Wednesday, April 26, 2006
ಹೋರಾಟವೇ ಹೀಗೆ .....
ಕನ್ನಡಕ್ಕೆ ಹೋರಾಡಿದ ಅನೇಕ ಮಹನೀಯರು ನಮ್ಮ ಮುಂದೆ ಹಾಸು ಹೊಗಿದ್ದಾರೆ, ಆದರೆ ನಮ್ಮ ಕಣ್ಣಿಗೆ ಬೀಳುವುದುಕೇವಲ ಒಂದೆರೆಡು ನವೆಂಬರ್ ನಾಯಕರು ಆಷ್ಟೆ. ಆದರೆ ತೆರೆ-ಮರೆಯಲ್ಲಿ ಹೋರಾಟದಲ್ಲಿ ಪಾಲ್ಗೊಂಡು ಸೆರವಾಸ ಅನುಭವಿಸಿ,ಚಿತ್ರ-ವಿಚಿತ್ರ ಹಿಂಸೆಗಳನ್ನು ಅನುಭವಿಸಿ ಇವತ್ತಿಗೂ ಮತ್ತೆ ಹೋರಾಟಕ್ಕೆ ಅಣಿ ಆಗುವ ಹೋರಾಟಗಾರರಿಂದ ಇಂದು ಕನ್ನಡ ಉಳಿದಿದೆ. ನಮಗೆ ನಮ್ಮ ಕನ್ನಡ ಹೋರಾಟಗಳ ಬಗ್ಗೆ ಅರಿವಿಲ್ಲ, ಎಲ್ಲಾ ಕನ್ನಡ ಹೋರಾಟಗಾರರನ್ನು ನೋಡುವ ರೀತಿ ಇನ್ನು ಬದಲಾಗಿಲ್ಲ, ಇನ್ನು ನಮ್ಮ ಜನರ ದೃಷ್ಟಿಯಲ್ಲಿ ರೌಡಿಗಳು, ಗೂಂಡಾಗಳು ಅನ್ನುವ ಛಾಪು ನಿಂತಿದೆ.
ಇದಕ್ಕೆ ನಾನು ಹೊರತಲ್ಲ ಬಿಡಿ. ಇಲ್ಲಿಯವರೆಗೂ ಕನ್ನಡಿಗರು ಪಟ್ಟ ಕಷ್ಟ, ಇಟ್ಟ ಹೆಜ್ಜೆಯ ಅರಿವಿಲ್ಲದೆ ನಾವು ಒಂದು ತೀರ್ಮಾನಕ್ಕೆ ಬಂದಿರುತ್ತೆವೆ. ಯಾವುದೊ ದೇಶದ ಚರಿತ್ರೆಯನ್ನು ಕಲಿಸುವ ಈ ಶಿಕ್ಷಣ ವ್ಯವಸ್ಥೆ ನಮ್ಮ ರಾಜ್ಯ್ಸದ ಹೊರಾಟ-ಏಕೀಕರಣದ ಬಗ್ಗೆ ಚಕಾರ ಎತ್ತದಿರುವುದು ದುಃಖದ ಸಂಗತಿ. ಈ ವಿಷಯಗಳು ನಮಗೆ ತಿಳಿಯದೆ ನಮಗೆ ಹೋರಾಟದ ಬಗ್ಗೆ ಅರಿವು ಮೂಡುವದಿಲ್ಲ, ಹೋರಾಟಗಾರರ ಬಗ್ಗೆ ಗೌರವ ಬರುವದಿಲ್ಲ. ಹಿಂದೆ ಹೋರಾಡಿದ ಮಾ.ರಾಮಮುರ್ತಿ ಇತರರ ಕುಟುಂಬಗಳು ಇಂದಿಗೂ ಕಷ್ಟದಲ್ಲಿ ಇವೆ. ಮನೆಯಲ್ಲಿ ಮರ್ಯಾದೆ ಇರದೆ ಇವರು ಪಡುವ ಪಾಡು ನಿಜಕ್ಕೂ ಶೋಚನೀಯ. ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ಅಗುವುದು ಇಂದು ಕನ್ನಡಕ್ಕೆ ಕೈ ಎತ್ತು ನಿನ್ನ ಕೈಗೆ ಕೊಳ ಬೀಳುವುದುಅನ್ನುವ ಸ್ಥಿತಿಗೆ ಬಂದಿದೆ. ಹೀಗೆ ಸಾಲು ಸಾಲು ತೊಂದರೆ ಅನುಭವಿಸುವ ದಿನದ ಕೊನೆಗೆ ನನಗೆ ಎನು ಸಿಕ್ಕಿತು ಅಂತ ಅವಲೋಕನ ಮಾಡಿಕೊಂಡರೆ ಕಾಣುವುದು ಸುಳ್ಳು ಮುಕದ್ದಮೆ,ಜೈಲುವಾಸ ಅಷ್ತ್ಟೆನನ್ನ ಅನುಭವದಲ್ಲಿ ಕಂಡ ಹೋರಾಟಗಾರ ಬವಣೆ ಬಗ್ಗೆ ಬರೆದಿರುವ ಕವನವಿದು.
