ಗೆಳೆಯರೆ,
ಅನೇಕ ಬಾರಿ ನಿಮ್ಮ ಬಳಸುವ ಕ್ರೆಡಿಟ್ ಕಾರ್ಡ್ ಇಲ್ಲಾ ಸಂಚಾರಿ ದೂರವಾಣಿ ತೊಂದರೆ ಆದರೆ ಮೊಡಲು ನೀವು ಸಂಪರ್ಕಿಸುವುದು ಅದರ ಗ್ರಾಹಕ ಸೇವೆಗೆ. ಗಮನಿಸಿ ನೋಡಿದರೆ ಎಲ್ಲಾ ಗ್ರಾಹಕ ಸೇವೆಗಳು ಸ್ವಾಭಾವಿಕವಾಗಿ ಹಿಂದಿ/ಇಂಗ್ಲೀಷ್ ನಲ್ಲಿ ಇರುತ್ತದೆ. ನಮ್ಮ ಅನೇಕ ಕನ್ನಡಿಗರು ಇಲ್ಲಿ ಕನ್ನಡ ಬಳಸುವುದೇ ಇಲ್ಲ, ಯಾಕೆ ಅಂತ ಕೇಳಿದರೆ ಅವರು ಇಂಗ್ಲೀಷ್ ನಲ್ಲಿ ಶುರು ಹಚ್ಚಿಕೊಂಡರು ಅಂತ ನೆವ ಕೊಡುತ್ತಾರೆ, ಇಲ್ಲಾ ನಾನು ಓದಿರುವ ನಾಗರಿಕ ಸುಮ್ಮನೆ ಯಾಕೆ ಅವರ ದೃಷ್ಟಿಯಲ್ಲಿ ಕೆಳಕ್ಕೆ ಹೋಗುವುದು ಎಂದು ಭಾವಿಸುತ್ತ್ತಾರೆ . ಇದಕ್ಕೆ ನೋಡಿ ನಮ್ಮ ಅನೇಕ ಗ್ರಾಹಕ ಸೇವೆಗಳು ಕನ್ನಡದಲ್ಲಿ ಸಿಗುತ್ತಿಲ್ಲ.
ನಮ್ಮ ಅಂತರ್ಜಾಲದ ಅನೇಕ ಗೆಳೆಯರು ಇದರ ವಿರುದ್ಧ ಹೋರಾಡಿ ತಮ್ಮ ಹಕ್ಕನ್ನು ಪಡೆದಿದ್ದಾರೆ,ಆದರೆ ಇಂದು ಗ್ರಾಹಕ ಸೇವೆಗಳು ತುಂಬಾ ಇವೆ. ಸರಿ ಮಾಡಿದ್ದು ಒಂದಾದರೆ ಮಾಡಬೇಕಾಗಿರುವುದು ಸಾವಿರ. ಇತ್ತಿಚಿಗೆ ದೊಡ್ಡ ಮಟ್ಟದಲ್ಲಿ
ಸುದ್ದಿಗೆ ಬಂದ ವಿಷಯವೆಂದರೆ ಬ್ಯಾಂಕಿನ ಗ್ರಾಹಕ ಸೇವೆಯಲ್ಲಿ ಕನ್ನಡ ನಿರ್ಲಕ್ಷತನ. ಯಾವುದೇ ಬ್ಯಾಂಕಿಗೆ ಕರೆ ಮಾಡಿ ನೋಡಿ
ನಿಮಗೆ ಕನ್ನಡದಲ್ಲಿ ಮಾತನಾಡುವ ಬ್ಯಾಂಕಿಗ್ ಆಫಿಸರ್ ಸಿಗುವುದೇ ಇಲ್ಲ, ಸಿಕ್ಕ ಮೇಲೆ ನಾವೇ ಕರೆ ಮಾಡುತ್ತೆವೆ ಅಂತ ಬೊಗಳೆ ಬಿಡುವ ಈ ಬ್ಯಾಂಕ್‍ಗಳು ನಿಮಗೆ ಕರೆ ಮಾಡಿದರೆ ಕೇಳಿ ನೋಡಿ.
