ಮುಖ ೧ - ರಾಜಾ
ಸಾವಿಗೆ ಹೆದರುವನೇ ನಾ
ಇಲ್ಲಾ ಅದಕ್ಕೆ ಕಾದಿರುವನೇ ನಾ
ಬಂದರೆ ನಗುತ್ತಲೆ ಬರಮಾಡಿಕೊಳ್ಳುವೆ
ಜೀವನದ ಸಂಕೋಲೆಯನ್ನು ಬಿಚ್ಚಲು
ಶಾಂತಿಯ ಸಾಗರಕ್ಕೆ ಒಯ್ಯಲು
ಬಂಧು ಬಳಗದ ಸೆಳೆತಕ್ಕೆ ಸಿಕ್ಕಿಸದೇ
ನೆಮ್ಮದಿಯಿಂದ ಕರೆದೊಯ್ಯಿ ನನ್ನನ್ನು ಎಂದು
ಬಾರಿ ಬಾರಿ ಕೂಗಿದೆ, ಕರೆದೆ ನಿನ್ನ
ನೀನು ಬರಲಿಲ್ಲ
ಬೇಗುದಿಯಿಂದ ನಿನ್ನ ಸೇರಲು ಬಂದರೆ
ನೀನು ಬಿಡಲಿಲ್ಲ,
ಕಳುಹಿಸಿದೆ ನನ್ನ
ಬಂದಿರುವೆ ಇಂದು .. ಬಾ ನಿನಗೆ ಸ್ವಾಗತ.
ಮುಖ ೨ - ರಾಣಿ
ಕರೆಯದಿದ್ದರೂ ಬಂದಿರುವೆಯಲ್ಲಾ
ಓ ಕ್ರೂರವಿದಿಯೇ.
ಪ್ರಿಯತಮೆಯಿತ್ತ ಚುಂಬನವಿನ್ನೂ ಆರಿಲ್ಲ
ನಾ ಕಟ್ಟುತ್ತಿರುವ ಅರಮನೆ ಇನ್ನೂ ಮುಗಿದಿಲ್ಲ
ಯಾಕೆ ಕಾಡುತ್ತಿರುವೆ
ಬೇಡವೆಂದರೂ ಯಾಕೆ ಬರುವೆ
ನಾನಿಲ್ಲದೆ ಹೇಗಿರುವುದು ನನ್ನ ಸಂಸಾರ
ಯಾರು ಹೋರುವುರು ಅದರ ಭಾರ
ನಿನ್ನ ಲೆಕ್ಕ ತಪ್ಪಿ ಬಂದೆಯಾ
ನಿನ್ನ ಜಪಿಸುವರ ಬಳಿ ಹೋಗು
1 comment:
yaako ee thara poems barilikke shuru madide ... adu ee sanna vayassinalli :-)
chennagiwe ella hosa postings
Post a Comment