Friday, October 31, 2008

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು....


ಸಮಸ್ತ ಕನ್ನಡ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು....

ನಮ್ಮ ಕನ್ನಡ ಪ್ರೇಮ ಸಿರಿಗನ್ನಡಂ ಗೆಲ್ಗೆ ಅನ್ನುವದಕ್ಕೆ, ಇಲ್ಲ ನವೆಂಬರ್ ನಲ್ಲಿ ಒಂದು ಕನ್ನಡ ಚಿತ್ರ ನೋಡುವದಕ್ಕೆ ಮಾತ್ರ ಸೀಮಿತ ಆಗುವುದು ಬೇಡ. ಇದು ನಿತ್ಯೋತ್ಸವ ಆಗಲಿ.

Tuesday, October 28, 2008

ಒಂದು ಸಾವಿನ ಸುತ್ತ ..( ನಮ್ಮ ಊರಿನಲ್ಲಿ ಒಂದು ದಿನ)

ನಮ್ಮ ಊರಿನಲ್ಲಿ ಒಂದು ಎರಿಯಾ ಇದೆ, ಅದರ ಹೆಸರು ಬಿಮಾಲ ಅಂತ. ನೈಸರ್ಗಿಕವಾಗಿ,ಭೌಗಳಿಕವಾಗಿ ಬಹಳ ಚೆನ್ನಾಗಿರುವ ಪ್ರದೇಶ.
ಆದರೆ ಅಲ್ಲಿ ಅರಾಜಕತೆ ತಾಂಡವ ಆಡುತ್ತಿದೆ, ಅಲ್ಲಿನ ಜನರಿಗೆ ಸಂಸ್ಕ್ಟುತಿ ಇಲ್ಲ, ಬೈಗಳ, ಹೊಡೆದಾಟ ಅವರ ಜೀವನದ ಒಂದು ಭಾಗ
ಆಗಿದೆ. ಮಾಡಲು ಕೆಲಸವಿಲ್ಲ, ಆದ್ದರಿಂದ ಸದಾ ಮನೆಯ ಮುಂದೆ ಕುಳಿತುಕೊಂಡು ಹೋಗಿ ಬರುವರಿಗೆ ಕಾಟ ಕೊಡುತ್ತಾ ಇರುತ್ತಾರೆ. ಊಟ ಮಾಡಬೇಕು ಎಂದರೆ
ಹೊಡೆದಾಟ ಮಾಡಿ, ಎಳೆದಾಡಿಯೇ ಮಾಡಬೇಕು, ಹಾಗೆ ಮಾಡದಿದ್ದರೆ ಅವರಿಗೆ ತಿಂದ ಅನ್ನ ಜೀರ್ಣ ಆಗೊಲ್ಲ. ಆದರೂ ಮಕ್ಕಳನ್ನು ಹುಟ್ಟಿಸುವುದನ್ನು ಮನೆಯ ಯಜಮಾನ ಬಿಟ್ಟಿಲ್ಲ ಇಲ್ಲ ಅವನ ವಂಶದವರೂ ಬಿಟ್ಟಿಲ್ಲ. ಹುಟ್ಟಿಸಿದ ದ್ಯಾವ್ರು ಹುಲ್ಲು ಮೇಯಿಸುತ್ತಾನ ಅಂತ ಹೇಳಿಕೊಂಡು ಕಾರ್ಯಕ್ರಮ ನಿರಂತರವಾಗಿ ಸಾಗಿದೆ.
ಹೀಗಿದ್ದರೆ ಸಂಸಾರ ಹೇಗೆ ನಡೆಯೊತ್ತೆ ಅಂತ ನಿಮ್ಮ ಪ್ರಶ್ನೆ ಆಗಿದ್ದರೆ, ಅದಕ್ಕೂ ಒಂದು ದಾರಿ ಮಾಡಿಕೊಂಡಿದ್ದಾರೆ. ಅದೇ ಊರಿನಲ್ಲಿ ಇನ್ನ ೨೦ ಎರಿಯಾಗಳಿವೆ, ಅಲ್ಲಿ ಚೆನ್ನಾಗಿ ಮನೆ ನಡೆಸುತ್ತ ಇರುವರು ಇದ್ದಾರೆ, ಆ ಮನೆಗಳ ಪ್ರತಿಶತ ೪೦% ಆದಾಯ ಇವರಿಗೆ ಕೊಡಬೇಕು. ಸದಾ ನಾವು ಹಿಂದೆ ಇದ್ದೇವೆ ಅಂತ ಹೇಳಿ ಎಲ್ಲಾ ಸೌಲಭ್ಯಗಳನ್ನು ಮಾಡಿಕೊಂಡಿದ್ದಾರೆ. ಪ್ರತಿ ಮನೆಗೂ ಕಂಪ್ಯೂಟರ್ ಕೊಡುತ್ತಿವಿ ಅಂದಾಗ ಇವರು ಹಟ ಮಾಡಿ, ಅರ್ಧ ಬಾಚಿಕೊಂಡರು. ಆಮೇಲೆ ಅದನ್ನು ಹೇಗೆ ಉಪಯೋಗಿಸೋದು ಅಂತ ತಿಳಿಯದೆ ಅವುಗಳನ್ನು ಮಾರಿ ಗನ್,ಲಾಟಿ ಕೊಂಡುಕೊಂಡರು. ಕೊಂಡುಕೊಂಡ ಮೇಲೆ ಬಳಸಿದಿದ್ದರೆ ಹೇಗೆ ಬೇರೆ ಮನೆಗಳ ಜನರನ್ನು ಅಪಹರಿಸೋದು, ಸುಲಿಗೆ ಕಾರ್ಯಗಳಿಗೆ ಶುರು ಹಂಚಿಕೊಂಡರು.. ಅಪ್ಪಿತಪ್ಪಿ ಜನ ಇವರ ಎರಿಯಾ ಕಡೆ ಹೋದರು ಸಾಕು ಆವ್ರು ಅಪಹರಣ ಆಗುತ್ತಾರೆ. ಇದನ್ನು ಪ್ರಶ್ನಿಸುವ ಹಾಗೆ ಇಲ್ಲ ನೋಡಿ.. ಇಡಿ ಊರಿಗೆ ಒಂದು ಕಾನೂನು ಆದರೆ ಇವರಿಗೆ ಅದು ಅನ್ವಯಿಸುವದಿಲ್ಲ.


