕನ್ನಾಗಿ ಮಾಡುತ್ತಾರೆ, ಚಿಕ್ಕಪ್ಪನ ಸಹವಾಸ , ಮದುವೆ, ಮೊದಲರಾತ್ರಿ, ಇವನು ಮಾಡಿದ ಕೆಲಸಗಳು, ಹೆಂಡತಿಗೆ ಕೊಟ್ಟ ಕಾಟ. ಗೆಳೆಯರ ಜೊತೆ
ಕಳೆದ ರಸನಿಮಿಷಗಳು, ಅಪ್ಪನ ಸಾವು ಹೀಗೆ ನೂರೆಂಟು ಹೊಸ ಕಥೆ ಹೇಳುತ್ತ ಕಳೆಯುವಾಗ ಮಧ್ಯಂತರ ಆಗುತ್ತದೆ.
ಮಧ್ಯಂತರದಲ್ಲಿ ಇವನ ಹೆಂಡತಿ ಅಲ್ಲಿ ಇಲ್ಲಿ ಸಾಲ ಮಾಡಿ ಇವರಿಬ್ಬರನ್ನು ಬಿಡಿಸಿಕೊಂಡು ಹೊಗುತ್ತಾಳೆ. ಲಾಡ್ಜಿನಿಂದ ಕಥೆ ಮನೆಗೆ ಬರುತ್ತದೆ, ಮತ್ತೆ ಇವನ ಪ್ರವರ ಮುಂದುವರೆಯುತ್ತದೆ.ಹೀಗೆ ಸಾಗುವ ಕಥೆ
ಕ್ಲೈಮ್ಯಾಕ್ಸ್ ತಲುಪಿ ಮಂಜನಿಗೆ ಬುದ್ದಿಬರುವದರಲ್ಲಿ ೧೦ ಲೀಟರ್ ಕಣ್ಣಿರು ಹಾಕಿರುತ್ತಾಳೆ.ಅಲ್ಲಿಗೆ ಕಥೆ ಮುಗಿಯುತ್ತದೆ.
ಚಿತ್ರದ ಪ್ರಮುಖ ಅಂಶಗಳು ...
೧) ಜಗ್ಗೇಶ್- ಜಗ್ಗೇಶ್-ಜಗ್ಗೇಶ್
ನನ್ನ ಅನಿಸಿಕೆ ಪ್ರಕಾರ ಇದು ಜಗ್ಗೇಶಿನ the best performance ಅಂದರೆ ತಪ್ಪಾಗಲಾರದು.
೨) ಗುರು ನಿರ್ದೇಶನ
೩) ಚುರುಕು ಸಂಭಾಷಣೆ.
೪) ತಬ್ಲಾ ನಾಣಿ ನೈಜ ಅಭಿನಯ.
೫) ಹಾಡುಗಳು ಮತ್ತು ಸಂಗೀತ.
೬) ಜಗ್ಗೇಶ್ ಮುಖಾಭಿನಯ - ಇದು ಮಾತ್ರ ಜಗ್ಗಿ ಬಿಟ್ರೆ ಬೇರೆಯಾವ್ರು ಮಾಡಲು ಸಾಧ್ಯವಿಲ್ಲ.
ಗುರು ಸಂಭಾಷಣೆಯ ಒಂದು ಝಲಕ್ ಇಲ್ಲಿದೆ.
ಒಂದು ೨೫ ಎಕರೆಯಲ್ಲಿ ಬಾರ್ ತೆರೆದರೆ ಆ ಬಾರಿನಲ್ಲಿ ಬರುವ ವಿವಿಧ ಹೆಸರುಗಳು ಹೀಗಿವೆ.
* ರಾಜರೋಷವಾಗಿ ಎಣ್ಣೆ ಹೊಡೆಯುವರ ಸಲುವಾಗಿ,ಅವರ ಮನರಂಜನೆಗೆ ಲೈವಬ್ಯಾಂಡ್ ನಡೆಯುವ ಸ್ಥಳ - ದರ್ಬಾರ್
* ಕಾಲೇಜಿನಿಂದ ಆಚೆ ಬಂದಿರುವ ಹುಡುಗರಿಗೆ ಇರುವ ಒಂದು ರೂಮ್ - ಡಿಬಾರ್
* ಎಸಿ ಇರುವ ಒಂದು ಟಾಯ್ಲೆಟ್ - ಮಲ-ಬಾರ್
* ಕಾರಿನಲ್ಲಿ ಎಣ್ಣೆ ಹೊಡೆಯುವರಿಗೆ - ಕಾರೋಬಾರ್.
