Monday, June 26, 2006

ರತ್ನನ್ ಪದಗೊಳ್ .....

ರತ್ನನ್ ಪದ ಓದಿದವರಿಗೆ ಗೊತ್ತಿರೊತ್ತೆ ಅದರ್ ಗಮತ್ತು, ೧೯೩೪ರಲ್ಲಿ ಜೆ.ಪಿ.ಆರ್ ತಮ್ಮ ಪದಗಳನ್ನು ಪುಸ್ತಕದಲ್ಲಿ ಆಕಿ ಆಚೆ ತಂದಿದ್ದು ಅಷ್ಟೇಯಾ ಆಮೇಲೆ ಆ ಪದ್ಯಗಳು ಜನರ ನಾಲಿಗೆ ಮೇಲೆ ಹೆಚ್ಚು ವಾಸಸಿದ್ದು, ಆ ಪುಸ್ತಕ ಬಿಚ್ಚುವ ಮುನ್ನ ನಿಮಗೆ ಮೊದಲ್ ಸಾಲು ಕಾಣುವುದು "ಯಾರು ಇದನ್ನು ಮೆಲ್ಲಗೆ ಮನಸ್ಸಿನಲ್ಲಿ ಓದಿಕೊಬಾರದು, ಜೋರಾಗಿ ಗಟ್ಟಿಯಾಗಿ ಕಿವಿ ಮೇಲೆ ಬೀಳುವ ಹಾಗೆ ಓದಬೇಕು,
ಆಗೆ ಮಾಡಿದರೆ ಮಾತ್ರ ಆರ್ಥ ಆಗುತ್ತದೆ ಅಂತ.
ಏನು sudden ಆಗಿ ರತ್ನನ್ ಪದ್ಯ ಗ್ನಾಪಕ ಬಂತು ಅಂದ್ರೆ, ಇತ್ತಿಚಿಗೆ ಲಾಂಗ್ ಲಾಜ ದರ್ಶನ್ ನಟಿಸಿರುವ ಸುಂಟರ ಗಾಳಿ ಚಿತ್ರದಲ್ಲಿ
ಒಂದು ಪದ್ಯ ಇದೆ,ಕೇಳುತ್ತ ಕೇಳುತ್ತ ಹಿಂದೆ ನಾನು ಓದಿದ ರತ್ನನ ಪದ್ಯ ಗ್ನಾಪಕ ಬಂತು.

ಹಾಡು:- ನಂಜಿಗೆ
ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು,
ಮಾಗೀಲ್ ಉಲ್ಮೇಲ್ ಮಲಗಿದ್ದಂಗೆ ಮಂಜು,
ಮಾಗಿ ಕುಗ್ತು
ಬೇಸ್ಗೆ ನುಗ್ತು
ಇದ್ಕಿದ್ದಂಗೆ ಮಾಯವಾಗೋಯ್ತು ಮಂಜು,
ನಂಗೂ ನಿಂಗೂ ಯೆಂಗ್ ಆಗಲೋಯ್ತು ನಂಜು.
(
ನೀನು ನನ್ನ ಹಟ್ಟಿ(ಗುಡಿಸಲು) ಬೆಳಕಿದ್ದ ಹಾಗಿದ್ದೆ ನಂಜು
ಮಾಗಿಯಲ್ಲಿ ಹುಲ್ಲಿನ ಮೇಲೆ ಮಲಗಿದ್ದ ಹಾಗೆ ಮಂಜು,
ಮಾಗಿ ಕುಗ್ಗಿತು
ಬೇಸಿಗೆ ನುಗ್ಗಿತು
ನನಗೂ ನಿನಗೂ ಹೇಗೆ ಅಗಲಿಹೋಯಿತು ನಂಜು.
)
ಸೀಗಂಗ್ಪಟ್ಟದ್ ತಾವ್ ಕಾವೇರಿ ಒಡದಿ
ಯೆಳ್ಡೊಳಾಗಿ ಪಟ್ಣದ್ ಸುತ್ತ ನಡದಿ
ಸಂಗಂದಲ್ಲಿ
ಸೇರ್ಕೊಂಡ್ ಮಳ್ಳಿ
ಮುಂದಕ್ ವೋದ್ದು ನಮಗೆ ಗ್ನಾನದ್ ಪಂಜು
ಈಗ ಆಗಲಿದ್ರೇನ್ ಮುಂದ್ ನಾವ್ ಸೇರ್ತಿವಿ ನಂಜು.

