ಗೋತ್ರ ನೋಡುವುದು ಸರಿಯೇ??
ಹುಡುಗ/ಹುಡುಗಿ ಮದುವೆಯ ವಯಸ್ಸಿಗೆ ಬಂದರೆ ಇಲ್ಲಾ ಮನೆಯಲ್ಲಿ ವದು-ವರ ಬೇಟೆ ಶುರುವಾದರೆ ಸಾಕು, ದೂಳು ಹಿಡಿದಿರುವ ಜಾತಕ ಅಟ್ಟದಿಂದ ಆಚೆ ಬರುತ್ತದೆ,
ಎತ್ತದ,ಓದು, ಕೆಲಸ,ಗೊತ್ರ ಮತ್ತು ನಕ್ಷತ್ರಗಳು ತಂದೆ ತಾಯಿಗಳಿಗೆ ಕಂಠಪಾಠವಾಗುತ್ತದೆ.
ಇನ್ನೂ ಸಂಬಂಧಗಳು ಬರಲು ಶುರುವಾದರೆ ಮೊದಲು ಕೇಳುವ ಪ್ರಶ್ನೆ ನಿಮ್ಮ ಗೋತ್ರ ಯಾವುದು ??
ಆ ಉತ್ತರದ ಮೇಲೆಯೇ ಮುಂದಿನ ಸಂಭಾಷಣೆ ನಡೆಯುತ್ತದೆ. ಹಾಗಿದ್ದರೆ ಈ ಗೋತ್ರ ಅಷ್ಟು ಮುಖ್ಯವೇ ??
ಮೊದಲಿಗೆ ಗೋತ್ರ ಯಾಕೆ ನೊಡುತ್ತಾರೆ ಎಂದು ತಿಳಿಯೊಣ.
ಈ ಪ್ರಶ್ನೆಯನ್ನು ತಂದೆ-ತಾಯಿ ಇಲ್ಲಾ ಹಿರಿಯರಿಗೆ ಕೇಳಿದರೆ ಸಾಕು, ಉತ್ತರ ರೆಡಿ ಇರೊತ್ತೆ. ಅವುಗಳಲ್ಲಿ ಕೆಲವು ಸಾಮನ್ಯ ಉತ್ತರಗಳು.
" ಅದು ನಮ್ಮ ಸಂಪ್ರದಾಯ" - ಅವರಿಗೆ ಉತ್ತರ ಗೊತ್ತಿರುವದಿಲ್ಲ, ಅಜ್ಜ ಹಾಕಿದ ಆಲದ ಮರಕ್ಕೆ ಜೊತು ಬೀಳಿ ಅಂತ indirect ಆಗಿ ಹೇಳುತ್ತಾರೆ.
" ನೊಡಪ್ಪಾ ನಮ್ಮ ಹಿರಿಯರು ಅಷ್ಟು ಮೂರ್ಖರಲ್ಲ, ಪ್ರತಿಯೊಂದಕ್ಕು ಒಂದು ರೀತಿ -ರಿವಾಜು ಅಂತ ಮಾಡಿರುತ್ತಾರೆ. ಗೋತ್ರ ನೊಡುವ ಉದ್ದೇಶ ಏನು ಅಂದರೆ
ಸ-ಗೋತ್ರದವರು ರಕ್ತ ಸಂಬಂಧಿ ಆಗುತ್ತಾರೆ, ಅಣ್ಣ-ತಂಗಿ ಸಂಬಂಧವನ್ನು ತಪ್ಪಿಸಲು ಇದು ಅವಶ್ಯ ಅಂತ" ಒಳ್ಳೆ discovery of India ಮಾಡಿದ ಹಾಗೆ
ಹೇಳಿ ಬಾಯಿ ಮುಚ್ಚಿಸುತ್ತಾರೆ.
ಆಯಿತು ನಮ್ಮ ಹಿರಿಯರು ತುಂಬಾ ಬುದ್ಧಿವಂತರು, ಮುಂದೆ ಹುಟ್ಟುವ ಮಕ್ಕಳು ಅಂಗವಿಕಲ ಮತ್ತು ಇತರ ಕಾಯಿಲೆ ಬರಬಾರದು ಅಂತ ಈ ಕ್ರಮವನ್ನು ನಾವು ಸಮರ್ಥನೆ ಮಾಡಿಕೊಳ್ಳಬಹುದು ಆದರೆ ನಾವು ಇದರ ಸಾರ್ಥಕತೆಯನ್ನು ಸರಿಯಾಗಿ ಪಾಲಿಸಿಕೊಂಡು ಬಂದಿರುತ್ತೆವೆಯಾ ??
ಉತ್ತರ ಇಲ್ಲ. ಯಾಕೆ ?? ಎಲ್ಲಿ ನಾವು ಎಡೆವಿದ್ದೆವೆ.
ಹುಡುಗ/ಹುಡುಗಿಗೆ ಅವರ ಅಪ್ಪನ ಗೋತ್ರ ಮಾತ್ರ ತೆಗೆದುಕೊಂಡು, ಅಮ್ಮನ ಗೋತ್ರ ಲೆಕ್ಕಕ್ಕೆ ತೆಗೆದುಕೊಳ್ಳದೆ ಇರುವುದು ಅತೀ ದೊಡ್ಡ ತಪ್ಪು.