ಹೋರಾಟವೇ ಹೀಗೆ ...
ಬದುಕಿನ ಕತ್ತಲೆ ಓಡಿಸಿ,
ನ್ಯಾಯದ ಜ್ಯೋತಿಯ ಬೆಳಗಿಸಿ,
ಅನುಭವಿಸುವರು ಸೆರೆವಾಸ.
ಇವರ ಮನೆಯಲ್ಲಿ ಹೆಂಡತಿ ಮಕ್ಕಳಿಗೆ ಉಪವಾಸ೧
ಹೋರಾಟವೇ ಹೀಗೆ ...
ಮನೆ ಮಕ್ಕಳನ್ನು ಮರೆತು,
ದುಃಖ ದುಮ್ಮಾನದಲ್ಲಿ ಬೆರೆತು,
ತುಳಿಯುವರು ಕಲ್ಲುಮುಳ್ಳಿನ ಹಾದಿ.
ಎಲ್ಲಾ ಹೋರಾಟಗಳಿಗೂ ತ್ಯಾಗವೇ ಬುನಾದಿ೨
ಹೋರಾಟವೇ ಹೀಗೆ ...
ತಣ್ಣನೆ ಕೋಣೆಯಲ್ಲಿ ಕುಳಿತು,
ಬುದ್ಧಿಜೀವಿಗಳು ಆಡುವರು ಮಾತು,
ತೋಡಿ ಚುಚ್ಚು ಮಾತಿನ ಗುಂಡಿ,
ತಪ್ಪಿಸುವರು ಹೋರಾಟದ ಬಂಡಿ೩
ಹೋರಾಟವೇ ಹೀಗೆ ...
ಲಾಠಿ ಎಟುಗಳ ಲೆಕ್ಕಿಸದೆ,
ಹರಿಯುವ ನೆತ್ತರಿಗೆ ದೃತಿಗೆಡದೆ,
ಯಾರೊದೊ ಹಿತಕ್ಕೆ ಸವಿಸುತ್ತ ಬಾಳು,
ಅನುಭವಿಸುವರು ದಿನವೂ ಗೋಳು ೪
ಹೋರಾಟವೇ ಹೀಗೆ ...
ಇವರ ನೋವ ಕೇಳುವರಿಲ್ಲ,
ಇವರ ಬೆವರಾ ಒರೆಸುವರಿಲ್ಲ,
ಆದರೂ ಕಟ್ಟುವರು ಕನಸಿನ ಅರಮನೆ,
ಇವರ ನೊವುಗಳಿಗೆ ಇಲ್ಲಾ ಕೊನೆ೫
ಭಾರತ,ಹಿಂದಿ ಮತ್ತು ನಾವು.
"ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ" ಅಂತ ನಮ್ಮ ರಾಷ್ಟ್ರಕವಿ ಕುವೆಂಪು ಕವಿವಾಣಿ ಹೇಳಿರುವಂತೆ, ಕರ್ನಾಟಕ ಭಾರತ ಒಂದು ಅಂಗ ಎಂದು ಪ್ರತಿಪಾದಿಸುವ ರಾಷ್ಟ್ರೈಕತೆಯನ್ನು ಸಾರುವ ಸಾಲುಗಳು. ಇದನ್ನು ನಾವು ನಮ್ಮ ಪ್ರಾರ್ಥಮಿಕ ಶಾಲೆಯಲ್ಲಿ ಬಾಯಿಪಾಠ ಮಾಡಿ ಅದರ ಆರ್ಥ ನಮ್ಮ ಮನದಲ್ಲಿ ಅಚ್ಚಾಗಿದೆ.
