Saturday, October 25, 2008

ದೀಪಾವಳಿ ಹಬ್ಬದ ಶುಭಾಶಯಗಳು.

"In the day
In the night
Say it right
Say it all
You either got it
Or you don't "

ಇದು ಒಂದು ನೆಲ್ಲಿ ಫರಟೆಡೊ ಹಾಡಿನ ಸಾಲು....ಇದಕ್ಕೆ ಒಂದು ಸಾಲು ಸೇರಿಸಬೇಕು but say right (ie DEEPAVALI not DIWALI.)

ಇದನ್ನು ಯಾಕಪ್ಪ ಬಳಸಿದೆ ಎಂದರೆ ನಮ್ಮ ಕನ್ನಡಿಗರು "ಹ್ಯಾಪಿ ದಿವಾಳಿ" ಸಂದೇಶ ಕಳಿಸುತ್ತ ಇದ್ದಾರೆ. ಇದನ್ನು ನೋಡಿ ನಗಬೇಕೊ ಇಲ್ಲ ಅಳಬೇಕೊ ಗೊತ್ತಿಲ್ಲ. ಕನ್ನಡದಲ್ಲಿ ದಿವಾಳಿ ಎಂದರೆ ಬೇರೆ ಅರ್ಥವೆ ಇದೆ, ಒಂದು ರೀತಿಯಲ್ಲಿ ಪಾಪರ್, ನಿರ್ಗತಿಕ ಅಂತ ಅರ್ಥ. ಅದು ಹಾರಕೈ ಆಗೊಲ್ಲ ಶಾಪ ಆಗೊತ್ತೆ ಎಂದು ಹಾಗೆ ಹೇಳುವವರು ಮನಗಾಣಲಿ...




ದೀಪಗಳ ಹಬ್ಬ ದೀಪಾವಳಿ ಇತ್ತಿಚಿನ ಸ್ಟಾಕ್ ಮಾರ್ಕೆಟ್ ಕುಸಿತದಿಂದ ದಿವಾಳಿ ಆಗಿರಬಹುದು ಎಂದು ಪಂಡಿತರ ಅಂಬೋಣ.

ಕನ್ನಡಿಗರಿಗೆ ಈ ಹಬ್ಬ ಪರಭಾಷ ವ್ಯಾಮೋಹ,ಕೀಳರಿಮೆ,ಸ್ವಾಭಿಮಾನದ ಕೊರತೆ ಎನ್ನುವ ಕತ್ತಲನ್ನು ಹೋಗಲಾಡಿಸಿ ಕನ್ನಡ ಜಾಗೃತಿ ತರುವ ಬೆಳಕನ್ನು ತರಲಿ.

ಗುಟಿಕಿನಲ್ಲಿ ಅಮೃತ...

ಅಲ್ಲಾ.. ಇಷ್ಟು ಪೋಸ್ಟನಲ್ಲಿ ಬಹಳ ಸೀರಿಯಸ್ ವಿಷಯಗಳೇ ಇವೆಯಲ್ವಾ, ನೀವು ನಗುವುದೇ ಇಲ್ವಾ ಅಥವಾ ಸದಾ ಸೀರಿಯಸ್ ಆಗಿರುತ್ತಿರಾ ಅಂತ ಕೆಲವರು ಪ್ರಶ್ನೆ ಕೇಳಿದ್ದರು... ಅಯ್ಯೊ ಅಪಾರ್ಥ ಮಾಡಿಕೊಳ್ಳಬೇಡಿ, ಯಾಕೆ ಈ ತರಹದ ಸಂದೇಹಗಳು ನಿಮಗೆ ಎಂದರೆ ಬ್ಲಾಗಿನಲ್ಲಿ ನಗಿಸುವ ಒಂದು ಲೇಖನ ಇಲ್ಲ ಅಂದರು. ಅದು ಸರಿ, ನಾನು ಕಾಮೆಡಿ ಮಾಡಲು ಬ್ಲಾಗ್ ತೆಗೆದಿಲ್ಲ, ಅದಕ್ಕೆ ಅಂತ ಬೇರೆ ಬ್ಲಾಗ್ ಇವೆ ಎಂದರೂ ಮನುಷ್ಯನಿಗೆ ಎಲ್ಲೊ ಸಂದೇಶ ಕೊಡಬೇಕಾದರೆ ಹಾಸ್ಯದ ಮೂಲಕ ಕೊಡಬೇಕು,ಇಲ್ಲಾ ಚಿಕ್ಕ ಕಥೆಗಳ ಮೂಲಕ ಕೊಡಬೇಕು ಎಂದು ಗುರು ಶ್ರೀ ಅಂತೋಣಿ ಡಿ ಮೆಲ್ಲೊ ಹೇಳಿದ್ದು ಜ್ಞಾಪಕ ಬಂತು. ಗುರುಗಳ ಪುಸ್ತಕಗಳನ್ನು ಓದುತ್ತಿದ್ದರೆ, ಚಿಕ್ಕ ಚಿಕ್ಕ ಕಥೆಗಳಲ್ಲಿ ಅಂದೆತಾ ಆಧ್ಯಾತ್ಮಿಕತೆ ಹೇಳಿದ್ದರು ಅಂತ ಆಶ್ಚರ್ಯ ಆಗುತ್ತದೆ.

