Sunday, November 05, 2006

ಗಾದೆಗಳು-೨

ಗಾದೆಗಳಲ್ಲಿ ವಿಭಿನ್ನತೆ
------------------------
ಹಿಂದೆ ಹೇಳಿದ ಹಾಗೆ ಗಾದೆ ಒಂದು ಸಂಧರ್ಬಕ್ಕೆ ಅನುಸಾರವಾಗಿ ಹುಟ್ಟು ಪಡೆದಿರುತ್ತದೆ. ಕನ್ನಡದಲ್ಲಿ ಬಂದಿರುವ ಗಾದೆಗಳ ಸಂಧರ್ಬಗಳನ್ನು
ಗಮನಿಸೋಣ.

ಕಿಲಾಡಿತನ:-
ಕೆಲವರು ಸ್ವಾಭವಿಕವಾಗಿ ಬುದ್ಧಿವಂತರಾಗಿರುತ್ತಾರೆ, ಅಂತವರ ಸಾನಿಧ್ಯದಲ್ಲಿ ಹೆಣೆದ ಗಾದೆ ಮಾತುಗಳನ್ನು ನಾವು ಕಾಣಬಹುದು.
ಉದಾ:- ಚಾಪೆ ಕೆಳಗೆ ತೂರಿದರೆ, ರಂಗೋಲಿ ಕೆಳಗೆ ತೂರಿದರಂತೆ.
ಕೆಲವರು ಬಹಳ ಚೆನ್ನಾಗಿ ಮಾತು ಕಲಿತಿರುತ್ತಾರೆ, ಅಂತವರು ಎಲ್ಲರ ಮನಸ್ಸನ್ನು ಗೆದ್ದಿರುತ್ತಾರೆ
"ಮಾತು ಬಲ್ಲವನಿಗೆ ರೋಗವಿಲ್ಲ" ಅಂತ ಇದಕ್ಕೆಹೇಳಿರುತ್ತಾರೆ. ಕೆಲವರು ಏನು ಪ್ರಶ್ನೆ ಕೇಳಿದರೂ ಸುತ್ತಿಕೊಂಡು ಬಳಸಿ
ಅದನ್ನೆ ಉತ್ತರ ಕೊಡುತ್ತಾರೆ. "ಅಳಿಯ ಅಲ್ಲ್ಲ, ಮಗಳ ಗಂಡ" ಅನ್ನುವುದು ಇಂತವರ ಮೇಲೆ ಹೆಣೆದ ಗಾದೆ.

ಮಳ್ಳಿ ಮಳ್ಳಿ ಮಂಚಕೆ ಎಷ್ಟು ಕಾಲು ಅಂದರೆ, ಮೂರು ಮತ್ತೊಂದು ಅನ್ನುವ ಬುದ್ಧಿವಂತರ ಕುರಿತು ಹೆಣದಿರುವ ಗಾದೆ.

ಸಾಮಾಜಿಕ ಸೇವೆ:-
ನಮ್ಮ ಸಂಸ್ಕೃತಿಯಲ್ಲಿ ದಾನ-ಧರ್ಮಕ್ಕೆ ಬಲು ಮಹತ್ವವಿದೆ. ಅದಕ್ಕೆ ಅನುಸಾರವಾಗಿ ಅದನ್ನು ಗಾದೆಗಳ ಮೂಲಕ ಪ್ರಚಾರ ಮಾಡಲಾಗಿದೆ.
ಉದಾ:- ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ"
"ಹಣ್ಣು ಹಂಚಿ ತಿನ್ನು, ಹೂವು ಕೊಟ್ಟು ಮುಡಿ"

