ಕನ್ನಡ ರಾಜ್ಯೋತ್ಸವ ಬಂದಾಗೆಲ್ಲಾ ಒಂದು ರೀತಿಯ ಲೇಖನ ನಮಗೆ ಕಾಣಸಿಗುತ್ತದೆ, ಅದು ಎಷ್ಟೆ ವರುಷದ ಹಿಂದೆ ಬರೆದಿದ್ದರೂ ಅದನ್ನೇ ಪುನರಾವರ್ತನೆ ಮಾಡಿದರೂ
ಇಂದಿನ ಪರಿಸ್ಥಿತಿಗೆ ಅನ್ವಯ ಅನ್ನುವ ಹಾಗೆ ಬರೆದಿರುತ್ತಾರೆ. ಅದಕ್ಕೆ ಹೊರತಾಗಿಲ್ಲ ಇವತ್ತು (nov 1) ಪ್ರಜಾವಾಣಿಯಲ್ಲಿ ಬಂದಿರುವ ಸುಧಾ ಹೆಗಡೆ ಅವರ ಲೇಖನ.
ಅವರಿಗೂ ಪಾಪ ಸಮಸ್ಯೆಗಳೇ ಕಾಣುತ್ತಿದೆ, ಒಟ್ಟಿನಲ್ಲಿ ನಮ್ಮನ್ನು ತುಳಿಯುತ್ತ ಇದ್ದಾರೆ, ನಮಗೆ ಎನು ಮಾಡುವದಕ್ಕೆ ಆಗುವದಿಲ್ಲ, ನಾವು ಹೀಗೆ ಅನ್ನುವ ಒಂದು ರೀತಿಯ ಪಲಾಯನ ವಾದವನ್ನು ಅವರು ಮಾರಾಟ ಮಾಡಿದ್ದಾರೆ. ಅವರೂ ಸಮಸ್ಯೆಗಳಿಗೆ ಮಾಡಬೇಕಾದ ಪರಿಹಾರ ಬಗ್ಗೆ ಮೌನ ವಹಿಸಿದ್ದಾರೆ ಮತ್ತು ಅವರಿಗೆ ಒಂದು ದಶಕಗಳಿಂದ ಕನ್ನಡ ಸಂಘಟನೆಗಳು ಮಾಡಿರುವ ಹೋರಾಟ ಕಣ್ಣಿಗೆ ಬೀಳದೆ ಇರುವುದು ಜಾಣಕುರುಡೇ ಸರಿ. ನಯಾ ಪೈಸೆ ಕೆಲಸ ಆಗಿಲ್ಲ, ಎಲ್ಲರೂ ಸುಮ್ಮನೆ ಇದ್ದಾರೆ ಅನ್ನುವ ಅವರ ವಾದವನ್ನು ಕೊಂಡುಕೊಳ್ಳಲು ಆಗುವದಿಲ್ಲ.
ಇದಕ್ಕೆ ಇವರು ಕೊಡುವ ಒಂದು ಉದಾಹರಣೆ ನಿಜಕ್ಕೂ ಹಾಸ್ಯಸ್ಪದವಾಗಿದೆ, ಒಂದು ಕಿರಾಣಿ ಅಂಗಡಿಗೆ ಹೋಗಿ ಗೋದಿಹಿಟ್ಟು ಕೇಳಿದಕ್ಕೆ ಆ ಹುಡುಗ ಕಕ್ಕಾಬಿಕ್ಕೆ ಆಗಿ ನೋಡಿದನಂತೆ, ಕನ್ನಡ ಮಾತನಾಡಿದಕ್ಕೆ ಇವರನ್ನು ಪೆದ್ದು ತರ ನೋಡಿದನಂತೆ, ಇದರಿಂದ ಕನ್ನಡಿಗರಿಗೆ ಅವಮಾನ ಆಗಿ
ಮುಂದೆ ಅವನು ಅಟ್ಟಾ ಅನ್ನುತ್ತಾನಂತೆ. ಇದು ಇವರ ಕೀಳರಿಮೆಯನ್ನು ತೋರಿಸುತ್ತದೆ. ಅದರಲ್ಲೂ ಗ್ರಾಹಕ ಸೇವೆಯಲ್ಲಿ ಕನ್ನಡ ಸರಿಯಾಗಿ ಅನುಷ್ಥಾನ ಆಗಬೇಕಾಗಿರುವು ಜನ ಸಾಮನ್ಯರಲ್ಲಿ ಆಗುವ ಜಾಗೃತಿಯಿಂದ. ಕನ್ನಡದಲ್ಲಿ ಕೇಳಿದೆ ಅಂತ ಪೆದ್ದು ಆಗಿ ನೋಡಿದ ಅನ್ನುವ ಕೀಳರಿಮೆಯಿಂದ ಅಲ್ಲ. ಇದಕ್ಕೆ ಮ.ರಾಮಮೂರ್ತಿ ಇಲ್ಲಾ ಅನಕೃ ಅವರ ಹೋರಾಟ ಬೇಕಿಲ್ಲ, ಕೀಳರಿಮೆಯನ್ನು
ತೆಗೆಯಲು ಲೇಖಕರು ಪ್ರಯತ್ನ ಪಟ್ಟರೆ ಸಾಕು.
No comments:
Post a Comment