(೧)
ಕಣ್ಣಿನಲ್ಲಿ ಹುಟ್ಟಿ,
ಹೃದಯದಲ್ಲಿ ಇರುವೆ.
ಅರಳುವೆ ನಾ ಅಕ್ಕರೆಯಿಂದ,
ಬೆಳೆಯುವೆ ನಾ ನಂಬಿಕೆಯಿಂದ,
ಶಾಂತಿಗೆ ಬುನಾದಿ.
ನಾನೇ ಅನಾದಿ
ತರುವೆ ಸುಂದರ ಕನಸುಗಳ,
ಬೆಸೆಯುವೆ ನಾ ಮನಗಳ,
ನಾ ಇದ್ದರೆ ಇಲ್ಲ ಭಯ
ನನ್ನಿಂದಲೆ ನಡೆಯುವುದು ಲಯ
ನನ್ನ ಸಲುವಾಗಿ ಆದವು
ತ್ಯಾಗ ಬಲಿದಾನಗಳು
ಕಾಲುವೆಯಾಗಿ ಹರಿದವು ರಕ್ತ ಕಂಬನಿಗಳು
ಜಾತಿ-ಧರ್ಮ ನನ್ನ ಕಂಗೆಡಿಸಿಲ್ಲ,
ಬಡವ-ಬಲ್ಲಿದದ ಭೇದ ನನಗಿಲ್ಲ.
ಸ್ವಾರ್ಥ,ಅಸೂಯೆ ನನ್ನ ಕೊಂದರು,
ಮತ್ತೆ ಹುಟ್ಟುವೇ ನಾ ಯಾರೇ ಎನೇ ಅಂದರೂ
ನಾನೇ ಸತ್ಯ
ನಾನಿಲ್ಲದೇ ಲೋಕವೇ ಮಿಥ್ಯ.
ನಾನೇ ಪ್ರೀತಿ,
ನನ್ನದು ಹಲವು ರೀತಿ.
(೨)
ನಾನು ಅವನು ಆಗಿದ್ದೆವು
ಗೆಳೆಯರು.
ಬಿರುಕು ತಂದಿತು ನಮ್ಮಲ್ಲಿ
ಸ್ವಾರ್ಥ
ನನ್ನ ದ್ವೇಷಿಯಾದ ಅವ
ಅಮೃತಧಾರೆ ನಾ ಕುಡಿಸಲು ಹೋದರೆ
ಮದಿರೆಯ ನಂಜಿಗೆ ಬಿದ್ದ
ಕಮರಿದ ಕಂಗಳು,
ಬತ್ತಿ ಹೋದ ಕೆನ್ನೆ
ಮಾಸಲು ಗಡ್ಡ
ಎನೋ ಹುಡುಕುವ ಆಲೋಚನೆ
ಹೆಸರು ಕೊಟ್ಟಿದ್ದರು ಅವನಿಗೆ ದೇವದಾಸು,
ದೂರ ಹೋದ ಅವನು
ಸೇರಿದ ವಿರಹ-ಹತಾಷೆಗಳ ತೋಳಿನಲ್ಲಿ.
ನಾ ಕೂಗಿದೆ ಅವನನ್ನು ಬೆಳಕಿನೆಡೆಗೆ
ಅವನು ಕೇಳಲಿಲ್ಲ, ವೈಫಲ್ಯ ಸೆಳೆಯಿತು
ಅವನನ್ನು ಕತ್ತಲೆಡೆಗೆ.
ನಾ ಕೊಡಲು ಹೋದ ನಾಳೆಯ ಉಡುಗೊರೆಯನ್ನು
ಪಡೆಯದೆ, ಕೆದಕುತ್ತಿದ್ದ ಗತ ಜ್ಞಾಪಕಗಳ
ಕಾದಿರುವೆ ನಾ ಅವನಿಗಾಗಿ
ಹೇಳಲು ಪ್ರೀತಿ ಇರುವುದೇ ನಿನಗಾಗಿ.
No comments:
Post a Comment