ಪೀಠಿಕೆ:- ಕೆಲ ದಿನಗಳ ಹಿಂದೆ ನನ್ನ ಹಳೇ ಗೆಳೆಯರು,ನಾನು ೨೦೦೪ ಇಸವಿಯಲ್ಲಿ ಬರೆದ ಕವಿತೆವನ್ನು ಜ್ಞಾಪಿಸಿಕೊಂಡು,ಕಳುಹಿಸಿ ಕೊಡಿ ಎಂದು ಹೇಳಿದರು. ನನಗೆ ಕಿಂಚಿತ್ತೂ ಕ್ಲೂ ಇರಲಿಲ್ಲ, ಯಾವುದರ ಬಗ್ಗೆ ಹೇಳುತ್ತ ಇದ್ದಾರೆ ಅಂತ. ಕೊನೆಗೂ ಅದನ್ನು ಹುಡುಕುವ ಕೆಲಸಕ್ಕೆ ಕೈ ಹಾಕಿ, ಆ ದಿನಗಳಲ್ಲಿ ನಾನು ಕವಿತೆ ಹಾಕುತ್ತಿದ್ದ ತಾಣದಿಂದ,ಹೆಕ್ಕಿ ಇಲ್ಲಿ ಹಾಕುತ್ತ ಇರುವೆ. ಇದು ಶಬರಿಯ ಹಾಗೇ ಕಾಯುತ್ತಿರುವ ನನ್ನ ಗೆಳತಿಗೆ ....
ಮರಳಿ ಬರುವೆನೆಂದು ಹೇಳಿ ಹೊದೆಯೆಲ್ಲ ನಲ್ಲ,
ಬಾರಿ ಬಾರಿ ಬೀಸಿ, ರೋಸಿ ಹೋಯಿತು ಗಾಳಿ,
ನೀನು ಇಲ್ಲ, ನಿನ್ನ ನೆರಳು ಇಲ್ಲ.
ಪ್ರತಿ ದಿನವೂ ನಿನ್ನ ನಿರೀಕ್ಷೆಯಲ್ಲಿ,
ಬಾಗಿಲಿಗೆ ಬಂದು, ಗೋಡೆಗೆ ಒರಗಿ ನಿಂತು,
ಹಾದು ಹೋಗುತ್ತಿದ್ದ ಜನಗಳ ನಡುವೆ ಹುಡುಕುತ್ತಿದ್ದೆ,
ನಿನ್ನ ಮುಖ ಎಲ್ಲಿ.
ಅತ್ತು,ಅತ್ತು ಕಣ್ಣಾಳಿಗಳು ಕೆಂಪಾಗಿ,
ಬಿರುಸಾಗಿ ಹೊಯ್ದ ಮಳೆಗಳಲ್ಲಿ, ಅಡಗಿಸಿತ್ತೆ ನಾ ಕಂಬನಿಗಳ,
ಬರಲಿಲ್ಲ ಕೊನೆಗೂ ನೀನು ಕರಗಿ.
ಬರಲಿಲ್ಲ ಕೊನೆಗೂ ನೀನು ಕರಗಿ.
ನಿನ್ನ ಮುಖವನ್ನು ಒಮ್ಮೆ ನೋಡಲು,
ನಿನ್ನ ಧ್ವನಿಯ ಒಮ್ಮೆ ಆಲಿಸಲು,
ಕಾದು ಕುಳಿತಿರುವೆ ನಾ,
ನೋಡುತ್ತಾ ಮುಳುಗುತ್ತಿರುವ ಹಗಲು.