ಆದರೆ ನನಗೆ ಆಗಾಗ ಅನಿಸುತ್ತಿತ್ತು ಒಂದೇ ವಿಷಯ, ಭಾರತ ಕಲ್ಪನೆ ಯಾವಾಗ ಆಯಿತು, ಅದಕ್ಕೆ ಆ ಹೆಸರು ಬರಲು ಕಾರಣವೇನು?
ಈ ಪ್ರಶ್ನೆ ನಾನು ಹಿರಿಯರ ಮುಂದೆ ಇಲ್ಲಾ ಗುರುಗಳ ಮುಂದೆ ಇಟ್ಟಾಗ ನನಗೆ ಸಿಕ್ಕ ಉತ್ತರ " ಆ ಕಲ್ಪನೆ ಶತಮಾನಗಳಿಂದ
ಇದೆ, ಭರತನಿಂದ ಭಾರತ ಅಂತ ಹೆಸರು ಬಂದಿತು" ಅನ್ನುವ ಉತ್ತರ ಅನೇಕ ಕಡೆಗಳಿಂದ ಕೇಳಿಬಂದಿತು.
ಇದು ಎಷ್ಟರ ಮಟ್ಟಿಗೆ ಸರಿ ಅಂತ ಆತ್ಮಾವಲೋಕನ ಮಾಡಿದಾಗ ನಮಗೆ ಕಂಡು ಬರುವ ಕುತೂಹಲ ಅಂಶಗಳು ಕೆಲವು.
ಭರತನಿಂದ ಭಾರತವೇ ??
ಇದು ನನಗೆ ಅನೇಕ ಬಾರಿ ಕಾಡಿದ ಪ್ರಶ್ನೆ, ಈ ಒಂದು ದೇಶದ ಕಲ್ಪನೆಯನ್ನು ಭರತನು ನಮಗೆ ಕೊಟ್ಟಿದ್ದನೆ, ಕಾಲಕ್ರಮೇಣ ಅದು ಮರೆಯಾಯಿತೆ ಅಂತ ಪ್ರಶ್ನೆಗಳು ಉಧ್ಭವಿಸುತ್ತಲೆ ಇದೆ. ನಮ್ಮ ಇತಿಹಾಸದಲ್ಲಿ ನಮ್ಮನ್ನು ಆಳಿದ(!!!) ೩ ಜನ ಭರತರು ನಮ್ಮ ಕಣ್ಣಿಗೆ ಬೀಳುತ್ತಾರೆ.
೧) ರಾಮನ ತಮ್ಮ ಭರತ:-
ಇವನು ರಾಮ ವನವಾಸಕ್ಕೆ ಹೋದಾಗ, ರಾಜ್ಯಭಾರ ಮಾಡಿದ. ರಾಮನ ಪಾದುಕೆಯನ್ನು ಸಿಂಹಾಸನದ ಮೇಲೆ ಇಟ್ಟು ಆಡಳಿತ ನಡೆಸಿದ. ಇವನ ಆಳ್ವಿಕೆಯಲ್ಲಿ ಒಂದು ಹಿಡಿತ ಇರಲಿಲ್ಲ, ಅಯೋಧ್ಯೆ ಬಿಟ್ಟು ಇವನ ರಾಜ್ಯ ಮುಂದೆ ಹೋಗಲಿಲ್ಲ. ಅದ್ದರಿಂದ ಇವನು ಭೌಗೋಳಿಕ ಭಾರತವನ್ನು ಆಳಿದ ಅನ್ನುವದರಲ್ಲಿ ಅರ್ಥವೇ ಇಲ್ಲ.