ಜಗ್ಗಿ ಅಭಿಮಾನಿಗಳು ಮಿಸ್ ಮಾಡದೇ ನೋಡಬೇಕಾದ ಚಿತ್ರ ಇದು..ಹಾಗೇ ಮತ್ತೆ ಮಠ-೨ ಗೆ ಮತ್ತೆ ೨ ವರುಶ ಕಾಯೋಣ ...
Saturday, July 11, 2009
ಫಿವರಗೆ ಬಂತಪ್ಪಾ ಹಿಂದಿ ಜ್ವರ(H104)
ಎಲ್ಲಾ ಕಡೆ ಹಂದಿ ಜ್ವರ ಬಗ್ಗೆ ಮಾತು ಕೇಳುತ್ತ ಇರುತ್ತಿರಿ, ಸದಾ H1n1 ಅನ್ನೊ ಶಬ್ದ ಕೇಳಿರುತ್ತಿರಾ, ಈಗ ಅದೇ ರೀತಿ ಹೊಸ ರೋಗ ಬಂದಿದೆ ಬೆಂಗಳೂರಿನಲ್ಲಿ, ಇದು ಡೆಂಗೆ, ಚಿಕನಗುನ್ಯಾಗಿಂಗ ಭಯಂಕರ ಜ್ವರ. ಅದು ಯಾವುದಪ್ಪ ಅಂದ್ರೆ ಹಿಂದಿ ಜ್ವರ (H104) ಅಂತ.
plash back....
ಇತ್ತಿಚಿನ ದಿನಗಳಲ್ಲಿ ಅಂದರೆ ಸರಿ ಸುಮಾರು ೧ ವರುಷದಿಂದ ನಾನು ಮಿರ್ಚಿಗಿಂತ ಹೆಚ್ಚಾಗಿ ಫಿವರ್ ಬಳಿ ವಾಲಿದ್ದು ಅವರ ೧೦೪% ಕನ್ನಡ ಹಾಡುಗಳಿಗೆ ಮತ್ತು ಅವರ ಮನರಂಜನಾ ಆಟಗಳಿಗೆ.
ಮಿರ್ಚಿ ಅಲ್ಲಿ ಇರುವ ಹಾಗೆ rj ಬಹಳ ಪ್ರಸಿದ್ಧಿ ಪಡೆಯದಿದ್ದರೂ ಎನೂ ಒಂದು ಹೊಸತನವಿತ್ತು. ಆ ಕಾರಣಕ್ಕೆ ನೋಡಿ ಫಿವರ್ ಸ್ವಲ್ಪ ದಿನಗಳಲ್ಲೇ ಬೆಂಗಳೂರಿನಲ್ಲಿ ಮನೆಮಾತಯಿತು.
ಮಧ್ಯೆ ಮಧ್ಯೆ ಅದು ತನ್ನ ಸ್ವರೂಪ ಬದಲಾಯಿಸಿಕೊಂಡು, ಹೊಸ ಹೊಸ ಪ್ರಯೊಗಗಳನ್ನು ಮಾಡಿದ್ದು. ಪುಂಗ, ಒರಿಜಿನಲ್ ವೇಸ್ಟ ಪ್ರಾಡಕ್ಟ , ಅಟೋ ಗೋಪಿ , ಕತ್ರಿಗುಪ್ಪೆ ಕತ್ತರಿದಾಸರು
ಈ ಕಾರ್ಯಕ್ರಮಗಳು ಮಧ್ಯೆ ಮಧ್ಯೆ ಬಹಳ ಚೆನ್ನಾಗಿ ಮೂಡಿಬರುತ್ತಿದೆ ಇಂದಿಗೂ. ಆದರೆ ಯಾಕೋ ರಾಯರ ಕುದುರೆ ಕತ್ತೆ ಆಯಿತು ಅನ್ನೊ ಹಾಗೆ ಇದು ತಪ್ಪು ಹೆಜ್ಜೆ ಇಡುತ್ತ ಇದೆ.
ಆಆಆಆಅ .....ಒಂದು...
