
ಕರ್ನಾಟಕದಲ್ಲಿ ಕನ್ನಡಿಗನಿಗೆ ಅಲ್ಲದೇ ಬೇರೆ ಯಾರಿಗೆ ಮೊದಲು ಕೆಲ್ಸ ಸಿಗಬೇಕು ?, ಎಲ್ಲಾ ಇಲ್ಲಿನ ಸಂಪನ್ಮೂಲದಲ್ಲಿ ಮೊದಲು ಆದ್ಯತೆ ಇಲ್ಲಿಯ ಕನ್ನಡಿಗನಿಗೆ ಸಿಗಬೇಕು.
ಇದನ್ನು ಕೇಳಿದ ಒಡನೆ ಸಾಕು ನಮ್ಮ ಕೆಲ ಜನರಿಗೆ ಮೈ ಮೇಲೆ ಚೇಳು ಬಿಟ್ಟುಕೊಂಡ ಹಾಗೆ ಆಗುತ್ತದೆ. ನಾವು ಭಾರತದಲ್ಲಿ ಇರುವುದು, ಇದು ಪ್ರಜಾಪ್ರಭುತ್ವ ವಿರುದ್ಧ, ಇದು ದೇಶದ ಏಕತೆಗೆ ದಕ್ಕೆ ಅಂತ ನೂರೆಂಟು ಮಾತು ಆಡುತ್ತಾರೆ. ಹೀಗೆ ಹೇಳುವರು ಯಾರು ಸ್ವಲ್ಪವೂ ವಿಚಾರ ಮಾಡಿರುವದಿಲ್ಲ, ಇಲ್ಲಾ ಅವರ ಯೋಚನ ಲಹರಿಗೆ ಒಂದು ದಿಕ್ಕು ಇರುವದಿಲ್ಲ. ಕೆಲ ಪದ ಕೇಳಿದರೆ ಸಾಕು ನಮ್ಮ ಜನರಿಗೆ ಅದು ಫ್ಯಾನಟಿಕ್ ಅಂತ ಅನಿಸಿ ಅದನ್ನು ಸವಿವರವಾಗಿ ಕೇಳದೆ ಸುಮ್ಮನೆ ಗಲಾಟೆ ಮಾಡುತ್ತಾರೆ.
ಹೀಗೆ ಮಾತನಾಡುವ ಜನರು ಮೊದಲು ಅರ್ಥ ಮಾಡಿಕೊಳ್ಳಬೇಕಾದ ವಿಚಾರ ಎನೆಂದರೆ ಕರ್ನಾಟಕ ಆದ ಉದ್ದೇಶವೆ ಕನ್ನಡ-ಕನ್ನಡಿಗನ ಅಭಿವೃದ್ಧಿ, ಕನ್ನಡಕ್ಕೆ ಅಗ್ರಮಾನ್ಯ ಸ್ಥಾನ ಸಿಗಬೇಕು, ಕನ್ನಡಿಗನು ತನ್ನ ಜೀವನದಲ್ಲಿ ಪ್ರಗತಿ ಕಾಣಬೇಕು. ಇವೆರೆಡು ಬೆಳವಣಿಗೆಯಿಂದ ಕರ್ನಾಟಕದ ಆಭಿವೃದ್ಧಿ ಆಗುತ್ತದೆ ಅನ್ನುವ ಒಂದು ದೊಡ್ಡ ವಿಚಾರಧಾರೆ ಇತ್ತು, ಆದರೆ ಕಾಲಕ್ರಮೇಣ ಸರ್ವಾಂಗೀಣ ಅಭಿವೃಧ್ಧಿ ಕನಸುಗಳು ಕಳಚಿ ಕೊಂಡಿವೆ.
ನಮ್ಮ ಕೀಳರಿಮೆ ಇಂದ ಬೇಯುತ್ತ, ಬೇಡದ ರಾಷ್ಟೀಯತೆಯಲ್ಲಿ ಕರಗಿ ದೇಶ,ಧರ್ಮ,ಅಭಿಮಾನ ತೋರಿಸಬೇಕು ಅಂದರೆ ಕೇವಲ ಬೇರೆ ಭಾಷೆಯನ್ನು ಬಳಸಬೇಕು ಅಂತ ಆಗಿದೆ, ಅದಕ್ಕೆ ನೊಡಿ "ಬೋಲೊ ಭಾರತ್ ಮಾತಕೀ ಜೈ" ಅಂತಾನೆ ಅನ್ನಬೇಕು, ಕನ್ನಡದಲ್ಲಿ ಅದನ್ನು ಹೇಳಿದರ ಅಪಥ್ಯ. ಇದಕ್ಕೆ ಪರೋಕ್ಷವಾಗಿ ನಮ್ಮ ಶಾಲೆಗಳಲ್ಲಿ ಕನ್ನಡ ಬಲಪಡಬೇಕು, ಕನ್ನಡದಲ್ಲಿ ಸಕಲ ವಿದ್ಯೆ ಇದೆ ಎಂದು ಅನಿಸಿದರೆ ಅದು ಉಳಿಯುತ್ತದೆ. ಇಲ್ಲದಿದ್ದರೆ ಕನ್ನಡ ಕೇವಲ ಕಥೆ-ಕವಿತೆ ಗೊಡ್ಡು ಸಾಹಿತ್ಯಕ್ಕೆ ಮಾತ್ರ ಎಂದರೆ ಅದು
ಕೇವಲ ಒಂದು ವರ್ಗದ ಆಸ್ತಿ ಆಗಿ ಕೊನೆಗೆ ಸಾಯುತ್ತದೆ.
ಕರ್ನಾಟಕ ಅಂದರೆ ಹೈ.ಕ , ಉ.ಕ, ದ.ಕ , ಮೈಸೂರು ಕರ್ನಾಟಕ ಅಂತ ನಾವೇ ಪರಿಧಿ ಹಾಕಿಕೊಂಡು, ನಮ್ಮ ಕನ್ನಡ-ನುಡಿ,ಸಂಸ್ಕೃತಿ ಸರಿ ಎಂದು ಮರೆಯಬಾರದು. ಮೊದಲಿಗೆ ಇಂದಿಗೂ ಈ ಪದಗಳನ್ನು ಬಳಸುವ ಜನರಿಗೆ ಉಗಿಬೇಕು, ಸಾಕು ಇ ಒಡಕು, ಹೇಗೆ ಬೆರಳು ಎಲ್ಲಾ ಒಂದೇ ಇಲ್ಲದಿದ್ದರೂ ಅದು ಕೈನಲ್ಲಿ ಇದ್ದು ನಮ್ಮ ಜೀವನದ ಪ್ರಮುಖ ಅಂಗ ಆಗಿದೆಯೋ ಹಾಗೆ ನಾವು ಭಾರತದ ಪ್ರಮುಖ ಆಂಗ ಆಗಬೇಕು. ಇದು ನಿಜವಾದ ರಾಷ್ತೀಯತೆ, ಸುಮ್ಮನೆ ಚಡ್ಡಿ ಹಾಕಿಕೊಂಡು ಹಿಂದಿಯಲ್ಲಿ ದೇಶ ಭಕ್ತಿ ಹಾಡುಗಳನ್ನು ಹಾಡೋದು ಅಲ್ಲ.