Thursday, August 06, 2009

ಭಾಷ ಅಲ್ಪ ಸಂಖ್ಯಾತರ ಒಲೈಕೆ- ಹೊಸ ಮಂತ್ರ

ಇತ್ತಿಚಿಗೆ ನಡೆಯುತ್ತಿರುವ ವಿದ್ಯಾಮಾನಗಳನ್ನು ನೊಡುತ್ತ ಇದ್ದರೆ,ಅದರಲ್ಲೂ ಬೇರೆ ಭಾಷಿಕರನ್ನು ಮುಖ್ಯವಾಹಿನಿಗೆ ಸೇರಲು ಬಿಡದೆ ಅವರನ್ನು ಹಾಗೆ ಇರುವ ಹಾಗೆ ಮಾಡಿ, ಅವರನ್ನು ವೋಟಬ್ಯಾಂಕಾಗಿ ಪರಿವರ್ತಿಸುವ ಕೆಲ್ಸ ಬಹಳ ವ್ಯವಸ್ಥಿತವಾಗಿ ನಡೆಯುತ್ತಿದೆ.ಇದು ಒಂದು ಕಡೆ ಮತ ರಾಜಕಾರಣ ಅನಿಸಿದರೆ ಇನ್ನೊಂದು ಕಡೆ ಕನ್ನಡ ಸಂಘಟನೆಗಳನ್ನು ಮಟ್ಟ ಹಾಕುವ ಪ್ರಕ್ರಿಯೆ.


ತಮಿಳು ಸಮಾವೇಶ

ಮಾರ್ಚ್ 29ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತಮಿಳು ಸಮಾವೇಶದಲ್ಲಿ ಕೂಡ ನಡೆದಿದ್ದು ಅದೇ,
ಸುಮಾರು ೨೫ ಲಕ್ಷ ಕೊಟ್ಟಿದ್ದಾರೆ ತಮಿಳು ಸಂಘಕ್ಕೆ ಅಂತ. ಇದರಲ್ಲಿ ಕೇವಲ ಬಿಜೆಪಿಗೆ ಮಾತ್ರ ಆಹ್ವಾನವಿತ್ತು, ಕಾರಣ ಆಡಳಿತ ಸರಕರವನ್ನು ಕರೆದಿದ್ದೆವು ಅಂತ. ಶಂಕರ ಮೂರ್ತಿ, ಜೂ.ಯಡಿಯೂರಪ್ಪ, ಹಾಲಪ್ಪ, ಕುಮಾರಸ್ವಾಮಿ ಆಗಿ ಎಲ್ಲರು ಪಾಲ್ಗೋಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು. ಈ ತಮಿಳು ಸಂಘ ೭೦ ಲಕ್ಷ ವೆಚ್ಚದಲ್ಲಿ ತಮಿಳು ಭವನ ಕಟ್ಟಿಸುತ್ತ ಇದೆ, ಇದಕ್ಕೂ ಕೂಡ ನಮ್ಮ ಕನ್ನಡ ಸರಕಾರವೆ ಹಣ ಕೊಟ್ಟಿರುತ್ತದೆ. ಇದನ್ನು ಕಾರ್ಯಕ್ರಮದ ವ್ಯವಸ್ಥಾಪಕರೇ ಹೇಳುವ ಹಾಗೆ ಸಮಾಜದ ಸಂಘಟನೆ ಅಂತ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಹೊಂದಿರುವ ತಮಿಳು ಜನರನ್ನು ತಮ್ಮಡೆ ಸೆಳೆದುಕೊಳ್ಳಲು ಚಿಕ್ಕ ಕಾಣಿಕೆ ಕೊಟ್ಟಿದ್ದಾರೆ ಅಂತ ಬಂಗಾರಪ್ಪ ಆದಿ ಎಲ್ಲರೂ ಹೇಳಿದ್ದು.

ಮರಾಠಿ ಮೇಳ

ಅದೇ ಸಮಯದಲ್ಲಿ ಬೆಳಗಾವಿಯಲ್ಲಿ ಭಾರತೀಯ ಜನತಾ ಪಕ್ಷದ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಕನ್ನಡಗರಿಗೆ ಭಾರಿ ಅಘಾತ ನೀಡಿದ್ದರು.ಕನ್ನಡಿಗರು ವಿರೊಧಿಸುತ್ತ ಇದ್ದ ವಿಷಯವನ್ನು ಸಂಸದ ಅಂಗಡಿ ಹಾಗೂ ಶಾಸಕ ಸಂಜಯ ಪಾಟೀಲ್ ಕೈಗೆತ್ತಿ ಕೊಂಡು, ಭಗವಾಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬಹಿರಂಗವಾಗಿಯೇ ಬೆಂಬಲ ನೀಡಿದ್ದರು. ಇದು ಕೂಡ ಅಲ್ಲಿ ನೆಲಸಿರುವ ಮರಾಠಿ ಜನರನ್ನು ಸೆಳೆಯಲು ಅಂತ ಹೇಳಬೇಕಾಗಿಲ್ಲ. ಮರಾಠಿ ಮತಗಳು ಬೇಕು ಎಂದರೆ, ಕನ್ನಡಿಗರೇ ನಮ್ಮ ಕಾಲಿಗೆ ಬೀಳುತ್ತಾರೆ, ನಮ್ಮನ್ನು ಬೆಂಬಲಿಸುತ್ತಾರೆ ಅಂತ ಮನವರಿಕೆ ಮಾಡಿಕೊಂಡ
ಆಟಕ್ಕುಂಟು ಲೆಕ್ಕಕಿಲ್ಲ ಅನ್ನೊ ಹಾಗೆ ಆಗಿದ್ದ ಎಂ.ಇ.ಎಸ್ ಇದರಿಂದ ಚೇತರಿಕೆ ಕಂಡಿತು.

