Wednesday, December 31, 2008

ಹೊಸ ವರುಷ ತರಲಿ ಹೊಸ ಹರುಷ




ಹೊಸ ವರುಷದ ಹಾರ್ದಿಕ ಶುಭಾಶಯಗಳು, ೨೦೦೯ ವರುಷ ನಿಮಗೆ ಚೆನ್ನಾಗಿರಲಿ.

Tuesday, December 30, 2008

ಉಪಚುನಾವಣೆಯ ಫಲಿತಾಂಶ-2008

ಚುನಾವಣೆಯ ಫಲಿತಾಂಶ ಆಚೆ ಬಂದಿದೆ, 

ಕಾರವಾರ ಬಿಟ್ಟರೆ ನಾನು ಅಂದುಕೊಂಡ ಹಾಗೇಯೆ ಫಲಿತಾಂಶ ಬಂದಿದೆ. ಕಾರವಾರದಲ್ಲಿ ಕಾಂಗ್ರೆಸ್ ಗೆಲ್ಲಬಹುದಿತ್ತು,ಆದರೆ ಅದನ್ನು ಹಾಳಿ ಮಾಡಿಕೊಂಡಿದೆ. ಕೊನೆಯ ಕ್ಷಣದಲ್ಲಿ ಅಮ್ಮ-ಮಗ ಒಂದಾಗಿದ್ದು ಬಹಳ ಸಹಾಯ ಮಾಡಿದೆ. ಆದರೆ ತುರುವೆಕೆರೆ ಮಾತ್ರ ಅಚ್ಚರಿ ತಂದಿದೆ, ಕಾಂಗ್ರೆಸ್,ಜೆಡಿಎಸ್ ಮಾಡಿದ್ದ ಅಪಪ್ರಚಾರದಲ್ಲಿ ಸ್ವತ: ಜಗ್ಗೇಶ್ ಕೂಡ ಮತ್ತೆ ಅಲ್ಲಿ ನಿಲ್ಲಲ್ಲು ಬಯಸುತ್ತ ಇರಲಿಲ್ಲ. ಎಲ್ಲೊ ಒಂದು ಕಡೆ ಲಕ್ಷ್ಜೀನಾರಯಣರನ್ನು ಬಲಿ ಕೊಡ್ತಾ ಇದ್ದಾರೆ ಅನಿಸಿದ್ದು ಸಹ ನಿಜಾ. 

ಗೆದ್ದೆ ಬಿಟ್ಟಿದ್ದೀವಿ ಅಂತ ಜಗ್ಗೇಶ್ ಮೆರೆಯುತ್ತ ಇದ್ದರೂ, ಸತ್ಯಕ್ಕೆ ಗೆಲುವು ಎಂದರು, ಆದರೆ ಕೊನೆಗೆ ಗೆದ್ದಿದ್ದು ಅಲ್ಲಿ ಜೆಡಿಎಸ್.ಆ ಅಚ್ಚರಿಯನ್ನು
ಪಾಪ ಲಕ್ಷೀನಾರಯಣ ಎದೆ ಒಡೆದುಕೊಂಡಿದ್ದಾರೆ. ಈ ಮಾಧ್ಯಮಗಳು ಕೂಡ ಗೆದ್ದೆ ಬಿಟ್ಟಿದ್ದೀರ ಅಂತ ಸಂದರ್ಶನ ಮಾಡಿ,ಅದರಲ್ಲಿ ಅವರು ಎಲ್ಲರಿಗೂ  ಥ್ಯಾಂಕ್ಸ ಹೇಳಿದ್ದು ಆಗಿತ್ತು,ಆದರೆ ವಿಧಿಯ ಬರಹವೇ ಬೇರೆ.


ಮುಂದೆ ಎನಾಗಬಹುದು ??

* ಬಿಜೆಪಿಯನ್ನು ಇನ್ನು ಹಿಡಿಯುವರು ಇರುವದಿಲ್ಲ,ಆಡಿದ್ದೆ ಆಟ.
* ಪಕ್ಶೇತರರಿಗೆ ಸ್ವಲ್ಪ ಬಿಸಿ ತಲುಗಬಹುದು. ಒಂದಿಬ್ಬರ ತಲೆದಂಡ ಆಗಬಹುದು.
* ಕಾಂಗ್ರೆಸ್ನಲ್ಲಿ  ದೊಡ್ಡ ಮಟ್ಟಿಗೆ ಸರ್ಜರಿ ಆಗಬಹುದು, ಲೋಕಸಭೆ ಚುನಾವಣೆಗೆ ಹೀಗೆ ಹೋದರೆ ಗೋತಾ..
* ಜೆಡಿಎಸ್ ಆರಕ್ಕೆ ಎರುವದಿಲ್ಲ, ಮೂರಕ್ಕೆ ಇರುವದಿಲ್ಲ.
* ಸಿದ್ದುಗೆ ಗುದ್ದುಕೊಟ್ಟು ಆಚೆ ಹಾಕಬಹುದು, ಹೊಸ ಪಕ್ಷ ಮಾಡಬಹುದು ಇಲ್ಲ,ಬಿಜೆಪಿ ಸೇರಬಹುದು.

Friday, December 26, 2008

ಬುದ್ದಿಜೀವಿಗಳ ಜೋಕುಗಳು..

೧)

ತಾವು ನಯಾ ಪೈಸೆ ಕೆಲ್ಸ ಮಾಡದೇ ಕನ್ನಡ ಚಿಂತಕರು ಎಂದು  ಕರೆದುಕೊಳ್ಳುವ ಬುದ್ದೀಜೀವಿಗಳ, ಸಾಹಿತಿಗಳ, ಜ್ಞ್ನಾನಪೀಠಿಗಳ ಗುಂಪು ನಮ್ಮಲ್ಲಿ ಸಾಕಷ್ಟಿವೆ,  ಕನ್ನಡಕ್ಕೆ ಹೋರಾಡುವ  ಸಂಘಟನೆಯ ಸೈನಾನಿಗಳನ್ನು ಆಡಿಕೊಳ್ಳುವುದು, ಕಾಲೆಳೆಯುವುದೇ ಇವರ ಕೆಲ್ಸ...  ಇವರು ಒಮ್ಮೆ  ಒಂದು ಕೊಳದಿಂದ ಮೀನನ್ನು ಎತ್ತಿ ನೆಲಕ್ಕೆ ಹಾಕುತ್ತ ಇರುತ್ತಾರೆ
ಇದನ್ನು ಕನ್ನಡ ಸಾಮನ್ಯ ಜನ,  ಸ್ವಾಮಿ ಎನು ಮಾಡುತ್ತ ಇದ್ದೀರಾ ಅಂತ ಕೇಳ್ತಾರೆ ??
ಅಯ್ಯೋ ಬುದ್ದು..ನಾನು ಮೀನನ್ನು ನೀರಿನಲ್ಲಿ ಮುಳುಗಿ ಸಾಯುವದರಿಂದ ತಪ್ಪಿಸುತ್ತ ಇದ್ದೇನೆ ಎನ್ನುತ್ತಾರೆ.  ಇವರಿಗೆ ಕನ್ನಡ ಉಳಿಸಿ ಎಂದರೆ ಎನೂ ಮಾಡುತ್ತಾರೆ ??

೨)

ಒಮ್ಮೆ ಈ ಬುದ್ದಿಜೀವಿಗಳು ಒಬ್ಬನನ್ನು ಹಿಡಿದುಕೊಂಡಿರುತ್ತಾರೆ, ಅವನು ಬಿಡ್ರಪ್ಪೊ ಬಿಡಿ ಅಂತ ಬೊಂಬಡಾ ಹೋಡಿಯುತ್ತ ಇರುತ್ತಾನೆ. ಅದನ್ನು ನೋಡಿದ ಕನ್ನಡ ಸಾಮನ್ಯ ಜನ,  ಸ್ವಾಮಿ ಎನು ಮಾಡುತ್ತ ಇದ್ದೀರಾ ಅಂತ ಕೇಳುತ್ತಾರೆ..
ಅದಕ್ಕೆ ಅವರು, ನೋಡಪ್ಪ ಇವನಿಗೆ ಒಂದು ಕೋಟ್ ಹೊಲೆದಿದ್ದೇವೆ,ಆದರೆ ಅದು ಇವನ ಅಳತೆಗೆ ಸರಿ ಹೋಗುತ್ತ ಇಲ್ಲ. ಅದಕ್ಕೆ ಇವನ ದೇಹವನ್ನು ಕತ್ತರಿಸುತ್ತ ಇದ್ದೇವೆ ಅನ್ನುತ್ತಾರೆ...
ಇವರಿಗೆ ಕನ್ನಡ ಬಗ್ಗೆ ಚಿಂತನೆ ಮಾಡಿ ಎಂದರೆ .... ಇವರು ಕಂಡಿರುವ ಚೌಕಾಸಿ ಕನಸಿಗೆ ಹೊಂದಿಸಲು ಕನ್ನಡವನ್ನು ಬಲಿಕೊಡುತ್ತರೆ ಅಷ್ಟೆ.

೩)
ಒಮ್ಮೆ ನಮ್ಮ ಜ್ಞಾನಪೀಠಿ ಎನೋ ದೀಪದ ಕೆಳಕ್ಕೆ ಹುಡುಕುತ್ತ  ಇರುತ್ತಾರೆ,  ಅವರಿಗೆ ಸಹಾಯ ಮಾಡೊಣ ಅಂತ ನಮ್ಮ ಕನ್ನಡ ಹೈದ ಹೋಗಿ..
ಸ್ವಾಮಿ ಎನು ಹುಡುಕುತ್ತ ಇದ್ದೀರಾ ಅಂತ ಕೇಳುತ್ತಾನೆ..
ಅದಕ್ಕೆ ಜ್ಞಾನಪೀಠಿ " ನನ್ನ ಕೀ(ಚಾವಿ) ಕಳೆದು ಹೋಗಿದೆ, ಹುಡುಕುತ್ತ ಇದ್ದೇನೆ" ಅನ್ನುತ್ತಾನೆ.
ಹೈದ ಅದಕ್ಕೆ "ಎಲ್ಲಿ ಕಳೆದುಕೊಂಡಿರಿ ಅಂತ ಕೇಳುತ್ತಾನೆ..
ಜ್ಞಾನಪೀಠಿ .. ಒ..ನಮ್ಮ ಮನೆ ಹತ್ತಿರ ಕಳೆದುಕೊಂಡೆ ಎನ್ನುತ್ತಾನೆ.
ಹೈದ  ಅದಕ್ಕೆ ಯಾಕೆ ಇಲ್ಲಿ ಹುಡುಕುತ್ತ ಇದ್ದೀರಾ ಮತ್ತೆ ಅಂತ ಪ್ರಶ್ನೆ ಮಾಡಿದಾಗ
ಜ್ಞಾನಪೀಠಿ :- ಇಲ್ಲಿ ಬೆಳಕು ಇತ್ತು ಅದಕ್ಕೆ ಎನ್ನುತ್ತಾರೆ.

ಕನ್ನಡ ಹೀಗೆ ಆಗಬೇಕು, ಹಾಗೆ ಆಗಬೇಕು ಎಂದು ಇವರು ಹುಡುಕುವ ಕೆಲ್ಸಗಳು ಕೂಡ ಅಷ್ಟೆ.

Thursday, December 25, 2008

೨೦೦೮ ರ ಉಪಚುನಾವಣೆಯ ನನ್ನ ಬೆಟ್


ಮದ್ದೂರು, ಜೆ.ಡಿ.ಎಸ್; 
ಮಧುಗಿರಿ, ಜೆ.ಡಿ.ಎಸ್;
ತುರುವೇಕೆರೆ, ಜೆ.ಡಿ.ಎಸ್;
ಅರಭಾವಿ, ಬಿ.ಜೆ.ಪಿ ;
ಹುಕ್ಕೇರಿ, ಬಿ.ಜೆ.ಪಿ; 
ದೇವದುರ್ಗ, ಬಿ.ಜೆ.ಪಿ;
ದೊಡ್ಡ ಬಳ್ಳಾಪುರ, ಬಿ.ಜೆ.ಪಿ
ಕಾರವಾರ,ಕಾಂಗ್ರೆಸ್; 

೨೦೦೮ ರ ಉಪಚುನಾವಣೆಯಲ್ಲಿ ಇದು ಹೀಗೆ ಆಗಬಹುದು ಎಂಬುದು ಎಂದು ನನ್ನ ಅಭಿಮತ, ದೊಡ್ಡಬಳ್ಳಾಪುರ,ಮದ್ದೂರು ೫೦-೫೦ ಇದೆ ಅನಿಸೊತ್ತೆ. ಒಟ್ಟಿನಲ್ಲಿ ಜೆಡಿಎಸ್ ೩-೪, ಬಿಜೆಪಿ ೪-೫, ಕಾಂಗ್ರೆಸ್ ೦-೧ ಸ್ಥಾನ ಗೆಲ್ಲಬಹುದು.

೨೦೦೮ ರ ನನ್ನ ಮೆಚ್ಚಿನ ಹಾಡುಗಳು

೨೦೦೮ರಲ್ಲಿ ನಾನು ೧೦ ಸಲಕ್ಕೂ ಕೇಳಿದ ಹಾಡುಗಳ ಪಟ್ಟಿ ಇಲ್ಲಿದೆ, ಇದರಲ್ಲಿ ನಂಬರ್ ೧, ೨ ಇಲ್ಲಾ. ನನ್ನ ಮೆಚ್ಚುಗೆ ಆದ ಹಾಡುಗಳ ಪಟ್ಟಿ ಇಲ್ಲಿದೆ ಅಷ್ಟೇ..

ಜೊತೆ ಜೊತೆಯಲಿ - ವಂಶಿ
ಆಗಲಿ ಸಂಗಮ- ಸಂಗಮ
ಒಂದೊಂದೆ ಬಚ್ಚಿಟ್ಟ ಮಾತು- ಇಂತಿ ನಿನ್ನ ಪ್ರೀತಿಯ
ನನ್ನುಸಿರು ಇರುವ-ನನ್ನುಸಿರು  
ಹಿಂಗ್ಯಾಕೆ ಹಿಂಗ್ಯಾಕೆ -ಪಟ್ರೆ ಲವ್ಸ ಪದ್ಮ
ಹೇ ಹುಡುಗಿ -- -ಪಟ್ರೆ ಲವ್ಸ ಪದ್ಮ
ಸೆರೆಯಾದೆನು- ಸತ್ಯ ಇನ್ ಲವ್
ಬಾ ಮಳೆಯೇ - ಆಕ್ಸಿಡೆಂಟ್
ಅರೆರೆ ಎನೊ ಆಗುತಿದೆ- ವೆಂಕಿ
ಸುಮ್ ಸುಮ್ನೆ ಯಾಕೊ - ಗೂಳಿ
ಮುಂಗಾರು ಮಳೆ ಬಿದ್ದು ಬಿದ್ದು- ಕಾಮಣ್ಣನ ಮಕ್ಕಳು
ಹುಚ್ಚ ಅನ್ನು - ದಿಮಾಕು
ಕಣ್ ಕಣ್ಣ ಸಲಿಗೆ- ನವಗ್ರಹ
ಮಳೆಯೇ ಮಳೆಯೇ- ಆತ್ಮೀಯ
ಐ ಲವ್ ಯೂ - ಮೊಗ್ಗಿನ ಮನಸ್ಸು
ತರ ತರ ಒಂದ್ ತರ - ಬಿಂದಾಸ್
ನಿನ್ನ ನೋಡಲೆಂತೊ - ಮುಸ್ಸಂಜೆ ಮಾತು
ಗುಬ್ಬಚ್ಚಿ ಗೂಡಿನಲ್ಲಿ - ಬಿಂದಾಸ್
ಕದ್ದಳು ಮನಸ್ಸನ್ನ -  ಮುಸ್ಸಂಜೆ ಮಾತು
ಮೊಡದ ಒಳಗೆ-ಪಯಣ
ನಿನ್ನ ಪೂಜೆಗೆ ಬಂದೆ ಮಾದೇಶ್ವರ- ಸೈಕೊ
ಮೊದಲ ಸಲ- ಅಂತೂ ಇಂತೂ ಪ್ರೀತಿ ಬಂತು
ಖುಷಿಯಾಗಿದೆ - ತಾಜ್ ಮಹಲ್
ಸಂಗಾತಿ- ಸಂಗಾತಿ
ಮಾತಿನಲ್ಲಿ  ಹೇಳಲಾರೆನು - ಬೊಂಬಾಟ್
ನನಗೂ ನಿನಗೂ - ಅರಮನೆ
ಮನಸ್ಸು ರಂಗಾಗಿದೆ - ಸ್ಲಂಬಾಲ
ಚಿತ್ರಾನ್ನ - ಬುದ್ದಿವಂತ
ಜಿಂಕೆ ಮರೀನಾ - ನಂದ ಲವ್ಸ ನಂದಿತಾ
ಪ್ರೀತಿ ಬಂದೈತೆ -ನಂದ ಲವ್ಸ ನಂದಿತಾ
ನನ್ನ ಚೆಲುವೆ- ಚೈತ್ರದ  ಚಂದ್ರಮ್ಮ
ಐತಲಕಡಿ- ಗಜ
ಚೋರಿ ಚೋರಿ- ಮಸ್ತ್ ಮಜಾ ಮಾಡಿ
ಯಾರೋ ಕಟ್ಟಿದ್ದು - ಮಾದೇಶ
ನನಗೂ  ಗೆಳೆಯ ಬೇಕು- ಮೊಗ್ಗಿನ ಮನಸ್ಸು
ಮಾಯವಾಗಿದೆ ಮನಸು - ಹಾಗೆ ಸುಮ್ಮನೆ
ಭುವನಂ ಗಗನಂ- ವಂಶಿ
ಕಣ್ಣಲ್ಲೇ ಗುಂಡಿಕ್ಕೆ - ಗಂಗೆ ಬಾರೆ ತುಂಗೆ ಬಾರೆ

Wednesday, November 05, 2008

ಹಿತ್ತಲ ಗಿಡ ಮದ್ದಲ್ಲ....


Shoba De: Taking the democracy argument further, in a country like India, who decides which person has the right to be in whichever part of the country?

Raj Thackery: India is like Europe. This means there is one currency and numerous languages and cultures. And this is a 'Europe' made up of various cultures.


ಇದು ರಾಜ್ ಠಾಕ್ರೆ ಉವಾಚ, ಈ ಮಾತನ್ನು ಕೇಳಿ ಬಹಳ ಸಂತೋಷವಾಯಿತು. ಈ ವಯ್ಯನಿಗೆ ಅಂತು ಬುದ್ದಿ ಬಂತಲ್ಲ ಅಂತ ಸಮಧಾನ ಆಗಿದೆ. ಈ ಪ್ರತಿಪಾದನೆಯನ್ನು ಬಹಳ ಹಿಂದೆಯೆ ಮಾಡಿದ್ದೆವು, ಈಗ ಅದನ್ನು ಠಾಕ್ರೆ ಅದನ್ನು ಕೊಂಡಿದ್ದಾರೆ ಅಷ್ಟೆ.


ಆದರೆ ಮುಂದೆ ನಿರಾಸೆ ಮಾಡುತ್ತಾರೆ.
SD: Hindi has been declared the national language, that's why.
RT: Where is it a national language?

SD: Officially it is the national language. RT: That is what I am saying. Let's check its history. Hindi is a state language. It was declared the national language in a Congress session. We can speak on this with proof later. It is the national language. I respect it.

ಆದರೂ ಅವರ ಶೋಭಾ ಡೇ ಅವರ ಸಂದರ್ಶನದಲ್ಲಿ ಬಹಳ ಮಟ್ಟಿಗೆ ಇಬ್ಬರೂ ತಮ್ಮ ಅಜ್ಞಾನ ಮೆರೆದಿದ್ದಾರೆ ಬಿಡಿ,ಮೊದಲಿಗೆ ಭಾರತ ಅಂದರೆ ರಾಜ್ಯಗಳ ಒಕ್ಕೂಟ ಎಂದು ನಮ್ಮ ಸಂವಿಧಾನವೇ ಸಾರಿದೆ. ಇದನ್ನು ಶೋಭಾ ಡೇ ಅವರೆ ಹೌದಾ ಎಂದು ಪ್ರಶ್ನಿಸುತ್ತಾರೆ.
ಮುಂದೆ, ಹಿಂದಿ ನಮ್ಮ ರಾಷ್ಟ್ರಭಾಷೆ ಅದಕ್ಕೆ ಎಲ್ಲರೂ ಅದನ್ನು ಮಾತನಾಡುತ್ತಾರೆ ಎಂದು ಶೋಭಾ ಡೇ ಹೇಳುವುದು ಕೇಳಿದರೆ ನಗು ಬರುತ್ತದೆ, ಅದನ್ನು ಈ ರಾಜ ಮೊದಲಿಗೆ ಒಪ್ಪಿಕೊಳ್ಳದಿದ್ದರೂ ಕೊನೆಗೆ ನಾನು ಗೌರವಿಸುತ್ತೆನೆ ಅದನ್ನು ರಾಷ್ಟ್ರಭಾಷೆ ಎಂದು ಅಂತ ಹೇಳಿ ತಮ್ಮ ಅರೆಬರೆ confusions ಸಾಬೀತು ಪಡಿಸಿದ್ದಾರೆ...

ಇದನ್ನು ಮೆಚ್ಚಿ ಹಾಡಿ, ಇಂತಹ ನಾಯಕರು ನಮ್ಮ ಕರ್ನಾಟಕಕ್ಕೆ ಬೇಕು ಅಂತ ಮಾಧ್ಯಮದವರು ಒಣ ಪ್ರತಾಪ ತೋರುತ್ತಾರೆ.
ಮೊದಲು ಈ ಮಾಧ್ಯಮದವರು ಈ ರಾಜನಿಗೆ ಸ್ವಲ್ಪ ನಮ್ಮ ಕನ್ನಡಿಗರು ಹಿಂದಿ ಬಗ್ಗೆ ಬರೆದಿರುವ ಜಾಗೃತಿ ಲೇಖನಗಳನ್ನು ತರ್ಜುಮೆ ಮಾಡಿ ಕೊಟ್ಟು ಓದಿಸಲಿ.

ಒಕ್ಕೂಟ-ರಾಷ್ಟ್ರಭಾಷೆ ಬಗ್ಗೆ ಬಹಳ ಚೆನ್ನಾಗಿ ತಿಳಿದುಕೊಂಡಿರುವ ಅನೇಕ ವರುಷಗಳಿಂದ ಈ ತತ್ವಗಳನ್ನು ಪ್ರತಿಪಾದನೆ ಮಾಡುತ್ತಿರುವ ನಾರಾಯಣಗೌಡ್ರು ನಮ್ಮ ಮಾಧ್ಯಮದವರಿಗೆ ಕಾಣಸಿಗದಿರುವುದು ಹಿತ್ತಲ ಗಿಡ ಮದ್ದಲ್ಲ ಅನ್ನುವ ಅವರ ಧೋರಣೆಗೆ ಸಾಕ್ಷಿ.

Saturday, November 01, 2008

ಲೇಖಕರ ಕನ್ನಡ ಕೀಳರಿಮೆಯನ್ನು ಕಿತ್ತು ಹಾಕಲು ಅನಕೃ ಬೇಕಾಗಿಲ್ಲ ...

ಕನ್ನಡ ರಾಜ್ಯೋತ್ಸವ ಬಂದಾಗೆಲ್ಲಾ ಒಂದು ರೀತಿಯ ಲೇಖನ ನಮಗೆ ಕಾಣಸಿಗುತ್ತದೆ, ಅದು ಎಷ್ಟೆ ವರುಷದ ಹಿಂದೆ ಬರೆದಿದ್ದರೂ ಅದನ್ನೇ ಪುನರಾವರ್ತನೆ ಮಾಡಿದರೂ
ಇಂದಿನ ಪರಿಸ್ಥಿತಿಗೆ ಅನ್ವಯ ಅನ್ನುವ ಹಾಗೆ ಬರೆದಿರುತ್ತಾರೆ. ಅದಕ್ಕೆ ಹೊರತಾಗಿಲ್ಲ ಇವತ್ತು (nov 1) ಪ್ರಜಾವಾಣಿಯಲ್ಲಿ ಬಂದಿರುವ ಸುಧಾ ಹೆಗಡೆ ಅವರ ಲೇಖನ.
ಅವರಿಗೂ ಪಾಪ ಸಮಸ್ಯೆಗಳೇ ಕಾಣುತ್ತಿದೆ, ಒಟ್ಟಿನಲ್ಲಿ ನಮ್ಮನ್ನು ತುಳಿಯುತ್ತ ಇದ್ದಾರೆ, ನಮಗೆ ಎನು ಮಾಡುವದಕ್ಕೆ ಆಗುವದಿಲ್ಲ, ನಾವು ಹೀಗೆ ಅನ್ನುವ ಒಂದು ರೀತಿಯ ಪಲಾಯನ ವಾದವನ್ನು ಅವರು ಮಾರಾಟ ಮಾಡಿದ್ದಾರೆ. ಅವರೂ ಸಮಸ್ಯೆಗಳಿಗೆ ಮಾಡಬೇಕಾದ ಪರಿಹಾರ ಬಗ್ಗೆ ಮೌನ ವಹಿಸಿದ್ದಾರೆ ಮತ್ತು ಅವರಿಗೆ ಒಂದು ದಶಕಗಳಿಂದ ಕನ್ನಡ ಸಂಘಟನೆಗಳು ಮಾಡಿರುವ ಹೋರಾಟ ಕಣ್ಣಿಗೆ ಬೀಳದೆ ಇರುವುದು ಜಾಣಕುರುಡೇ ಸರಿ. ನಯಾ ಪೈಸೆ ಕೆಲಸ ಆಗಿಲ್ಲ, ಎಲ್ಲರೂ ಸುಮ್ಮನೆ ಇದ್ದಾರೆ ಅನ್ನುವ ಅವರ ವಾದವನ್ನು ಕೊಂಡುಕೊಳ್ಳಲು ಆಗುವದಿಲ್ಲ.

ಇದಕ್ಕೆ ಇವರು ಕೊಡುವ ಒಂದು ಉದಾಹರಣೆ ನಿಜಕ್ಕೂ ಹಾಸ್ಯಸ್ಪದವಾಗಿದೆ, ಒಂದು ಕಿರಾಣಿ ಅಂಗಡಿಗೆ ಹೋಗಿ ಗೋದಿಹಿಟ್ಟು ಕೇಳಿದಕ್ಕೆ ಆ ಹುಡುಗ ಕಕ್ಕಾಬಿಕ್ಕೆ ಆಗಿ ನೋಡಿದನಂತೆ, ಕನ್ನಡ ಮಾತನಾಡಿದಕ್ಕೆ ಇವರನ್ನು ಪೆದ್ದು ತರ ನೋಡಿದನಂತೆ, ಇದರಿಂದ ಕನ್ನಡಿಗರಿಗೆ ಅವಮಾನ ಆಗಿ
ಮುಂದೆ ಅವನು ಅಟ್ಟಾ ಅನ್ನುತ್ತಾನಂತೆ. ಇದು ಇವರ ಕೀಳರಿಮೆಯನ್ನು ತೋರಿಸುತ್ತದೆ. ಅದರಲ್ಲೂ ಗ್ರಾಹಕ ಸೇವೆಯಲ್ಲಿ ಕನ್ನಡ ಸರಿಯಾಗಿ ಅನುಷ್ಥಾನ ಆಗಬೇಕಾಗಿರುವು ಜನ ಸಾಮನ್ಯರಲ್ಲಿ ಆಗುವ ಜಾಗೃತಿಯಿಂದ. ಕನ್ನಡದಲ್ಲಿ ಕೇಳಿದೆ ಅಂತ ಪೆದ್ದು ಆಗಿ ನೋಡಿದ ಅನ್ನುವ ಕೀಳರಿಮೆಯಿಂದ ಅಲ್ಲ. ಇದಕ್ಕೆ ಮ.ರಾಮಮೂರ್ತಿ ಇಲ್ಲಾ ಅನಕೃ ಅವರ ಹೋರಾಟ ಬೇಕಿಲ್ಲ, ಕೀಳರಿಮೆಯನ್ನು
ತೆಗೆಯಲು ಲೇಖಕರು ಪ್ರಯತ್ನ ಪಟ್ಟರೆ ಸಾಕು.

