Wednesday, June 14, 2006

ಜಾತಕದಲ್ಲಿ ಏನಿದೆ ??

ನನಗೆ ಬಹಳಷ್ಟು ಬಾರಿ ಈ ಪ್ರಶ್ನೆ ಮೂಡಿ ಬಂದಿದೆ, ಆದರೆ ಉತ್ತರ ಮಾತ್ರ ದೊರಕಿಲ್ಲ. ನನ್ನ ಜಾತಕವನ್ನು ನಾನೇ ಬರೆಯಲು ಪ್ರಯತ್ನಿಸಿದೆ, ಆದರೆ ದಾರಿ ತಪ್ಪಿ ಕೈಬಿಟ್ಟೆ. ಯಾವುದೇ ಶುಭ ಸಮಾರಂಭಗಳನ್ನು ಮಾಡುವಾಗ ಜಾತಕ ದೂಳಿನಿಂದ ಎದ್ದು ಬರುತ್ತದೆ. ಅದರಲ್ಲಿ ನಮ್ಮ ಭವಿಷ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ ಅಂತ ಹಿರಿಯರ ಅಂಬೋಣ.

ಮುಖ್ಯವಾಗಿ ಜಾತಕದ ಕಥೆ ಹೆಚ್ಚು ಕೇಳಿಬರುವುದು ಮದುವೆಯ ಪ್ರಸ್ತಾಪ ಬಂದಾಗ, ಹುಡುಗಿಯ ಮತ್ತು ಹುಡುಗನ ಜಾತಕವನ್ನು ತಾಳೆ ಮಾಡಿ, ಗುಣಾಕಾರ ಭಾಗಕಾರ ಮಾಡಿ ಒಂದು ಸಂಖ್ಯೆ ಕೊಡುತ್ತಾರೆ, ಒಂದು ಸಂಭಂದ ಆಗಬೇಕಾದರೆ ೩೨ ಗುಣಗಳಲ್ಲಿ ಕನಿಷ್ಠ ೧೮ ಗುಣಗಳು ಕೂಡಿಬರಬೇಕು ಎಂದು ಹೇಳುತ್ತಾರೆ. ಹೆಚ್ಚು ಗುಣಗಳು ಬಂದಷ್ಟೂ ಹೆಚ್ಚು ವರಸಾಮ್ಯವಿರುತ್ತದೆ.

ಒಂದು ಜಾತಕ ಆಗುವುದು ಅನೇಕ ವಿಷಯದ ಮೇಲೆ, ಅಂದರೆ ಹುಟ್ಟಿದ ದಿನ, ದಿನಾಂಕ, ಸಮಯ, ಅಕ್ಷಾಂಶ,ರೇಖಾಂಶ ಮತ್ತು ನಕ್ಷತ್ರದ ಮೇಲೆ ಅವಲಂಭಿತವಾಗಿರುತ್ತದೆ. ಕೆಲವರು ಹುಟ್ಟಿದ ತಪ್ಪೊ ಎನೊ ಅವರೊಂದಿಗೆ ಕೆಲ ಪಾಪಗಳನ್ನು ಹೊತ್ತುಕೊಳ್ಳುತ್ತಾರೆ, ಅಂದರೆ ಈ ನಕ್ಷತ್ರದಲ್ಲಿ ಹುಟ್ಟಿದರೆ ಹೀಗೆ ಅಂತ. ಅದಕ್ಕೆ ತಕ್ಕ ಹಾಗೆ ಮಾಡಬೇಕು, ಮಾಡದಿದ್ದರೆ ಅವಘಡ ತಪ್ಪಿದ್ದಲ್ಲ ಅಂತ. ನಮ್ಮ ಜನರು ಯಾಕೆ ಸುಮ್ಮನೆ RIsk ಅಂತ ಅದನ್ನು ಪಾಲಿಸುತ್ತ ಬಂದಿದ್ದಾರೆ.

ಹಾಗಿದ್ದರೆ ಒಂದು ಸಂಭಂದ ಜಾತಕದ ಮೇಲೆ ನಿಂತಿರುತ್ತದೆಯೇ??

