Friday, September 26, 2008

ಬುದ್ಧಿವಂತ(BUDDHIVANTHA) film review

ಬಹಳ ನಿರೀಕ್ಷೆಯ ಉಪೇಂದ್ರ ನಟಿಸಿರುವ ಬುದ್ಧಿವಂತ ಚಿತ್ರ ತೆರೆಗೆ ಬಂದಿದೆ, ಸಾಲು ಸಾಲು ಫ್ಲಾಪ್ ಚಿತ್ರಗಳನ್ನೇ ನೀಡುತ್ತಿದ್ದ ಉಪೇಂದ್ರನಿಗೆ ಇದೊಂದು ಅಗ್ನಿಪರೀಕ್ಷೆ ಆಗಿತ್ತು. ಅದಕ್ಕಿಂತೂ ಮುಖ್ಯವಾಗಿ
ಇವನ ಮುಂದಿನ ಚಿತ್ರದ ಕಥೆ ಎಲ್ಲರಿಗೂ ಗೊತ್ತಿರುತ್ತ ಇತ್ತು. ಅದಕ್ಕೆ ಕಾರಣ ಬೇರೆ ಭಾಷೆಗಳಿಂದ ಅವನು ಮಾಡುತ್ತಿದ್ದ ರೀಮೆಕ್. ಎ, ಉಪೇಂದ್ರ ಚಿತಗಳನ್ನು ನೋಡಿದ್ದ ಜನರಿಗೆ ಇದು ಇಂದಿಗೂ
ನುಂಗಲಾರದ ತುತ್ತೇ ಸರಿ. ಮಧ್ಜೆ ಮಧ್ಯೆ ಸ್ವಂತ ಕಥೆಯುಳ್ಳ ಚಿತ್ರಕ್ಕೆ ಕೈ ಹಾಕಿದರೂ ಅದೂ ತೊಪ್ಡ ಎದ್ದು ಹೋಯಿತು.

ಉಪೇಂದ್ರನ ದೊಡ್ಡ ಶಕ್ತಿ ಅವನ ಸಂಭಾಷಣೆ ಮತ್ತು ನಿರೂಪಣೆ, ಕಾಶಿನಾಥ್ ಗರಡಿಯಲ್ಲಿ ಇದನ್ನು ಚೆನ್ನಾಗಿ ಕಲಿತಿರುವ ಉಪ್ಪಿ ಬುದ್ದಿವಂತ ಚಿತ್ರದಲ್ಲೂ ತಮ್ಮ ವರಸೆ ತೋರಿಸಿದ್ದಾರೆ. ಕೆಲ ಸಂಭಾಷಣೆಯಿಂದಲೆ
ಇದು ಟಿಪಿಕಲ್ ಉಪ್ಪಿ ಡೈಲಾಗ್ ಎಂದು ಗೊತ್ತಾಗುತ್ತದೆ. ಮುಖ್ಯವಾಗಿ ಉಪ್ಪಿ ಆಯ್ದುಕೊಳ್ಳುವ ನೆಚ್ಚಿನ ವಿಷಯ ಎಂದರೆ "ಗಂಡು-ಹೆಣ್ಣು ಸಮಾನತೆ" , ಹೆಣ್ಣು ಹೇಗೆ ಇರಬೇಕು, ಇದನ್ನು ಪದೇ ಪದೇ ತನ್ನ ಸಂಭಾಷಣೆಯಲ್ಲಿ
ಇಲ್ಲಿವರೆಗೂ ತೋರಿಸಿದ್ದಾನೆ. ಒಮ್ಮೆ ಇವನ ಈ ರೀತಿಯ ಸಂಭಾಷಣೆಗಳೂ ಇವನೊಬ್ಬ MCP ಅನಿಸುವ ಹಾಗೆ ಮಾಡೊತ್ತೆ. ಆದರೆ ತನ್ನ ಮಾತುಗಳನ್ನು ಲಾಜಿಕನಲ್ಲಿ ಹಾಕಿ ಹೇಳಿರುವ ಜಾಣ್ಮೆ ಉಪ್ಪಿ ಮೆರೆದಿದ್ದಾನೆ.

