Friday, February 06, 2009

JUNGLEE FILM REVIEW




JUNGLEE FILM REVIEW
Starring:- Vijay , Andrita Rai, Rangayana Raghu, Kashi, Adi Lokesh
Direction:- Suri
Music:- Hari Krishna


ಇಂತಿ ನಿನ್ನ ಪ್ರೀತಿಯ ಚಿತ್ರ ಕ್ಲಾಸು ಆಗಗಿಲ್ಲ, ಮಾಸು ಆಗಲಿಲ್ಲ ಬರೀ ಗ್ಲಾಸು ಆಗಿ ಮಕಾಡೆ ಮಲಗಿತ್ತಲ್ಲ ಸೂರಿಗೆ ಸ್ವಲ್ಪ ಜ್ಞಾನೋದಯವಾಗಿ ಮತ್ತೆ ವಿಜಿಯನ್ನು ಹಾಕಿಕೊಂಡು ಜಂಗ್ಲಿ(JUNGLEE) ಅನ್ನೊ ಹೆಸರನ್ನು ಇಟ್ಟುಕೊಂಡು ಅಖಾಡಕ್ಕೆ ಇಳಿದಿದ್ದಾರೆ. ಹೇಳಿಕೇಳಿ ರಾಕಲೈನ್ ನಿರ್ಮಾಣ ಬೇರೆ, ಅಂದರೆ ಜನರಲ್ಲ ಹೆಚ್ಚಿನ ನಿರೀಕ್ಷೆ ಇರೊತ್ತೆ ಅನ್ನೊ ಒಂದು ಯೋಚನೆಯಲ್ಲೇ ಚಿತ್ರವನ್ನು ನೋಡಿದ್ದು.

ಕಥೆಯ ಆರಂಭ ಅಂತ್ಯದೊಂದಿಗೆ ಶುರುವಾಗಿ ಮತ್ತೆ ಕೊನೆಗೆ ಅಲ್ಲಿಗೆ ಬರುತ್ತದೆ... ಮಂದ ಬೆಳಕಲ್ಲಿ ಕರಿಯಾ ವಿಜಿಯ ಮುಖ ಕಾಣುತ್ತಿದ್ದ ಹಾಗೆ
ಶಿಳ್ಳೆಯೋ ಶಿಳ್ಳೆ., ಕಥೆ ೨ ವರುಷ ಹಿಂದೆ ಹೋಗುತ್ತದೆ. ರಂಗಾಯಣ ರಘು ಮತ್ತು ವಿಜಿಗೆ ಬಂದ ನಿಲ್ಲುತ್ತದೆ. ತಮ್ಮ ಊರಿಗೆ ಹೋಗೊ ದಾರಿಯಲ್ಲಿ ಪ್ರಯಾಣ ಮಾಡುತ್ತ ತಮ್ಮ ಹಳೇ ನೆನಪನ್ನು ಮೆಲಕು ಹಾಕುತ್ತಾರೆ. ಅವರ ಸಂಭಾಷಣೆಯ ಜೀವಾಳ, ಭಟ್ ಮತ್ತು ಸೂರಿಯ ಶ್ರಮ ಎದ್ದು ಕಾಣುತ್ತದೆ. ವಿಜಿಯ ಹೆಸರು ಜಂಗ್ಲಿ, ಈ ಹೆಸರು ಕೆಲವೊಮ್ಮೆ ನಮ್ಮ ಸಂಶಯಕ್ಕೆ ಈಡು ಮಾಡುತ್ತದೆ, ಯಾಕೆಂದರೆ ನಾನು ಈ ಹೆಸರಿನಿಂದ ಕಥೆ ಒಬ್ಬ ಕಾಡು ಮನುಷ್ಯ ನಾಡಿಗೆ ಬರುವುದು ಪ್ರೇಮದಲ್ಲಿ ಬೀಳುವುದು ಕಥೆ ಇರುತ್ತದೆ ಎಂದು ಕೊಂಡಿದ್ದೆ, ಆದರೆ ಹಾಗಲ್ಲ ಇದು ಪ್ರಭಾಕರ ಅನ್ನೊ ಒಬ್ಬ ಹಳ್ಳಿ ಹೈದನ ಕಥೆ. ಪ್ರಭಾಕರ್ ಹೆಸರಿನ ಮಹಿಮೆಯೋ ಎನೋ ವಿಜಿ ಸಖತ್ ಆಗಿ ಟೈಗರ್ ಪ್ರಭಾಕರ್ ತರ ಮಾತನಾಡುತ್ತಾರೆ, ಅದರಲ್ಲೂ ಆ..ಬೇಬಿ.. ಅನ್ನೊದು ಕೇಳುವದಕ್ಕೆ ಸುಖಾ. ಸದಾ ಪ್ರಭಾಕರ್ ಗುಂಗಿನಲ್ಲಿ ದೇಹ ದಂಡಿಸಿ, ಅವನ ತರ ದೊಡ್ಡ ವಿಲನ್ ಆಗಬೇಕೆಂಬ ಉತ್ಕಟ್ಟ ಬಯಕೆಯನ್ನು ಹೊಂದಿರುತ್ತಾನೆ, ಆ ಸಮಯದಲ್ಲೇ ಗುಡ್ಡೆ(ರಂಗಾಯಣ ರಘು)ಯನ್ನು ಬೇಟಿ ಮಾಡಿ ನಗರಕ್ಕೆ ಬರುತ್ತಾನೆ.
ಅಲ್ಲಿ ಆಟೋ ರಿಕ್ಷಾ ಓಡಿಸುತ್ತಾನೆ ಕೆಲವು ದಿನ ಆದರೆ ಕೊನೆಗೆ ಬಂದು ನಿಲ್ಲುವುದು ರೌಡಿಯಾಗಿ...

