Thursday, March 22, 2007

ಬೇಡ ನಂಟಿಗೆ ಹೆಸರು ..ಯಾಕೆ ಸುಮ್ಮನೆ ..

ಮುಂಗಾರು ಮಳೆಯಲ್ಲ್ಲಿ ನೆನೆಯುವಾಗ ಎಲ್ಲೊ "ಅರುಳುತಿರು ಜೀವದ ಗೆಳೆಯ" ಹಾಡು ಹೆಚ್ಚು ಕೇಳಿರಲಿಲ್ಲ. ಮೊನ್ನೆ ಬೇರೆ ವಿಧಿಯಿಲ್ಲದೆ ಕೇಳುತ್ತಿದ್ದೆ, ಒಮ್ಮೆ ಕೇಳಿದ ಒಡನೆ ಅನಿಸಿದ್ದು, ತಥ್ ಇಂಥಾ ಒಳ್ಳಯ ಹಾಡನ್ನು ಮಿಸ ಮಾಡಿಕೊಂಡೆ ಅಂತ ನನ್ನನ್ನು ನಾನೇ ಬೈದುಕೊಂಡೆ. ಇ ಹಾಡು ಅಷ್ಟು ಪ್ರಸಿದ್ಧಿ ಪಡೆಯದಿದ್ದರೂ ನನ್ನ ಮನದಾಳವನ್ನು ಮುಟ್ಟಿತು.
ನಾನು ಅನೇಕ ಬಾರಿ ಅಂದು ಕೊಂಡಿದ್ದೆ, ಯಾಕೆ ನಾವು ಪ್ರತಿಯೊಂದು ಸಂಭಂದಕ್ಕೆ ಹೆಸರು ಕೊಡುತ್ತೆವೆ, ಒಂದು ಪರಿಧಿಯಲ್ಲಿ ಹಾಕಿ ಯಾಕೆ ತೂಗುತ್ತೆವೆ??. ನಂಟಿಗೆ ಹೆಸರು ಬೇಕೆ ಅಂತ ಮನದಾಳ ಮಾತುಗಳನ್ನು ಒಂದು ಕಾವ್ಯವಾಗಿ ಬರೆದರೆ ಇಷ್ಟು ಚೆನ್ನಾಗಿ ಯಾರು ಬರೆಯಲಾರರು ಅಂತ ಜಯಂತ್ ಕಾಯ್ಕಿಣಿ ಅವರು ತೋರಿಸಿಕೊಟ್ಟಿದ್ದಾರೆ.
ಚಿಕ್ಕ ಮಗುವಿಗೆ ಬೆಳೆದ ಹಾಗೆ ಇವನು x, ಇವನು y ಅಂತ ಹೇಳಿ ಒಂದು ಚೌಕಟ್ಟಿನಲ್ಲಿ ತೂಗುತ್ತವೆ. ಅದರಲ್ಲೂ ಬೆಳೆದ ಹೆಣ್ಣು ಮಕ್ಕಳಿಗೆ ವಯಸ್ಸಿನ ಹುಡುಗರೆಲ್ಲಾ ಅಣ್ಣ-ತಮ್ಮ ಅಂತ force ಮಾಡಿ ಒಂದು ಸೀಮಿತ ಪರಿಧಿಯಲ್ಲಿ ಸಂಭಂದಗಳನ್ನು
ಬಂಧಿಸುಡುತ್ತೆವೆ.

ಅನೇಕ ಬಾರಿ ಕಾಮವಿಲ್ಲದ ಪ್ರೀತಿ ಇರಲಾರದು ಎಂದು ನಾವು ಇಲ್ಲಿ ತನಕ ಹೇಳಿಕೊಂಡು ಬಂದಿದ್ದೇವೆ, ಯಾಕೆ ಅಂದರೆ ಅದಕ್ಕೆ ಒಂದು ಹೆಸರಿಲ್ಲ. ಹೆಸರಿಲ್ಲದ ಒಂದು ನಂಟು ನಮ್ಮ ಸಮಾಜದಲ್ಲಿ ಹಾದರಕ್ಕೆ ಸಮಾನ ಅಂತ ತಪ್ಪು ತಿಳುವಳಿಕೆ ಇದೆ.
ಗಂಡು-ಹೆಣ್ಣಿನ ಸಂಬಂಧಗಳು ಒಂದೇ ಪರಿಧಿಯಲ್ಲಿ ನೋಡುವ ನಮ್ಮ ಸಮಾಜದ ಸೀಮಿತ ಬೆಳವಣಿಗೆ ನಮ್ಮ ದೌರ್ಭಾಗ್ಯ.