ಬುದ್ಧಿವಂತ ಹೆಸರಿಗೆ ಹೇಳುವ ಹಾಗೆ ಇದು ಉಪ್ಪಿಯ ಬಿರುದು ಬಾವಲಿ, ಚಿತ್ರಕ್ಕೆ ಆ ಹೆಸರಿಟ್ಟ ಮೇಲೆ ಬುದ್ಧಿವಂತಿಕೆಯನ್ನು ಪ್ರದರ್ಶನ ಮಾಡಲೇ ಬೇಕಲ್ಲ, ಅದೇ ಚಿತ್ರದ ಉದ್ದಕ್ಕೂ ಇದೆ. ಪ್ರೇಕ್ಷಕ ಇವನ್ನು ಬುದ್ಧಿವಂತ ಅನ್ನುತ್ತಾನೋ ಇಲ್ಲವೋ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳಿಂದಲೂ ಅನ್ನಿಸಿದ್ದಾರೆ. ಕಥೆ ಶುರುವಾಗುವುದೇ ಒಂದು ಪೋಲಿಸ್ ಠಾಣೆಯಲ್ಲಿ ೪-೫ ವಿವಿಧ ಜನ ಒಂದೇ ಸಾರಿ ಕಂಪ್ಲೇಂಟ್ ಮಾಡಲು ಬಂದಿರುತ್ತಾರೆ, ಎಲ್ಲಾರೂ ಮೋಸ ಹೋದವರೆ
ಎಲ್ಲರಿಗೂ ಮೋಸ ಮಾಡಿದವನು ಒಬ್ಬನೇ , ಆದರೆ ವಿವಿಧ ವೇಷದಲ್ಲಿ..ಯಾರಿವನು ಅಂತ ಎಲ್ಲರಿಗೂ ಗೊತ್ತಾಗಿರುತ್ತದೆ.

ಉಪ್ಪಿ ಎಂಟ್ರಿ ಆಗುವುದೇ "ಯಾರೋ ಯಾರೋ..ಹಾಡಿನಲ್ಲಿ". ಅದರಲ್ಲಿ ಚಿತ್ರದ ಎಲ್ಲಾ ನಾಯಕಿಯರು ಉಪ್ಪಿಯ ಹಿಂದೆ ಸುತ್ತುತ್ತಾ ಇರುತ್ತಾರೆ ಆದರೆ ಉಪ್ಪಿ ಮಾತ್ರ ನಾನವನಲ್ಲ ಅಂತ ಜಾರುತ್ತ ಇರುತ್ತಾನೆ. ಈ ಹಾಡಿನಲ್ಲಿ ಅನೇಕ ವಿಷಯಗಳು ತಿಳಿಯುತ್ತವೆ. ಈ ಹುಡುಗಿಯರು ಉಪ್ಪಿಯನ್ನು ತುಂಬಾ ಇಷ್ಟ ಪಟ್ಟಿರುತ್ತಾರೆ,ಮದುವೆ ಆಗಿರುತ್ತಾರೆ, ತುಂಬಾ ಹಚ್ಚಿಕೊಂಡಿರುತ್ತಾರೆ ಆಗ ಉಪ್ಪಿ ಕೈಕೊಟ್ಟು ಹೋಗಿರುತ್ತಾನೆ. ಮತ್ತೊಂದು ವಿಷ್ಯ ಇದೆ ಹಾಡಿನಲ್ಲಿ ೪ ಜನ ಹುಡುಗಿಯರು ಒಂದು ತರಹದ ಡ್ರೆಸ್ ಹಾಕಿದರೆ , ಪೂಜಾಗಾಂಧಿಗೆ ಬೇರೆ ತರ ಬಟ್ಟೆ ಹಾಕಿಸಿದ್ದಾರೆ, ಸೋ ..ಅವಳದು ಬೇರೆಯವರ ತರ ಪಾತ್ರ ಅಲ್ಲ ಅಂತ ಇಲ್ಲಿ ಹೇಳಬಹುದು.

