ಬಹು ನಿರೀಕ್ಷೆಯ ಗಾಳಿಪಟ(gaaliapata) ಚಿತ್ರ ತೆರೆ ಕಂಡಿದೆ, ೩-೪ ದಿನಗಳ ಮುಂಚೆಯೆ ಎಲ್ಲಾ ಪ್ರದರ್ಶನಗಳಿಗೆ ಬುಕ್ ಆಗಿತ್ತು. ಹಾಗೂ ಹೀಗೂ ತೆರೆಕಂಡ ಮರುದಿನ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು. ಎಲ್ಲರಿಗೂ ಇದ್ದ್ದ ಹಾಗೆ ನನಗೂ, ಚಿತ್ರ ಹೇಗೆ ಮೂಡಿ ಬಂದಿರೊತ್ತೆ, ಮುಮ ತರ ಕಚಗುಳಿ-ಚಳಿ ಇಡುವ ಮಾತುಗಳು ಇರುತ್ತದೆಯಾ ?. ಹಾಡುಗಳನ್ನು ಹೇಗೆ ಚಿತ್ರಿಸಿದ್ದಾರೆ ಅಂತ ಮನಸಲ್ಲಿ ಯೋಚಿಸುತ್ತ ಚಿತ್ರ ನೋಡಲು ನಾ ಕೂತೆ.
ಗಾಳಿಪಟದ ಹಾಡಿನಲ್ಲಿ ಶುರುವಾಗುವ ಚಿತ್ರದಲ್ಲಿ ಗಣೀ ಹೆಸರಲ್ಲಿ ಗಣೇಶ(Ganesh), ಕಿಟ್ಟಿ ಹೆಸರಲ್ಲಿ ರಾಜೇಶ , ದಿಗು ಹೆಸರಲ್ಲಿ ದಿಗಂತ್ ಅವರ ಪ್ರವರವನ್ನು light ಆಗಿ ಪರಿಚಯ ಮಾಡಿಕೊಳ್ಳುತ್ತಾರೆ. ಎಂ.ಎಲ್.ಎ ಮಗ ಗಣೀ, ದುಡ್ಡಿನ ಅಭಾವ ತಿಳಿಯದ ಅಬ್ಬೆಪಾರಿ , ಅವನು
ಬೆಂಗಳೂರಿನಲ್ಲಿ ಗೆಳೆಯರ ಜೊತೆ ಇರುತ್ತಾನೆ, ಇವರಲ್ಲಿ ಒಬ್ಬರೂ ಒಂದು ವೃತ್ತಿಯಲ್ಲಿ ಇರುವದಿಲ್ಲ. MBA ಓದಿರುವ ಗಣೀ, Enggr ಆಗಿರುವ ಕಿಟ್ಟಿ, ಭಾವಿ ಡಾಕ್ಟರ್ ದಿಗು ಒಂದು ದೇಹ ಮೂರು ಜೀವ ಅಂತೆ ಇರುವ ಇವರು ಎಲ್ಲಾ ಕೆಲ್ಸಗಳನ್ನು ಒಟ್ಟಿಗೆ ಮಾಡುತ್ತಾ ಇರುತ್ತಾರೆ.
ಒಂದು ದಿನ ಬೆಂಗಳೂರಿನ ಜೀವನ ಬೇಸರವಾಗಿ , ಬೇರೆ ಎಲ್ಲಾದರೂ ದೂರ ಹೋಗೋಣ ಅಂತ ಅನಿಸಿ ಹೊರಡುವುದೇ ದಿಗು ಅಜ್ಜನ ಮನೆಗೆ. ಆ ಊರು ಪ್ರಕೃತಿಯ
ಉಡುಗೊರೆ ತರಹ ಇರುತ್ತದೆ, ಎಲ್ಲಿ ನೋಡಿದರು ಕೈಗೆ ಸಿಗುವ ಮೊಡದಿಂದ ಮುಗಿಲು** ಹೆಸರು ಬಂದಿತು ಅಂತ ಹೇಳುವುದು ಸರಿಯಾಗಿದೆ.