೨) ದುಶ್ಯಂತೆ-ಶಕುಂತಲೆಯ ಮಗ ಭರತ:-
ಇವನು ಅಷ್ಟೆ, ಭೌಗೋಳಿಕ ಭಾರತವನ್ನು ಆಳಿದ ಉದಾಹರಣೆ ಎಲ್ಲಿಯೂ ಸಿಗುವದಿಲ್ಲ,
ಅದ್ದರಿಂದ ಇವನು ಭೌಗೋಳಿಕ ಭಾರತವನ್ನು ಆಳಿದ ಅನ್ನುವದರಲ್ಲಿ ಅರ್ಥವೇ ಇಲ್ಲ.
೩) ಬಾಹುಬಲಿ ಸಹೋದರ ಭರತ:- ಇವನಿಗೆ ಇವನ ತಂದೆ ಅಯೊಧ್ಯೆ ಕೊಟ್ಟರು, ಇವನು ಚಕ್ರವರ್ತಿ ಆಗಬೇಕೆಂಬ ಇಚ್ಚೆಯಲ್ಲಿ ಇವನ ತಮ್ಮ ಬಾಹುಬಲಿ ಜೊತೆ ಯುದ್ದ ಮಾಡಿ ಸೋತ. ಅದ್ದರಿಂದ ಇವನು ಭೌಗೋಳಿಕ ಭಾರತವನ್ನು ಆಳಿದ ಅನ್ನುವದರಲ್ಲಿ ಅರ್ಥವೇ ಇಲ್ಲ.
ಹಾಗಿದ್ದರೆ ನಮ್ಮನ್ನು ಒಬ್ಬರು ಆಳಿಲ್ಲ ಅಂತ ಸ್ವಪ್ಟವಾಗುತ್ತದೆ, ಇದನ್ನು ಪ್ರತಿಪಾದಿಸುವದಕ್ಕೆ ಹಿಂದೆ 56 ರಾಜ್ಯಗಳು(ಅಂಗ,ವಂಗ,ಕಳಿಂಗ,ಕಾಂಭೊಜ ..ಇತ್ಯಾದಿ) ಇದ್ದವು, ಪ್ರತಿ ರಾಜ್ಯಗಳಲ್ಲೂ ಅದರದೇ ಸಂಸ್ಕೃತಿ,ಭಾಷೆ,ಪದ್ಧತಿಗಳು ಇದ್ದವು.
ಅದೇ ನಿಟ್ಟಿನಲ್ಲಿ ಇಂದು ೨೮ ರಾಜ್ಯಗಳಾಗಿ ಇವೆ. ಅಂದರೆ ಒಂದು ದೇಶ,ಒಂದು ಭಾಷೆ, ಒಂದು ಸಂಸ್ಕೃತಿಯನ್ನು ನಮ್ಮ ಸಂಯುಕ್ತ ರಾಜ್ಯಗಳ ಈ ಒಕ್ಕೂಟ ಎಂದು ಹೊಂದಿರಲಿಲ್ಲ ಎಂಬುದು ಸ್ವ್ಪಷ್ಟವಾಗುತ್ತದೆ.
ಹಾಗಿದ್ದರೆ ನಾವು ಎಕೀಕರಣಗೊಳ್ಳಲು ಕಾರಣವೇನು??
ಉತ್ತರ ಬಹಳ ಸುಲಭ, ನಮ್ಮನ್ನು ಆಳಿದ ಬ್ರಿಟಿಷರಿಗೆ ಆ ಕೀರ್ತಿ ಹೋಗುತ್ತದೆ. ನನ್ನ ಶತ್ರುವಿನ ಶತ್ರು ನನ್ನ ಮಿತ್ರ ಅನ್ನುವ ಹಾಗೆ ಈ ೧೦೦+ ರಾಜ್ಯಗಳ ದೊರೆಗಳಿಗೂ ಮತ್ತು ಅಲ್ಲಿನ ಪ್ರಜೆಗಳಿಗೂ ಬ್ರಿಟಿಷರೂ ಸಾಮನ್ಯ ಶತ್ರು ಆಗಿದ್ದರೂ. ಒಬ್ಬರೆ ಎದುರಿಸಲು ಆಗದ ಕಾರಣ ನಮ್ಮಲ್ಲಿ ಒಂದು ಮೂಡುವ ಕಲ್ಪನೆ ಬಂದಿತು.ಅದು ಕೂಡ ಬ್ರಿಟಿಷರನ್ನು ಒಡಿಸಿ ಸ್ವಾತಂತ್ರ್ಯವನ್ನು ಪಡೆಯಲು ಮಾತ್ರ. ಒಂದು ಭಾಷೆ,ಒಂದು ಸಂಸ್ಕೃತಿಯ ಕಲ್ಪನೆ ಕೂಡ ಇರಲಿಲ್ಲ.