ಕಾರ್ಯಕ್ರಮಗಳ ಬದಲಾವಣೆಯ ಹೆಸರಲ್ಲಿ ಬೇರೆ ವಾಹಿನಿಗಳು ಮಾಡಿದ್ದನ್ನೆ ಇದು ಮಾಡಿದ್ದು. ಬರುಡೆ ಬ್ಲಾಸ್ಟ, ಕಿರಿಕ್ ಕಾಲಸೆಂಟರ್ ಇವುಗಳು ಕೇಳುಗರಿಗೆ ನಿಜಕ್ಕೂ ಕಿರಿಕಿರಿ ಉಂಟು ಮಾಡಿವೆ ಎಂದರೆ ತಪ್ಪಾಗಲಾರದು.
ಕೇಳುತ್ತ ಇದ್ದರೆ ಇದು ಹತ್ತರಲ್ಲಿ ಹನ್ನೋಂದು ಆಗುತ್ತ ಇದೆಯಾ ಅನಿಸುತ್ತದೆ. ವಿನಾಯಕ ಜೋಶಿ ಮಾಡಿದ್ದನ್ನು, ಅವಿನಾಶ್ ಮಾಡಿದ್ದನ್ನೆ ಇವರು ನಾಟಿ ನವೀನ್ ಕೈನಲ್ಲಿ ಮಾಡಿಸುತ್ತ ಇದ್ದಾರೆ.
ಪುಂಗನಲ್ಲಿ ಇಷ್ಟ ಆಗುವ ಅರ್ಜುನ್ ಮತ್ತು ರಾಜೇಶ್ ಇವಾಗ ಬಾಬಿ, ಮೊನಾ ಅಂದುಕೊಂಡು ಕೀಳು ಅಭ್ಜಿರುಚಿ ಜೋಕ್ ಮಾಡಿಕೊಂಡು ಯಾರನ್ನು ಮೆಚ್ಚಿಸಲು ಹೋಗಿದ್ದಾರೂ ಗೊತ್ತಿಲ್ಲ.
ಶಾಲು-ರಾಜೇಶ್ ಕಾಂಬಿನೇಶನ್ ಚೆನ್ನಾಗಿತ್ತು. ಅರ್ಜುನ್ ಶಾಲುನ replace ಮಾಡಿರುವುದು ಸರಿಯೇ ಆದರೆ ಕಾರ್ಯಕ್ರಮವನ್ನು ಸ್ವಲ್ಪ ಸರಿ ಪಡಿಸಬೇಕು.
ಸುಮೇಶ್ ಮತ್ತು ಆರತಿ ಜೋಡಿ ಚೆನ್ನಾಗಿತ್ತು. ಇವರು ಒಬ್ಬರೇ ಶೋ ಮಾಡುವದಕ್ಕಿಂತ ಇಬ್ಬರೂ ಮಾಡಿದರೆ ಚೆನ್ನ. ಈ ನಡುವೆ ಆದ ಮಾರ್ಪಾಡಿನಿಂದ ಆರತಿ ಮಾಯ, ಸುಮೇಶ ಒಬ್ಬನೇ ಜಗ್ಗಿ ಧ್ವನಿಯಲ್ಲಿ ಮಾತನಾಡುತ್ತ
ತನ್ನ ಸ್ವಂತ ಧ್ವನಿಯನ್ನೇ ಮರೆತ ಹಾಗೆ ಇದೆ.
ಇನ್ನು ಬೆಳ್ಳಿಗ್ಗೆ ಗೆಳೆಯ ಆಗಿದ್ದ ಸೋಮ ಮತ್ತು ಶ್ರದ್ಧ ಇಬ್ಬರೂ ಜೊತೆಯಾಗಿ ಇರುವದಕ್ಕಿಂತ ಬೇರೆಯಾಗಿ ಇದ್ದರೇನೆ ಚೆಂದ. ಒಬ್ಬರನ್ನು ಒಂದೇ ಶೋಗ್ ಹಾಕಿರುವುದು ಅವರ ಸಮಯವನ್ನ್ನು
ಕಿತ್ತುಕೊಂಡ ಹಾಗೆ ಇದೆ ಅನಿಸುತ್ತದೆ.
ಆಆಆಆಅ .....ಎರಡು..
