Thursday, March 22, 2007

ಬೇಡ ನಂಟಿಗೆ ಹೆಸರು ..ಯಾಕೆ ಸುಮ್ಮನೆ ..

ಮುಂಗಾರು ಮಳೆಯಲ್ಲ್ಲಿ ನೆನೆಯುವಾಗ ಎಲ್ಲೊ "ಅರುಳುತಿರು ಜೀವದ ಗೆಳೆಯ" ಹಾಡು ಹೆಚ್ಚು ಕೇಳಿರಲಿಲ್ಲ. ಮೊನ್ನೆ ಬೇರೆ ವಿಧಿಯಿಲ್ಲದೆ ಕೇಳುತ್ತಿದ್ದೆ, ಒಮ್ಮೆ ಕೇಳಿದ ಒಡನೆ ಅನಿಸಿದ್ದು, ತಥ್ ಇಂಥಾ ಒಳ್ಳಯ ಹಾಡನ್ನು ಮಿಸ ಮಾಡಿಕೊಂಡೆ ಅಂತ ನನ್ನನ್ನು ನಾನೇ ಬೈದುಕೊಂಡೆ. ಇ ಹಾಡು ಅಷ್ಟು ಪ್ರಸಿದ್ಧಿ ಪಡೆಯದಿದ್ದರೂ ನನ್ನ ಮನದಾಳವನ್ನು ಮುಟ್ಟಿತು.
ನಾನು ಅನೇಕ ಬಾರಿ ಅಂದು ಕೊಂಡಿದ್ದೆ, ಯಾಕೆ ನಾವು ಪ್ರತಿಯೊಂದು ಸಂಭಂದಕ್ಕೆ ಹೆಸರು ಕೊಡುತ್ತೆವೆ, ಒಂದು ಪರಿಧಿಯಲ್ಲಿ ಹಾಕಿ ಯಾಕೆ ತೂಗುತ್ತೆವೆ??. ನಂಟಿಗೆ ಹೆಸರು ಬೇಕೆ ಅಂತ ಮನದಾಳ ಮಾತುಗಳನ್ನು ಒಂದು ಕಾವ್ಯವಾಗಿ ಬರೆದರೆ ಇಷ್ಟು ಚೆನ್ನಾಗಿ ಯಾರು ಬರೆಯಲಾರರು ಅಂತ ಜಯಂತ್ ಕಾಯ್ಕಿಣಿ ಅವರು ತೋರಿಸಿಕೊಟ್ಟಿದ್ದಾರೆ.
ಚಿಕ್ಕ ಮಗುವಿಗೆ ಬೆಳೆದ ಹಾಗೆ ಇವನು x, ಇವನು y ಅಂತ ಹೇಳಿ ಒಂದು ಚೌಕಟ್ಟಿನಲ್ಲಿ ತೂಗುತ್ತವೆ. ಅದರಲ್ಲೂ ಬೆಳೆದ ಹೆಣ್ಣು ಮಕ್ಕಳಿಗೆ ವಯಸ್ಸಿನ ಹುಡುಗರೆಲ್ಲಾ ಅಣ್ಣ-ತಮ್ಮ ಅಂತ force ಮಾಡಿ ಒಂದು ಸೀಮಿತ ಪರಿಧಿಯಲ್ಲಿ ಸಂಭಂದಗಳನ್ನು
ಬಂಧಿಸುಡುತ್ತೆವೆ.

ಅನೇಕ ಬಾರಿ ಕಾಮವಿಲ್ಲದ ಪ್ರೀತಿ ಇರಲಾರದು ಎಂದು ನಾವು ಇಲ್ಲಿ ತನಕ ಹೇಳಿಕೊಂಡು ಬಂದಿದ್ದೇವೆ, ಯಾಕೆ ಅಂದರೆ ಅದಕ್ಕೆ ಒಂದು ಹೆಸರಿಲ್ಲ. ಹೆಸರಿಲ್ಲದ ಒಂದು ನಂಟು ನಮ್ಮ ಸಮಾಜದಲ್ಲಿ ಹಾದರಕ್ಕೆ ಸಮಾನ ಅಂತ ತಪ್ಪು ತಿಳುವಳಿಕೆ ಇದೆ.
ಗಂಡು-ಹೆಣ್ಣಿನ ಸಂಬಂಧಗಳು ಒಂದೇ ಪರಿಧಿಯಲ್ಲಿ ನೋಡುವ ನಮ್ಮ ಸಮಾಜದ ಸೀಮಿತ ಬೆಳವಣಿಗೆ ನಮ್ಮ ದೌರ್ಭಾಗ್ಯ.