ಹುಡುಗ/ಹುಡುಗಿಗೆ ಅಪ್ಪನ ಕಡೆಯಿಂದಲೂ ಅಣ್ಣ/ತಂಗಿ ಸಿಗುತ್ತಾರೆ, ಹಾಗೇಯೆ ಅಮ್ಮನ ಕಡೆಯೂ ಅಣ್ಣ/ತಂಗಿ ಸಿಗುತ್ತಾರೆ. ಈ ಅಪ್ಪನ ಗೋತ್ರ ನೊಡುವದರಿಂದ ನಾವು ಅಮ್ಮನ ಕಡೆಯಿಂದ ಆಗುವ ಅಣ್ಣ/ತಂಗಿ ಸಂಬಂಧಗಳನ್ನು ಮರೆತಿರುತ್ತೆವೆ. ಈ rule ಇಂದ ಹುಡುಗ ತನ್ನ ತಾಯಿ ತಂಗಿಯ ಮಗಳನ್ನು ಮದುವೆಯಾಗಬಹುದು, ಅದು ಸಮ್ಮತ ಆದೇ ತನ್ನ ತಂದೆಯ ತಮ್ಮನ ಮಗಳನ್ನು ಆಗಬಾರದು. ಎಂಥಾ ವಿಪರ್ಯಾಸ.
ಒಂದು ಉದಾಹರಣೆ ತೆಗೆದು ಕೊಳ್ಳೊಣ.
Say
ಹುಡುಗ :- A
ಹುಡುಗ ಅಪ್ಪ :- AF, ಗೋತ್ರ - GF
ಹುಡುಗ ಅಮ್ಮ:- AM, ಗೋತ್ರ - GM
ಹುಡುಗ ಗೋತ್ರ :- GF
so, ಹುಡುಗನಿಗೆ non GF ಇರುವ ಹೆಣ್ಣು ಬೇಕು. ಆದ್ದರಿಂದ ಹುಡುಗನ ಅಪ್ಪನ ತಮ್ಮನ ಮಗಳನ್ನು ತಂದುಕೊಳ್ಳಲು ಆಗುವದಿಲ್ಲ.
ಹಾಗಿದ್ದರೆ ಹುಡುಗನ ಅಮ್ಮನ ತಂಗಿ ಮಗಳನ್ನು ತಂದು ಕೊಳ್ಳಬಹುದಾ ?? ನೊಡೊಣ.
Say ಹುಡುಗಿಯ (ಹುಡುಗನ ಅಮ್ಮನ ತಂಗಿ ಮಗಳು)
ಹುಡುಗಿ :- B
ಹುಡುಗಿ ಅಪ್ಪ :- BF, ಗೋತ್ರ - GBF
ಹುಡುಗಿ ಅಮ್ಮ:- BM, ಗೋತ್ರ - GM
ಹುಡುಗಿ ಗೋತ್ರ :- GBF
So, GF ಮತ್ತು GBF ಬೇರೆ ಬೇರೆ ಇರುವ ಕಾರಣ ತಂಗಿಯಾದರೂ ಹುಡುಗಿಯನ್ನು ತಂದುಕೊಳ್ಳ ಬಹುದು.
ಹಾಗಿದ್ದರೆ ನಮ್ಮ ಹಿರಿಯರ ಪುಸ್ತಕದ ಬದನೆಕಾಯಿ ಕಥೆ ಏನಾಯಿತು ??
ಈ ಪ್ರಶ್ನೆಯನ್ನು ಯಾರು ನಮ್ಮ ಹಿರಿಯರಿಗೆ ಕೇಳಿರುವದಿಲ್ಲ, ಮತ್ತು ಹೇಳಿದರೂ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ವ್ಯವಧಾನ ನಮ್ಮ ಹಿರಿಯರಿಗೆ ಇಲ್ಲ. ಶತಮಾನಗಳಿಂದ ಕುರುಡಾಗಿ ತಪ್ಪಾಗಿ ಆಚರಿಸಿಕೊಂಡು ಬಂದಿದ್ದೆವೆ. ಇದಕ್ಕೆ ಸರಿಯಾದ ಮಾರ್ಗವಿಲ್ಲವೇ ??
ಖಂಡಿತಾ ಇದೆ.
ಸಂಬಂಧ ನೋಡುವಾಗ ಹುಡುಗನ ಅಪ್ಪನ ಗೋತ್ರವನ್ನು ಹುಡುಗಿಯ ಅಪ್ಪನ ಗೋತ್ರದ ಜೊತೆ && ಹುಡುಗನ ಅಮ್ಮನ ಗೋತ್ರವನ್ನು ಹುಡುಗಿಯ ಅಮ್ಮನ ಗೋತ್ರದ ಜೊತೆ ನೋಡಬೇಕು. ಎರಡೂ caseನಲ್ಲಿ ಬೇರೆಯಾದರೆ ಮಾತ್ರ ಮುಂದುವರಿಯಬೇಕು. ಇಲ್ಲವಾದರೆ ಹುಡುಗ-ಹುಡುಗಿ ಅಣ್ಣ-ತಂಗಿ ಆಗುತ್ತಾರೆ.