ಆ ಎರಿಯಾದಲ್ಲಿ ಜನ ಹೆಚ್ಚಾದ ಹಾಗೆ ಅವರು ಒಂದು ಕಾನೂನು ತಂದರು, ಪ್ರತಿ ೩ನೇ ಮತ್ತು ತದನಂತರ ಮಗು ಬೇರೆ ಎರಿಯಾಗೆ ಹೋಗಬೇಕು ಅಂತ. ಬೇರೆ ಎರಿಯಾಗೆ ಹೋದ ಜನರ ಸುಮ್ಮನೆ ಇದ್ರಾ,ಅಲ್ಲೂ ನಮ್ಮ ಎರಿಯಾದೆ ಕಾನೂನು ಅಂತ ದುಂಡಾವರ್ತನೆ ಶುರು ಮಾಡಿದರು. ಬೇರೆಯವರ ಮನೆಗೆ ಹೋಗಿ, ಅಲ್ಲಿಯ ನೀತಿ ನಿಯಮವನ್ನು ಗಾಳಿಗೆ ತೂರಿ ಅಲ್ಲಿ ಜನರಿಗೆ ಮಾಡಿದ್ದ ಅಡಿಗೆಯನ್ನು ತಿನ್ನುವದಕ್ಕೆ ಶುರು ಮಾಡಿದರು. ಕೇಳಿದರೆ ಪಕ್ಕದ , ನಮ್ಮ ಮನೆ ಅಂತ ಎನು ಇಲ್ಲ, ನಾವೆಲ್ಲಾ ಇರುವುದು ಒಂದೇ ಊರಿನಲ್ಲಿ ಆದ್ದರಿಂದ ಹಂಚಿಕೊಂಡು ತಿನ್ನಬೇಕು ಅಂತ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡರು.

ಇವರ ಬಾಯಿಗೆ ಹೆದರಿ ಜನ ಹಾಳಾಗಿ ಹೋಗಲಿ ಅಂತ ಬಿಟ್ಟುಬಿಟ್ಟರು. ಆದರೆ ಯಾವಾಗ ಈ ಜನ ತಮ್ಮ ಕಾಮವಾಂಛೆಗೆ ಹುಡುಗಿ-ಅಜ್ಜಿ ಅಂತ ನೋಡದೆ ಮೈ ಮೇಲೆ ಬಿದ್ರೊ ಆಗ ಅಲ್ಲಿನ ಜನರಲ್ಲಿ ತಾಳ್ಮೆ ಮಿತಿಮೀರಿತು. ಒದ್ದು ಬುದ್ಧಿ ಹೇಳಿದರು. ಆದರೆ ಎಮ್ಮೆ ಚರ್ಮದ ಜನರಿಗೆ ಇದು ಅರ್ಥ ಆಗಲೇ ಇಲ್ಲ. ಕಾಲಕ್ರಮೇಣ ಊಟದ ಬರವಾಗಿ ಒದ್ದಡುತ್ತ ಇರುವಾಗ , ಇವರು ಕಿತ್ತು ತಿನ್ನುವುದು ನಡ್ದೇ ಇತ್ತು. ದೊಡ್ಡದೇಶ ಎರಿಯಾದಲ್ಲಿ ಸ್ಥಳೀಯರಿಗೆ ಊಟ ಇಲ್ಲ, ಅದರಲ್ಲಿ ಇವರ ಕಿತ್ತುತನ ಸಹಿಸಿಕೊಳ್ಳಬೇಕೆ ಎಂಬ ಪ್ರಶ್ನೆ ಉಂಟಾಗಿ ಒಂದು ದಿನ ಕಿತ್ತು ತಿನ್ನುವದನ್ನು ನಿಲ್ಲಿಸಿ ಒದ್ದು ಓಡಿಸಿದರು.

ಅದೇ ದೊಡ್ಡ ತಪ್ಪು ಅನ್ನುವ ಹಾಗೆ ಜನ ಗಲಾಟೆ ಮಾಡಿದರು , ತಮ್ಮ ಎರಿಯಾದಲ್ಲೇ ಬೆಂಕಿ ಇಡುವುದು, ಗಲಾಟೆ ಮಾಡುವುದು ಶುರು ಮಾಡಿದರು. ತಾವು ಮಾಡುತ್ತ ಇರುವುಉದ್ ತಮನೇ ನಷ್ಟ ಅನ್ನುವ ಪರಿಜ್ಞಾನ ಇರಲಿಲ್ಲ. ಅಷ್ಟಕ್ಕೂ ಅವರು ಸಂಪಾದಿಸಿದ್ದ ಆಸ್ತಿಯೇ ?. ಮೊದಲೆ ಗನ್-ಲಾಂಗು ಸಂಸ್ಕೃತಿಯಲ್ಲಿ ಬೆಳೆದ ಯುವಕರು ಸುಮ್ಮನೇ ಇರುತ್ತಾರ, ಅದರಲ್ಲಿ ಒಬ್ಬ ಎದ್ದುನಿಂತೇ ಬಿಟ್ಟ. ೨೫ ವರುಷದ ಬಿಸಿರಕ್ತದ ಯುವಕ.
ಕಿತ್ತು ತಿನ್ನುವುದು ನಮ್ಮ ಹಕ್ಕು,ಅದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಅಂತ ನಿರ್ಣಯ ಮಾಡಿ
ಒಂದು ಮುಂಜಾನೆ ರಿವೆಂಜ್ ತೆಗೆದುಕೊಳ್ಳಲು ಅಣಿಯಾದ.

