
ಕೆಲ ತಿಂಗಳ ಹಿಂದೆ ನನ್ನ ಗೆಳೆಯ ಕರೆ ಮಾಡಿದಾಗ ಮೊದಲು ಹೇಳಿದ್ದು, ಇವತ್ತು ರೇಡಿಯೋ ಮಿರ್ಚಿ ಕೇಳಿದೆಯಾ ? , ಸಂಪೂರ್ಣ ಕನ್ನಡ ಹಾಕುತ್ತ ಇದ್ದಾರೆ ಅಂತ. ಇದು ಅವರ ಕನ್ನಡ ಅಭಿಮಾನವಂತು ಅಲ್ಲ, ಇದಕ್ಕೆ ಕಾರಣ ಹುಡುಕುತ್ತ ಹೋದರೆ ಸಿಗುವುದು ಕ.ರ.ವೇ ಹೋರಾಟದ ಫಲವೆಂದು. ನನ್ನ ಪುಣ್ಯಕ್ಕೆ ಯೂಟೂಬ್ ನಲ್ಲಿ ಇದರ ಒಂದು ತುಣುಕು ಸಿಕ್ಕಿತು. ಕನ್ನಡ ಹಾಡುಗಳನ್ನು ಹೆಚ್ಚು ಹಾಕಿದರೆ ಹೆಚ್ಚು ಮಾರುಕಟ್ಟೆ ಪಡೆಯಬಹುದು ಮತ್ತು ನಿಮ್ಮ ವಾಹಿನಿ ಉಳಿದವುಕ್ಕಿಂತ ವಿಭಿನ್ನವಾಗಿರುತ್ತದೆ ಎಂದು ಮನದಟ್ಟು ಮಾಡಿದರ ಪರಿಣಾಮವೇ ಇ ಬದಲಾವಣೆ.
ನೋಡಿ ಇವರು ಈಗ ಕನ್ನಡ ಹಾಡುಗಳನ್ನು ಹಾಕುತ್ತ ಇದ್ದೇವೆ ಎಂದು ಜಾಹೀರಾತು ಕೋಡುತ್ತ ಇದ್ದಾರೆ,ಅದ್ದರಿಂದ ನಂಬರ್ ಒಂದು ಆಗಿದ್ದಾರೆ.
( ಕೃಪೆ :- ಉದಯ ಟಿ.ವಿ ಮತ್ತು ಯೂಟುಬ್)