Saturday, July 11, 2009
ಫಿವರಗೆ ಬಂತಪ್ಪಾ ಹಿಂದಿ ಜ್ವರ(H104)
ಎಲ್ಲಾ ಕಡೆ ಹಂದಿ ಜ್ವರ ಬಗ್ಗೆ ಮಾತು ಕೇಳುತ್ತ ಇರುತ್ತಿರಿ, ಸದಾ H1n1 ಅನ್ನೊ ಶಬ್ದ ಕೇಳಿರುತ್ತಿರಾ, ಈಗ ಅದೇ ರೀತಿ ಹೊಸ ರೋಗ ಬಂದಿದೆ ಬೆಂಗಳೂರಿನಲ್ಲಿ, ಇದು ಡೆಂಗೆ, ಚಿಕನಗುನ್ಯಾಗಿಂಗ ಭಯಂಕರ ಜ್ವರ. ಅದು ಯಾವುದಪ್ಪ ಅಂದ್ರೆ ಹಿಂದಿ ಜ್ವರ (H104) ಅಂತ.
plash back....
ಇತ್ತಿಚಿನ ದಿನಗಳಲ್ಲಿ ಅಂದರೆ ಸರಿ ಸುಮಾರು ೧ ವರುಷದಿಂದ ನಾನು ಮಿರ್ಚಿಗಿಂತ ಹೆಚ್ಚಾಗಿ ಫಿವರ್ ಬಳಿ ವಾಲಿದ್ದು ಅವರ ೧೦೪% ಕನ್ನಡ ಹಾಡುಗಳಿಗೆ ಮತ್ತು ಅವರ ಮನರಂಜನಾ ಆಟಗಳಿಗೆ.
ಮಿರ್ಚಿ ಅಲ್ಲಿ ಇರುವ ಹಾಗೆ rj ಬಹಳ ಪ್ರಸಿದ್ಧಿ ಪಡೆಯದಿದ್ದರೂ ಎನೂ ಒಂದು ಹೊಸತನವಿತ್ತು. ಆ ಕಾರಣಕ್ಕೆ ನೋಡಿ ಫಿವರ್ ಸ್ವಲ್ಪ ದಿನಗಳಲ್ಲೇ ಬೆಂಗಳೂರಿನಲ್ಲಿ ಮನೆಮಾತಯಿತು.
ಮಧ್ಯೆ ಮಧ್ಯೆ ಅದು ತನ್ನ ಸ್ವರೂಪ ಬದಲಾಯಿಸಿಕೊಂಡು, ಹೊಸ ಹೊಸ ಪ್ರಯೊಗಗಳನ್ನು ಮಾಡಿದ್ದು. ಪುಂಗ, ಒರಿಜಿನಲ್ ವೇಸ್ಟ ಪ್ರಾಡಕ್ಟ , ಅಟೋ ಗೋಪಿ , ಕತ್ರಿಗುಪ್ಪೆ ಕತ್ತರಿದಾಸರು
ಈ ಕಾರ್ಯಕ್ರಮಗಳು ಮಧ್ಯೆ ಮಧ್ಯೆ ಬಹಳ ಚೆನ್ನಾಗಿ ಮೂಡಿಬರುತ್ತಿದೆ ಇಂದಿಗೂ. ಆದರೆ ಯಾಕೋ ರಾಯರ ಕುದುರೆ ಕತ್ತೆ ಆಯಿತು ಅನ್ನೊ ಹಾಗೆ ಇದು ತಪ್ಪು ಹೆಜ್ಜೆ ಇಡುತ್ತ ಇದೆ.
ಆಆಆಆಅ .....ಒಂದು...
ಕಾರ್ಯಕ್ರಮಗಳ ಬದಲಾವಣೆಯ ಹೆಸರಲ್ಲಿ ಬೇರೆ ವಾಹಿನಿಗಳು ಮಾಡಿದ್ದನ್ನೆ ಇದು ಮಾಡಿದ್ದು. ಬರುಡೆ ಬ್ಲಾಸ್ಟ, ಕಿರಿಕ್ ಕಾಲಸೆಂಟರ್ ಇವುಗಳು ಕೇಳುಗರಿಗೆ ನಿಜಕ್ಕೂ ಕಿರಿಕಿರಿ ಉಂಟು ಮಾಡಿವೆ ಎಂದರೆ ತಪ್ಪಾಗಲಾರದು.
