Saturday, November 03, 2007

aa dingalu - Review


ಆ ದಿನಗಳು ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇದಕ್ಕೆ ಕಾರಣ ಪ್ರತಿಯೊಂದು ಕ್ಷೇತ್ರದಲ್ಲಿ ಆರಿಸಿರುವ ಕಲಾವಿದರು ಮತ್ತು ತಂತ್ರಜ್ಞರು. ಮೊದಲ ಬಾರಿಗೆ ಚಿತ್ರ ನಿರ್ದೇಶನ ಮಾಡಿರುವುದು ಚೈತನ್ಯನಾ ಅಂತ ಅನೇಕ ಬಾರಿ ಆಶ್ಚರ್ಯ ಆಗುತ್ತದೆ, ಆ ಮಟ್ಟಿಗೆ ಪ್ರಬುದ್ಧತೆಯಿಂದ ಮೂಡಿ ಬಂದಿದೆ. ಕಥೆ ಮೊದಲಾರ್ಧ ಬೇಗ ಸಾಗುತ್ತದೆ,

ಆ ವೇಗವನ್ನು ಕಾಪಡಿಕೊಳ್ಳಲು ಮುಂದಿನ ಅರ್ಧದಲ್ಲಿ ಸ್ವಲ್ಪ ಮಟ್ಟಿಗೆ ಸೋತಿದೆ. ಚಿತ್ರವನ್ನು ೩೦ ನಿಮಿಷ ಕಮ್ಮಿ ಮಾಡಿದ್ದರೆ, ಇನ್ನೂ ಚೆನ್ನಾಗಿ ಮೂಡಿಬರುತ್ತದೆ. ಆದರೆ ೩೦ ನಿಮಿಷ ಕಮ್ಮಿ ಮಾಡಲು ಎನು ಕತ್ತರಿ ಹಾಕಬೇಕಿತ್ತು ಎಂದು ನನ್ಗೆ ಯೋಚಿಸುವದಕ್ಕೆ ಆಗುವದಿಲ್ಲ, ಪ್ರತಿಯೊಂದು ದೃಶ್ಯ ಚಿತ್ರಕ್ಕೆ ಹೇಳಿ ಮಾಡಿಸದ ಹಾಗೆ ಇದೆ.

ಹಾಡುಗಳು ಮತ್ತು ಹಿನ್ನಲೆ ಸಂಗೀತ ಅದ್ಭುತ ಅನ್ನಬಹುದು, ಚೆನ್ನಾಗಿ ಬಳಸಿಕೊಂಡಿದ್ದಾರೆ ಇಳಯರಾಜರನ್ನು. ವೇಣು ಅವರ ಛಾಯಗ್ರಹಣ ಬಗ್ಗೆ ಎನಾದರೂ ಹೇಳಲು ಸಾಧ್ಯವೇ ?. ೧೯೮೬ ಕಾಲದಲ್ಲಿ ಇದ್ದ ಹಾಗೆ ತೋರಿಸುವುದು ನಿಜಕ್ಕೂ ಒಂದು ಸವಾಲೇ ಸರಿ ಅದರಲ್ಲಿ ೯೫% ಗೆದ್ದಿದ್ದಾರೆ. ಆ ಕಾಲದಲ್ಲಿ ಇದ್ದ ಅಂಬಾಸಿಡರ್ ಕಾರು, ರಾಜದೂತ್, ಎನಫಿಲ್ಡ ಬೈಕ್ ಬಳಸಿರುವುದು ಸರಿ. ಆದರೆ pollution sticker ನ ತೆಗೆಯಬೇಕಿತ್ತು. ಹಾಗೆ ೨ ರೂಪಾಯಿ ನೋಟು ಕೊಡುವಾಗ ಹೊಸ ೧೦೦ ನೊಟು ಕಾಣುವುದು ಕಣ್ತಪ್ಪು ಎಂದರೂ ಸಮಗ್ರವಾಗಿ ಗೆದ್ದಿದ್ದಾರೆ.



ಕಲಾವಿದರ ನಟನೆ ಬಗ್ಗೆ ಎನು ಹೇಳುವುದು?. ಪ್ರತಿಯೊಬ್ಬರು ತಮ್ಮ ನಟನೆಯ ಚಮತ್ಕಾರ ಮಾಡಿದ್ದಾರೆ, ಅದರಲ್ಲೂ ಮುಖ್ಯವಾಗಿ ಲೋಹಿತಾಶ್ವ. ಕೊತ್ವಾಲ್ ಕಣ್ಣಮುಂದೆ ಬಂದ ಹಾಗೆ ನಟನೆ ಮಾಡಿದ್ದಾರೆ. ರೌಡಿ ಚಿತ್ರ ಅಂದರೆ ಕೇವಲ ಹಿಂಸೆ, ಅವರ ಚಿತ್ರ-ವಿಚಿತ್ರ ಪೊಷಾಕುಗಳು, ಉದ್ದುದ್ದ ಡೈಲಾಗ್, ಲೀಟರಗಟ್ಟಲೆ ರಕ್ತ ಅಂತ ತಿಳಿದಿರುವ

ನಮ್ಮ ನಿರ್ದೇಶಕರು ಈ ಚಿತ್ರವನ್ನು ಒಮ್ಮೆ ನೋಡಿ ಕಲಿಯಬೇಕು. ಶ್ರೀಧರ್ ಅವರು ತಮ್ಮ ಸಂದರ್ಶನದಲ್ಲಿ ಹೇಳಿದ ಹಾಗೆ greyish ರೂಪವನ್ನು ಸರಿಯಾಗಿ ಚಿತ್ರದಲ್ಲಿ ತೋರಿಸಿದ್ದಾರೆ.



ಮತ್ತೊಮ್ಮೆ ಈ ಚಿತ್ರವನ್ನು ನೋಡಬಹುದು.