ಹಿಂದಿನ ನೆನಪುಗಳನ್ನು ಮರಿಯಲು ಆಗುವದಿಲ್ಲ,ಅದು ಬೇಡವೆಂದರೂ ಮನಸ್ಸಿನ ಮೂಲೆಯಲ್ಲಿ ಬಾವುಲಿಯಾಗಿ ನೇತನಾಡುತ್ತ ಇರುತ್ತದೆ. ಸಂಧರ್ಭಕ್ಕೆ ಅನುಸಾರವಾಗಿ ಅದು ಹಾರಿ ಮನಸ್ಸನ್ನು ಹಿಡಿಯುತ್ತದೆ. ಇದನ್ನು ತುಂಬಾ ಚೆನ್ನಾಗಿ ಎ.ಎನ್.ಮೂರ್ತಿ ರಾಯರು ಚೆನ್ನಾಗಿ ಹೇಳಿದ್ದಾರೆ. ನಾವು ಒಬ್ಬರನ್ನು ಮರೆತುತ್ತೆವೆ ಅನ್ನುವುದೇ ನಮಗೆ ನಾವು ಮಾಡಿಕೊಳ್ಳುವ ದೊಡ್ಡ ಮೋಸ.
ಅಭಿಮಾನಕ್ಕಿಂತ ಅಪಮಾನವೇ ನಮಗೆ ಹೆಚ್ಚು ಜ್ಞಾಪಕದಲ್ಲಿ ಇರುತ್ತದೆ ಎಂದು ಹಿಂದೆ ರವಿ ಬೆಳೆಗರೆಯವರ ಒಂದು ಲೇಖನದಲ್ಲಿ ಓದಿದ ನೆನೆಪು. ಹೀಗೆ ಮರೆಯಲು ಆಗದ ಸಂಭಂದ ಅದರ ನೆನೆಪುಗಳಿಗೆ ಒಂದು ಹೆಸರು ಇರುವದಿಲ್ಲ ಮತ್ತು ಅದು ತಪ್ಪು ಎನ್ನುವ ಪ್ರಜ್ಞೆಯೇ ನಮ್ಮ ಸಮಾಜವನ್ನು ಕಾಡುತ್ತಿರುವುದು.

ಹಿಂದೆ ಲೈಲಾ-ಮಜನು ತರ ಪ್ರೀತಿಸಿದ್ದ ಪ್ರೇಮಿಗಳು ಬಹಳ ದಿನಗಳ ನಂತರ ಒಬ್ಬರನ್ನು ಸಂಧಿಸಿದರೆ ಕಣ್ಣು ಕೊಟ್ಟು ನೋಡದೆ
ತಪ್ಪಿಸಿಕೊಂಡು ಓಡಾಡುವ ಪ್ರಮೇಯ ಬರುವುದೇ ನಮ್ಮ ಜನರಲ್ಲಿ ಇರುವ ಒಂದು ತಪ್ಪು ತಿಳುವಳಿಕೆಯ ಪಾಪ ಪ್ರಜ್ಞೆಯಿಂದ.

ಮತ್ತೆ ಹಾಡಿಗೆ ಬರುತ್ತ, ಪ್ರೇಮ-ಪ್ರೀತಿ ಎನ್ನುವ ಹೆಸರುಗಳನ್ನು ಬಿಟ್ಟು,ನಂಟಿಗೆ ಒಂದು ಹೆಸರನ್ನು ಕೊಡುವುದು ಬಿಟ್ಟು ಹಾಗೆ ಇರೋಣ ಎನ್ನುವುದು ವಿವಿಧ ಉದಾಹರಣೆಗಳಿಂದ ಬಿಂಬಿತವಾಗುತ್ತದೆ. ಇದು ಬಹಳ ಸುಂದರವಾಗಿ ಮೂಡಿ ಬಂದಿರುವುದು ನಮ್ಮ ಭಾಗ್ಯವೇ ಸರಿ.


ಬಾಡದಿರು ಸ್ನ್ಹೇಹದ ಹೂವೇ ಪ್ರೇಮದ ಬಂಧನದಲ್ಲಿ
ಮನಸ್ಸಲ್ಲೇ ಇರಲಿ ಭಾವನೆ.
ಮಿಡಿಯುತರಲಿ ಮೌನವೇನೆ ..ಹೀಗೆ ಸುಮ್ಮನೆ.

ಬಾಳ ದಾರಿಯಲ್ಲಿ ಬೇರೆಯಾದರೂ ಚಂದಿರ ಬರುವುನು ನಮ್ಮ ಜೊತೆ
ಕಾಣುವೆನು ಅವನಲ್ಲಿ ನಿನ್ನನ್ನ ..