ಹಾಗಿದ್ದಲ್ಲಿ ಇದು ನಾವು ಮೇಲೆ ತೆಗೆದುಕೊಂಡ ಉದಾಹರಣೆಯ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತದೆ ಎಂದು ನೊಡೊಣ.
೧) ಹುಡುಗನ ಅಪ್ಪನ ಗೋತ್ರವನ್ನು ಹುಡುಗಿಯ ಅಪ್ಪನ ಗೋತ್ರದ ಜೊತೆ :- GF != GBF - TRUE
೨) ಹುಡುಗನ ಅಮ್ಮನ ಗೋತ್ರವನ್ನು ಹುಡುಗಿಯ ಅಮ್ಮನ ಗೋತ್ರದ :- GM != GM - FALSE
so (TRUE && FALSE ) == FALSE.
ಆದ್ದರಿಂದ ಸಂಬಂಧ ನೋಡಲು ಆಗುವದಿಲ್ಲ.
ಇತ್ತಿಚಿಗೆ ನಮ್ಮ ಅನಕೂಲಸಿಂಧು ವ್ಯವಸ್ಥೆಯಲ್ಲಿ ಸ-ಗೋತ್ರ ಮದುವೆಗಳು ನಡೆಯುತ್ತ ಇವೆ. ಇದು ಒಳ್ಳೆ ಬೆಳವಣಿಗೆ, 1st Relations ಇಲ್ಲದಿದ್ದರೆ ಸ-ಗೋತ್ರ ಮದುವೆಯನ್ನು ಮಾಡಬಹುದು. ಇದಕ್ಕೆ ಪುರೋಹಿತರ ಕುಮ್ಮಕ್ಕು ಇದೆ, ಅನಕೂಲಕ್ಕೆ ತಕ್ಕ ಹಾಗೆ ಮದುವೆ ಸಮಯದಲ್ಲಿ ಅಪ್ಪ-ಅಮ್ಮನ ಬದಲು ಬೇರೆಯವರು ಧಾರೆ ಎರೆದುಕೊಟ್ಟರೆ ಆಯಿತು. ಎಷ್ಟು ಸುಲಭ ಅಲ್ಲವೇ ??
ಈ ಗೋತ್ರ ಪುರಾಣ ಕೇಳಿದವರಿಗೂ ಮತ್ತು ಇದನ್ನು ಇತರರಿಗೆ ಹೇಳುವವರಿಗೂ ಜೈ ಬ್ಯಾಡರಬೊಮ್ಮ ಆಶೀರ್ವಾದವಿರುತ್ತದೆ.
5 comments:
ಗೋತ್ರ ನೋಡೋದು ೭ ತಲೆ ದೂರದ ಸಂಬಂಧ ನೋಡೋಕ್ಕೆ ಅಂತ ಎಲ್ಲೋ ಕೇಳಿದ್ದೆ ಗುರು.. ಅದಕ್ಕೆ genetic diversity ಇರಬೇಕು, genetic pool ಗೆ ಹೊಸ ಹೊಸ genes ಬರಬೇಕು ಅದಕ್ಕೇ ಹೀಗೆಲ್ಲ ಅಂತ ಯಾರೋ ಹೇಳಿದ್ರಪ್ಪ.. ಆದರೆ ನೀವು ಹೇಳಿದ ಹಾಗೆ ಅನುಕೂಲಸಿಂಧುಗಳು ಇವೆಲ್ಲ ಅದಕ್ಕೆ ಅನ್ವಯ ಆಗೋಲ್ಲ, ಇದಕ್ಕೆ ಅನ್ವಯ ಆಗಲ್ಲ ಅಂತ by-law ಹಾಕಿ ವೈಜ್ಞ್ನಾನಿಕವಾಗಿರುವ ಗೋತ್ರ ಪದ್ಧತಿಯನ್ನು ತಿರುಚಿದ್ದಾರೆ ಎನ್ನುವರೂ ಇದ್ದಾರೆ.
ಅದೇನೇ ಇರಲಿ, ಈಗಿರುವ ಗೋತ್ರ ಪದ್ಧತಿಗೆ ಯಾವುದೇ ರೀತಿಯ ಸಮಜಾಯಿಷಿ ಇಲ್ಲ.
ಖುಷಿಯಾಯಿತು ನಿಮ್ಮ ಬ್ಲಾಗ್ ನೋಡಿ!
Ho.. polihudga Agiddoroge, Chumbanave vAsi anniste?
http://polihudga.livejournal.com/
illide nammane allige hode summane ..
neevu helodu sari anisuthe :) nodere yella nod beku illadidre yavudu nodbaradu allave? but namma samjadalli adu work agolla. elaldakku ondu loop hole idde iruthade. So then why follow customs antah nanu kelthene, utta innu sikkila :)
Post a Comment