ಆ ದೊಡ್ಡದೇಶ ಎರಿಯಾದಲ್ಲಿ ಆವತ್ತು ಶಾಂತಿ ಇತ್ತು, ಆಗ ಈ ಯುವಕ ಒಂದು ಹತ್ತು ಜನರನ್ನು ಒತ್ತೆ ಮಾಡಿಕೊಂಡು ಜನರನ್ನು ಹೆದರಿಸುವದಕ್ಕೆ ಶುರು ಮಾಡಿದ, ಜನರಿಗೆ ಗಾಬರಿ.
ಆ ಗಾಬರಿಯನ್ನು ತಿಳಿದ ಯುವಕ ಅಲ್ಲಿಯ ಜನರನ್ನು ನಿಂದಿಸಲು ಶುರು ಮಾಡಿದ. ಆಗ ಎಚ್ಚೆತ್ತುಕೊಂಡ ರಕ್ಷಣಾ ಪಡೆ ಇವನನ್ನು ಹೊಡೆದು ಉರುಳಿಸಿತು. ಜನರನ್ನು ಅವನ ಹಿಡಿತದಿಂದ ಪಾರು ಮಾಡಿತು. ಅದೇ ದೊಡ್ಡ ವಿವಾದ ಅಯಿತು.

ಬಿಮಾಲ ಎರಿಯಾದ ಜನರು ಆ ಹುಡುಗನ ಸಾವನ್ನು ನೆಪ ಮಾಡಿಕೊಂಡು ಮತ್ತೆ ಗಲಾಟೆ ಶುರು ಮಾಡಿದರು. ಆ ಹುಡುಗ ಬದುಕಿದ್ದರೆ ನೋಬೆಲ್ ಪಡೆಯುತ್ತಿದ್ದ,
ಅವನ ಸಾವು ಊರಿಗೆ ನಷ್ಟ ಅನ್ನುವ ರೀತಿಯಲ್ಲಿ ಬೊಬ್ಬೆ ಹೊಡೆದರು. ನಮ್ಮಲ್ಲಿ ಬಂದೂಕು ಸಾಮನ್ಯ್ ಆದ್ದರಿಂದ ಅವನು ತೆಗೆದುಕೊಂಡು ಬಂದಿದ್ದಾನೆ, ಅಬ್ಬಾಬ್ಬ ಎನು ಮಾಡುತ್ತಿದ್ದ ಒಂದಿಬ್ಬರನ್ನು ಸಾಯಿಸುತ್ತಿದ್ದ , ಕಮ್ಮಿ ಆದ ಜನರನ್ನು ನಾವು ತುಂಬಿಕೊಂಡುತ್ತಿದ್ದೆವು ನೀವು ಅವನನ್ನು ಸಾಯಿಸಿ ತಪ್ಪು ಮಾಡಿದಿರಿ ಎಂದು ಅಪಾದನೆಗಳ ಸರಮಾಲೆ ಮಾಡಿದರು. ಒಟ್ಟಿನಲ್ಲಿ ಈ ಪುಂಡು ಪೋಕರಿಯನ್ನು ಸಾಯಿಸಿದ್ದು ತಪ್ಪು ಎನ್ನುವ ರೀತಿಯಲ್ಲಿ ಆಪಾದನೆ ಬಂದಾಗ ದೊಡ್ಡದೇಶ ಎರಿಯಾ ಜನ ಸುಮ್ಮನೆ ಇರುತ್ತಾರೆಯೇ ಅವರು ತಿರುಗಿಸಿ ಕೊಟ್ಟರು. ಅವನೇನು ಹುತಾತ್ಮನಲ್ಲ, ಭಯೋತ್ಪಾದಕ ಅಂತ ಜರಿದರು...

ಮುಂದೇನಾಯಿತು ಕಾದು ನೋಡಿ.....

Saturday, October 25, 2008

ದೀಪಾವಳಿ ಹಬ್ಬದ ಶುಭಾಶಯಗಳು.

"In the day
In the night
Say it right
Say it all
You either got it
Or you don't "

ಇದು ಒಂದು ನೆಲ್ಲಿ ಫರಟೆಡೊ ಹಾಡಿನ ಸಾಲು....ಇದಕ್ಕೆ ಒಂದು ಸಾಲು ಸೇರಿಸಬೇಕು but say right (ie DEEPAVALI not DIWALI.)

