Thursday, May 25, 2006

ಗೋ...........................ಲ್


"go ಜರ್ಮನಿ" ಇದು ಜಗತ್ತಿನ ಎಲ್ಲಾ ಫುಟ್ಬಾಲ್ ಪ್ರಿಯರ ವಾಕ್ಯ, ಭಾರತದಲ್ಲಿ ಫುಟ್ಬಾಲ್ ಅಷ್ಟು ಪ್ರಸಿದ್ಧಿ ಪಡೆಯದಿದ್ದರೂ ವಿಶ್ವ ಕಪ್ ಬಂದರೆ ಸಾಕು
ನಮ್ಮ ಮನ-ಮನೆಗಳಲ್ಲಿ ಫುಟ್ಬಾಲ್ ಹಾಸುಹೊಕುತ್ತದೆ. ಮನೆಯಲ್ಲಿ ಒಬ್ಬರು ಒಂದು ತಂಡವನ್ನು ಬೆಂಬಲಿಸಿದರೆ ಇನ್ನೊಬ್ಬರು ಇನ್ನೊಂದು ತಂಡವನ್ನು ಬೆಂಬಲಿಸಿ ಮನೆಯೇ ಒಂದು ಮೈದಾನ ಆಗುತ್ತದೆ.
ನನಗೆ ವಿಶ್ವಕಪ್ ಫುಟ್ಬಾಲ್ ಬಹಳ ಹಿಂದಿನ ಪರಿಚಯ, ನಾನು ನೋಡಲು ಶುರು ಮಾಡಿದ್ದು ೧೯೮೬ ವಿಶ್ವಕಪ್‍ನಿಂದ. ಆಗ ನಮ್ಮ ಮನೆಯಲ್ಲೇ ಎರಡು ಬಣ ಆಗಿತ್ತು,ಒಂದು ಬಣ ಅರ್ಜೇಂಟಿನಾಗೆ ಬೆಂಬಲ ನೀಡಿದರೆ ಇನ್ನೊಂದು ಪಶ್ಚೀಮ ಜರ್ಮನಿಗೆ ಬೆಂಬಲ ಕೊಟ್ಟರು.
ಆ ವಿಶ್ವಕಪ್ ನನಗೆ ಇನ್ನೂ ಹೆಚ್ಚು ಆಸಕ್ತಿ ಹುಟ್ಟಿಸಿತು. ಮರಾಡೋನ ಆಟ ನೋಡಿ ನಾವು ಎಷ್ಟು ಪ್ರಭಾವಿತರಾಗಿದ್ದಿವಿ ಅಂದರೆ ಅಂದು ಕ್ರಿಕೆಟ್ ಆಟದ ಚೆಂಡಿನಲ್ಲಿ ನಾವು ಫುಟ್ಬಾಲ್ ಆಡಿದ್ದೆ ಆಡಿದ್ದು.
ಇನ್ನೂ ಫುಟ್ಬಾಲ್ ಇತಿಹಾಸದಲ್ಲಿ ಎಂದು ಮರೆಯಲಾಗದ ಪಂದ್ಯವೆಂದರೆ ಕ್ವಾಟರಫೈನಲ್ಸ್‍ನ ಅರ್ಜೇಂಟಿನಾ ಮತ್ತು ಇಂಗ್ಲೆಡ್ ಪಂದ್ಯ. ಆ ಪಂದ್ಯದಲ್ಲಿ ಮರಾಡೊನ ಗೋಲ್ ಯಾರು ತಾನೇ ಮರೆಯಲೂ ಸಾಧ್ಯ.
೨-೧ ಅಂತರದಲ್ಲಿ ಪಂದ್ಯವನ್ನು ಗೆದ್ದ ಅರ್ಜೇಂಟಿನಾ ತಾನೂ ವಿಶ್ವಚಾಂಪಿಯನ್ ಎಂದೂ ಸಾಬೀತು ಪಡಿಸಿತ್ತು.
ಅಲ್ಲಿಂದ ನನ್ನ ಬೆಂಬಲ ಅರ್ಜೇಂಟಿನಾಗೆ ಮೀಸಲಾಗಿತ್ತು.

೧೯೯೦ರ ಇಟಾಲಿಯಾ ಸಮಯದಲ್ಲಿ ಮೊದಲ ಪಂದ್ಯದಲ್ಲಿ ಕ್ಯಾಮರೂನ್ ಎದುರು ಸೋತು ಸುಣ್ಣವಾದಾಗ ಬೇಸರ ಹೊಂದಿದ ಅನೇಕರಲ್ಲಿ ನಾನು ಒಬ್ಬ.ಆ ಸಮಯದಲ್ಲಿ ಇಟಲಿ ಆಟ ನೋಡಿ ನನ್ನ ಬೆಂಬಲ ತಂಡಗಳಲ್ಲಿ ಇಟಲಿಯನ್ನು ಸೇರಿಸಿಕೊಂಡಿದ್ದೆ.
ಆದರೆ ವಿಶ್ವಕಪ್‍ನಲ್ಲಿ ಡಾರ್ಕಹಾರ್ಸ್ ತರ ಬಂದ ಕ್ಯಾಮರೂನ್ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ, ರೊಜರ್ ಮಿಲ್ಲಾ ಆಟವನ್ನು ಯಾರು ತಾನೇ ಮರೆಯಲು ಸಾದ್ಯ?,
ಕೊಲಂಬಿಯ ಗೋಲ್ಕೀಪರ್ ಮಾಡಿದ ನಗೆಪಾಟಿಲಿನಲ್ಲಿ ಗೆದ್ದ ರೊಜರ್ ಮಿಲ್ಲ ತಮ್ಮ ತಂಡವನ್ನು ಕೊನೆಯ ೮ರ ಸುತ್ತಿಗೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು. ೧೯೮೬ ಗೋಲ್ಡನ್ ಬುಟ್ ವಿಜೇತ ಗ್ಯಾರಿ ಲಿನ್ಕರ್ ಮತ್ತು ಗಜ್ಜಾ(gasgoni)ಸಹಾಯದಿಂದ ಕ್ಯಾಮರೂನ್ ಪಂದ್ಯ
ಸೋತರು ನಮ್ಮ ಮನದಲ್ಲಿ ಸದಾ ನೆಲಸಿದರು.

ಮುಂದಿನ ವಿಶ್ವಕಪ್‍ಗಳಲ್ಲಿ ನಾನು ಬೆಂಬಲಿಸಿದ ತಂಡಗಳು ಉತ್ತಮ ಪ್ರದರ್ಶನ ನೀಡಲಿಲ್ಲ,ಬ್ಯಾಟಿಸ್ಟುಟಾ,ಆರ್ಟೆಗೋ ಮುಂತಾದ ಆಟಗಾರರನ್ನು ಹೊಂದಿದ್ದು ಅರ್ಜೇಂಟಿನಾ ಅಂದುಕೊಂಡ ಹಾಗೆ ಆಡಲಿಲ್ಲ.
ಬ್ರೆಜಿಲ್ ಮೈಲುಗೆ ಪ್ರಭಲವಾಗಿ ಇತರರ ಆಟ ಕೇವಲ ನೀರಸವಾಗಿ ಕಂಡಿತು. ಈ ಬಾರಿ ನನ್ನ ಮೆಚ್ಚಿನ ತಂಡಗಳು ಉತ್ತಮ ಪ್ರದರ್ಶನ ನೀಡುತ್ತವೆ ಎಂದು ನಾನು ನಂಬಿದ್ದೇನೆ.
ಆದರೆ ಒಂದು ಆಟಗಾರನ ಮೇಲೆ ಅವಲಂಬಿತರಾಗಿರುವ ತಂಡಗಳು ಪೆಟ್ಟು ಅನುಭವಿಸುವುದು ಸರ್ವೆಸಾಮಾನ್ಯ. ಆದರೆ ಬ್ರೆಜಿಲ್ ತಂಡ ನೋಡಿದರೆ ಒಬ್ಬರನ್ನು ಇನ್ನೊಬ್ಬರು ಅಷ್ಟೆ ಪ್ರಭಾವಶಾಲಿಯವರು ಬದಲಾಯಿಸುತ್ತಾರೆ.
ಕ್ರೆಸ್ಪೊ,ಐಮಾರ್,ಡೆಲೆಸ್ಯಾನ್ಡ್ರೊ ಮುಂತಾದ ಅನುಭವಿ ಆಟಗಾರರು ಇದ್ದರೂ ಅರ್ಜೇಂಟಿನಾ ಬ್ರೆಜಿಲ್ ಎದುರೂ ಸಪ್ಪೆ ಆಗುತ್ತದೆ.