Friday, October 31, 2008

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು....


ಸಮಸ್ತ ಕನ್ನಡ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು....

ನಮ್ಮ ಕನ್ನಡ ಪ್ರೇಮ ಸಿರಿಗನ್ನಡಂ ಗೆಲ್ಗೆ ಅನ್ನುವದಕ್ಕೆ, ಇಲ್ಲ ನವೆಂಬರ್ ನಲ್ಲಿ ಒಂದು ಕನ್ನಡ ಚಿತ್ರ ನೋಡುವದಕ್ಕೆ ಮಾತ್ರ ಸೀಮಿತ ಆಗುವುದು ಬೇಡ. ಇದು ನಿತ್ಯೋತ್ಸವ ಆಗಲಿ.

Tuesday, October 28, 2008

ಒಂದು ಸಾವಿನ ಸುತ್ತ ..( ನಮ್ಮ ಊರಿನಲ್ಲಿ ಒಂದು ದಿನ)

ನಮ್ಮ ಊರಿನಲ್ಲಿ ಒಂದು ಎರಿಯಾ ಇದೆ, ಅದರ ಹೆಸರು ಬಿಮಾಲ ಅಂತ. ನೈಸರ್ಗಿಕವಾಗಿ,ಭೌಗಳಿಕವಾಗಿ ಬಹಳ ಚೆನ್ನಾಗಿರುವ ಪ್ರದೇಶ.
ಆದರೆ ಅಲ್ಲಿ ಅರಾಜಕತೆ ತಾಂಡವ ಆಡುತ್ತಿದೆ, ಅಲ್ಲಿನ ಜನರಿಗೆ ಸಂಸ್ಕ್ಟುತಿ ಇಲ್ಲ, ಬೈಗಳ, ಹೊಡೆದಾಟ ಅವರ ಜೀವನದ ಒಂದು ಭಾಗ
ಆಗಿದೆ. ಮಾಡಲು ಕೆಲಸವಿಲ್ಲ, ಆದ್ದರಿಂದ ಸದಾ ಮನೆಯ ಮುಂದೆ ಕುಳಿತುಕೊಂಡು ಹೋಗಿ ಬರುವರಿಗೆ ಕಾಟ ಕೊಡುತ್ತಾ ಇರುತ್ತಾರೆ. ಊಟ ಮಾಡಬೇಕು ಎಂದರೆ
ಹೊಡೆದಾಟ ಮಾಡಿ, ಎಳೆದಾಡಿಯೇ ಮಾಡಬೇಕು, ಹಾಗೆ ಮಾಡದಿದ್ದರೆ ಅವರಿಗೆ ತಿಂದ ಅನ್ನ ಜೀರ್ಣ ಆಗೊಲ್ಲ. ಆದರೂ ಮಕ್ಕಳನ್ನು ಹುಟ್ಟಿಸುವುದನ್ನು ಮನೆಯ ಯಜಮಾನ ಬಿಟ್ಟಿಲ್ಲ ಇಲ್ಲ ಅವನ ವಂಶದವರೂ ಬಿಟ್ಟಿಲ್ಲ. ಹುಟ್ಟಿಸಿದ ದ್ಯಾವ್ರು ಹುಲ್ಲು ಮೇಯಿಸುತ್ತಾನ ಅಂತ ಹೇಳಿಕೊಂಡು ಕಾರ್ಯಕ್ರಮ ನಿರಂತರವಾಗಿ ಸಾಗಿದೆ.
ಹೀಗಿದ್ದರೆ ಸಂಸಾರ ಹೇಗೆ ನಡೆಯೊತ್ತೆ ಅಂತ ನಿಮ್ಮ ಪ್ರಶ್ನೆ ಆಗಿದ್ದರೆ, ಅದಕ್ಕೂ ಒಂದು ದಾರಿ ಮಾಡಿಕೊಂಡಿದ್ದಾರೆ. ಅದೇ ಊರಿನಲ್ಲಿ ಇನ್ನ ೨೦ ಎರಿಯಾಗಳಿವೆ, ಅಲ್ಲಿ ಚೆನ್ನಾಗಿ ಮನೆ ನಡೆಸುತ್ತ ಇರುವರು ಇದ್ದಾರೆ, ಆ ಮನೆಗಳ ಪ್ರತಿಶತ ೪೦% ಆದಾಯ ಇವರಿಗೆ ಕೊಡಬೇಕು. ಸದಾ ನಾವು ಹಿಂದೆ ಇದ್ದೇವೆ ಅಂತ ಹೇಳಿ ಎಲ್ಲಾ ಸೌಲಭ್ಯಗಳನ್ನು ಮಾಡಿಕೊಂಡಿದ್ದಾರೆ. ಪ್ರತಿ ಮನೆಗೂ ಕಂಪ್ಯೂಟರ್ ಕೊಡುತ್ತಿವಿ ಅಂದಾಗ ಇವರು ಹಟ ಮಾಡಿ, ಅರ್ಧ ಬಾಚಿಕೊಂಡರು. ಆಮೇಲೆ ಅದನ್ನು ಹೇಗೆ ಉಪಯೋಗಿಸೋದು ಅಂತ ತಿಳಿಯದೆ ಅವುಗಳನ್ನು ಮಾರಿ ಗನ್,ಲಾಟಿ ಕೊಂಡುಕೊಂಡರು. ಕೊಂಡುಕೊಂಡ ಮೇಲೆ ಬಳಸಿದಿದ್ದರೆ ಹೇಗೆ ಬೇರೆ ಮನೆಗಳ ಜನರನ್ನು ಅಪಹರಿಸೋದು, ಸುಲಿಗೆ ಕಾರ್ಯಗಳಿಗೆ ಶುರು ಹಂಚಿಕೊಂಡರು.. ಅಪ್ಪಿತಪ್ಪಿ ಜನ ಇವರ ಎರಿಯಾ ಕಡೆ ಹೋದರು ಸಾಕು ಆವ್ರು ಅಪಹರಣ ಆಗುತ್ತಾರೆ. ಇದನ್ನು ಪ್ರಶ್ನಿಸುವ ಹಾಗೆ ಇಲ್ಲ ನೋಡಿ.. ಇಡಿ ಊರಿಗೆ ಒಂದು ಕಾನೂನು ಆದರೆ ಇವರಿಗೆ ಅದು ಅನ್ವಯಿಸುವದಿಲ್ಲ.


ಆ ಎರಿಯಾದಲ್ಲಿ ಜನ ಹೆಚ್ಚಾದ ಹಾಗೆ ಅವರು ಒಂದು ಕಾನೂನು ತಂದರು, ಪ್ರತಿ ೩ನೇ ಮತ್ತು ತದನಂತರ ಮಗು ಬೇರೆ ಎರಿಯಾಗೆ ಹೋಗಬೇಕು ಅಂತ. ಬೇರೆ ಎರಿಯಾಗೆ ಹೋದ ಜನರ ಸುಮ್ಮನೆ ಇದ್ರಾ,ಅಲ್ಲೂ ನಮ್ಮ ಎರಿಯಾದೆ ಕಾನೂನು ಅಂತ ದುಂಡಾವರ್ತನೆ ಶುರು ಮಾಡಿದರು. ಬೇರೆಯವರ ಮನೆಗೆ ಹೋಗಿ, ಅಲ್ಲಿಯ ನೀತಿ ನಿಯಮವನ್ನು ಗಾಳಿಗೆ ತೂರಿ ಅಲ್ಲಿ ಜನರಿಗೆ ಮಾಡಿದ್ದ ಅಡಿಗೆಯನ್ನು ತಿನ್ನುವದಕ್ಕೆ ಶುರು ಮಾಡಿದರು. ಕೇಳಿದರೆ ಪಕ್ಕದ , ನಮ್ಮ ಮನೆ ಅಂತ ಎನು ಇಲ್ಲ, ನಾವೆಲ್ಲಾ ಇರುವುದು ಒಂದೇ ಊರಿನಲ್ಲಿ ಆದ್ದರಿಂದ ಹಂಚಿಕೊಂಡು ತಿನ್ನಬೇಕು ಅಂತ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡರು.

ಇವರ ಬಾಯಿಗೆ ಹೆದರಿ ಜನ ಹಾಳಾಗಿ ಹೋಗಲಿ ಅಂತ ಬಿಟ್ಟುಬಿಟ್ಟರು. ಆದರೆ ಯಾವಾಗ ಈ ಜನ ತಮ್ಮ ಕಾಮವಾಂಛೆಗೆ ಹುಡುಗಿ-ಅಜ್ಜಿ ಅಂತ ನೋಡದೆ ಮೈ ಮೇಲೆ ಬಿದ್ರೊ ಆಗ ಅಲ್ಲಿನ ಜನರಲ್ಲಿ ತಾಳ್ಮೆ ಮಿತಿಮೀರಿತು. ಒದ್ದು ಬುದ್ಧಿ ಹೇಳಿದರು. ಆದರೆ ಎಮ್ಮೆ ಚರ್ಮದ ಜನರಿಗೆ ಇದು ಅರ್ಥ ಆಗಲೇ ಇಲ್ಲ. ಕಾಲಕ್ರಮೇಣ ಊಟದ ಬರವಾಗಿ ಒದ್ದಡುತ್ತ ಇರುವಾಗ , ಇವರು ಕಿತ್ತು ತಿನ್ನುವುದು ನಡ್ದೇ ಇತ್ತು. ದೊಡ್ಡದೇಶ ಎರಿಯಾದಲ್ಲಿ ಸ್ಥಳೀಯರಿಗೆ ಊಟ ಇಲ್ಲ, ಅದರಲ್ಲಿ ಇವರ ಕಿತ್ತುತನ ಸಹಿಸಿಕೊಳ್ಳಬೇಕೆ ಎಂಬ ಪ್ರಶ್ನೆ ಉಂಟಾಗಿ ಒಂದು ದಿನ ಕಿತ್ತು ತಿನ್ನುವದನ್ನು ನಿಲ್ಲಿಸಿ ಒದ್ದು ಓಡಿಸಿದರು.

ಅದೇ ದೊಡ್ಡ ತಪ್ಪು ಅನ್ನುವ ಹಾಗೆ ಜನ ಗಲಾಟೆ ಮಾಡಿದರು , ತಮ್ಮ ಎರಿಯಾದಲ್ಲೇ ಬೆಂಕಿ ಇಡುವುದು, ಗಲಾಟೆ ಮಾಡುವುದು ಶುರು ಮಾಡಿದರು. ತಾವು ಮಾಡುತ್ತ ಇರುವುಉದ್ ತಮನೇ ನಷ್ಟ ಅನ್ನುವ ಪರಿಜ್ಞಾನ ಇರಲಿಲ್ಲ. ಅಷ್ಟಕ್ಕೂ ಅವರು ಸಂಪಾದಿಸಿದ್ದ ಆಸ್ತಿಯೇ ?. ಮೊದಲೆ ಗನ್-ಲಾಂಗು ಸಂಸ್ಕೃತಿಯಲ್ಲಿ ಬೆಳೆದ ಯುವಕರು ಸುಮ್ಮನೇ ಇರುತ್ತಾರ, ಅದರಲ್ಲಿ ಒಬ್ಬ ಎದ್ದುನಿಂತೇ ಬಿಟ್ಟ. ೨೫ ವರುಷದ ಬಿಸಿರಕ್ತದ ಯುವಕ.
ಕಿತ್ತು ತಿನ್ನುವುದು ನಮ್ಮ ಹಕ್ಕು,ಅದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಅಂತ ನಿರ್ಣಯ ಮಾಡಿ
ಒಂದು ಮುಂಜಾನೆ ರಿವೆಂಜ್ ತೆಗೆದುಕೊಳ್ಳಲು ಅಣಿಯಾದ.

ಆ ದೊಡ್ಡದೇಶ ಎರಿಯಾದಲ್ಲಿ ಆವತ್ತು ಶಾಂತಿ ಇತ್ತು, ಆಗ ಈ ಯುವಕ ಒಂದು ಹತ್ತು ಜನರನ್ನು ಒತ್ತೆ ಮಾಡಿಕೊಂಡು ಜನರನ್ನು ಹೆದರಿಸುವದಕ್ಕೆ ಶುರು ಮಾಡಿದ, ಜನರಿಗೆ ಗಾಬರಿ.
ಆ ಗಾಬರಿಯನ್ನು ತಿಳಿದ ಯುವಕ ಅಲ್ಲಿಯ ಜನರನ್ನು ನಿಂದಿಸಲು ಶುರು ಮಾಡಿದ. ಆಗ ಎಚ್ಚೆತ್ತುಕೊಂಡ ರಕ್ಷಣಾ ಪಡೆ ಇವನನ್ನು ಹೊಡೆದು ಉರುಳಿಸಿತು. ಜನರನ್ನು ಅವನ ಹಿಡಿತದಿಂದ ಪಾರು ಮಾಡಿತು. ಅದೇ ದೊಡ್ಡ ವಿವಾದ ಅಯಿತು.

ಬಿಮಾಲ ಎರಿಯಾದ ಜನರು ಆ ಹುಡುಗನ ಸಾವನ್ನು ನೆಪ ಮಾಡಿಕೊಂಡು ಮತ್ತೆ ಗಲಾಟೆ ಶುರು ಮಾಡಿದರು. ಆ ಹುಡುಗ ಬದುಕಿದ್ದರೆ ನೋಬೆಲ್ ಪಡೆಯುತ್ತಿದ್ದ,
ಅವನ ಸಾವು ಊರಿಗೆ ನಷ್ಟ ಅನ್ನುವ ರೀತಿಯಲ್ಲಿ ಬೊಬ್ಬೆ ಹೊಡೆದರು. ನಮ್ಮಲ್ಲಿ ಬಂದೂಕು ಸಾಮನ್ಯ್ ಆದ್ದರಿಂದ ಅವನು ತೆಗೆದುಕೊಂಡು ಬಂದಿದ್ದಾನೆ, ಅಬ್ಬಾಬ್ಬ ಎನು ಮಾಡುತ್ತಿದ್ದ ಒಂದಿಬ್ಬರನ್ನು ಸಾಯಿಸುತ್ತಿದ್ದ , ಕಮ್ಮಿ ಆದ ಜನರನ್ನು ನಾವು ತುಂಬಿಕೊಂಡುತ್ತಿದ್ದೆವು ನೀವು ಅವನನ್ನು ಸಾಯಿಸಿ ತಪ್ಪು ಮಾಡಿದಿರಿ ಎಂದು ಅಪಾದನೆಗಳ ಸರಮಾಲೆ ಮಾಡಿದರು. ಒಟ್ಟಿನಲ್ಲಿ ಈ ಪುಂಡು ಪೋಕರಿಯನ್ನು ಸಾಯಿಸಿದ್ದು ತಪ್ಪು ಎನ್ನುವ ರೀತಿಯಲ್ಲಿ ಆಪಾದನೆ ಬಂದಾಗ ದೊಡ್ಡದೇಶ ಎರಿಯಾ ಜನ ಸುಮ್ಮನೆ ಇರುತ್ತಾರೆಯೇ ಅವರು ತಿರುಗಿಸಿ ಕೊಟ್ಟರು. ಅವನೇನು ಹುತಾತ್ಮನಲ್ಲ, ಭಯೋತ್ಪಾದಕ ಅಂತ ಜರಿದರು...

ಮುಂದೇನಾಯಿತು ಕಾದು ನೋಡಿ.....

Saturday, October 25, 2008

ದೀಪಾವಳಿ ಹಬ್ಬದ ಶುಭಾಶಯಗಳು.

"In the day
In the night
Say it right
Say it all
You either got it
Or you don't "

ಇದು ಒಂದು ನೆಲ್ಲಿ ಫರಟೆಡೊ ಹಾಡಿನ ಸಾಲು....ಇದಕ್ಕೆ ಒಂದು ಸಾಲು ಸೇರಿಸಬೇಕು but say right (ie DEEPAVALI not DIWALI.)

ಇದನ್ನು ಯಾಕಪ್ಪ ಬಳಸಿದೆ ಎಂದರೆ ನಮ್ಮ ಕನ್ನಡಿಗರು "ಹ್ಯಾಪಿ ದಿವಾಳಿ" ಸಂದೇಶ ಕಳಿಸುತ್ತ ಇದ್ದಾರೆ. ಇದನ್ನು ನೋಡಿ ನಗಬೇಕೊ ಇಲ್ಲ ಅಳಬೇಕೊ ಗೊತ್ತಿಲ್ಲ. ಕನ್ನಡದಲ್ಲಿ ದಿವಾಳಿ ಎಂದರೆ ಬೇರೆ ಅರ್ಥವೆ ಇದೆ, ಒಂದು ರೀತಿಯಲ್ಲಿ ಪಾಪರ್, ನಿರ್ಗತಿಕ ಅಂತ ಅರ್ಥ. ಅದು ಹಾರಕೈ ಆಗೊಲ್ಲ ಶಾಪ ಆಗೊತ್ತೆ ಎಂದು ಹಾಗೆ ಹೇಳುವವರು ಮನಗಾಣಲಿ...




ದೀಪಗಳ ಹಬ್ಬ ದೀಪಾವಳಿ ಇತ್ತಿಚಿನ ಸ್ಟಾಕ್ ಮಾರ್ಕೆಟ್ ಕುಸಿತದಿಂದ ದಿವಾಳಿ ಆಗಿರಬಹುದು ಎಂದು ಪಂಡಿತರ ಅಂಬೋಣ.

ಕನ್ನಡಿಗರಿಗೆ ಈ ಹಬ್ಬ ಪರಭಾಷ ವ್ಯಾಮೋಹ,ಕೀಳರಿಮೆ,ಸ್ವಾಭಿಮಾನದ ಕೊರತೆ ಎನ್ನುವ ಕತ್ತಲನ್ನು ಹೋಗಲಾಡಿಸಿ ಕನ್ನಡ ಜಾಗೃತಿ ತರುವ ಬೆಳಕನ್ನು ತರಲಿ.

ಗುಟಿಕಿನಲ್ಲಿ ಅಮೃತ...

ಅಲ್ಲಾ.. ಇಷ್ಟು ಪೋಸ್ಟನಲ್ಲಿ ಬಹಳ ಸೀರಿಯಸ್ ವಿಷಯಗಳೇ ಇವೆಯಲ್ವಾ, ನೀವು ನಗುವುದೇ ಇಲ್ವಾ ಅಥವಾ ಸದಾ ಸೀರಿಯಸ್ ಆಗಿರುತ್ತಿರಾ ಅಂತ ಕೆಲವರು ಪ್ರಶ್ನೆ ಕೇಳಿದ್ದರು... ಅಯ್ಯೊ ಅಪಾರ್ಥ ಮಾಡಿಕೊಳ್ಳಬೇಡಿ, ಯಾಕೆ ಈ ತರಹದ ಸಂದೇಹಗಳು ನಿಮಗೆ ಎಂದರೆ ಬ್ಲಾಗಿನಲ್ಲಿ ನಗಿಸುವ ಒಂದು ಲೇಖನ ಇಲ್ಲ ಅಂದರು. ಅದು ಸರಿ, ನಾನು ಕಾಮೆಡಿ ಮಾಡಲು ಬ್ಲಾಗ್ ತೆಗೆದಿಲ್ಲ, ಅದಕ್ಕೆ ಅಂತ ಬೇರೆ ಬ್ಲಾಗ್ ಇವೆ ಎಂದರೂ ಮನುಷ್ಯನಿಗೆ ಎಲ್ಲೊ ಸಂದೇಶ ಕೊಡಬೇಕಾದರೆ ಹಾಸ್ಯದ ಮೂಲಕ ಕೊಡಬೇಕು,ಇಲ್ಲಾ ಚಿಕ್ಕ ಕಥೆಗಳ ಮೂಲಕ ಕೊಡಬೇಕು ಎಂದು ಗುರು ಶ್ರೀ ಅಂತೋಣಿ ಡಿ ಮೆಲ್ಲೊ ಹೇಳಿದ್ದು ಜ್ಞಾಪಕ ಬಂತು. ಗುರುಗಳ ಪುಸ್ತಕಗಳನ್ನು ಓದುತ್ತಿದ್ದರೆ, ಚಿಕ್ಕ ಚಿಕ್ಕ ಕಥೆಗಳಲ್ಲಿ ಅಂದೆತಾ ಆಧ್ಯಾತ್ಮಿಕತೆ ಹೇಳಿದ್ದರು ಅಂತ ಆಶ್ಚರ್ಯ ಆಗುತ್ತದೆ.

ಮನುಷ್ಯನ ಅಳತೆಗೆ ಬಟ್ಟೆ ಇರಬೇಕೆ ವಿನಹ ಬಟ್ಟೆ ಅಳತೆಗೆ ಮನುಷ್ಯನನ್ನು ಕತ್ತರಿಸಬಾರದು ಇದು ಅವರು ಹೇಳುವ ಒಂದು ಮಾತು, ಈ ಮಾತಿನಲ್ಲೇ ಅನೇಕ ವಿಷಯಗಳು ಅಡಗಿವೆ. ಮುಂದೆ ಅದರ ಬಗ್ಗೆ ಬರೆಯುತ್ತೆನೆ.


ಒಂದು ಕಥೆ ಕೇಳೋಣ...

ಎನಾದರೂ ಆಗು, ಮೊದಲು ಮಾನವನಾಗು

ಒಮ್ಮೆ ತಮಿಳುನಾಡಿನಲ್ಲಿ ಒಬ್ಬ ವ್ಯಾಪಾರಕ್ಕೆಂದು ಹೋದವನು, ಸಮುದ್ರದಲ್ಲಿ ಬಂದ ಗಾಳಿಯಿಂದ ಶ್ರೀಲಂಕಾ ತಲುಪಿದ. ಅವನನ್ನು ಕಂಡ ಅಲ್ಲಿನ ರಾಜ ವಿಭಿಷಣ, ಅಯ್ಯೋ ಮಾನವ ರೂಪದಲ್ಲಿ ರಾಮ ಬಂದಿದ್ದಾನೆ ಅಂತ ಖುಶಿ ಪಟ್ಟು ತುಂಬಾ ಸತ್ಕಾರ ಮಾಡಿದರು. ಈ ಕಥೆಯನ್ನು ಒಮ್ಮೆ ಪರಮಹಂಸರು ಕೇಳಿದಾಗ ಅವರು ಹೇಳಿದ್ದು "ಅಬ್ಬಾ..ಎಂತಹ ಮಹತ್ ಯೋಚನೆ, ಒಂದು ಕಲ್ಲನ್ನು ಮನುಷ್ಯ ದೇವರು ಎಂದುಕೊಳ್ಳುವ ಹಾಗೆ ಆದರೆ, ಮನುಷ್ಯನಲ್ಲಿ ಎಲ್ಲಾ ಜೀವಭೂತದಲ್ಲಿ ದೇವರನ್ನು ಯಾಕೆ ಕಾಣಬಾರದು "??.

ಕನ್ನಡ ಎನ್ನುವುದು
ಕನ್ನಡ ಅನ್ನುವುದು ಒಂದು ರೀತಿಯ ಬಾಟಲಿ ಇದ್ದ ವೈನ್ ಹಾಗೆ, ಎಲ್ಲರೂ ಅದರ ಬಗ್ಗೆ ಮಾತನಾಡುತ್ತಾರೆ, ಅದರ ಲೇಬಲ್ ಓದುತ್ತಾರೆ, ಆದರೆ ಅದರ ಅಮೃತ ರುಚಿ ಉಂಡವರು ಬಹಳ ಕಡಿಮೆ.

ಇಸ್ತೊ ಸೆಟಲೈಟ್ ಸೆಂಟರ್ - ಕನ್ನಡ ಅವತರಿಣಿಕೆ ಅಂತಾಣ.

ಚಂದ್ರಯಾನ ಆದಮೇಲೆ ಇಸ್ರೊ ಅಂತರ್ಜಾಲ ತಾಣಕ್ಕೆ ಬೇಟಿಕೊಡುತ್ತ ಇದ್ದೆ, ಅದರ ಮುಖಪುಟದಲ್ಲಿ ಸೆಟಲೈಟ್ ಸೆಂಟರ್(isac) ಕನ್ನಡ ತಾಣವಿರುವದನ್ನು ಗಮನಕ್ಕೆ ತಂದಿದ್ದು ನನ್ನ ಗೆಳೆಯ.
ಕುತೂಹಲಕ್ಕೆ ಒಮ್ಮೆ ಕ್ಲಿಕ್ಕಿಸಿದೆ, ಮೊದಲ ಅನಿಸಿಕೆಯಲ್ಲಿ ಅನಿಸಿದ್ದು, ಇದು ಕಾಟಾಚಾರಕ್ಕೆ ಮಾಡಿದ್ದು ಅಲ್ಲ ಅಂತ. ೩ ಫ್ರೆಮನಲ್ಲಿ ವಿಷಯಗಳನ್ನು ಹಂಚಿದ್ದಾರೆ. ಎಡಫ್ರೆಮ್
ಮೆನು ತರ ಆದರೆ, ಮಧ್ಯೆ ಫ್ರೆಮ್ ವಿಷಯವನ್ನ್ನು ಕೊಡುತ್ತದೆ. ಬಲಫ್ರೆಮ್ ಸಬ್ ಮೆನುಕೊಡುತ್ತದೆ. ಇಲ್ಲಿ ತನಕ ಸದ್ದಿಲ್ಲದೆ ಮಾಡಿದ ಅನೇಕ ವಿಷಯಗಳನ್ನು ಒಂದೆಡೆ ಸೇರಿಸಿ,ಸಂಬದಿಸಿ,ಹೊಲೆದು ತಂದಿದ್ದಾರೆ. ನಮ್ಮ ದೇಶ ಕಳಿಸಿದ ಎಲ್ಲಾ ಉಪಗ್ರಹಗಳ ಬಗ್ಗೆ ಇಲ್ಲಿ ಮಾಹಿತಿ ಸಿಗುತ್ತದೆ.