ಇದನ್ನು ಯಾಕಪ್ಪ ಬಳಸಿದೆ ಎಂದರೆ ನಮ್ಮ ಕನ್ನಡಿಗರು "ಹ್ಯಾಪಿ ದಿವಾಳಿ" ಸಂದೇಶ ಕಳಿಸುತ್ತ ಇದ್ದಾರೆ. ಇದನ್ನು ನೋಡಿ ನಗಬೇಕೊ ಇಲ್ಲ ಅಳಬೇಕೊ ಗೊತ್ತಿಲ್ಲ. ಕನ್ನಡದಲ್ಲಿ ದಿವಾಳಿ ಎಂದರೆ ಬೇರೆ ಅರ್ಥವೆ ಇದೆ, ಒಂದು ರೀತಿಯಲ್ಲಿ ಪಾಪರ್, ನಿರ್ಗತಿಕ ಅಂತ ಅರ್ಥ. ಅದು ಹಾರಕೈ ಆಗೊಲ್ಲ ಶಾಪ ಆಗೊತ್ತೆ ಎಂದು ಹಾಗೆ ಹೇಳುವವರು ಮನಗಾಣಲಿ...




ದೀಪಗಳ ಹಬ್ಬ ದೀಪಾವಳಿ ಇತ್ತಿಚಿನ ಸ್ಟಾಕ್ ಮಾರ್ಕೆಟ್ ಕುಸಿತದಿಂದ ದಿವಾಳಿ ಆಗಿರಬಹುದು ಎಂದು ಪಂಡಿತರ ಅಂಬೋಣ.

ಕನ್ನಡಿಗರಿಗೆ ಈ ಹಬ್ಬ ಪರಭಾಷ ವ್ಯಾಮೋಹ,ಕೀಳರಿಮೆ,ಸ್ವಾಭಿಮಾನದ ಕೊರತೆ ಎನ್ನುವ ಕತ್ತಲನ್ನು ಹೋಗಲಾಡಿಸಿ ಕನ್ನಡ ಜಾಗೃತಿ ತರುವ ಬೆಳಕನ್ನು ತರಲಿ.

ಗುಟಿಕಿನಲ್ಲಿ ಅಮೃತ...

ಅಲ್ಲಾ.. ಇಷ್ಟು ಪೋಸ್ಟನಲ್ಲಿ ಬಹಳ ಸೀರಿಯಸ್ ವಿಷಯಗಳೇ ಇವೆಯಲ್ವಾ, ನೀವು ನಗುವುದೇ ಇಲ್ವಾ ಅಥವಾ ಸದಾ ಸೀರಿಯಸ್ ಆಗಿರುತ್ತಿರಾ ಅಂತ ಕೆಲವರು ಪ್ರಶ್ನೆ ಕೇಳಿದ್ದರು... ಅಯ್ಯೊ ಅಪಾರ್ಥ ಮಾಡಿಕೊಳ್ಳಬೇಡಿ, ಯಾಕೆ ಈ ತರಹದ ಸಂದೇಹಗಳು ನಿಮಗೆ ಎಂದರೆ ಬ್ಲಾಗಿನಲ್ಲಿ ನಗಿಸುವ ಒಂದು ಲೇಖನ ಇಲ್ಲ ಅಂದರು. ಅದು ಸರಿ, ನಾನು ಕಾಮೆಡಿ ಮಾಡಲು ಬ್ಲಾಗ್ ತೆಗೆದಿಲ್ಲ, ಅದಕ್ಕೆ ಅಂತ ಬೇರೆ ಬ್ಲಾಗ್ ಇವೆ ಎಂದರೂ ಮನುಷ್ಯನಿಗೆ ಎಲ್ಲೊ ಸಂದೇಶ ಕೊಡಬೇಕಾದರೆ ಹಾಸ್ಯದ ಮೂಲಕ ಕೊಡಬೇಕು,ಇಲ್ಲಾ ಚಿಕ್ಕ ಕಥೆಗಳ ಮೂಲಕ ಕೊಡಬೇಕು ಎಂದು ಗುರು ಶ್ರೀ ಅಂತೋಣಿ ಡಿ ಮೆಲ್ಲೊ ಹೇಳಿದ್ದು ಜ್ಞಾಪಕ ಬಂತು. ಗುರುಗಳ ಪುಸ್ತಕಗಳನ್ನು ಓದುತ್ತಿದ್ದರೆ, ಚಿಕ್ಕ ಚಿಕ್ಕ ಕಥೆಗಳಲ್ಲಿ ಅಂದೆತಾ ಆಧ್ಯಾತ್ಮಿಕತೆ ಹೇಳಿದ್ದರು ಅಂತ ಆಶ್ಚರ್ಯ ಆಗುತ್ತದೆ.

ಮನುಷ್ಯನ ಅಳತೆಗೆ ಬಟ್ಟೆ ಇರಬೇಕೆ ವಿನಹ ಬಟ್ಟೆ ಅಳತೆಗೆ ಮನುಷ್ಯನನ್ನು ಕತ್ತರಿಸಬಾರದು ಇದು ಅವರು ಹೇಳುವ ಒಂದು ಮಾತು, ಈ ಮಾತಿನಲ್ಲೇ ಅನೇಕ ವಿಷಯಗಳು ಅಡಗಿವೆ. ಮುಂದೆ ಅದರ ಬಗ್ಗೆ ಬರೆಯುತ್ತೆನೆ.


ಒಂದು ಕಥೆ ಕೇಳೋಣ...