ಹಿಂದಿನ ನೆನಪುಗಳನ್ನು ಮರಿಯಲು ಆಗುವದಿಲ್ಲ,ಅದು ಬೇಡವೆಂದರೂ ಮನಸ್ಸಿನ ಮೂಲೆಯಲ್ಲಿ ಬಾವುಲಿಯಾಗಿ ನೇತನಾಡುತ್ತ ಇರುತ್ತದೆ. ಸಂಧರ್ಭಕ್ಕೆ ಅನುಸಾರವಾಗಿ ಅದು ಹಾರಿ ಮನಸ್ಸನ್ನು ಹಿಡಿಯುತ್ತದೆ. ಇದನ್ನು ತುಂಬಾ ಚೆನ್ನಾಗಿ ಎ.ಎನ್.ಮೂರ್ತಿ ರಾಯರು ಚೆನ್ನಾಗಿ ಹೇಳಿದ್ದಾರೆ. ನಾವು ಒಬ್ಬರನ್ನು ಮರೆತುತ್ತೆವೆ ಅನ್ನುವುದೇ ನಮಗೆ ನಾವು ಮಾಡಿಕೊಳ್ಳುವ ದೊಡ್ಡ ಮೋಸ.
ಅಭಿಮಾನಕ್ಕಿಂತ ಅಪಮಾನವೇ ನಮಗೆ ಹೆಚ್ಚು ಜ್ಞಾಪಕದಲ್ಲಿ ಇರುತ್ತದೆ ಎಂದು ಹಿಂದೆ ರವಿ ಬೆಳೆಗರೆಯವರ ಒಂದು ಲೇಖನದಲ್ಲಿ ಓದಿದ ನೆನೆಪು. ಹೀಗೆ ಮರೆಯಲು ಆಗದ ಸಂಭಂದ ಅದರ ನೆನೆಪುಗಳಿಗೆ ಒಂದು ಹೆಸರು ಇರುವದಿಲ್ಲ ಮತ್ತು ಅದು ತಪ್ಪು ಎನ್ನುವ ಪ್ರಜ್ಞೆಯೇ ನಮ್ಮ ಸಮಾಜವನ್ನು ಕಾಡುತ್ತಿರುವುದು.

ಹಿಂದೆ ಲೈಲಾ-ಮಜನು ತರ ಪ್ರೀತಿಸಿದ್ದ ಪ್ರೇಮಿಗಳು ಬಹಳ ದಿನಗಳ ನಂತರ ಒಬ್ಬರನ್ನು ಸಂಧಿಸಿದರೆ ಕಣ್ಣು ಕೊಟ್ಟು ನೋಡದೆ
ತಪ್ಪಿಸಿಕೊಂಡು ಓಡಾಡುವ ಪ್ರಮೇಯ ಬರುವುದೇ ನಮ್ಮ ಜನರಲ್ಲಿ ಇರುವ ಒಂದು ತಪ್ಪು ತಿಳುವಳಿಕೆಯ ಪಾಪ ಪ್ರಜ್ಞೆಯಿಂದ.

ಮತ್ತೆ ಹಾಡಿಗೆ ಬರುತ್ತ, ಪ್ರೇಮ-ಪ್ರೀತಿ ಎನ್ನುವ ಹೆಸರುಗಳನ್ನು ಬಿಟ್ಟು,ನಂಟಿಗೆ ಒಂದು ಹೆಸರನ್ನು ಕೊಡುವುದು ಬಿಟ್ಟು ಹಾಗೆ ಇರೋಣ ಎನ್ನುವುದು ವಿವಿಧ ಉದಾಹರಣೆಗಳಿಂದ ಬಿಂಬಿತವಾಗುತ್ತದೆ. ಇದು ಬಹಳ ಸುಂದರವಾಗಿ ಮೂಡಿ ಬಂದಿರುವುದು ನಮ್ಮ ಭಾಗ್ಯವೇ ಸರಿ.


ಬಾಡದಿರು ಸ್ನ್ಹೇಹದ ಹೂವೇ ಪ್ರೇಮದ ಬಂಧನದಲ್ಲಿ
ಮನಸ್ಸಲ್ಲೇ ಇರಲಿ ಭಾವನೆ.
ಮಿಡಿಯುತರಲಿ ಮೌನವೇನೆ ..ಹೀಗೆ ಸುಮ್ಮನೆ.

ಬಾಳ ದಾರಿಯಲ್ಲಿ ಬೇರೆಯಾದರೂ ಚಂದಿರ ಬರುವುನು ನಮ್ಮ ಜೊತೆ
ಕಾಣುವೆನು ಅವನಲ್ಲಿ ನಿನ್ನನ್ನ ..