ಕೇಳುತ್ತ ಇದ್ದರೆ ಇದು ಹತ್ತರಲ್ಲಿ ಹನ್ನೋಂದು ಆಗುತ್ತ ಇದೆಯಾ ಅನಿಸುತ್ತದೆ. ವಿನಾಯಕ ಜೋಶಿ ಮಾಡಿದ್ದನ್ನು, ಅವಿನಾಶ್ ಮಾಡಿದ್ದನ್ನೆ ಇವರು ನಾಟಿ ನವೀನ್ ಕೈನಲ್ಲಿ ಮಾಡಿಸುತ್ತ ಇದ್ದಾರೆ.
ಪುಂಗನಲ್ಲಿ ಇಷ್ಟ ಆಗುವ ಅರ್ಜುನ್ ಮತ್ತು ರಾಜೇಶ್ ಇವಾಗ ಬಾಬಿ, ಮೊನಾ ಅಂದುಕೊಂಡು ಕೀಳು ಅಭ್ಜಿರುಚಿ ಜೋಕ್ ಮಾಡಿಕೊಂಡು ಯಾರನ್ನು ಮೆಚ್ಚಿಸಲು ಹೋಗಿದ್ದಾರೂ ಗೊತ್ತಿಲ್ಲ.
ಶಾಲು-ರಾಜೇಶ್ ಕಾಂಬಿನೇಶನ್ ಚೆನ್ನಾಗಿತ್ತು. ಅರ್ಜುನ್ ಶಾಲುನ replace ಮಾಡಿರುವುದು ಸರಿಯೇ ಆದರೆ ಕಾರ್ಯಕ್ರಮವನ್ನು ಸ್ವಲ್ಪ ಸರಿ ಪಡಿಸಬೇಕು.
ಸುಮೇಶ್ ಮತ್ತು ಆರತಿ ಜೋಡಿ ಚೆನ್ನಾಗಿತ್ತು. ಇವರು ಒಬ್ಬರೇ ಶೋ ಮಾಡುವದಕ್ಕಿಂತ ಇಬ್ಬರೂ ಮಾಡಿದರೆ ಚೆನ್ನ. ಈ ನಡುವೆ ಆದ ಮಾರ್ಪಾಡಿನಿಂದ ಆರತಿ ಮಾಯ, ಸುಮೇಶ ಒಬ್ಬನೇ ಜಗ್ಗಿ ಧ್ವನಿಯಲ್ಲಿ ಮಾತನಾಡುತ್ತ
ತನ್ನ ಸ್ವಂತ ಧ್ವನಿಯನ್ನೇ ಮರೆತ ಹಾಗೆ ಇದೆ.
ಇನ್ನು ಬೆಳ್ಳಿಗ್ಗೆ ಗೆಳೆಯ ಆಗಿದ್ದ ಸೋಮ ಮತ್ತು ಶ್ರದ್ಧ ಇಬ್ಬರೂ ಜೊತೆಯಾಗಿ ಇರುವದಕ್ಕಿಂತ ಬೇರೆಯಾಗಿ ಇದ್ದರೇನೆ ಚೆಂದ. ಒಬ್ಬರನ್ನು ಒಂದೇ ಶೋಗ್ ಹಾಕಿರುವುದು ಅವರ ಸಮಯವನ್ನ್ನು
ಕಿತ್ತುಕೊಂಡ ಹಾಗೆ ಇದೆ ಅನಿಸುತ್ತದೆ.
ಆಆಆಆಅ .....ಎರಡು..
ನಮ್ಮ ಮಾಧ್ಯಮದಲ್ಲಿ ಒಂದು ತಪ್ಪು ಕಲ್ಪನೆ ಇದೆ. ಹಿಂದಿಯನ್ನು ಬಿಟ್ಟರೆ ದೇಶದ್ರೊಹ ಮಾಡಿದ ಹಾಗೆ ಎಂದು. ಹಿಂದಿಯನ್ನು ಹಾಕದೇ ಬರಿ ಕನ್ನಡವನ್ನು ಹಾಕಿ ಮೊದಲನೇಯ ಸ್ಥಾನವನ್ನು ಪಡೆಯುತ್ತಾರೆ,
ಆದರೆ ಮತ್ತೆ ಹಿಂದಿಯನ್ನು ಹಿಂಬಾಗಿಲಿನಿಂದ ತರುತ್ತಾರೆ. ಅದಕ್ಕೆ ಮತ್ತೆ ಕೊಡುವ ಉತ್ತರ ಜನರ ಡಿಮ್ಯಾಂಡ್ ಇಲ್ಲ ಅದು ನಮ್ಮ ರಾಷ್ಟ್ರಭಾಷೆ ಅನ್ನುವ ಅರೆ ತಿಳುವಳಿಕೆ. ಒಂದು ಪಕ್ಷ ಹಾಗಿದ್ದಲ್ಲಿ ಬರಿ ಹಿಂದಿ ಹಾಕುವ ವಾಹಿನಿಗಳು ಇವತ್ತು ಮೊದಲನೇಯ ಸ್ಥಾನದಲ್ಲಿ ಇರಬೇಕಿತ್ತು.
