Sunday, February 10, 2008
ಕರ್ನಾಟಕದಲ್ಲಿ ಹುಟ್ಟಬಾರದಿತ್ತು ಅಂದಿದು ತಪ್ಪಾ ??
"ಖ್ಯಾತಿಗೆ ಜೋತು, ಲಾಭಕ್ಕೆ ಲೋಬಿಸಿ
ರಾಜದ್ವಾರದಲ್ಲಿ ಸುಳಿದು ಬಳಲುವ
ಹಿರಿಯಲೆಲ್ಲರು ಇತ್ತಿತ್ತಲಲ್ಲದೆ , ಅತ್ತಲೆಲ್ಲಿದೆಯೋ" - ಅಂಡಯ್ಯ
ನಾನು ಕರ್ನಾಟಕದಲ್ಲಿ ಹುಟ್ಟಬಾರದಿತ್ತು, ಫಾರಿನ್(ಕರ್ನಾಟಕ ಬಿಟ್ಟು ಉಳಿದ ಪ್ರದೇಸ) ನಲ್ಲಿ ಹುಟ್ಟಬೇಕಿತ್ತು ಅಂತ ಹರದನಹಳ್ಳಿ ದ್ಯಾವೇಗೌಡರು
ಮುದ್ದೆ ಮೇಲೆ ಆಣೆ ಮಾಡಿ ಯಾವಾಗ ಹೇಳಿದ್ರೋ ಗೊತ್ತಿಲ್ಲ, ಇದಕ್ಕೆ ಹೊಂಚು ಹಾಕುತ್ತಿದ ಅವರ ವೈರಿಗಳಿಗೆ ಎಣ್ಣೆ ಕುಡಿಸಿದ ಹಾಗೆ ಆಯ್ತು.
ಅದೇ ದೊಡ್ಡ ವಿಚಾರ, ಬೇರೆ ಯಾವ ಸಮಸ್ಯೆಯೂ ಇಷ್ಶ್ಟು ದೊಡ್ಡ ಮಟ್ಟದಲ್ಲ ಅಂತ ಗಲಾಟೆ ಮಾಡಿದ್ರು. ಇನ್ನೂ ಇಂಟರನೆಟನಲ್ಲಿ ನೋಡಬೇಕಿತ್ತು
ಚಡ್ಡಿ ಮತ್ತು ಇಂದಿರಾ ಬ್ರಿಗೆಡ್ ಗಳ ಬಂಟರು ಎಲ್ಲಾ ವಿಷಯಗಳನ್ನು ಬದಿಗಿಟ್ಟು ಈ ವಯ್ಯಾ ಕನ್ನಡಿಗರಿಗೆ ಅವಮಾನ ಮಾಡಿದ್ದಾನೆ, ಇದು ತಾಯೀ ಭುವನೇಶ್ವರಿಗೆ ಮಾಡಿದ ಅವಮಾನ ಅನ್ನೋ ಹಾಗೆ ಬಿಂಬಿಸಿಬಿಟ್ಟರು. ಅಷ್ಟಕ್ಕೆ ಸಾಲದು ಅಂತ ಅಮೇರಿಕಾ ಮಾದರಿಯಲ್ಲಿ ಪೊಲ್ ಮಾಡಿ ಗೌಡರನ್ನು ತಪ್ಪಿತಸ್ಥ ಅಂತ ನಮ್ಮ ಪತ್ರಿಕೆಗಳು ತೀರ್ಪು ಕೊಟ್ಟವು.ಒಬ್ಬ ಪ್ರಜೆ ಇದು ಪಾರಿನ್ ನಲ್ಲಿ ಆಗಿದ್ರೆ ಇಂಗೆ ಆಗ್ತಾ ಇತ್ತು, ಅಂಗೆ ಆಗ್ತಾ ಇತ್ತು ಅಂತ ಜಗತ್ತನ್ನು ೪ ಕಣ್ಣುಗಳಿಂದ ನೋಡಿರೋ ಸಂಜಯನ ತರ ಬರೆದಿದ್ದ.