ಅದರಲ್ಲಿ ಒಂದು ವಿಷಯ ನನ್ನ ಗಮನ ಸೆಳೆಯಿತು, ಅದೆನೆಂದರೆ ೨೦೦೩ ತಾಂತ್ರಿಕ ಕಮ್ಮಟದಲ್ಲಿ ಚಂದ್ರ, ಚಂದ್ರಯಾನ ಬಗ್ಗೆ ಆಯ್ಕೆ ಮಾಡಿರುವುದು ಖುಷಿಯಾಯಿತು.
ಮೊನ್ನೆ ಸಿಕ್ಕಿದ ಯಶಸ್ಸು ಕೇವಲ ರಾತ್ರೊರಾತ್ರಿ ಬಂದಿದ್ದು ಅಲ್ಲ. ಇದರ ಹಿಂದೆ ಸತತ ವರುಷಗಳ ಪರಿಶ್ರಮ ಇದೆ, ಸುಮಾರು ವರುಶಗಳ ಸಾಧನೆ ಇದೆ. ಅದಕ್ಕೆ
ಚಂದ್ರಯಾನ-೧ ಸರಿಯಾಗಿ ಕಕ್ಷೆಗೆ ಹೋಗಿದ್ದು. ಈ ಕಮ್ಮಟದಲ್ಲಿ ಮಂಡಿಸಿದ್ದ ಮಾಹಿತಿಗಳು ಬಹಳ ಚೆನ್ನಾಗಿವೆ, ಇದನ್ನು ನಮ್ಮ ಮಕ್ಕಳಿಗೆ ಸಿಗುವ ಹಾಗೆ ಮಾಡಬೇಕು.

Thursday, October 23, 2008

ಮಾಹಿತಿ ಕಳವು ಯಾರಿಂದ ??

ವ್ಯ್ಪಾಪಾರದಲ್ಲಿ ಪ್ರತಿಯೊಂದು ಸಂಸ್ಥೆಗೂ ಇಲ್ಲ ಜನರಿಗು ಎದುರಾಗುವ ದೊಡ್ಡ ಸವಾಲು ಎಂದರೆ ಮಾಹಿತಿ ಸುರಕ್ಷಣೆ. ಅದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿ, ಅದನ್ನು ಸುರಕ್ಶಿತವಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಹೆಚ್ಚು ಅಪಾಯ ಆಗುವುದು, ಮಾಹಿತಿಗಳು ಇತರರ ಪಾಲಾಗುವುದು ಬೇರೆ ಯಾವ ರೀತಿಯಿಂದಲೂ ಅಲ್ಲ. ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಂದ. ಮಜಾ ಎನೆಪ್ಪಾ ಅಂದರೆ ಹ್ಯಾಕರಗಳಿಗಿಂತ ಹೆಚ್ಚು ಮಾಹಿತಿ ಕಳವು ಆಗುವುದು ಒಳಗಡೆ ಇರುವ ಜೇಡಗಳಿಂದ.



ಪ್ರತಿಯೊಂದು ಸಂಸ್ಥೆಗಳಲ್ಲೂ ಆಯಾ ಉದ್ಯೋಗಿಗಳನ್ನು ನಂಬಿಕೆಗೆ ತೆಗೆದುಕೊಂಡು, ಎನ್.ಡಿ.ಎ (non disclosure agreement) ಸಹಿ ಹಾಕಿಸಿಕೊಂಡಿರುತ್ತಾರೆ. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಜಿ.ಬಿ ಮಾಹಿತಿಗಳನ್ನು ಒಂದು ಪೆನ್ ಡ್ರೈವ್ ನಲ್ಲಿ ಕೊಂಡ್ಯಬಹುದು
ಅದನ್ನು ಯಾರು ಪರಿಕ್ಷಿಸುವದಿಲ್ಲ. ಅಷ್ಜು ಯಾಕೆ ಮೊಬೈಲನಲ್ಲಿ ಕೂಡ ಮಾಹಿತಿಯನ್ನು ತೆಗೆದುಕೊಂಡಬಹುದು.
ಅದಕ್ಕೆ ಕಾರಣ ಆಯಾ ಸಂಸ್ಥೆಗಳಲ್ಲಿ ಸುರಕ್ಷತಾ ಕ್ರಮ ಇಲ್ಲದೇ ಇರುವುದು.

ಹುಡುಗಾಟದ ಹುಡುಗಿಯ ಬ್ಲಾಗ್ ಮತ್ತು ಹುಡುಗಾಟ..


ರೇಡಿಯೋ ಮಿರ್ಚಿಯಲ್ಲಿ ಹುಡುಗಾಟದ ಹುಡುಗಿ ವರ್ಷ ತಮ್ಮ ಬ್ಲಾಗಿನಲ್ಲಿ ರಾಜ್ ಠಾಕ್ರೆ ಬಂಧನ ಮತ್ತು ಅದರ ಪ್ರಸ್ತುತತೆ ಬಗ್ಗೆ ಚೆನ್ನಾಗಿ ಬರೆದಿದ್ದಾರೆ. ಓದಿ ಖುಶಿಯಾಯಿತು.

ರಾಜ್ ಮಾಡುತ್ತಿರುವುದು ಇವತ್ತು ಪ್ರತಿರಾಜ್ಯದಲ್ಲಿ ಆಗಬೇಕಾಗಿದೆ. ಯಾವಾಗ ನಮ್ಮ ಅನ್ನವನ್ನು ಬೇರೆಯವರು ಕಿತ್ತುಕೊಳ್ಳುತ್ತಾರೆ ಆಗ ಕದನ, ಹೋರಾಟ ಅನಿವಾರ್ಯ. ನಾವೆಲ್ಲರೂ ಭಾರತೀಯರು, ಅವರು ತೆಗೆದುಕೊಂಡರೆ ಎನು ಅವರು ನಮ್ಮವರಲ್ಲವೇ ಅನ್ನೋ ಬುದ್ಧಿಜೀವಿಗಳು ತಮ್ಮ ಆಸ್ತಿಯನ್ನು ಬಡವರಿಗೆ ಬರೆದುಕೊಡುತ್ತಾರ ??. ಆ ಬಡವರು ಭಾರತೀಯರೆ ತಾನೆ, ಎಲ್ಲಾ ಭಾರತೀಯರು ಅಣ್ಣ ತಮ್ಮಂದಿರೇ ಅಲ್ಲವೇ ?.

ಅಂದ ಹಾಗೆ ಹುಡುಗಾಟದ ಹುಡುಗಿ ವರ್ಶ ತಮ್ಮ ಪರಿಚಯದಲ್ಲಿ ಹುಡುಗಾಟಕ್ಕೆ ಚಿಕ್ಕವೀರ ರಾಜೇಂದ್ರ ಪುಸ್ತಕವನ್ನು ದರಾ ಬೇಂದ್ರೆ ಬರೆದಿದ್ದು ಅಂತ ಹಾಕಿದ್ದಾರೆ. ಇದು ಹುಡುಗಾಟ ಅಂತ ಭಾವಿಸೋಣ.

Sunday, October 12, 2008

ಹೇಳೆ ಕನ್ನಡತಿ ಯಾಕೆ ನೀ ಹಿಂಗಾಡ್ತಿ ??

ಕನ್ನಡ ಮಾತನಾಡಲು ಬರುವದಿಲ್ಲ, ಕನ್ನಡಿಗರು ನನ್ನ ಆದರ್ಶರಲ್ಲ, ನನ್ನ ಗುರಿ ಕರ್ನಾಟಕವಲ್ಲ ಆದರೂ ನಾನು "ಕನ್ನಡದ ಮಗಳು", ಕರ್ನಾಟಕದ ರಾಯಭಾರಿ.
ಕನ್ನಡಿಗರ ಮಾನ ಒಂದು ಸ್ಪರ್ಧೆಯಲ್ಲಿ ಉಳಿಸಲು ನೀವು ನನ್ನ ಕೈ ಹಿಡಿಬೇಕು, ಒಂದು sms ಗೆ ರೂ ೩ ಖರ್ಚು ಮಾಡಿ ನನ್ನ ಗೆಲ್ಲಿಸಬೇಕು ಅನ್ನೋದು
ನಮ್ಮ ಕನ್ನಡತಿಯ ಅಂಬೋಣ.

ಯಾರಪ್ಪ ಈ ಕನ್ನಡತಿ ಎಂದರೆ, ದಿ ಗ್ರೇಟ್ ರಿತೀಷಾ ಪದ್ಮನಾಭ. ಸ್ಟಾರಪ್ಲಸ್ ನಲ್ಲಿ ನಡೆಯುವ ಅಮುಲ್ ವಾಯ್ಸ್ ಆಫ್ ಇಂಡಿಯಾದಲ್ಲಿ ಕರ್ನಾಟಕವನ್ನು
ಪ್ರತಿನಿಧಿಸುತ್ತ ಇರುವ ಹುಡುಗಿ. ಇವಳ ಅರ್ಕುಟ್ ಪ್ರೊಫೈಲ್ ಇಲ್ಲಾ ಇವಳ ವಾಯ್ಸ ಆಫ್ ಇಂಡಿಯಾ ಪ್ರೊಫೈಲ್ ನೋಡಿದರೆ ನಿಮಗೆ ಬೆಚ್ಚ ಬೆರಗಾಗುತ್ತದೆ, ಈ ಹುಡುಗಿಯಲ್ಲಿ
ಕನ್ನಡದ ಬಗ್ಗೆ ಕೀಳರಿಮೆ ಇರುವುದು ಸ್ಪಷ್ತ ಆಗುತ್ತದೆ. ಇದನ್ನು ಸಮರ್ಥಿಸಿಕೊಳ್ಳುವ ಜನರಿದ್ದಾರೆ ಬಿಡಿ, ಇದು ನ್ಯಾಷನಲ್ ಕಾರ್ಯಕ್ರಮ ಅಲ್ಲವಾ, ಕನ್ನಡ ಹಾಕಿದರೆ ಓಟ್ ಕಮ್ಮಿ ಬರಬಹುದೇನೊ
ಅಂತ ಹಾಕಿಲ್ಲ. ನಾಳೆ ಹೆಚ್ಚು ಓಟ್ ಸಿಗುತ್ತದೆ ಅಂದರೆ ಇವರು ಇನ್ನೊಬ್ಬರನ್ನು ಅಮ್ಮ ಅಂತ ಕರೆಯುತ್ತಾರಾ ?..

ಜನಾ ಹೈ ಬಾಲಿವುಡ್

ಗಮನಿಸಿ ನೋಡಿ, ಈ ಕನ್ನಡಿತಿಯ ಗುರಿ ಕರ್ನಾಟಕವಲ್ಲ, ಕನ್ನಡ ಹಾಡು ಹಾಡುತ್ತೆನೆ ಎಂದು ಎಲ್ಲೂ ಹೇಳಿಲ್ಲ, ಪ್ರಚಾರ ತಂತ್ರಕ್ಕೆ ಒಂದೆರೆಡು ಕನ್ನಡ ಹಾಡು ಹಾಡಿ ಅದನ್ನು ಯೂ-ಟ್ಯೂಬ್ ಮತ್ತು ಟಿ.ವಿಯಲ್ಲಿ
ಹಾಕಿಸಿದ್ದು ಬಿಟ್ಟರೆ, ಕಾರ್ಯಕ್ರಮ ಗೆದ್ದು ಇವಳು ಹಾಡಬೇಕೆಂದು ಬಯಸುವುದು ಬಾಲಿವುಡನಲ್ಲಿ, ಹಿಂದಿ ಹಾಡು ಹಾಡುವದಕ್ಕೆ ಇನ್ನೊಂದು ಸೇರ್ಪಡೆಯಾಗಬೇಕೆಂಬುದೆ ಇವಳ ಮಹದಾಸೆ.
ಒಂದು ರೀತಿಯಲ್ಲಿ ಕನ್ನಡಿಗ ಬೆಳೆಯಬೇಕು ಎಂದರೆ ನಮ್ಮ ನೆಲದಲ್ಲಿ ಜಾಗ ಇಲ್ಲ ಅನ್ನುವ ಇರಾದೆ ಇದೆ. ನಮ್ಮ ನೆಲದಲ್ಲಿ ಒಂದು ವೃತ್ತಿಯಲ್ಲಿ ಪ್ರಾವಿಣ್ಯತೆ ಪಡೆದರೆ ಬೇರೆ ಕಡೆಯಿಂದಲೂ ಜನ ಬಂದು ಅವಕಾಶ ಕೊಡುತ್ತಾರೆ
ಅನ್ನುವ ಸತ್ಯ ಯಾವಗ ತಿಳಿಯಬೇಕು?


ಕನ್ನಡಿಗ ಎಂದು ಹೇಳಿಕೊಳ್ಳಲು ಕೀಳರಿಮೆ ಯಾಕೆ ?

ಕನ್ನಡಿಗ ನನ್ನ ಆದರ್ಶರಲ್ಲ, ನನಗೆ ಕನ್ನಡ ಮಾತನಾಡಲು ಬರುವದಿಲ್ಲ, ಅಕಸ್ಮಾತ್ ಹಾಕಿದರೆ ಎಲ್ಲಿ ತಮಿಳರ ಓಟು ಸಿಗುವದಿಲ್ಲವೋ ಇಲ್ಲ ಜನ ಬಾಯಸಡ್ ಆಗುತ್ತಾರೆ ಅನ್ನೊ ಭಯವೋ ತಿಳಿಯದು. ಒಂದು ಸ್ಪರ್ಧೆ ಗೆಲ್ಲಬೇಕು ಎಂದರೆ
ಇಷ್ಟೆಲ್ಲಾ ನಾಟಕವಾಡಬೇಕೆ ?. ಕನ್ನಡಿಗರ ಮುಂದೆ ನಾನು ವೀರ ಕನ್ನಡತಿ ಎಂದು ಪೋಸ್ ಕೊಡುವುದು, ಅದೇ ಬೇರೆ ಭಾಷಿಕರ ಮುಂದೆ ನನ್ನ ಐಡೆಂಡಿಟಿ ಹಿಂದಿ, ಇಲ್ಲ ನಿಮ್ಮವಳು ಎಂದು ತೋರಿಸುವುದು ಒಂದು ತಂತ್ರ ಆಗಿದ್ದರೆ ಕನ್ನಡಿಗರು ಇವಳಿಗೆ ಪ್ರೊತ್ಸಾಹ ಕೊಟ್ಟು ಗೆಲ್ಲಿಸಬೇಕೆ ??

ಒಗ್ಗರಣೆ

ಇವಳ ಮೈಲ್ ಸಾಲುಗಳ ಮದ್ಯ ಓದಿದರೆ

I am extremely grateful to all of you, especially Kannadigas, for showering your love and support on me, and taking me to the top 7 in Amul Star Voice of India.
ನಾನು ನಿಮಗೆ ಅಭಾರಿ, ಅದರಲ್ಲೂ ಮೂರ್ಖ ಕನ್ನಡಿಗರೂ. ನಾನು ಸುಮ್ಮನೆ ಕನ್ನಡತಿ ಅಂತ ಹೇಳಿದಕ್ಕೆ ನನಗೆ ಪ್ರೀತಿ,ಪ್ರೊತ್ಸಾಹ ಕೊಟ್ಟು ನನ್ನ ಟಾಪ್ ೭ಕ್ಕೆ ತಂದಿದ್ದೀರಾ.

[quote] From here, the competition gets even tougher. I have the responsibility of keeping the honor of my state, Karnataka, on my shoulders. Karnataka has always been one of the pioneers in the field of music all through history of this country. I therefore request all of you to continue to support me with your votes, so that we can take Karnataka to the top, and make Karnataka the “Voice of India”.[/quote]

ಆದರೆ ಇಷ್ಟೆ ಸಾಲದು, ಇದು ಇನ್ನ ಕಷ್ಟ ಆಗುತ್ತದೆ, ನೀವು ಇನ್ನಾ ಮೂರ್ಖರಾಗಬೇಕು. ನಿಮಗೆ ಗೊತ್ತಿಲ್ವಾ ಕರ್ನಾಟಕದ ಗೌರವ ನನ್ನ ಹೆಗಲ ಮೇಲೆ ಇದೆ ( : )) lol ). ಕರ್ನಾಟಕ ಯಾವಗಲೂ ಸಾಧಕರ ತವರೂರು ಅನಿಸಿದೆ, ವಿವಿಧ ಸಂಗೀತದಲ್ಲಿ ಕರ್ನಾಟಕದವ್ರು ಚರಿತ್ರೆ ಬರೆದಿದ್ದಾರೆ( ಆದರೆ ನನಗೆ ಯಾರು ಅಂತ ಗೊತ್ತಿಲ್ಲ,ಇಲ್ಲಾ ನನ್ನ ಆದರ್ಶ ಅವರಲ್ಲ ಬಿಡಿ). ನಾಳೆ ನಾನು ಬಾಲಿವುಡ್ ನಲ್ಲಿ ದುಡ್ಡು ಮಾಡಬೇಕು ಎಂದರೆ ನನಗೆ ಇವತ್ತು ನೀವು ದುಡ್ಡು ಖರ್ಚು ಮಾಡಿ sms ಕಳುಹಿಸಬೇಕು. ಆಮೇಲೆ ನೀವ್ಯಾರೋ ನಾನ್ಯಾರೊ .. ಇಂತಿ ನಿಮ್ಮ ಕನ್ನಡತಿ.

Friday, September 26, 2008

ಬುದ್ಧಿವಂತ(BUDDHIVANTHA) film review

ಬಹಳ ನಿರೀಕ್ಷೆಯ ಉಪೇಂದ್ರ ನಟಿಸಿರುವ ಬುದ್ಧಿವಂತ ಚಿತ್ರ ತೆರೆಗೆ ಬಂದಿದೆ, ಸಾಲು ಸಾಲು ಫ್ಲಾಪ್ ಚಿತ್ರಗಳನ್ನೇ ನೀಡುತ್ತಿದ್ದ ಉಪೇಂದ್ರನಿಗೆ ಇದೊಂದು ಅಗ್ನಿಪರೀಕ್ಷೆ ಆಗಿತ್ತು. ಅದಕ್ಕಿಂತೂ ಮುಖ್ಯವಾಗಿ
ಇವನ ಮುಂದಿನ ಚಿತ್ರದ ಕಥೆ ಎಲ್ಲರಿಗೂ ಗೊತ್ತಿರುತ್ತ ಇತ್ತು. ಅದಕ್ಕೆ ಕಾರಣ ಬೇರೆ ಭಾಷೆಗಳಿಂದ ಅವನು ಮಾಡುತ್ತಿದ್ದ ರೀಮೆಕ್. ಎ, ಉಪೇಂದ್ರ ಚಿತಗಳನ್ನು ನೋಡಿದ್ದ ಜನರಿಗೆ ಇದು ಇಂದಿಗೂ
ನುಂಗಲಾರದ ತುತ್ತೇ ಸರಿ. ಮಧ್ಜೆ ಮಧ್ಯೆ ಸ್ವಂತ ಕಥೆಯುಳ್ಳ ಚಿತ್ರಕ್ಕೆ ಕೈ ಹಾಕಿದರೂ ಅದೂ ತೊಪ್ಡ ಎದ್ದು ಹೋಯಿತು.

ಉಪೇಂದ್ರನ ದೊಡ್ಡ ಶಕ್ತಿ ಅವನ ಸಂಭಾಷಣೆ ಮತ್ತು ನಿರೂಪಣೆ, ಕಾಶಿನಾಥ್ ಗರಡಿಯಲ್ಲಿ ಇದನ್ನು ಚೆನ್ನಾಗಿ ಕಲಿತಿರುವ ಉಪ್ಪಿ ಬುದ್ದಿವಂತ ಚಿತ್ರದಲ್ಲೂ ತಮ್ಮ ವರಸೆ ತೋರಿಸಿದ್ದಾರೆ. ಕೆಲ ಸಂಭಾಷಣೆಯಿಂದಲೆ
ಇದು ಟಿಪಿಕಲ್ ಉಪ್ಪಿ ಡೈಲಾಗ್ ಎಂದು ಗೊತ್ತಾಗುತ್ತದೆ. ಮುಖ್ಯವಾಗಿ ಉಪ್ಪಿ ಆಯ್ದುಕೊಳ್ಳುವ ನೆಚ್ಚಿನ ವಿಷಯ ಎಂದರೆ "ಗಂಡು-ಹೆಣ್ಣು ಸಮಾನತೆ" , ಹೆಣ್ಣು ಹೇಗೆ ಇರಬೇಕು, ಇದನ್ನು ಪದೇ ಪದೇ ತನ್ನ ಸಂಭಾಷಣೆಯಲ್ಲಿ
ಇಲ್ಲಿವರೆಗೂ ತೋರಿಸಿದ್ದಾನೆ. ಒಮ್ಮೆ ಇವನ ಈ ರೀತಿಯ ಸಂಭಾಷಣೆಗಳೂ ಇವನೊಬ್ಬ MCP ಅನಿಸುವ ಹಾಗೆ ಮಾಡೊತ್ತೆ. ಆದರೆ ತನ್ನ ಮಾತುಗಳನ್ನು ಲಾಜಿಕನಲ್ಲಿ ಹಾಕಿ ಹೇಳಿರುವ ಜಾಣ್ಮೆ ಉಪ್ಪಿ ಮೆರೆದಿದ್ದಾನೆ.

ಬುದ್ಧಿವಂತ ಹೆಸರಿಗೆ ಹೇಳುವ ಹಾಗೆ ಇದು ಉಪ್ಪಿಯ ಬಿರುದು ಬಾವಲಿ, ಚಿತ್ರಕ್ಕೆ ಆ ಹೆಸರಿಟ್ಟ ಮೇಲೆ ಬುದ್ಧಿವಂತಿಕೆಯನ್ನು ಪ್ರದರ್ಶನ ಮಾಡಲೇ ಬೇಕಲ್ಲ, ಅದೇ ಚಿತ್ರದ ಉದ್ದಕ್ಕೂ ಇದೆ. ಪ್ರೇಕ್ಷಕ ಇವನ್ನು ಬುದ್ಧಿವಂತ ಅನ್ನುತ್ತಾನೋ ಇಲ್ಲವೋ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳಿಂದಲೂ ಅನ್ನಿಸಿದ್ದಾರೆ. ಕಥೆ ಶುರುವಾಗುವುದೇ ಒಂದು ಪೋಲಿಸ್ ಠಾಣೆಯಲ್ಲಿ ೪-೫ ವಿವಿಧ ಜನ ಒಂದೇ ಸಾರಿ ಕಂಪ್ಲೇಂಟ್ ಮಾಡಲು ಬಂದಿರುತ್ತಾರೆ, ಎಲ್ಲಾರೂ ಮೋಸ ಹೋದವರೆ
ಎಲ್ಲರಿಗೂ ಮೋಸ ಮಾಡಿದವನು ಒಬ್ಬನೇ , ಆದರೆ ವಿವಿಧ ವೇಷದಲ್ಲಿ..ಯಾರಿವನು ಅಂತ ಎಲ್ಲರಿಗೂ ಗೊತ್ತಾಗಿರುತ್ತದೆ.

ಉಪ್ಪಿ ಎಂಟ್ರಿ ಆಗುವುದೇ "ಯಾರೋ ಯಾರೋ..ಹಾಡಿನಲ್ಲಿ". ಅದರಲ್ಲಿ ಚಿತ್ರದ ಎಲ್ಲಾ ನಾಯಕಿಯರು ಉಪ್ಪಿಯ ಹಿಂದೆ ಸುತ್ತುತ್ತಾ ಇರುತ್ತಾರೆ ಆದರೆ ಉಪ್ಪಿ ಮಾತ್ರ ನಾನವನಲ್ಲ ಅಂತ ಜಾರುತ್ತ ಇರುತ್ತಾನೆ. ಈ ಹಾಡಿನಲ್ಲಿ ಅನೇಕ ವಿಷಯಗಳು ತಿಳಿಯುತ್ತವೆ. ಈ ಹುಡುಗಿಯರು ಉಪ್ಪಿಯನ್ನು ತುಂಬಾ ಇಷ್ಟ ಪಟ್ಟಿರುತ್ತಾರೆ,ಮದುವೆ ಆಗಿರುತ್ತಾರೆ, ತುಂಬಾ ಹಚ್ಚಿಕೊಂಡಿರುತ್ತಾರೆ ಆಗ ಉಪ್ಪಿ ಕೈಕೊಟ್ಟು ಹೋಗಿರುತ್ತಾನೆ. ಮತ್ತೊಂದು ವಿಷ್ಯ ಇದೆ ಹಾಡಿನಲ್ಲಿ ೪ ಜನ ಹುಡುಗಿಯರು ಒಂದು ತರಹದ ಡ್ರೆಸ್ ಹಾಕಿದರೆ , ಪೂಜಾಗಾಂಧಿಗೆ ಬೇರೆ ತರ ಬಟ್ಟೆ ಹಾಕಿಸಿದ್ದಾರೆ, ಸೋ ..ಅವಳದು ಬೇರೆಯವರ ತರ ಪಾತ್ರ ಅಲ್ಲ ಅಂತ ಇಲ್ಲಿ ಹೇಳಬಹುದು.

ನಂತರ ಉಪ್ಪಿಯನ್ನು ಹುಡುಕುವುದೇ ಪೋಲಿಸರ ದೊಡ್ಡ ಕೆಲ್ಸ ಆಗುತ್ತದೆ, ಒಂದು ಚೇಸಿಂಗನಲ್ಲಿ ಉಪ್ಪಿ ನಯಾಗರಕ್ಕೆ ಹಾಕಿ ಸುಳಿಗೆ ಸಿಕ್ಕಿಹಾಕಿಕೊಂಡು ಸತ್ತು ಹೋಗುತ್ತಾನೆ ಎಂದು ಪೋಲಿಸ ಅನ್ನುಕೊಳ್ಳುವಾಗಲೇ ಒಂದು ಬಸ್ ಅಪಘಾತಕ್ಕೆ ಈಡಾಗಿ ಅದರಲ್ಲಿ ಒಬ್ಬ ಉಪ್ಪಿಯ ಹೋಲಿಕೆಯನ್ನು ಹೋಲುತ್ತ ಇರುತ್ತಾನೆ. ಅವನೇ ಚಿತ್ರದ ಹೈಲೈಟ್ "ಪಂಚಾಮೃತಾ ಅಲಿಯಾಸ್ ಪಂಚೆ", ಅವನನ್ನು ಎಳೆದುಕೊಂಡು ಬಂದು ನ್ಯಾಯಾಲಕ್ಕೆ ತರುತ್ತಾರೆ.
ಈ ಪಂಚೆ ಮಂಗಳೂರಿನ ಮೂಲದವನು, ಅವನ ಕನ್ನಡದಲ್ಲಿ ಕುಂದಾಪುರದ ಸೊಗಡನ್ನು ತಂದಿದ್ದಾರೆ. ಮಾತು ಕಮ್ಮಿ ಆಡಬೇಕು ,ಯಾಕೆ ಅಂತ ಅರ್ಧಗಂಟೆ ಮಾತನಾಡುವ ಆಸಾಮಿ ಇವನು.
ನ್ಯಾಯಲಯದಲ್ಲಿ ತನ್ನ ತಾನೇ ಪರ ನ್ಯಾಯ ಮಂಡಿಸಿ "ನಾನವನಲ್ಲ" ಎಂದು ಪದೇ ಪದೇ ಹೇಳುತ್ತ ಇರುತ್ತಾನೆ.

ನ್ಯಾಯಲಯದ ಜಡ್ಜಮ್ಮ ಲಕ್ಷ್ನೀ ಮತ್ತು ಅವನ ಮಗಳಾಗಿ ಪೂಜಾಗಾಂಧಿ ನಟಿಸಿದ್ದಾಳೆ. ಅವಳೂ ಕೂಡ ಇವನಿಂದ ಮೊಸ ಹೋಗಿರುತ್ತಾಳೆ, ಅದ್ದರಿಂದ ಈ ಕೇಸಿನಲ್ಲಿ ಅವಳಿಗೆ ವಿಚಿತ್ರ ಆಸಕ್ತಿ. ಅದಕ್ಕೂ ಹೆಚ್ಚಾಗಿ ತಾನೇ ಅತಿ ಬುದ್ಧಿವಂತಳು
ಎಂದು ನಂಬಿರುತ್ತಾಳೆ, ಆ ನಂಭಿಕೆಯನ್ನು ಇವನು ಚೂರು ಚೂರು ಮಾಡಿರುತ್ತಾನೆ.

ಚಿತ್ರದ ೨೦% ನ್ಯಾಯಾಲದಲ್ಲೇ ಆಗುತ್ತದೆ, ಮೋಸ ಹೋದ ಪ್ರತಿ ಹೆಣ್ಣು ಮಕ್ಕಳು ತಮ್ಮ ಕಥೆಯನ್ನು ಹೇಳಿಕೊಂಡು ಹೇಗೆ ತಮಗೆ ಮೋಸ ಮಾಡಿದ ಎಂದು ಹೇಳುತ್ತಾರೆ. ಆದನ್ನು ತಳ್ಳಿಹಾಕುವ ಪಂಚೆ
ಅವರನ್ನು ತನ್ನ ಮಾತಿನಲ್ಲಿ ಸಿಲುಕಿಸಿ,ಅವರದೇ ತಪ್ಪು ಎನ್ನುವ ಹಾಗೆ ಮಾತನಾಡುತ್ತಾನೆ. ಮೋಸ ಹೋದ ಪ್ರತಿ ಹೆಣ್ಣಿನ ಹತ್ತಿರವೂ ಒಂದೇ ಒಂದು ಸಾಕ್ಷಿ ಇರುವದಿಲ್ಲ. ಆಗ ಶ್ರೀಧರ್ ಬರುತ್ತಾರೆ, ಅವರೂ
ಉಪ್ಪಿಯ ಅಣ್ಣ ಎಂದು ಪರಚಯಿಸಿಕೊಳ್ಳುತ್ತಾರೆ. ಅವರೂ ಈ ಪಂಚೆ ನನ್ನ ತಮ್ಮ ಎಂದೂ ವಾದಿಸುತ್ತಾರೆ, ಎಲ್ಲರ ವಾದವನ್ನು ತಳ್ಳಿಹಾಕುವ ಉಪ್ಪಿ "ನಾನವನಲ್ಲ ನಾನವನಲ್ಲ ನಾನವನಲ್ಲ" ಅಂತ ೨೦ ಸಾರಿ ಹೇಳಿರುತ್ತಾರೆ.
ಅದೂ ನೋಡುವ ಜನರಲ್ಲೂ ಎಲ್ಲೋ ನಾಟಿರುತ್ತದೆ, ಎಲ್ಲೋ ಡಬಲ್ ಆಕ್ಟಿಂಗ್ ಇರಬೇಕು ಅಂತ ನಮ್ಮದೇ ತರ್ಕಗಳನ್ನು ಮಾಡಿಕೊಳ್ಳುತ್ತೇವೆ, ಆ ರೀತಿಯ ಕೂತುಹಲವನ್ನು ಉಪ್ಪಿ ಚೆನ್ನಾಗಿ ಮಾಡಿದ್ದಾರೆ.ಡಿ.ಎನ್.ಎ, ಪಾಲಿಗ್ರಾಫಿ ಎಲ್ಲಾ ಪರೀಕ್ಷೆ ಆಗಿ ಅದರಲ್ಲೂ -ve ಆಗುತ್ತದೆ. ಪೋಲಿಸರಿಗೆ ಇದೊಂದು ಹುಚ್ಚು ಹಿಡಿಸುವ ಹಾಗೆ ಆಗುತ್ತದೆ. ಎಲ್ಲವನ್ನೂ ಗಮನಿಸಿದ ನ್ಯಾಯಾಲಯ ಇವನನ್ನು ಬಿಡುಗಡೆ ಮಾಡುತ್ತದೆ. ತೀರ್ಪು ಹೊರಬಂದ ನಂತರ ವಿವಿಧ ವೇಷಧಾರಿಗಳು
ಹೊರಹೋಗುತ್ತಾರೆ, ಇದನ್ನು ಗಮನಿಸುವ ಹುಡುಗಿಯರು ಇವರ ಹಿಂದೆ ಹೋಗುತ್ತಾರೆ.. ಮುಂದೆ ಎನಾಗುತ್ತದೆ, ಚಿತ್ರ ನೋಡಿ.

ಆಕರ್ಷಣೆಗಳು
---------------
೧) ಉಪ್ಪಿಯ ಅಭಿನಯ
೨) ಪಂಚಿಗ್ ಡೈಲಾಗ್ಸ
೩) ಹಾಡುಗಳು
೪) ೫ ನಾಯಕಿಯರು
೬) ಸ್ಕ್ರೀನ್ ಪ್ಲೇ.

ಬೇಜಾರು
-----------

೧) ಚಿತ್ರದ ೨೦% ತೆಲುಗುನಲ್ಲಿ ಇದೆ, ತೆಲುಗು ಚಿತ್ರಗಳ ಮತ್ತು ಹಿಂದಿ ಚಿತ್ರಗಳನ್ನು ಸ್ಪೂಫ್ ಮಾಡುವ ಗೋಜಿನಲ್ಲಿ ಒಂದು ಪ್ರಮಖ ವಿಷಯ ಉಪ್ಪಿ ಮರೆತಿದ್ದಾರೆ ಇಲ್ಲಾ ತಾವೇ ಅಂದುಕೊಂಡಿದ್ದಾರೆ.
ಕನ್ನಡಿಗರೆಲ್ಲರಿಗೂ ತೆಲುಗು ಬರುತ್ತದೆ ಎಂದು. ಈ ಭಾಗವನ್ನು ಸುಮಾರು ಜನರಿಗೆ ಫಾಲೋ ಮಾಡಲು ಆಗುವದಿಲ್ಲ, ಉದ್ದುದ್ಧ ಸಂಭಾಷಣೆ ಅರ್ಥ ಆಗುವದಿಲ್ಲ. ಇಲ್ಲಿ ಜನ ಕಳೆದುಹೋಗುವ ಸಾಧ್ಯತೆ ಹೆಚ್ಚು ಇದೆ.
ಅದಕ್ಕೆ ಕನ್ನಡ ಸಬ್ ಟೈಟಲ್ಸ ಹಾಕಬೇಕಿತ್ತು. ಆ ಶಿಸ್ತು ಬೇರೆ ಭಾಷಿಕರಲ್ಲಿ ಇದೆ. ಆದರೆ ಉಪ್ಪಿ ತಮ್ಮ ಸಂಭಾಷಣೆಯಲ್ಲಿ ಹೇಳುವ ಹಾಗೆ " ನಾವು ಕನ್ನಡಿಗರಲ್ಲವೋ ತುಂಬಾ ಉದಾರಶಾಲಿಗಳು, ಕನ್ನಡ ಚಿತ್ರಕ್ಕಿಂತ ಬೇರೆ ಭಾಷೆಯ ಚಿತ್ರಗಳನ್ನೆ ನೋಡುವುದು" ಆ ಅನಿಸಿಕೆ ಮೇಲೆ ಮಾಡಿದ್ದರೆ ಅದು ಅವರ ಮೂರ್ಖತನ.

೨) ಚಿತ್ರದಲ್ಲಿ ನಾಯಕಿಯರಿಗೆ ಸ್ವಲ್ಪವೂ ನಟನೆಗೆ ಅವಕಾಶವಿಲ್ಲ, ಹಾಡು, ೨ ಸೀನುಗಳಿಗೆ ಮಾತ್ರ ಸೀಮಿತ.

೩) ಪೋಲಿಸರನ್ನು ಮತ್ತೊಮ್ಮೆ ಮೂರ್ಖರನ್ನಾಗಿ ತೋರಿಸಿದ್ದಾರೆ, ಒಬ್ಬ ಬುದ್ಧಿವಂತ ಆಗಬೇಕಾದರೆ ಇನ್ನೊಬ್ಬ ಮೂರ್ಖ ಆಗಲೇಬೇಕಲ್ಲವೇ ??

೪) ಹಿಂಸೆ ಕೊಡುವ ತೆಲುಗು ಹಾಡು.


ಒಟ್ಟಿನಲ್ಲಿ ಒಮ್ಮೆ ನೋಡಲೇ ಬೇಕಾದ ಚಿತ್ರ ಇದು....

Monday, September 15, 2008

ಅಂತೂ ಇಂತೂ ಹಬ್ಬ ಮುಗೀತು

ಮುಂದುವರೆಯುತ್ತ ..
ಸ್ಯಾಂಕಿ ಟ್ಯಾಂಕ್ ಇಲ್ಲಾ ಅಲಸೂರು ಕಡೆಯಿಂದ ನೀವು ಹಾದು ಹೋಗುವದಾದರೆ ಒಳ್ಳೆ ಮನರಂಜನೆ ಸಿಗುತ್ತದೆ ನಿಮಗೆ.  ಗಣೇಶನನ್ನು ಬಾವಿಗೆ ತಳ್ಳೋ
ಆನಂದವನ್ನು ಬಿತ್ತರಿಸುವ ಮುಖಗಳು ಮತ್ತು ಅವರ ಪುಂಡಾಟ ನೋಡುವದಕ್ಕೆ ಎರಡು ಕಣ್ಣು ಸಾಲದು. ಹೀಗೆ ದೇವರನ್ನು ಕರೆದುಕೊಂಡು ಹೋಗುವ ಜನ
ಸ್ವಲ್ಪ ವಿನಯ ಕಲಿತರೆ ಇನ್ನೂ ಚೆನ್ನಾಗಿರುತ್ತದೆ, ಅದ್ರೆ ಈ ಪುಂಡು ಪೋಕರಿ ಹುಡುಗರಿಗೆ ಅವೆಲ್ಲಾ ಎನು ಬೇಕಿದೆ ?.
ದಾರಿ ಮಧ್ಯೆ ಎಣ್ಣೆ ಅಂಗಡಿ ಕಂಡರೆ ಒಂದು ರೌಂಡ್ ಹಾಕಿಕೊಂಡು ಬಂದು ಫುಲ್ ಮೀಟರಿಂದ ಆಹಾ ಎಷ್ಟು ಚೆನ್ನಾಗಿ ಡ್ಯಾನ್ಸ ಮಾಡ್ತಾರೆ ಗೊತ್ತ. ದಾರಿ ಮಧ್ಯೆ ಹೋಗೊವಾಗ ಅದು ಸಿಗ್ನಲನಲ್ಲಿ ಸುತ್ತ ಮುತ್ತ ಹುಡುಗಿಯರು ಇಲ್ಲಾ ಹೆಂಗಸರು ಕಂಡರೆ ಸಾಕು ಆ ಗಣೇಶನ ಹೂವುಗಳನ್ನೇ ಎರಚುತ್ತಾರೆ. ಬನ್ನಿ ಡ್ಯಾನ್ಸ ಮಾಡೋಣ ಅಂತ ಅಹ್ವಾನಿಸುತ್ತಾರೆ. ಇನ್ನ ಕೆಲವರು ಮೈಕ್ ಜೀವನದಲ್ಲಿ ಮೊದಲ ಸಾರಿ ಹಿಡಿದ ಹಾಗೆ, ಗಣೇಶನಿಗೆ ಜೈ, ಶಿವನಿಗೆ ಜೈ
ಕನ್ನಡಾಂಬೆಗೆ ಜೈ , ಡಾ.ರಾಜ್ ಕುಮಾರಗೆ ಜೈ ಅಂತ ತಮಗೆ ಹೊಳೆಯುವ ಹೆಸರನಲ್ಲಾ ಕರೆಯುತ್ತಾರೆ. ಇವರು ಮೈಕಿನಲ್ಲಿ ಮಾತಡಬೇಕು ಎಂದು ಮಾತನಾಡುತ್ತಾರೆ, ದಾರಿ ಮಧ್ಯೆ ಅದೇ ಮೈಕಿನಲ್ಲಿ ನಿಮಗೆ " ಲೊ..ಮಗ ಮುಚ್ಕೊಂಡು ಈ ಕಡೆ ಬಾ", "ನಿನ್..ಅ** ಆ ಕಡೆ ಹೋಗೊ", "ಲ* ಬಾ*" ಅನ್ನೊ ಸಂಸ್ಕ್ರುತದ ಶಬ್ದಗಳು ಬೀಳುತ್ತಲೆ ಇರುತ್ತವೆ. ಇನ್ನೂ ವಿಸರ್ಜನೆ ಸಮಯದಲ್ಲಿ ಇವರು "ಎಲ್ಲಾ ಒಟ್ಟಿಗೆ ವಿಸರ್ಜನೆ ಮಾಡಿ","ನಾವು ಹೇಳೊ ತನಕ ಯಾರು ಅವರದು ವಿಸರ್ಜನೆ ಮಾಡಬಾರದು". "ಒಬ್ಬಬರೆ ನೀರು ಒಳಗಡೆ ಮಾಡಬೇಕು",
ಇವರು ಎಲ್ಲಿದ್ದರೂ ..ಬರಬೇಕು ಅಂತ ವಿನಂತಿಗಳ ಕೇಳೋಕ್ಕೆ ಎರಡು ಕಿವಿ ಸಾಲದು. ಪುಣ್ಯ ಹಬ್ಬ ಮುಗಿತು ಅಂತ ಖುಷಿ.

Monday, September 01, 2008

ಮತ್ತೆ ಬಂದ ಗಣೇಶ


ಭಾದ್ರಪದ ಮಾಸ ಬಂತು ಅಂದರೆ ಸಾಕು ಎಲ್ಲಿಲ್ಲದ ಸಡಗರ, ಅದಕ್ಕೆ ಕಾರಣ ಗಣೇಶನ ಹಬ್ಬ. ಗಣೇಶನ ಬಗ್ಗೆ ನಮ್ಮ ಭಾರತದಲ್ಲಿ ಅತಿಯಾಗಿ ಭಕ್ತಿ ಇದೆ, ಎಲ್ಲಾ ವರ್ಗದ ಜನ ಪೂಜಿಸುವುದು, ಹೆಚ್ಚು ದೇವಸ್ಥಾನ ಇರುವ ಶಕ್ತಿಶಾಲಿ ದೇವರು ಎಂದರೆ ಅತಿಶಯೋಕ್ತಿ ಆಗಲಾರದು. ನಿರಾಕಾರ, ಓಂಕಾರ ರೂಪಿ , ಅದಿಮೂಲ ಎಂದು ಒಂದು ಕಡೆ ಕರೆದರೆ, ಇನ್ನೊಂದು ಕಡೆ ಗೌರಿ ಪುತ್ರ, ಶಿವಸುತ ಅಂತ ಹೇಳುತ್ತಾರೆ. ಒಟ್ಟಿನಲ್ಲಿ ಒಂದು ಎಕರೂಪ ಅಭಿಪ್ರಾಯವಿಲ್ಲ ಎಂಬುದು ಇದರಿಂದ ತಿಳಿಯುತ್ತದೆ.

ಈ ಹಬ್ಬ ಬಂತು ಅಂದರೆ ಸಾಕು, ಬೀದಿ ಬೀದಿಯಲ್ಲಿ ಇರುವ ಹೈಕಳಿಗೆ ಕೈ ತುಂಬ ಕೆಲಸ, ನಿಮ್ಮ ಮನೆಗೆ ಗೊತ್ತು ಗುರಿ ಇಲ್ಲದ ದಂಡು ಬಂದು ಚಂದಾ ಕೇಳುತ್ತದೆ,
"ಇಲ್ಲೇ ಪಕ್ಕದ ರಸ್ತೆಯಲ್ಲಿ ಗಣೇಶ ಕೂರಿಸ್ತಾ ಇದ್ದೀವಿ, ಚಂದಾ ಕೊಡಿ" ಅಂತ ಕೇಳ್ತಾರೆ.
"ಅಲ್ಲಾಪ್ಪಾ ಮೊನ್ನೆ ತಾನೇ ಇಬ್ಬರೂ ಹೀಗೆ ಹೇಳಿ ಚಂದಾ ತೆಗೆದುಕೊಂಡು ಹೋದರಲ್ಲಾ " ಅಂತ ಕೇಳಿದರೆ, ಅದಕ್ಕೆ ತಕ್ಷಣ ಉತ್ತರ ರೆಡಿ ಇರೊತ್ತೆ.
"ಅಯ್ಯೊ ಅವರು ಬೇರೆ ನಾವು ಬೇರೆ, ಅವರಿಗೆ ಕೊಟ್ರಿ ಅಂದರೆ ನಮಗೂ ಕೊಡಬೇಕು" ಅಂತ ದಂಬಾಲು ಬೀಳುತ್ತಾರೆ.

ಇದು ವಿನಂತಿ ಆಗಿರುವದಿಲ್ಲ, ಹಿಂಸೆ, ಒತ್ತಾಯ ಇರುತ್ತದೆ. ಕೆಲ ಪುಂಡರಂತು ಮೊದಲೆ ರಸೀತಿ ಬರೆದು ಕೈಗೆ ಕೊಟ್ಟು ಬಿಡುತ್ತಾರೆ.
ದುಡ್ಡು ಕೊಡುವ ತನಕ ಬಿಡುವದಿಲ್ಲ. ಅದೂ ೧೦.,೨೦ ತೆಗೆದುಕೊಳ್ಳುವ ಜಯಾಮಾನ ಅಲ್ಲ, ೧೦೦,೫೦೦ ಕೊಡಬೇಕಂತೆ. ರೂ ೧೦ ಕೊಟ್ಟು ನೀವೆ ಇಟ್ಕೊಳ್ಳಿ ಅಂತ ಹೇಳಿ ಹೋದ ಪಡ್ಡೆಗಳು ಕಮ್ಮಿ ಇಲ್ಲ.

ಅಲ್ಲಾ ... ಗಲ್ಲಿ ಗಲ್ಲಿಗೆ ಗಣೇಶನನ್ನು ಯಾಕೆ ಕೂರಿಸಬೇಕು ಅಂತ ಪ್ರತಿ ವರುಶ ನನ್ನನ್ನು ನಾನು ಕೇಳಿಕೊಳ್ಳುವ ಪ್ರಶ್ನೆ??

* ರಸ್ತೆಯನ್ನು ಆಕ್ರಮಿಸಿ, ಸಾರ್ವಜನಿಕರಿಗೆ ತೊಂದರೆ ಕೊಡುವುದು
* ಬೆಳಿಗ್ಗೆಯಿಂದ ರಾತ್ರಿ ತನಕ ಕೆಟ್ಟ ಸಂಗೀತ ಹಾಕಿ ಜನರ ನೆಮ್ಮದಿ ಕೆಡಸುವುದು.
* ದಾರಿಯಲ್ಲಿ ಹೋಗಿ ಬರುವ ಹುಡುಗಿಯರನ್ನು ರೇಗಿಸುವ ಪೋಲಿಗಳು.
* ಗಣೇಶನ ವಿಸರ್ಜನೆ ಸಮಯದಲ್ಲಿ ಅಸಭ್ಯ ನೃತ್ಯ, ಕುಡಿತಗಳನ್ನು ನೋಡುವ ಕರ್ಮ.
* ಪಟಾಕಿ ಹೋಡಿಯುವ ನೆಪದಲ್ಲಿ, ಪಟಾಕಿಯನ್ನು ಗಾಡಿಯ ಕೆಳಗೆ ಹಾಕುವ ಭಕ್ತವೃಂದ.
* ಕೆಟ್ಟ ಬಣ್ಣಗಳಿಂದ ಪರಿಸರಕ್ಕೆ ಹಾನಿ.

ಗಣೇಶನನ್ನು ಕೂರಿಸ್ತಾ ಇದ್ದೀವಿ ಅನ್ನೋ ಸಾರ್ವಜನಿಕರಿಗೆ ಕಷ್ಟ ಕೊಡುವ ಬಂಡರಿಗೆ

* ಯಾಕೆ ಗಣೇಶನನ್ನು ಕೂರಿಸ್ತಾ ಇದ್ದೀರಾ, ಇವತ್ತಿಗೆ ಅದರ ಪ್ರಸ್ತುತತೆ ಏನಿದೆ ಎಂದು ಕೇಳಿ.
* ನಮ್ಮ ಮನೆಯಲ್ಲೂ ಕೂರಿಸ್ತಾ ಇದ್ದೀವಿ, ನೀವೆ ಕೊಡಿ ಅಂತ ಕೇಳಿ

ಉತ್ತರ ಗೊತ್ತಿಲ್ಲದ ಪುಂಡು ಪೋಕರಿಗಳು, ಅಯ್ಯೊ ..ಬಾ ಮಗ ಸುಮ್ಮನೆ ಈ ವಯ್ಯ ಕೊಡೊಲ್ಲ ಅಂತ ಬಂದ ದಾರಿ ನೋಡಿಕೊಳ್ಳುತ್ತಾರೆ.

ಸರ್ಕಾರ ಒಂದು ಊರಿಗೆ ೧,೨ ಅಬ್ಬಾ ೫-೬ ಕಡೆ ಮಾತ್ರ ಕೂರಿಸಲು ಅನುಮತಿ ಕೊಡಬೇಕು. ಇಲ್ಲದಿದ್ದರೆ ದೇವರ ಹೆಸರಿನಲ್ಲಿ ತಮ್ಮ ಪೈಶಾಚಕ ಮನಸ್ಸನ್ನು ತೋರಿಸುವ ಜನರಿಗೆ ಬ್ರೇಕ್ ಹಾಕಿದ ಹಾಗೆ ಆಗುತ್ತದೆ. ಈ ನಿಟ್ಟಿನಲ್ಲಿ ನನಗೆ ಬಹಳ ಖುಷಿ ಕೊಟ್ಟಿದ್ದು ತುಮಕೂರಿನ ವ್ಯವಸ್ಥೆ. ಅದು ನಮ್ಮ ರಾಜ್ಯದ ಎಲ್ಲೆಡೆ ಮಾದರಿ ಆಗಲಿ...

ಕೊಸರು.....:-

ಗಣೇಶ ಎದ್ದ
ಪುಂಡು ಪೋಕರಿ ಆದ ಸಿದ್ದ
ಮನೆ ಮನೆಗೂ ಬಂದ
೧೦೦,೨೦೦ ಕೊಡಿ ಎಂದ
ಗಲ್ಲಿ ಗಲ್ಲಿಗೂ ತಂದ್ರು
ಕೆಟ್ಟ ಸಂಗೀತ ಹಾಕಿದ್ರು
ಕೊನೆಗೆ ...
ಟಪಾಲ್ ಗುಚ್ಚಿ ಹಾಕಿ ನದಿಗೆ ಎತ್ತಿ ಹಾಕಿ ಬಂದ್ರು.

Thursday, May 29, 2008

ವಿಧಾನಭಾ ಶಾಸಕರ ಪಟ್ಟಿ....

ಕರ್ನಾಟಕದ 224 ಕ್ಷೇತ್ರದಲ್ಲಿ ಯಾರು ಗೆದ್ದರೂ ಅಂತ ತಿಳ್ಕೋಬೇಕಾ ..ಇಗೋ ಇಲ್ಲಿದೆ ಪಟ್ಟಿ ..


