Saturday, May 24, 2008
ಒಗ್ಗಟ್ಟು ಮುರಿಯುವದರಲ್ಲಿ ಬೇಡ ಮಾಧ್ಯಮಗಳ ಒಣ ಪ್ರತಾಪ...
ನಮ್ಮ ಬೆಂಗಳೂರಿನಲ್ಲಿ ಅಂತರಾಷ್ಟೀಯ ವಿಮಾನ ನಿಲ್ದಾಣ ಶುರು ಆಗೋತ್ತೆ ಅಂತ ಬಹಳ ದಿನಗಳಿಂದ ಕೇಳ್ತಾ ಇದ್ದೇವು, ಆದರೆ ಅದು ಬರಿ ಮಾತಾಗದೇ ಇಂದು ನನಸಾಗಿದೆ. ಆದರೆ ಬಹಳ ದಿನಗಳಿಂದಲೂ ಕನ್ನಡಿಗರಿಗೆ ಇಟ್ಟಿದ್ದ ಬೇಡಿಕೆಗಳ ಬಗ್ಗೆ ಕನ್ನಡ ಪರ ಸಂಘಟನೆಗಳು ಹೋರಾಟ ಮಾಡ್ತಾನೆ ಇದ್ದವು, ನಮ್ಮ ರೈತರು ನಾಡಿನ ಎಳಿಗೆಗೆ ತಮ್ಮ ಭೂಮಿ,ಜೀವನವನ್ನು ತ್ಯಾಗ ಮಾಡಿದರು. ಆ ಜನರನ್ನು ಅಲ್ಲಿ ಒಕ್ಕುಲೆಬ್ಬಿಸಿ, ಕೈಗೆ ಸ್ವಲ್ಪ ದುಡ್ಡು ಕೊಟ್ಟು ರೈಟ್ ಹೇಳಿಸಿದರು. ಆದರೆ ಕೇವಲ ಒಕ್ಕಲುತ ಗೊತ್ತಿದ್ದ ಜನರು ಭೂಮಿ ಇಲ್ಲದೆ ನಿಜಕ್ಕೂ ಬೀದಿಗೆ ಬಿದ್ದರು. ಇವರ ನೆರವಿಗೆ ಬಂದಿದ್ದು, ಯಾವ ಪತ್ರಿಕೆಗಳು ಅಲ್ಲ, ಇಲ್ಲಾ ಐ.ಟಿ- ಬಿಟಿ ಝಾರಗಳು ಅಲ್ಲ. ಮತ್ತದೇ ಕನ್ನಡ ಸಂಘ್ಹಟನೆಗಳು. ಪರಿಪರಿಯಾಗಿ ಬಿಐಎಲ್ ಅಧಿಕಾರಿಗಳಿಗೆ ಈ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು, ತಮ್ಮ ಹಕ್ಕೋತಾಯ ಮಂಡಿಸಿದರು, ಅದರಲ್ಲಿ ಪ್ರಮುಖವಾಗಿ ಕನ್ನಡಿಗರಿಗೆ ಉದ್ಯೋಗ , ಬರುವ ಪಯಣಿಗರಿಗೆ ಕನ್ನಡ ಸಂಸ್ಕ್ರುತಿಯ ಪರಿಚಯ ಮಾಡಿಕೊಡುವ, ಕನ್ನಡಕ್ಕೆ ಎಲ್ಲದರಲ್ಲೂ ಮೊದಲ ಆದ್ಯತೆ ಕೊಡಬೇಕು, ಜೊತೆಗೆ ಇದಕ್ಕೆ ಕನ್ನಡಿಗರ ಹೆಸರು ಇಡಬೇಕು ಎನ್ನುವುದು ನ್ಯಾಯ ಸಮ್ಮತವಾಗಿದೆ ಮತ್ತು ಪ್ರತಿಯೊಂದು ಜಗತ್ತಿನಲ್ಲಿ ಸರ್ವವ್ಯಾಪಿ ಆಗಿರುವಿದೇ.