ಇದೇ ತಪ್ಪನ್ನು ಹಿಂದೆ ಎಸ್.ಎಫಂ ಮಾಡಿ ತನ್ನ ಲೀಡ್ ಕಳೆದುಕೊಂಡಿತ್ತು, ಈಗ ಅದೇ ತಪ್ಪನ್ನು ಫಿವರ್ ಮಾಡಲು ಹೊರಟಿದೆ. ಇದನ್ನು ನೋಡುತ್ತ ಇದ್ದರೆ ಇದರ ಹಿಂದೆ ಬೇರೆ ಕಾರಣಗಳು ಇರಬಹುದು ಅನಿಸುತ್ತವೆ.
೧) ಆಡಳಿತ ವರ್ಗದ ಒತ್ತಡ :- ಇವತ್ತು ಎಲ್ಲಾ ಎಫ್.ಎಂ ವಾಹಿನಿಗಳ ಬಾಸ್ ನಾರ್ತಿ ಆಗಿದ್ದಾರೆ ಅನ್ನುವುದು ಗೊತ್ತಿರುವ ಸಂಗತಿ.ಅವರಿಗೆ ಭಾಷೆ ಮುಖ್ಯವಲ್ಲ ಬರೀ ದುಡ್ಡೇ ಮುಖ್ಯ. ಅದು ತಪ್ಪಲ್ಲ, ಯಾಕೆಂದರೆ
ಎಲ್ಲರೂ ಬಂದಿರುವುದು ವ್ಯಾಪಾರಕ್ಕಾಗಿಯೇ ಹೊರತು ಬೇರೆಯದಕ್ಕೆ ಅಲ್ಲ. ಆದರೆ ಕನ್ನಡ ಹಾಡುಗಳನ್ನು ಹಾಕಿ ನಂಬರ್ ೧ ಸ್ಥಾನಕ್ಕೆ ಎರಿ ಮತ್ತೆ ಅದನ್ನು ಬಿಟ್ಟು ಕೊಡುವ ಪ್ರಮಾದ ಯಾಕೆ ಮಾಡುತ್ತಾರೆ
ಎಂದು ಆಶ್ವ್ಹರ್ಯ ಆಗುತ್ತದೆ. ಇದು ಜಗತ್ತಿನಲ್ಲಿ ಗೊತ್ತಿರುವ ಸಂಗತಿಯೇ ಅನ್ನಬಹುದು, ಆಯ ಪ್ರದೇಶದಲ್ಲಿ ಕನ್ನಡ
೨) ಮಾರ್ಕೆಂಟಿಂಗ್/ಜಾಹೀರಾತು :- ಇವರಿಗೆ ಬೆಂಗಳೂರು ಎಂದರೆ ಎಮ್.ಜಿ,ಬ್ರಿಗೇಡ್, ಇಸಿ, ಐಟಿಪಿಲ್, ಇಂದಿರಾನಗರ, ಕೊರಮಂಗಲ ಅಂತ ಭಾವನೆ ಇದೆ. ಇದು ಒಂದು ರೀತಿಯಲ್ಲಿ
ಹುಟ್ಟುಹಾಕಿದ್ದೆ TOI ಅಂತ ಪೇಪರಗಳು. ಇವು ಅಲ್ಲಿಯ ಜನರನ್ನು ಸಂದರ್ಶಿಸಿ ಅವರ ಮಾತುಗಳನ್ನೇ ಬೆಂಗಳೂರಿನ ಮಾತು ಅನ್ನುವ ಹಾಗೆ ಹಾಕುವುದು, ಅವರ ಬ್ಲಾಗಗಳನ್ನು ಹಾಕುವುದು,
ಅವರ ಭಾಷೆಯ ಚಿತ್ರಗಳಿಗೆ ಎಲ್ಲಿಲ್ಲದ ಪ್ರಚಾರ ಕೊಡುವುದು ನೋಡಿದರೆ ನಗು ಬರುತ್ತದೆ.