ಮನುಷ್ಯನ ಅಳತೆಗೆ ಬಟ್ಟೆ ಇರಬೇಕೆ ವಿನಹ ಬಟ್ಟೆ ಅಳತೆಗೆ ಮನುಷ್ಯನನ್ನು ಕತ್ತರಿಸಬಾರದು ಇದು ಅವರು ಹೇಳುವ ಒಂದು ಮಾತು, ಈ ಮಾತಿನಲ್ಲೇ ಅನೇಕ ವಿಷಯಗಳು ಅಡಗಿವೆ. ಮುಂದೆ ಅದರ ಬಗ್ಗೆ ಬರೆಯುತ್ತೆನೆ.


ಒಂದು ಕಥೆ ಕೇಳೋಣ...

ಎನಾದರೂ ಆಗು, ಮೊದಲು ಮಾನವನಾಗು

ಒಮ್ಮೆ ತಮಿಳುನಾಡಿನಲ್ಲಿ ಒಬ್ಬ ವ್ಯಾಪಾರಕ್ಕೆಂದು ಹೋದವನು, ಸಮುದ್ರದಲ್ಲಿ ಬಂದ ಗಾಳಿಯಿಂದ ಶ್ರೀಲಂಕಾ ತಲುಪಿದ. ಅವನನ್ನು ಕಂಡ ಅಲ್ಲಿನ ರಾಜ ವಿಭಿಷಣ, ಅಯ್ಯೋ ಮಾನವ ರೂಪದಲ್ಲಿ ರಾಮ ಬಂದಿದ್ದಾನೆ ಅಂತ ಖುಶಿ ಪಟ್ಟು ತುಂಬಾ ಸತ್ಕಾರ ಮಾಡಿದರು. ಈ ಕಥೆಯನ್ನು ಒಮ್ಮೆ ಪರಮಹಂಸರು ಕೇಳಿದಾಗ ಅವರು ಹೇಳಿದ್ದು "ಅಬ್ಬಾ..ಎಂತಹ ಮಹತ್ ಯೋಚನೆ, ಒಂದು ಕಲ್ಲನ್ನು ಮನುಷ್ಯ ದೇವರು ಎಂದುಕೊಳ್ಳುವ ಹಾಗೆ ಆದರೆ, ಮನುಷ್ಯನಲ್ಲಿ ಎಲ್ಲಾ ಜೀವಭೂತದಲ್ಲಿ ದೇವರನ್ನು ಯಾಕೆ ಕಾಣಬಾರದು "??.

ಕನ್ನಡ ಎನ್ನುವುದು
ಕನ್ನಡ ಅನ್ನುವುದು ಒಂದು ರೀತಿಯ ಬಾಟಲಿ ಇದ್ದ ವೈನ್ ಹಾಗೆ, ಎಲ್ಲರೂ ಅದರ ಬಗ್ಗೆ ಮಾತನಾಡುತ್ತಾರೆ, ಅದರ ಲೇಬಲ್ ಓದುತ್ತಾರೆ, ಆದರೆ ಅದರ ಅಮೃತ ರುಚಿ ಉಂಡವರು ಬಹಳ ಕಡಿಮೆ.