ಅಲ್ಲಾ ಯಾರಾದ್ರು ಸ್ವಲ್ಪ ಯೋಚನೆ ಮಾಡಿದ್ರೆ, ಇಗೆಲ್ಲಾ ಆಡ್ತಾ ಇದ್ದರಾ ?. ಗೌಡ್ರು ಪ್ರಧಾನ ಮಂತ್ರಿ ಆದಾಗ ನಮ್ಮ ರಾಜ್ಯದಲ್ಲೆ ಎಷ್ಟು ಜನ ಲೇವಡಿ ಮಾಡಿಲ್ಲ. ಮುದ್ದೆ
ಊಟವನ್ನ ಕಾರ್ಟೂನ್ ಮಾಡಿ ತೋರಿಸಿ ನಕ್ಕಿಲ್ಲ. ಮುದ್ದೆ-ನಿದ್ದೆ ಅಂತ ತತ್ಸಮ ತತ್ಬವ ಸಮೀಕರಣೆ ಮಾಡಿ ಸಮಾಜದಲ್ಲಿ ಅದರ ಬಗ್ಗೆ ಅಪಪ್ರಚಾರ ಮಾಡಿಲ್ಲ ?
ಇಂತ ಜನ ನಮ್ಮ ಊರಿನ ಹೈದ ಪ್ರಧಾನ ಮಂತ್ರಿ ಆದನಲ್ಲಪ್ಪೊ ಅಂತ ಬೇಜಾರು ಮಾಡಿಕೊಂಡಿಲ್ಲ. ಸಾಲದಕ್ಕೆ ಕರ್ನಾಟಕದ ಕುಟಿಲ ರಾಜಕೀಯದ ದೊಂಬರಾಟ ನೋಡಿದ ಜನಕ್ಕೆ ಇ ವಯ್ಯ ಕರ್ನಾಟಕದಲ್ಲಿ ಯಾಕಾದ್ರೂ ಹುಟ್ಟಿದ್ನೊ ಅಂತ ಶಾಪ ಹಾಕಿಲ್ಲ. ಅದೇನೋ ಗೊತ್ತಿಲ್ಲ ಜನರ ಮನಸ್ಸಲ್ಲಿ ಇದ್ದ ಭಾವನೆ,ಶಾಪ ನಮ್ಮ ಗೌಡರ ಬಾಯಿನಲ್ಲಿ ಕೂಡ ಬಂದಿದೆ ಅಷ್ತೇ. ಅದನ್ನು ಬಿಟ್ಟು, ನೀವು ಹೇಳಿದ್ದು ತಪ್ಪಿ, ನಿಮ್ಮ ಮುದ್ದೆ ರಾಗಿ ಕೊಟ್ಟಿದ್ದು ಕರ್ನಾಟಕ, ನಿಮ್ಮ ಮಗ ಸಿ.ಮ್ ಆಗಿದ್ದು ಕರ್ನಾಟಕದಲ್ಲಿ , ಎದೆ ಮುಟ್ಕೋಂಡು ನಿಜಾ ಹೇಳಿ ಅಂತ ರೋಡಿಗಿಳಿದು ಗಲಾಟೆ ಮಾಡಿದ್ದು ನೋಡಿ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ.
ಸರಿ ಇದು ಚಿಕ್ಕ ವಿಸ್ಯ ಅಂತ ಬಿಟ್ಟು, ದೊಡ್ಡ ವಿಷ್ಯ ಕಡೆ ಗಮನ ಕೊಟ್ಟು, ಕನ್ನಡಿಗರ ಉದ್ಯೋಗಕ್ಕೆ ಸಂಚಕಾರ ವಿರುದ್ದ ಹೋರಾಟ ಮಾಡಿದ ಜನರನ್ನು ಸುಮ್ಮನೆ ಬಿಟ್ರಾ ಇಲ್ಲಾ.
ಅಲ್ಲಾ ಆ ದೊಡ್ಡ(!!!) ವಿಷ್ಯ ಬಗ್ಗೆ ಇವರು ಸುಮ್ಮನೆ ಇದ್ರಲ್ಲಾ ಸರೀನಾ , ಇವರು ನಿಜವಾದ ಕನ್ನಡಿಗರಾ ?, ಇವರು ಅವರಿಂದ ಎನೋ ಮಾಮೂಲು ಪಡೆದಿರ್ತಾರೆ ಅಂತ
ಹಾರಡಿದ್ರು. ಇನ್ನಾ ಅಂಬಾ ಪಡೆಯ ಹುಡ್ಗರು ಅಂತೂ ನೀವು ಎನು ಮಾಡಿದ್ದಿರಾ, ಕನ್ನಡ ಹೋರಾಟಕ್ಕೆ ಜಯ ನಿಮ್ಮದ್ದಲ್ಲ, ನೀವು ಗೌಡ್ರ ವಿಶ್ಯದಲ್ಲಿ ಸುಮ್ಮನೆ ಇದ್ರಲ್ಲಾ, ಒಸಿ ಸಮಧಾನ ಮಾಡ್ಕೊಳ್ಳಿ ಅಂತ ಫರ್ಮಾನು ಬೇರೆ ಕೊಟ್ಟರು.What a collosal waste of time and energy.