ಖಂಡಿತ ಇಲ್ಲಾ, ಮದುವೆಯ ಸಂಭಂದ ಹಾಗೆ ನಿಂತಿದ್ದರೆ, ಇಂದು ೩೨ ಗುಣಗಳು ಕೂಡಿದವರು ಡೈವರ್ಸ್‍ಗೆ ಅರ್ಜಿ ಹಾಕುತ್ತ ಇರಲಿಲ್ಲ, ಹಾಗೇಯೆ ೧೫ ಗುಣಗಳು ಕೂಡಿದವರು ನೆಮ್ಮದಿಯಿಂದ ಬಾಳುತ್ತ ಇರಲಿಲ್ಲ. ಒಂದು ತತ್ವ ಒಂದು ಸಮುದಾಯಕ್ಕೆ ಸೀಮಿತವಾದರೆ ಅದಕ್ಕೆ ಅರ್ಥವಿಲ್ಲ, ಜಗತ್ತಿನ್ನ ೯೫% ಜನರು ಇದನ್ನು ಪಾಲಿಸುವದಿಲ್ಲ, ಆ ಜನರು ಇಂದು ನೆಮ್ಮದಿಯಿಂದ ಸಂಸಾರ ಮಾಡುತ್ತ ಇಲ್ಲವೇ ??.

ಹಾಗೇಯೂ ಮದುವೆಯ ಸಂಭಂದ ಹಣೆಬರಹ ಜಾತಕದ ಮೇಲೆ ನಿಂತಿದ್ದರೆ, ನಿಜವಾಗಿಯೂ ಜಾತಕ ನೋಡಬೇಕಾಗಿರುವುದು
ಹುಡುಗಿ ಮತ್ತು ಹುಡುಗನ ಅಮ್ಮನ ಜಾತಕವನ್ನು. ಯಾಕೆಂದರೆ ಮುಕ್ಕಾಲು ಜಗಳ ಮತ್ತು ಮನಸ್ಥಾಪ ಬರುವುದು ಇವರ ಮಧ್ಯೆ ತಾನೇ ??.

ಹಾಗಿದ್ದರೆ ಮದುವೆ ಯಾವುದರ ಮೇಲೆ ನಿಂತಿದೆ, ಏನು ತೋರಿಸಬೇಕು.

ಹುಡುಗ ಮತ್ತು ಹುಡುಗಿ ತಮ್ಮ ಸಂಪೂರ್ಣ(Master Health Checkup) ಆರೋಗ್ಯ ತಪಾಸಣೆ ಮಾಡಿಸಿ ಅದರ ಒಂದು ವರದಿಯನ್ನು ಪಡೆಯಬೇಕು. ಹುಡುಗನ ಆರೋಗ್ಯದ ವರದಿಯನ್ನು ಹುಡುಗಿಯು ತನ್ನ family doctor ಹತ್ತಿರ ತೋರಿಸಲಿ, ಹಾಗೇಯೆ ಹುಡುಗ ಕೂಡ. ಆಗ ಮುಂದೆ ಬರಬಹುದಾದ ಕಷ್ಟಗಳನ್ನು ನಿವಾರಿಸಿಕೊಳ್ಳಬಹುದು. ಹಾಗೇಯೆ ಎನು ತಪ್ಪು ಮಾಡಿರದ ಮುಂದಿನ ಪೀಳಿಗೆಗೆ ಅವರ ರೋಗಗಳನ್ನು ಅನುವಂಶಿಯತೆ ಮೂಲಕ ಕೊಡುವದನ್ನು ತಡೆಯಬಹುದು.
ಇದನ್ನು ನಮ್ಮ ಸರ್ಕಾರ ಖಡ್ಡಾಯಗೊಳಿಸಬೇಕು, ಅರ್ಥವಿಲ್ಲದ ಜಾತಕ ನೋಡುವದನ್ನು ಬಿಟ್ಟು ಕ್ರಿಯಾತ್ಮಕ ಕೆಲಸವನ್ನು ನಾವು ಮಾಡೋಣ. ಎನಂತಿರೀ ????