ಇಸ್ತೊ ಸೆಟಲೈಟ್ ಸೆಂಟರ್ - ಕನ್ನಡ ಅವತರಿಣಿಕೆ ಅಂತಾಣ.

ಚಂದ್ರಯಾನ ಆದಮೇಲೆ ಇಸ್ರೊ ಅಂತರ್ಜಾಲ ತಾಣಕ್ಕೆ ಬೇಟಿಕೊಡುತ್ತ ಇದ್ದೆ, ಅದರ ಮುಖಪುಟದಲ್ಲಿ ಸೆಟಲೈಟ್ ಸೆಂಟರ್(isac) ಕನ್ನಡ ತಾಣವಿರುವದನ್ನು ಗಮನಕ್ಕೆ ತಂದಿದ್ದು ನನ್ನ ಗೆಳೆಯ.
ಕುತೂಹಲಕ್ಕೆ ಒಮ್ಮೆ ಕ್ಲಿಕ್ಕಿಸಿದೆ, ಮೊದಲ ಅನಿಸಿಕೆಯಲ್ಲಿ ಅನಿಸಿದ್ದು, ಇದು ಕಾಟಾಚಾರಕ್ಕೆ ಮಾಡಿದ್ದು ಅಲ್ಲ ಅಂತ. ೩ ಫ್ರೆಮನಲ್ಲಿ ವಿಷಯಗಳನ್ನು ಹಂಚಿದ್ದಾರೆ. ಎಡಫ್ರೆಮ್
ಮೆನು ತರ ಆದರೆ, ಮಧ್ಯೆ ಫ್ರೆಮ್ ವಿಷಯವನ್ನ್ನು ಕೊಡುತ್ತದೆ. ಬಲಫ್ರೆಮ್ ಸಬ್ ಮೆನುಕೊಡುತ್ತದೆ. ಇಲ್ಲಿ ತನಕ ಸದ್ದಿಲ್ಲದೆ ಮಾಡಿದ ಅನೇಕ ವಿಷಯಗಳನ್ನು ಒಂದೆಡೆ ಸೇರಿಸಿ,ಸಂಬದಿಸಿ,ಹೊಲೆದು ತಂದಿದ್ದಾರೆ. ನಮ್ಮ ದೇಶ ಕಳಿಸಿದ ಎಲ್ಲಾ ಉಪಗ್ರಹಗಳ ಬಗ್ಗೆ ಇಲ್ಲಿ ಮಾಹಿತಿ ಸಿಗುತ್ತದೆ.


ಅದರಲ್ಲಿ ಒಂದು ವಿಷಯ ನನ್ನ ಗಮನ ಸೆಳೆಯಿತು, ಅದೆನೆಂದರೆ ೨೦೦೩ ತಾಂತ್ರಿಕ ಕಮ್ಮಟದಲ್ಲಿ ಚಂದ್ರ, ಚಂದ್ರಯಾನ ಬಗ್ಗೆ ಆಯ್ಕೆ ಮಾಡಿರುವುದು ಖುಷಿಯಾಯಿತು.
ಮೊನ್ನೆ ಸಿಕ್ಕಿದ ಯಶಸ್ಸು ಕೇವಲ ರಾತ್ರೊರಾತ್ರಿ ಬಂದಿದ್ದು ಅಲ್ಲ. ಇದರ ಹಿಂದೆ ಸತತ ವರುಷಗಳ ಪರಿಶ್ರಮ ಇದೆ, ಸುಮಾರು ವರುಶಗಳ ಸಾಧನೆ ಇದೆ. ಅದಕ್ಕೆ
ಚಂದ್ರಯಾನ-೧ ಸರಿಯಾಗಿ ಕಕ್ಷೆಗೆ ಹೋಗಿದ್ದು. ಈ ಕಮ್ಮಟದಲ್ಲಿ ಮಂಡಿಸಿದ್ದ ಮಾಹಿತಿಗಳು ಬಹಳ ಚೆನ್ನಾಗಿವೆ, ಇದನ್ನು ನಮ್ಮ ಮಕ್ಕಳಿಗೆ ಸಿಗುವ ಹಾಗೆ ಮಾಡಬೇಕು.