ನಂತರ ಉಪ್ಪಿಯನ್ನು ಹುಡುಕುವುದೇ ಪೋಲಿಸರ ದೊಡ್ಡ ಕೆಲ್ಸ ಆಗುತ್ತದೆ, ಒಂದು ಚೇಸಿಂಗನಲ್ಲಿ ಉಪ್ಪಿ ನಯಾಗರಕ್ಕೆ ಹಾಕಿ ಸುಳಿಗೆ ಸಿಕ್ಕಿಹಾಕಿಕೊಂಡು ಸತ್ತು ಹೋಗುತ್ತಾನೆ ಎಂದು ಪೋಲಿಸ ಅನ್ನುಕೊಳ್ಳುವಾಗಲೇ ಒಂದು ಬಸ್ ಅಪಘಾತಕ್ಕೆ ಈಡಾಗಿ ಅದರಲ್ಲಿ ಒಬ್ಬ ಉಪ್ಪಿಯ ಹೋಲಿಕೆಯನ್ನು ಹೋಲುತ್ತ ಇರುತ್ತಾನೆ. ಅವನೇ ಚಿತ್ರದ ಹೈಲೈಟ್ "ಪಂಚಾಮೃತಾ ಅಲಿಯಾಸ್ ಪಂಚೆ", ಅವನನ್ನು ಎಳೆದುಕೊಂಡು ಬಂದು ನ್ಯಾಯಾಲಕ್ಕೆ ತರುತ್ತಾರೆ.
ಈ ಪಂಚೆ ಮಂಗಳೂರಿನ ಮೂಲದವನು, ಅವನ ಕನ್ನಡದಲ್ಲಿ ಕುಂದಾಪುರದ ಸೊಗಡನ್ನು ತಂದಿದ್ದಾರೆ. ಮಾತು ಕಮ್ಮಿ ಆಡಬೇಕು ,ಯಾಕೆ ಅಂತ ಅರ್ಧಗಂಟೆ ಮಾತನಾಡುವ ಆಸಾಮಿ ಇವನು.
ನ್ಯಾಯಲಯದಲ್ಲಿ ತನ್ನ ತಾನೇ ಪರ ನ್ಯಾಯ ಮಂಡಿಸಿ "ನಾನವನಲ್ಲ" ಎಂದು ಪದೇ ಪದೇ ಹೇಳುತ್ತ ಇರುತ್ತಾನೆ.

ನ್ಯಾಯಲಯದ ಜಡ್ಜಮ್ಮ ಲಕ್ಷ್ನೀ ಮತ್ತು ಅವನ ಮಗಳಾಗಿ ಪೂಜಾಗಾಂಧಿ ನಟಿಸಿದ್ದಾಳೆ. ಅವಳೂ ಕೂಡ ಇವನಿಂದ ಮೊಸ ಹೋಗಿರುತ್ತಾಳೆ, ಅದ್ದರಿಂದ ಈ ಕೇಸಿನಲ್ಲಿ ಅವಳಿಗೆ ವಿಚಿತ್ರ ಆಸಕ್ತಿ. ಅದಕ್ಕೂ ಹೆಚ್ಚಾಗಿ ತಾನೇ ಅತಿ ಬುದ್ಧಿವಂತಳು
ಎಂದು ನಂಬಿರುತ್ತಾಳೆ, ಆ ನಂಭಿಕೆಯನ್ನು ಇವನು ಚೂರು ಚೂರು ಮಾಡಿರುತ್ತಾನೆ.