ಎನಾದರೂ ಆಗು, ಮೊದಲು ಮಾನವನಾಗು

ಒಮ್ಮೆ ತಮಿಳುನಾಡಿನಲ್ಲಿ ಒಬ್ಬ ವ್ಯಾಪಾರಕ್ಕೆಂದು ಹೋದವನು, ಸಮುದ್ರದಲ್ಲಿ ಬಂದ ಗಾಳಿಯಿಂದ ಶ್ರೀಲಂಕಾ ತಲುಪಿದ. ಅವನನ್ನು ಕಂಡ ಅಲ್ಲಿನ ರಾಜ ವಿಭಿಷಣ, ಅಯ್ಯೋ ಮಾನವ ರೂಪದಲ್ಲಿ ರಾಮ ಬಂದಿದ್ದಾನೆ ಅಂತ ಖುಶಿ ಪಟ್ಟು ತುಂಬಾ ಸತ್ಕಾರ ಮಾಡಿದರು. ಈ ಕಥೆಯನ್ನು ಒಮ್ಮೆ ಪರಮಹಂಸರು ಕೇಳಿದಾಗ ಅವರು ಹೇಳಿದ್ದು "ಅಬ್ಬಾ..ಎಂತಹ ಮಹತ್ ಯೋಚನೆ, ಒಂದು ಕಲ್ಲನ್ನು ಮನುಷ್ಯ ದೇವರು ಎಂದುಕೊಳ್ಳುವ ಹಾಗೆ ಆದರೆ, ಮನುಷ್ಯನಲ್ಲಿ ಎಲ್ಲಾ ಜೀವಭೂತದಲ್ಲಿ ದೇವರನ್ನು ಯಾಕೆ ಕಾಣಬಾರದು "??.

ಕನ್ನಡ ಎನ್ನುವುದು
ಕನ್ನಡ ಅನ್ನುವುದು ಒಂದು ರೀತಿಯ ಬಾಟಲಿ ಇದ್ದ ವೈನ್ ಹಾಗೆ, ಎಲ್ಲರೂ ಅದರ ಬಗ್ಗೆ ಮಾತನಾಡುತ್ತಾರೆ, ಅದರ ಲೇಬಲ್ ಓದುತ್ತಾರೆ, ಆದರೆ ಅದರ ಅಮೃತ ರುಚಿ ಉಂಡವರು ಬಹಳ ಕಡಿಮೆ.

ಇಸ್ತೊ ಸೆಟಲೈಟ್ ಸೆಂಟರ್ - ಕನ್ನಡ ಅವತರಿಣಿಕೆ ಅಂತಾಣ.

ಚಂದ್ರಯಾನ ಆದಮೇಲೆ ಇಸ್ರೊ ಅಂತರ್ಜಾಲ ತಾಣಕ್ಕೆ ಬೇಟಿಕೊಡುತ್ತ ಇದ್ದೆ, ಅದರ ಮುಖಪುಟದಲ್ಲಿ ಸೆಟಲೈಟ್ ಸೆಂಟರ್(isac) ಕನ್ನಡ ತಾಣವಿರುವದನ್ನು ಗಮನಕ್ಕೆ ತಂದಿದ್ದು ನನ್ನ ಗೆಳೆಯ.
ಕುತೂಹಲಕ್ಕೆ ಒಮ್ಮೆ ಕ್ಲಿಕ್ಕಿಸಿದೆ, ಮೊದಲ ಅನಿಸಿಕೆಯಲ್ಲಿ ಅನಿಸಿದ್ದು, ಇದು ಕಾಟಾಚಾರಕ್ಕೆ ಮಾಡಿದ್ದು ಅಲ್ಲ ಅಂತ. ೩ ಫ್ರೆಮನಲ್ಲಿ ವಿಷಯಗಳನ್ನು ಹಂಚಿದ್ದಾರೆ. ಎಡಫ್ರೆಮ್
ಮೆನು ತರ ಆದರೆ, ಮಧ್ಯೆ ಫ್ರೆಮ್ ವಿಷಯವನ್ನ್ನು ಕೊಡುತ್ತದೆ. ಬಲಫ್ರೆಮ್ ಸಬ್ ಮೆನುಕೊಡುತ್ತದೆ. ಇಲ್ಲಿ ತನಕ ಸದ್ದಿಲ್ಲದೆ ಮಾಡಿದ ಅನೇಕ ವಿಷಯಗಳನ್ನು ಒಂದೆಡೆ ಸೇರಿಸಿ,ಸಂಬದಿಸಿ,ಹೊಲೆದು ತಂದಿದ್ದಾರೆ. ನಮ್ಮ ದೇಶ ಕಳಿಸಿದ ಎಲ್ಲಾ ಉಪಗ್ರಹಗಳ ಬಗ್ಗೆ ಇಲ್ಲಿ ಮಾಹಿತಿ ಸಿಗುತ್ತದೆ.


ಅದರಲ್ಲಿ ಒಂದು ವಿಷಯ ನನ್ನ ಗಮನ ಸೆಳೆಯಿತು, ಅದೆನೆಂದರೆ ೨೦೦೩ ತಾಂತ್ರಿಕ ಕಮ್ಮಟದಲ್ಲಿ ಚಂದ್ರ, ಚಂದ್ರಯಾನ ಬಗ್ಗೆ ಆಯ್ಕೆ ಮಾಡಿರುವುದು ಖುಷಿಯಾಯಿತು.
ಮೊನ್ನೆ ಸಿಕ್ಕಿದ ಯಶಸ್ಸು ಕೇವಲ ರಾತ್ರೊರಾತ್ರಿ ಬಂದಿದ್ದು ಅಲ್ಲ. ಇದರ ಹಿಂದೆ ಸತತ ವರುಷಗಳ ಪರಿಶ್ರಮ ಇದೆ, ಸುಮಾರು ವರುಶಗಳ ಸಾಧನೆ ಇದೆ. ಅದಕ್ಕೆ
ಚಂದ್ರಯಾನ-೧ ಸರಿಯಾಗಿ ಕಕ್ಷೆಗೆ ಹೋಗಿದ್ದು. ಈ ಕಮ್ಮಟದಲ್ಲಿ ಮಂಡಿಸಿದ್ದ ಮಾಹಿತಿಗಳು ಬಹಳ ಚೆನ್ನಾಗಿವೆ, ಇದನ್ನು ನಮ್ಮ ಮಕ್ಕಳಿಗೆ ಸಿಗುವ ಹಾಗೆ ಮಾಡಬೇಕು.