ನಮ್ಮ ಮಾಧ್ಯಮದಲ್ಲಿ ಒಂದು ತಪ್ಪು ಕಲ್ಪನೆ ಇದೆ. ಹಿಂದಿಯನ್ನು ಬಿಟ್ಟರೆ ದೇಶದ್ರೊಹ ಮಾಡಿದ ಹಾಗೆ ಎಂದು. ಹಿಂದಿಯನ್ನು ಹಾಕದೇ ಬರಿ ಕನ್ನಡವನ್ನು ಹಾಕಿ ಮೊದಲನೇಯ ಸ್ಥಾನವನ್ನು ಪಡೆಯುತ್ತಾರೆ,
ಆದರೆ ಮತ್ತೆ ಹಿಂದಿಯನ್ನು ಹಿಂಬಾಗಿಲಿನಿಂದ ತರುತ್ತಾರೆ. ಅದಕ್ಕೆ ಮತ್ತೆ ಕೊಡುವ ಉತ್ತರ ಜನರ ಡಿಮ್ಯಾಂಡ್ ಇಲ್ಲ ಅದು ನಮ್ಮ ರಾಷ್ಟ್ರಭಾಷೆ ಅನ್ನುವ ಅರೆ ತಿಳುವಳಿಕೆ. ಒಂದು ಪಕ್ಷ ಹಾಗಿದ್ದಲ್ಲಿ ಬರಿ ಹಿಂದಿ ಹಾಕುವ ವಾಹಿನಿಗಳು ಇವತ್ತು ಮೊದಲನೇಯ ಸ್ಥಾನದಲ್ಲಿ ಇರಬೇಕಿತ್ತು.
ಇದೇ ತಪ್ಪನ್ನು ಹಿಂದೆ ಎಸ್.ಎಫಂ ಮಾಡಿ ತನ್ನ ಲೀಡ್ ಕಳೆದುಕೊಂಡಿತ್ತು, ಈಗ ಅದೇ ತಪ್ಪನ್ನು ಫಿವರ್ ಮಾಡಲು ಹೊರಟಿದೆ. ಇದನ್ನು ನೋಡುತ್ತ ಇದ್ದರೆ ಇದರ ಹಿಂದೆ ಬೇರೆ ಕಾರಣಗಳು ಇರಬಹುದು ಅನಿಸುತ್ತವೆ.
೧) ಆಡಳಿತ ವರ್ಗದ ಒತ್ತಡ :- ಇವತ್ತು ಎಲ್ಲಾ ಎಫ್.ಎಂ ವಾಹಿನಿಗಳ ಬಾಸ್ ನಾರ್ತಿ ಆಗಿದ್ದಾರೆ ಅನ್ನುವುದು ಗೊತ್ತಿರುವ ಸಂಗತಿ.ಅವರಿಗೆ ಭಾಷೆ ಮುಖ್ಯವಲ್ಲ ಬರೀ ದುಡ್ಡೇ ಮುಖ್ಯ. ಅದು ತಪ್ಪಲ್ಲ, ಯಾಕೆಂದರೆ
ಎಲ್ಲರೂ ಬಂದಿರುವುದು ವ್ಯಾಪಾರಕ್ಕಾಗಿಯೇ ಹೊರತು ಬೇರೆಯದಕ್ಕೆ ಅಲ್ಲ. ಆದರೆ ಕನ್ನಡ ಹಾಡುಗಳನ್ನು ಹಾಕಿ ನಂಬರ್ ೧ ಸ್ಥಾನಕ್ಕೆ ಎರಿ ಮತ್ತೆ ಅದನ್ನು ಬಿಟ್ಟು ಕೊಡುವ ಪ್ರಮಾದ ಯಾಕೆ ಮಾಡುತ್ತಾರೆ
ಎಂದು ಆಶ್ವ್ಹರ್ಯ ಆಗುತ್ತದೆ. ಇದು ಜಗತ್ತಿನಲ್ಲಿ ಗೊತ್ತಿರುವ ಸಂಗತಿಯೇ ಅನ್ನಬಹುದು, ಆಯ ಪ್ರದೇಶದಲ್ಲಿ ಕನ್ನಡ
೨) ಮಾರ್ಕೆಂಟಿಂಗ್/ಜಾಹೀರಾತು :- ಇವರಿಗೆ ಬೆಂಗಳೂರು ಎಂದರೆ ಎಮ್.ಜಿ,ಬ್ರಿಗೇಡ್, ಇಸಿ, ಐಟಿಪಿಲ್, ಇಂದಿರಾನಗರ, ಕೊರಮಂಗಲ ಅಂತ ಭಾವನೆ ಇದೆ. ಇದು ಒಂದು ರೀತಿಯಲ್ಲಿ
ಹುಟ್ಟುಹಾಕಿದ್ದೆ TOI ಅಂತ ಪೇಪರಗಳು. ಇವು ಅಲ್ಲಿಯ ಜನರನ್ನು ಸಂದರ್ಶಿಸಿ ಅವರ ಮಾತುಗಳನ್ನೇ ಬೆಂಗಳೂರಿನ ಮಾತು ಅನ್ನುವ ಹಾಗೆ ಹಾಕುವುದು, ಅವರ ಬ್ಲಾಗಗಳನ್ನು ಹಾಕುವುದು,
ಅವರ ಭಾಷೆಯ ಚಿತ್ರಗಳಿಗೆ ಎಲ್ಲಿಲ್ಲದ ಪ್ರಚಾರ ಕೊಡುವುದು ನೋಡಿದರೆ ನಗು ಬರುತ್ತದೆ.