ಚಿತ್ರದ ೨೦% ನ್ಯಾಯಾಲದಲ್ಲೇ ಆಗುತ್ತದೆ, ಮೋಸ ಹೋದ ಪ್ರತಿ ಹೆಣ್ಣು ಮಕ್ಕಳು ತಮ್ಮ ಕಥೆಯನ್ನು ಹೇಳಿಕೊಂಡು ಹೇಗೆ ತಮಗೆ ಮೋಸ ಮಾಡಿದ ಎಂದು ಹೇಳುತ್ತಾರೆ. ಆದನ್ನು ತಳ್ಳಿಹಾಕುವ ಪಂಚೆ
ಅವರನ್ನು ತನ್ನ ಮಾತಿನಲ್ಲಿ ಸಿಲುಕಿಸಿ,ಅವರದೇ ತಪ್ಪು ಎನ್ನುವ ಹಾಗೆ ಮಾತನಾಡುತ್ತಾನೆ. ಮೋಸ ಹೋದ ಪ್ರತಿ ಹೆಣ್ಣಿನ ಹತ್ತಿರವೂ ಒಂದೇ ಒಂದು ಸಾಕ್ಷಿ ಇರುವದಿಲ್ಲ. ಆಗ ಶ್ರೀಧರ್ ಬರುತ್ತಾರೆ, ಅವರೂ
ಉಪ್ಪಿಯ ಅಣ್ಣ ಎಂದು ಪರಚಯಿಸಿಕೊಳ್ಳುತ್ತಾರೆ. ಅವರೂ ಈ ಪಂಚೆ ನನ್ನ ತಮ್ಮ ಎಂದೂ ವಾದಿಸುತ್ತಾರೆ, ಎಲ್ಲರ ವಾದವನ್ನು ತಳ್ಳಿಹಾಕುವ ಉಪ್ಪಿ "ನಾನವನಲ್ಲ ನಾನವನಲ್ಲ ನಾನವನಲ್ಲ" ಅಂತ ೨೦ ಸಾರಿ ಹೇಳಿರುತ್ತಾರೆ.
ಅದೂ ನೋಡುವ ಜನರಲ್ಲೂ ಎಲ್ಲೋ ನಾಟಿರುತ್ತದೆ, ಎಲ್ಲೋ ಡಬಲ್ ಆಕ್ಟಿಂಗ್ ಇರಬೇಕು ಅಂತ ನಮ್ಮದೇ ತರ್ಕಗಳನ್ನು ಮಾಡಿಕೊಳ್ಳುತ್ತೇವೆ, ಆ ರೀತಿಯ ಕೂತುಹಲವನ್ನು ಉಪ್ಪಿ ಚೆನ್ನಾಗಿ ಮಾಡಿದ್ದಾರೆ.ಡಿ.ಎನ್.ಎ, ಪಾಲಿಗ್ರಾಫಿ ಎಲ್ಲಾ ಪರೀಕ್ಷೆ ಆಗಿ ಅದರಲ್ಲೂ -ve ಆಗುತ್ತದೆ. ಪೋಲಿಸರಿಗೆ ಇದೊಂದು ಹುಚ್ಚು ಹಿಡಿಸುವ ಹಾಗೆ ಆಗುತ್ತದೆ. ಎಲ್ಲವನ್ನೂ ಗಮನಿಸಿದ ನ್ಯಾಯಾಲಯ ಇವನನ್ನು ಬಿಡುಗಡೆ ಮಾಡುತ್ತದೆ. ತೀರ್ಪು ಹೊರಬಂದ ನಂತರ ವಿವಿಧ ವೇಷಧಾರಿಗಳು
ಹೊರಹೋಗುತ್ತಾರೆ, ಇದನ್ನು ಗಮನಿಸುವ ಹುಡುಗಿಯರು ಇವರ ಹಿಂದೆ ಹೋಗುತ್ತಾರೆ.. ಮುಂದೆ ಎನಾಗುತ್ತದೆ, ಚಿತ್ರ ನೋಡಿ.