ಕನ್ನಡಿಗರಿಗೆ ಉದ್ಯೋಗ, ನೇಮಕಾತಿಯಲ್ಲಿ ತಾರತಮ್ಯ ಇಂತ ಪ್ರಮುಖ ವಿಷ್ಯಗಳನ್ನು ಪಕ್ಕಕ್ಕೆ ಇಟ್ಟು ಈ ಚಡ್ಡಿ ಮತ್ತು ಇಂದಿರಾ ಬ್ರಿಗೆಡಗಳ ಮಾತುಗಳನ್ನೆ ನಂಬಿ ಹೋರಾಟ ಮಾಡಿದ್ರೆ ಅದಕ್ಕೆ ಎನು ಅರ್ಥ ಬರ್ತಾ ಇತ್ತು ? ಗೌಡರು ಇಲ್ಲೇ ಹುಟ್ಟಬೇಕಿತ್ತು, ಅವರು ಇಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಅಂತ ಅರ್ಥ ಬರ್ತ ಇರಲಿಲ್ಲವೇ ?
ಇವರು ಮಾಡಿದ ದೊಂಬರಾಟ ನೋಡೀದ್ರೆ ಇವರು ಗೌಡರಿಗೆ ಅತಿಯಾಗಿ ಮರ್ಯಾದೆ ಕೊಡ್ತಾ ಇದ್ದಾರೆ ಅನಿಸೊತ್ತೆ ಅಲ್ವೇ, ಬೇಡದ ಪ್ರಾಮುಖ್ಯತೆ ಕೊಟ್ಟಿದ್ದಾರೆ ಅಂತ ಅನಿಸೋಲ್ವೇ ? . ನಾಳೆ ಇದೆ ತರ ಇನ್ನೊಬ್ಬ ಮಾತಡ್ತಾನೆ ಅಂತ ಅವುಗಳಿಗೆ ಎಲ್ಲಾ ಇವರ ರೀತಿಯಲ್ಲಿ ಹೋರಾಟ ಮಾಡಬೇಕಾ ?. ಅಷ್ಟಕ್ಕೂ ಅಲ್ಲಿ ತನಕ ಕರ್ನಾಟಕ-ಕನ್ನಡಿಗ-ಕನ್ನಡ ಅಂತ ಯೋಚನೆ ಮಾಡದವ್ರು, ಕನ್ನಡಿಗರಿಗೆ ರೈಲ್ವೇಯಲ್ಲಿ ನೇಮಕಾತಿಯಲ್ಲಿ ಮೋಸ ಆಗ್ತಾ ಇದೆ ಅಂತ ಗೊತ್ತಿದ್ರು ಸುಮ್ಮನೆ ಇದ್ದವ್ರು. ದೆಲ್ಲಿಯ ದೊರೆಗಳು ಈ ವಿಶ್ಯ ಮಾತನಾಡಿದರೆ ಎಲ್ಲಿ ಬೇಜಾರು ಮಾಡಿಕೊಳ್ತಾರೋ ಅಂತ ಬೆದರಿ ಬಿಹಾರಿಗಳಿಗೆ ಜೈ ಅಂದವರು ಈ ವಿಷ್ಯ ಬಗ್ಗೆ ಮಾತನಾಡೊದು ಕೇಳಿದ್ರೆ ನಗು ಬರೊತ್ತೆ, ಅದಕ್ಕೆ ಒಗ್ಗರಣೆ ಅಂತ ಇವರು ೫ ಕೋಟಿ ಕನ್ನಡಿಗರ ಪರ ಮಾತನಾಡಿದ್ದಾರೆ ಅಂತ ಹೇಳೋ ಪಾನಿಪುರಿ ಮಾತುಗಳು ಬರೀ ಸಪ್ಪೆ ಅಷ್ತೆ.
ಕರ್ನಾಟಕದ ಏಳಿಗೆಗೆ ದುಡಿದ ಸರ್.ಎಂವಿ ಈ ಮಾತು ಹೇಳಿದ್ರೆ ಖಂಡಿತಾ ನಮಗೆ ಕಣ್ಣಿನಲ್ಲಿ ನೀರು ಬರ್ತಾ ಇತ್ತು, ಆದರೆ ಕ-ಕ-ಕ ನಯಾ ಪೈಸೆ ಮಾಡಿರದ ಜನ ಹೀಗೆ ಹೇಳಿದ್ರೆ ಖಂಡಿತಾ ಒನ್ಸ ಮೋರ್ ಅನ್ನೋಣ ....