ತಲೆ ತೇಗಿ ಬೇಕು ಇಲ್ಲ ನಿಮ್ಮ ತಲೆ ಉಳಿಯುವದಿಲ್ಲ ಅನ್ನೊ ನಿಯಮದಲ್ಲಿ ಕಾಲ ದೂಡುತ್ತ ಇರುತ್ತಾನೆ, ವಯಸ್ಸಿನ ಮನೋಧರ್ಮದಲ್ಲಿ
ಒಂದು ಹುಡುಗಿಯನ್ನು ನೋಡೀ ಇವನ ಎದೆ ಬಡಿತವಾಗಿ ಅವಳೇ ನನ್ನ ಹೆಂಡತಿ ಅನ್ನೊ ತಿರ್ಮಾನಕ್ಕೆ ಬರುತ್ತಾನೆ. ಅವಳನ್ನು ಪಟಾಯಿಸಲು ತರಾ-ವರಿ ಪ್ರಯತ್ನಾ ಮಾಡುತ್ತಾನೆ, ಆದರೆ ಅವಳೇ ಚಿತ್ರದೆ ನಾಯಕಿ ಪದ್ಮ(ಆಂದ್ರಿತಾ ರೇ). ಇವನ ಮಂಗಾಟಗಳನ್ನು ನೋಡಿ ಚಿ..ತೂ ಅಂತ ಬೈದರೂ ವರೆಸಿಕೊಂಡು ಮತ್ತೆ ಮರಳಿ ಯತ್ನವ ಮಾಡು ಅನ್ನುತ್ತಾನೆ.

ಆ ಒಂದು ಕ್ರಮದಲ್ಲಿ ಹುಡುಗಿಯ ಅಪ್ಪನನ್ನು ಪಟಾಯಿಸಿ ಅವನ ಕೈಯಿಂದ್ ರೌಡಿಗಳನ್ನು ಇಟ್ಟುಕೊಂಡು ನಾಟಕವಾಡಿಸುವ ಪ್ರಯತ್ನ ಮಾಡುತ್ತಾನೆ, ಅದೇ ಸಮಯಕ್ಕೆ ವಿರೋಧಿಗಳ ದಾಳಿಯಾಗ ಹುಡುಗಿಯ ಅಪ್ಪ ಸಾಯುತ್ತಾನೆ. ಅದು ಹುಡುಗಿಗೆ ತುಂಬಾ ಬೇಜಾರಾಗಿ ಜಂಗ್ಲಿಯಿಂದ ದೂರ ಆಗುತ್ತಾಳೆ. ಮತ್ತೆ ಒಲೈಸಿಕೊಂಡು ಸರಿಹೋಯಿತು ಅನ್ನೊವಾಗ ಇನ್ನೊಂದು ಅವಘಡ ಆಗುತ್ತದೆ. ರೌಡಿಗಳ ಮಾರಮಾರಿ ಒಂದು ಕಡೆಯಾಗಿ ಇವನಿಗೆ ಸಾಕಪ್ಪಾ ಸಾಕು ಅನಿಸೊದು ಒಂದು ಕಡೆ ಆದರೆ ಇನ್ನೊಂದು ಕಡೆ ಇವನ ಗುರುವನ ಹೆಂಡತಿ ಇವನನ್ನು ಬಯಸುವುದು ಒಟ್ಟಿನಲ್ಲಿ ಇದರಿಂದ ಬೇಸರವಾಗಿ ತನ್ನ ಪ್ರಿಯತಮೆ ಸಲುವಾಗಿ ಫೀಲ್ಡ ಬಿಡುತ್ತಾನೆ.