ರಾಜಕುಮಾರ್ ಶ್ರೇಷ್ಥ ನಟನೇ ಅಂತ ಹೊರಗಿನಿಂದ ಬಂದ ಜನರ ಕೈಲಿ ಕೇಳಿ, ಅವರ ಅಭಿಮತವನ್ನು bold letters ನಲ್ಲಿ "DR.RAJ IS UNPOPULAR in BANGALORE" ಅಂತ ಹಾಕುವುದು.
ರಜನಿ,ಶಾರುಕ್ ಚಿತ್ರಗಳಿಗೆ ಎಲ್ಲಿಲ್ಲದ ಪ್ರಚಾರ ಕೊಡುವುದು ನಾವು ನೊಡುತ್ತ ಬಂದಿದ್ದೇವೆ. ಇದು ಒಂದು ರೀತಿಯಲ್ಲಿ ಮಾಧ್ಯಮಗಳು ಸುಳ್ಳನ್ನು ಬಿತ್ತುತ್ತ,
ಬಹುಸಂಖ್ಯಾತರ ದನಿಯನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತ ಬಂದಿದೆ.
ಅದೇ ನಿಟ್ಟಿನಲ್ಲಿ ಮೊದಲು ಶುರುವಾಗಿದ್ದೇ ಎಫ್.ಎಂಗಳ ಹಿಂದಿ ಸೇವೆ. ಯಾಕೆ ಅಂತ ಕೇಳಿದರೆ ಬೆಂಗಳೂರು ಕಾಸ್ಮೊಪಾಲಿಟನ್ ನಗರ, ಇಲ್ಲಿ ಹಿಂದಿ ಹೆಚ್ಚು ಓಡುತ್ತದೆ ಬೇಕಿದ್ದರೆ ನೀವೆ ನೋಡಿ ಅಂತ ಹೊರಗಿನವರ
ಅಭಿಮತವನ್ನು ಕೊಡುತ್ತಾರೆ. ಈ ತರಹಾ ಮಾಡಿದ್ದರೆ ಬೇಕಿದ್ದರೆ ಕಾಶ್ಮಿರಾ ಪಾಕಿಸ್ತ್ತಾನಕ್ಕೆ ಸೇರಿಸಬೇಕು ಎನ್ನುವ ಅಭಿಮತವನ್ನು ಬೆಂಗಳೂರಿನ ಅಭಿಮತವನ್ನಾಗಿ ಮಾಡಬಹುದು ಬಿಡಿ.
ಇಂತಹ ವಾಹಿನಿಗಳನ್ನು ಹೆಚ್ಚಾಗಿ ಕೇಳುವುದು ಇವರು ಅಂದುಕೊಂಡಿರುವ ಐ.ಟಿ ಬಿ.ಟಿ ಜನಗಳಲ್ಲ. ಸಾಲದಕ್ಕೆ ಎಫ್.ಎಂ ಎನು ಅರ್ಮಾನಿ, ರಾಡೊ ವಾಚಲ್ಲ, ಕೇವಲ ಒಂದು ವರ್ಗಕ್ಕೆ ಗುರಿಯಾಗಿಸಲು.
ಇವತ್ತು ಬೆಂಗಳೂರಿನ ಆಚೆ,ಅನೇಕ ಹಳ್ಳಿಗಳಿಗೆ ಇದು ಹೋಗುತ್ತದೆ, ಅಲ್ಲಿನ ಜನರೇ ಹೆಚ್ಚು ಕಾರ್ಯಕ್ರಮಗಳಿಗೆ ಸ್ಪಂದಿಸುವುದು.