ಪಾಡುತ ತೀಯಗ

ಮತ್ತೆ ಎಪ್ರಿಲ್ ಮೊದಲ ವಾರದಲ್ಲಿ ಇದೇ ಬಿಜೆಪಿ ಪಕ್ಷ ತೆಲುಗು ಭಾಷಿಕರ ಸಮಾವೇಶವನ್ನು ಮಾಡಿ ತೆಲುಗು ಮತಗಳನ್ನು ತನ್ನಡೆ ಸೆಳೆಯಲು ಪ್ರಯತ್ನಿಸಿತು. ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಸ್ನೇಹ ಮಿಲನ ಅಂತ ಮಾಡಿತ್ತು. ಕಟ್ಟಾ, ವೆಂಕಯ್ಯ ನಾಯ್ಡು ಎಲ್ಲರೂ ಪಾಲ್ಗೊಂಡಿದ್ದರು ಇದರಲ್ಲಿ. ಕಾರ್ಯಕ್ರಮ ಸಂಪೂರ್ಣ ತೆಲುಗುನಲ್ಲಿ ನಡೆಯಿತು.

ūṭaluvakai

ತಮಿಳುನಾಡು ಶಾಸ್ತ್ರೀಯ ಭಾಷೆ ವಿಚಾರದಲ್ಲಿಯಾಗಲಿ, ಕಾವೇರಿ ವಿಚಾರದಲ್ಲಿಯಾಗಲಿ, ಹೊಗೇನಕಲ್ ವಿಚಾರದಲ್ಲಿಯಾಗಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ ಎಸಗಿದರೂ ಸಹ ನಮ್ಮ ಬಿಜೆಪಿ ರಾಜ್ಯ ಸರಕಾರ ಇವನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಮುಂದಾಗಿದೆ. ಮತ್ತದೇ ಬೆಂಗಳೂರಿನಲ್ಲಿ ತಮಿಳರನ್ನು ಒಲೈಸಲು ಮಾಡಿರುವ ಕೆಲ್ಸ ಇದು.

ಕಳೆದ ೬ ತಿಂಗಳಲ್ಲಿ ಇವೆಲ್ಲಾ ವಿದ್ಯಾಮಾನಗಳನ್ನು ನೊಡುತ್ತ ಇದ್ದರೆ ನನಗೆ ಅನಿಸುವುದು ಒಂದೇ

೧) ಪರ ಭಾಷಿಕರನ್ನು ಒಲೈಸುವಿಕೆ

೨) ಇವೆಲ್ಲಾ ಕಾರ್ಯಕ್ರಮಗಳ ಮುಂದೆ ಒಂದು ಚುನಾವಣೆ ಇರುತ್ತದೆ.

೩) ಕನ್ನಡಿಗರ ಪ್ರತಿರೋಧವನ್ನು ಲೆಕ್ಕಿಸದೇ, ಕನ್ನಡ ವಿರೋಧಿ ಕೆಲ್ಸ ಮಾಡುವುದು.

೪) ತಮ್ಮ ಈ ಕ್ರಮಗಳನ್ನು ಸಮರ್ಥಿಸಿಕೊಳ್ಳಲು ಪತ್ರಿಕೆಗಳಲ್ಲಿ ಪ್ರಾಯೋಜಿತ ಲೇಖನಗಳನ್ನು ಬರೆಸುವುದು.
ಕನ್ನಡದ ಚಿಂತಕರು, ಸಾಹಿತಿಗಳು, ರಾಷ್ಟ್ರಕವಿಗಳು, ಯಿಗದ ಕವಿಗಳು ಇದನ್ನು ಸಮರ್ಥಿಸಿಕೊಳ್ಳುತ್ತ ಕನ್ನಡಿಗರಿಗೆ ಅನ್ಯಾಯ ಮಾಡುವುದು.

೫) ಕನ್ನಡ ಸಂಘಟನೆಗಳ ವಿರುದ್ಧ ಪರಭಾಷಿಕರನ್ನು ಸಂಘಟಿಸಿ ಅವರ ಬೆಂಬಲಕ್ಕೆ ನಿಂತಿರುವುದು.

ದೇಶ ಮೊದಲು, ಭಾಷೆ ಅಂತ ಹೇಳುವುದು ರಾಷ್ಟೀಯತೆ ವಿರುದ್ಧ ಅಂತ ನಂಬಿರುವ ಪಕ್ಷದಿಂದ
ಮುಂದಿನ ದಿನಗಳಲ್ಲಿ ಇನ್ನೇನು ಕನ್ನಡಿಗ ನೋಡಬೇಕೋ ನಾ ಕಾಣೆ.ಅದಕ್ಕಿಂತ ಭಯ ಆಗುವುದು ನಮ್ಮ ಕನ್ನಡ ಚಿಂತಕರ, ಪತ್ರಕರ್ತರ,ಅವತಾರ ಪುರುಷಗಳ ಸಮರ್ಥನೆ.

No comments: