ಎನಪ್ಪಾ USB Drive ನಲ್ಲಿ ಈ ತರಹದ ಬಣ್ಣ ಇರುತ್ತದೆಯಾ ಅಂತ ಆಶ್ಚರ್ಯ ಆಗುತ್ತದೆಯಾ ? ಸರಿ ಆದರೆ ಇದು ಬಹಳ ಹೊಸ ತಳಿ, ಮೊದಲು ಕೆಂಪಗೆ,
ಕೇಸರಿ ಇಲ್ಲಾ ಕಪ್ಪು ಬಣ್ಣದಲ್ಲಿ ಸಿಗುತ್ತದೆ ಆಮೇಲೆ ಎರಡು ಬಿಳಿ , ಒಂದು ಕೆಂಪು ಆಗುತ್ತದೆ.
ನಿಮಗೆ ನಾನು ಯಾವುದರ ಬಗ್ಗೆ ಹೇಳುತ್ತ ಇದ್ದೇನೆ ಅಂತ ಅರ್ಥ ಆಗಿಲ್ಲ ಅನಿಸೊತ್ತೆ, ಸರಿ ಒಂದು ಕಥೆಯ ಮೂಲಕ ಹೇಳುತ್ತೆನೆ.
ಆವತ್ತು ಶಿವರಾತ್ರಿಯ ದಿನ, ರಾತ್ರಿ ಎನು ಮಾಡಬೇಕೆಂದು ಗೆಳೆಯರು ಹರಟುತ್ತ ನಿಂತಿದ್ದೆವು ಕಚೇರಿಯ ಆಚೆ ಆಗ ಒಬ್ಬ ಒಳ್ಳೆ ಶರ್ಟು,ಪ್ಯಾಂಟು ಹಾಕಿಕೊಂಡು ಬಂದು
ಪರಿಚಯಿಸಿಕೊಂಡ, 32GB Kingston USB drive ಮಾರಾಟ ಮಾಡುತ್ತ ಇದ್ದೆನೆ, ಆ ಕಂಪೆನಿಯಿಂದ ಬಂದಿದ್ದೆನೆ ಅಂತ ಹೇಳಿದ. ನಾವು ಅಲ್ಲಪ್ಪಾ USB ಮಾರೊಕ್ಕೆ
ರೋಡಿಗೆ ಯಾಕೆ ಬಂದಿದ್ದೀಯಾ ಅಂತ ಕೇಳಿದ. ಅದಕ್ಕೆ ಇಲ್ಲ ಸರ್, export ನಲ್ಲಿ ಎನೋ ತೊಂದರೆ ಆಗಿದೆ, ತುಂಬ ಸ್ಟಾಕ್ ಉಳಿದಿದೆ,ಅದಕ್ಕೆ ಕಮ್ಮಿ ದರದಲ್ಲಿ
ಎಲ್ಲಾ ಐ.ಟಿ-ಬಿಟಿ ಕಂಪನಿಗಳು ಇರೋ ಕಡೆ ಮಾರುತ್ತ ಇದ್ದೇವೆ ಅಂದ.
ಸರಿ ಎಷ್ಟಕ್ಕೆ ಕೊಡುತ್ತಿಯಾ ಅಂತ ವ್ಯಾಪರಕ್ಕೆ ಇಳಿದೆವು
೫೦೦ ರೂಪಾಯಿ ಕೊಡಿ ಸರ್ ಅಂದ
ನಮಗೆ ಎಲ್ಲೊ ಒಂದು ಕಡೆ ಮೀನಿನ ವಾಸನೆ ಬರುತ್ತ ಇತ್ತು, ಅದ್ರೂ ಸರಿ ೪ ಜನಾ ತೆಗೆದುಕೊಂಡರೆ ಎಷ್ಟಕ್ಕೆ ಕೊಡುತ್ತೀಯಾ ಅಂದೆವು
ಕಮ್ಮಿ ಮಾಡೊಕ್ಕೆ ಆಗೊಲ್ಲ ಅಂದ
ನಮಗೂ ಅವನನ್ನು ಸಾಗಿ ಹಾಕುವದಕ್ಕೆ ಮನಸ್ಸು ಬರಲಿಲ್ಲ ನೊಡಿ..