Thursday, October 23, 2008

ಮಾಹಿತಿ ಕಳವು ಯಾರಿಂದ ??

ವ್ಯ್ಪಾಪಾರದಲ್ಲಿ ಪ್ರತಿಯೊಂದು ಸಂಸ್ಥೆಗೂ ಇಲ್ಲ ಜನರಿಗು ಎದುರಾಗುವ ದೊಡ್ಡ ಸವಾಲು ಎಂದರೆ ಮಾಹಿತಿ ಸುರಕ್ಷಣೆ. ಅದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿ, ಅದನ್ನು ಸುರಕ್ಶಿತವಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಹೆಚ್ಚು ಅಪಾಯ ಆಗುವುದು, ಮಾಹಿತಿಗಳು ಇತರರ ಪಾಲಾಗುವುದು ಬೇರೆ ಯಾವ ರೀತಿಯಿಂದಲೂ ಅಲ್ಲ. ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಂದ. ಮಜಾ ಎನೆಪ್ಪಾ ಅಂದರೆ ಹ್ಯಾಕರಗಳಿಗಿಂತ ಹೆಚ್ಚು ಮಾಹಿತಿ ಕಳವು ಆಗುವುದು ಒಳಗಡೆ ಇರುವ ಜೇಡಗಳಿಂದ.



ಪ್ರತಿಯೊಂದು ಸಂಸ್ಥೆಗಳಲ್ಲೂ ಆಯಾ ಉದ್ಯೋಗಿಗಳನ್ನು ನಂಬಿಕೆಗೆ ತೆಗೆದುಕೊಂಡು, ಎನ್.ಡಿ.ಎ (non disclosure agreement) ಸಹಿ ಹಾಕಿಸಿಕೊಂಡಿರುತ್ತಾರೆ. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಜಿ.ಬಿ ಮಾಹಿತಿಗಳನ್ನು ಒಂದು ಪೆನ್ ಡ್ರೈವ್ ನಲ್ಲಿ ಕೊಂಡ್ಯಬಹುದು
ಅದನ್ನು ಯಾರು ಪರಿಕ್ಷಿಸುವದಿಲ್ಲ. ಅಷ್ಜು ಯಾಕೆ ಮೊಬೈಲನಲ್ಲಿ ಕೂಡ ಮಾಹಿತಿಯನ್ನು ತೆಗೆದುಕೊಂಡಬಹುದು.
ಅದಕ್ಕೆ ಕಾರಣ ಆಯಾ ಸಂಸ್ಥೆಗಳಲ್ಲಿ ಸುರಕ್ಷತಾ ಕ್ರಮ ಇಲ್ಲದೇ ಇರುವುದು.

ಹುಡುಗಾಟದ ಹುಡುಗಿಯ ಬ್ಲಾಗ್ ಮತ್ತು ಹುಡುಗಾಟ..


ರೇಡಿಯೋ ಮಿರ್ಚಿಯಲ್ಲಿ ಹುಡುಗಾಟದ ಹುಡುಗಿ ವರ್ಷ ತಮ್ಮ ಬ್ಲಾಗಿನಲ್ಲಿ ರಾಜ್ ಠಾಕ್ರೆ ಬಂಧನ ಮತ್ತು ಅದರ ಪ್ರಸ್ತುತತೆ ಬಗ್ಗೆ ಚೆನ್ನಾಗಿ ಬರೆದಿದ್ದಾರೆ. ಓದಿ ಖುಶಿಯಾಯಿತು.

ರಾಜ್ ಮಾಡುತ್ತಿರುವುದು ಇವತ್ತು ಪ್ರತಿರಾಜ್ಯದಲ್ಲಿ ಆಗಬೇಕಾಗಿದೆ. ಯಾವಾಗ ನಮ್ಮ ಅನ್ನವನ್ನು ಬೇರೆಯವರು ಕಿತ್ತುಕೊಳ್ಳುತ್ತಾರೆ ಆಗ ಕದನ, ಹೋರಾಟ ಅನಿವಾರ್ಯ. ನಾವೆಲ್ಲರೂ ಭಾರತೀಯರು, ಅವರು ತೆಗೆದುಕೊಂಡರೆ ಎನು ಅವರು ನಮ್ಮವರಲ್ಲವೇ ಅನ್ನೋ ಬುದ್ಧಿಜೀವಿಗಳು ತಮ್ಮ ಆಸ್ತಿಯನ್ನು ಬಡವರಿಗೆ ಬರೆದುಕೊಡುತ್ತಾರ ??. ಆ ಬಡವರು ಭಾರತೀಯರೆ ತಾನೆ, ಎಲ್ಲಾ ಭಾರತೀಯರು ಅಣ್ಣ ತಮ್ಮಂದಿರೇ ಅಲ್ಲವೇ ?.

