Saturday, August 22, 2009

ಮಂತ್ರಗಳಿಂದ ಅಭಿವೃದ್ದಿ ಸಾಧ್ಯ- ಸಂಸ್ಕೃತ ವಿವಿ ಬೇಕೇ ಬೇಕು!!!
ಗಣಕಯಂತ್ರದ OOAD ನಲ್ಲಿ IS A ಮತ್ತು HAS A ಅಂತ ಎರಡು ಪ್ರಭೇದಗಳು ಇವೆ, ಬಹಳ ಮಟ್ಟಿಗೆ ಒಂದು ವಿನ್ಯಾಸದಲ್ಲಿ ಇದೇ ತಳಹದಿ. software desgin ಮಾಡುವನು ಇವೆರಡರ ನಡುವಿನ ವ್ಯತ್ಯಾಸ ತಿಳಿದಿರಬೇಕು, ಇಲ್ಲವಾದರೆ ಅದು OOAD ಅಗೊಲ್ಲ, ಮೊನೊಲಿತಿಕ್ ಆಗುತ್ತದೆ. ನಮ್ಮ ಪುಣ್ಯ ಕನ್ನಡದ ಚಿಂತಕರು, ಸಂಸ್ಕೃತ ವಿವಿ ಸಮರ್ಥಕರು software design ಮಾಡುತ್ತ ಇಲ್ಲ, ಯಾಕೆಂದರೆ ಅವರಿಗೆ IS A ಮತ್ತು HAS A ವ್ಯತ್ಯಾಸ ತಿಳಿದ ಹಾಗೆ ಇಲ್ಲ.

ಕನ್ನಡ IS A ಸಂಸ್ಕೃತ ಅನ್ನೊ ವಾದ ಅಷ್ಟೆ ಅಲ್ಲ ಅದನ್ನು ಎಲ್ಲಾ ಭಾಷೆಗಳಿಗೂ ಹೋಲಿಸಿ ಎಲ್ಲದಕ್ಕೂ ಅಮ್ಮ ಇದೇ ಆಗಿದೆ, ಅಮ್ಮನನ್ನು ಕಡೆಗಣಿಸುವುದು ಪಾಪ ಅನ್ನೊ ಫರ್ಮಾನು ಹೊರಡಿಸುತ್ತಾರೆ. ಈ ವಾದವನ್ನೇ ಸರಿ ಒಪ್ಪಿಕೊಳ್ಳೊಣ,ಆದರೆ
ಬದುಕಿ ಬಾಳುತ್ತಿರುವ ಭಾಷೆಗಳಿಗೆ ನೀರೆರೆಯುವ ಬದಲು, ಮೃತಭಾಷೆಗೆ ನೀರೆರೆದು ದೇವರ ಕಾಲಕ್ಕೆ ಕರೆದುಕೊಂಡು ಹೋಗುತ್ತೆವೆ ಅನ್ನೊ ಕನವರಿಕೆ ಇದೇ ನೋಡಿ ಅದಕ್ಕೆ ಎನು ಹೇಳುವುದು ಗೊತ್ತಾಗುತ್ತಿಲ್ಲ.


ಸಂಸ್ಕೃತ ವಿವಿ ಬೇಕು ಅಂತ ಬಂದಿರುವ ಇಲ್ಲಿವರೆಗೂ ಲೇಖನಗಳು ವಸ್ತುಸ್ಥಿತಿಯನ್ನು ಸಂಪೂರ್ಣ ಅಲ್ಲಗಳೆದಿವೆ, ಹಿಂದಿನ ಪ್ರಯೋಗವನ್ನು ಕಡೆಗಣಿಸಿ ಮತ್ತೆ ಅದೇ ತಪ್ಪನ್ನು ಮಾಡಲು ಹೊರಟಿವೆ. ಎಲ್ಲಕ್ಕಿಂತ ಮುಖ್ಯವಾಗಿ mission immpossible ಆಗುತ್ತದೆ ಅನ್ನೊ ಭ್ರಮೆಯನ್ನು ಡಂಗುರ ಮಾಡುತ್ತಿವೆ.

ಭಾಷೆಗಳು ಬೆಳೆಯುವುದು ಕೇವಲ ಒಂದು ಭಾಷೆಯಿಂದ ಅಲ್ಲ, ಕನ್ನಡ ಬೆಳವಣಿಗೆ ಆಗಿದ್ದು ಅನೇಕ ಭಾಷೆಗಳ ನೆರವಿನಿಂದ.
ಒಂದು ಹಂತದವರೆಗೂ ಅದು ಸಂಸ್ಕೃತದ ಜೀವಸತ್ವದಲ್ಲಿ ಬೆಳೆಯಿತು, ಅದು ಒಂದು ಕಾಲ ಆದಮೇಲೆ ಜಡವಾಯಿತು. ಆಗ ಕನ್ನಡ
ಬೇರೆ ಭಾಷೆಗಳ ಜೊತೆ ಕೊಟ್ಟು-ತೆಗೆದುಕೊಂಡು ಮುಂದುವರೆಯಿತು. ಅದು ಮಾಡಿರಲಿಲ್ಲ ಅಂದರೆ ಕನ್ನಡವೂ ಸಂಸೃತದ ಹಾಗೆ ಪೋಟೊಗೆ ಹಾರ ಹಾಕಿಸಿಕೊಳ್ಳುತ್ತ ಇತ್ತು.

ನನಗೂ ಬಹಳ ಹಿಂದೆ ಇದರ ಬಗ್ಗೆ ಜಿಜ್ಞಾಸೆಯಾಗಿ ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತದ ಮದ್ಯೆ ಇರುವ ಸಂಬಂಧ ಮತ್ತು ವ್ಯತ್ಯಾಸ ಬಗ್ಗೆ ಪಟ್ಟಿ ಮಾಡಿದ್ದೆ. ಒಂದು ಭಾಷೆ ಭವಿಷ್ಯತನಲ್ಲಿ ಉಳಿಯಬೇಕಾದರೆ ಅದು ಮುಂದಿನ ಕಾಲಕ್ಕೆ ಬೇಕಾದ ಅಣಿಯಾಗಿರಬೇಕು ಅನ್ನುವುದು ನನ್ನ ಭಾವನೆ.

ಶ್ರೀನಿವಾಸ ಮೂರ್ತಿ ವಿ.ಕ ನಲ್ಲಿ ಹೇಳಿರುವುದು ನೋಡಿ(ಮೇಲಿನ ಚಿತ್ರ ನೋಡಿ) , ಕನ್ನಡ,ತೆಲುಗು, ಮಲೆಯಾಳಂ ಬೆಳೆದಿರುವುದು ಸಂಸ್ಕೃತದಿಂದ , ಅದೇ ತಮಿಳು ಅದನ್ನು ದೂರ ಮಾಡಿ ಬರಡಾಯಿತು, ಬೇಕಿದ್ದರೆ ಒಮ್ಮೆ ಜ್ಞಾನಪೀಠ ಪ್ರಶಸ್ತಿ ಪಟ್ಟಿ ನೋಡಿ ಅಂತಾರೆ. ಅಂದರೆ ಜ್ಞಾನಪೀಠ ಪಡೆಯಲು ಸಂಕ್ರುತದ ನೆರವು ಇಲ್ಲದೇ ಸಾಧ್ಯವಿಲ್ಲ, ಕನ್ನಡ ಆ ಮಟ್ಟಿಗೆ ಆಗಿದೆ ಅಂದರೆ ಅದು ಕವಿಗಳ ಪಾತ್ರ ಅಲ್ಲ ಎಲ್ಲ ಸಂಸ್ಕ್ರುತಮಯಂ

ಇ ಸಾಲು ಓದಿದ ಮೇಲೆ ಅವರ ಲೇಖನ ಮುಂದುವರೆಸಲು ನನಗೆ ಮನಸ್ಸಾಗಲಿಲ್ಲ. ಶ್ರೀಯುತರು ಜ್ಞಾನಪೀಠವನ್ನೇ ಎಲ್ಲ ಭಾಷೆಯ ಅಭಿವೃದ್ಧಿಗೆ ಅಳೆತೆಗೋಲು ಅಂತ ಮಾಡಿಕೊಂಡ ಹಾಗೆ ಇದೆ. ಅದಕ್ಕೆ ನಮ್ಮ ಕರುನಾಡಿನಲ್ಲಿ ಮಾತಿಗೆ ಮುಂಚೆ ೭ ಜ್ಞಾನಪೀಠಗಳ ಬಗ್ಗೆ ಪ್ರಸ್ತಾವ ಆಗುತ್ತದೆ, ಇನ್ನು ರಾಜ್ಯೋತ್ಸವ ಬಂದರೆ ಸಾಕು ಅವರ flex ಕಾಣಬಹುದು.

