Tuesday, May 23, 2006
ಭಾರತವನ್ನು ಆಳಿದ ಕನ್ನಡ ಅರಸರು .....
ಇತಿಹಾಸವನ್ನು ಒಮ್ಮೆ ಅವಲೋಕಿಸಿದರೆ ನಮಗೆ ಕಾಣುವುದು ನಮ್ಮ ಕನ್ನಡ ದೇಶದ ಅರಸು ಮನೆತನಗಳು ಇಂದಿನ ಭಾರತದ ಮೂಲೆ ಮೂಲೆಗೆ ಹೋಗಿ ಅಲ್ಲಿ ಆಳಿ ಬಾಳಿದವರು ಅಂತ. ಇಂತಹ ವಲಸೆಗೆ ಅನೇಕ ಕಾರಣಗಳು ನಮಗೆ ಕಂಡು ಬರುತ್ತದೆ, ಪುಲಕೇಶಿಯ-೨ ಕಾಲದಲಿ ಚಾಲುಕ್ಯರ ಒಂದು ಶಾಖೆಯನು ಇಂದಿನ ಗುಜರಾತಿನಲ್ಲಿ ಇಟ್ಟಿದ್ದರು,ಅಂದರೆ ರಾಜ್ಯ ವರ್ಧನೆಯಾಗಿ ಇದು ಆದರೆ, ಕರ್ನಾಟ ಸೇನರದು ಬೇರೆ, ಇವರು ಇಂದಿನ ಬೆಂಗಾಲ ಮತ್ತು ಹಿಮಾಚಲ ಪ್ರದೇಶಗಳನ್ನು ಆಳಿದರು. ಇವರು ತಮ್ಮ ನೆರೆಹೊರೆಯವರ ಆಕ್ರಮಣಕ್ಕೆ ಬೇಸರ ಹೊಂದಿ ಬೆಂಗಾಳಕ್ಕೆ ಹೋದರು. ಅಲ್ಲಿ ನೆಲಸಿ ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಅಲ್ಲಿನ ವಂಗ ಪ್ರಜೆಗಳಲ್ಲಿ ತಂದರು.
ಕಾಲಕ್ರಮೇಣ ನಮ್ಮ ಭಾಷೆಯನ್ನು ಬೆಂಗಾಲಿ ಜೊತೆ ಸೇರಿಸಿಕೊಂಡು ಮಾತನಾಡಲು ಆರಂಭಿಸಿದರು.ಮುಂದೆ ಹಿಮಾಚಲಕ್ಕೆ ಹೋದಾಗ ಅಲ್ಲಿನ ಹುಡುಗಿಯರನ್ನು ಮದುವೆಯಾಗಿ ಹಿಂದಿಯನ್ನು ತಮ್ಮ ಭಾಷೆಯಾಗಿ ಬಳಸಿಕೊಂಡರು, ಅಲ್ಲಿಗೆ ಕನ್ನಡದ ಜೊತೆ ಇದ್ದ ನಿಕಟ ಸಂಪರ್ಕ ಮುರಿದು ಬಿತ್ತು.
