Sunday, June 06, 2010
ಮುಖ್ಯಮಂತ್ರಿಗಳಿಗೆ ಒಂದು ಪತ್ರ...
ಮಾನ್ಯ ಮುಖ್ಯಮಂತ್ರಿಗಳೇ,
ವಿಶ್ವ ಹೂಡಿಕೆದಾರರ ಸಮಾವೇಶ ಅದ್ಭುತವಾಗಿ ನಡೆದಿದ್ದು, ಅದನ್ನು ಅತ್ಯುತ್ತಮವಾಗಿ ನಡೆಸಿದ ನಿಮ್ಮ ಸರ್ಕಾರಕ್ಕೆ ಅಭಿನಂದನೆಗಳು.
ಈ ಸಮಾವೇಶದಿಂದ ಲಕ್ಷಾಂತರ ಕೋಟಿ ಕರ್ನಾಟಕದಲ್ಲಿ ಹೂಡಿಕೆ ಆಗುತ್ತಿದೆ, ಲಕ್ಷಾಂತರ ಕೋಟಿ ಉದ್ಯೋಗ ಸೃಷ್ಟಿ ಆಗುತ್ತಿದೆ, ಇದರಿಂದ ಅನೇಕ ಕನ್ನಡಿಗರಿಗೆ ಉದ್ಯೋಗ ದೊರೆತು ನಮ್ಮ ರಾಜ್ಯದ ನಿರುದ್ಯೋಗ ಸಮಸ್ಯೆ ಕಮ್ಮಿಯಾಗುವುದು ಎಂದು ಎಲ್ಲರ ಆಶಯವಾಗಿದೆ.
ಹಾಗೆ ಆಗಬೇಕಾದರೆ ಆ ಉದ್ಯೋಗಗಳು ನಮ್ಮವರಿಗೆ ಸಿಗಬೇಕು, ಸರೋಜಿನಿ ಮಹಿಷಿ ವರದಿಯನ್ನು ಮಾರ್ಪಡಿಸಿ, ಅನುಷ್ಠಾನ ಮಾಡಬೇಕು. ಅದಕ್ಕೂ ಮುಖ್ಯವಾಗಿ ಆ ಉದ್ಯೋಗ ಮಾಡಲು ನಮಲ್ಲಿ ಮಾನವ ಸಂಪನ್ಮೂಲ ಇದೆಯಾ ಎಂದು ನಾವು ಯೋಚಿಸಬೇಕು, ಇಲ್ಲದಿದ್ದರೆ ಆ ನಿಟ್ಟಿನಲ್ಲಿ ನಾವು ಕೆಲ್ಸ ಮಾಡಬೇಕು, ಹೆಚ್ಚು ಹೆಚ್ಚು ನಿಪುಣತೆಯನ್ನು ಸೃಷ್ಟಿ ಮಾಡಬೇಕು.
ಇಲ್ಲವಾದಲ್ಲಿ ನಾವು ಹಸುವಿಗೆ ಹುಲ್ಲು ಹಾಕಿ, ಬೇರೆ ಯಾರೋ ಹಾಲು ಕರೆದು ಕೊಂಡ ಹಾಗೆ ಆಗುತ್ತದೆ. ಆ ನಿಪುಣತೆ ಇರುವ ಇಲ್ಲ ಕಲಿತು ಬರುವ ಪರರಾಜ್ಯದವರಿಗೆ ಕಮ್ಮಿ ಇಲ್ಲ. ಬಂಡವಾಳ ನೆಪದಲ್ಲಿ ಅನಿಯಂತ್ರಿತ ವಲಸೆ ಆದಲ್ಲಿ ಮುಂದೊಂದು ದಿನ ಅದು ಸರ್ಕಾರಕ್ಕೆ ದೊಡ್ಡ ಸವಾಲು ಆಗುತ್ತದೆ.
ಭೂಮಿ ಕೊಟ್ಟವರಿಗೆ ಮತ್ತು ಸ್ಥಳೀಯರಿಗೆ ತಮ್ಮ ನೆಲದಲ್ಲೇ ಉದ್ಯೋಗ ಸಿಗಲು ಮತ್ತು ಪ್ರಾದೇಶಿಕ ಅಸಮಾನತೆಯನ್ನು ತಡೆಯಲು ಕನ್ನಡಿಗರಿಗೆ ಎಲ್ಲ ಉದ್ಯೋಗ ಅವಕಾಶಗಳು ಸಿಗಬೇಕು. ಅದ್ದರಿಂದ ಉದ್ಯೋಗ ಮಾಹಿತಿ ಕೇಂದ್ರ ಮತ್ತು ಎಲ್ಲ ಸಚಿವಾಲಯಗಳು ಬೇಕಾಗುವ ನಿಪುಣತೆಯನ್ನು ಮನಗಂಡು ಆ ನಿಟ್ಟಿನಲ್ಲಿ ಆಯಾ ಕ್ಷೇತ್ರಗಳ ದಿಗ್ಗಜರೊಂದಿಗೆ ಕೈ ಜೋಡಿಸಿ ನಮ್ಮ ಕನ್ನಡಿಗರ ನಿಪುಣತೆಯನ್ನು ಹೆಚ್ಚು ಮಾಡಬೇಕು.
ಬೇರೆ ರಾಜ್ಯದಿಂದ ಬರುವರಿಗೆ ADVANTAGE KARNATAKA ಆಗದೆ, ನಮ್ಮ ಜನರಿಗೆ ಕೆಲಸ ದೊರಕಲಿ ಎಂದು ಆಶೀಸೋಣ. ನಿಮ್ಮ ಎಲ್ಲ ಯೋಜನೆಗಳಿಗೆ ನಮ್ಮ ಬೆಂಬಲವಿದೆ.
ನಿಮ್ಮ ವಿಶ್ವಾಸಿ
ವಿ ಸೂ:- ಚಿತ್ರಗಳು ಅದನ್ನು ತೆಗೆದವರದ್ದೇ ಆಗಿರುತ್ತದೆ, ಆದ್ದರಿಂದ ಹಕ್ಕು-ಕಾಯಿದೆ ಎಲ್ಲ ಚಿತ್ರ ತೆಗೆದವರದ್ದು, ನಂದೇನು ಇಲ್ಲ.
2 comments:
Very practical thought.. I really appreciate giving right direction to the vision that CM has for Karnataka
Olleya lekhana aadare advantage karnataka aguvudakke nammavaru karana irabahudu. Ella field nalliyu alla but kelavu lade. Indian military nalli karnatakada jana bahala kammi. Infact military yavarobbaru nanage helida mahiti prakara karnatakadinda baruva seats ella khali iruttadeyante. adakke horarajyagalavaru karnatakadalli 6 months athwa 1 year adda hage madi allinda apply maduttarante. Mainly bihar mattitara uttara bharatada rajyagalinda ee reeti apply madtare. Karnataka mattu maharashtra rajyagalinda military nalli iruvavara sankhye atyanta kadime. Innu bere fields nalli karnataka advantage naditane ide annodu tappalla. Not only private but public sector jobs kooda. Hindella karnatakadavaru yaru barade hora rajyadavarannu karedu kelasa kottiddarante public sector nalli.
Post a Comment