Sunday, November 05, 2006

ಗಾದೆಗಳು -೧

ಗಾದೆಗಳನ್ನು ಬಳಸದೆ ಇರುವನು ಬಹಳ ಅಪರೂಪ. ಪ್ರತಿ ಭಾಷೆಯಲ್ಲಿ ಇದು ಒಂದು ಪ್ರಮುಖ ಪಾತ್ರವನ್ನು ಪಡೆದಿದೆ ಗಮನಿಸಿದರೆ
ಗಾದೆಗಳು ಒಂದು ಸಂದರ್ಭಕ್ಕೆ ಹುಟ್ಟಿ , ಬಾಯಿಂದ ಬಾಯಿಗೆ ಜನರಿಂದ ಜನರಿಗೆ ಹರಡಿ ತಮ್ಮ ಜೀವಿತವನ್ನು ಉಳಿಸಿಕೊಂಡಿದೆ,ಅದ್ದರಿಂದ ಹೇಗೆ ಸಮುದ್ರದಲ್ಲಿ ಮೊದಲ ಅಲೆ ಯಾವುದು ಎಂದು ಕಂಡು ಹಿಡಿಯಲು ಆಗದೋ, ಹಾಗೆ ಗಾದೆ ಮಾತುಗಳ ಹುಟ್ಟು ಮತ್ತು ನಿಖರತೆಯನ್ನು ತಾಳೆ ಎಳೆಯುವುದು ಆಗದ ಕೆಲಸ.

ಮೊದಲಿಗೆ ಗಾದೆ ಎಂದರೆ ಎನು ?
ಈ ಶಬ್ಧವು ಪ್ರಾಕೃತದ ಗಾಹೆ ಎಂಬ ಶಬ್ಧದಿಂದ ಹುಟ್ಟಿದೆ, ನಿಮಗೆ ಗೊತ್ತಿರಬಹುದು, ದ್ರಾವಿಡ ಭಾಷೆಗಳಲ್ಲಿ ಪ್ರಾಕೃತ ಭಾಷೆಯ ಶಭ್ದಗಳು ತುಂಬಾ.ಕನ್ನಡದಲ್ಲಿ "ನಾಣ್ ನುಡಿ" ಅಂತ ಕೂಡ ಕರೆಯುತ್ತಾರೆ.
ಅಂದರ ನಾಡ ನುಡಿ ಎಂದು ಅರ್ಥ.

ಹಾಗದರೆ ಒಂದು ಮಾತು ಗಾದೆ ಅನಿಸಲು ಇರಬೇಕಾದ ಲಕ್ಷಣಗಳೇನು ??

೧) ಜನರಾಡಿ ಪಳಗಿದ ಮಾತು, ಅಂದರ ಆ ಮಾತು ಒಬ್ಬನ ಜೀವನಕ್ಕೆ ಸಂಬಂಧಿಸದೇ, ಪ್ರತಿಯೊಬ್ಬ ಮನುಷ್ಯನಿಗೂ ಅನ್ವಯವಾಗುವ ಹಾಗೆ ಇದ್ದರೆ
ಅದು ಗಾದೆ ಮಾತು ಆಗುತ್ತದೆ. ಅದ್ದರಿಂದಲೇ ಜನರಿಗೆ ಗಾದೆ ಮಾತಿನ ಮೇಲೆ ಅಷ್ಟು ನಂಬಿಕೆ. ಬರೀ ಇಂದಿನ ಪೀಳಿಗೆಗೆ ಸೀಮಿತವಾಗದೆ,ಮುಂದಿನ
ಪೀಳಿಗೆಯನ್ನು ಒಳಗೊಂಡ ಈ ಮಾತುಗಳು ಕಾಲತೀತವಾದವು. ಕನ್ನಡದಲ್ಲಿ " ವೇದ ಸುಳ್ಳಾದರೂ, ಗಾದೆ ಮಾತು ಸುಳ್ಳಾಗದು" ಎಂಬ
ಭರವಸೆಯ ಗಾದೆ ಮಾತನ್ನು ಹೇಳಿದ್ದಾರೆ.

NO VOICE IS WHOLLY LOST WHICH IS THE VOICE OF MANY MEN. ಎಂದು ಅರಿಸ್ಟಾಟಲ್ ಹೇಳಿದ್ದ, ಅಂದರ
ಶತಮಾನಗಳು ಉರುಳಿದರೂ ಗಾದೆಗಳಿಗೆ ಸಾವಿಲ್ಲ ಅಂತ.

೨) ಚಿಕ್ಕದಾಗಿ ಇರಬೇಕು ಮತ್ತು ಚೊಕ್ಕವಾಗಿ ಇರಬೇಕು
ಜನಮನರ ನಾಲಿಗೆಯಲ್ಲಿ ಉಳಿಯಬೇಕಾದರೆ ಅದು ಕಷ್ಟವಾಗಿ ಇರದೇ ಬಹಳ ಸುಲಭ ಮತ್ತು ಅರ್ಥಗರ್ಭಿತವಾಗಿರಬೇಕು.ಇದು ನಮ್ಮ ಜನ ಜೀವನದ ಒಂದು
ಮುಖವನ್ನು ಪ್ರತಿಭಿಂಬಿಸಬೇಕು. ಮತ್ತು ಆ ಸಂದರ್ಭ ಬಂದರೆ ಜನರಲ್ಲಿ ಹೌದು ಇದೇ ಸರಿಯಾದ ನುಡಿ ಅಂತ ಅನಿಸಬೇಕು,ಆಗಲೇ ಅದು ಗಾದೆ ಮಾತು ಆಗುವುದು.
"ಅಂಗೈ ಹುಣ್ಣಿಗೆ ಕನ್ನಡಿ ಬೇಕೆ" ಈ ಗಾದೆ ಮಾತು ಬಹಳ ಸುಲಭವಾಗಿದೆ ಮತ್ತು ಬಹಳ ಅರ್ಥಪೂರ್ಣವಾಗಿದೆ.

No comments: