Saturday, October 25, 2008

ಗುಟಿಕಿನಲ್ಲಿ ಅಮೃತ...

ಅಲ್ಲಾ.. ಇಷ್ಟು ಪೋಸ್ಟನಲ್ಲಿ ಬಹಳ ಸೀರಿಯಸ್ ವಿಷಯಗಳೇ ಇವೆಯಲ್ವಾ, ನೀವು ನಗುವುದೇ ಇಲ್ವಾ ಅಥವಾ ಸದಾ ಸೀರಿಯಸ್ ಆಗಿರುತ್ತಿರಾ ಅಂತ ಕೆಲವರು ಪ್ರಶ್ನೆ ಕೇಳಿದ್ದರು... ಅಯ್ಯೊ ಅಪಾರ್ಥ ಮಾಡಿಕೊಳ್ಳಬೇಡಿ, ಯಾಕೆ ಈ ತರಹದ ಸಂದೇಹಗಳು ನಿಮಗೆ ಎಂದರೆ ಬ್ಲಾಗಿನಲ್ಲಿ ನಗಿಸುವ ಒಂದು ಲೇಖನ ಇಲ್ಲ ಅಂದರು. ಅದು ಸರಿ, ನಾನು ಕಾಮೆಡಿ ಮಾಡಲು ಬ್ಲಾಗ್ ತೆಗೆದಿಲ್ಲ, ಅದಕ್ಕೆ ಅಂತ ಬೇರೆ ಬ್ಲಾಗ್ ಇವೆ ಎಂದರೂ ಮನುಷ್ಯನಿಗೆ ಎಲ್ಲೊ ಸಂದೇಶ ಕೊಡಬೇಕಾದರೆ ಹಾಸ್ಯದ ಮೂಲಕ ಕೊಡಬೇಕು,ಇಲ್ಲಾ ಚಿಕ್ಕ ಕಥೆಗಳ ಮೂಲಕ ಕೊಡಬೇಕು ಎಂದು ಗುರು ಶ್ರೀ ಅಂತೋಣಿ ಡಿ ಮೆಲ್ಲೊ ಹೇಳಿದ್ದು ಜ್ಞಾಪಕ ಬಂತು. ಗುರುಗಳ ಪುಸ್ತಕಗಳನ್ನು ಓದುತ್ತಿದ್ದರೆ, ಚಿಕ್ಕ ಚಿಕ್ಕ ಕಥೆಗಳಲ್ಲಿ ಅಂದೆತಾ ಆಧ್ಯಾತ್ಮಿಕತೆ ಹೇಳಿದ್ದರು ಅಂತ ಆಶ್ಚರ್ಯ ಆಗುತ್ತದೆ.

ಮನುಷ್ಯನ ಅಳತೆಗೆ ಬಟ್ಟೆ ಇರಬೇಕೆ ವಿನಹ ಬಟ್ಟೆ ಅಳತೆಗೆ ಮನುಷ್ಯನನ್ನು ಕತ್ತರಿಸಬಾರದು ಇದು ಅವರು ಹೇಳುವ ಒಂದು ಮಾತು, ಈ ಮಾತಿನಲ್ಲೇ ಅನೇಕ ವಿಷಯಗಳು ಅಡಗಿವೆ. ಮುಂದೆ ಅದರ ಬಗ್ಗೆ ಬರೆಯುತ್ತೆನೆ.


ಒಂದು ಕಥೆ ಕೇಳೋಣ...

ಎನಾದರೂ ಆಗು, ಮೊದಲು ಮಾನವನಾಗು

ಒಮ್ಮೆ ತಮಿಳುನಾಡಿನಲ್ಲಿ ಒಬ್ಬ ವ್ಯಾಪಾರಕ್ಕೆಂದು ಹೋದವನು, ಸಮುದ್ರದಲ್ಲಿ ಬಂದ ಗಾಳಿಯಿಂದ ಶ್ರೀಲಂಕಾ ತಲುಪಿದ. ಅವನನ್ನು ಕಂಡ ಅಲ್ಲಿನ ರಾಜ ವಿಭಿಷಣ, ಅಯ್ಯೋ ಮಾನವ ರೂಪದಲ್ಲಿ ರಾಮ ಬಂದಿದ್ದಾನೆ ಅಂತ ಖುಶಿ ಪಟ್ಟು ತುಂಬಾ ಸತ್ಕಾರ ಮಾಡಿದರು. ಈ ಕಥೆಯನ್ನು ಒಮ್ಮೆ ಪರಮಹಂಸರು ಕೇಳಿದಾಗ ಅವರು ಹೇಳಿದ್ದು "ಅಬ್ಬಾ..ಎಂತಹ ಮಹತ್ ಯೋಚನೆ, ಒಂದು ಕಲ್ಲನ್ನು ಮನುಷ್ಯ ದೇವರು ಎಂದುಕೊಳ್ಳುವ ಹಾಗೆ ಆದರೆ, ಮನುಷ್ಯನಲ್ಲಿ ಎಲ್ಲಾ ಜೀವಭೂತದಲ್ಲಿ ದೇವರನ್ನು ಯಾಕೆ ಕಾಣಬಾರದು "??.

ಕನ್ನಡ ಎನ್ನುವುದು
ಕನ್ನಡ ಅನ್ನುವುದು ಒಂದು ರೀತಿಯ ಬಾಟಲಿ ಇದ್ದ ವೈನ್ ಹಾಗೆ, ಎಲ್ಲರೂ ಅದರ ಬಗ್ಗೆ ಮಾತನಾಡುತ್ತಾರೆ, ಅದರ ಲೇಬಲ್ ಓದುತ್ತಾರೆ, ಆದರೆ ಅದರ ಅಮೃತ ರುಚಿ ಉಂಡವರು ಬಹಳ ಕಡಿಮೆ.

No comments: