Thursday, October 23, 2008

ಹುಡುಗಾಟದ ಹುಡುಗಿಯ ಬ್ಲಾಗ್ ಮತ್ತು ಹುಡುಗಾಟ..


ರೇಡಿಯೋ ಮಿರ್ಚಿಯಲ್ಲಿ ಹುಡುಗಾಟದ ಹುಡುಗಿ ವರ್ಷ ತಮ್ಮ ಬ್ಲಾಗಿನಲ್ಲಿ ರಾಜ್ ಠಾಕ್ರೆ ಬಂಧನ ಮತ್ತು ಅದರ ಪ್ರಸ್ತುತತೆ ಬಗ್ಗೆ ಚೆನ್ನಾಗಿ ಬರೆದಿದ್ದಾರೆ. ಓದಿ ಖುಶಿಯಾಯಿತು.

ರಾಜ್ ಮಾಡುತ್ತಿರುವುದು ಇವತ್ತು ಪ್ರತಿರಾಜ್ಯದಲ್ಲಿ ಆಗಬೇಕಾಗಿದೆ. ಯಾವಾಗ ನಮ್ಮ ಅನ್ನವನ್ನು ಬೇರೆಯವರು ಕಿತ್ತುಕೊಳ್ಳುತ್ತಾರೆ ಆಗ ಕದನ, ಹೋರಾಟ ಅನಿವಾರ್ಯ. ನಾವೆಲ್ಲರೂ ಭಾರತೀಯರು, ಅವರು ತೆಗೆದುಕೊಂಡರೆ ಎನು ಅವರು ನಮ್ಮವರಲ್ಲವೇ ಅನ್ನೋ ಬುದ್ಧಿಜೀವಿಗಳು ತಮ್ಮ ಆಸ್ತಿಯನ್ನು ಬಡವರಿಗೆ ಬರೆದುಕೊಡುತ್ತಾರ ??. ಆ ಬಡವರು ಭಾರತೀಯರೆ ತಾನೆ, ಎಲ್ಲಾ ಭಾರತೀಯರು ಅಣ್ಣ ತಮ್ಮಂದಿರೇ ಅಲ್ಲವೇ ?.

ಅಂದ ಹಾಗೆ ಹುಡುಗಾಟದ ಹುಡುಗಿ ವರ್ಶ ತಮ್ಮ ಪರಿಚಯದಲ್ಲಿ ಹುಡುಗಾಟಕ್ಕೆ ಚಿಕ್ಕವೀರ ರಾಜೇಂದ್ರ ಪುಸ್ತಕವನ್ನು ದರಾ ಬೇಂದ್ರೆ ಬರೆದಿದ್ದು ಅಂತ ಹಾಕಿದ್ದಾರೆ. ಇದು ಹುಡುಗಾಟ ಅಂತ ಭಾವಿಸೋಣ.

1 comment:

ಗುರು [Guru] said...

ನಿಮ್ಮ ಅನಿಸಿಕೆಗಳು ಸರಿಯಾಗಿವೆ. ಈ ಪ್ರಸ್ತುತ ರಾಜಕೀಯದ ದೊಂಬರಾಟದಲ್ಲಿ ಪ್ರಾದೇಶಿಕ ಹಕ್ಕನ್ನು ನಾವು ಕಸಿದುಕೊಳ್ಳುವ ಪ್ರಮೇಯ ಖೇದಕರ. ಭಿಕ್ಷೆ ಬೇಡಲೂ ನಾಲಾಯಕಾದ ಒಬ್ಬ ವ್ಯಕ್ತಿ ದೇಶದ ರೈಲ್ವೇ ಮಂತ್ರಿಯಾದರೆ ಏನಾಗುತ್ತದೆ ಎಂಬುದಕ್ಕೆ ಇಂತಹ ಘಟನೆಗಳು ಸಾಕ್ಷಿ.

http://kannadaputhra.blogspot.com