ಇದು ೧೯ನೇ ಫಿಪಾ ವಿಶ್ವಕಪ್ ಪಂದ್ಯಾವಳಿ. ಇದು ಜೂನ್ ೧೧ ರಿಂದ ೧೧ ಜುಲೈ ತನಕ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾನಲ್ಲಿ ನಡೆಯಲಿದೆ. ಇದಕ್ಕೆ ಬಂದ ತಂಡಗಳೆಲ್ಲಾ ತಮ್ಮ ಖಂಡದಲ್ಲಿ ೨೦೦೭ ಆಗಸ್ಟನಿಂದ ಅರ್ಹತಾ ಸುತ್ತು ಆಡಿಕೊಂಡು ಬಂದಿದೆ.
* ಮೊದಲ ಬಾರಿಗೆ ಇದು ಆಫ್ರಿಕಾ ಖಂಡದಲ್ಲಿ ನಡೆಯಿತ್ತಿದೆ, ಅದ್ದರಿಂದ ದಕ್ಷಿಣ ಆಫ್ರಿಕಾ ಅರ್ಹತೆ ಗಳಿಸಿದೆ.
* ಎಲ್ಲಾ ಪಂದ್ಯಗಳು ಸಾಕರ್ ಸಿಟಿ - ಜೊಹೆನ್ಸಬರ್ಗ, ಕೇಪ ಟೌನ್, ಪ್ರಿಟೋರಿಯಾ, ಪೊಲೊವಾನೆ, ರುಸ್ತನಬರ್ಗ, ಬ್ಲೋಮಫೊಟೆನ್ ನಗರದಲ್ಲಿ ನಡೆಯಲಿವೆ.
* ಪ್ರಶಸ್ತಿ ಮೊತ್ತ ಸರಿ ಸುಮಾರು ೩೦.೨ ಮಿಲಿಯನ್, ಕೊನೆಯ ೧೬ ಸುತ್ತಿಗೆ ಬರುವರು ಕೂಡ ೯ ಮಿಲಿಯನ್ ದುಡ್ಡು ಗೆಲ್ಲುತ್ತಾರೆ.
* ಈ ಸಲದ ಸಯ್ಪುಗೆ( ಮಸ್ಕಟ್ ) ಹಸಿರು ಕೂದಲು ಇರುವ ಚಿರತೆ. ZAKUMI ಎಂದು ಹೆಸರು. ZA ಅಂದ್ರೆ South Africa, KUMI ಅಂದ್ರೆ ಹತ್ತು.
* ನಮ್ಮ ದೇಶದಲ್ಲಿ epsn-star ವಾಹಿನಿಯಲ್ಲಿ ಈ ಪಂದ್ಯಾವಳಿಗಳನ್ನು ನೋಡಬಹುದು.
* ೮ ಗುಂಪುಗಳಿವೆ, ಪ್ರತಿ ಗುಂಪಿನಲ್ಲಿ ೪ ತಂಡ ಇವೆ. ಇದರಲ್ಲಿ ೨ ತಂಡ ಅರ್ಹತೆ ಗಳಿಸುತ್ತವೆ ಮುಂದಿನ ಹಂತಕ್ಕೆ.
* ದಿಗ್ಗಜರ ಹೋರಾಟದ ಗುಂಪು ಎಂದು ಇದ್ದುದರಲ್ಲಿ "ಗುಂಪು ಜಿ" ಎಂದು ಹೇಳಬಹುದು.
* ಅತಿ ಸಪ್ಪೆ ಗುಂಪು ಎಂದರೆ ಗ್ರೂಪ್ ಸಿ ಅನ್ನಬಹುದು.
* ಯಾವುದರಿಂದ ಯಾರು ಆಯ್ಕೆ ಆಗುತ್ತಾರೆ ಎಂದು ನಾನು ಭ್ರಮಿಸಿದ್ದೇನೆ. ಅದನ್ನು ತದಾ ಬದಲಾಯಿಸುತ್ತ ಹೋಗುತ್ತೆನೆ.