ಆಕರ್ಷಣೆಗಳು
---------------
೧) ಉಪ್ಪಿಯ ಅಭಿನಯ
೨) ಪಂಚಿಗ್ ಡೈಲಾಗ್ಸ
೩) ಹಾಡುಗಳು
೪) ೫ ನಾಯಕಿಯರು
೬) ಸ್ಕ್ರೀನ್ ಪ್ಲೇ.

ಬೇಜಾರು
-----------

೧) ಚಿತ್ರದ ೨೦% ತೆಲುಗುನಲ್ಲಿ ಇದೆ, ತೆಲುಗು ಚಿತ್ರಗಳ ಮತ್ತು ಹಿಂದಿ ಚಿತ್ರಗಳನ್ನು ಸ್ಪೂಫ್ ಮಾಡುವ ಗೋಜಿನಲ್ಲಿ ಒಂದು ಪ್ರಮಖ ವಿಷಯ ಉಪ್ಪಿ ಮರೆತಿದ್ದಾರೆ ಇಲ್ಲಾ ತಾವೇ ಅಂದುಕೊಂಡಿದ್ದಾರೆ.
ಕನ್ನಡಿಗರೆಲ್ಲರಿಗೂ ತೆಲುಗು ಬರುತ್ತದೆ ಎಂದು. ಈ ಭಾಗವನ್ನು ಸುಮಾರು ಜನರಿಗೆ ಫಾಲೋ ಮಾಡಲು ಆಗುವದಿಲ್ಲ, ಉದ್ದುದ್ಧ ಸಂಭಾಷಣೆ ಅರ್ಥ ಆಗುವದಿಲ್ಲ. ಇಲ್ಲಿ ಜನ ಕಳೆದುಹೋಗುವ ಸಾಧ್ಯತೆ ಹೆಚ್ಚು ಇದೆ.
ಅದಕ್ಕೆ ಕನ್ನಡ ಸಬ್ ಟೈಟಲ್ಸ ಹಾಕಬೇಕಿತ್ತು. ಆ ಶಿಸ್ತು ಬೇರೆ ಭಾಷಿಕರಲ್ಲಿ ಇದೆ. ಆದರೆ ಉಪ್ಪಿ ತಮ್ಮ ಸಂಭಾಷಣೆಯಲ್ಲಿ ಹೇಳುವ ಹಾಗೆ " ನಾವು ಕನ್ನಡಿಗರಲ್ಲವೋ ತುಂಬಾ ಉದಾರಶಾಲಿಗಳು, ಕನ್ನಡ ಚಿತ್ರಕ್ಕಿಂತ ಬೇರೆ ಭಾಷೆಯ ಚಿತ್ರಗಳನ್ನೆ ನೋಡುವುದು" ಆ ಅನಿಸಿಕೆ ಮೇಲೆ ಮಾಡಿದ್ದರೆ ಅದು ಅವರ ಮೂರ್ಖತನ.

೨) ಚಿತ್ರದಲ್ಲಿ ನಾಯಕಿಯರಿಗೆ ಸ್ವಲ್ಪವೂ ನಟನೆಗೆ ಅವಕಾಶವಿಲ್ಲ, ಹಾಡು, ೨ ಸೀನುಗಳಿಗೆ ಮಾತ್ರ ಸೀಮಿತ.

೩) ಪೋಲಿಸರನ್ನು ಮತ್ತೊಮ್ಮೆ ಮೂರ್ಖರನ್ನಾಗಿ ತೋರಿಸಿದ್ದಾರೆ, ಒಬ್ಬ ಬುದ್ಧಿವಂತ ಆಗಬೇಕಾದರೆ ಇನ್ನೊಬ್ಬ ಮೂರ್ಖ ಆಗಲೇಬೇಕಲ್ಲವೇ ??

೪) ಹಿಂಸೆ ಕೊಡುವ ತೆಲುಗು ಹಾಡು.


ಒಟ್ಟಿನಲ್ಲಿ ಒಮ್ಮೆ ನೋಡಲೇ ಬೇಕಾದ ಚಿತ್ರ ಇದು....