ದಿಗು ಅಜ್ಜನ ಮನೆಯ ಪಕ್ಕದ ಮನೆಯೇ ಕೊದಂಡ ರಾವ್( ಅನಂತ್ ನಾಗ್) ಅವರ ಮನೆ. ಒಂದು ಹಂದಿಯ ಬೇಟೆಯಲ್ಲಿ ಎಟು ಬಿದ್ದು ಕಾಲಿನ ಮೇಲೆ ಸ್ವಾದಿನ ತಪ್ಪಿಸಿಕೊಂಡು ಕುಂಟ ಆಗಿರುತ್ತಾನೆ. ಅವರಿಗೆ ಆ ಮೂರು ರಾಜಕುಮಾರಿಗಳು, ಇವರು ಕೂಡ ಮೂರು ತದ್ವಿರುದ್ದ ಗುಣಗಳ ಹುಡುಗಿಯರು. ಮಾತಿಗೆ ಮುಂಚೆ ಛೀ..ತೂ ಅನ್ನುತ್ತ ಗಂಡುಬೀರಿ ತರ ಇರುವ ರಾಧ( ನೀತು) ಗಮನ ಸೆಳೆದರೆ, ತುಂಟಿ,ತರಲೆಯಾಗಿ ಪಾವನಿ ಇರುತ್ತಾಳೆ. ಇವರಿಗೆ ಕಿರಿಕಿರಿ ಮಾಡುವದಕ್ಕೆ, ಅಪರೂಪಕ್ಕೆ ಒಮ್ಮೆ ನಗುವ ಗಂಟುಮುಖದ ಸೌಮ್ಯ(ಡೈಸಿ) ಸಿಗುತ್ತಾರೆ.
ಮುಂದೆ ಕಥೆ ಬರದಿಂದ ಸಾಗುತ್ತದೆ...ಅಲ್ಲಿ ಅವರು ನೋಡುವ ಸ್ಥಳಗಳು, ಹುಡುಗಿಯರ ಜೊತೆ ಈ ಹುಡುಗರ ಓಡನಾಟಗಳು. ಹಂದಿಯನ್ನು ಬೇಟೆಯಾಡುವ ಸನ್ನೀವೇಶಗಳಲ್ಲಿ ತೋರಿಸಿದ ಹಸಿರಿಂದ ಕಣ್ ಸೆಳೆಯುತ್ತಾರೆ. ನಿರೀಕ್ಷೆಯಂತೆ, ಮೂವರು ಹುಡುಗಿಯರನ್ನು ಈ ಮೂವರು ಹುಡುಗರು ಪಟಾಯಿಸುವ, ಆ ವಿಷಯಕ್ಕೆ ತಲೆ ಕೆಡಸಿಕೊಂಡು ಹಾಡುವ, ಒದ್ದಾಡುವ ಸನ್ನೀವೇಶಗಳು ಹಾದು ಹೋಗುತ್ತವೆ.
ಎಲ್ಲಾ ಶುಭಂ ಆದರೆ ಜನ ಮೆಚ್ಚಕಿಲ್ಲ ಅಂತ ನಮ್ಮ ಯೋಗಿಯವರಿಗೆ ಗೊತ್ತಿದೆ, ಅದಕ್ಕೆ ೨ ಹುಡುಗರ ಪ್ರೀತಿ ಯಶಸ್ವಿಯಾಗಿ ಮತ್ತೊಮ್ಮೆ ಲೀಟರ್ ಗಟ್ಟಲೆ ಕಣ್ಣೀರು ಸುರಿಸಿ ದೇವದಾಸ್ ಆಗುವ ಪಾತ್ರ ಗಣೀಗೆ ಕೊಟ್ಟಿದ್ದಾರೆ. ಎಂದಿನಂತೆ ಗಣೇಶ್ ಸಹಜವಾಗಿ ಗೆಲ್ಲುತ್ತಾರೆ.
