ಅನಿಯಂತ್ರಿತ ವಲಸೆ ಆದಲ್ಲಿ ಮುಂದೊಂದು ದಿನ ಅದು ಸರ್ಕಾರಕ್ಕೆ ದೊಡ್ಡ ಸವಾಲು ಆಗುತ್ತದೆ.
ಯಾಕೆ ಎಂದರೆ ...
* ಭೂಮಿ ಕೊಟ್ಟವರು ನಿರ್ಗತಿಕರಾಗಿರುತ್ತಾರೆ.
* ಎಲ್ಲಿಂದಲೋ ಬಂದವರು ಕೆಲ್ಸ ಗಿಟ್ಟಿಸಿಕೊಂಡಿರುತ್ತಾರೆ.
* ಭೂಮಿ ಕೊಟ್ಟವರಿಗೆ ಮತ್ತು ಸ್ಥಳೀಯರಿಗೆ ತಮ್ಮ ನೆಲದಲ್ಲೇ ಉದ್ಯೋಗ ಇರುವದಿಲ್ಲ.
* ಇದು ಪ್ರಾದೇಶಿಕ ಅಸಮಾನತೆಯನ್ನು ಇನ್ನು ಹೆಚ್ನು ಮಾಡುತ್ತದೆ.
* ದಿನದ ಊಟಕ್ಕೆ ಆಸೆಪಟ್ಟು ಚಿಕ್ಕ ಪರಿಹಾರ ಇಸ್ಕೊಂಡು ಭೂಮಿ ರೈತ ಕೊಟ್ಟರೆ, ವರ್ಷದ ಕೂಳು ಕಳೆದುಕೊಳ್ಳುವುದು ಶತಸಿದ್ಧ.
* ಹೆಚ್ಚು ಜನಸಂಖ್ಯೆ ಆದ ಹಾಗೆ, ಅವರಿಗೆ ಮೂಲಭೂತ ಸೌಕರ್ಯಗಳ ಮೇಲೆ ಸರಕಾರ ಬಂಡವಾಳ ಹೂಡಬೇಕು.
ನಮಗೆ ಲಾಟರಿ ಬಂದಿದೆ ಎಂದು ಬೀಗಬಾರದು, ಇಲ್ಲಿನ ಭೂಮಿ, ನೆಲ, ಜಲ, ಖನಿಜ ಸಂಪತ್ತು , ವಿದ್ಯುತ್ ಇವುಗಳನ್ನು
ನಾವು ಪಣಕ್ಕಿಟ್ಟು ಬಂಡವಾಳ ಹೂಡಿಕೆಗೆ ರತ್ನಗಂಬಳಿ ಹಾಸುತ್ತಿದ್ದೆವೆ. ಇಲ್ಲಿ ಬಂಡವಾಳ ಹೂಡಿರುವರಿಗೆ ದುಡ್ಡೆ ಮುಖ್ಯ , ಅದು ಸಿಗಲು ಆವರಿಗೆ ಕನ್ನಡಿಗರೂ ಒಂದೇ, ತಮಿಳರು ಒಂದೇ. ಅದ್ದರಿಂದ ಸರ್ಕಾರ ಮತ್ತೊಮ್ಮೆ ನಿರ್ಲಕ್ಷ ಮಾಡಿದರೆ , ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತದೆ. ನಮ್ಮ ನೆಲದಲ್ಲೇ ನಾವು ಪರಕೀಯರು ಅನಿಸುತ್ತದೆ.
ಪರಕೀಯರಿಗೆ ADVANTAGE KARNATAKA ಆಗದೆ, ದೂಳು ಕಟ್ಟಿರುವ ಉದ್ಯೋಗ ಮಾಹಿತಿ ಕೇಂದ್ರ ಜಾಗೃತವಾಗಲಿ ಎಂದು ಆಶಿಸೋಣ.
2 comments:
good one
thanks for your valuable information.
haudu, GIM inda karnataka labha padeyalilla andre naavu kooli kelsa maadbeku bere rajyadavara maneyalli.
Post a Comment