Tuesday, March 20, 2007

ಭಾಷಾಭಿವೃದ್ದಿ...ಒಂದು ಚಿಂತನೆ.-೨

ಗೆಳೆಯರೆ ಇದರ ಬಗ್ಗೆ ನಾನು ಹೆಚ್ಚು ಯೋಚನೆ ಮಾಡಿದ ಹಾಗೆ ಹೊಳೆದ ಇನ್ನೊಂದು ವಿಷಯವೆಂದರೆ ಇದು ಜಗತ್ತಿನ ಎಲ್ಲಾ ಕಡೆ ಕಂಡು ಬರುವ ಸಾಮನ್ಯ ಪ್ರಕ್ರಿಯೆ. ಮುಖ್ಯವಾಗಿ "ಹ-ಕಾರ" ಬದಲಾಗಿ "ಅ-ಕಾರ" ಬಳಸುವಿಕೆ ಮುಂದುವರೆದ US of A /UK ನಲ್ಲಿ ಕೂಡ ಕಂಡು ಬರುತ್ತದೆ. ಅಲ್ಲಿ ಕೂಡ ಹ-ಕಾರ ಬದಲಾಗಿ "ಅ-ಕಾರ" ಬಳಸುವುದನ್ನು ಕಾಣಬಹುದು.
Arri == Harry
Aaton = Hatton
Appy = Happy
Arriflex = Harryflex
ave= have..
ಹೀಗೆ ಸಾಲು ಸಾಲು ಪದ ಬಳಕೆಗಳನ್ನು ನೀವು ಕಾಣಬಹುದು. ಇದನ್ನು ಇನ್ನೊಂದು ಭಾಗದ ಜನ ಚೆನ್ನಾಗಿ ಆಡಿಕೊಂಡಿರುವುದು ಸರ್ವೆ ಸಾಮನ್ಯ. ಹಿಂದೆ ಬ್ರಿಟನ್‍ನಲ್ಲಿ ಇದನ್ನು ಆಡಿಕೊಂಡು ಒಂದು ಟಿ.ವಿ ಕಾರ್ಯಕ್ರಮ ಬರುತ್ತಿತ್ತು, ಅದರ ಹೆಸರೆ Some mothers do ave them. ಇದು ಒಂದು ಹಾಸ್ಯ ಕಾರ್ಯಕ್ರಮ,ಇದರಲ್ಲಿ ಭಾಷ ಬಳಕೆಯನ್ನು ಲೇವಡಿ ಮಾಡುವುದೇ ಹಾಸ್ಯವಾಗಿತ್ತು. ಅಷ್ಟು ಅಲ್ಲದೇ ಕೆಲವು ಸಲ ಕೆಣಕಲು ಬರೆಯುವ ಲೇಖನಗಳಲ್ಲಿ ಇದರ ಬಳಕೆ ಕಂಡು ಬರುತ್ತದೆ.
ಹಿಂದೆ ಒಂದು ಸಲ " Appy Arry" ಅಂತ ಒಂದು ಕಾಲಚೆಂಡು ಆಟಗಾರನ ಬಗ್ಗೆ ಅವನ ಕೆಟ್ಟ ಆಟ ಟೀಕಿಸಲು ಬಳಸಿದ್ದು ಹಳೆಯ ಸುದ್ದಿ. ಇದನ್ನು ಗಮನಿಸಿ ನೋಡಿದರೆ ನಮ್ಮ ಕನ್ನಡ ಲೇಖನಗಳಲ್ಲೂ "ಹೋರಾಟ" ಮತ್ತು "ಓರಾಟ" ಅಂತ ಲೇವಡಿ ಮಾಡುವುದು ಕಂಡು ಬರುತ್ತದೆ.

ಹಾಗಿದ್ದರೆ ಇದಕ್ಕೆ ಎನು ಕಾರಣ ??

ಜಗತ್ತಿನಲ್ಲಿ ಭಾಷ ಬಳಕೆ ಎರಡು ಪ್ರಭೇದಗಳಾಗಿ ಮಾರ್ಪಟ್ಟಿದೆ, ಕೆಳವರ್ಗ ಮತ್ತು
ಮೇಲ್ವರ್ಗ ಜನರ ಭಾಷೆ. ಮೇಲ್ವರ್ಗದವರಿಗೆ ತಾವು ಮಾತನಾಡಿದ್ದೆ ಸರಿ, ಬೇರೆ ಜನರು ತಪ್ಪು ಮಾಡುತ್ತ ಇದ್ದಾರೆ,ಅದನ್ನು ಆಡಿಕೊಳ್ಳುವುದು ಸಾಮನ್ಯವಾಗಿದೆ. ಇದನ್ನು ಹೆಚ್ಚಾಗಿ ಬ್ರಿಟನ್ ಜನರಲ್ಲಿ ಕಾಣಬಹುದು, ಅವರು ತಮ್ಮ ಭಾಷೆಯಲ್ಲಿ ಒಂದು ಪ್ರಭೇದವನ್ನು ಸಹಿಸರು, ಅವರ ಪ್ರಕಾರ ಪ್ರಭೇಧಗಳೆಲ್ಲಾ ಹಾದರದಿಂದ ಹುಟ್ಟಿದವು ಅಂತ ತಾತ್ಸರ. " NOON and MOON"
ಇದನು ನಾವು ನೂನ್ ಮತ್ತು ಮೂನ್ ಎಂದು ಉಚ್ಚರಿಸಿದರೆ, BBC ಇದನ್ನು ನ್ಯೂನ್ ಮತ್ತು ಮ್ಯುನ್ ಎಂದು ಉಚ್ಚರಿಸುತ್ತಾರೆ.

ಅದ್ದರಿಂದ ನಾವು ಅವರ ಗುಲಾಮಿತನವನ್ನು ಬಿಟ್ಟು "ಅ-ಕಾರ" ದಿಂದ ಬಳಸುವ ಬಯಲು ಸೀಮೆ ಜನರ ಪದಗಳನ್ನು
ಸ್ವಾಗತಿಸಬೇಕು.