ಚಿತ್ರದ ಮುಖ್ಯ ಅಂಶಗಳು
* ಕಾಡು ಹಂದಿಯಲ್ಲಿ ಬಳಸಿರುವ ತಂತ್ರಜ್ಞಾನ ತುಂಬ ಸಹಜಾವಾಗಿ ಇದೆ, ಆದರೆ ೭೫ ಲಕ್ಷಕ್ಕೆ ಮೋಸ.
* ಕಾರ್ಯಕಾರಿ ನಿರ್ಮಾಪಕ ದಯಾಳ್ ಕೂಡ ಡ್ರಾಕುಲಾ ಪಾತ್ರದಲ್ಲಿ ಮಿಂಚಿದ್ದಾರೆ.
* ಎಂದಿನಂತೆ ಇಲ್ಲೂ ಹೊಸ ಜಲಪಾತದ ಟಾಪ್ ವ್ಯೂ ಇದೆ.
* ಕರ್ನಾಟಕದ ನೋಡಿರದ ರಮ್ಯ ರಮಣೀಯ ಪ್ರದೇಶಗಳ ಚಿತ್ತಿಕರಣ ಇದೆ.
* ಪಂಚಿಗ್ ಸಂಭಾಷಣೆಗಳೂ ಪ್ರತಿ ಫ್ರೇಮಗೆ ಇದೆ.
* ಸುಮಧುರ ಹಾಡುಗಳು ಇವೆ.
* ಗಣೇಶ್ ಅವರ ಬಾಯಿಂದ ಉದರುವ ಅಣಿಮುತ್ತುಗಳೂ, ಖಂಡಿತಾ ಕಚಗುಳಿ ಇಡುವದರಲ್ಲಿ ಸಂದೇಹವೇ ಇಲ್ಲ.
* ೧೦೦ ಯಕ್ಶಗಾನ ಕಲಾವಿದರನ್ನು ಹಾಡಿನಲ್ಲಿ ಬಳಸಿದ್ದಾರೆ.
ಚಿತ್ರದ ಬಗ್ಗೆ ತಪ್ಪು ಅಭಿಪ್ರಾಯಗಳು ಹೀಗೆ ಮೂಡಬಹುದು, ಆದರೆ ಯಾವ ಅಭಿಪ್ರಾಯವೂ ಗಟ್ಟಿ ಇಲ್ಲಾ. ಸುಮ್ಮನೇ ಮೊಸರಲ್ಲಿ ಕಲ್ಲು ಹುಡೂಕುವ
ಕೆಲ್ಸ ಅಷ್ಟೇ ...
* ಚಿತ್ರ ಮುಂಗಾರು ಮಳೆ ತರ ಇಲ್ಲಾ.
* ೩ ಹುಡುಗರ ಕಥೆಗೆ ದಿಲ್ ಚಾಹತಾ ಹೈ ಸ್ಪೂರ್ತಿ.
* ನಿರ್ದೇಶನದ ಮೇಲೆ ಹಿಡಿತ ಇಲ್ಲಾ
* ಹಂದಿಯಲ್ಲಿ ವರಾಹಾ ಅವತಾರ ಕಾಣುವುದು ಸರಿಯಾ ?
* ಕುಂಟನಿಗೆ ಕಾಲು ಬರುವುದು, ಬೆನ್ನಿಹೇನ್ ಪವಾಡವ ?
* ಜನರಿಗೆ ಭ್ರಮನಿರಸನ ಆಗುತ್ತದೆ...ವಗೈರಾ ...
ಮತ್ತೊಮ್ಮ ಯೋಗಿ(Yogiraj bhat) ತಂಡ ಗೆದ್ದಿದೆ ಎಂದು ಹೇಳಬೇಕು. ಚಿತ್ರ ನೋಡಿಲ್ಲ ಅಂದರೆ ಮತ್ತೆಕೆ ತಡ...