ನನ್ನ ಆಯ್ಕೆಯನ್ನು ಕೆಂಪು ಬಣ್ಣದಲ್ಲಿ ಗುರುತಿಸಿದ್ದೆನೆ.
Group A | Group B | Group C | Group D | Group E | Group F | Group G | Group H | |||||||||||||||
FRA | ARG | ALG | AUS | CMR | ITA | BRA | CHI | |||||||||||||||
MEX | GRE | ENG | GER | DEN | NZL | CIV | HON | |||||||||||||||
RSA | KOR | SVN | GHA | JPN | PAR | PRK | ESP | |||||||||||||||
URU | NGA | USA | SRB | NED | SVK | POR | SUI |
ಮುಗಿಯುವ ತನಕ ಇದರ ಬಗ್ಗೆ ಮಾತನಾಡುತ್ತ ಇರೋಣ ..
3 comments:
yes
i am also waiting.......
ಗುರುಗಳೇ,
ಜರ್ಮನಿ ಆಟ ತುಂಬಾ ಚೆನ್ನಾಗಿದೆ ಈ ಸಲ... ನೀವು ಹಿಂದಿನ ಹಾಗೆ ಮತ್ತೆ ಅರ್ಜೆಂಟಿನಾ-ಇಟಲಿ ಬಾಲ ಹಿಡಿಯುತ್ತಿರೋ ಇಲ್ಲ ಪಕ್ಷಾಂತರ ಮಾಡಿದ್ದೀರೊ ??
ಈ ಸಲ ನನ್ನದು ಅಲ್ಲ ಜಗತ್ತಿನದೇ ಮೊದಲ ಸುತ್ತಿನ ಆಯ್ಕೆ ತಲೆಕೆಳಕಾಗಿದೆ.
ಗ್ರೂಪ್ ಎ ನಲ್ಲಿ - ಫ್ರಾನ್ಸ ಬದಲು ಉರುಗ್ವೇ ಹೋಯಿತು
ಗ್ರೂಪ್ ಬಿ ನಲ್ಲಿ - ಅರ್ಜೆಂಟೀನಾ ಮತ್ತು ದಕ್ಷಿಣ ಕೋರಿಯಾ ಅಂದುಕೊಂಡ ಹಾಗೆ ಹೋಗಿದೆ.
ಗ್ರೂಪ್ ಸಿ ನಲ್ಲಿ - ಅಂದುಕೊಂಡ ಹಾಗೆ ನಡೆದಿದೆ
ಗ್ರೂಪ್ ಡಿ ನಲ್ಲಿ - ಘಾನ ಹೋಯಿತು ಗೋಲುಗಳ ಅಂತರದ ಮೇಲೆ
ಗ್ರೂಪ್ ಇ ನಲ್ಲಿ - ಡೆನ್ಮಾರ್ಕನ್ನು ಸೋಲಿಸಿದ ಜಪಾನ್ ಹೋಗಿರುವುದು ಸಂತಸವೇ ..
ಗ್ರೂಪ್ ಎಫ್ - ಹಾಲಿ ಚಾಂಪಿಯನ್ ಇಟಲಿ ಸೋತಿದೆ ಎಂದರೆ ನಂಬಲು ಆಗುತ್ತಿಲ್ಲ, ಸ್ಲೋವಾಕಿಯಾ ಹೋಗಿದೆ.
ಗ್ರೂಪ್ ಜಿ ನಲ್ಲಿ - ಅಂದುಕೊಂಡ ಹಾಗೆ ನಡೆದಿದೆ
ಗ್ರೂಪ್ ಎಚ್ ನಲ್ಲಿ - ಚಿಲಿ ಬಹಳ ಚೆನ್ನಾಗಿ ಆಡಿ ತನ್ನ ಸ್ತಾನ ಕಾಯ್ದುಕೊಂಡಿದೆ.
Post a Comment