ನಮ್ಮನ್ನು ಬ್ರಿಟಿಷರು ಆಳದೆ ಇದ್ದಿದ್ದರೆ ಭಾರತ ಇಂದು ಯುರೋಪ್ ತರ ಒಂದು ಖಂಡವಾಗಿ ಇರುತ್ತಿತ್ತು.
ಸಂವಿಧಾನ ಹೇಳುವದು ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ನಮ್ಮ ದೇಶವನ್ನು ಚೀನಾ,ಜಪಾನ್ ಜೊತೆ ಹೊಲಿಸಿಕೊಂಡು ಒಂದು ಭಾಷೆ,ಒಂದು ಸಂಸ್ಕುತಿಯನ್ನು ಹೇರುವುದು ನಿಜಕ್ಕೂ ಅಪರಾಧ. ಇದನ್ನು ಯುರೋಪ್ ಜೊತೆ ಹೊಲಿಸುವುದು ನಿಜವಾದ ಮಾರ್ಗ. ಅಲ್ಲಿ ಕೂಡ ೧೦೦km ವ್ಪಾಪ್ತಿಯಲ್ಲಿ ಬೇರೆ ದೇಶ ಸಿಗುತ್ತದೆ, ಅಲ್ಲಿ ಬೇರೆ ಭಾಷೆ, ಬೇರೆ ಸಂಸ್ಕುತಿ ಕಾಣಬರುತ್ತದೆ.
ಕೇವಲ ಹಿಂದಿ ನಮ್ಮ ರಾಷ್ತ್ರಭಾಷೆಯೇ ??
ಇಂದಿನ ಹಿಂದಿಯ ಮೂಲ ಹುಡುಕುತ್ತ ಹೊರಟರೆ ಮುಸ್ಲಿಂ ರಾಜರ ಕಾಲಕ್ಕೆ ತಲಪುತ್ತೆವೆ. ಅಂದು ಆಳಿದ ಪರ್ಸಿಯನ್ ದೊರೆಗಳು ಆಡುತಿದ್ದ ಭಾಷೆಯ ಹೆಸರು "ದಖನಿ"(ಅವರು ಆಳಿದ್ದ ದಖನ್ ಪ್ರಸ್ಥಭೂಮಿಯಿಂದ ಆ ಹೆಸರು ಬಂದಿರಬಹುದು). ಇದು ಪರ್ಸಿಯನ್ ಮತ್ತು ಅರೇಬಿಕ್ ಮಿಶ್ರಣ. ರಾಜರು ಆ ಭಾಷೆ ಬಳಸಿದರೆ ಅವರ ಪ್ರಜೆಗಳು ರಾಜರ ಜೊತೆ ಮಾತಾಡಲು ಒಂದು ಭಾಷೆ ಹುಟ್ಟಿತು ಆದೇ ಹಿಂದ್ವಿ. ಅಂದಿನ ಹಿಂದ್ವಿಯೇ ಇಂದಿನ ಹಿಂದಿ, ಮತ್ತು ಅಂದಿನ ದಖನಿಯೇ ಇಂದಿನ ಉರ್ದು.
