Sunday, August 09, 2009

ತಪ್ಪನ್ನು ಮತ್ತೆ ಮಾಡುವುದು ದೊಡ್ಡ ತಪ್ಪು..


ಇವತ್ತಿನ ವಿಜಯ ಕರ್ನಾಟಕದಲ್ಲಿ ೨ ದಶಕಗಳ ಹಿಂದೆಯೇ ಆಗಿತ್ತು, ಅಂದರೆ ಗುಂಡುರಾವ್,ಜನತ ಪಕ್ಷ ಇದ್ದಾಗ ಆಗಿದ್ದು
ಇವತ್ತು ಭಾಜಪ ಇದ್ದಾಗ ಆಗಿದೆ ಅದರಲ್ಲಿ ತಪ್ಪೇನು ಅನ್ನೋ ರೀತಿಯಲ್ಲಿ ಇದೆ. ಇದು ಒಂದು ಕಡೆ ಆ ರೀತಿ ಅರ್ಥ ಕೊಟ್ಟರೆ ಇನ್ನೊಂದು ಕಡೆ ನಾವೇನು ಮೊದಲ ಪ್ರಯತ್ನಕ್ಕೆ ಕೈ ಹಾಕುತ್ತಿಲ್ಲ, ಇರುವದನ್ನೇ ಮಾಡುತ್ತ ಇದ್ದೇವೆ, ಅಲ್ಲಿ ಇದ್ದರೆ ಸರಿ ಇಲ್ಲಿ ಮಾಡಿದರೆ ತಪ್ಪೇ ಅನ್ನೊ ದಾಟಿಯಲ್ಲಿ ಇದೆ.

ದಿನ ಪ್ರಮುಖ ಎಲ್ಲ ಸುದ್ದಿಗಳನ್ನು ಪಕ್ಕಕ್ಕೆ ಇಟ್ಟು ಕೇವಲ ಮೂರ್ತಿ ಪೂಜೆ ಮಾಡುತ್ತ ಇರುವ ನಮ್ಮ ಮಾಧ್ಯಮಗಳು ಸಾರಿ ಸಾರಿ ಹೇಳುತ್ತ ಇದ್ದೀದ್ದು , ಹೇಳಿಸುತ್ತ ಇದ್ದಿದ್ದು ಒಂದೆ ?

* ಹೊಸ ಸಾಮರಸ್ಯಕ್ಕೆ ಇದು ಬುನಾದಿ.

* ಪ್ರತಿಮೆಗಳಿಂದ ನಮ್ಮ ಅಂತರ್ ರಾಜ್ಯ ಸಮಸ್ಯೆ ಬಗೆಹರಿಯೊತ್ತೆ.

* ನಾವು ಇದನ್ನು ವಿರೋಧಿಸಿ ಸಣ್ಣವರಾಗಬಾರದು.

* ತಮಿಳು ಕವಿ, ಒಬ್ಬ ದಾರ್ಶನಿಕೆ, ಅವರು ರಾಷ್ತ್ರಕ್ಕೆ ಸೇರಿದವರು.

* ಒಳ್ಳೆ ಕೆಲ್ಸ ಇದು, ಇದರಲ್ಲಿ ಬೇರೆ ಸಮಸ್ಯೆಗಳನ್ನು ತಳುಕು ಹಾಕಬಾರದು.

* ರಾಜ್ಯಗಳ ಭಾಂದವ್ಯಕ್ಕೆ ಇದು ಮುನ್ನುಡಿ ಹಾಡುತ್ತದೆ.

* ಇದು ಜನಾಭಿಪ್ರಾಯ ಮತ್ತು ಜನ ಮನ್ನಣೆ.

* ಸರ್ವಜ್ಞನ ಪ್ರತಿಮೆ ಮಾಡುತ್ತ ಇಲ್ಲವೇ, ಮತ್ತ್ನೇನು ಸಮಸ್ಯೆ.

* ಸರ್ವಜ್ಞನ ಪ್ರತಿಮೆ ಅತಿ ಒಳ್ಳೆಯ ಸ್ಥಳದಲ್ಲಿ ನಡೆಯುತ್ತಿದೆ.

* ಇದನ್ನು ವಿರೋಧಿಸುವವರು ಭಯೋತ್ಪಾದಕರು.

