Wednesday, June 27, 2007

ರಮ್ಯ ರಮಣೀಯ ರಚನಾಕೃತಿಗಳು,

ಎನಪ್ಪಾ ರಚನಾಕೃತಿ ಎಂದರೆ, ಒಂದು ರಚನಾ ಎನ್ನುವ ಹುಡುಗಿ/ಮಹಿಳೆ ಬರೆದಿರುವ ಸಾಹಿತ್ಯ ಎಂದು "ಅ" ವರ್ಗ ಹೇಳಿದರೆ, ಇನ್ನೊಂದು ವರ್ಗ ಇದು ಕಲೆಗೆ ಸಂಬಂದಿಸಿರಬೇಕು ಎಂದು ಹೇಳುತ್ತದೆ. ನಮ್ಮ ಜನ ಕನ್ನಡ ಅಂದರೆ ಕೇವಲ-ಸಾಹಿತ್ಯ-ಕಲಾ ಮಾತ್ರ ಸೀಮಿತ ಎಂದು ಯೋಚಿಸುವ ಬುದ್ಧಿ ಮತ್ತೊಮ್ಮೆ ಸಾಬೀತು ಪಡಿಸುತ್ತದೆ. ಹೆಸರು ಸ್ವಲ್ಪ ಪೇಚು ಮಾಡಿದರು ಇದು ತಂತ್ರಜ್ಞಾನಕ್ಕೆ ಸಂಬಂದಿಸಿರಬಹುದು ಎಂದು ಒಬ್ಬನು ಹೇಳಲಿಲ್ಲ, ಹೋಗಲಿ ಬಿಡಿ ನಾನೇನು ಬೇಜಾರು ಮಾಡಿಕೊಳ್ಳುವದಿಲ್ಲ.

ಇದನ್ನು ಆಂಗ್ಲದಲ್ಲಿ DESIGN PATTERNS ಎಂದು ಕರೆಯುತ್ತಾರೆ. ನಿಮಗೆ ತಂತ್ರಜ್ಞಾನವನ್ನು ಅಭಿವೃದ್ದಿ ಮಾಡುವ , ನಿರ್ಮಿಸುವ ಅನುಭವವಿದ್ದರೆ ಇದರ ಬಗ್ಗೆ ಕೇಳಿರುತ್ತಿರಾ ಇಲ್ಲಾ ಇದನ್ನು ಬಳಸಿರುತ್ತಿರಾ. ಇದು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಲ್ಲ, ಇದನ್ನು ಯಾವ ವಿಷಯದಲ್ಲೂ ಬಳಸಬಹುದು. ಒಂದು ಸಮಸ್ಯೆ ಬಗ್ಗೆ ಎಲ್ಲರಿಗೂ ಅನ್ವಯಿಸುವ ಹಾಗೆ ಸಮಧಾನ ಕೊಡುವ ಕೆಲ್ಸವನ್ನು ನಮ್ಮ ರಚನಾಕೃತಿ ಮಾಡುತ್ತದೆ. ಮೊಟ್ಟ ಮೊಲಿಗೆ ಇದನ್ನು ಪರಿಚಿಯಸಿದ್ದು GOF(Gang Of Four).



ಒಂದಾ(singleton)

ಮೊದಲಿಗೆ singleton design pattern ಬಗ್ಗೆ ಮಾತಾಡೋಣ. ಇದನ್ನು ನಾವು ಒಂದಾ ಎಂದು ಕರೆಯುತ್ತೆವೆ. ಒಂದಾ ಎಂದರೆ ಕೆಲವು ಕಡೆ ಮೂತ್ರಕ್ಕೆ ಹೋಗುವದನ್ನು ಹಾಗೆ ಕರೆಯುತ್ತಾರೆ, ಆದರೂ ಪರವಾಗಿಲ್ಲ ನಾನು ಇದೇ ಹೆಸರನ್ನು ಬಳಸುತ್ತೆನೆ, ಹೀಗೆ ಆದರೂ ಇದರ ಹೆಸರು ನಮ್ಮ ಜನರ ಮನಸ್ಸಲ್ಲಿ ನಿಲ್ಲಲಿ.

ಸಮಸ್ಯೆ:- ಒಂದು ಅಪ್ಲಿಕೇಷನ್ ಮಾಡುವಾಗ ಒಂದು ವಸ್ತುವು ಒಂದಕ್ಕಿಂತ ಹೆಚ್ಚು ಇರಬಾರದು.
ಎಲ್ಲಿ ಬಳಕೆ ಆಗುತ್ತದೆ:- ಒಂದು ಕಂಪ್ಯೂಟರಗೆ ಒಂದೇ ಒಂದು ಮೌಸ್ ಇರಬೇಕು. ಭಾರತದಲ್ಲಿ ರಾಷ್ಟ್ರಪತಿ ಒಬ್ಬರೇ ಇರಬೇಕು, ಇಂತಹಾ ನೈಜವಾದ ಪ್ರಕರಣಗಳು ನಮಗೆ ಸಿಗುತ್ತವೆ. ಇದಕ್ಕೆ ಸಂಬಂದಿಸಿದ ಹಾಗೆ ಒಂದು ಪರಿಹಾರವನ್ನು ಕೊಡಬೇಕಾದರೆ ಈ ಒಂದಾ ಸಹಾಯಕ್ಕೆ ಬರುತ್ತದೆ.

ಪರಿಹಾರ:- ಗ್ರಾಹಕ -> ಒಂದಾ --------
|-- > ಒಂದೇ ರೂಪ ಕೊಡುತ್ತದೆ.
ಝಾ ರೂಪ <-

ಝ ರೂಪವನ್ನು ಎಲ್ಲರೂ ಹಂಚಿಕೊಂಡಿರುತ್ತಾರೆ, ಅದ್ದರಿಂದ ಪ್ರತಿ ಸಾರಿ ರಾಷ್ಟ್ರಪತಿಯ ವಸ್ತುವೇ ಬರಬೇಕು. ಆ ಕೆಲ್ಸವನ್ನು ಇದು ಮಾಡುತ್ತದೆ.