Ac No. Ac Name Party Candidate Name
1 Nippani Indian National Congress KAKASO PANDURANG PATIL
2 Chikkodi-Sadalga Indian National Congress HUKKERI PRAKASH BABANNA
3 Athani Bharatiya Janata Party LAXMAN SANGAPPA SAVADI
4 Kagwad Bharatiya Janata Party BHARAMGOUDA ALAGOUDA KAGE
5 Kudachi Indian National Congress GHATAGE SHAMA BHIMA
6 Raybag Bharatiya Janata Party AIHOLE DURYODHAN MAHALINGAPPA
7 Hukkeri Janata Dal (Secular) UMESH VISHWANATH KATTI
8 Arabhavi Janata Dal (Secular) BALACHANDRA LAXMANRAO JARAKIHOLI
9 Gokak Indian National Congress JARKIHOLI RAMESH LAXMANRAO
10 Yemkanmardi Indian National Congress JARAKIHOLI SATISH LAXMANARAO
11 Belgaum Uttar Indian National Congress FEROZ NURUDDIN SAIT
12 Belgaum Dakshin Bharatiya Janata Party ABHAY PATIL
13 Belgaum Rural Bharatiya Janata Party SANJAY B PATIL
14 Khanapur Bharatiya Janata Party PRALHAD REMANI
15 Kittur Bharatiya Janata Party MARIHAL SURESH SHIVARUDRAPPA
16 Bailhongal Bharatiya Janata Party METGUD VIRUPAXI (JAGADISH) CHANNAPPA
17 Saundatti Yellamma Bharatiya Janata Party MAMANI VISHWANATH CHANDRASHEKAR
18 Ramdurg Indian National Congress ASHOK MAHADEVAPPA PATTAN
19 Mudhol Bharatiya Janata Party GOVIND.M.KARJOL
20 Terdal Bharatiya Janata Party SIDDU. SAVADI
21 Jamkhandi Bharatiya Janata Party KULKARNI SHRIKANTH SUBBRAO.
22 Bilgi Bharatiya Janata Party MURUGESH RUDRAPPA NIRANI
23 Badami Bharatiya Janata Party MAHAGUNDAPPA KALLAPPA PATTANSHETTI
24 Bagalkot Bharatiya Janata Party CHARANTIMATH VIRANNA CHANDRASHEKHARAYYA.
25 Hungund Bharatiya Janata Party DODDANAGOUDA G PATIL
26 Muddebihal Indian National Congress APPAJI CHANNABASAVARAJ SHANKARARAO NADAGOUDA
27 Devar Hippargi Indian National Congress A.S.PATIL (NADAHALLI)
28 Basavana Bagevadi Bharatiya Janata Party BELLUBBI SANGAPPA KALLAPPA
29 Babaleshwar Indian National Congress M.B.PATIL
30 Bijapur City Bharatiya Janata Party APPASAHEB (APPU) MALLAPPA PATTANASHETTI
31 Nagthan Bharatiya Janata Party KATAKDHOND VITTHAL DHONDIBA
32 Indi Bharatiya Janata Party DR BAGALI SARVABHOUM SATAGOUDA
33 Sindgi Bharatiya Janata Party BHUSANUR RAMESH BALAPPA
34 Afzalpur Indian National Congress MALIKAYYA V. GUTTEDAR
35 Jevargi Bharatiya Janata Party DODDAPPAGOUDA SHIVALINGAPPAGOUD PATIL NARIBOL
36 Shorapur Bharatiya Janata Party NARASIMHA NAYAK (RAJU GOUDA)
37 Shahapur Indian National Congress SHARANABASAPPA DARSHNAPUR
38 Yadgir Indian National Congress A.B. MAALAKRADDY
39 Gurmitkal Indian National Congress BABURAO CHINCHANSUR
40 Chittapur Indian National Congress MALLIKARJUN KHARGE
41 Sedam Indian National Congress DR. SHARAN PRAKASH RUDRAPPA PATIL
42 Chincholi Bharatiya Janata Party SUNIL VALLYAPUR
43 Gulbarga Rural Bharatiya Janata Party REVU NAIK BELAMGI
44 Gulbarga Dakshin Bharatiya Janata Party CHANDRASHEKHAR PATIL REVOOR
45 Gulbarga Uttar Indian National Congress QAMARUL ISLAM
46 Aland Janata Dal (Secular) GUTTEDAR SUBASH RUKMAYYA
47 Basavakalyan Bharatiya Janata Party BASAVARAJ PATIL ATTUR
48 Homnabad Indian National Congress RAJSHEKAR BASWARAJ PATIL
49 Bidar South Janata Dal (Secular) BANDEPPA KHASHEMPUR
50 Bidar Indian National Congress GURUPADAPPA NAGMARPALLY
51 Bhalki Indian National Congress ESHWARA BHIMANNA KHANDRE
52 Aurad Bharatiya Janata Party PRABHU CHAVHAN
53 Raichur Rural Indian National Congress RAJA RAYAPPA NAIK
54 Raichur Indian National Congress SYED YASIN
55 Manvi Indian National Congress G. HAMPAYYA NAYAK BALLATGI
56 Devadurga Janata Dal (Secular) K.SHIVANA GOUDA NAIK
57 Lingsugur Bharatiya Janata Party MANAPPA VAJJAL
58 Sindhanur Janata Dal (Secular) NADAGOUDA VENKATARAO
59 Maski Bharatiya Janata Party PRATAP GOUDA PATIL
60 Kushtagi Indian National Congress AMAREGOUDA LINGANAGOUDA BAYYAPUR
61 Kanakagiri Independent SHIVARAJ S/O SANGAPPA TANGADAGI
62 Gangawati Bharatiya Janata Party PARANNA ISHWARAPPA MUNAVALLI
63 Yelburga Bharatiya Janata Party ESHANNA GULAGANNAVAR
64 Koppal Janata Dal (Secular) KARADI SANGANNA AMARAPPA
65 Shirahatti Bharatiya Janata Party RAMANNA S LAMANI
66 Gadag Bharatiya Janata Party BIDARUR SHRISHAILAPPA VEERUPAKSHAPPA
67 Ron Bharatiya Janata Party KALAKAPPA GURUSHANTAPPA BANDI
68 Nargund Bharatiya Janata Party C C PATIL
69 Navalgund Bharatiya Janata Party SHANKAR PATIL MUNENKOPPA
70 Kundgol Bharatiya Janata Party CHIKKANGOUDRA SIDDANGOUDA ISHWARAGOUDA
71 Dharwad Bharatiya Janata Party SEEMA ASHOK MASUTI
72 Hubli-Dharwad-East Bharatiya Janata Party VEERABHADRAPPA HALAHARAVI
73 Hubli-Dharwad-Central Bharatiya Janata Party JAGADISH SHETTAR
74 Hubli-Dharwad-West Bharatiya Janata Party BELLAD CHANDRAKANT GURAPPA
75 Kalghatgi Indian National Congress SANTOSH.S. LAD
76 Haliyal Janata Dal (Secular) SUNIL V HEGDE
77 Karwar Indian National Congress ASNOTIKAR ANAND VASANT
78 Kumta Janata Dal (Secular) DINAKAR KESHAV SHETTY
79 Bhatkal Indian National Congress J D NAIK
80 Sirsi Bharatiya Janata Party KAGERI VISHWESHWAR HEGDE
81 Yellapur Bharatiya Janata Party V S PATIL
82 Hangal Bharatiya Janata Party UDASI CHANNABASAPPA MAHALINGAPPA
83 Shiggaon Bharatiya Janata Party BASAVARAJ BOMMAI
84 Haveri Bharatiya Janata Party NEHARU OLEKAR
85 Byadgi Bharatiya Janata Party PATIL SURESHGOUDRA BASALINGAGOUDRA
86 Hirekerur Indian National Congress B.C. PATIL
87 Ranibennur Bharatiya Janata Party G.SHIVANNA
88 Hadagalli Bharatiya Janata Party B.CHANDRA NAIK
89 Hagaribommanahalli Bharatiya Janata Party K. NEMARAJ NAIK
90 Vijayanagara Bharatiya Janata Party ANAND SINGH
91 Kampli Bharatiya Janata Party T.H. SURESH BABU
92 Siruguppa Bharatiya Janata Party SOMALINGAPPA M.S
93 Bellary Bharatiya Janata Party B.SREERAMULU
94 Bellary City Bharatiya Janata Party GALI SOMASHEKHARA REDDY
95 Sandur Indian National Congress E. TUKARAM
96 Kudligi Bharatiya Janata Party B.NAGENDRA
97 Molakalmuru Indian National Congress N.Y.GOPALA KRISHNA
98 Challakere Bharatiya Janata Party THIPPESWAMY
99 Chitradurga Janata Dal (Secular) BASAVARAJAN
100 Hiriyur Independent SUDHAKARA D
101 Hosadurga Independent GOOLIHATTI. D. SHEKAR
102 Holalkere Bharatiya Janata Party M CHANDRAPPA
103 Jagalur Indian National Congress S.V.RAMACHANDRA
104 Harapanahalli Bharatiya Janata Party G KARUNAKARA REDDY
105 Harihar Bharatiya Janata Party B.P.HARISH
106 Davanagere North Bharatiya Janata Party S.A RAVINDRANATH
107 Davanagere South Indian National Congress SHAMANURU SHIVASHANKARAPPA
108 Mayakonda Bharatiya Janata Party M BASAVARAJA NAIKA
109 Channagiri Bharatiya Janata Party K.MADAL VIRUPAKSHAPPA
110 Honnali Bharatiya Janata Party M P RENUKACHARYA
111 Shimoga Rural Bharatiya Janata Party K.G.KUMARSWAMY
112 Bhadravati Indian National Congress B.K.SANGAMESHWARA
113 Shimoga Bharatiya Janata Party K.S.ESHWARAPPA
114 Tirthahalli Indian National Congress KIMMANE RATHNAKAR
115 Shikaripura Bharatiya Janata Party B.S.YEDDYURAPPA
116 Sorab Bharatiya Janata Party H. HALAPPA
117 Sagar Bharatiya Janata Party GOPALKRISHNA BELURU
118 Byndoor Bharatiya Janata Party K. LAXMINARAYANA
119 Kundapura Bharatiya Janata Party HALADI SRINIVAS SHETTY
120 Udupi Bharatiya Janata Party K. RAGHUPATHY BHAT
121 Kapu Bharatiya Janata Party LALAJI R. MENDON
122 Karkal Indian National Congress H. GOPAL BHANDARY
123 Sringeri Bharatiya Janata Party D.N .JEEVARAJA
124 Mudigere Bharatiya Janata Party M.P.KUMARA SWAMY
125 Chikmagalur Bharatiya Janata Party C.T RAVI
126 Tarikere Bharatiya Janata Party SURESH .D.S
127 Kadur Indian National Congress K.M.KRISHNAMURTHY
128 Chiknayakanhalli Janata Dal (Secular) C B SURESH BABU
129 Tiptur Bharatiya Janata Party B.C. NAGESH
130 Turuvekere Indian National Congress JAGGESH
131 Kunigal Indian National Congress B.B. RAMASWAMY GOWDA
132 Tumkur City Bharatiya Janata Party S. SHIVANNA SOGADU
133 Tumkur Rural Bharatiya Janata Party B. SURESH GOWDA
134 Koratagere Indian National Congress DR. G. PARAMESHWARA
135 Gubbi Janata Dal (Secular) S.R.SRINIVAS [ VASU ]
136 Sira Indian National Congress T.B.JAYACHANDRA
137 Pavagada Independent VENKATARAMANAPPA
138 Madhugiri Janata Dal (Secular) GOWRI SHANKAR D.C
139 Gauribidanur Indian National Congress SHIVASHANKARA REDDY N H
140 Bagepalli Indian National Congress SAMPANGI N
141 Chikkaballapur Janata Dal (Secular) K P BACHCHE GOWDA
142 Sidlaghatta Indian National Congress V MUNIYAPPA
143 Chintamani Indian National Congress M C SUDHAKAR
144 Srinivaspur Janata Dal (Secular) G.K.VENKATA SHIVA REDDY
145 Mulbagal Indian National Congress AMARESH
146 Kolar Gold Field Bharatiya Janata Party Y.SAMPANGI
147 Bangarapet Indian National Congress M.NARAYANASWAMY
148 Kolar Independent R.VARTHUR PRAKASH
149 Malur Bharatiya Janata Party ES.EN.KRISHNAIAH SHETTY
150 Yelahanka Bharatiya Janata Party S.R.VISHWANATH
151 K.R. Pura Bharatiya Janata Party N.S.NANDIESHA REDDY
152 Byatarayanapura Indian National Congress KRISHNA BYREGOWDA
153 Yeshvanthapura Bharatiya Janata Party SHOBHA KARANDLAJE
154 Rajarajeshwarinagar Bharatiya Janata Party M.SRINIVAS
155 Dasarahalli Bharatiya Janata Party S.MUNIRAJU
156 Mahalakshmi Layout Indian National Congress N.L.NARENDRA BABU
157 Malleshwaram Bharatiya Janata Party DR. ASHWATH NARAYAN C.N
158 Hebbal Bharatiya Janata Party KATTA SUBRAMANYA NAIDU
159 Pulakeshinagar Indian National Congress B. PRASANNA KUMAR
160 Sarvagnanagar Indian National Congress K.J.GEORGE
161 C.V. Raman Nagar Bharatiya Janata Party S. RAGHU
162 Shivajinagar Indian National Congress R.ROSHAN BAIG
163 Shanti Nagar Indian National Congress N.A HARIS
164 Gandhi Nagar Indian National Congress DINESH GUNDU RAO
165 Rajaji Nagar Bharatiya Janata Party SURESH KUMAR S.
166 Govindraj Nagar Indian National Congress V.SOMANNA
167 Vijay Nagar Indian National Congress M.KRISHNAPPA
168 Chamrajpet Janata Dal (Secular) B.Z.ZAMEER AHMED KHAN
169 Chickpet Bharatiya Janata Party HEMACHANDRA SAGAR.D
170 Basavanagudi Bharatiya Janata Party RAVISUBRAMANYA L.A
171 Padmanaba Nagar Bharatiya Janata Party R.ASHOKA
172 B.T.M. Layout Indian National Congress RAMALINGA REDDY
173 Jayanagar Bharatiya Janata Party B.N.VIJAYA KUMAR
174 Mahadevapura Bharatiya Janata Party ARAVIND LIMBAVALI
175 Bommanahalli Bharatiya Janata Party SATISH REDDY.M
176 Bangalore South Bharatiya Janata Party M KRISHNAPPA
177 Anekal Bharatiya Janata Party A NARAYANASWAMY
178 Hosakote Bharatiya Janata Party B.N.BACHHE GOWDA
179 Devanahalli Indian National Congress VENKATASWAMY
180 Doddaballapur Indian National Congress J.NARASIMHASWAMY
181 Nelamangala Bharatiya Janata Party M.V.NAGARAJU
182 Magadi Janata Dal (Secular) H C BALAKRISHNA
183 Ramanagaram Janata Dal (Secular) H D KUMARA SWAMY
184 Kanakapura Indian National Congress D.K.SHIVAKUMAR
185 Channapatna Indian National Congress C.P.YOGESHWARA
186 Malavalli Independent P M NARENDRASWAMY
187 Maddur Janata Dal (Secular) M.S.SIDDARAJU
188 Melukote Janata Dal (Secular) C S PUTTARAJU
189 Mandya Janata Dal (Secular) M.SRINIVAS
190 Shrirangapattana Janata Dal (Secular) A.B.RAMESHA BANDISIDDEGOWDA
191 Nagamangala Indian National Congress SURESH GOWDA
192 Krishnarajpet Indian National Congress K B CHANDRASHEKAR
193 Shravanabelagola Janata Dal (Secular) C. S. PUTTE GOWDA
194 Arsikere Janata Dal (Secular) K. M. SHIVALINGEGOWDA
195 Belur Indian National Congress RUDRESH GOWDA. Y. N
196 Hassan Janata Dal (Secular) H. S. PRAKASH
197 Holenarasipur Janata Dal (Secular) H. D. REVANNA
198 Arkalgud Indian National Congress MANJU. A
199 Sakleshpur Janata Dal (Secular) H. K. KUMARASWAMY
200 Belthangady Indian National Congress K.VASANTHA BANGERA
201 Moodabidri Indian National Congress K.ABHAYACHANDRA
202 Mangalore City North Bharatiya Janata Party J.KRISHNA PALEMAR
203 Mangalore City South Bharatiya Janata Party N.YOGISH BHAT
204 Mangalore Indian National Congress U.T. KHADAR
205 Bantval Indian National Congress B.RAMANATHA RAI
206 Puttur Bharatiya Janata Party MALLIKA PRASADA
207 Sullia Bharatiya Janata Party ANGARA S
208 Madikeri Bharatiya Janata Party APPACHU (RANJAN)
209 Virajpet Bharatiya Janata Party BOPAIAH. K.G.
210 Piriyapatna Indian National Congress K. VENKATESH
211 Krishnarajanagara Janata Dal (Secular) S.R MAHESH
212 Hunsur Indian National Congress H.P MANJUNATHA
213 Heggadadevankote Indian National Congress CHIKKANNA
214 Nanjangud Indian National Congress V.SRINIVASA PRASAD
215 Chamundeshwari Indian National Congress M.SATHYANARAYANA
216 Krishnaraja Bharatiya Janata Party S.A.RAMADASS
217 Chamaraja Bharatiya Janata Party H.S.SHANKARALINGEGOWDA
218 Narasimharaja Indian National Congress TANVEER SAIT
219 Varuna Indian National Congress SIDDARAMAIAH
220 T.Narasipur Indian National Congress DR. H.C. MAHADEVAPPA
221 Hanur Indian National Congress R.NARENDRA
222 Kollegal Indian National Congress R.DHRUVANARAYANA
223 Chamarajanagar Indian National Congress C.PUTTARANGASHETTY
224 Gundlupet Indian National Congress H.S.MAHADEVA PRASAD

Sunday, May 25, 2008

ಕರ್ನಾಟಕದ ವಿಧಾನ ಸಭಾ ಫಲಿತಾಂಶಗಳು...

ಕರ್ನಾಟಕದ ರಾಜಕೀಯ ೨೦೦೮ ಭವಿಷ್ಯ ಬಂದಿದೆ, ಭಾ.ಜ.ಪ ಮೊದಲನೇ ಪಕ್ಷವಾಗಿ ಹೊರಹೊಮ್ಮಿದೆ. ಜನ ಅತಂತ್ರ ಸರ್ಕಾರ ಮಾಡುತ್ತಾರೆ ಅನ್ನುವ ಪಂಡಿತ ಅಂಬೋಣವನ್ನು ಹೋಗಲಾಡಿಸಿದೆ.

ಒಟ್ಟು ಕ್ಷೇತ್ರಗಳು 224ಗೆಲುವು
ಬಿಜೆಪಿ 110
ಕಾಂಗ್ರೆಸ್ 80
ಜೆಡಿ(ಎಸ್) 28
ಇತರರು 06


ಒಟ್ಟಿನಲ್ಲಿ ಭಾಜಪ ಗೆಲ್ಲಲ್ಲು ಅವರು ಮಾಡಿದ ತಂತ್ರಗಳು ಬಹಳ ಮಟ್ಟಿಗೆ ಸಹಾಯ ಮಾಡಿದೆ.

೧) ಜನತಾದಳ ಜೊತೆ ಮೈತ್ರಿ ಮುರಿದುಬಿದ್ದಾಗಿಂದ ಚುನಾವಣೆ ತನಕ ಅನುಕಂಪವನ್ನು ಕಾಯ್ದರುಸುವಲ್ಲಿ ಯಶಸ್ವಿಯಾಯಿತು.
೨) ಬಂಡಾಯವನ್ನು ತುಂಬಾ ಮಟ್ಟಿಗೆ ಹತೋಟಿಯಲ್ಲಿ ಇಟ್ಟುಕೊಂಡಿತು.
೩) ಚುನಾವಣೆಯ ಮರು ವಿಗಂಡನೆ ಬಗ್ಗೆ ಚೆನ್ನಾಗಿ ತಯಾರಾಗಿ, ಮೇಗೆ ಚುನಾವಣೆ ನಡೆದರೆ ತಯಾರಾಗಿತ್ತು.
೪) ಮೊದಲಿಂದಲೂ ಎಕ ನಾಯಕತ್ವದಲ್ಲಿ ಚುನಾವಣೆಗೆ ಹೋಯಿತು, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮೊದಲೇ ಬಿಂಬಿಸಿತ್ತು.
೫) ಕನ್ನಡ ವಿರೋಧಿ ಬೇರೆ ರಾಜ್ಯದ ಪ್ರಾದೇಶಿಕ ಪಕ್ಷಗಳ ಜೊತೆ ಒಪ್ಪಂದ ಮಾಡಿಕೊಳ್ಲದೇ, ಸ್ವಂತ ಬಲದ ಮೇಲೆ ನಿಂತಿದ್ದು.
6) ಪ್ರಣಾಳಿಕೆಯಲ್ಲಿ ಒಳ್ಳೆಯ ಅಂಶಗಳನ್ನು ತೆಗೆದುಕೊಂಡಿತು,

a) ಸಮಗ್ರ ರಾಜ್ಯದ ಅಭಿವೃದ್ಧಿ
b) ಕನ್ನಡಿಗರಿಗೆ ಹೆಚ್ಚು ಕೆಲ್ಸ, ಅದಕ್ಕೆ ಪೂರಕವಾದ ಉದ್ದಿಮೆಗಳನ್ನು ಬೇರೆ ಜಿಲ್ಲೆಗಳಲ್ಲಿ ಮಾಡುವುದು.
c) ಕನ್ನಡಕ್ಕೆ ಶಾಸ್ತ್ರೀಯ ಭಾಷ ಸ್ಥಾನಮಾನ

ಮುಂದಿರುವ ಸವಾಲುಗಳು

೧) ಕೇಂದ್ರದ ಜೊತೆಗೆ ಚೆನ್ನಾಗಿ ಜಗಳ ಆಡಿ ನಮಗೆ ಬರಬೇಕಾದ ಪಾಲನ್ನು ಪಡೆಯುವುದು
೨) ನೆರೆ ರಾಜ್ಯಗಳ ಹುಚ್ಚು ಬೇಡಿಕೆಗಳಿಗೆ ಮಣಿಯದೆ ರಾಜ್ಯದ ಹಿತ ಕಾಪಾಡುವುದು.
೩) ಹೆಚ್ಚು ಉದ್ಯಮಗಳನ್ನು ರಾಜ್ಯಕ್ಕೆ ಆಹ್ವಾನಿಸಿ, ಬಂಡವಾಳ ಹೂಡುವ ಹಾಗೆ ಮಾಡುವುದು.
೪) ಕರ್ನಾಟಕದಲ್ಲಿ ನೆಲೆ ಕಂಡು ಇಲ್ಲಿಯ ಸವಲತ್ತು ಅನುಭವಿಸುತ್ತಿರುವ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಕೆಲ್ಸಕೊಡಬೇಕೆಂದು ಒತ್ತಾಯಿಸುವುದು.
೫) ಆಡಳಿತ ಭಾಷೆಯಾಗಿ ಕನ್ನಡವನ್ನು ಎಲ್ಲಡೇ ತರುವುದು ಮತ್ತು ಅದನ್ನು ಸಮಗ್ರವಾಗಿ ಅಳವಡಿಸುವುದು.
೬) ಮುಖ್ಯಮಂತ್ರಿ ಚಂದ್ರು ಅವರ ಗಡಿ ಅಭಿವೃದ್ಧಿಯನ್ನು ಜಾರಿಗೆ ತರುವುದು.

Saturday, May 24, 2008

ಒಗ್ಗಟ್ಟು ಮುರಿಯುವದರಲ್ಲಿ ಬೇಡ ಮಾಧ್ಯಮಗಳ ಒಣ ಪ್ರತಾಪ...


ನಮ್ಮ ಬೆಂಗಳೂರಿನಲ್ಲಿ ಅಂತರಾಷ್ಟೀಯ ವಿಮಾನ ನಿಲ್ದಾಣ ಶುರು ಆಗೋತ್ತೆ ಅಂತ ಬಹಳ ದಿನಗಳಿಂದ ಕೇಳ್ತಾ ಇದ್ದೇವು, ಆದರೆ ಅದು ಬರಿ ಮಾತಾಗದೇ ಇಂದು ನನಸಾಗಿದೆ. ಆದರೆ ಬಹಳ ದಿನಗಳಿಂದಲೂ ಕನ್ನಡಿಗರಿಗೆ ಇಟ್ಟಿದ್ದ ಬೇಡಿಕೆಗಳ ಬಗ್ಗೆ ಕನ್ನಡ ಪರ ಸಂಘಟನೆಗಳು ಹೋರಾಟ ಮಾಡ್ತಾನೆ ಇದ್ದವು, ನಮ್ಮ ರೈತರು ನಾಡಿನ ಎಳಿಗೆಗೆ ತಮ್ಮ ಭೂಮಿ,ಜೀವನವನ್ನು ತ್ಯಾಗ ಮಾಡಿದರು. ಆ ಜನರನ್ನು ಅಲ್ಲಿ ಒಕ್ಕುಲೆಬ್ಬಿಸಿ, ಕೈಗೆ ಸ್ವಲ್ಪ ದುಡ್ಡು ಕೊಟ್ಟು ರೈಟ್ ಹೇಳಿಸಿದರು. ಆದರೆ ಕೇವಲ ಒಕ್ಕಲುತ ಗೊತ್ತಿದ್ದ ಜನರು ಭೂಮಿ ಇಲ್ಲದೆ ನಿಜಕ್ಕೂ ಬೀದಿಗೆ ಬಿದ್ದರು. ಇವರ ನೆರವಿಗೆ ಬಂದಿದ್ದು, ಯಾವ ಪತ್ರಿಕೆಗಳು ಅಲ್ಲ, ಇಲ್ಲಾ ಐ.ಟಿ- ಬಿಟಿ ಝಾರಗಳು ಅಲ್ಲ. ಮತ್ತದೇ ಕನ್ನಡ ಸಂಘ್ಹಟನೆಗಳು. ಪರಿಪರಿಯಾಗಿ ಬಿಐಎಲ್ ಅಧಿಕಾರಿಗಳಿಗೆ ಈ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು, ತಮ್ಮ ಹಕ್ಕೋತಾಯ ಮಂಡಿಸಿದರು, ಅದರಲ್ಲಿ ಪ್ರಮುಖವಾಗಿ ಕನ್ನಡಿಗರಿಗೆ ಉದ್ಯೋಗ , ಬರುವ ಪಯಣಿಗರಿಗೆ ಕನ್ನಡ ಸಂಸ್ಕ್ರುತಿಯ ಪರಿಚಯ ಮಾಡಿಕೊಡುವ, ಕನ್ನಡಕ್ಕೆ ಎಲ್ಲದರಲ್ಲೂ ಮೊದಲ ಆದ್ಯತೆ ಕೊಡಬೇಕು, ಜೊತೆಗೆ ಇದಕ್ಕೆ ಕನ್ನಡಿಗರ ಹೆಸರು ಇಡಬೇಕು ಎನ್ನುವುದು ನ್ಯಾಯ ಸಮ್ಮತವಾಗಿದೆ ಮತ್ತು ಪ್ರತಿಯೊಂದು ಜಗತ್ತಿನಲ್ಲಿ ಸರ್ವವ್ಯಾಪಿ ಆಗಿರುವಿದೇ.

ಆದರೆ ನಮ್ಮ ಮಾಧ್ಯಮಗಳಿಗೆ ಈ ಸುದ್ದಿ ಬೇಡ, ಅವರಿಗೆ ಬೇಕಾಗುವ ಸುದ್ದಿಯನ್ನು ಹೆಕ್ಕಿ ಹಾಕುವ ಜಾಣ್ಮೆ ಇದೆ, ಕನ್ನಡ ಒಗ್ಗಟ್ಟನ್ನು ಮುರಿಯುವ ಸಲುವಾಗಿ ಮುಖ್ಯ ವಿಷಯಗಳನ್ನು ತರದೆ, ಬೇಡದ ವಿಷಯವನ್ನು ಎತ್ತಿ ಅದಕ್ಕೆ ಜಾತಿ ಸ್ವರೂಪ ಕೊಟ್ಟು, ಜೊತೆಗೆ ಬೇರೆ ಜಾತಿಯವರನ್ನು ಪ್ರಚೋದಿಸಿ ಹೋರಾಟವನ್ನು ಕೊಲ್ಲಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ವಿಪರ್ಯಾಸ.

ಅಷ್ಟಕ್ಕೂ ಕೆಂಪೇಗೌಡರ ಹೆಸರನ್ನು ಇಡಬೇಕು ಎನ್ನುವುದು ತಪ್ಪೇ ?, ಹೆಸರು ಇಡಬೇಕು ಎಂಬ ಈ ಬೇಡಿಕೆ ಬರದೆ ಇದ್ದಿದ್ದರೆ ಸುಮ್ಮನೆ ಇದ್ದು, ಗಾಂಧಿ ಹೆಸರೋ, ಇಲ್ಲಾ ನೆಹರೂ ಹೆಸರೋ ಇಲ್ಲಾ ಟ್ಯಾಗೊರ್ ಹೆಸರನ್ನು ಇಟ್ಟು ಬಳಸಿಕೊಳ್ಳಿ ಅಂತ ಹೇಳಿದ್ದರೆ ಶಿರಾಸ ಅಂತ ಅದನ್ನು ಪಾಲಿಸುತ್ತಿದ್ದರು, ನಮ್ಮ ಮಾಧ್ಯಮಗಳು ಯಾಕೆ ಪಾಲಿಸಬೇಕು ಎಂಬುದರ ಬಗ್ಗೆ ಲೇಖನ ಬರೆಸುತ್ತಿದ್ದವೂ.
ಅದೇ ಬೆಂಗಳೂರಿನ ನಿರ್ಮಾತ, ಕೆರೆ ನಗರ ಅಭಿವೃದ್ದಿ ಬಗ್ಗೆ ಶತಮಾನಗಳ ಕೆಳಗೆ ಕನಸು ಕಂಡು, ಅದಕ್ಕೆ ಸ್ವರೂಪ ಕೊಟ್ಟವರ ಹೆಸರು ನಮಗೆ ಅಪಧ್ಯ. ಅದಕ್ಕೆ ಇವರ ಹೆಸರು ಯಾಕೆ ಇಡಬಾರದಿತ್ತು, ಇವರ ಹೆಸರು ಯಾಕೆ ಇಡಬೇಕು ಎಂದು ಪುಂಖಾನುಪುಂಖ ಲೇಖನ ಬರೆಯುತ್ತಾರೆ, ಈಗಾಗಲೇ ನಮ್ಮ ಬಸ್ ನಿಲ್ದಾಣಕ್ಕೆ ಹೆಸರು ಇಟ್ಟು ಬಳಸುತ್ತ ಇಲ್ಲವೇ ಅಂತ ಸಿಲ್ಲಿ ಲಾಜಿಕ್ ಹಾಕುತ್ತಾರೆ, ಒಮ್ಮೆ ಬಿಎಂಟಿಸಿಯಲ್ಲಿ ಓಡಾಡಿ ಬಂದೆ ಜನ ಎನು ಬಳಸುತ್ತ ಇದ್ದಾರೆ ಅಂತ ಅವರಿಗೆ ಗೊತ್ತಾಗುತ್ತದೆ. ಜನ ಇನ್ನೂ ಮೆಜಸ್ಟಿಕ್ ಅಂತಾನೇ ಬಳಸುತ್ತಾ ಇರುತ್ತಾರೆ ಕೂಡ. ಸರ್.ಎಂ.ವಿ ಹೆಸರನ್ನು ಕರ್ನಾಟಕದ ಯಾವುದೇ ಭಾಗದಲ್ಲಿ ಕೂಡ ಇಡಬಹುದು, ಯಾಕೆಂದರೆ ಸರ್.ಎಂ.ವಿ ಕಾಣಿಕೆ ಮೈಸೂರು ಪ್ರಾಂತ್ಯಕ್ಕೆ ತುಂಬಾ ಇದೆ. ಆದರೆ ಕೆಂಪೇಗೌಡ ಹೆಸರನ್ನು ಬೆಂಗಳೂರಿನಲ್ಲಿ ಬಿಟ್ಟು ಬೇರೆ ಕಡೆ ಇಟ್ಟರೆ ಅದನ್ನು ಯಾರು ಸ್ವಾಗತಿಸುವದಿಲ್ಲ, ಕಾರಣ ಬಹಳ ಸುಲಭ ಅಲ್ಲಿನ ಊರಿಗೂ ಮತ್ತು ಕೆಂಪೇಗೌಡ ಭಾವನಾತ್ಮಕ ಸಂಭಂದ ಇಲ್ಲವೇ ಇಲ್ಲ.

ಮುಂದುವರೆಯುತ್ತ, ಇವಾಗ ನಾವು ಒಂದು ವಿಷ್ಯಕ್ಕೆ ಜಾತಿಯನ್ನು ಬೆರಸದೆ ಕನ್ನಡ ಪರ ನಿಲುವು ತೆಗೆದುಕೊಂಡವರಿಗೆ ಬೆಂಬಲ ಕೊಡಬೇಕು, ನಾವು ಸುಮ್ಮನೆ ಇವರ ಹೆಸರು ಇಡಬಹುದಿತ್ತು ಅಂತ ವ್ಯಾಖ್ಯಾನ ಮಾಡುತ್ತ ಹೋರಾಟವನ್ನು ತಪ್ಪು ದಾರಿಗೆ ಎಳೆಯುವುದು ಬೇಡ. ಇಲ್ಲಿ ಬೇಕಾಗಿರುವುದು ಒಂದು ಪ್ರಬಲ ಕೂಗು, ಅದು ಇಲ್ಲದಿದ್ದರೆ ನಮ್ಮ ರಾಷ್ಟನಾಯಕರಗಳ ಹೆಸರನ್ನು ಇಡುತ್ತಾರೆ, ಕೆಂಪೇಗೌಡರ ಹೆಸರನ್ನು ವಿರೊಧಿಸುತ್ತಿರುವ ಕನ್ನಡಿಗರು ಖುಷಿ ಪಡುತ್ತಾರೆ. ತಮಗೆ ಸಿಗಲಿಲ್ಲ ಅಂದರೆ ಬೇರೆಯವರಿಗೂ ಸಿಗೋದು ಬೇಡ ಅನ್ನೊ ವಿಚಿತ್ರ ಮನೋಭಾವ.

ಒಗ್ಗಟ್ಟನ್ನು ತೋರಿಸಬೇಕಾದ ಸಮಯದಲ್ಲಿ ಕಾಲೆದುಕೊಂಡು ನಾವು ಅನೇಕ ಹೋರಾಟಗಳನ್ನು ಸೋತಿದ್ದೆವೆ, ಮಾಧ್ಯಮಗಳು ಸ್ವಲ್ಪ ವಿವೇಚನೆಯಿಂದ ಮುಖ್ಯ ವಿಷಯ ಅಂದರೆ ಉದ್ಯೋಗ ಮತ್ತು ಕನ್ನಡ ಸಂಸ್ಕೃತಿ ಬಗ್ಗೆ ಹೆಚ್ಚು ಲೇಖನಗಳನ್ನು ಬರೆದರೆ ಅವರ ಸಮಾಜಿಕ ಜವಾಬ್ದಾರಿಯನ್ನು ಮೆರೆಸಿದ ಹಾಗೆ ಆಗುತ್ತದೆ.

Monday, May 19, 2008

ಆರ್.ಎನ್.ಜಯಗೋಪಾಲ್ ಅಂದ್ರೆ ಯಾರು ಅಂತ ಇವರಿಗೆ ಗೊತ್ತಿಲ್ಲ....

ಇದೇನು ಮೊದಲಲ್ಲ, ಹಾಗೆ ಇದೇನು ಕೊನೆಯಲ್ಲ ಬಿಡಿ. ನಮ್ಮ ಕನ್ನಡಿಗರ ಬಗ್ಗೆ ಬಾಯಿಗೆ ಬಂದ ಹಾಗೆ ವರದಿ ಮಾಡೋದು ನಡಿತಾನೆ ಇರೊತ್ತೆ. ಡಾ|| ರಾಜಕುಮಾರ ಅಪಹರಣ ಆದಾಗ ಆ ಸುದ್ದಿಯನ್ನು ಹಿಂದಿಯ ರಾಜಕುಮಾರ್ ಚಿತ್ರದ ಜೊತೆ ಹಾಕಿದ್ದರು. ಗೊವೆಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಜಕುಮಾರ್, ಗಿರೀಶ್ ಕಾಸರವಳ್ಳಿ ಮಧ್ಯೆ ವ್ಯತ್ಯಾಸ ಗೊತ್ತಾಗದ ಮುಗ್ದರು ಇದ್ದರು. ಈಗ ಹೊಸ ಸರದಿ....

ಕನ್ನಡ ಚಿತ್ರರಂಗದ ಮರೆಯಲಾರದ ಖ್ಯಾತ ಚಿತ್ರಸಾಹಿತಿ, ನಿರ್ಮಾಪಕ, ನಿರ್ದೇಶಕ ಆರ್.ಎನ್.ಜಯಗೋಪಾಲ್ ಇನ್ನು ಬರೀ ನೆನಪಷ್ಟೆ. ಚೆನ್ನೈನ ಅವರ ಸ್ವಗೃಹದಲ್ಲಿ ಸೋಮವಾರ ಮಧ್ಯಾಹ್ನ ಆರ್.ಎನ್.ಜಯಗೋಪಾಲ್ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಆ ವಿಷಯವನ್ನು ಸುದ್ದಿ ಮಾಡಿರೋದು thaindian ಅನ್ನೊ ಒಂದು ವೆಬಸೈಟ್, ಎಲ್ಲಿಂದಲೋ ವರದಿ ಕದ್ದು ಹಾಕಿದ್ದಾರೆ ಆದ್ರೆ ಅವರಿಗೆ ಈ ಸತ್ತಿರುವ ಮಹಾನುಭಾವ ಯಾರು ಅಂತ ಕೂಡ ಗೊತ್ತಿಲ್ಲ. ತೊಗೊ, ಯಾರದೋ ಒಬ್ಬರ ಚಿತ್ರ ಹಾಕಿ ಕೈ ತೊಳೆದುಕೊಂಡಿದ್ದಾರೆ.....



ಎಷ್ಟೋ ಕನ್ನಡಿಗರಿಗೆ ಈ ಮಹಾನುಭಾವ ಯಾರು ಅಂತ ಗೊತ್ತಿಲ್ಲದಿರೋ ದೌರ್ಭಾಗ್ಯ ಇರೋವಾಗ ಇವರದೇನು ತಪ್ಪಿಲ್ಲ ಬಿಡಿ ....
ಈ ಚಿತ್ರ ಯಾರದು ಅಂತ ನಿಮಗೆ ಗೊತ್ತೆ ??.. ಗೊತ್ತಿದ್ದರೆ ಒಂದು ಕಾಮೆಂಟ್ ಹಾಕಿ, ಮೊದಲು ಸರಿಯಾಗಿ ಉತ್ತರ ಕೊಟ್ಟವರಿಗೆ ಆಕರ್ಷಕ ಬಹುಮಾನ ಉಂಟು ....


ಸದಾ ನಮ್ಮ ಮನಸ್ಸಲ್ಲಿ ಹಾಡುಗಳ ಮೂಲಕ RNJ ಇದ್ದೆ ಇರುತ್ತಾರೆ, ಇವರಿಗೆ ಸಾವಿಲ್ಲ...





ಧರ್ಮಚತ್ರ ಅಲ್ಲ ನಮ್ಮ ಈ ಕರ್ನಾಟಕ


ಕರ್ನಾಟಕದಲ್ಲಿ ಕನ್ನಡಿಗನಿಗೆ ಅಲ್ಲದೇ ಬೇರೆ ಯಾರಿಗೆ ಮೊದಲು ಕೆಲ್ಸ ಸಿಗಬೇಕು ?, ಎಲ್ಲಾ ಇಲ್ಲಿನ ಸಂಪನ್ಮೂಲದಲ್ಲಿ ಮೊದಲು ಆದ್ಯತೆ ಇಲ್ಲಿಯ ಕನ್ನಡಿಗನಿಗೆ ಸಿಗಬೇಕು.
ಇದನ್ನು ಕೇಳಿದ ಒಡನೆ ಸಾಕು ನಮ್ಮ ಕೆಲ ಜನರಿಗೆ ಮೈ ಮೇಲೆ ಚೇಳು ಬಿಟ್ಟುಕೊಂಡ ಹಾಗೆ ಆಗುತ್ತದೆ. ನಾವು ಭಾರತದಲ್ಲಿ ಇರುವುದು, ಇದು ಪ್ರಜಾಪ್ರಭುತ್ವ ವಿರುದ್ಧ, ಇದು ದೇಶದ ಏಕತೆಗೆ ದಕ್ಕೆ ಅಂತ ನೂರೆಂಟು ಮಾತು ಆಡುತ್ತಾರೆ. ಹೀಗೆ ಹೇಳುವರು ಯಾರು ಸ್ವಲ್ಪವೂ ವಿಚಾರ ಮಾಡಿರುವದಿಲ್ಲ, ಇಲ್ಲಾ ಅವರ ಯೋಚನ ಲಹರಿಗೆ ಒಂದು ದಿಕ್ಕು ಇರುವದಿಲ್ಲ. ಕೆಲ ಪದ ಕೇಳಿದರೆ ಸಾಕು ನಮ್ಮ ಜನರಿಗೆ ಅದು ಫ್ಯಾನಟಿಕ್ ಅಂತ ಅನಿಸಿ ಅದನ್ನು ಸವಿವರವಾಗಿ ಕೇಳದೆ ಸುಮ್ಮನೆ ಗಲಾಟೆ ಮಾಡುತ್ತಾರೆ.

ಹೀಗೆ ಮಾತನಾಡುವ ಜನರು ಮೊದಲು ಅರ್ಥ ಮಾಡಿಕೊಳ್ಳಬೇಕಾದ ವಿಚಾರ ಎನೆಂದರೆ ಕರ್ನಾಟಕ ಆದ ಉದ್ದೇಶವೆ ಕನ್ನಡ-ಕನ್ನಡಿಗನ ಅಭಿವೃದ್ಧಿ, ಕನ್ನಡಕ್ಕೆ ಅಗ್ರಮಾನ್ಯ ಸ್ಥಾನ ಸಿಗಬೇಕು, ಕನ್ನಡಿಗನು ತನ್ನ ಜೀವನದಲ್ಲಿ ಪ್ರಗತಿ ಕಾಣಬೇಕು. ಇವೆರೆಡು ಬೆಳವಣಿಗೆಯಿಂದ ಕರ್ನಾಟಕದ ಆಭಿವೃದ್ಧಿ ಆಗುತ್ತದೆ ಅನ್ನುವ ಒಂದು ದೊಡ್ಡ ವಿಚಾರಧಾರೆ ಇತ್ತು, ಆದರೆ ಕಾಲಕ್ರಮೇಣ ಸರ್ವಾಂಗೀಣ ಅಭಿವೃಧ್ಧಿ ಕನಸುಗಳು ಕಳಚಿ ಕೊಂಡಿವೆ.

ನಮ್ಮ ಕೀಳರಿಮೆ ಇಂದ ಬೇಯುತ್ತ, ಬೇಡದ ರಾಷ್ಟೀಯತೆಯಲ್ಲಿ ಕರಗಿ ದೇಶ,ಧರ್ಮ,ಅಭಿಮಾನ ತೋರಿಸಬೇಕು ಅಂದರೆ ಕೇವಲ ಬೇರೆ ಭಾಷೆಯನ್ನು ಬಳಸಬೇಕು ಅಂತ ಆಗಿದೆ, ಅದಕ್ಕೆ ನೊಡಿ "ಬೋಲೊ ಭಾರತ್ ಮಾತಕೀ ಜೈ" ಅಂತಾನೆ ಅನ್ನಬೇಕು, ಕನ್ನಡದಲ್ಲಿ ಅದನ್ನು ಹೇಳಿದರ ಅಪಥ್ಯ. ಇದಕ್ಕೆ ಪರೋಕ್ಷವಾಗಿ ನಮ್ಮ ಶಾಲೆಗಳಲ್ಲಿ ಕನ್ನಡ ಬಲಪಡಬೇಕು, ಕನ್ನಡದಲ್ಲಿ ಸಕಲ ವಿದ್ಯೆ ಇದೆ ಎಂದು ಅನಿಸಿದರೆ ಅದು ಉಳಿಯುತ್ತದೆ. ಇಲ್ಲದಿದ್ದರೆ ಕನ್ನಡ ಕೇವಲ ಕಥೆ-ಕವಿತೆ ಗೊಡ್ಡು ಸಾಹಿತ್ಯಕ್ಕೆ ಮಾತ್ರ ಎಂದರೆ ಅದು
ಕೇವಲ ಒಂದು ವರ್ಗದ ಆಸ್ತಿ ಆಗಿ ಕೊನೆಗೆ ಸಾಯುತ್ತದೆ.

ಕರ್ನಾಟಕ ಅಂದರೆ ಹೈ.ಕ , ಉ.ಕ, ದ.ಕ , ಮೈಸೂರು ಕರ್ನಾಟಕ ಅಂತ ನಾವೇ ಪರಿಧಿ ಹಾಕಿಕೊಂಡು, ನಮ್ಮ ಕನ್ನಡ-ನುಡಿ,ಸಂಸ್ಕೃತಿ ಸರಿ ಎಂದು ಮರೆಯಬಾರದು. ಮೊದಲಿಗೆ ಇಂದಿಗೂ ಈ ಪದಗಳನ್ನು ಬಳಸುವ ಜನರಿಗೆ ಉಗಿಬೇಕು, ಸಾಕು ಇ ಒಡಕು, ಹೇಗೆ ಬೆರಳು ಎಲ್ಲಾ ಒಂದೇ ಇಲ್ಲದಿದ್ದರೂ ಅದು ಕೈನಲ್ಲಿ ಇದ್ದು ನಮ್ಮ ಜೀವನದ ಪ್ರಮುಖ ಅಂಗ ಆಗಿದೆಯೋ ಹಾಗೆ ನಾವು ಭಾರತದ ಪ್ರಮುಖ ಆಂಗ ಆಗಬೇಕು. ಇದು ನಿಜವಾದ ರಾಷ್ತೀಯತೆ, ಸುಮ್ಮನೆ ಚಡ್ಡಿ ಹಾಕಿಕೊಂಡು ಹಿಂದಿಯಲ್ಲಿ ದೇಶ ಭಕ್ತಿ ಹಾಡುಗಳನ್ನು ಹಾಡೋದು ಅಲ್ಲ.

Saturday, April 19, 2008

RC...ಉಡಾಯಿಸಿ .,


ಪಾಪ ನಮ್ಮ ಹುಡುಗರು ನಮ್ಮ ಮುದಿ ಆಟಗಾರರಿಗೆ ತಾಖತ್ ಬರಲಿ ಅಂತ ಜಿಂಗಚಕ್ಕ ಹಾಡು ಮಾಡಿ ಹುರುದುಂಬಿಸೊಕ್ಕೆ ಹೊದ್ರೆ ನಮ್ಮ ನೆಲದಲ್ಲಿ ಮಣ್ಣು ಮುಕ್ಕೊ ಕೆಲ್ಸ ಮಾಡಿದ್ರು, ಇವರ ಆಟ ನೋಡ್ತಾ ಇದ್ದರೆ, ನಮ್ಮ ಬಸವನಗುಡಿ ಕಪ್ ನಲ್ಲಿ ಆಡೊ ಹುಡ್ಗರೇ ವಾಸಿ ಅನಿಸೊಲ್ವಾ ?
ಎನೇ ಮಾಡಿದ್ರು ದೊಡ್ಡ ಮಟ್ಟದಲ್ಲಿ ಮಾಡ್ತಿವಿ ಅನ್ನೋದನ್ನು ಅತಿ ದೊಡ್ಡ ಸೋಲಿನ ಮೂಲಕ ತೋರಿಸಿದ್ರು.

RC ಉಡಾಯಿಸಿ ಹಾಡನ್ನು ಕೇಳಿಕೊಂಡು ಆ ಮ್ಯಾಕುಲಂ ನಿಜಕ್ಕೂ ಚೆನ್ನಾಗಿ ಉಡಾಯಿಸಿಬಿಟ್ಟ ಗುರು ನಮ್ಮ ಟೀಮನ ..

ಮುಂದೆ ಆದ್ರೂ ಸೇಡಿಗೆ ಸೇಡು ತೀರಿಸಿಕೋಳ್ತಾರಾ ??..ಕಾದು ನೋಡಿ.

Monday, April 07, 2008

ಯುಗಾದಿಯ ಶುಭಾಶಯಗಳು ...

ಸರ್ವಜಿತು ಸಂವತ್ಸರದ ಈ ಹೊಸ ವರುಷ ಎಲ್ಲರಿಗೂ ಹೊಸ ಹರುಷವನ್ನು ತರಲಿ

ರಜನಿ cant ಅನ್ನೊ ಕಿಕ್ ಮಾಸ್ಟರಿಗೆ ಒಂದು ಪತ್ರ



ಎಪ್ಪಾ ಎಪ್ಪಾ ಎನ್ ಅಣ್ಣಾ ನಿನ್ನ ಅಕ್ಷನ್, ಲೊಟ್ಟೊ ಶೂ ಹಾಕಿಕೊಂಡು ನೀನು ಒದ್ದರೆ, ಕ್ವಾಲಿಸ ಗಾಡಿಯ ಮುಂದುಗಡೆಯಿಂದ ಒಬ್ಬ ಒಳಗೆ ಹೊಗ್ತಾನೆ ಇನ್ನೊಬ್ಬ ಆಚೆ ಬರ್ತಾನೆ, ಅದ್ರೂ ಅದೇನು ಹೆಚ್ಚಲ್ಲ ಬಿಡು
ನಮ್ಮ ಲೇಡಿ ರಾಂಬೊ ಮಾಲಶ್ರೀ ಈ ಸೀನನ ಬಸ್ಸಿನಲ್ಲೇ ಮಾಡಿದ್ದಾಳೆ. ಬಾಯಿನಲ್ಲಿ ಬೂಮರ್ ಚಿಯಿಂಗಗಮ್ ತಿನ್ನೊಕ್ಕೆ ಯೋಗಾಸನ ಯಾಕೆ ಮಾಡ್ತಿಯೋ ನಾ ಕಾಣೆ. ನಮ್ಮ ಟೆನ್ನಿಸ್ ಕಷ್ಟ ಇಲ್ಲದೇ ಹೇಗೆ ತಿನ್ನಬಹ್ಜುದು
ಅಂತ ನಿನಗೆ ಹೇಳಿಕೊಡ್ತಾನೆ ಬಿಡು. ಒಳ್ಳೆ ಜನರನ್ನು ಕಳ್ಳೆಪುರಿ ಎಸೆಯೋದೆ ಸ್ಟೈಲ್ ಅನ್ನೋದು ಆದ್ರೆ ನಮ್ಮ ಜಾಕಿಚಾನ್ ಥ್ದ್ರಿಲರ್ ನ ಎನು ಕರೆಯೋದು ??

ಹೊಗ್ಲಿ ವಿಷ್ಯಕ್ಕೆ ಬರೋಣ ...

ಹೌದು ಅಣ್ಣಾ ನಿನ್ನ ಕರಿ ಮೂತಿ ಮುಖಕ್ಕೆ ೧೦ ಇಂಚು ಮೇಕಪ್ ಹಾಕಿದ್ದರೂ, ಸ್ಟೈಲ್ ಕಿಂಗ್ ಅಂತ ಹೆಸರು ಕೊಟ್ಟು ಅತಿಯಾದ ಮರ್ಯಾದೆ ಕೊಟ್ರಲ್ಲ ನಮ್ಮ ಜನರ ಬುದ್ದಿಗೆ
ನಿಜಕ್ಕೂ ಒದಿಬೇಕು ಬಿಡು. ಕನ್ನಡ ಚಿತ್ರಗಳು ಚಿತ್ರಮಂದಿರ ಇಲ್ಲದೆ ಸಾಯ್ತಾ ಇದ್ದರೂ ನಮ್ಮ ಕನ್ನಡ ಹುಡುಗ ಅಂತ ನಿನ್ನ ಚಿತ್ರಗಳಿಗೆ ಬಿಟ್ಟು ಕೊಟ್ಟಿ ಲಾಬಿ ಮಾಡಿಕೊಟ್ಟರಲ್ಲ
ನಮ್ಮ ಚಿತ್ರಮಂದಿಗೆ ಇನ್ನು ಬುದ್ದಿ ಬಂದಿರೊಲ್ಲ ಬಿಡು. ಕರ್ನಾಟಕದಲ್ಲಿ ನನ್ನ ಚಿತ್ರ ಬಂದರೂ ಒಂದೇ, ಬಿಟ್ರೂ ಒಂದೇ ಅಂತ ನಿನ್ನ ಮನಸ್ಸಿಗೆ ಅನಿಸಿದ ಹಾಗೆ ನಿಜಾವಾಗಿ ಹೇಳಿದ್ದಿಯಾ, ನಿಜಕ್ಕೂ ಇದಕ್ಕೆ ಒಂದು ಚಪ್ಪಾಳೆ ಹೋಡಿಬೇಕು ಬಿಡು.

ನಿನ್ನ ಶಿವಾಜಿ ಚಿತ್ರ ಬರೊಕ್ಕೆ ಮುಂಚೆ ನಿನ್ನ ಚಿತ್ರಗಳ ತುಣುಕಗಳನ್ನು ಹಾಕಿ ನಿನ್ನ ಬಗ್ಗೆ ಅತಿಯಾಗಿ ಹೋಗಳಿದ್ದೇನು, ಸಿಗರೇಟು ಬಾಯಿಗೆ ಇಟ್ಕೊಳ್ಳೊದೆ ಒಂದು ದೊಡ್ಡ ಸಾಧನೆ ಅನ್ನೋ ರೀತಿಯಲ್ಲಿ ನಿನ್ನ ಕಾಗೆ ಹಾರಿಸಿದ್ದೇನು. ಅದೇ ಜನ ಕನ್ನಡ ಹೋರಾಟಗಾರರನ್ನು ನಿನ್ನ ಚಿತ್ರ ವಿರೋಧಿಸಿದರು ಅಂತ ದೇಶದ್ರೊಹಿಗಳ ತರ ಕಾಮೆಂಟ್ ಮಾಡಿ, ಜನರ ದೃಷ್ಟಿಯಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು ನೋಡಿ ಅಂತಹ ಒಂಬತ್ತು ಒಂಬತ್ತು ತೋಳ ಹಳ್ಳಕ್ಕೆ ಬಿತ್ತು ಅನ್ನೋ ವಾಹಿನಿಗಳು
ಕನ್ನಡದಲ್ಲಿ ಗಾಳಿಪಟ ಚಿತ್ರವನ್ನು ಧೂಳಿಪಟ ಎಂದು ಮೊದಲ ಪುಟದಲ್ಲಿ ಬೈದು, ನಿನ್ನ ಶಿವಾಜಿ ಚಿತ್ರವನ್ನು ಅತ್ರುತ್ತಮ ಚಿತ್ರ ಅಂತ ಹೇಳಿದರಲ್ಲಿ ನಮ್ಮ ಕನ್ನಡಿಗರ ಹೆಮ್ಮೆಯ ಅನ್ನೋ ಪತ್ರಿಕೆಗಳನ್ನು ನೋಡುತ್ತ, ಓದುತ್ತ ಅವರು ಹೇಳಿದ್ದೆ ನಿಜ ಅಂತ ನಂಬೋ ನಮ್ಮ ಕನ್ನಡಿಗರ ಬುದ್ದಿಗೆ ಒದಿಬೇಕು ಬಿಡಿ.

ಕನ್ನಡದ ಹೆಮ್ಮೆ ಅನ್ನೋ ಈ ಮಾಧ್ಯಮದ ಜನ, ನಿನ್ನ ಮೇಲಿನ ಪ್ರೀತಿಗೆ ನೀನು ಓದಿರಿ ಅಂತ ಹೇಳಿದ್ದು ಸುದ್ದಿ ಮಾಡದೇ, ಅದನ್ನು ಮುಚ್ಚಿ ಹಾಕೋ ಕೆಲ್ಸಕ್ಕೆ ಕೈ ಹಾಕಿದರು. ಎಲ್ಲೊ ಖಾಲಿ ಜಾಗದಲ್ಲಿ ಯಾವನೋ ಉಚ್ಚೆ ಮಾಡಿದ ಅಂದ್ರೆ ಅದರ ಬಗ್ಗೆ ವ್ಯಾಖ್ಯಾನ ಮಾಡೊ ಇವರಿಗೆ ಇದು ದೊಡ್ಡ ಸುದ್ದಿ ಅನಿಸಲೇ ಇಲ್ಲ. ಅದೇ ಸಾಸ್ಕೆನ್ ವಿಷಯದಲ್ಲಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದರು, ಕನ್ನಡ ಹೋರಾಟಗಾರರು ಯಾಕೆ ಇನ್ನೂ ಸುಮ್ಮನೆ ಇದ್ದಾರೆ ಅಂತ ಪುಂಖಾನುಪುಂಖ ಪ್ರಶ್ನೆ ಹಾಕಿದವರಿಗೆ ನೀನು ಒದಿ ಅಂತ ಹೇಳಿದ್ದು ಸುದ್ದಿ ಅಲ್ಲ, ಆಗ ತಮ್ಮ ವೀರ ಸ್ವಾಭಿಮಾನವನ್ನು ಪಕ್ಕಕ್ಕೆ ಇಟ್ಟು ಈ ವಿಷಯಕ್ಕೆ ಬೇರೆ ಆಯಾಮ ಕೊಡೊ ಕೆಲ್ಸ ಮಾಡಿದ್ರಲ್ಲ..... ಈ ಜನಗಳಿಗೆ ಒದಿಯೋ ಕೆಲ್ಸ ನೀನು ಮಾಡಿ ಸ್ವಲ್ಪ ಪುಣ್ಯ ಕಟ್ಟಿ ಕೊಳ್ಳಣ್ಣ...