ಈ ಸೇನ ವಂಶದವರು ಚಿಕ್ಕಮಂಗಳೂರು ಜಿಲ್ಲೆಯ ಮತ್ತು ಶಿವಮೊಗ್ಗ ಜಿಲ್ಲೆಯ ಕೊಪ್ಪ ತಾಲೂಕಿನ ಪ್ರದೇಶಗಳನ್ನು ಕ್ರಿ.ಶ ೭ ಶತಮಾನದಿಂದ ೧೧ ಶತಮಾನದವರೆಗೆ ಆಳಿದರೆಂದು ಹೇಳುತ್ತಾರೆ.ಇವರು ಕಲ್ಯಾಣ ಚಾಲುಕ್ಯರ ಸಾಮಂತರಾಗಿದ್ದರು ಮತ್ತು ಖಚರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಅಂತ ಅನೇಕರ ಅಭಿಪ್ರಾಯ. ೧೧ನೇ ಶತಮಾನದಲ್ಲಿ ಸಾಮಂತಸೇನನು ಅಂತರಿಕ ಆಕ್ರಮಣಗಳನ್ನು ಹಿಮ್ಮೆಟ್ಟುವಲ್ಲಿ ವಿಫಲನಾಗಿ ಬೇಸತ್ತು ಬೆಂಗಾಲಕ್ಕೆ ಬಂದ ಅಂದು ಹೇಳುತ್ತಾರೆ. ಮುಂದೆ ಇವರ ವಂಶದ ಹೇಮಂತಸೇನ ಬಿಜೋಯಸೇನ,ಬಲ್ಲಾಳಸೇನ ಮುಂತಾದವರು ತಮ್ಮ ರಾಜ್ಯವನ್ನು ವಿಸ್ತರಿಸಿದರು.ಗಮನಿಸಿದರೆ, ಬಲ್ಲಾಳ ಎನ್ನುವ ಪದ ಹೋಯ್ಸಳರ ಬಲ್ಲಾಳ ಬಣದಿಂದ ಬಂದಿರಬಹುದು ಎಂದು ಅನಿಸುತ್ತದೆ. ಇ ಬಲ್ಲಾಳಸೇನನು ಬೆಂಗಾಲ್ ಮತ್ತು ಆಸ್ಸಾಂ ಆಳಿದನೆಂದು ಹೇಳಲಾಗಿದೆ.ಮುಂದೆ ಬೆಂಗಾಲ್‍ಗೆ ಮುಸ್ಲಿಂ ಆಕ್ರಮಣ ಹೆಚ್ಚಾದಾಗ ಹಿಮಾಚಲಪ್ರದೇಶ ಕಡೆ ವಲಸೆಹೋದರು. ಅಲ್ಲಿ ಸೇನಾವಂಶದ ಸಂಸ್ಥಾಪಕ ಬೀರಸೇನನು.
ಹೀಗೆ ನಮ್ಮ ಕನ್ನಡಿಗರಿಗೆ ನಮ್ಮನ್ನು ಆಳಿದವರು ಗೊತ್ತೆ ವಿನಹ ನಾವು ಯಾರನ್ನು ಆಳಿದಿವಿ ಎಂದು ತಿಳಿದಿಲ್ಲ.ಅದಕ್ಕೆ ನೋಡಿ ಕನ್ನಡದ ಎಷ್ಟು ಪದಗಳು ಗುಜರಾಥಿ ಮತ್ತು ಬೆಂಗಾಲಿಯಲ್ಲಿ ಕಂಡು ಬರುತ್ತವೆ.
ಕನ್ನಡದಿಂದ ಗುಜರಾಥಿಗೆ:- ಮೋಜು,ಕಾಥಿ,ಮಾಳೊ ..
ಕನ್ನಡದಿಂದ ಬೆಂಗಾಲಿಗೆ:- ವಾಶಲ ನಮ್ಮ ವಾಗಿಲ್ ಎಂಬ ಪದದಿಂದ ಹುಟ್ಟಿರುವುದು.
ಬೆಂ -- ಕನ್ನಡ
ನಿರಾಲ- ನೆರಳು
ಖಟವ - ಕಟ್ಟಿಗೆ
ಕಟಾಲ್ - ಕಡಲು
ತೋಡ - ತೋಡೆ
ಕಲ್ಲ - ಕಳ್ಳ
ಹೀಗೆ ಸಾಲು ಸಾಲು ಪದಗಳನ್ನು ಕೊಡಬಹುದು. ಅಲ್ಲಿನ ಭಾಷೆಯ ಮೇಲೆ ನಮ್ಮ ಪದಗಳ ಛಾಯೆ ಕಾಣಸಿಗುತ್ತದೆ.
ಅಷ್ಟೆ ಅಲ್ಲ, ಅಲ್ಲಿನ ದುರ್ಗಾಪೂಜೆಯನ್ನು ಹೇಳಿಕೊಟ್ಟವರು ನಮ್ಮ ಕನ್ನಡಿಗರೇ.
(ಕೃಪೆ :- ಹಿಮಾಲಯವನ್ನಾಳಿದ ಕನ್ನಡ ಸೇನರು)