ಕನ್ನಡಿಗರಿಗೆ ಉದ್ಯೋಗ ಕ್ಷೇತ್ರದಲ್ಲಿ ದಶಕಗಳಿಂದ ಅನ್ಯಾಯವಾಗುತ್ತಿದೆ,ಇದನ್ನು ಕಂಡು ಕಾಣದ ಹಾಗೆ ಕನ್ನಡಿಗ ಇದ್ದ.
ಕಾಲಕ್ರಮೇಣ ಕನ್ನಡಿಗರು ಸಂಘಟನೆಯಾಗಿ ಇದನ್ನು ಪ್ರಶ್ನಿಸಲು ಆರಂಭಿಸಿದರು. ಮೊದಲು ನೇರವಾಗಿ
ಅನ್ಯಾಯ ಮಾಡುತ್ತಿದ್ದ ಪರಭಾಷಿಕ ಹಿಂದಿನ ಬಾಗಿಲನ್ನು ಹಿಡಿದು ತನ್ನವರಿಗೆ ಕೆಲ್ಸ ಕೊಡಿಸುವ ಕಾರ್ಯ ಮುಂದುವರೆಸುತ್ತಲೆ ಬಂದ.
ಈಗಲೂ ಕೂಡ ಇದು ಸಾಗಿದೆ. ವಲಸೆಯು ಮುಂದುವರೆಯುತ್ತಲೆ ಇದೆ, ಇದರ ದುಷ್ಪರಿಣಾಮ ನಮ್ಮ ನೆಲದಲ್ಲಿ
ಅರ್ಹತೆ,ಓದು ಇರುವ ಕನ್ನಡಿಗ ನಿರುದ್ಯೋಗಿಯಾಗಿದ್ದಾನೆ.
೧೯೮೦ ದಶಕದಲ್ಲಿ ಗೋಕಾಕ್ ಚಳುವಳಿಯ ಯಶಸ್ಸಿನಲ್ಲಿ ಕನ್ನಡಿಗ ತನ್ನ ಉದ್ಯೋಗದ ಹಕ್ಕನ್ನು ಪಡೆಯಲು
ಹೋರಾಟ ನಡೆಸಿದ. ಅದರ ಫಲವೇ ಸರೋಜಿನಿ ಮಹಿಷಿ ವರದಿ.
* ಇದನ್ನು ಯಾರು ನೇಮಿಸಿದರು ಮತ್ತು ಇದರ ಉದ್ದೇಶಗಳೇನು ?
ಇದನ್ನು ನಮ್ಮ ಕರ್ನಾಟಕದ ಸರ್ಕಾರ ರಚಿಸಿತು. ಕನ್ನಡಿನಿಗೆ ಕರ್ನಾಟಕದಲ್ಲಿ ಉದ್ಯೋಗದಲ್ಲಿ ಸಿಂಹಪಾಲು ಮತ್ತು
ಅವನಿಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ಈ ಸಮಿತಿ ಶಿಫಾರಸು ಮಾಡಿತು.
* ಸಮಿತಿಯಲ್ಲಿ ಯಾರಿದ್ದರು.
ಸಮಿತಿಯ ಅಧ್ಯಕ್ಷರು :- ಸರೋಜಿನಿ ಮಹಿಷಿ
ಅವರ ಜೊತೆಗೆ
* ಸಿದ್ಧಯ್ಯ ಪುರಾಣಿಕ
* ಹನುಮಾನ್
* ಸತ್ಯ
* ಪ್ರಭಾಕರ ರೆಡ್ದಿ
* ನಾರಯಣ ಕುಮಾರ್
ಇದ್ದರು.
* ಈ ಸಮಿತಿ ಎನು ಮಾಡಿತು ?
ಇದು ೩ ವರ್ಷಗಳ ಕಾಲ ಕರ್ನಾಟಕದ್ಯಾಂತ ಪ್ರವಾಸ ಮಾಡಿ ವಿವಿಧ ಉದ್ಯಮ ಕ್ಷೇತ್ರದಲ್ಲಿ
ಕನ್ನಡಿಗರ ವಿವರವನ್ನು ಪಡೆದು ಒಂದು ಶಿಫಾರಸು ಮಾಡಿ ಸರ್ಕಾರಕ್ಕೆ ಸಲ್ಲಿಸಿತು.
* ಮುಖ್ಯ ಶಿಫಾರಸ್ಸು ಎನು ?
-೧- ಅರ್ಹತೆಯುಳ್ಳ ಸ್ಥಳೀಯ ಅಭ್ಯರ್ಥಿಗಳು ಲಭ್ಯವಿರುವಾಗ ಉದ್ಯೋಗಾವಕಾಶದಲ್ಲಿ ಅವರಿಗೆ ಮೊದಲ ಆಧ್ಯತೆ
ಮತ್ತು ಹೆಚ್ಚಿನ ಭಾಗ ಅವರಿಗೆ ದೊರಕಬೇಕು.
-೨- ಕೇಂದ್ರ ಸರಕಾರೀ ವಲಯದ ಉದ್ಯಮದಲ್ಲಿ ಕನ್ನಡಿಗರಿಗೆ ಸಲ್ಲತಕ್ಕ ಉದ್ಯೋಗ ಪ್ರಮಾಣ ಹೀಗೆ ಇರಬೇಕು.