ಅಂದ ಹಾಗೆ ಹುಡುಗಾಟದ ಹುಡುಗಿ ವರ್ಶ ತಮ್ಮ ಪರಿಚಯದಲ್ಲಿ ಹುಡುಗಾಟಕ್ಕೆ ಚಿಕ್ಕವೀರ ರಾಜೇಂದ್ರ ಪುಸ್ತಕವನ್ನು ದರಾ ಬೇಂದ್ರೆ ಬರೆದಿದ್ದು ಅಂತ ಹಾಕಿದ್ದಾರೆ. ಇದು ಹುಡುಗಾಟ ಅಂತ ಭಾವಿಸೋಣ.

Sunday, October 12, 2008

ಹೇಳೆ ಕನ್ನಡತಿ ಯಾಕೆ ನೀ ಹಿಂಗಾಡ್ತಿ ??

ಕನ್ನಡ ಮಾತನಾಡಲು ಬರುವದಿಲ್ಲ, ಕನ್ನಡಿಗರು ನನ್ನ ಆದರ್ಶರಲ್ಲ, ನನ್ನ ಗುರಿ ಕರ್ನಾಟಕವಲ್ಲ ಆದರೂ ನಾನು "ಕನ್ನಡದ ಮಗಳು", ಕರ್ನಾಟಕದ ರಾಯಭಾರಿ.
ಕನ್ನಡಿಗರ ಮಾನ ಒಂದು ಸ್ಪರ್ಧೆಯಲ್ಲಿ ಉಳಿಸಲು ನೀವು ನನ್ನ ಕೈ ಹಿಡಿಬೇಕು, ಒಂದು sms ಗೆ ರೂ ೩ ಖರ್ಚು ಮಾಡಿ ನನ್ನ ಗೆಲ್ಲಿಸಬೇಕು ಅನ್ನೋದು
ನಮ್ಮ ಕನ್ನಡತಿಯ ಅಂಬೋಣ.

ಯಾರಪ್ಪ ಈ ಕನ್ನಡತಿ ಎಂದರೆ, ದಿ ಗ್ರೇಟ್ ರಿತೀಷಾ ಪದ್ಮನಾಭ. ಸ್ಟಾರಪ್ಲಸ್ ನಲ್ಲಿ ನಡೆಯುವ ಅಮುಲ್ ವಾಯ್ಸ್ ಆಫ್ ಇಂಡಿಯಾದಲ್ಲಿ ಕರ್ನಾಟಕವನ್ನು
ಪ್ರತಿನಿಧಿಸುತ್ತ ಇರುವ ಹುಡುಗಿ. ಇವಳ ಅರ್ಕುಟ್ ಪ್ರೊಫೈಲ್ ಇಲ್ಲಾ ಇವಳ ವಾಯ್ಸ ಆಫ್ ಇಂಡಿಯಾ ಪ್ರೊಫೈಲ್ ನೋಡಿದರೆ ನಿಮಗೆ ಬೆಚ್ಚ ಬೆರಗಾಗುತ್ತದೆ, ಈ ಹುಡುಗಿಯಲ್ಲಿ
ಕನ್ನಡದ ಬಗ್ಗೆ ಕೀಳರಿಮೆ ಇರುವುದು ಸ್ಪಷ್ತ ಆಗುತ್ತದೆ. ಇದನ್ನು ಸಮರ್ಥಿಸಿಕೊಳ್ಳುವ ಜನರಿದ್ದಾರೆ ಬಿಡಿ, ಇದು ನ್ಯಾಷನಲ್ ಕಾರ್ಯಕ್ರಮ ಅಲ್ಲವಾ, ಕನ್ನಡ ಹಾಕಿದರೆ ಓಟ್ ಕಮ್ಮಿ ಬರಬಹುದೇನೊ
ಅಂತ ಹಾಕಿಲ್ಲ. ನಾಳೆ ಹೆಚ್ಚು ಓಟ್ ಸಿಗುತ್ತದೆ ಅಂದರೆ ಇವರು ಇನ್ನೊಬ್ಬರನ್ನು ಅಮ್ಮ ಅಂತ ಕರೆಯುತ್ತಾರಾ ?..

ಜನಾ ಹೈ ಬಾಲಿವುಡ್

ಗಮನಿಸಿ ನೋಡಿ, ಈ ಕನ್ನಡಿತಿಯ ಗುರಿ ಕರ್ನಾಟಕವಲ್ಲ, ಕನ್ನಡ ಹಾಡು ಹಾಡುತ್ತೆನೆ ಎಂದು ಎಲ್ಲೂ ಹೇಳಿಲ್ಲ, ಪ್ರಚಾರ ತಂತ್ರಕ್ಕೆ ಒಂದೆರೆಡು ಕನ್ನಡ ಹಾಡು ಹಾಡಿ ಅದನ್ನು ಯೂ-ಟ್ಯೂಬ್ ಮತ್ತು ಟಿ.ವಿಯಲ್ಲಿ
ಹಾಕಿಸಿದ್ದು ಬಿಟ್ಟರೆ, ಕಾರ್ಯಕ್ರಮ ಗೆದ್ದು ಇವಳು ಹಾಡಬೇಕೆಂದು ಬಯಸುವುದು ಬಾಲಿವುಡನಲ್ಲಿ, ಹಿಂದಿ ಹಾಡು ಹಾಡುವದಕ್ಕೆ ಇನ್ನೊಂದು ಸೇರ್ಪಡೆಯಾಗಬೇಕೆಂಬುದೆ ಇವಳ ಮಹದಾಸೆ.
ಒಂದು ರೀತಿಯಲ್ಲಿ ಕನ್ನಡಿಗ ಬೆಳೆಯಬೇಕು ಎಂದರೆ ನಮ್ಮ ನೆಲದಲ್ಲಿ ಜಾಗ ಇಲ್ಲ ಅನ್ನುವ ಇರಾದೆ ಇದೆ. ನಮ್ಮ ನೆಲದಲ್ಲಿ ಒಂದು ವೃತ್ತಿಯಲ್ಲಿ ಪ್ರಾವಿಣ್ಯತೆ ಪಡೆದರೆ ಬೇರೆ ಕಡೆಯಿಂದಲೂ ಜನ ಬಂದು ಅವಕಾಶ ಕೊಡುತ್ತಾರೆ
ಅನ್ನುವ ಸತ್ಯ ಯಾವಗ ತಿಳಿಯಬೇಕು?