ಆದರೆ ಫೀಲ್ಡ ಇವನನ್ನು ಬಿಡಬೇಕಲ್ಲ, ದೊಡ್ಡ ಮರ್ಡರ್ ಆಗಿ ಅದರಲ್ಲಿ ಇವನನ್ನು ಫಿಟ್ ಮಾಡುತ್ತಾರೆ. ಈ ಸುದ್ದಿಯನ್ನು ಕೇಳಿ ಪದ್ಮ ಇವನನ್ನು ಹುಡುಕಿಕೊಂಡು ಹೋಗುತ್ತಾಳೆ, ಇವನ ಗುರುವಿನ ಮಗನ ಕಾಮವಾಂಛೇಗೆ ಬೀಳುತ್ತಾಳೆ.ಅವಳನ್ನು ಇವನು ರಕ್ಷಿಸಿ ಬಚಾವ್ ಮಾಡೊದ್ರಲ್ಲಿ ಅವನ ಸಾವಾಗುತ್ತದೆ, ಅದು ಇವನ ತಲೆಗೆ ಅಂಟಿ ,ಗುರುವೇ ಇವನನ್ನು ಕೊಚ್ಚಿ ಹಾಕಲು ಕಳಿಸುತ್ತಾನೆ,ಆಗ ನಡೆಯುವ ಹೊಡೆದಾಟವೇ ಕ್ಲೈಮ್ಯಾಕ್ಸ.

ಚಿತ್ರದ ಪ್ರಮುಖ ಅಂಶ

* ಹಾಡುಗಳು ಮತ್ತು ಸಾಹಿತ್ಯ
* ಸುಂದರ ಚಿತ್ರಣ,photography
* ವಿಜಿಯ ೬ ಪ್ಯಾಕ್
* ಹೊಡೆದಾಟ
* ರಂಗಾಯಣ ರಘು ಮತ್ತು ವಿಜಿಯ ಅಭಿನಯ
* cute ಆಂದ್ರಿತಾ ರೇ
* ಸಂಭಾಷಣೆ


ಮೈನಸ್ ಅಂಶ

* ಮೊದಲನೇ ಭಾಗ ಹೋದ ವೇಗಕ್ಕೆ ಎರಡನೇ ಭಾಗ ಹೋಗದೇ ಕಥೆ ಎಳೆದಿರುವುದು
* ಕಥೆಯನ್ನು ಇನ್ನೂ ಜೀವಂತ ಮಾಡಬಹುದಿತ್ತು.
* ಹೊಡೆದಾಟ ಕೆಲ ಕಡೆ ಅನವಶ್ಯ
* ಐಟಂ ಹಾಡು ಬೇಕಾಗಿರಲಿಲ್ಲ ಆದರೆ ಸೂರಿಯ ಚೂಟಿತನ ಎದ್ದು ಕಾಣುತ್ತದೆ. ಐಟಮ್ ಹಾಡನ್ನು ಶೂಟಿಂಗ್ ತರ ತೋರಿಸಿರುವುದು.

ಒಟ್ಟಿನಲ್ಲಿ ನೊಡಬಹುದಾದ ಚಿತ್ರವಿದು...

1 comment:

Anonymous said...

vimarshe chennagide... film na first half nante...:)