ಉತ್ತರ ಭಾರತದ ಬುದ್ದಿವಂತ ರಾಜಕರಣೀಗಳು ಅಲ್ಲಿ ಇದ್ದ ಅನೇಕ ಭಾಷೆಗಳನ್ನು ಹಿಂದಿ ಪ್ರಭೇದಕ್ಕೆ ಸೇರಿಸಿದರು, ಅಲ್ಲಿಗೆ 13 ವಿವಿಧ ಭಾಷೆಗಳು(ಮೈತಿಲಿ,ಡೊಗ್ರಿ,ರಾಜಸ್ಥಾನಿ,ಕ್ರಿಬೊಲಿ,ಬ್ರಜ್,ಪಂಜಾಬಿ) ಹಿಂದಿಯೆಂದೆ ಅನಿಸಿಕೊಂಡವು ಮತ್ತು ಭಾರತ ೪೬% ಜನ ಹಿಂದಿ ಬಲ್ಲವರು ಅಂತ ಆಗಿನ ಕೇಂದ್ರ ಸರ್ಕಾರ ಹಕ್ಕು ಸ್ಥಾಪಿಸಿತು. ಮತ್ತು ಅದಕ್ಕೆ "ರಾಜಭಾಷ(official language)" ಸ್ಥಾನಮಾನ ಸಿಕ್ಕಿತು. ಅಂದರೆ ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರಗಳು ಸಂಪರ್ಕ ಮತ್ತು ವ್ಯವಹಾರ ಮಾಡಲು ಹಿಂದಿ ಅಥಾವ ಆಂಗ್ಲ ಭಾಷೆಯನ್ನು ಬಳಿಸಬಹುದು. ಈ ನಿಟ್ಟಿನಲ್ಲಿ ಹಿಂದಿಯನ್ನು ಉತ್ತರ ಭಾರತದ ರಾಜ್ಯಗಳು ಆರಿಸಿಕೊಂಡವು, ಆಂಗ್ಲವನ್ನು ದಕ್ಷಿಣ ಭಾರತ ರಾಜ್ಯಗಳು ಆರಿಸಿದವು. ಇದಕ್ಕೆ ಪ್ರತಿಯಾಗಿ "ಹಿಂದಿಗೆ ವಿಶೇಷ ಸ್ಥಾನಮಾನ ಕೊಟ್ಟು ದಕ್ಷಿಣ ಭಾರತ ರಾಜ್ಯಗಳಲ್ಲಿ ಹಿಂದಿ ಹೇರಲು ಕೇಂದ್ರ ಸರ್ಕಾರ ಶಿಕ್ಷಣದಲ್ಲಿ ಹಿಂದಿ ಕಡ್ಡಾಯ ಮಾಡಿತು ಜೊತೆಗೆ ಹಿಂದಿ ಪ್ರಚಾರ ಸಭಾ ನಡೆಸಿ, ಜನರನ್ನು ತನ್ನತ್ತ ಅಕರ್ಷಿಸಿತು.
ಕನ್ನಡಿಗರೂ ಮತ್ತು ಹಿಂದಿ.
ಕನ್ನದಿಗರೂ ಹಿಂದಿಯ ಬಗ್ಗೆ ವಿಶೇಷ ಅಭಿಮಾನ ಕೊಟ್ಟಿದ್ದಾರೆ, ಇದಕ್ಕೆ ನನಗೆ ಅನಿಸುವ ಕಾರಣಗಳು ೨.