ಪ್ರತಿ ವಿಶ್ವಕಪ್‍ನಲ್ಲಿ ಹೆಚ್ಚು ಗೋಲ್ ಬಾರಿಸಿದವರಿಗೆ ಚಿನ್ನದ ಬೂಟ್ ಕೊಡುತ್ತಾರೆ, ೮೬ರಲ್ಲಿ ಗ್ಯಾರಿ ಲಿನ್ಕರ್ ಗೆದ್ದರೆ, ೯೦ ಶಿಲಾಚಿ,೯೪ ರಲ್ಲಿ ಸ್ಟೊಟಿಚಿಕೊವ್ ಮತ್ತು ಸಾಲೆನೆಕೊ , ೯೮ರಲ್ಲಿ ಡೆವಾನ್ ಸೂಕರ್,೦೨ರಲ್ಲಿ ರೊನಾಲ್ಡೊ ಗೆದ್ದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಆಟಗಾರರು ಒಬ್ಬರೇ ತಮ್ಮ ತಂಡದ ಯಶಸ್ಸಿಗೆ ಕಾರಣರಾದರು.

ಈ ಸಲದ ವಿಶ್ವಕಪ್‍ನಲ್ಲಿ ಯಾರು ಆ ಸ್ಥಾನವನ್ನು ಹೊಂದುತ್ತಾರೆ ಎಂದು ನಾನು ಕಾದು ಕುಳಿತಿರುವೆ. ಇನ್ನೂ ನೀವು ??

2 comments:

Sarathy said...

ಕಳೆದ ವಿಶ್ವಕಪ್ ನಲ್ಲಿ ನಾನು ಬ್ರಜಿಲಿನ ಆಟಕ್ಕೆ ಮನಸೋತು ಹೋದೆ. ಅದರಲ್ಲೂ ಕ್ವಾರ್ಟರ್ ಫೈನಲ್ ನಲ್ಲಿ(ಅಥವಾ ಸೆಮಿಫೈನಲ್ ನಲ್ಲಿ) ರೊನಾಲ್ಡಿನ್ಹೋ ಅವರು ಫ್ರೀಕಿಕ್ ನಲ್ಲಿ ಒದ್ದ ಚೆಂಡು ಗಾಳಿಯಲ್ಲಿ ಅಲೆಯಂತೆ ತೇಲಿ ಗೋಲು ಪೆಟ್ಟಿಗೆ ಹೊಕ್ಕಿದ್ದನ್ನು ಮರೆಯಲು ಸಾಧ್ಯವೇ?

Anonymous said...

ಅದು ಇಂಗ್ಲೆಡ್ ವಿರುದ್ಧ ನಡೆದ ಕ್ವಾ.ಫೈ-ಪಂದ್ಯ, ಸೀಮನ್‍ಗೆ ಏನು ಮಾಡಬೇಕೆಂದು ತಿಳಿಯಲಿಲ್ಲ, ಆ ಪಂದ್ಯ ತುಂಬಾ ಕುತೂಹಲವಾಗಿತ್ತು. ಪಂದ್ಯದ ಮೊದಲ ೧೦ ನಿಮಿಷದಲ್ಲಿ OWEN ಗೋಲು ಹೋಡೆದರು ಅದನ್ನು ಗೆಲುವಿನ ಫಲಿತಾಂಶದಲ್ಲಿ ಬದಲಾಯಿಸಲು ಇಂಗ್ಲೆಡ್ ಸೋತು ಹೋಯಿತು.
ಆ ಪಂದ್ಯದಲ್ಲಿ ಗೋಲ್ ಹೋಡೆದ ಸ್ವಲ್ಪ ಸಮಯದಲ್ಲಿ ರೋನಾಲ್ಡಿನೋಗೆ ಕೆಂಪು ಕಾರ್ಡ ಕೊಟ್ಟು ಕಳಿಸಿದ್ದು ,
೧೦ ಜನರ ತಂಡ ಪಂದ್ಯ ಗೆದ್ದಿದ್ದು ನಿಜಕ್ಕೂ ಮರೆಯಲು ಸಾಧ್ಯವೇ ??