ಮುಂದುವರೆಯುತ್ತ, ಒಂದು ಎಫ್.ಎಮ್ ನಡೆಯಲು ಜಾಹೀರಾತು ಅತ್ಯವಶ್ಯ. ಅದರ ದರಗಳು ಬೇರೆ ಬೇರೆ ಸ್ಲಾಬ್ ನಲ್ಲಿ ಇರುತ್ತದೆ. ಈ ಜಾಹೀರಾತುಗಳನ್ನು ಕೊಡುವ ಜನರು ಅದನ್ನು ಕೇಳುಗರಿಗೆ ಕೇಳಿಸಿ
ತಮ್ಮ ಉತ್ಪನ್ನಗಳ ಮಾರಾಟ ಮಾಡುವುದು ಆಗಿರುತ್ತದೆ. ಇಲ್ಲಿ ಹಿಂದಿ ಹಾಕಿ ಆಗ ಜಾಹೀರಾತು ಕೊಡುತ್ತ್ವೆವೆ ಅನ್ನುವ ಜನರ ಮನಸ್ಸಲ್ಲಿ ಇರುವುದು ನಾರ್ತಿಗಳು ಅಷ್ಟೇ. ಅವರು ಮಾತ್ರ ಕೊಳ್ಳುವ ವರ್ಗ,
ಇಲ್ಲಿನ ಕನ್ನಡಿಗರು ಕೇವಲ ವಿಂಡೋ ಶಾಪಿಂಗ್ ಮಾಡುವ ವರ್ಗ ಅಂತ ಅಂದುಕೊಂಡಿದ್ದಾರೆ. ಇದು ಸುಳ್ಳು ನಾವು ಯಾಕೆ ಕನ್ನಡಕ್ಕೆ ಮಾರುಹೋದೆವು ಅಂತ ಮಿರ್ಚಿಯ ನವೀನ್ ಚಂದ್ರ ಹೀಗೆ ಹೇಳುತ್ತಾರೆ.
"Advertisers need to break out of the common perception that Kannada is not hip. Kannada is very hot right now. Kannadigas have the highest purchasing power in Bangalore. We had commissioned a mall research in Bangalore through IMRB in 2007. It showed us that of all people visiting malls, Kannadigas had the most purchasing power and were the most likely to purchase goods and services available at malls. If any advertiser wants to reach the best audience in Bangalore, they have to bet on Kannada. The fact that The Times of India has started its Kannada edition in addition to Vijay Karnataka demonstrates that Kannada is the most important vehicle to reach Bangaloreans," adds Naveen Chandra, Radio Mirchi's national sales head."
ಹಂದಿ ಜ್ವರ ಬಗ್ಗೆ ಫಿವರ್ ಇಂದ ಬಂದ ಉತ್ತರವಿದು...
ಫಿವರ್ ಮ್ಯೂಜಿಕ್ ಮಹೋತ್ಸವ ಹೆಸರಲ್ಲಿ ಹಿಂದಿ ಹಾಕುತ್ತ ಇರುವುದು, ಅದಕ್ಕೆ ಅವರು ಹೇಳುತ್ತ ಇರುವುದು ಬರೀ ಚಲನಚಿತ್ರ ಗೀತೆ ಅಲ್ಲ ಭಾವಗೀತೆ,ಜಾನಪದ ಗೀತೆ, ಸಂದರ್ಶನ,ಶಾಸ್ತ್ರೀಯ ಸಂಗೀತ ಕೊಡುತ್ತ ಇದ್ದೇವೆ, ಹೌದು ಇದರ ಜೊತೆಗೆ ಒಂದೆರೆಡು ಗಂಟೆ ಹಿಂದಿ ಹಾಡುಗಳನ್ನು ಹಾಕುತ್ತ ಇದ್ದೇವೆ . ಅದು ಬರೀ ಸಂಜೆ ಮಾತ್ರ, ಅದೂ ಕೂಡ ಒಂದೇ ಒಂದು ಶೋ ನಲ್ಲಿ .. ನಮ್ಮ ಮುಖ್ಯ ಉದ್ದೇಶ ಎನಪ್ಪಾ ಅಂದ್ರೆ ಕನ್ನಡಿಗರಿಗೆ ಹೆಚ್ಚಿನ ವೈವಿಧ್ಯ ಇರುವ ಸಂಗೀತ ಕೊಡುವುದು, ಹೆಚ್ಚಿನ ಮನರಂಜನೆ ಕೊಡುವುದು. ಇದು ನಮ್ಮ ಗುರಿಯಾಗಿರುತ್ತದೆ.