(ಶ್ರೀರಂಗ ಪಟ್ತದ ಹತ್ತಿರ ಕಾವೇರಿ ಒಡೆದು
ಎರಡು ಹೋಳಾಗಿ ಪಟ್ಟಣದ ಸುತ್ತ ನಡೆದು,
ಸಂಗಮದಲ್ಲಿ ಸೇರಿಕೊಂಡು,
ಮರಳಿ ಮುಂದಕ್ಕೆ ಹೋದದು ನಮಗೆ ಜ್ಞಾನದ ಪಂಜು
ಈಗ ಅಗಲಿದರೇನು ? ಮುಂದೆ ಸೇರುತ್ತಿವಿ ನಂಜು.)

ಆಗಲೋಡೋಗ್ತೆ ರಾತ್ರಿ ಬಂತತ್ ಅಂಜಿ,
ರಾತ್ರಿ ಮುಗದೋದ್ರ್ ಆಗಲೆ ಅಲ್ವ ನಂಜಿ
ರ್ರಾತ್ರಿ ಬಂತು
ಆಗಲೇ ಬತ್ತು
ಓಗೋದ್ ಮಳ್ಳಿ ಬರೋದ್ಕೆ ಅಲ್ವ ನಂಜಿ
ಆ ನಮ್ಕೆ ಜೀವಾನ್ ಉಳಸೋ ಗಂಜಿ

(
ಹಗಲು ಓಡಿಹೋಗುತ್ತದೆ ರಾತ್ರಿ ಬಂತೆಂದು ಅಂಜಿ
ರಾತ್ರಿ ಮುಗಿದುಹೋದರೆ ಹಗಲೇ ಅಲ್ಲವೆ ನಂಜಿ
ರಾತ್ರಿ ಬಿದ್ದಿತು,ಹಗಲೇ ಬಂದಿತು
ಹೋಗುವುದು ಮರಳಿ ಬರುವದಕ್ಕೆ ಅಲ್ಲವೇ ನಂಜಿ
ಆ ನಂಬಿಕೆ ನನ್ನ ಜೀವವನ್ನು ಉಳಿಸುವ ಗಂಜಿ.
)
ಇಂತಹ ಮಹಾನ್ ಪದ್ಯಗಳನ್ನು ಬರೆದ ಮಹಾನ್ ಕವಿಗೆ ಸಿನೆಮಾದರು ಹಾಡನ್ನು ಕದ್ದಾಗ, ಗೌರವ ಧನ ಕೋಡಬೇಕು. ಹಾಗೆ ಆದರೂ ಅವರ ಪುಸ್ತಕ ಹೆಚ್ಚು ಪ್ರಕಟಣೆಗೊಂಡು ಕನ್ನಡಿಗರ ಮನೆ ಸೇರಲಿ.
ಕೊನೆಯದಾಗಿ ರತ್ಗ್ನ ನನ್ನಹಾಗ ಕನ್ನಡ ಅಭಿಮಾನಿ ..ನನ್ನ ಮೆಚ್ಚಿನ ಸಾಲುಗಳು ಇವು
... " ಕನ್ನಡ ಪದಗೊಳ್ ಆಡೋದ್ನೆಲ್ಲ
ನಿಲ್ಲಿಸ್ ಬಿಡುಬೇಕ್ ರತ್ನ
ಅಂತ ಅವನ್ ಅಂದ್ರೆ - ದೇವ್ರ ಆದ್ರ ಎನ್
ಮಾಡ್ತಿನಿ ಅವ್ನ್ಗೆ ಖತ್ನ."