ರಾಜಕುಮಾರ್ ಶ್ರೇಷ್ಥ ನಟನೇ ಅಂತ ಹೊರಗಿನಿಂದ ಬಂದ ಜನರ ಕೈಲಿ ಕೇಳಿ, ಅವರ ಅಭಿಮತವನ್ನು bold letters ನಲ್ಲಿ "DR.RAJ IS UNPOPULAR in BANGALORE" ಅಂತ ಹಾಕುವುದು.
ರಜನಿ,ಶಾರುಕ್ ಚಿತ್ರಗಳಿಗೆ ಎಲ್ಲಿಲ್ಲದ ಪ್ರಚಾರ ಕೊಡುವುದು ನಾವು ನೊಡುತ್ತ ಬಂದಿದ್ದೇವೆ. ಇದು ಒಂದು ರೀತಿಯಲ್ಲಿ ಮಾಧ್ಯಮಗಳು ಸುಳ್ಳನ್ನು ಬಿತ್ತುತ್ತ,
ಬಹುಸಂಖ್ಯಾತರ ದನಿಯನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತ ಬಂದಿದೆ.
ಅದೇ ನಿಟ್ಟಿನಲ್ಲಿ ಮೊದಲು ಶುರುವಾಗಿದ್ದೇ ಎಫ್.ಎಂಗಳ ಹಿಂದಿ ಸೇವೆ. ಯಾಕೆ ಅಂತ ಕೇಳಿದರೆ ಬೆಂಗಳೂರು ಕಾಸ್ಮೊಪಾಲಿಟನ್ ನಗರ, ಇಲ್ಲಿ ಹಿಂದಿ ಹೆಚ್ಚು ಓಡುತ್ತದೆ ಬೇಕಿದ್ದರೆ ನೀವೆ ನೋಡಿ ಅಂತ ಹೊರಗಿನವರ
ಅಭಿಮತವನ್ನು ಕೊಡುತ್ತಾರೆ. ಈ ತರಹಾ ಮಾಡಿದ್ದರೆ ಬೇಕಿದ್ದರೆ ಕಾಶ್ಮಿರಾ ಪಾಕಿಸ್ತ್ತಾನಕ್ಕೆ ಸೇರಿಸಬೇಕು ಎನ್ನುವ ಅಭಿಮತವನ್ನು ಬೆಂಗಳೂರಿನ ಅಭಿಮತವನ್ನಾಗಿ ಮಾಡಬಹುದು ಬಿಡಿ.
ಇಂತಹ ವಾಹಿನಿಗಳನ್ನು ಹೆಚ್ಚಾಗಿ ಕೇಳುವುದು ಇವರು ಅಂದುಕೊಂಡಿರುವ ಐ.ಟಿ ಬಿ.ಟಿ ಜನಗಳಲ್ಲ. ಸಾಲದಕ್ಕೆ ಎಫ್.ಎಂ ಎನು ಅರ್ಮಾನಿ, ರಾಡೊ ವಾಚಲ್ಲ, ಕೇವಲ ಒಂದು ವರ್ಗಕ್ಕೆ ಗುರಿಯಾಗಿಸಲು.
ಇವತ್ತು ಬೆಂಗಳೂರಿನ ಆಚೆ,ಅನೇಕ ಹಳ್ಳಿಗಳಿಗೆ ಇದು ಹೋಗುತ್ತದೆ, ಅಲ್ಲಿನ ಜನರೇ ಹೆಚ್ಚು ಕಾರ್ಯಕ್ರಮಗಳಿಗೆ ಸ್ಪಂದಿಸುವುದು.