ಹೀಗೆ ಇದನ್ನು ವಿರೋಧಿಸುವ ಜನರಿಗೆ ಪುಂಖಾನುಪುಂಖವಾಗಿ ಬುದ್ಧಿವಾದ ಹೇಳಲಾಯಿತು. ಪ್ರತಿ ಬಾರಿ ಸಮರ್ಥನೆ ಎಲ್ಲಿಂದ ಎಲ್ಲಿಗೋ ಸಾಗುತ್ತಿತ್ತು. ಸಮಾನ ಗೌರವ ಮತ್ತು ಈಗಿರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದಿನ ಹೆಜ್ಜೆ ಇಡೊಣ, ಚರಿತ್ರೆ ಇಂದ ಪಾಠ ಕಲಿಯೋಣ ಅನ್ನೊ ಕನ್ನಡ ಸಂಘಟನೆಗಳ ಮಾತುಗಳು ಎಲ್ಲರ ಕಿವಿಗೆ ಬೀಳಲೆ ಇಲ್ಲ.

ಒಳ್ಳೆ ಗಿಳಿಪಾಠ ಹೇಳಿದ ಹಾಗೆ ಇದು ಅಂತರ್ ರಾಜ್ಯದ ಬ್ಭಾಂದವ್ಯಕ್ಕೆ ಸಾಕ್ಷಿ, ತಿರುವಳ್ಳುವರ್ ಪ್ರತಿಮೆ ಆದರೆ ಮಾತ್ರ್ ನಮ್ಮ ರಾಜ್ಯಗಳ ಮಧ್ಯೆ ಉತ್ತಮ ಸಾಮರಸ್ಯ ಬರುತ್ತದೆ ಎಂದು ಪ್ರಾಯೋಜಿತ ಲೇಖನಗಳನ್ನು ಎಲ್ಲ ಪತ್ರಿಕೆ-ಮಾಧ್ಯಮಗಳು ಮಾಡಿದವು.
ಇದು ಉತ್ತಮ ಹೆಜ್ಜೆ, ಅಟಲ್ ಸರಕಾರದಲ್ಲಿ ಪಾಕಿಸ್ತಾನಕ್ಕೆ ರೈಲು ಬಿಟ್ಟಿಲ್ವಾ ಅಂತ ಉಧಾಹರ್ಣೆ ಬೇರೆ ಕೊಟ್ಟಿದ್ದರು. ಇವತ್ತು ಅದೇ ಜನ ಹಿಂದೆ ದಶಕಗಳ ಹಿಂದೆ ಪ್ರತಿಮೆ ಆಗಿತ್ತು ಅಂತ ಹೇಳಿವೆ.

ಈ ಮಾಧ್ಯಮ ಗೆಳೆಯರಿಗೆ ಕೇಳುವುದು ಇಷ್ಟೆ.

೨ ದಶಕಗಳ ಕೆಳಗೆ ನಾವು ಶರತ್ತು ಇಲ್ಲದೇ, ಪ್ರತಿಮೆಗಳನ್ನು ಬಿಟ್ಟಿದ್ದೆವು. ಸಾಮರಸ್ಯ ತೋರಿಸಿದ್ದೆವು. ನೀವು ಹೇಳುವ ಹಾಗೆ ಸಣ್ಣತನವನ್ನು ಪಕ್ಕಕ್ಕೆ ಇರಿಸಿ ಮುನ್ನುಡಿ ಹಾಡಿದ್ದೆವು, ಆದರೆ ೨೦ ವರುಷಗಳಲ್ಲಿ ಎನಾಗಿದೆ ಸ್ವಾಮಿ ?

* ಕಾವೇರಿಗೆ ಗಲಾಟೆ.
* ನಮ್ಮ ನದಿ ನೀರ ಪಾಲನ್ನು ಬಲವಂತವಾಗಿ ಪಡೆದಿರುವುದು.
* ವಿದ್ಯುತ್ ಹಂಚಿಕೆ ಅನುಪಾತದಲ್ಲಿ ಮೋಸ.
* ರೈಲು ಮತ್ತು ರಸ್ತೆ ಸಂಚಾರದಲ್ಲಿ ನಮ್ಮ ಪಾಲಿನ್ನು ಕಸಿದಿರುವುದು.
* ಶಾಸ್ತ್ರೀಯ ಭಾಷೆಗೆ ಅಡ್ಡಿ.
* ನಮ್ಮ ಜಲಾಶಯಗಳ ವಿರುದ್ಧ್ಜ ದೂರು.
* ಅಕ್ರಮವಾಗಿ ಹೊಗೆನೆಕಲ ನಲ್ಲಿ ಜಲಾಶಯ ನಿರ್ಮಾಣ.
* ಡಾ.ರಾಜ್ ಅಪಹರಣ
* ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ಒತ್ತಾಯ
* ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ.
* ಕನ್ನಡ ಚಿತ್ರಗಳನ್ನು ಮತ್ತು ಕನ್ನಡ ವಾಹಿನಿಗಳನ್ನು ಪ್ರಸಾರ ಮಾಡದಿರುವುದು

ಸಾಕೇ ಇನ್ನೂ ಬೇಕೆ ??.. The biggest mistake of all, attempting for new same old mistake.