ಆದರೆ ನಮ್ಮ ಮಾಧ್ಯಮಗಳಿಗೆ ಈ ಸುದ್ದಿ ಬೇಡ, ಅವರಿಗೆ ಬೇಕಾಗುವ ಸುದ್ದಿಯನ್ನು ಹೆಕ್ಕಿ ಹಾಕುವ ಜಾಣ್ಮೆ ಇದೆ, ಕನ್ನಡ ಒಗ್ಗಟ್ಟನ್ನು ಮುರಿಯುವ ಸಲುವಾಗಿ ಮುಖ್ಯ ವಿಷಯಗಳನ್ನು ತರದೆ, ಬೇಡದ ವಿಷಯವನ್ನು ಎತ್ತಿ ಅದಕ್ಕೆ ಜಾತಿ ಸ್ವರೂಪ ಕೊಟ್ಟು, ಜೊತೆಗೆ ಬೇರೆ ಜಾತಿಯವರನ್ನು ಪ್ರಚೋದಿಸಿ ಹೋರಾಟವನ್ನು ಕೊಲ್ಲಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ವಿಪರ್ಯಾಸ.
ಅಷ್ಟಕ್ಕೂ ಕೆಂಪೇಗೌಡರ ಹೆಸರನ್ನು ಇಡಬೇಕು ಎನ್ನುವುದು ತಪ್ಪೇ ?, ಹೆಸರು ಇಡಬೇಕು ಎಂಬ ಈ ಬೇಡಿಕೆ ಬರದೆ ಇದ್ದಿದ್ದರೆ ಸುಮ್ಮನೆ ಇದ್ದು, ಗಾಂಧಿ ಹೆಸರೋ, ಇಲ್ಲಾ ನೆಹರೂ ಹೆಸರೋ ಇಲ್ಲಾ ಟ್ಯಾಗೊರ್ ಹೆಸರನ್ನು ಇಟ್ಟು ಬಳಸಿಕೊಳ್ಳಿ ಅಂತ ಹೇಳಿದ್ದರೆ ಶಿರಾಸ ಅಂತ ಅದನ್ನು ಪಾಲಿಸುತ್ತಿದ್ದರು, ನಮ್ಮ ಮಾಧ್ಯಮಗಳು ಯಾಕೆ ಪಾಲಿಸಬೇಕು ಎಂಬುದರ ಬಗ್ಗೆ ಲೇಖನ ಬರೆಸುತ್ತಿದ್ದವೂ.
ಅದೇ ಬೆಂಗಳೂರಿನ ನಿರ್ಮಾತ, ಕೆರೆ ನಗರ ಅಭಿವೃದ್ದಿ ಬಗ್ಗೆ ಶತಮಾನಗಳ ಕೆಳಗೆ ಕನಸು ಕಂಡು, ಅದಕ್ಕೆ ಸ್ವರೂಪ ಕೊಟ್ಟವರ ಹೆಸರು ನಮಗೆ ಅಪಧ್ಯ. ಅದಕ್ಕೆ ಇವರ ಹೆಸರು ಯಾಕೆ ಇಡಬಾರದಿತ್ತು, ಇವರ ಹೆಸರು ಯಾಕೆ ಇಡಬೇಕು ಎಂದು ಪುಂಖಾನುಪುಂಖ ಲೇಖನ ಬರೆಯುತ್ತಾರೆ, ಈಗಾಗಲೇ ನಮ್ಮ ಬಸ್ ನಿಲ್ದಾಣಕ್ಕೆ ಹೆಸರು ಇಟ್ಟು ಬಳಸುತ್ತ ಇಲ್ಲವೇ ಅಂತ ಸಿಲ್ಲಿ ಲಾಜಿಕ್ ಹಾಕುತ್ತಾರೆ, ಒಮ್ಮೆ ಬಿಎಂಟಿಸಿಯಲ್ಲಿ ಓಡಾಡಿ ಬಂದೆ ಜನ ಎನು ಬಳಸುತ್ತ ಇದ್ದಾರೆ ಅಂತ ಅವರಿಗೆ ಗೊತ್ತಾಗುತ್ತದೆ. ಜನ ಇನ್ನೂ ಮೆಜಸ್ಟಿಕ್ ಅಂತಾನೇ ಬಳಸುತ್ತಾ ಇರುತ್ತಾರೆ ಕೂಡ. ಸರ್.ಎಂ.ವಿ ಹೆಸರನ್ನು ಕರ್ನಾಟಕದ ಯಾವುದೇ ಭಾಗದಲ್ಲಿ ಕೂಡ ಇಡಬಹುದು, ಯಾಕೆಂದರೆ ಸರ್.ಎಂ.ವಿ ಕಾಣಿಕೆ ಮೈಸೂರು ಪ್ರಾಂತ್ಯಕ್ಕೆ ತುಂಬಾ ಇದೆ. ಆದರೆ ಕೆಂಪೇಗೌಡ ಹೆಸರನ್ನು ಬೆಂಗಳೂರಿನಲ್ಲಿ ಬಿಟ್ಟು ಬೇರೆ ಕಡೆ ಇಟ್ಟರೆ ಅದನ್ನು ಯಾರು ಸ್ವಾಗತಿಸುವದಿಲ್ಲ, ಕಾರಣ ಬಹಳ ಸುಲಭ ಅಲ್ಲಿನ ಊರಿಗೂ ಮತ್ತು ಕೆಂಪೇಗೌಡ ಭಾವನಾತ್ಮಕ ಸಂಭಂದ ಇಲ್ಲವೇ ಇಲ್ಲ.