ಮುಂದುವರೆಯುತ್ತ, ಒಂದು ಎಫ್.ಎಮ್ ನಡೆಯಲು ಜಾಹೀರಾತು ಅತ್ಯವಶ್ಯ. ಅದರ ದರಗಳು ಬೇರೆ ಬೇರೆ ಸ್ಲಾಬ್ ನಲ್ಲಿ ಇರುತ್ತದೆ. ಈ ಜಾಹೀರಾತುಗಳನ್ನು ಕೊಡುವ ಜನರು ಅದನ್ನು ಕೇಳುಗರಿಗೆ ಕೇಳಿಸಿ
ತಮ್ಮ ಉತ್ಪನ್ನಗಳ ಮಾರಾಟ ಮಾಡುವುದು ಆಗಿರುತ್ತದೆ. ಇಲ್ಲಿ ಹಿಂದಿ ಹಾಕಿ ಆಗ ಜಾಹೀರಾತು ಕೊಡುತ್ತ್ವೆವೆ ಅನ್ನುವ ಜನರ ಮನಸ್ಸಲ್ಲಿ ಇರುವುದು ನಾರ್ತಿಗಳು ಅಷ್ಟೇ. ಅವರು ಮಾತ್ರ ಕೊಳ್ಳುವ ವರ್ಗ,
ಇಲ್ಲಿನ ಕನ್ನಡಿಗರು ಕೇವಲ ವಿಂಡೋ ಶಾಪಿಂಗ್ ಮಾಡುವ ವರ್ಗ ಅಂತ ಅಂದುಕೊಂಡಿದ್ದಾರೆ. ಇದು ಸುಳ್ಳು ನಾವು ಯಾಕೆ ಕನ್ನಡಕ್ಕೆ ಮಾರುಹೋದೆವು ಅಂತ ಮಿರ್ಚಿಯ ನವೀನ್ ಚಂದ್ರ ಹೀಗೆ ಹೇಳುತ್ತಾರೆ.
"Advertisers need to break out of the common perception that Kannada is not hip. Kannada is very hot right now. Kannadigas have the highest purchasing power in Bangalore. We had commissioned a mall research in Bangalore through IMRB in 2007. It showed us that of all people visiting malls, Kannadigas had the most purchasing power and were the most likely to purchase goods and services available at malls. If any advertiser wants to reach the best audience in Bangalore, they have to bet on Kannada. The fact that The Times of India has started its Kannada edition in addition to Vijay Karnataka demonstrates that Kannada is the most important vehicle to reach Bangaloreans," adds Naveen Chandra, Radio Mirchi's national sales head."
ಹಂದಿ ಜ್ವರ ಬಗ್ಗೆ ಫಿವರ್ ಇಂದ ಬಂದ ಉತ್ತರವಿದು...
ಫಿವರ್ ಮ್ಯೂಜಿಕ್ ಮಹೋತ್ಸವ ಹೆಸರಲ್ಲಿ ಹಿಂದಿ ಹಾಕುತ್ತ ಇರುವುದು, ಅದಕ್ಕೆ ಅವರು ಹೇಳುತ್ತ ಇರುವುದು ಬರೀ ಚಲನಚಿತ್ರ ಗೀತೆ ಅಲ್ಲ ಭಾವಗೀತೆ,ಜಾನಪದ ಗೀತೆ, ಸಂದರ್ಶನ,ಶಾಸ್ತ್ರೀಯ ಸಂಗೀತ ಕೊಡುತ್ತ ಇದ್ದೇವೆ, ಹೌದು ಇದರ ಜೊತೆಗೆ ಒಂದೆರೆಡು ಗಂಟೆ ಹಿಂದಿ ಹಾಡುಗಳನ್ನು ಹಾಕುತ್ತ ಇದ್ದೇವೆ . ಅದು ಬರೀ ಸಂಜೆ ಮಾತ್ರ, ಅದೂ ಕೂಡ ಒಂದೇ ಒಂದು ಶೋ ನಲ್ಲಿ .. ನಮ್ಮ ಮುಖ್ಯ ಉದ್ದೇಶ ಎನಪ್ಪಾ ಅಂದ್ರೆ ಕನ್ನಡಿಗರಿಗೆ ಹೆಚ್ಚಿನ ವೈವಿಧ್ಯ ಇರುವ ಸಂಗೀತ ಕೊಡುವುದು, ಹೆಚ್ಚಿನ ಮನರಂಜನೆ ಕೊಡುವುದು. ಇದು ನಮ್ಮ ಗುರಿಯಾಗಿರುತ್ತದೆ.