ಇದು ಒಂದು ಬ್ಯಾಂಕಿನ ಸಮಸ್ಯೆ ಅಲ್ಲ, ಎಲ್ಲಾ ಬ್ಯಾಂಕುಗಳ ಕಾಲಸೆಂಟರ್ ಇರುವುದು ಚನ್ನೈನಲ್ಲಿ, ಅಲ್ಲಿಯ ಜನರನ್ನು ಕೆಲಸಕ್ಕೆ
ತೆಗೆದುಕೊಂಡಿರುವ ಆ ಬ್ಯಾಂಕಿನವರು, ಕನ್ನಡ ಬಿಟ್ಟು ಬೇರೆ ಯಾವ ಭಾಷೆಯಾದರು ಮಾತನಾಡಿ ಸಹಾಯ ಮಾಡುತ್ತೆವೆ ಅನ್ನುತ್ತಾರೆ. ಇದನ್ನು ಪ್ರತಿಭಟಿಸಿ ಅನೇಕ ಮಿತ್ರರು ಅವರ ಮುಖ್ಯಸ್ಥರಿಗೆ ಪತ್ರ ಬರೆದರೆ ಅವರಿಂದು ಬರುವ ಉತ್ತರ ಸುಮ್ಮನೆ ಕಣ್ಣು ಒರೆಸುವ ತಂತ್ರ, ನಾವು ಈ ವಿಷಯವನ್ನು ತತ್ಸಂಬದ ಅಧಿಕಾರಿಗಳಿಗೆ ರವಾನಿಸಿದ್ದೆವೆ,ಇಲ್ಲಾ ನಿಮ್ಮ ಸಂಖ್ಯೆ ಕೊಡಿ ಕರೆ ಮಾಡುತ್ತೆವೆ ಎನ್ನುತಾರೆ. ಅವರ ಕಛೇರಿಯಿಂದ ನೂರಾರು ಕರೆ ಬರುತ್ತದೆ,ಪ್ರತಿಯೊಬ್ಬರಿಗು ಕಥೆ ಹೇಳಬೇಕು, ಎನು ಕ್ರಮ ಕೈಗೊಳ್ಳುವಿರಿ, ಎನು ಗಡವು ಎಂದು ಕೇಳಿದರೆ ಉತ್ತರವಿಲ್ಲ. ನನಗೂ ಸಹ ಇಂತಹ ಮುಜುಗರ ಆಯಿತು, ಆದರೆ ಅವರ ಅಧಿಕಾರಿಗಳನ್ನು ಚೆನ್ನಾಗಿ ತರಾಟೆ ತೆಗೆದುಕೊಂಡು,ಸುಮ್ಮನೆ ಆಶ್ವಾಸನೆಗಳಿಗೆ ನಾನು ಬಗ್ಗುವದಿಲ್ಲ. ಎನು ಕ್ರಮ ಕೈಗೊಳ್ಳುವಿರಿ ಎಂದು ಮೈಲ್ ಕಳಿಸಿ, ಇಲ್ಲವಾದರೆ ಇದನ್ನು ನಿಮ್ಮ ಮುಖ್ಯ ಅಧಿಕಾರಿಗಳ ಗಮನಕ್ಕೆ ತರುತ್ತೆವೆ ಎಂದು ಹೇಳಿದಾಗ ಸ್ವಲ್ಪ ತಣ್ಣಗಾಗಿ ಹೇಳಿದ್ದು ಕೇಳುತ್ತಾರೆ. ಸ್ವಲ್ಪ ದಿನಗಳ ಹಿಂದೆ ಇದೇ ಅಧಿಕಾರಿಗಳು ಕನ್ನಡ ಸೇವೆ ನಾವೇನು ಕೊಡಬೇಕಾಗಿಲ್ಲ ಅಂತ ಹೇಳುತ್ತ ಇದ್ದರು. ಪುಣ್ಯಕ್ಕೆ ಯಾರೋ ಮಿತ್ರರು ಇದನ್ನು ಆರ್.ಬಿ.ಐ ಗಮನಕ್ಕೆ ತಂದು, ಅವರು ಇವರಿಗೆ ನಿರ್ದೇಶಿಸಿದ ಮೇಲೆ ಇವರಿಗೆ ತಮ್ಮ ಹೊಣೆ ಗೊತ್ತಾಗಿದೆ. ನನ್ನ ಸಹಾಯಕ್ಕೆ ಬಂದಿದ್ದು ಕೂಡ ಇದೇ ...