ಇದೇ ಕಾರೊಲಾರಿ ಇಟ್ಟುಕೊಂಡರೆ ನಮ್ಮ ಕನ್ನಡ ಭಾಷೆ ಇಂಗ್ಲೀಷಿಗಿಂತ ದೊಡ್ಡದು ಯಾಕೆ ಅಂದರೆ ನಮಗೆ ೭ ಜ್ಞಾನಪೀಠ ಬಂದಿದೆ, ಅದೇ ಇಂಗ್ಲೀಷಿಗೆ ಸೊನ್ನೆ ...lol

ಆ ಪ್ರಶಸ್ತಿ ಒಂದು ಖಾಸಗಿ ಕಂಪನಿ ಕೊಡುವ ಪ್ರಶಸ್ತಿ, ಅದು ಕೇವಲ ಸಾಹಿತ್ಯಕ್ಕೆ ಸಂಭಂದಿಸಿದ್ದು. ಭಾಷೆ ಅಂದರೆ ಕೇವಲ ಜುಟ್ಟಿನ ಮಲ್ಲಿಗೆ ಹೂವಿನ ಸಾಹಿತ್ಯ ಮಾತ್ರ ಅಲ್ಲ ಅಂತ ಶ್ರೀಯುತರು ಮನಗಾಣಬೇಕು. ಭವಿಷ್ಯತನಲ್ಲಿ ಅದರಲ್ಲೂ ಅಂತರ್ಜಾಲ ತಾಣದಲ್ಲಿ ತಮಿಳ್ ಯಾವ ರೀತಿ ಮುಂದುವರೆದಿದೆ ಅನ್ನೊ ಕಲ್ಪನೆ ಕೂಡ ಇಲ್ಲದೆ ಸಂಸ್ಕ್ರುತವನ್ನು ಸಮರ್ಥಿಸುವ ನೆಪದಲ್ಲಿ ಅದು ಬರಡಾಗಿದೆ ಅಂತ ಹೇಳಿದ್ದಾರೆ.

ಗಣಕೀಕರಣ ಮಾಡಬಹುದು ಅದಕ್ಕೆ ಸಂಸ್ಕ್ರುತವೇ ಸರಿಯಾದ (most scientific language) ಹೀಗೆ ಒಂದು ಸಾಲನ್ನು ನಮ್ಮ ವಿಚಾರವಂತರೂ ಗೊತ್ತಿಲ್ಲದೆ ,ಅರಿವಿಲ್ಲದೇ ಯಾಕೆ ಬರೆಯುತ್ತಾರೋ ನಾ ಕಾಣೆ. ಅಷ್ಟಕ್ಕೂ ಇದರ ಅರ್ಥ ಅವರಿಗಿದೇಯಾ , ಇದನ್ನು ಹೇಳುವಾಗ ಅವರು ಭಾಷೆ ಬಗ್ಗೆ ಹೇಳುತ್ತ ಇದ್ದರಾ ಇಲ್ಲ ಲಿಪಿ ಬಗ್ಗೆ ಹೇಳುತ್ತ ಇದ್ದಾರ ಗೊತ್ತಿಲ್ಲ. ಲಿಪಿ ಬಗ್ಗೆ ಇದ್ದರೆ, ನಮ್ಮದು ದೇವನಾಗಿರಿ ಲಿಪಿ ಅಲ್ಲ. ಇನ್ನು ಇದು ಕನ್ನಡಕ್ಕೆ ಯಾವ ರೀತಿ ಲಾಭವೋ ಅದನ್ನು ಯಾಕೆ ಉದಾಹರಿಸುತ್ತಾರೋ ನನಗೆ ಅರ್ಥ ಆಗುತ್ತಿಲ್ಲ.