॑ ಗ್ರೂಪ್ ಡಿ - ೧೦೦ %
॑ ವೇತನ ೧೨೫೦ ಇರುವ ತನಕ - ೮೦%
॑ ನೇರ ನೇಮಕಾತಿಯಲ್ಲಿ - ೬೫%
-೩- ರಾಜ್ಯ ಸರ್ಕಾರದ ಉದ್ಯಮಗಳಲ್ಲಿ ಉನ್ನತ ಮಟ್ಟದ ತಾಂತ್ರಿಕ ಅರ್ಹತೆಯುಳ್ಳವರು ದೊರಯದೆ ಇರುವಾಗ
ಅಂತ ಕೆಲ್ಸವನ್ನು ಬಿಟ್ಟು ಉಳಿದ ಎಲ್ಲಾ ಕೆಲಸಗಳಲ್ಲಿ ಕನ್ನಡಿಗರಿಗೆ ಆದ್ಯತೆ ಕೊಡಬೇಕು.
-೪- ಖಾಸಗಿ ಉದ್ಯಮಗಳು ರಾಜ್ಯ ಸರಕಾರದಿಂದ ಕಡಿಮೆ ದರದಲ್ಲಿ ನೆಲ,ಜಲ, ವಿದ್ಯುತ್ ಮುಂತಾದ
ಸೌಲಭ್ಯಗಳನ್ನು ಪಡೆದಿರುವದರಿಂದ , ಅವರ ಮೇಲೆ ಒತ್ತಡ ಹಾಕಿ ಕನ್ನಡಿಗರನ್ನು ನೇಮಿಸುವಂತೆ ಕಡ್ಡಾಯ ಮಾಡಬೇಕು.
-೫- ಉದ್ಯಮಗಳಲ್ಲಿ ಟೈಪಿಸ್ಟ ಮತ್ತು ಅಪ್ರಟಿಂಸ್ ಕೆಲ್ಸಗಳನ್ನು ಸರ್ಕಾರದ ಉದ್ಯೋಗ ವಿನಿಮಯ ಕೇಂದ್ರದಿಂದ ತೆಗೆದುಕೊಳ್ಳಬೇಕು.
-೬- ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಹೆಸರು ನೋಂದಾಯಿಸುವ ಮೊದಲು ಅಭ್ಯರ್ಥಿಗಳು ೧೫ ವರುಷ ರಾಜ್ಯದಲ್ಲಿ
ವಾಸ ಮಾಡಿದ್ದಾರೆ ಎಂಬುದನ್ನು ಈ ಕೆಲ ದಾಖಲೆಗಳನ್ನು ಪರಿಶೀಲಿಸಬೇಕು.
॑॑ ಶಾಲೆಯ ಸರ್ಟಿಫೀಕೆಟ್
॑॑ ಪಡಿತರ ಚೀಟಿ
॑॑ ಮತದಾರರ ಪಟ್ಟೆ
॑॑ ಜನ್ಮದಾಖಲೆ
-೭- ೧೦೦ಕ್ಕಿಂತ ಕೆಲಸಕ್ಕೆ ಹೆಚ್ಚು ಇರುವ ಸಂಸ್ಥೆಗಳಲ್ಲಿ ರಾಜ್ಯದ ಪ್ರತಿನಿಧಿ ಇರಬೇಕೆಂದು ಆ ಉದ್ಯಮಗಳಲ್ಲಿ
ಒತ್ತಡವನ್ನು ತರಬೇಕು.
--೮- ಉದ್ಯಮಗಳಲ್ಲಿ ನೌಕರ ಮಕ್ಕಳಿಗೆ ಆದ್ಯತೆ ಕೋಡುವದನ್ನು ಮೊದಲು ನಿಲ್ಲಿಸಬೇಕು.
-೯- ಸರಕಾರದಲ್ಲಿರುವ ಪ್ರಮುಖ ಸ್ಥಾನಗಳಲ್ಲಿ ನೇಮಿಸುವಾಗ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ
ಕಳಕಳಿ ಇರುವರನ್ನು ನೇಮಿಸಬೇಕು.
--೧೦-- ಲೋಕಸೇವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಪತ್ರಿಕೆಯನ್ನು ಕಡ್ಡಾಯ ಮಾಡಬೇಕು.
ಕನ್ನಡ ಪತ್ರಿಕೆಯಲ್ಲಿ ಅನುತೀರ್ಣರಾದವರು ಅನರ್ಹರು ಎಂದು ನಿಯಮಗಳನ್ನು ತಿದ್ದುಪಡಿ ಮಾಡಬೇಕು.
ಒಟ್ಟು ಎಷ್ಟು ಶಿಫಾರಸ್ಸು ಇದ್ದವು.??
ಒಟ್ಟು ೫೮ ಶಿಫಾರಸ್ಸು ಇದ್ದವು, ಅವುಗಳಲ್ಲಿ ೫೪ ಸರ್ಕಾರವೇ ಮಾಡಬಹುದಿತ್ತು, ಆದರೂ ನಮ್ಮ ಘನ ಸರ್ಕಾರ ಇನ್ನೂ ಮಾಡಿಲ್ಲ.
ಸರ್ಕಾರ ಬದಲಾಯಿತು ಆದರೆ ಇದನ್ನು ಅನುಷ್ಟಾನ ಮಾಡುವ ದಮ್ ಒಂದು ಸರ್ಕಾರಕ್ಕು ಬರಲಿಲ್ಲ.