ನಿನ್ನೆ ಯಾಕೆ ಕೇಳ್ಲಾ ಇದ್ದೀನಿ , ನೀನು ಒಮ್ಮೆ ಒದ್ದರೆ ನೂರು ಟೈಮ್ ಒದ್ದ ಹಾಗೆ ಅಲ್ವಾ ?

ಕೊನೆಗೂ ನಿನ್ನ ಬಣ್ಣದ ಬುದ್ಧಿ ತೋರಿಸಿಬಿಟ್ಟೆ ಗುರು...ನಿನ್ನ ಮಾತುಗಳನ್ನು ಮುಚ್ಚಿ ಹಾಕಿಕೋಳ್ಳೊದ್ರಲ್ಲೂ ನಿನ್ನ ಜಾಣತನ ಮೆರಸಿದೆ ಬಿಡು. ನೀನು ಅಂಬಿ,ವಿಷ್ಣು,ಕಾರ್ನಾಡ ಅಂತ ಮಹಾನ್ ಜನ ಹೇಳಿದರೆ ಮಾತ್ರ ಸಾರಿ ಕೇಳ್ನಿನಿ,ಅದೂ ಅವರ ಮನಸಾಕ್ಷಿಗೆ ಸರಿ ಅನಿಸಿದರೆ ಮಾತ್ರ ಅಂತ ಹೇಳಿದೆ.
ನಿನಗೆ ಗೊತ್ತು ಕಣಣ್ಣಾ ಈ ವೀರಾಧಿವೀರರು ಬೆಚ್ಚಗೆ ಮಡಿಕೇರಿ ಚಳಿಯಲ್ಲಿ ೯೦ ಹಾಕ್ಕೊಂಡು, ಕಾರ್ಡ್ಸ ಆಡ್ಕೋಂಡು ಇದ್ರು, ರಸ್ತೆ ಸರಿ ಇಲ್ಲಾ ಅದಕ್ಕೆ ಬರೊಕ್ಕೆ ಆಗಲಿಲ್ಲ ಅಂತ ಕಿವಿ ಮೇಲೆ ಹೂ ಇಟ್ಟ ಜನ ನಿನ್ನ ಬಗ್ಗೆ ಮಾತಾಡೋ ಹಕ್ಕು ಆದ್ರು ಇದೆಯಾ ಅಂತ ಚೆನ್ನಾಗಿ ಗೊತ್ತಿದ್ದು ಕೊಂಡೆ ನೀನು ಅವರ ಹೆಸರ ಹೇಳಿದ್ದು. ಥ್ಯಾಂಕ್ಸ ಕಣಪ್ಪಾ ನೀನು sarcastic ಆಗಿ ಹೇಳಿದ್ಧು ಆ ಜನ ನಿಜ ಅಂದು ಕೊಳ್ಳೋ ಮೊದಲು , ಇನ್ನೊಮ್ಮೆ ನಾನು ಎಪ್ರಿಲ್ ಫೂಲ್ ಮಾಡ್ತ ಇದ್ದೆ ಅಂತ ಹೇಳಿಬಿಡು.
ಇನ್ನಾ ಇದೇನು ಬಾಬ ಬುಡನಗಿರಿ ವಿಶ್ಯ ಕೆಟ್ಟು ಹೊಯ್ತೆ, ನಮ್ಮ ಜ್ಞಾನಪೀಠಿಗಳು ಕಾಮೆಂಟ್ ಮಾಡೊಕ್ಕೆ. ಈ ಜನರಿಗೆ ನಮ್ಮ ಜನರ ಕಾಲು ಎಳೆಯೊಕ್ಕೆ ಸರಿ ಟೈಮು ಇರೊಲ್ಲ, ಅದೇ ನಿನ್ನ ಚಿತ್ರ ಪ್ರದರ್ಶನ ವಿರುದ್ದ ಮಾಡೊ ಹೋರಾಟಗಳನ್ನು ವಾಮೋಚರವಾಗಿ ಬೈಯ್ಯುತ್ತಾರೆ ಈ ಜನ. ಇವರು ನೀನು ಹೇಳಿದ್ದು ತಪ್ಪು ಅಂತ ಯಾಕೆ ಹೇಳ್ಟಾರೆ ನೋಡು ?
.
ನಿಮ್ಮ ತಮಿಳು ರಾಷ್ಟ್ರದಲ್ಲಿ ನೀರಿಗೆ , ಗಡಿ ಕಳ್ಳತನಕ್ಕೆ ಹೋರಾಟ ಮಾಡೊ ಎಲ್ಲರೂ ದೇಶ ಭಕ್ತರೂ. ಅದೇ ನಾವು ಇದು ಅನ್ಯಾಯ ಅಂತ ಹೇಳಿದರು ವಿಷಕ್ರಿಮಿಗಳು ಅಲ್ವಾ ?.
ಕೇಂದ್ರದಲ್ಲೂ ನೀವೆ, ರಾಜ್ಯದಲ್ಲೂ ನೀವೆ, ನಿಮ್ಮಿಂದಲೇ ನಾವು, ನೀವು ಇದ್ರೂ-ಹೋದ್ರು ನಷ್ಟ ಆಗೋದು ನಮಗೆ ಅನ್ನೋ ನಿಮ್ಮ ಕಂತ್ರಿ ಬುದ್ಧಿಗೆ ಯಾವಾ ಬಾಬ ಬಂದು ಒದಿಬೇಕು ಸಿವಾ ???

Monday, March 31, 2008

ಹೊಗೆನಕಲ್ ನಮ್ಮದು...

Sunday, March 16, 2008

೧೯೬೬ರ ಕುವೆಂಪು ಭಾಷಣ ..


ಆವತ್ತು ಫೆಬ್ರವರಿ ೨೭ನೇ ತಾರೀಖು, ೧೯೬೬ ಇಸವಿ. ಅಂದರೆ ೩೨ ವರುಷಗಳ ಹಿಂದಿನ ಮಾತು. ಆವತ್ತಿನ ವಿಶೇಷವೆಂದರೆ ಕನ್ನಡದ ರಾಷ್ಟ್ರಕವಿ ಕುವೆಂಪು ಅವರಿಗೆ
ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್ ಪದವಿಯನಿತ್ತು ಸನ್ಮಾನಿಸಿದರು. ಆ ಸಂಧರ್ಬದಲ್ಲಿ ಕುವೆಂಪು ಮಾತಾಡಿದ ಭಾಷಣ ನಿಜಕ್ಕೂ ಅದ್ಭುತ, ಇಂದಿಗೂ ಪ್ರಸ್ತುತ ಅನ್ನುವ
ಹಾಗೆ ಆಗಿನ ಕಾಲದಲ್ಲಿ ಕನ್ನಡ ಕಣ್ಣಿನಲ್ಲಿ ಕನಸು ಕಂಡ ಮಹಾನ್ ಜೀವಿ.

ಅವರ ಭಾಷಣದ ಕೆಲ ತುಣುಕುಗಳನ್ನು ನಿಮ್ಮ ಮುಂದೆ ಇಡುತ್ತ ಇದ್ದೇನೆ.

" ಭಾಷಾನುಗುಣವಾಗಿ ರಾಜ್ಯಗಳನ್ನು ವಿಂಗಡಿಸಿದಾಗಲೇ ನಮ್ಮ ಪ್ರಜಾಸತ್ತಾತ್ಮಕವಾದ ರಾಜ್ಯಾಂಗ ಈ ಪ್ರಾದೇಶಿಕ ವೈಶಿಷ್ಟವನ್ನು ಕಾನೂನುಭದ್ಧವಾಗಿಯೆ ಗುರುತಿಸಿದಂತಿದೆ.
ಆದ್ದರಿಂದ ಆಯಾ ಪ್ರದೇಶದ ಭಾಷಾ ಪ್ರದೇಶದ ರಾಜ್ಯ್ದದಲ್ಲಿ ಇರುವ ವಿಶ್ವವಿಧ್ಯಾಲಯಗಳು ಆಯಾ ಪ್ರದೇಶದ ಭಾಷಾ ಸಾಹಿತ್ಯ ಕಲಾ ಸಂಸ್ಕೃತಿಗಳಿಗೆ ವಿಶೇಷ ಪ್ರೋತ್ಸಾಹವೀಯುವುದು ಅತ್ಯಗತ್ಯ.
ಏಕೆಂದರೆ ಆಯಾ ಪ್ರಾದೇಶಿಕ ವಿಶ್ವವಿದ್ಯಾಲಯಗಳು ಆ ಕೆಲ್ಸ ಮಾಡದೆ ಇದ್ದರೆ ಪ್ರಪಂಚದ ಇನ್ಯಾವ ವಿದ್ಯಾಸಂಸ್ಥೆಗಳು ಅದನ್ನು ಮಾಡುವದಿಲ್ಲ ಕರ್ನಾಟಕದಲ್ಲಿರುವ ವಿಶ್ವವಿದ್ಯಾಲಯಗಳು ಕನ್ನಡ ನುಡಿಯ,ಸಾಹಿತ್ಯದ,ಇತಿಹಾಸದ ,ಕಲೆಯ ಮತ್ತು ಸಂಸ್ಕೃತಿಯ ರಕ್ಷಣೆ ಪೋಷಣೆಗಳನ್ನು ನಿರ್ಲಕ್ಷಿಸಿದರೆ ಅದು ಕಡಲ ಪಾಲಾದಂತೆಯೆ. ಇಂಗ್ಲೀಷ್ ಭಾಷೆ ತನ್ನ ಅಭಿವೃದ್ದಿಗೆ ಕರ್ನಾಟಕ ಅಥಾವಾ ಮೈಸೂರು ವಿಶ್ವವಿದ್ಯಾಲಯಗಳ ಕೈ ಹಾರೈಸುವದಿಲ್ಲ. ಜಗತ್ತಿನ ಇತರ
ಸಾವಿರಾರು ಸಂಸ್ಥೆಗಳಲ್ಲಿ ಅದು ಸುಪುಷ್ಟವಾಗಿ ಮುಂದುವರೆಯುತ್ತ ಇರುತ್ತದೆ; ಭೌತ ರಸಾಯನಾದಿ ವಿಜ್ಞಾನ ವಿಷಯಗಳ ಸಂಶೋಧನೆ ಇಲ್ಲಿ ನಡೆಯದಿದ್ದರೆ, ಜಗತ್ತಿನ ಇತರ
ಲಕ್ಷಾಂತರ ಸಂಸ್ಥೆಗಳಲ್ಲಿ ಅದು ನಡೆಯುತ್ತಲ್ಲೆ ಇರುತ್ತದೆ. ಹಿಂದಿಗೆ ಅದರ ಏಳಿಗೆಗೆ ನಮ್ಮ ಪ್ರೊತ್ಸಾಹ ಬೇಕಾಗಿಲ್ಲ. ಭಾರತದ ಸಾವಿರಾರು ಸಂಸ್ಥೆಗಳಲ್ಲಿ ಅದು ರಕ್ಷಿತ ಪೋಷಿತವಾಗಿದೆ. ಕಡೆಗೆ ಉರ್ದುವಿನಂತಹ ಭಾಷೆಗೆ ಇರುವ ರಕ್ಷೆ ನಮ್ಮ ಕನ್ನಡಕ್ಕಾಗಲಿ ,ಮರಾಠಿ, ತಮಿಳು, ಮಲೆಯಾಳಂಗಳಾಗಲಿ ಇಲ್ಲ. ಪಾಕಿಸ್ಥಾನದ ಮಾತಿರಲಿ, ಭಾರತದಲ್ಲಿಯೇ ಇರುವ ೪೫ ವಿ.ವಿಗಳಲ್ಲಿ ಒಂದೊಂದು ವಿ.ವಿದಲ್ಲಿಯೂ ಅದಕ್ಕೆ ಆಯಾ ಪ್ರಾದೇಶಿಕ ಭಾಷೆಗಳಿಗಿರುವಂತೆಯೆ ಸಮಾನಸ್ಥಾನ ಒದಗಿ, ಒಟ್ಟು ಮೊತ್ತದಲ್ಲಿ ನೋಡಿದರೆ ಅದಕ್ಕೆ ಪ್ರಾದೇಶಿಕ ಭಾಷೆಗಳಿಗೆ ಲಭಿಸುವ ಪ್ರೋತ್ಸಾಹಕ್ಕೆ ೪೫% ಹೆಚ್ಚು ಪ್ರೊತ್ಸಾಹ ಒದಗುತ್ತದೆ. ಕನ್ನಡಕ್ಕೆ ಕನ್ನಡ ನಾಡಿನಲ್ಲಿ ಹೆಚ್ಚು ಎಂದರೆ ೩-೪ ವಿ.ವಿ ಮಟ್ಟದ ಪ್ರಾಧ್ಯಪಕ ಸ್ಥಾನಗಳಿದ್ದರೆ, ಉರ್ದು,ಹಿಂದಿಯಂತಹ ಭಾಷೆಗಳಿಗೆ ಭಾರತದಲ್ಲಿಯೇ ೫೦ ಪ್ರಾಧ್ಯಪಕ ಸ್ಥಾನಗಳು ಮಿಸಲಾಗಿರುತ್ತದೆ, ಇನ್ನು ಇಂಗ್ಲೀಷ್ ಭಾಷೆಗಂತೂ ಕೇಳುವುದೇ ಬೇಡ. ಪ್ರಪಂಚದಲ್ಲಿ ಅದಕ್ಕೆ ಲಕ್ಷಾಂತರ ಪ್ರಾಧ್ಯಪಕರಿದ್ದಾರೆ. ಇರಲಿ ನಮಗೇನು
ಹೊಟ್ಟೆಕಿಚ್ಚು ಇಲ್ಲಾ. ಒಂದು ನಿದರ್ಶನಕ್ಕೆ ಅಂಕೆ ಅಂಶಗಳ ರೂಪದಲ್ಲಿ ನಾನು ಅದನ್ನು ಉಲ್ಲೇಖಿಸಿದ್ದು, ಅದನ್ನು ಯಾರೂ ಅಸೂಯೆ ಎಂದು ಭಾವಿಸಬಾರದು. ನಮ್ಮ ಪ್ರಾದೇಶಿಕ ವಿ.ವಿ ತಮ್ಮ ಪ್ರಾದೇಶಿಕ ಭಾಷೆ ಸಾಹಿತ್ಯ, ಇತಿಹಾಸವನ್ನು ನಿರ್ಲಕ್ಷಿಸಿದರೆ ಅವುಗಳಿಗೆ ಉಳಿಗಾಲವಿಲ್ಲ. ಬೇರೆ ಯಾರು ಮೂಸಿ ನೋಡುವದಿಲ್ಲ. ಅವು ದುರ್ಗತಿಗೆ ಇಳಿದು, ಅವಮಾನಿತವಾಗಿ ಇತರ ಸಶಕ್ತ ಮತ್ತು ಪ್ರಗತಿಪರ ಭಾಷೆಗಳ ದಾಳಿಗೆ ಸಿಕ್ಕಿ, ಹೇಳ ಹೆಸರಿಲ್ಲದಂತೆ ವಿಲುಪ್ತವಾಗುತ್ತವೆ ಎಂಬ ಕಠೋರ ಸತ್ಯವನ್ನು ತಮ್ಮ ಗಮನಕ್ಕೆ ತರುವ ಆಶಯದಿಂದ ಈ ಕೆಲ್ಸವನ್ನು ಮಾಡಿದ್ದೆನೆ. "ಏಳಿ..ಎಚ್ಚರಗೊಳ್ಳಿ, ಇಲ್ಲದಿದ್ದರೆ ಅನಂತ ಕಾಲಾವೂ ಪತಿತರಾಗಿ ಸರ್ವನಾಶವಾಗುತ್ತವೆ,

ಈ ಪ್ರಾದೇಶಿಕತೆಯ ವೈಶಿಷ್ಟದ ರಕ್ಷಣೆಯಿಂದ ಅಖಿಲ ಭಾರತದ ಸಮಗ್ರತೆಗೆ ಐಕ್ಯತೆಗೆ ಹಾನಿ ಉಂಟಾಗುತ್ತದೆ ಎಂದು ಗೊಂದಲವೆಬ್ಬಿಸುವರ ಹೃದಯದಲ್ಲಿರುವ ಗುಟ್ಟು ಏನು ಎಂಬುದನ್ನು ನಾವು ಹೊಕ್ಕು ನೋಡಿದರೆ ಅದರ ಹೊಳ್ಳು
ಹೊರಬರುತ್ತದೆ., ಅವರ ದುರುದ್ದೇಶ ಬಯಲಾಗುತ್ತದೆ. ಹಾಗೆ ಕೂಗಾಡುವವರ ಒಲೆವೆಲ್ಲಾ ಸಾಮನ್ಯವಾಗಿ ವಿದೇಶಿ ಭಾಷೆಯೊಂದರ ಪರವಾಗಿರುತ್ತದೆ. ಅವರೂ ಆ ವರ್ಗಕ್ಕೆ ಸೇರಿದವರು ಪರಕೀಯರ ಆಳಸರ ಕಾಲದಲ್ಲಿ ಆ ಭಾಷೆಯನ್ನು ಕಲಿತು ಅದರಿಂದ ಸ್ಥಾನಮಾನಗಳನ್ನು ಪಡೆದು, ಕೃತ್ಯಕೃತ್ಯಗಾಗಿದ್ದಾರೆ. ಆ ಸ್ಥಾನ ಮಾನ ಲಾಭಗಳನ್ನೂ ಇನ್ನೂ ಮುಂದೆಯೂ ಉಳಸಿಕೊಂಡು ಹೋಗಲು, ಈಗಾಗಲೇ ಕಷ್ತಪಟ್ಟಿ ಕಲಿತಿರುವ ಆ ಭಾಷೆಯನ್ನೆ ಮುಂದೆಯೂ ಮೊದಲಿನಂತೆಯೆ
ಉಪಯೋಗಿಸುವಂತೆ ಮಾಡಿ ಇತರಿರಿಗಿಂತ ಮುನ್ನವೇ ಸುಭದ್ರವಾಗಿ ನೆಲಸಿ, ಅದರ ಲಾಭ ಪ್ರಯೋಜನ ಪಡೆಯಬೇಕೆಂದು ಅವರ ಅಂತರರಾಷ್ಟ್ರೀಯವಾದದ ಹಿಂದಿರುವ ಹೃದಯ ರಹಸ್ಯವಾಗಿರುತ್ತದೆ.
ಸಂಖ್ಯೆಯಲ್ಲಿ ೧೦೦ಕ್ಕೆ ೧ ರಷ್ಟು ಇಲ್ಲದ ಈ ವರ್ಗದ ಜನರಿಗೆ ಉಳಿದ ೯೯ ರಷ್ಟು ಸಾಮಾನ್ಯ ಜನರ ಕ್ಷೇಮ ಚಿಂತನೆ ಬೇಡವಾಗಿದೆ.

ಆದರೆ ನಿಜವಾಗಿ ಆಲೋಚಿಸಿ ನೋಡಿದರೆ , ಈ ಪ್ರಾದೇಶಿಕ ವೈಶಿಷ್ಟ್ಯದ ರಕ್ಷಣೆಯಿಂದ ಅಖಿಲ ಭಾರತೀಯ ಐಕ್ಯತೆಗೆ ಒಂದಿನಿತೂ ಘಾಸಿಯಾಗುವದಿಲ್ಲ. ಏಕೆಂದರೆ ಭಾಷೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿದ್ದರೂ ಬೇರೆ ಬೇರೆ ಪ್ರದೇಶದ ಮತ್ತು ರಾಜ್ಯಗಳ ಕಲಾ ಮತ್ತು ಸಾಹಿತ್ಯಾದಿಗಳ ವಸ್ತು ಮತ್ತು ದೃಷ್ಟಿಗಳಲ್ಲಿ ಅಖಿಲ ಭಾರತೀಯವಾದ ಏಕೈಕ ಮೂಲ ಸಂಸ್ಕೃತಿಯೆ ೯೫% ಹೆಚ್ಚಾಗಿ ಸರ್ವಸಾಧಾರಣವಾಗಿದೆ. ಆ ಮೂಲ ಸಂಸ್ಕೃತಿಯ ವಜ್ರಬೆಸುಗೆಗೆ ನಮ್ಮ ಒಗ್ಗಟ್ಟನ್ನು ಎಂದೆದಿಗೂ ಒಡೆಯಲು ಬಿಡುವದಿಲ್ಲ. ನಮಗೀಗ ಒದಗಿರುವ ರಾಜಕೀಯ ಅಖಂಡತೆಯೂ ಐಕ್ಯತೆಗೂ ಮೂಲಕಾರಣವೂ ಆ ಅಖಿಲ ಭಾರತೀಯವಾಗಿರುವ ಸಂಸ್ಕೃತಿಯ ಮೂಲದಲ್ಲಿಯೆ ಇದೆ ಎಂಬುದನ್ನು ನಮ್ಮ ಇತಿಹಾಸ ಎಂತಹ ಮಂದಗತಿಗೂ ಸುಗೋಚರವಾಗಿ ಪ್ರದರ್ಶಿಸುತ್ತದೆ."

Saturday, March 08, 2008

ಕಾಣದಂತೆ ಮಾಯವಾದರೋ..ನಮ್ಮ ಕನ್ನಡಿಗರು.


ಐ.ಟಿ ಕನ್ನಡಿಗರು ಕಾಣೆಯಾಗಿದ್ದಾರಾ ?, ಎನಪ್ಪಾ ಈ ಪ್ರಶ್ನೆ ಕೇಳುತ್ತಾ ಇದ್ದೀನಿ ಅಂತ ನಿಮಗೆ ಅನಿಸಿರಬಹುದು. ಯಾಕೆ ಎಂದರೆ, ಐ.ಟಿ ಕ್ಷೇತ್ರದಲ್ಲಿ ಅನುಭವ ಇರುವ ವೃತ್ತಿಪರರು ಸಿಗುತ್ತಾ ಇಲ್ಲಾ ಅಂತ ಸಾಮನ್ಯ ಕೊರಗು. ಇದು ನನ್ನ ಅಭಿಮತವು ಕೂಡ.


ಕಾಣದಂತೆ ಮಾಯವಾದರೋ ..

ನಿಮಗೆ ನನ್ನ ಮಾತಿನಲ್ಲಿ ನಂಬಿಕೆ ಇರದಿದ್ದರೆ, ನೀವೆ ಒಂದು ಉದ್ಯೋಗ ಅವಕಾಶವಿರುವ
ಒಂದು ಮಿಂಚೆಯನ್ನು ಕಳಿಸಿ ನೋಡಿ. ಒಂದು ತಿಂಗಳೂ ಅಲ್ಲಾ , ಒಂದು ವರ್ಷದ ನಂತರವೂ ನಿಮಗೆ ಸಿಗುವ ಕನ್ನಡಿಗರ ಸಿ.ವಿ ಬೆರಳಣಿಕೆ ಅಷ್ಟು. ಇದೇ ಸಮಯದಲ್ಲಿ
ನಿಮ್ಮ ಮಿಂಚೆ, ಸಾಗರೋತ್ತರ ದಾಟಿ, ಎಲ್ಲಾ ರಾಜ್ಯದವರಿಗೂ ದೊರಕಿ, ಬಿಮಾರು ರಾಜ್ಯಗಳಿಂದ ಡಜನ್ ಅಷ್ಟು ಸಿ.ವಿ ನಿಮ್ಮ ಇನಬಾಕ್ಸನಲ್ಲಿ ಕುಳಿತಿರುತ್ತದೆ. ಇನ್ನೂ ನಮ್ಮ ನೆರೆ ರಾಜ್ಯಗಳ
ಜನರಿಗೆ ಮಿಂಚಿನ ಹಾಗೆ ವಿಷಯ ತಿಳಿದಿರುತ್ತದೆ. ನಿಮ್ಮ ಮೊಬೈಲ್ ಸಂಖ್ಯೆ ಕೊಟ್ಟಿದ್ದರೆ ಮುಗಿಯಿತು. ಯಾರೋ ವರ್ಮ, ಇಲ್ಲಾ ಪಳನಿ ನಮ್ಮ ತಮ್ಮನಿಗೆ ಕೆಲ್ಸ ನೋಡುತ್ತ ಇದ್ದೇವೆ
ಯಾವ ಕಂಪೆನಿ, ಎಷ್ತು ಸಂಬಳ ಕೊಡುತ್ತಾರೆ, ಸಿ.ವಿ ಫಾರ್ವಡ್ ಮಾಡೋದಾ ಅಂತ ಪ್ರಶ್ನೆಗಳ ಸುರಿಮಳೆ ಹಾಕುತ್ತಾರೆ. ಲೋ .. ಅಣ್ಣಾ ಮುಚ್ಕೋಂಡು ಫೊನ್ ಮಡಗು, ಆ ಕೆಲ್ಸ ಈಗ ಖಾಲಿ ಇಲ್ಲಾ
ಅಂತ ನಯವಾಗಿ ಹೇಳಿದರೂ ಸಹಾ, ಸಿ.ವಿ ಕಳಿಸಿರುತ್ತೆನೆ ಮುಂದೆ ಅವಕಾಶ ಬಂದರೆ ಮೊದಲು ನನ್ನ ತಮ್ಮನ ಸಿ.ವಿ ಕಳಿಸಿ ಅಂತ ಹೇಳಿ ಮಾತು ಮುಗಿಸುತ್ತಾರೆ. ಎಪ್ಪಾ ಯಾಕಪ್ಪಾ ಈ ಮಿಂಚೆ ಕಳಿಸಿದೆ,
ಕನ್ನಡದಲ್ಲಿ ಕಳಿಸಿದರೂ, ಅದು ಭಾಷಾಂತರವಾಗಿ ಹೋಗಿ ಈ ಮಟ್ಟಿಗೆ ಪ್ರತ್ಯುತ್ತರ ಸಿಗುತ್ತದೆ ಎಂದು ಆಶ್ಚರ್ಯ ಆಗುತ್ತದೆ.

ಬದಲಾವಣೆ ಬೇಡವೇ ?