೧) ತಮಿಳರ ಮೇಲಿನ ದ್ವೇಷ :- ಶತಮಾನಗಳಿಂದಲೂ ನಮಗೂ ಮತ್ತು ತಮಿಳರಿಗೆ ದಕ್ಷಿಣ ಭಾರತ ಮೇಲೆ ಪ್ರಾಭಲ್ಯ ಸಾಧಿಸಲು ಅನೇಕ ಯುದ್ದ ನಡೆದವು. ಪಲ್ಲವರ ವಿರುದ್ದ ದಂಗೆ ಎದ್ದು ಕದಂಬ ವಂಶ ಕಟ್ಟಿದ ವಿಪ್ರ ಮಯೂರ ವರ್ಮ ನಮ್ಮ ಅಚ್ಚು ಮೆಚ್ಚಿನ ರಾಜ ಅಲ್ಲವೇ?. ಹೀಗೆ ನಮ್ಮಲ್ಲಿ ನಮ್ಮ ಜೀನ್‍ಗಳಲ್ಲಿ ತಮಿಳರ ಬಗ್ಗೆ ಒಂದು ರೀತಿಯ ಜಿದ್ದು ಬಂದು ಬಿಟ್ಟಿತ್ತು. ಸ್ವಾತಂತ್ರ್ಯದ ನಂತರ ಬೆಂಗಳೂರು ತಮಿಳರ ಆಳ್ವಿಕೆಯಲ್ಲಿ ಇತ್ತು. ಕನ್ನಡಿಗ ಮತ್ತು ತಮಿಳರ ನಡುವೆ ವರ್ಗ ಸಂಘರ್ಷ ನಡೆಯುತ್ತಲೆ ಇತ್ತು. ಆಗಲೇ ಹಿಂದಿ ಕಾವು ಶುರುವಾಗಿದ್ದು, ಹಿಂದಿ ಹೇರಿಕೆಯನ್ನು ತಮಿಳರು ವಿರೋಧಿಸಿದರು, ನಾವು ಅವರು ಮಾಡಿದ್ದನು ವಿರೋಧಿಸುವ ಬರದಲ್ಲಿ ಹಿಂದಿಯನ್ನು ತಲೆ ಮೇಲೆ ಸವಾರಿ ಮಾಡಿದೆವು. ಅವರು ಯಾಕೆ ವಿರೋಧಿಸಿದರು ಅಂತ ಆರ್ಥ ಮಾಡಿಕೊಳ್ಳದೇ ಒಂದು ದೊಡ್ಡ ತಪ್ಪು ಎಸೆಗಿದೆವು.
ಒಂದು ರೀತಿಯಲ್ಲಿ ತಮಿಳರನ್ನು ಸೋಲಿಸುವ ಬರದಲ್ಲಿ ಇನ್ನೊಂದು ಮಾರಿಯನ್ನು ಮೈ ಮೇಲೆ ಹಾಕಿಕೊಂಡೆವು.
೨) ಗಾಂಧಿ ಪ್ರಭಾವ :- ಹಿಂದೂಸ್ಥಾನಿಯ ಭಾಷೆ ಹಿಂದಿಯಾಗಿರಬೇಕು, ಅದನ್ನು ಎಲ್ಲಾ ಭಾರತೀಯರು ಕಲಿಯಬೇಕು ಅಂತ ಫರ್ಮಾನು ಕೊಟ್ಟಾಗ, ಅದನ್ನೆ ಆಶೀರ್ವಚನ ಎಂದು ಭಾವಿಸಿ ಹಿಂದಿ ಕಲಿಯುವ ಹುಚ್ಚಿಗೆ ಕೈ ಹಾಕಿದೆವು. ಹಿಂದಿ ಕಲಿಯದವನೂ ದೇಶಪ್ರೇಮಿಯಲ್ಲ ಅಂತ ತಮಿಳರ ಮೇಲೆ ಆಕ್ರಮಣ ಮಾಡಿ, ನಮ್ಮ ಘೋರಿಗೆ ನಾವೇ ಅಡಿಪಾಯ ಹಾಕಿಕೊಂಡೆವು. ನಮ್ಮ ಭಾಷೆಗಿಂತ ಹಿಂದಿ ಉತ್ತಮ ಅನ್ನುವ ಮರೀಚಿಕೆಗೆ ಬಂದು, ಹಿಂದಿಯ ಎಲ್ಲಾ ವಿಷಯಗಳು ಅಪ್ಯ ಅನಿಸಿ, ನಮ್ಮ ಭಾಷೆಯ ಎಲ್ಲಾ ವಿಷಯಗಳು ನಮಗೆ ಗೌಣವೆನಿಸಿ ನಮ್ಮ ಕೀಳೆರಿಮೆಯ ಗಿಡಕ್ಕೆ ದಿನೇ ದಿನೇ ನೀರು ಹಾಕುತ್ತ ಬಂದಿದ್ದೇವೆ. ಇಂದು ಅದು ಹೆಮ್ಮರವಾಗಿ ನಮ್ಮ ಭಾಷೆಯ ಮೇಲೆ ಸವಾರಿ ಮಾಡುತ್ತ ಇದ್ದರೂ ನಾವು ಮೂಕಪ್ರೇಕ್ಷಕರಾಗಿ ನೋಡುತ್ತ ಇದ್ದೆವೆ.