ಮುಂದುವರೆಯುತ್ತ, ಇವಾಗ ನಾವು ಒಂದು ವಿಷ್ಯಕ್ಕೆ ಜಾತಿಯನ್ನು ಬೆರಸದೆ ಕನ್ನಡ ಪರ ನಿಲುವು ತೆಗೆದುಕೊಂಡವರಿಗೆ ಬೆಂಬಲ ಕೊಡಬೇಕು, ನಾವು ಸುಮ್ಮನೆ ಇವರ ಹೆಸರು ಇಡಬಹುದಿತ್ತು ಅಂತ ವ್ಯಾಖ್ಯಾನ ಮಾಡುತ್ತ ಹೋರಾಟವನ್ನು ತಪ್ಪು ದಾರಿಗೆ ಎಳೆಯುವುದು ಬೇಡ. ಇಲ್ಲಿ ಬೇಕಾಗಿರುವುದು ಒಂದು ಪ್ರಬಲ ಕೂಗು, ಅದು ಇಲ್ಲದಿದ್ದರೆ ನಮ್ಮ ರಾಷ್ಟನಾಯಕರಗಳ ಹೆಸರನ್ನು ಇಡುತ್ತಾರೆ, ಕೆಂಪೇಗೌಡರ ಹೆಸರನ್ನು ವಿರೊಧಿಸುತ್ತಿರುವ ಕನ್ನಡಿಗರು ಖುಷಿ ಪಡುತ್ತಾರೆ. ತಮಗೆ ಸಿಗಲಿಲ್ಲ ಅಂದರೆ ಬೇರೆಯವರಿಗೂ ಸಿಗೋದು ಬೇಡ ಅನ್ನೊ ವಿಚಿತ್ರ ಮನೋಭಾವ.
ಒಗ್ಗಟ್ಟನ್ನು ತೋರಿಸಬೇಕಾದ ಸಮಯದಲ್ಲಿ ಕಾಲೆದುಕೊಂಡು ನಾವು ಅನೇಕ ಹೋರಾಟಗಳನ್ನು ಸೋತಿದ್ದೆವೆ, ಮಾಧ್ಯಮಗಳು ಸ್ವಲ್ಪ ವಿವೇಚನೆಯಿಂದ ಮುಖ್ಯ ವಿಷಯ ಅಂದರೆ ಉದ್ಯೋಗ ಮತ್ತು ಕನ್ನಡ ಸಂಸ್ಕೃತಿ ಬಗ್ಗೆ ಹೆಚ್ಚು ಲೇಖನಗಳನ್ನು ಬರೆದರೆ ಅವರ ಸಮಾಜಿಕ ಜವಾಬ್ದಾರಿಯನ್ನು ಮೆರೆಸಿದ ಹಾಗೆ ಆಗುತ್ತದೆ.
Labels: ಹೆಜ್ಜೆ
kempe gowda,
ಕನ್ನಡ ಹೋರಾಟ,
ಕೆಂಪೇಗೌಡ