ಸಾಮನ್ಯ ಜನ ನಾವು ಒಂದು ವಿಷ್ಯವನ್ನು ಅಂತರ್ಜಾಲ ತಾಣದಲ್ಲಿ ಅವರ ಭಾಷೆಯಲ್ಲಿ ತಿಳಿದುಕೊಳ್ಳಬೇಕು ಎಂದರೆ ಮೊದಲು ಮೊರೆ ಹೋಗುವುದು ವಿಕೀಪೀಡಿಯಾಗೆ. ಅದರಲ್ಲಿ ಕನ್ನಡ ೬೭೦೦ ಲೇಖನ ಇದ್ದರೆ, ತಮಿಳ್ ೧೯೧೦೦ ಲೇಖನ ಹೊಂದಿದೆ. ಅಂದರೆ ಸುಮಾರು ೩ ಪಟ್ಟು ನಮಗಿಂತ ಮುಂದೆ ಇದ್ದಾರೆ + ಆ ಭಾಷೆಯ ಜನರು ನಮಗಿಂತ ೧೩೦೦೦ ವಿಷ್ಯಗಳನ್ನು ತಮ್ಮ ಭಾಷೆಯಲ್ಲಿ ತಿಳಿದುಕೊಳ್ಳಬಹುದು. ಇನ್ನು ಪದಬಂಡಾರ ಬಗ್ಗೆ ಬರುವದಾದರೆ ತಮಿಳನಲ್ಲಿ ೯೮,೦೦೦ ಪದಗಳು ಇವೆ, ಇನ್ನು ಕನ್ನಡದಲ್ಲಿ ೨೭೦೦ ಚಿಲ್ಲರೆ ಪದಗಳು ವಿಕ್ಷನರಿಯಲ್ಲಿ ಸಿಗುತ್ತವೆ. ಅದರಲ್ಲೂ ಕನ್ನಡ ಪದಗಳು ಅಸಂಖ್ಯ ಧಾತುಗಳಿಂದ ಹುಟ್ಟಿದವೂ ಅಲ್ಲ, ಸಂಪೂರ್ಣ ಕನ್ನಡ ಪದಗಳೇ, ಅಂದರೆ ಸಂಸ್ಕ್ರುತದ ಕೊಡುಗೆ ಯಾವ ಮಟ್ಟಕ್ಕೆ ಇದೆ ಅಂತ ತಿಳಿಯತ್ತಲ್ಲವೇ ?

ಕನ್ನಡ ಪದಗಳನ್ನು ಹುಟ್ಟಿಸುವುದು ಹೇಗೆ ಅದಕ್ಕೆ ಸಂಸ್ಕುತದ ಬಾಲಕ್ಕೆ ಜೋತು ಬೀಳಬೇಕೆ ಅನ್ನೊದರ ಬಗ್ಗೆ ಭಾಷವಿಜ್ಞಾನಿ ಡಾ.ಶಂಕರಭಟ್ಟರು ತಮ್ಮ ಪುಸ್ತಕದಲ್ಲಿ ತೋರಿಸಿದ್ದಾರೆ. ಆದ್ದರಿಂದ ಕನ್ನಡಕ್ಕೆ ಸಂಸ್ಕ್ರುತ ಬೇಕೆ ಬೇಕು ಅನ್ನೊ ಕಾನೂನು ಇಲ್ಲ, ಹಾಗೆ ಇಲ್ಲದೇ ಬೆಳೆದಿರುವ ತಮಿಳ್ ನಮ್ಮ ಮುಂದೆ ಇಲ್ಲವೇ ??

* unicode costorium ಗೆ ನಮ್ಮ ಸರ್ಕಾರ ಸದಸ್ಯರಾಗಿಲ್ಲ, ನನಗೆ ಅನಿಸೊ ಹಾಗೆ ಅದು ಎನು ಅಂತ ಕೂಡ ನಮ್ಮ ಚಿಂತಕರಿಗೆ ಗೊತ್ತಿಲ್ಲ. ಅದೇ ತಮಿಳುನಾಡು ಸರಕಾರ ಆಗಿದೆ.