ಇದನ್ನು ಹೇಗೆ ನಂಬೊದು ಅಂದೆವು.
ಅದಕ್ಕೆ ಯಾಕೆ ಸರ್ ಯೋಚನೆ, ನಿಮ್ಮ ಮುಂದೆನೆ ತೋರಿಸ್ತಿನಿ ಕೆಲಸ ಮಾಡಿದರೆ ತೊಗೊಳ್ಳಿ ಇಲ್ಲ ಬಿಡೀ ಎಂದ.
ಸರಿ ನೋಡೇ ಬಿಡೋಣ ಅಂತ ತೋರ್ಸು ಎಂದೆವು
ಅವನು ಒಂದನ್ನು ತೆಗೆದುಕೊಂಡು ಮೊದಲು ಅದು drive ಆಗಿ recognize ಆಗ್ತ ಇರೊದು ತೋರಿಸಿದ.
ಆಮೇಲೆ, ಅದರ drive properties ತೋರಿಸಿ ೩೧ ಚಿಲ್ಲರೆ GB ಫ್ರಿ ಇರುವುದು ತೋರಿಸಿದ.
ಆಮೇಲೆ ಒಂದೆರೆಡು ಹಾಡುಗಳನ್ನ್ಯ್ ಕಾಪಿ ಮಾಡಿದ, ಅಷ್ತರಲ್ಲಿ ಯಾರೊ ಅವನನ್ನು ಕರೆದರು.ಸರಿ ಅಂತ ಹೋದ ಆಮೇಲೆ ಸ್ವಲ್ಪ ಹೊತ್ತಿನಲ್ಲಿ ಬಂದ.
ನಮ್ಮ ಹುಡುಗರು ಎಲ್ಲ ತಲೆಗೆ ೨ ಅನ್ನೊ ಹಾಗೆ ಕಳ್ಳೆಪುರಿ ವ್ಯಾಪಾರ ಮಾಡಿದರು, ಸಾಲದಕ್ಕೆ ಎಲ್ಲಾ ಗೆಳೆಯರಿಗೂ ಕರೆ ಮಾಡಿ ಬನ್ರೊ ಅಂತ ಹೇಳುವದಕ್ಕೆ ಶುರು ಮಾಡಿದರು, ಒಂದು ತೆಗೆದುಕೊಳ್ಳೊಣ ಸರಿ ಕೆಲ್ಸ ಮಾಡಿದರೆ ಆಮೇಲೆ ವ್ಯಾಪರ ಮಾಡೊಣ ಅಂತ ಅಂದುಕೊಂಡರು ನೋಡೆಬಿಡೋಣ ಅಂತ ಎಲ್ಲ ಕೊಂಡುಕೊಂಡೆವು.
ಪುಣ್ಯಕ್ಕೆ ನನ್ನ ಬಳಿ ದುಡ್ಡಿರಲಿಲ್ಲ, ನನ್ನ ಗೆಳೆಯರ ಬಳಿ ಇದ್ದ ದುಡ್ಡು ಅವರ ತಮ್ಮ-ತಂಗಿ-ಜಿಫ್ ಇವರಿಗೆ ಆಗಿತ್ತು. ನನ್ನ ಗೆಳೆಯನಿಗೆ ಕರೆ ಮಾಡಿ ದುಡ್ಡು ತೆಗೆದುಕೊಂಡು ಬಾ ಎಂದೆ, ಅದರೆ ಅವನು ಸ್ವಲ್ಪ ಬಿಸಿ ಇದ್ದೀನಿ, ನೀನೆ ಬಾ ಹಾಗೆ ನನಗೂ ೨ ತೊಗೊ ಎಂದ.