ಇವೆಲ್ಲಾ ನಡೆದ ಮೇಲೆ ಪ್ರಶ್ನೆ ಬರುವುದೇ ನಮ್ಮ ಕನ್ನಡಿಗರಿಗೆ ಕೆಲ್ಸ ಬೇಡವೇ?, ಒಂದು ಕೆಲ್ಸಕ್ಕೆ ಸೇರಿಕೊಂಡ ಮೇಲೆ ಅವರು ಅಲ್ಲಿ ಫೆವಿಕಾಲ್ ಹಾಕಿ ಕುಳಿತಿರುತ್ತಾರಾ ?, ಹೊಸ ಹೊಸ ತಂತ್ರಜ್ಞಾನ ಮತ್ತು ಹೊಸ
ಅನುಭವಗಳಿಗೆ ಕನ್ನಡಿಗರ ಮನ ಮಿಡಿಯುವದಿಲ್ಲವೇ ?. ಪ್ರತಿ ವರುಷ ಲಕ್ಷಾಂತರ ಸಂಖ್ಯೆಯಲ್ಲಿ ಆಚೆ ಬರುವ ನಮ್ಮ ಕನ್ನಡಿಗ ಪಧವಿದರರು, ಎಲ್ಲಿ ಮಾಯ ಆಗಿರುತ್ತಾರೆ ?. ಅದು ಹಿಂದಿನ ೧೦ ವರುಷಗಳ ಲೆಕ್ಕ ತೆಗೆದುಕೊಂಡರೆ
ಸಿಗುವ ಸಂಖ್ಯೆ ಎಷ್ಟು ??. ಅಂದರೆ ೪-೫ ಲಕ್ಷದಲ್ಲಿ ಕೇವಲ ೨-೩ ಜನ ಮಾತ್ರ ಕೆಲ್ಸ ಬದಲಾಯಿಸುತ್ತಾರ ಎಂದು ನೆನೆಸಿಕೊಂಡರೆ ಮೈ ನಡುಕ ಆಗುತ್ತದೆ.
ಕೆಲ್ಸ ಸಿಗುತ್ತಿಲ್ಲಾ, ಕನ್ನಡಿಗರಿಗೆ ಕೆಲ್ಸದಲ್ಲಿ ಅನ್ಯಾಯ ಮಾಡುತ್ತ ಇದ್ದಾರೆ ಅನ್ನೊ ಮಾತುಗಳು ಸಪ್ಪೆ ಅನಿಸುವದಿಲ್ಲವೇ. ಕೆಲ್ಸಕ್ಕೆ ಪ್ರಯತ್ನ ಪಟ್ಟರೆ ತಾನೇ ಅನ್ಯಾಯ ಅಗುತ್ತಿದೆ ಎನ್ನಬಹುದು. ಸುಮ್ಮನೆ ಪ್ರಯತ್ನ ಪಡದೆ
ದೊರಕಬೇಕು ಅನ್ನುವದಕ್ಕೆ ಇದೇನು ಮಂತ್ರದಿಂದ ಉದರುವ ಮಾವಿನ ಹಣ್ಣೇ ?.

ನನ್ನ ಅನುಭವ ಮಾತ್ರ ಅಲ್ಲಾ

ಇದು ಕೇವಲ ನನ್ನ ಅನುಭವ ಅಲ್ಲಾ, ಈ ಹಿಂದೆ ಕೆಲ ಸಂಸ್ಥೆಗಳ HR ಆಗಿದ್ದ ನನ್ನ ಗೆಳಯರಿಗೆ ಕನ್ನಡಿಗರಿಗೆ ಮೊದಲು ಆದ್ಯತೆ ಕೊಡ್ರಪ್ಪಾ ಅಂತ ದಂಬಾಲು ಬೀಳುತ್ತಿದ್ದೆ. ಆಗ ಅವರು " ಅಯ್ಯೋ ಗುರು... ನಮ್ಮ ಜನ
ಕೆಲ್ಸಕ್ಕೆ ಅರ್ಜಿ ಹಾಕುವುದೇ ಇಲ್ಲ್ದಾ, ಅರ್ಜಿ ಹಾಕಿದರೆ ತಾನೇ ಕೊಡೊದು" ಅಂತ ಹೇಳುತ್ತ ಇದ್ದಿದ್ದನ್ನು ನಾನು ಸಬೂಬು, ಇಲ್ಲಾ ಯಾರದೋ ಕಿತಾಪತಿ ಎಂದು ಕೊಳ್ಳುತ್ತಿದೆ. ಸಾಲದಕ್ಕೆ ನಮ್ಮ ಹಿಂದಿನ ಪೀಳಿಗೆ ಜನ
ಕನ್ನಡಿಗರು ಅರ್ಜಿ ಹಾಕಿಲ್ಲ, ಅಂತ ಕನ್ನಡಿಗರು ಹಾಕಿದ್ದ ಅರ್ಜಿಗಳನ್ನು ಹರಿದು ಹಾಕಿದ್ದು ಜ್ಞಾಪಕ ಬರುತ್ತಿತ್ತು. ನಮ್ಮ ಕನ್ನಡ ಗೂಗಲ್ ಗುಂಪುಗಳಲ್ಲಿ ದಿನಕ್ಕೆ ೧೦-೧೨ ಉದ್ಯೋಗ ಅವಕಾಶಗಳು ಬರುತ್ತಾ ಇರುತ್ತದೆ, ಅದು ಉತ್ತಮ ಮತ್ತು ಅತ್ಯುತ್ತಮ ಸಂಸ್ಥೆಗಳಿಗೆ, ಆದರೆ ಇವು ಯಾಕೋ ನಮ್ಮ ಕನ್ನಡಿಗನ ಗಮನ ಸೆಳೆಯುವದಿಲ್ಲ. ಅದು ಕೇಳಿರುವ ಪರಿಣಿತಿ ಎನು ರಾಕೆಟ್ ಸೈಸ್ನ ಅಲ್ಲಾ, ಇಂದಿನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬಳಸುವ ತಂತ್ರಜ್ಜಾನ ಕೇಳಿದರೂ ಸಿಗುವ ಉತ್ತರ ಸೊನ್ನೆಯೇ

ಹೊಗ್ಲಿ ಬರುವ ಒಂದಿಬ್ಬರ ಕಥೆ ಎನೂ ?

ಹೋಗ್ಲಿ ಪಾಲಿಗೆ ಬಂದಿದ್ದು ಪಂಚಾಮೃತ ಅನ್ನುವ ಹಾಗೇ ಕೇಳಿರದ ಸಂಸ್ಥೆಗಳಲ್ಲಿ ಕೆಲ್ಸ ಮಾಡಿರುವ ಕನ್ನಡಿಗರಿಗೆ ಸಂದರ್ಶನಕ್ಕೆ ಕರೆದರೆ, ಅವರೂ ಮಾನ ಕಳೆಯುತ್ತಾರೆ. ಯಾಕಪ್ಪಾ ಅಂದರೆ
ಅಯ್ಯೊ ಓದಿಕೊಂಡು ಬಂದಿರಲಿಲ್ಲ, ತುಂಬಾ ಕಠಿಣ ಆಗಿತ್ತು ಅಂತಾರೆ. ಇವರು ಕೊಟ್ಟ ಉತ್ತರಗಳನ್ನು ನೋಡಿದರೆ ನಿಮಗೆ ಯಾಕಾದರೂ ಇವರನ್ನು ಸಂದರ್ಶನಕ್ಕೆ ಕಳಿಸಿದೆವೋ ಅಂತ ಅನಿಸುತ್ತದೆ.
ಸಂದರ್ಶನಕ್ಕೆ ಬರುವಾಗ ಓದಿಕೊಂಡು ಬರಬೇಕು ಅಂತ ಬಾಯಿ ಬಿಟ್ಟು ಹೇಳಬೇಕಾ.
ಹೊಗ್ಲಿ..ಬರೋ ಜನಕ್ಕೆ ಸ್ವಲ್ಪ ಮಟ್ಟಿಗೆ ಓದಿಕೊಂಡು ಬನ್ನಿ ಅಂತ ಹೇಳಿದರೂ ಪರಿಣಾಮ ಅಷ್ಟೆ. ನಾನು ತುಂಬಾ ಚೆನ್ನಾಗಿ ಮಾಡಿದ್ದೆ, ಆದ್ರೂ ನನ್ನ ಆರಿಸಲಿಲ್ಲ, ಕನ್ನಡಿಗರಿಗೆ ಅನ್ಯಾಯ ಅಂತ ಬೊಂಬಡ ಹೊಡೆಯುತ್ತಾರೆ.
ಬೇರೆ ಭಾಷೆ ಜನ ನೋಡಿ, ಸುಮ್ಮನೆ ಸಂದರ್ಶನ ಇಲ್ಲದೇ ಇದ್ದರೂ ಆಯ್ಕೆ ಮಾಡೊಲ್ವಾ, ನೀವು ಯಾಕೆ ಹಾಗೆ ಮಾಡಬಾರದು ಅಂತ ಪ್ರಶ್ನೆಗಳನ್ನೇ ಸುರಿಸುತ್ತಾರೆ. ಹಸಿವಾಗಿದೆ ಎಂದು ಹುಲ್ಲು ತಿನ್ನಬೇಕೆ, ಜೊಳ್ಳನ್ನು ತೆಗೆದುಕೊಂಡು
ಮುಂದೆ ನಾವು ಅನುಭವಿಸಬೇಕೆ ಎಂದು ಮಾತಿಲ್ಲದೆ ಸುಮ್ಮನೆ ಆಗುತ್ತೆವೆ.

ಇನ್ನೂ.. ತ್ವರಿತವಾದ ಉದ್ಯೊಗ ಖಾಲಿ ಇದೆ ಅಂತ ಗೆಳೆಯರಿಗೆ ಹೇಳಿ, ಸಂಕಷ್ತದಲ್ಲಿ ಇರುವ ಕನ್ನಡಿಗರಿಗೆ ಸಹಾಯ ಮಾಡೋಣ ಅಂತ ಕರೆ ಮಾಡಿದರೆ, ನನಗೆ ಟೆಸ್ತ ಬರೆಯಲು ಸಮಯ ಇಲ್ಲಾ, ಮುಂದಿನ ವಾರ
ಬರುತ್ತೆನೆ ಅನ್ನುತ್ತಾರೆ. ಗುರು..ತುಂಬಾ ಅರ್ಜೆಂಟು ಇದೆ, ನೋಡು ಒಳ್ಳೆಯ ಅವಕಾಶ ಅಂತ ಅಂಗಲಾಚಿದರೂ ಬರುವದಿಲ್ಲಾ. ಇಷ್ತೆಲ್ಲಾ ಮಾಡಿದ ಮೇಲೆ ಅನಿಸುವುದು ಯಾಕೆ ನಾನು ಇಷ್ಟೊಂದು ಇವರನ್ನು ಕಾಡಿ ಬೇಡಬೇಕು
ಬೇಕಿದ್ದರೆ, ಅವರೇ ಬರುತ್ತಾರೆ. ಹಸಿವಿಲ್ಲದವನಿಗೆ ಮೃಷ್ಟಾನಾ ತೋರಿಸಿದರೂ ತಿನ್ನೊಲ್ಲಾ ಅಂತ ನನಗೆ ನಾನು ಸಮಧಾನ ಮಾಡಿಕೊಂಡಿದ್ದೆನೆ.

ಕೆಲ್ಸದ ಬದಲಾವಣೆಗೆ ಕನ್ನಡಿಗನ ಆಸರೆ ಬಯಸುವದಿಲ್ಲ.

ಇದು ನನಗೆ ಕಂಡು ಬಂದ ಇನ್ನೊಂದು ಅಂಶ. ಕನ್ನಡಿಗರೂ ಕನ್ನಡಿಗರ ಮುಖಾಂತರ ಕೆಲಸಕ್ಕೆ ಪ್ರಯತ್ನ ಪಡುವದಿಲ್ಲ, ಇದಕ್ಕೆ ಎನು ಕಾರಣವೋ ಗೊತ್ತಿಲ್ಲ.ಅದಕ್ಕೆ ಪ್ರತಿ ಬಾರಿ ಪ್ರತಿಯೊಬ್ಬ ಕನ್ನಡಿಗನಿಗೂ ಇದು ಅನುಭವ ಆಗುತ್ತದೆ.
ಸರಿ , ಅವರಿಗೆ ಸರಿ ಅನಿಸುವ ಮಾರ್ಗದಲ್ಲಿ ಕೆಲಸವನ್ನು ಅರಿಸುತ್ತಾರೆ ಎಂದುಕೊಂಡು ಸುಮ್ಮನೆ ಇರಬೇಕು ಅಷ್ಟೆ.

Saturday, March 01, 2008

inthi ninna preethiya - FILM REVIEW


ತಾರಾಂಗಣ

ರಾಜೀವ್ - ಕೃಷ್ಣ

ಪರಿಮಳ- ಭಾವನ

ನಯನ -ಸೋನು

ಮಾವ - ರಘು

ಅಣ್ಣ - ಕಿಶೋರ್

ಕನ್ನಡ ಚಿತ್ರರಂಗದಲ್ಲಿ ಅನೇಕ ವಿಷಯಗಳಲ್ಲಿ ಕುತೂಹಲ ಮೂಡಿಸಿದ್ದ ಈ ಚಿತ್ರ, ೨೯ನೇ ತಾರೀಖು ತೆರೆಗೆ ಬಂದಿದೆ. ಸೂರಿ ಈ ಚಿತ್ರವನ್ನು ಹೇಗೆ ಮಾಡಿರಬಹುದು, ದುನಿಯಾ ಮ್ಯಾಜಿಕ್ ಉಂಟಾ ಅಂತ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಲು ಮೊದಲನೇ ದಿನವೇ ಚಿತ್ರ ನೋಡಿದೆ.

ಚಿತ್ರದ ಹೆಸರು ನನಗೆ ಹೆಚ್ಚು ಕುತೂಹಲ ಮೂಡಿಸಿತ್ತು, ಇತ್ತಿಚಿಗೆ ಅಷ್ಟೆ PS.I LOVE YOU ಅನ್ನುವ ಚಿತ್ರವನ್ನು ನೋಡಿದ್ದೆ, ಅದರ ನೆರಳು ಇದರ ಮೇಲೆ ಇದೆಯಾ ಅಂತ ನನಗೆ ತುಂಬಾ ಅನಿಸಿತ್ತು. ಹೆಸರು ನೋಡಿ ಚಿತ್ರದಲ್ಲಿ ಪತ್ರಗಳ ಝಲಕ್ಕು ಇರುತ್ತದೆ ಅಂತ ಭಾವಿಸಿದ್ದೆ, ಆದರೆ ನೋಡಿದ ಮೇಲೆ ಚಿತ್ರಕ್ಕೆ ಈ ಒಳ್ಳೆ ಹೆಸರು ಯಾಕೆ ಸೂರಿ ಇಟ್ಟರು ಅಂತ ಆಶ್ಚರ್ಯವಾಯಿತು. ಕೆಲವು ಕಡೆ ಆ ಹೆಸರನ್ನು ಬಳಸಿದ್ದು ಬಿಟ್ಟರೆ, ಶೀರ್ಷಿಕೆಗೆ ಸಂಭಂದವೇ ಇಲ್ಲಾ.

ಚಿತ್ರದ ಆರಂಭ ಬಹಳ ಚೆನ್ನಾಗಿ ಆಗುತ್ತದೆ, ರಾಜೀವನ ಮಾವನ ಕಥೆಯನ್ನು ತೆರೆದಿಡುವ ಮೂಲಕ. ಇವನ ಮಾವ ಒಂದು ಟೆಂಟಿ ನಲ್ಲಿ ಕೆಲಸ ಮಾಡುತ್ತ, ಸಾವಿತ್ರಿ ಅನ್ನೊ ಹುಡುಗಿಯನ್ನು ಪ್ರೀತಿಸುರುತ್ತಾನೆ. ಆದರೆ ಅದು ದುರಂತವಾಗುತ್ತದೆ. ಬೇಸರಾವಾಗಿ ಹಿಮಾಲಯ ಸುತ್ತಾಡಿ ಬರುವ ವೇಳೆಗೆ ಮೂಕ ಆಗಿರುತ್ತಾನೆ. ಇದು ನಮಗೆಲ್ಲಾ ಶಾಕ್, ಜೈ ಟಿಪ್ಪು ಸುಲ್ತಾನ್ ಅನ್ನೋ ಡೈಲಾಗ್ ನಿರೀಕ್ಷಿಸಿದ್ದ ರಘುವಿನ ಬಾಯಿಗೆ ಬೀಗ ಹಾಕಿರುವುದು ಸ್ವಲ್ಪ ಆಶ್ಚರ್ಯವಾಯಿತು. ಆದರೆ ಮೂಕ ಪಾತ್ರದಲ್ಲಿ ಕೂಡ ಹೇಗೆ ನಟಿಸಬೇಕು, ಸಂಘ್ನೆಗಳಿಂದ ಹೇಗೆ ಮನಸ್ಸನ್ನು ಗೆಲ್ಲಬಹುದು ಅಂತ ರಂಗಾಯಣ ರಘು ತೋರಿಸಿದ್ದಾರೆ.
ಅನಾಥ ಶವಗಳನ್ನು ದಫನ್ ಮಾಡುವ ಕೆಲ್ಸ ಮಾಡುತ್ತ ಜೀವನ ಕಳೆಯುತ್ತಿರುತ್ತಾನೆ ಇವನು.

ಚಿತ್ರದ ನಾಯಕ ಒಬ್ಬ ಚಿತ್ರ ಕಲಾವಿದ, ತನ್ನ ಮಾವನ ಜೊತೆ ಸ್ಮಶಾನಗಳಿಗೆ ಹೋಗಿ ಹೆಣಗಳ ಚಿತ್ರಗಳನ್ನು ಬರೆಯುವ ವಿಲಕ್ಷಣ ಹುಡುಗ. ಹೆಣಗಳ ಜೊತೆ ಮಾತಾನಾಡುವ ಒಂದರೆಡು ದೃಶ್ಯ ತುಂಬಾ ಮನ ಮಿಡಿಯುತ್ತದೆ. ಇವನಿಗೆ ತನ್ನ ಸಹಪಾಠಿ ನಯನ ಮೇಲೆ ಅನುರಾಗ. ಇವರ ಇಬ್ಬರ ನಡುವೆ ಪ್ರೀತಿ ತುಂಬಾ ಲವಲವಿಕೆಯಲ್ಲಿ ಇರುತ್ತದೆ. ಇಬ್ಬರೂ ಒಬ್ಬರಿಗೆ ಒಬ್ಬರು ಕಚ್ಚಾಡುತ್ತ, ಪ್ರೀತಿ ಮಾಡುತ್ತ ಇರುತ್ತಾರೆ. ಈ ಹುಡುಗಿಯ ಅಣ್ಣ ಕೂಡ ನಮ್ಮ ನಾಯಕನ ಚೆಡ್ಡಿ ದೋಸ್ತ್.

ನಾಯಕನ ಕಂಪನಿಯಲ್ಲಿ ಮುರುಗ ಅನ್ನೋ ಪೇಟಿಂಗ್ ಮಾಡುವನು, ಪೊಸ್ಟಮಾರ್ಟಮ್ ಮಾಡುವ ಗಡ್ಡಾ, ಮಾವ ಇರುತ್ತಾರೆ. ಕತ್ತಲಾದರೆ ಸಾಕು, ಇವರು ತೀರ್ಥ ಸೇವನೆ ಮಾಡುವ ಕಾರ್ಯಕ್ರಮ. ಆದರೆ ನಾಯಕ ಎಣ್ಣೆ ಮುಟ್ಟದೆ ಇರುತ್ತಾನೆ.
ಮನೆಯಲ್ಲಿ ನಾಯಕನಿಗೆ ಒಳ್ಳೆ ಅತ್ತಿಗೆ, ಕೋಪಿಷ್ಠ ಅಣ್ಣ ,ಅಜ್ಜಿ ಮತ್ತು ಅಣ್ಣನ ಮಗಳು ಇರುತ್ತಾರೆ. ಮನೆ ಚಿಕ್ಕಾದಾದರೂ ಮನ ದೊಡ್ಡದಾಗಿರುವ ತುಂಬು ಕುಟುಂಬ ಅದು.

ಕಲಾವಿದನನ್ನು ಮದುವೆಯಾದರೆ ಎನಿದೆ ಅಂತ ಅನಿಸಿ, ಇವನಿಂದ ದೂರ ಹೋಗಿ ಇನ್ನೊಂದು ಮದುವೆ ಮಾಡಿಕೊಳ್ಳುತ್ತಾಳೆ ನಯನ. ಇದನ್ನು ಸಹಿಸಲಾಗದೇ ನಾಯಕ ಕುಡಿತದ ದಾಸ ಆಗುತ್ತಾನೆ. ಸಿಕ್ಕ ಸಿಕ್ಕಲ್ಲಿ ಬಿದ್ದು ಹೊರಳಾಡುತ್ತ, ಪ್ರೀತಿಯ ಬಗ್ಗೆ ಬಡಬಡಿಸುತ್ತಾ ದೇವದಾಸಗೆ ಸಡ್ದು ಹೊಡೆಯುತ್ತಾನೆ. ಇವನ ಈ ಕರುಣಾಮಯ ಸ್ಥಿತಿಯನ್ನು ನೋಡುತ್ತಾಳೆ ಅವನ ಹಿಂದಿನ ಪ್ರೇಯಸಿ, ಅಲ್ಲಿಗೆ ಎರಡು ವರುಷ ಕಳೆದಿರುತ್ತದೆ ಮತ್ತು ಮಧ್ಯಂತರ ಆಗಿರುತ್ತದೆ.

ಈ ಮಧ್ಯದಲ್ಲಿ ಚಿತ್ರದ ಕೊನೆ ತನಕ , ಹೇಗೆ ಎಣ್ಣೆ ಬಾಟಲಿಯನ್ನು ತೆಗೆಯಬೇಕು, ಯಾವುದರ ಜೊತೆ ಮಿಕ್ಸ ಮಾಡಿಕೊಳ್ಳಬೇಕು, ನಂಚಿಕೊಳ್ಳಲು ಎನು ಬೇಕು , ಯಾವ ಚರಂಡಿಯಲ್ಲಿ ಬಿದ್ದು ಒದ್ದಾಡಬೇಕು. ಕುಡಿಯಲು ಹಣಕ್ಕೆ ಯಾವ ರೀತಿ ದುಡ್ಡು ಅರೆಂಜ್ ಮಾಡಿಕೊಳ್ಳಬೇಕು , ಕುಡುಕರು ಸಂಸಾರದಲ್ಲಿ ಹೇಗೆ ಮುಳ್ಳು ಆಗುತ್ತಾರೆ, ಅವರನ್ನು ಸರಿ ದಾರಿಗೆ ತರಲು ಎನು ಮಾಡಬೇಕು
ಅಂತ ತುಂಬಾ ಆರ್&ಡಿ ಮಾಡಿ ಸೂರಿ ತೋರಿಸಿದ್ದಾರೆ.

ಕುಡಕರನ್ನು ಸರಿ ಮಾಡಬೇಕು ಅಂದರೆ ಅವನಿಗೆ ಒಂದು ಮದುವೆ ಮಾಡದರೆ ಸರಿ ಹೋಗುತ್ತದೆ ಅಂತ ಅವನಿಗೆ ಪರಿಮಳ ಅನ್ನೊ ಅನಾಥೆ ಜೊತೆ ಮದುವೆ ಮಾಡುತ್ತಾರೆ. ಮದುವೆಯ ಮೊದಲ ರಾತ್ರಿಯ ದಿನವೇ ಹಾಲು ಕುಡಿಯಬೇಕಾದ ಈ ನಾಯಕ ಆಲ್ಕೊಹಾಲು ಕುಡಿಯುತ್ತಾನೆ. ಅಲ್ಲಿಗೆ ಅವನ ಹೆಂಡತಿಗೆ ಅವನ ನಿಜ ಸ್ವರೂಪ ಗೊತ್ತಾಗುತ್ತದೆ. ಅಣ್ಣನ ಮನೆಯಲ್ಲಿ ಇರಲಾಗದೇ ಬೇರೆ ಸಂಸಾರ ಮಾಡುತ್ತಾರೆ, ಆ ಸಂಸಾರ ತೂಗಿಸಲು ಇದ್ದ ಬದ್ದ ವಸ್ತುಗಳನ್ನು ಮಾರುತ್ತಾರೆ. ದಿನಾ ರಾತ್ರಿ ಕುಡಿದುಕೊಂಡು ಬಂದು ಬಾಗಿಲು ಬಡಿಯುವ ೃಶ್ಯವೇ ಹದಿನೈದು ಸಾರಿ ತೋರಿಸಿದ್ದಾರೆ. ಹಾಗೆ ತೋರಿಸುತ್ತ, ಅವರ ಕೈಗೆ ಒಂದು ಮಗು ಕೂಡ ಬರುತ್ತದೆ. ಈ ಕುಡುಕ ಕುಡಿಯಲು ಮಗುವಿನ ಉಂಗುರ ಕೂಡ ಕದಿಯುತ್ತಾನೆ.

ಕುಡುಕನ ಹೆಂಡತಿಯನ್ನು ಸಮಾಜ ನೋಡುವ ರೀತಿ ಬಗ್ಗೆ ಪರಿಮಳ ಒಂದು ದಿನ ತಿಳಿಹೇಳುತ್ತಾಳೆ, ಅದು ಇವನ ತಲೆಯಲ್ಲಿ ನಾಟಿ ಕುಡಿತವನ್ನು ಬಿಡುತ್ತಾನೆ, ಸ್ವಲ್ಪ ಜವಾಬ್ದಾರಿ ಕಲಿಯುತ್ತಾನೆ. ಅಲ್ಲಿಗೆ ಅವನ ಮಗು ಸ್ಕೂಲ್ ಹೋಗಲು ಆರಂಭಿಸಿರುತ್ತದೆ. ಎಲ್ಲಾ ಸರಿ ಇದೆ ಅಂದುಕೊಳ್ಳುವಾಗ ಪರಿಮಳ ಕರೆಂಟ್ ಹೋಡೆದು ಸಾಯುತ್ತಾಳೆ. ಮತ್ತೆ ನಮ್ಮ ನಾಯಕನ ಕೈನಲ್ಲಿ ಬಾಟಲಿ ಬರುತ್ತದೆ.
ಹೀಗೂ ಹಾಗೂ ಮಗಳನ್ನು ಸಾಕುತ್ತ, ಕುಡಿತದ ಬಗ್ಗೆ spb ಬಗ್ಗೆ ಕುಯ್ಯಿಸಿಕೊಂಡು ಸಹಾ ನಾಯಕ ಜೀವನ ಸಾಗಿಸುತ್ತ ಹೋಗುತ್ತಾನೆ, ಅಲ್ಲಿಗೆ ೨ ಗಂಟೆ ೪೦ ನಿಮಿಶದ ಚಿತ್ರ ಅಂತ್ಯ ಕಾಣುತ್ತದೆ.

ಒಟ್ಟಿಗೆ ಬಹು ನಿರೀಕ್ಷಿತ ಚಿತ್ರ ಹೀಗೆ ಕುಡುಕನ ಕಥೆಯಲ್ಲಿ ಪೇಲವ ಆಗುತ್ತದೆ.

ಮೆಚ್ಚ ಬೇಕಾದ ಅಂಶಗಳು

೧) ಪಾತ್ರಗಳು ಮತ್ತು ಅವರ ನಟನೆ

೨) ಹಾಡುಗಳು ಮತ್ತು ಅದರ ಚಿತ್ರೀಕರಣ

೩) ಸ್ಮಶಾನದಲ್ಲಿ ಚಿತ್ರೀಕರಣ

೪) ಭಾವನ

ಬೇಸರವಾಗುವ ಅಂಶಗಳು

೧) ಪದೇ ಪದೇ ಕುಡಿತದ ಬಗ್ಗೆ ತೋರಿಸುವುದು, ಕುಡಿಯುವದನ್ನೇ ಪ್ರತಿ ಫ್ರೆಮನಲ್ಲಿ ತೋರಿಸುವುದು ಅಸಹ್ಯ ಆಗುತ್ತದೆ
೨) ಕಥೆಯ ಮೇಲೆ ಇಲ್ಲದ ಹಿಡಿತ
೩) ಚಿತ್ರದ ಉದ್ದೇಶವೇ ಸ್ಪಷ್ಟ ಇಲ್ಲಾ

೫ ಅಂಕಗಳಿಗೆ ೨ ಅಂಕ ಪಡೆದುಕೊಳ್ಳುತ್ತದೆ.