* ೧೨ ವರುಷಗಳಿಂದ , ೨ ವರುಷಕ್ಕೆ ಒಮ್ಮೆ ಅಂತರ್ಜಾಲದಲ್ಲಿ ತಮಿಳ್ ಅನ್ನುವ ಬಗ್ಗೆ ವಿಶ್ವಮಟ್ತದ ಸಭೆ ನಡೆಯುತ್ತದೆ, ಅದರಲ್ಲಿ ಅಂತರ್ಜಾಲ ತಾಣದಲ್ಲಿ ಇರುವ ಸವಾಲು ಮತ್ತು ಅದನ್ನು ಎದುರಿಸುವ ಬಗೆ ಚರ್ಚೆ ಆಗುತ್ತದೆ. ಅಂದರೆ ಮೇಲೆ ನಾನು ಹೇಳಿದ ವಿಷ್ಯಗಳು ಯಾಕೆ ತಮಿಳ್ ಭಾಷೆ ನಮಗಿಂತ ಮುಂದೆ ಇದೆ ಅನ್ನುವದಕ್ಕೆ ಸಾಕ್ಷಿ.

ಇದರಲ್ಲಿ ತಂತ್ರಜ್ಞಾನ ಮಾಡುವರು, ವಿಶ್ವವಿದ್ಯಾನಿಲಯದ ವಿಧ್ಯಾರ್ಥಿಗಳಿಂದ ವಿಶ್ವಮಟ್ಟದ ಅವಿಷ್ಕಾರಗಳಿಗೆ ಪೇಪರ್ ಕರೆಯಲಾಗುತ್ತದೆ, ಆಯ್ಕೆಯಾದ ವಿಷ್ಯಗಳನ್ನು ಆ ಸಭೆಯಲ್ಲಿ ಮಂಡಿಸಲಾಗುತ್ತದೆ.

E-Government,Education Technology,Database driven applications,
Mobile and hand-held technologies,Tamil Optical Character Recognition,
Machine Translation, Spell Checking and Speech Recognition,
Tamil in Indic language cluster and multi-lingual environments,Tamil Character Encoding Standards,Multilingual Domain Names

ಹೀಗೆ ನಾವು ಮುನ್ನೆಡೆಯಲು ಮತ್ತು ನಮ್ಮ ದೈನಂದಿನದಲ್ಲಿ ಮತ್ತು ಹೊಸ ತಂತ್ರಜ್ಞಾನದಲ್ಲಿ ತಮಿಳ್ ತರುವುದು ಹೇಗೆ ಅಂತ ಮೇಲೆ ಹೇಳಿರುವ ಪ್ರಮುಖ ವಿಷಯಗಳ ಅಡಿಯಲ್ಲಿ ಚರ್ಚೆ ಮಾಡಲಾಗುತ್ತದೆ. ಇದಕ್ಕೆ ವಿಶ್ವದಿಂದ ಎಲ್ಲಾ ಪಂಡಿತರು ಬರುತ್ತಾರೆ.
ಮೇಲೆ ಹೇಳಿರುವುದು ಬರಿ tip in iceberg ಅಷ್ತೆ, ಡಿಜಿಟಲ್, open source ಅಷ್ಟು ಯಾಕೆ ತಮಿಳ್ ವರ್ಚುಯಲ್ ವಿಶ್ವವಿದ್ಯಾಲಯ ಕೂಡ ಮಾಡಿಕೊಂಡು ನಮಗಿಂತ ಬಹಳ ಮುಂದೆ ಇದ್ದಾರೆ.

ಚಿಂತೆ ಬೇಡ, ಸಂಸ್ಕ್ರುತದ ಪುಸ್ತಕದಲ್ಲಿ ಇದಕ್ಕೆ ಒಂದು ಮಂತ್ರ ಇದೆ, ಅದನ್ನು ಓದಿದರೆ ಇವೆಲ್ಲ ೫ ನಿಮಿಷದ ಕೆಲ್ಸ ಅಂತ ನಂಬಿರುವ
ನಾವು ಇನ್ನು ಮಂತ್ರದಿಂದ ಅಭಿವೃದ್ದಿಯ ಮಾವಿನಕಾಯಿ ಉದುರಿಸುವದರಲ್ಲೇ ಇದ್ದೇವೆ.

ಆ ಮಂತ್ರ ತಿಳಿಯಲು, ಉತ್ತುಂಗಕ್ಕೆ ಹೋಗಲು ನಮಗೆ ಸಂಸ್ಕುತ ವಿಶ್ಯವಿದ್ಯಾಲಯ ಬೇಕೆ ಬೇಕು.

3 comments:

Me, Myself & I said...

ಆತ್ಮೀಯ ಪವ್ವಿಯವರೇ

ಚೆನ್ನಾಗಿ ವಿವರಿಸಿದ್ದೀರಾ! ಸ್ವಲ್ಪ ಸ್ವಲ್ಪ ಅವೆಶದಲ್ಲಿಯೂ ಮಂಡಿಸಿದ್ದೀರ.