ನಾವು ಯಾವತ್ತು ೧೦೪% ಕನ್ನಡ ಹಾಡುಗಳು ಎಂಬ ಮಾತಿಗೆ ದೂರ ಸರಿಯುವದಿಲ್ಲ, ಯಾವಾಗಲೂ ನಾವು ಬೆಂಗಳೂರಿನ ಬೊಂಬಾಟ್ ಸ್ಟೇಷನ್ ಆಗಿರುತ್ತೆವೆ ಎನ್ನುತ್ತಾರೆ. ಪ್ರಶ್ನೆ ಇದ್ದರೆ ಕೇಳಿ ಅಂತ ಬೇರೆ ಹೇಳುತ್ತಾರೆ.
ನನಗೆ ಇದನ್ನು ಓದಿ ಖಂಡಿತಾ ಅನೇಕ ಪ್ರಶ್ನೆಗಳಿವೆ ..
* ಈ ೧೦೪% ಅಂದರೇನು, ಇದರಲ್ಲಿ ೪% ಕನ್ನಡ ಇನ್ನ ೧೦೦% ಬೇರೆ ಭಾಷೆನಾ ?
* ಸಂಗೀತಕ್ಕೆ ಭಾಷೆ ಇಲ್ಲಾ ಅನ್ನೊ ಮಾತುಗಳು, ನಮ್ಮ ಕನ್ನಡ ನಟ ನಟಿಯರು ಬೇರೆ ಭಾಷೆಯಲ್ಲಿ ಅಭಿನಯಿಸಿ ಬಂದಾಗ ಹೇಳುತ್ತಾರಲ್ಲ ಕಲಾವಿದರಿಗೆ ಭಾಷೆ ಇಲ್ಲ ಅಂತ ಅದನ್ನು ಜ್ಞಾಪಿಸುತ್ತದೆ.
ನಿಮ್ಮ ಪ್ರಕಾರ ಸಂಗೀತಕ್ಕೆ ಭಾಷೆ ಇಲ್ಲದಿದ್ದಲ್ಲಿ ನಾಳೆ ನೀವು ತಮಿಳ್ ಹಾಡು ಹಾಕಬಹುದು, ತೆಲುಗು ಹಾಡು ಹಾಕಬಹುದು ಅಲ್ಲವೇ ?. ಅವು ನಿಮ್ಮ ಸಂಗೀತದ ವೈವಿಧ್ಯತೆ ಅಲ್ಲವೇ ?
ಇದಕ್ಕೆ ಮತ್ತೆ ನೀವು ಕೊಡುವ ಸಬೂಬು ಕನ್ನಡಿಗರ ಹೆಚ್ಚಿನ ಮನರಂಜನೆ ನೀಡಲು ನಾವು ಆ ಭಾಷೆ ಹಾಕುತ್ತ ಇದ್ದೆವೆ ಅದೂ ಕೂಡ ಕೇವಲ ಒಂದು ಗಂಟೆ ಅಂತ.
* ಅದೇ ನಿಮ್ಮ ಮುಂಬೈನಲ್ಲಿ ಅಷ್ಟೋಂದು ಕನ್ನಡಿಗರು ಇದ್ದಾರೆ, ಅಲ್ಲಿನ ಜನರ ಸಲುವಾಗಿ ನೀವು ಒಂದು ಗಂಟೆ ಕನ್ನಡ ಹಾಡು ಹಾಕುತ್ತೀರಾ ?
* ಒಂದು ಕಡೆ ೧೦೪% ಕನ್ನಡ ಹಾಡು ಅನ್ನುವುದು, ಇನ್ನೊಂದು ಕಡೆ ಬೇರೆ ಭಾಷೆ ಹಾಡುಗಳನ್ನು ಹಾಕುವುದು ಇದು ಒಂದಕ್ಕೆ ಒಂದು ironic ಆಗಿದೆ.
* ಮನರಂಜನೆಯಲ್ಲಿ ಸ್ಥಳೀಯ ಭಾಷೆಯ ಮಹತ್ವ ಎನು ?