ನಾವು ಯಾವತ್ತು ೧೦೪% ಕನ್ನಡ ಹಾಡುಗಳು ಎಂಬ ಮಾತಿಗೆ ದೂರ ಸರಿಯುವದಿಲ್ಲ, ಯಾವಾಗಲೂ ನಾವು ಬೆಂಗಳೂರಿನ ಬೊಂಬಾಟ್ ಸ್ಟೇಷನ್ ಆಗಿರುತ್ತೆವೆ ಎನ್ನುತ್ತಾರೆ. ಪ್ರಶ್ನೆ ಇದ್ದರೆ ಕೇಳಿ ಅಂತ ಬೇರೆ ಹೇಳುತ್ತಾರೆ.
ನನಗೆ ಇದನ್ನು ಓದಿ ಖಂಡಿತಾ ಅನೇಕ ಪ್ರಶ್ನೆಗಳಿವೆ ..
* ಈ ೧೦೪% ಅಂದರೇನು, ಇದರಲ್ಲಿ ೪% ಕನ್ನಡ ಇನ್ನ ೧೦೦% ಬೇರೆ ಭಾಷೆನಾ ?
* ಸಂಗೀತಕ್ಕೆ ಭಾಷೆ ಇಲ್ಲಾ ಅನ್ನೊ ಮಾತುಗಳು, ನಮ್ಮ ಕನ್ನಡ ನಟ ನಟಿಯರು ಬೇರೆ ಭಾಷೆಯಲ್ಲಿ ಅಭಿನಯಿಸಿ ಬಂದಾಗ ಹೇಳುತ್ತಾರಲ್ಲ ಕಲಾವಿದರಿಗೆ ಭಾಷೆ ಇಲ್ಲ ಅಂತ ಅದನ್ನು ಜ್ಞಾಪಿಸುತ್ತದೆ.
ನಿಮ್ಮ ಪ್ರಕಾರ ಸಂಗೀತಕ್ಕೆ ಭಾಷೆ ಇಲ್ಲದಿದ್ದಲ್ಲಿ ನಾಳೆ ನೀವು ತಮಿಳ್ ಹಾಡು ಹಾಕಬಹುದು, ತೆಲುಗು ಹಾಡು ಹಾಕಬಹುದು ಅಲ್ಲವೇ ?. ಅವು ನಿಮ್ಮ ಸಂಗೀತದ ವೈವಿಧ್ಯತೆ ಅಲ್ಲವೇ ?
ಇದಕ್ಕೆ ಮತ್ತೆ ನೀವು ಕೊಡುವ ಸಬೂಬು ಕನ್ನಡಿಗರ ಹೆಚ್ಚಿನ ಮನರಂಜನೆ ನೀಡಲು ನಾವು ಆ ಭಾಷೆ ಹಾಕುತ್ತ ಇದ್ದೆವೆ ಅದೂ ಕೂಡ ಕೇವಲ ಒಂದು ಗಂಟೆ ಅಂತ.
* ಅದೇ ನಿಮ್ಮ ಮುಂಬೈನಲ್ಲಿ ಅಷ್ಟೋಂದು ಕನ್ನಡಿಗರು ಇದ್ದಾರೆ, ಅಲ್ಲಿನ ಜನರ ಸಲುವಾಗಿ ನೀವು ಒಂದು ಗಂಟೆ ಕನ್ನಡ ಹಾಡು ಹಾಕುತ್ತೀರಾ ?
* ಒಂದು ಕಡೆ ೧೦೪% ಕನ್ನಡ ಹಾಡು ಅನ್ನುವುದು, ಇನ್ನೊಂದು ಕಡೆ ಬೇರೆ ಭಾಷೆ ಹಾಡುಗಳನ್ನು ಹಾಕುವುದು ಇದು ಒಂದಕ್ಕೆ ಒಂದು ironic ಆಗಿದೆ.
* ಮನರಂಜನೆಯಲ್ಲಿ ಸ್ಥಳೀಯ ಭಾಷೆಯ ಮಹತ್ವ ಎನು ?