ನಾನು ಸಹ ನನ್ನ ಬ್ಲಾಗ್ ನಲ್ಲಿ ಇದಕ್ಕೆ ಸಂಬಂದ ಪಟ್ಟ ಬರಹವನ್ನೇ ಪ್ರಕಟಿಸಿರುವೆ. .ದಯವಿಟ್ಟು ಸಾಧ್ಯವಾದಲ್ಲಿ ಒಮ್ಮೆ ಓದಿ. http://bennemasaladose.blogspot.com/2009/09/blog-post.html

ಆದರೆ ನಿಮ್ಮ ಬರಹ ಸಂಸ್ಕೃತ ಭಾಷೆಯ ವಿರುದ್ದವೋ ಅಥವಾ ನೀವು ಅಂಟಿಸಿರುವ ಶ್ರೀನಿವಾಸ್ ಅವ್ರ ಲೇಖನದ ವಿರುದ್ದವೋ ಅಥ್ವಾ ಕರ್ನಾಟಕ ಸರ್ಕಾರದ ವಿರುದ್ದವೋ ತಿಳಿಯುತ್ತಿಲ್ಲ..

ಪವ್ವಿ said...

ನಮಸ್ಕಾರ ಲೋದ್ಯಾಶಿ,
ಇದರಲ್ಲಿ ಆವೇಶವೇನು ಇಲ್ಲ ಮತ್ತು ಯಾರ ವಿರುದ್ಧವು ಅಲ್ಲ, ನಮ್ಮ ಮುಂದೆ ಇಷ್ಟೊಂದು ಕೆಲ್ಸ ಇರುವಾಗ ಇದರ ಅವಶ್ಯಕತೆ ಬಗ್ಗೆ. ಇದನ್ನು ಸಮರ್ಥನೆಗೆ ಕೊಡುತ್ತಿರುವ ಕಾರಣ ಮತ್ತು ಕನ್ನಡಕ್ಕೆ ಇದರಿಂದ ಉದ್ದಾರ ಆಗೊತ್ತೆ ಅನ್ನೊ ಮಾತುಗಳು ಕೇವಲ ಮೂಗಿಗೆ ತುಪ್ಪ ಸವರುವ ಕೆಲ್ಸ ಆಗಿದೆ. ಬೇಕಿದ್ದರೆ ನಮ್ಮ ಧರ್ಮ ಉಳಿಸಲು ಮಾಡುತ್ತ ಇದ್ದೇವೆ ಅಂತ ಹೇಳಲಿ ಇಲ್ಲ ಬೇರೆ ಧರ್ಮಕ್ಕೆ ಇಷ್ಟೊಂದು ಹಣ ವ್ಯಯ ಮಾಡುತ್ತ ಇದ್ದೀವಿ ಇದಕ್ಕೂ ಮಾಡ್ತಿವಿ ಅಂತ ನಿಜ ಹೇಳಲಿ, ಅದನ್ನು ಬಿಟ್ಟು ಸುಮ್ಮನೆ ಇದರಿಂದ ಕನ್ನಡ ಉದ್ದಾರ ಆಗೊತ್ತೆ, ನೋಬೆಲ್ ಪ್ರಶಸ್ತಿ ಬರೊತ್ತೆ ಅಂತ ಬೊಗಳೆ ಬೇಡ, ನಿಜ ಕೇಳೋಣ ಅಲ್ಲವೇ ?

Me, Myself & I said...

ನಮಸ್ಕಾರ ಪ್ರವೀಣ್ ಸರ್,

ನೀವು ಹೇಳ್ತಿರೋದು ಸತ್ಯ.
ಇಲ್ಲಿ ಯಾರೂ ಭವಿಷ್ಯವನ್ನ ನೋಡಿ ಬಂದಿಲ್ಲ. ಅಲ್ಲವೇ? ಹಾಗಾಗಿ ನಿಮ್ಮ ಪ್ರಶ್ನೆಗೆ ಅತಿ ಸೂಕ್ತವಾದ ಉತ್ತರ ನೀಡೋದು ಯಾರಿಗೂ ಸ್ವಲ್ಪ ಕಷ್ಟನೆ