ಬೇಡದ್ದು ಸಿಕ್ಕಾಗ
------------------
ಅನೇಕ ಬಾರಿ ನಮ್ಮ ಜೀವನದಲ್ಲಿ ಬೇಡದ್ದು ಸಿಗುತ್ತದೆ, ಸಿಕ್ಕಾಗ ಅದನ್ನು ಅನುಭವಿಸೋ ಇಷ್ಟ ಆಗಲಿ , ಶಕ್ತಿ ಆಗಲಿ ಇರುವದಿಲ್ಲ. ಅಂತಹ
ಒಂದು ಸಂಧರ್ಬಕ್ಕೆ ಅನುಸಾರವಾಗಿ ಕೆಲ ಗಾದೆಗಳನ್ನು ಕಾಣಬಹುದು.
"ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲು ಇಲ್ಲ"
"ಊಟಕ್ಕೆ ಇಲ್ಲದ ಉಪ್ಪಿನಕಾಯಿ, ತಂಗಳಿಗೆ ಸಮಾನ"

ಕೈ ಸಿಕ್ಕಾಗ ಬಿಡಬೇಡ
==============
ಈ ವೇದಾಂತವು ನಮ್ಮ ಅನೇಕ ಗಾದೆಗಳಲ್ಲಿ ಕಂಡು ಬರುತ್ತದೆ.
ಉದಾ:- "ಗಾಳಿ ಬಂದಾಗ,ತೂರಿಕೋ"
"ಸಿಕ್ಕಾಗ ಸೀರುಂಡೆ".

ಆಷಾಡಭೂತಿ
========
ನಮ್ಮ ಜನರು ಹೇಳಿದ ಹಾಗೆ ನಡೆಯುವುದು ಬಲು ಅವರೂಪ, ಅಂತಹ ಊಸರವಳ್ಳಿ ಜನರ ಮೇಲೆ ಕೆಲ ಗಾದೆಗಳು ರಚಿತವಾಗಿದೆ.
"ಹೇಳೊಂದು ಒಂದು, ಮಾಡೊದು ಇನ್ನೊಂದು"
"ಮಾಡೊದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ
"ದೀಪದ ಕೆಳಗೆ ಕತ್ತಲೆ"
"ಆಚಾರ ಹೇಳೋಕ್ಕೆ ಬದನೆಕಾಯಿ ತಿನ್ನೊಕ್ಕೆ"


ವ್ಯವಸಾಯ
=======
ನಮ್ಮ ದೇಶದ ಬೆನ್ನೆಲಬು ಆಗಿರುವ ವ್ಯವಸಾಯದ ಮೇಲೆ ಗಾದೆಗಳನ್ನು ಕಾಣಬಹುದು.
" ಬಾಳೆ ಬಗೆದು ಹಾಕು, ತೆಂಗು ತೇಲಿ ಹಾಕು"
"ತಗ್ಗು ಗದ್ದೆಗೆ ಮಾರು ಬೆಳೆ, ಎತ್ತರ ಗದ್ದೆಗೆ ಒಂದೇ ಬೆಳೆ"
"ಕಬ್ಬು ಸೊಟ್ಟದಿದ್ದರೆ, ಸಕ್ಕರೆ ಸೊಟ್ಟೆ"

ನಾಗರೀಕತೆ
=======
ನಮ್ಮ ನಗರ ಬೆಳೆದ ಹಾಗೇ, ನಮ್ಮ ನಾಗರೀಕತೆ ಮಹತ್ವ ಪಡೆದಿದೆ. ಹಾಗೇ ನಮ್ಮ ಜನರಲ್ಲಿ ನಗರದ ಬಗ್ಗೆ ಗೌರವ ಮತ್ತು ಆದರ ಮೂಡಿಸಿದೆ.
ಉದಾ:- "ಕೆಟ್ಟು ಪಟ್ಟಣ ಸೇರು"

ಇದಕ್ಕೆ ಇಂಗ್ಲೆಡಿನಲ್ಲಿ "No Venture, No Gain" ಹೇಳುತ್ತಾರೆ.