* ನಮ್ಮ ಹಬ್ಬಗಳಲ್ಲದ ನಮ್ಮ ಸಂಸ್ಕ್ರುತಿ ಅಲ್ಲದ ಹಬ್ಬಗಳ ಬಗ್ಗೆ ಯಾಕೆ ಅಷ್ಟು ಅಬ್ಬರ ಮತ್ತು ಪ್ರಚಾರ ಕೊಡುತ್ತಿರಾ ?. ಉದಾ;- ಓಣಂ
ಒಟ್ಟಿನಲ್ಲಿ ಕಲಾವಿದರೂ ನಮ್ಮ ಸಂಸ್ಕ್ರುತಿಯ ನಾಯಕರಲ್ಲ ಅಂತ ಕನ್ನಡಿಗರಿಗೆ ಚೆನ್ನಾಗಿ ಗೊತ್ತಿದೆ. ಕನ್ನಡ ಹೋರಾಟಗಳಲ್ಲಿ, ನಾಡಿನ ಸಮಸ್ಯೆಗಳು ಬಂದಾಗ ವಿದೇಶದಲ್ಲಿ ಮಜಾ ಮಾಡುತ್ತ ಇರುವ ಇವರ ಬಾಯಲ್ಲಿ ನಾವು ಕನ್ನಡ-ಕನ್ನಡಿಗ-ಕರ್ನಾಟಕ ಬಗ್ಗೆ ತಿಳಿಯಬೇಕಾಗಿಲ್ಲ.
ಅವರ ಮಾತುಗಳು ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಮಾವನ ಕಡೆ ಇರುತ್ತದೆ. ಕಲಾವಿದನಿಗೆ ಭಾಷೆ ಇಲ್ಲಾ ಅಂತ ಹೇಳಿ ಬೇರೆ ಭಾಷೆಯಲ್ಲಿ ಕೆಲಸ ಮಾಡುವ ಇವರೂ ,ಅದೇ ಕನ್ನಡಿಗ ಬೇರೆ ಭಾಷೆ ಚಿತ್ರ ನೋಡಿದರೆ ನೋಡ್ರಿ ನಮ್ಮ ಜನರಿಗೆ ಸ್ವಲ್ಪಾನು ಭಾಷಾಭಿಮಾನ
ಇಲ್ಲ ಅನ್ನುತ್ತಾರೆ. ಇಂತವರ ಬಾಯಲ್ಲಿ ಹಿಂದಿ ಹಾಡುಗಳನ್ನು ಹಾಕಿಸಿದ್ದು ಒಂದು ಉತ್ತಮ ಮೂವ್ ಅಂತ ಹೇಳಿಸಿದರೆ ಅದು ನಗೆಪಾಟಲೇ ಸರಿ.
ಕೊಸರು
ಎಲ್ಲೊ ಒಂದು ಕಡೆ ನಮ್ಮ ಹುಡುಗ ತಪ್ಪು ದಾರಿಯಲ್ಲಿ ಹೋದರೆ ನಮಗೆ ಬೇಜಾರಾಗುವ ಹಾಗೆ ಇದೆ ನಮ್ಮ ಕನ್ನಡಿಗರ ಸಾತ್ವಿಕ ಸಿಟ್ಟು. ಇದರ ಮೇಲೆ ನನ್ನ ಹಾಗೆ ಯೋಚಿಸುವ ಮತ್ತು ಇವರ ಬದಲಾವಣೆಯ ಬಗ್ಗೆ ಚಕಾರ ಎತ್ತಿರುವ ಅನೇಕ ಕನ್ನಡಿಗರ ಉದ್ದೇಶ ಒಂದೇ,
ನೀವು ಕನ್ನಡದಿಂದ ದೂರ ಸರಿಯದಿರಿ, ಕನ್ನಡವೇ ಸತ್ಯ ,ಅನ್ಯ ಭಾಷೆ ಇಲ್ಲಿ ಮಿತ್ಯ ಅಂತ ತೋರಿಸಿ ಅಂತ. ಇಲ್ಲ ಜನರಿಗೆ ಇನ್ನೊಂದು ವಾಹಿನಿಗೆ ಹೋಗಲು ಒಂದು press ಸಾಕು.
ಮತ್ತೊಂದು ಕೊಸರು.
ಫಿವರ್ ವೆಬಸೈಟನಲ್ಲಿ ಹಾಡು ಕೇಳಿ ಅಂತ ಇದೆ, ಅದಕ್ಕೆ ಕೊಟ್ಟಿರುವ ಐ,ಪಿ ಲೋಕಲ್ ಐ.ಪಿ. ಯಾರೋ ಸರಿಯಾಗಿ ಟೆಸ್ಟ ಮಾಡಿಲ್ಲ ಅನಿಸೊತ್ತೆ. ಬೇಕಿದ್ದರೆ ನೀವು ನೋಡಿ http://192.168.1.7/feverfm/sound.html