ನಮ್ಮ ಭಾಷೆಯಲ್ಲಿ ನಾವು ಮಾತನಾಡಲು ಅವರು ಸೌಕರ್ಯ ಕೊಡಬೇಕು,ಇದು ನಮ್ಮ ಹಕ್ಕು ಮತ್ತು ಅವರ ಹೊಣೆ.
ಅವರ ಕಾಲ್ ಸೆಂಟರ್ ಇಲ್ಲಿರಲಿ ಇಲ್ಲಾ ಜಪಾನ್ ನಲ್ಲಿ ಇರಲಿ, ಅದು ನಮಗೆ ಅನವಶ್ಯ. ಕರ್ನಾಟಕದಲ್ಲಿ ಅವರು ಕಾರ್ಯ ನಿರ್ವಹಿಸುತ್ತ ಇದ್ದರೆ ಅವರು ಕನ್ನಡ ಗ್ರಾಹಕ ಸೇವೆ ಕೋಡಲೆ ಬೇಕು.ಕೊಡದೆ ಇದ್ದರೆ ಕುತ್ತಿಗೆ ಪಟ್ಟಿ ಹಿಡಿದು ಕೇಳಿ ಇಲ್ಲಾ "DENIAL OF SERVICE" ಅಂತ ಜನರ ಗಮನಕ್ಕೆ ತನ್ನಿ.
ನನಗೆ ಸಹಾಯ ಮಾಡಿದ ಪತ್ರದ ಸಾರಂಶ ಇಲ್ಲಿದೆ.
~ICh.1 Mlen41~ cnT ChI(,U~q OFFICE OF THE BANKING OMBUDSMAN
( en ..•iGen) (KARNATAKA)
~~~Cf) ~ Reserve Bank of India Building~m'T1i~, 10/3/8, ~TT ~ 2nd Floor, 10/3/8, Nrupathunga Road,~ -560 001. -Bangalcre-· 560-001.---
tcffi : } 080-22244047
Fax :
22275020 ~ : } 22275629 .
Telephone: Extn. 441, 442, 443, 445 & 446 E-Mail: bobangalore@rbLorg.in
OBO(BG)No -~ 41 ~ 01/04/001/2006-07 January 16, 2007
The Manager-Customer CareCitibankCardme ers Services
P.O x 4830 A a Salai P.Ohennai-600002
Dear Sir,
Transaction in Reaional Lanauaaes bv Private Sector/Foreian Banks ___ elease_Fefeeto~vourJettecl'io_00_3~9Q5-8_63LGDI\L8_0.6L2006 ,_
dated_~9yerTlbe.r:....a(jd r_es_s~_dto Shri C. K Raman, Bangalore on the captioned subject. In this connection, we invite a reference to Reserve Bank of India instructions vide Circulars DBOD.No.
Leg.BC.10/466(IV)-87 dated March 23,1987 and DBOD.No.Leg.BC.52/09.07.005/200506 to Private Sector/Foreign Banks. We advise you to implement the recommendations
made therein for the convenience of the customers and avoid restrictive practices. This is issued with the approval of the Hon'ble Banking Ombudsman.
Yours faithfully,
(Reeny Ajith)Secretary
EndtOBO(BG)No 3 L, U 01/04/001/2006-07 of dateCopy forwarded for information to Shri Vishwanath H.S, Philips Electronics India Ltd., #1, Murphy Road, Halasuru, Bangalore,-560008 with reference to his e-mail datedNovember 28,2006.
(~Secretary)