ಸಂಪ್ರದಾಯ ಮತ್ತು ಕುಟುಂಬ
--------------------------------
ನಮ್ಮ ಹಿಂದಿನ ಸಮಾಜದಲ್ಲಿ ದೊಡ್ಡ ಕುಟುಂಬಗಳು ಇರುತ್ತಿದ್ದವು,ಅದರಲ್ಲೂ ಹೆಚ್ಚು ಮಕ್ಕಳಿರುವ ಸಂಸಾರದಲ್ಲಿ
ದೊಡ್ಡ ಮಗನ ಮೇಲೆ ಅವಲಂಬಿತರಾಗುತ್ತಿದ್ದರು. ಅದನ್ನು ನೋಡಿ ಕೆಳಕಂಡ ಗಾದೆ ಮಾಡಿರಬಹುದು.
"ಬಾಗಿಲಿಗೆ ಹೊಸಲಾಗಬೇಡ, ಮನೆಗೆ ಹಿರಿ ಮಗನಾಗಬೇಡ"
ಇದರಲ್ಲಿ ಗಮನಿಸಬೇಕಾದ ಅಂಶ ಅಂದರೆ, ಹೇಗೆ ಹೊಸಲನ್ನು ಎಲ್ಲಾ ಮೆಟ್ಟಿ ನಡೆಯುತ್ತಾರೊ,ಹಾಗೇ ಹಿರಿಮಗನ ಮೇಲೆ ಸಂಸಾರ ಭಾರ ಹೆಚ್ಚು.

"ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ" ಇದೂ ಕೂಡ ಹಿಂದಿನ ಸಂಸಾರದಲ್ಲಿ ಇದ್ದ ಸಂಪ್ರದಾಯಕ್ಕೆ ಅನುರೂಪವಾಗಿದೆ.


ನಿಷಿದ್ಧ
====
ಮಾಡಬಾರದ ಸಮಯದಲ್ಲಿ ಕೆಲಸಗಳ ಬಗ್ಗೆ ಅನೇಕ ಗಾದೆಗಳು ತಿಳಿ ಹೇಳುತ್ತವೆ.
* ಎಂದೂ ಓದದ ಮಾಣಿ, ಅಮವಾಸೆ ದಿನ ಓದಿದನನಂತೆ
* ಅಮವಾಸೆ ದಿನ ಗಂಡು ಹುಟ್ಟಿದನಂತೆ
* ಮಂಗಳವಾರ ಮಗಳ ಕಳಿಸಬೇಡ,ಸೋಮವಾರ ಸೋಸೆ ಕಳಿಸಬೇಡ.


ಮಿತಿ
====
ಕೆಲವರಿಗೆ ತಮ್ಮ ಕೈನಲ್ಲಿ ಆಗದಿದ್ದರೂ ಬಾಯಿ ಮಾತಿನಲ್ಲಿ ತುಂಬಾ ಹೇಳಿಕೊಳ್ಳುತ್ತ್ತಾರೆ. ಅಂತಹ
ಜನರ ಮೇಲೆ ಆಧರಿತ ಕೆಲ ಗಾದೆಗಳನ್ನು ನಾವು ಕಾಣಬಹುದು.
* ಉತ್ತರನ ಪೌರುಷ ಒಲೆ ಮುಂದೆ
* ಅಟ್ಟಕ್ಕೆ ಹಾರದವಳು, ಆಕಾಶಕ್ಕೆ ಹಾರುತ್ತಾಳೆಯೇ ?
* ಕೈಲಾಗದವನು ಮೈ ಪರಚಿಕೊಂಡ
* ಮನೆಲಿ ಹುಲಿ ,ಬೀದಿಲಿ ಇಲಿ

ಯಾರದೋ ತಪ್ಪಿಗೆ, ಇನ್ಯಾರಿಗೋ ಶಿಕ್ಶೆ
========================
ಅನೇಕ ಬಾರಿ ಇದನ್ನು ನಾವು ನೋಡುತ್ತೆವೆ, ತಪು ಮಾಡಿಲ್ಲದೇ ಶಿಕ್ಶೆ ಅನುಭವಿಸುವರನ್ನು
ನೋಡುತ್ತೆವೆ.
* ಎತ್ತಿಗೆ ಜ್ವರ ಬಂದರೆ,ಎಮ್ಮೆಗೆ ಬರೆ ಹಾಕಿದರಂತೆ
* ಮಗಳಿಗೆ ಧಾರೆ, ಅಪ್ಪನಿಗೆ ಶೋಭನ.

