Thursday, May 25, 2006
Councelling(ಮಾರ್ಗದರ್ಶನ) ಅವಶ್ಯಕತೆ .....
ಪಿ.ಯು.ಸಿ ಫಲಿತಾಂಶದ ನಂತರ ಬೆಂಗಳೂರಿನಲ್ಲೇ ಸುಮಾರು ೧೦-೧೨ ಆತ್ಮಹತ್ಯ ಪ್ರಕರಣಗಳು ಬೆಳಕಿಗೆ ಬಂದಿವೆ. ನಿಜಕ್ಕೂ ಮನಸ್ಸಿಗೆ ಆ ಸುದ್ದಿಗಳನ್ನು ಕೇಳಿ ಪಿಚ್ಚು ಅನಿಸುತ್ತದೆ. ಯಾಕೆ ಬದುಕಿ ಬಾಳಬೇಕಾದ ಹೂವುಗಳು ಹೀಗೆ ಮಾಡಿಕೊಂಡವು ಅಂತ ಬೇಸರವಾಗುತ್ತದೆ. ಪಿ.ಯು.ಸಿ ಹೋಯಿತು ಅಂದರೆ ಜೀವನ ಮುಳುಗಿ ಹೋಗಿಲ್ಲ, ಇಂದು ಅನೇಕ ವೃತ್ತಿಗಳನ್ನು ತೆಗೆದುಕೊಳ್ಳಬಹುದು. ಅದರಲ್ಲಿ INTERIOR DESIGNING ಪ್ರಮುಖವಾದುದು.
ಇದಕ್ಕೆ ಪೂರಕವಾಗಿ ಪದವಿ ಮುಗಿಸಿ ಕೆಲಸವನ್ನು ಅರಿಸುವ ಜನರು, ಕೆಲಸ ಸಿಗಲಿಲ್ಲ ಅಂತ ಗೊತ್ತಾದರೆ ಬೇಗ ಮನೋವೈಫಲ್ಯಕ್ಕೆ ಈಡಾಗಿ ಆತ್ಮಹತ್ಯಗೆ ಶರಣಾಗುತ್ತಾರೆ. ಅನೇಕ ಕಡೆ ನಿಮಗೆ ಕೇಳಿರಬಹುದು ನಮ್ಮವರಿಗೆ ಕೆಲಸ ಸಿಗುತ್ತಿಲ್ಲ ಅಂತ, ಆದರೆ ಒಬ್ಬರು ಯಾಕೆ ಸಿಗುತ್ತ್ತಿಲ್ಲ, ಚಿಕ್ಕ ಊರುಗಳಿಂದ ಬಂದವರಿಗೆ ಎನು ತರಬೇತಿ ಕೋಡಬೇಕು ಎಂಬುದರ ಬಗ್ಗೆ
ಯೋಚಿಸದೆ ಇದ್ದಾಗ, ಎಲೆ ಮರೆಕಾಯಿಯಾಗಿ ಇದಕ್ಕ್ಕೆ ಕೆಲಸ ಮಾಡುತ್ತಿರುವ ಬನವಾಸಿ-ಬಳಗಕ್ಕೆ ಅಭಿನಂದನೆ ಸಲ್ಲಿಸಬೇಕು.
ಬೆಂಗಳೂರಿಗೆ ಬಂದು ಉದ್ಯೋಗವನ್ನು ಅರಸುವ ಕನ್ನಡಿಗರಿಗೆ ವೃತ್ತಿ ಮಾರ್ಗದರ್ಶನ ಮಾಡಿ, ನಮ್ಮ ಜನರಿಗೆ ಕೆಲಸ ಸಿಗಲು ಬನವಾಸಿ ಬಳಗ ದುಡಿಯುತ್ತಲೆ ಇದೆ. ಇಲ್ಲಿಯವರೆಗೆ 7 ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಮಾಡಿ ಸುಮಾರು ೧೦೦+ ಜನರಿಗೆ ಕೊಡಿಸಲು ನೆರವಾಗಿದೆ. ಈ ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ೫೦೦+ ಹೆಚ್ಚು ಫಲಾನುಭವಿಗಳಾಗಿದ್ದಾರೆ. ಇದರಲಿ ಬಿ.ಇ, ಬಿ.ಕಾಂ, ಬಿ.ಎಸ್ಸಿ ಪದವಿಯನ್ನು ಪಡೆದ ಅನೇಕ ಪದವಿಧರರು ಇದ್ದಾರೆ. ಕರ್ನಾಟಕದ ಪ್ರತಿ ಜಿಲ್ಲೆಗೂ ಈ ಕಾರ್ಯಕ್ರಮವನ್ನು ತೆಗೆದುಕೊಂಡು ಹೋಗುವುದು ಅವರ ಆಸೆ, ಇದಕೆ ಪೂರಕವಾಗಿ ಒಂದು ಕಾರ್ಯಕ್ರಮ ಮೈಸೂರಿನಲ್ಲಿ ನಡೆದಿದೆ.
೮ನೇ ವೃತ್ತಿ ಮಾರ್ಗದರ್ಶನದ ಆಹ್ವಾನಪತ್ರವನ್ನು ನಾನು ಇಲ್ಲಿ ಲಗತ್ತಿಸಿದ್ದೇನೆ. ಇದರ ಜೊತೆಗೆ ಇಂದಿನ ಪಿ.ಯು.ಸಿಯಲ್ಲಿ ನೊಂದವರಿಗೆ councelling ಮಾಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಿದರೆ ಒಳ್ಳೆಯದು.
(ಚಿತ್ರಗಳು ಕೃಪೆ:- ಬನವಾಸಿ ಬಳಗ)
3 comments:
maahiti kottidakke bagaLa thanks.
ಪವ್ವಿ ಅವರೆ,
ವಿದ್ಯಾರ್ಥಿಗಳಿಗಾಗಿ ಮತ್ತವರ ಪಾಲಕರಿಗಾಗಿ ಉಪಯುಕ್ತ ಮಾಹಿತಿ ನೀಡಿದ್ದೀರಿ.
ಅದೆಲ್ಲಾ ಇರ್ಲಿ, ಈಗಿನ ವಿದ್ಯಾರ್ಥಿಗಳಿಗಾಗಿ ನೀವು ಕೂಡ ನಿಮ್ಮ ಬ್ಲಾಗ್ ಹೆಸರಲ್ಲೇ (ಚುಂಬನವೇ ವಾಸಿ) ಬಳಗವೊಂದನ್ನು ಆರಂಭಿಸಬಾರದೇಕೆ?
ಸ್ವಾಮಿ ಅಸತ್ಯಾನ್ವೇಷಿಗಳೇ,
ಮೊದಲ್ ಚುಂಬನದಲ್ಲಿ ದಂತ ಭಗ್ನ ಹೇಗೆ ಆಗಬಾರದು ಅಂತ ಮಾರ್ಗದರ್ಶನ ಮಾಡಲು ನಾನು ಸಿದ್ದ, ಆದರ ಇಂದಿನ ಪೀಳಿಗೆ "ದಂತ ಭಗ್ನವೇ" ಪಾಲಿಗೆ ಬಂದಿದ್ದೆ PUNCH-ಮೃತಾ ಅಂತ ನಂಬಿದರೆ ಏನು ಮಾದುವುದು ಹೇಳಿ.
Post a Comment