* ನಮ್ಮ ಹಬ್ಬಗಳಲ್ಲದ ನಮ್ಮ ಸಂಸ್ಕ್ರುತಿ ಅಲ್ಲದ ಹಬ್ಬಗಳ ಬಗ್ಗೆ ಯಾಕೆ ಅಷ್ಟು ಅಬ್ಬರ ಮತ್ತು ಪ್ರಚಾರ ಕೊಡುತ್ತಿರಾ ?. ಉದಾ;- ಓಣಂ
ಒಟ್ಟಿನಲ್ಲಿ ಕಲಾವಿದರೂ ನಮ್ಮ ಸಂಸ್ಕ್ರುತಿಯ ನಾಯಕರಲ್ಲ ಅಂತ ಕನ್ನಡಿಗರಿಗೆ ಚೆನ್ನಾಗಿ ಗೊತ್ತಿದೆ. ಕನ್ನಡ ಹೋರಾಟಗಳಲ್ಲಿ, ನಾಡಿನ ಸಮಸ್ಯೆಗಳು ಬಂದಾಗ ವಿದೇಶದಲ್ಲಿ ಮಜಾ ಮಾಡುತ್ತ ಇರುವ ಇವರ ಬಾಯಲ್ಲಿ ನಾವು ಕನ್ನಡ-ಕನ್ನಡಿಗ-ಕರ್ನಾಟಕ ಬಗ್ಗೆ ತಿಳಿಯಬೇಕಾಗಿಲ್ಲ.
ಅವರ ಮಾತುಗಳು ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಮಾವನ ಕಡೆ ಇರುತ್ತದೆ. ಕಲಾವಿದನಿಗೆ ಭಾಷೆ ಇಲ್ಲಾ ಅಂತ ಹೇಳಿ ಬೇರೆ ಭಾಷೆಯಲ್ಲಿ ಕೆಲಸ ಮಾಡುವ ಇವರೂ ,ಅದೇ ಕನ್ನಡಿಗ ಬೇರೆ ಭಾಷೆ ಚಿತ್ರ ನೋಡಿದರೆ ನೋಡ್ರಿ ನಮ್ಮ ಜನರಿಗೆ ಸ್ವಲ್ಪಾನು ಭಾಷಾಭಿಮಾನ
ಇಲ್ಲ ಅನ್ನುತ್ತಾರೆ. ಇಂತವರ ಬಾಯಲ್ಲಿ ಹಿಂದಿ ಹಾಡುಗಳನ್ನು ಹಾಕಿಸಿದ್ದು ಒಂದು ಉತ್ತಮ ಮೂವ್ ಅಂತ ಹೇಳಿಸಿದರೆ ಅದು ನಗೆಪಾಟಲೇ ಸರಿ.
ಕೊಸರು
ಎಲ್ಲೊ ಒಂದು ಕಡೆ ನಮ್ಮ ಹುಡುಗ ತಪ್ಪು ದಾರಿಯಲ್ಲಿ ಹೋದರೆ ನಮಗೆ ಬೇಜಾರಾಗುವ ಹಾಗೆ ಇದೆ ನಮ್ಮ ಕನ್ನಡಿಗರ ಸಾತ್ವಿಕ ಸಿಟ್ಟು. ಇದರ ಮೇಲೆ ನನ್ನ ಹಾಗೆ ಯೋಚಿಸುವ ಮತ್ತು ಇವರ ಬದಲಾವಣೆಯ ಬಗ್ಗೆ ಚಕಾರ ಎತ್ತಿರುವ ಅನೇಕ ಕನ್ನಡಿಗರ ಉದ್ದೇಶ ಒಂದೇ,
ನೀವು ಕನ್ನಡದಿಂದ ದೂರ ಸರಿಯದಿರಿ, ಕನ್ನಡವೇ ಸತ್ಯ ,ಅನ್ಯ ಭಾಷೆ ಇಲ್ಲಿ ಮಿತ್ಯ ಅಂತ ತೋರಿಸಿ ಅಂತ. ಇಲ್ಲ ಜನರಿಗೆ ಇನ್ನೊಂದು ವಾಹಿನಿಗೆ ಹೋಗಲು ಒಂದು press ಸಾಕು.
ಮತ್ತೊಂದು ಕೊಸರು.
ಫಿವರ್ ವೆಬಸೈಟನಲ್ಲಿ ಹಾಡು ಕೇಳಿ ಅಂತ ಇದೆ, ಅದಕ್ಕೆ ಕೊಟ್ಟಿರುವ ಐ,ಪಿ ಲೋಕಲ್ ಐ.ಪಿ. ಯಾರೋ ಸರಿಯಾಗಿ ಟೆಸ್ಟ ಮಾಡಿಲ್ಲ ಅನಿಸೊತ್ತೆ. ಬೇಕಿದ್ದರೆ ನೀವು ನೋಡಿ http://192.168.1.7/feverfm/sound.html