ಬರೋವಾಗ ಗುರು ..ಆಮೇಲೆ ಬರುತ್ತಿವಿ ಇನ್ನ ೪ ಬೇಕು ಎಲ್ಲಿ ಸಿಗುತ್ತಿ ಅಂತ ಕೇಳಿದೆವು...
ಇಲ್ಲೇ ಇರುತ್ತಿನಿ ಸರ್ ಅಂದ, ಎನೇ ಆಗಲಿ ನಿನ್ನ ಸಂಖ್ಯೆ ಕೊಡು ಅಂತ ತೆಗೆದುಕೊಂಡು,ಅಲ್ಲೇ ಒಂದು ಮಿಸ್ ಕಾಲ್ ಕೊಟ್ಟು ರಿಂಗ್ ಆಗುತ್ತ ಇದೆಯಾ ಅಂತ
ಒಮ್ಮೆ ಖಾತರಿ ಮಾಡಿಕೊಂಡೆವು.
ಎಲ್ಲಾ ಖರೀದಿ ಮಾಡಿ ಕಚೇರಿಯಲ್ಲಿ ಹೋಗಿ ಮೊದಲು ಮಾಡಿದ ಕೆಲಸ ಅಂದರೆ ಅದು ಕೆಲಸ ಮಾಡುತ್ತ ಇದೆಯಾ ಅಂತ ನೋಡಿದ್ದು, ಅಷ್ತರಲ್ಲಿ ಈ ಸುದ್ದಿ ಹರಡಿ
ಜನ ಅವನನ್ನು ಹುಡಕಿಕೊಂಡು ಹೊರಟರು.
ನನ್ನ ಲ್ಯಾಪಟಾಪಿನಲ್ಲಿ ನಾನು ಮೊದಲು ನನ್ನ ಗೆಳೆಯನ usb ಹಾಕಿ , ಒಂದು ೩GB ಕಡತ ರವಾನಿಸಿದೆ, ಎಲ್ಲ ಹೋಯಿತು,
ಅದರಲ್ಲಿ ಇರುವದನ್ನು ತೆಗೆಯಲು ಹೊದರೆ ಆಗುತ್ತಿಲ್ಲ. ಎನೊ ತೊಂದರೆ ಎಂದುಕೊಂಡು DOS ಮೂಲಕ ಪ್ರಯತ್ನ ಪಟ್ಟೆ ಅಲ್ಲೂ ಅದೇ... ನನ್ನ ಗೆಳೆಯನ ಡೆಸ್ಕಗೆ ಹೋದೆ
ಕೆಲಸ ಮಾಡುತ್ತಿಲ್ಲ ಅಂತ ಹೇಳೊಕ್ಕೆ. ಅಲ್ಲಿ ಅವನೂ ಕೂಡ ಭಗೀರಥ ಪ್ರಯತ್ನ ಮಾಡುತ್ತ ಇದ್ದಾನೆ. ಎಲ್ಲರದೂ ಅದೇ ಕಥೆ... ೧೦ ನಿಮಿಷದಲ್ಲಿ ಎಲ್ಲಾ ಎರಡು ಬಿಳಿ , ಒಂದು ಕೆಂಪು USB Drive ಆಗಿದ್ದವು.
ಗೂಗಲಿನಲ್ಲಿ ಇದರ ಬಗ್ಗೆ ಕೊಟ್ಟರೆ ಅನೇಕ ನಮ್ಮ ತರಹದ ಕಥೆ ಇದ್ದವು...