ಅವಸರ
=====
ಕಲವರು ಬಹಳ ಅವಸರ ಮಾಡಿಕೊಳ್ಳುತ್ತಾರೆ,ಅವಸರದಿಂದ ಕೆಲಸ ಹಾಳು ಮಾಡಿಕೊಳ್ಳುತ್ತ್ತಾರೆ.
"ಆತುರಗಾರನಿಗೆ ಬುದ್ಧಿ ಮಟ್ಟು"
"ಅವಸರದ ಆಂಜನೇಯ,ಆರು ತಿಂಗಳಿಗೆ ಹುಟ್ಟಿದವನು"
"ಕೂಸು ಹುಟ್ಟುವ ಮುನ್ನ , ಕುಲಾವಿ ಹೊಲಸಿದರಂತೆ"

7 comments:

Shiv said...

ಚುಂಬನವಾಸಿಗಳೇ,

ಗಾದೆಗಳ ಬಗ್ಗೆ ಸಾಕಷ್ಟು ವಿಶ್ಲೇಷಣೆ ಮಾಡಿದ್ದೀರಾ.
>ಮಂಗಳವಾರ ಮಗಳ ಕಳಿಸಬೇಡ,ಸೋಮವಾರ ಸೋಸೆ ಕಳಿಸಬೇಡ.
ಈ ಗಾದೆ ಬಗ್ಗೆ ಯೋಚಿಸ್ತಾ ಇದ್ದೆ..ಮಂಗಳವಾರ ಲಕ್ಷ್ಮಿವಾರ ಅಂತಾ ಕರಿತಾರೆ ಅನಿಸುತ್ತೆ..ಅದಕ್ಕೆ ಮಗಳ ಕಳಿಸಬೇಡ ಅಂದಿರಬೇಕು.ಆದರೆ ಸೋಮವಾರದ ವಿಶೇಷ ಏನು?
ಪ್ರಾಸಕ್ಕೆ ಹಾಗೆ ಹೇಳಿದರೋ ಹೇಗೋ?

Enigma said...
This comment has been removed by a blog administrator.
Enigma said...

ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ

nimma barahadalli iddu thappagi achagide sari padisi dayavithu

Enigma said...

nanna bali kelavu gadhegala sangraha ide kalisale?

ಪವ್ವಿ said...

ಶಿವ್,
ಇರಬಹುದು,ಅನೇಕ ಗಾದೆಗಳು ಕಾಲಗರ್ಭದಲ್ಲಿ ಆರ್ಥ ಕಳೆದುಕೊಳ್ಳುತ್ತವೆ. ಅದರಲ್ಲಿ ಇದು ಒಂದು ಇರಬಹುದು ಇಲ್ಲಾ ನೀವು ಹೇಳಿದ ಹಾಗೆ ಪ್ರಾಸಕ್ಕೆ ಮಾಡಿರಬಹುದು.

ಪವ್ವಿ said...

ಎನಿಗ್ಮಾ,
ಬಹಳ ಧನ್ಯವಾದ, ಗಾದೆಗಳ ಸಂಗ್ರಹ ಕಳುಹಿಸಿ ನೋಡೊಣ.
ಕನ್ನಡದಲ್ಲಿ ಮೊದಲು ಪ್ರಕಟಣೆ ಆದ ಗಾದೆಗಳ ಸಂಗ್ರಹಕ್ಕೆ ಕೈ ಹಾಕಿದ್ದೆನೆ,ನೋಡೋಣ ಸಿಕ್ಕರೆ ಚೆನ್ನಾಗಿರುತ್ತದೆ.
ಕಾಲಗರ್ಭದಲ್ಲಿ ಗಾದೆಗಳ ಬದಲಾವಣೆ ಬಗ್ಗೆ ಬರೆಯಬಹುದು.

ಶ್ರೀನಿಧಿ.ಡಿ.ಎಸ್ said...

ಗಾದೆಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಿ, ಸೊಗಸಾದ ಬರಹ. ಒಂದೊಂದು ಗಾದೆ ಬಗ್ಗೆಯೂ ಇನ್ನೂ ವಿಶ್ಲೇಷಣೆ ಮಾಡಬಹುದು ಬೇಕಾದರೆ.

ಖುಶಿಯಾಯ್ತು.