ಕನ್ನಡಿಗ ಎಂದು ಹೇಳಿಕೊಳ್ಳಲು ಕೀಳರಿಮೆ ಯಾಕೆ ?

ಕನ್ನಡಿಗ ನನ್ನ ಆದರ್ಶರಲ್ಲ, ನನಗೆ ಕನ್ನಡ ಮಾತನಾಡಲು ಬರುವದಿಲ್ಲ, ಅಕಸ್ಮಾತ್ ಹಾಕಿದರೆ ಎಲ್ಲಿ ತಮಿಳರ ಓಟು ಸಿಗುವದಿಲ್ಲವೋ ಇಲ್ಲ ಜನ ಬಾಯಸಡ್ ಆಗುತ್ತಾರೆ ಅನ್ನೊ ಭಯವೋ ತಿಳಿಯದು. ಒಂದು ಸ್ಪರ್ಧೆ ಗೆಲ್ಲಬೇಕು ಎಂದರೆ
ಇಷ್ಟೆಲ್ಲಾ ನಾಟಕವಾಡಬೇಕೆ ?. ಕನ್ನಡಿಗರ ಮುಂದೆ ನಾನು ವೀರ ಕನ್ನಡತಿ ಎಂದು ಪೋಸ್ ಕೊಡುವುದು, ಅದೇ ಬೇರೆ ಭಾಷಿಕರ ಮುಂದೆ ನನ್ನ ಐಡೆಂಡಿಟಿ ಹಿಂದಿ, ಇಲ್ಲ ನಿಮ್ಮವಳು ಎಂದು ತೋರಿಸುವುದು ಒಂದು ತಂತ್ರ ಆಗಿದ್ದರೆ ಕನ್ನಡಿಗರು ಇವಳಿಗೆ ಪ್ರೊತ್ಸಾಹ ಕೊಟ್ಟು ಗೆಲ್ಲಿಸಬೇಕೆ ??

ಒಗ್ಗರಣೆ

ಇವಳ ಮೈಲ್ ಸಾಲುಗಳ ಮದ್ಯ ಓದಿದರೆ

I am extremely grateful to all of you, especially Kannadigas, for showering your love and support on me, and taking me to the top 7 in Amul Star Voice of India.
ನಾನು ನಿಮಗೆ ಅಭಾರಿ, ಅದರಲ್ಲೂ ಮೂರ್ಖ ಕನ್ನಡಿಗರೂ. ನಾನು ಸುಮ್ಮನೆ ಕನ್ನಡತಿ ಅಂತ ಹೇಳಿದಕ್ಕೆ ನನಗೆ ಪ್ರೀತಿ,ಪ್ರೊತ್ಸಾಹ ಕೊಟ್ಟು ನನ್ನ ಟಾಪ್ ೭ಕ್ಕೆ ತಂದಿದ್ದೀರಾ.

[quote] From here, the competition gets even tougher. I have the responsibility of keeping the honor of my state, Karnataka, on my shoulders. Karnataka has always been one of the pioneers in the field of music all through history of this country. I therefore request all of you to continue to support me with your votes, so that we can take Karnataka to the top, and make Karnataka the “Voice of India”.[/quote]

ಆದರೆ ಇಷ್ಟೆ ಸಾಲದು, ಇದು ಇನ್ನ ಕಷ್ಟ ಆಗುತ್ತದೆ, ನೀವು ಇನ್ನಾ ಮೂರ್ಖರಾಗಬೇಕು. ನಿಮಗೆ ಗೊತ್ತಿಲ್ವಾ ಕರ್ನಾಟಕದ ಗೌರವ ನನ್ನ ಹೆಗಲ ಮೇಲೆ ಇದೆ ( : )) lol ). ಕರ್ನಾಟಕ ಯಾವಗಲೂ ಸಾಧಕರ ತವರೂರು ಅನಿಸಿದೆ, ವಿವಿಧ ಸಂಗೀತದಲ್ಲಿ ಕರ್ನಾಟಕದವ್ರು ಚರಿತ್ರೆ ಬರೆದಿದ್ದಾರೆ( ಆದರೆ ನನಗೆ ಯಾರು ಅಂತ ಗೊತ್ತಿಲ್ಲ,ಇಲ್ಲಾ ನನ್ನ ಆದರ್ಶ ಅವರಲ್ಲ ಬಿಡಿ). ನಾಳೆ ನಾನು ಬಾಲಿವುಡ್ ನಲ್ಲಿ ದುಡ್ಡು ಮಾಡಬೇಕು ಎಂದರೆ ನನಗೆ ಇವತ್ತು ನೀವು ದುಡ್ಡು ಖರ್ಚು ಮಾಡಿ sms ಕಳುಹಿಸಬೇಕು. ಆಮೇಲೆ ನೀವ್ಯಾರೋ ನಾನ್ಯಾರೊ .. ಇಂತಿ ನಿಮ್ಮ ಕನ್ನಡತಿ.