ನಮ್ಮನ್ನು ನೋಡಿ ಹೋದವರು ಬರಿಗೈನಲ್ಲಿ ತಾವು ಕೊಂಡುಕೊಂಡು ಬಂದಿದ್ದರು. ಅವರಿಗೂ ನೀವು ಮೂರ್ಖರಾದೀರಿ ಅಂತ ಹೇಳಿದೆವು, ಎಲ್ಲಾಗಿಗೂ ನಖಶಿಖ ಉರಿ, ಇಲ್ಲಿ ಮೊಸ ಹೊಗಿಲ್ಲದ ನನ್ನಂತವರಿಗೆ ನಗೂ, ಅದರೂ ಎನು ಮಾಡೊಣ ಅಂತ ಮತ್ತೆ ಆಚೆ ಬಂದು ಅವನನ್ನು ಹುಡುಕಲು ಹೊರಟರೆ ಆ ಆಸಾಮಿ ಪತ್ತೆನೆ ಇಲ್ಲ.
ಆಮೇಲೆ ನಮ್ಮ ಬಳಿ ಇದ್ದ ಮೊಬೈಲ್ ಇಂದ ಕರೆ ಮಾಡಿ, ಗುರು ಇನ್ನ ೧೦ USB ಬೇಕು ಎಲ್ಲಿದ್ದೀಯಾ ಅಂತ ಕೇಳಿದೆವು.ಅವನು ಸರ್ ೧೫ ನಿಮಿಷ ಕೊಡಿ ತಂದು
ಕೊಡ್ತಿನಿ ಎಂದ..
ಎಲ್ಲಾ ಸೇರಿ ಹೊಂಚು ಹಾಕಿ ಕಾಯುತ್ತ ಇದ್ದೆವು, ಆದರೆ ತುಂಬ ಜನ ಇರುವುದು ನೋಡಿದರೆ ಅವನಿಗೆ ಸಂಶಯ ಬಂದು ಓಡಿಹೋಗಬಹುದು ಎಂದು ೩-೪ ತಂಡಲ್ಲಿ ಇದ್ದೆವು. ಅವನು ಬಂದ ೩-೪ ತೋರಿಸಿದ, ಪರೀಕ್ಷೇ ಮಾಡಿಸುವದಕ್ಕೆ ತೋರಿಸು ಅಂದರೆ ಲ್ಯಾಪಟಾಪ್ ತಂದಿಲ್ಲ ಅಂದ. ನಮಗೂ ಉರಿ ಹತ್ತಿತ್ತು, ಅವನನ್ನು ಸುತ್ತುವರೆದು
ಸಖತ್ ಆವಾಜ್ ಹಾಕಿ ಪೋಲಿಸರಿಗೆ ಕರೆ ಮಾಡುವದಕ್ಕೆ ಹೋದೆವು,ಅವನು ನಮ್ಮ ದುಡ್ಡನ್ನು ವಾಪಿಸ್ ಕೊಟ್ಟು, ತಮ್ಮ ಕಷ್ತ ಹೇಳಿಕೊಂಡ .. ನಾವು ಕೊಟ್ಟ ದುಡ್ಡನ್ನು ಪೈಸೆ ಸಮೇತ ಪಡೆದು ಅವನಿಗೆ ೨-೩ ಧರ್ಮದೇಟು ಕೊಟ್ಟು ಕಳುಹಿಸಿದೆವು. ಆಮೇಲೆ ಬಂದು ನಮ್ಮ ವೀರಕತೆಯನ್ನು ಎಲ್ಲರ ಬಳಿ ಹೇಳಿಕೊಂಡಿದ್ದು ಮತ್ತು ಅವರನ್ನು ವಾರ್ನ್ ಮಾಡಿದ್ದು..
ನಿಮ್ಮ ಗಮನಕ್ಕೆ ನಾನು ನೋಡಿದ ಒಂದು screenshot ಹಾಕುತ್ತ ಇದ್ದೆನೆ, ಇದು ಅಂತರ್ಜಾಲದಲ್ಲಿ ಸಿಕ್ಕಿತು.
1 comment:
Thanx for the info guru..
Post a Comment