ನಿನ್ನೆ ತಮಿಳುನಾಡು ಸರಕಾರ ಚಿನ್ನತಂಬಿಯ ಸೌಹರ್ದತೆಯ ಕೆಲ್ಸವನ್ನು ಮೆಚ್ಚಿ ಶಾಲು ಹೊದಿಸಿ ವಿಶ್ವ ತಮಿಳು ಸಮಾವೇಶಕ್ಕೆ
ಆಹ್ಬಾನಿಸಿದ ಸುದ್ದಿ ಬಂದಿದೆ. ನಿಜಕ್ಕೂ ಇದು ಬಹಳ ಶ್ಲಾಷನೀಯ, ಶತಮಾನಗಳಿಂದ ಇದ್ದ ವೈರುಧ್ಯವನ್ನು ಕೇವಲ ಮೂರ್ತಿ ಉದ್ಘಾಟನೆಯಿಂದ ಬಗೆಹರಿಸಿ ಎರಡೂ ರಾಜ್ಯದ ಮಧ್ಯೆ ಮಧುರ ಮೈತ್ರಿಯನ್ನು ಶುರು ಮಾಡಿದ ಕೀರ್ತಿ ನಮ್ಮ ಮುಮ ಗೆ ಸೇರುತ್ತದೆ.
ಇದೇ ನಿಟ್ಟಿನಲ್ಲಿ ನಮ್ಮ ಭಾಂಧವ್ಯ ಬೆಳೆಯಬೇಕು ಎಂದರೆ ನಮ್ಮ ಸರ್ಕಾರ ಇನ್ನು ಹೆಚ್ಚು ತಮಿಳು ಸ್ನೇಹಿ ಯೋಜನೆಗಳನ್ನು ಹಾಕಿಕೊಳ್ಲಬೇಕು. ಆ ನಿಟ್ಟಿನಲ್ಲಿ ೧೧ ಸಾಮಾನ್ಯ ಅಂಶದ ಈ ಯೋಜನೆಯನ್ನು ನಮ್ಮ ಕನ್ನಡ ಸರ್ಕಾರ ಮಾಡಿದರೆ ..ತಮಿಳ್ ಚಿರಂಜೀವಿ ಆಗುತ್ತದೆ.
೧) ನಮ್ಮ ಸರ್ಕಾರದಿಂದ ಮುಮ ನೇತೃತ್ವದಲ್ಲಿ ಅಧಿಕೃತ ನಿಯೋಗವನ್ನು ಕೊಂಡ್ಯೊಯ್ಯಬೇಕು. ಇದರಲ್ಲಿ ನಮ್ಮ ರಾಜ್ಯದಲ್ಲಿ ಇರುವ ಘಣ್ಮುಗಂ ಇತರೆ ತಮಿಳು ವಿದ್ವಾಂಸರು ಒಳಗೊಳ್ಳಬೇಕು.
೨) ನಮ್ಮ ರಾಜ್ಯದಿಂದ ತಮಿಳಿಗೆ ಕೊಡುಗೆ ಎನ್ನುವ ಸಾಕ್ಷಚಿತ್ರವನ್ನು ಮಾಡಬೇಕು, ಇದನ್ನು ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆ ತಯಾರಿಸಿದರೆ ಒಳ್ಳೆಯದು ಮನು ಬಳಿಗಾರ ನೇತೃತ್ವದಲ್ಲಿ
೩) ನಮ್ಮ ಕನ್ನಡ ಮೇರು ಸಾಹಿತಿಗಳಾದ ಚಿಮೂ, ಜಿ ಎಸ್ ಎಸ್ ಅವರನ್ನು ಒಳಗೊಂಡ ಸಾಹಿತಿ ವೃಂದವನ್ನು ಅಲ್ಲಿಗೆ ಕೊಂಡೊಯ್ಯಬೇಕು. ಜೊತೆಗೆ ಆರ್ ಎಸ್ ಎಸ್ ನಾಯಕರು ಇದ್ದರೆ ಇನ್ನು ಮೆರಗು.
೪) ತಮಿಳು ಹೋರಾಟಗರ ಮೇಲೆ ಎಲ್ಲ ಕೇಸುಗಳನ್ನು ವಾಪಿಸ್ ಪಡೆಯಬೇಕು.
೫) ಪೆರಿಯಾರ್ ಹೆಸರಿನಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ಒಂದು ನಾಡೋಜ ಪ್ರಶಸ್ತಿ ಹೊರಬರಬೇಕು,
೬) ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊಡುವ ಸಹಕಾರ ಮೊತ್ದದ ೧/೩ ಭಾಗವನ್ನು ಇನ್ನು ಮುಂದೆ ತಮಿಳು ಸಮ್ಮೇಳನಕ್ಕೆ ಕೊಡಬೇಕು. ಹಾಗೇ ವೀರ ಸಾವರ್ಕರ್, ಗುರೂಜಿ, ಹೆಗಡೆವಾರ್ ದೇಶಭಕ್ತರ ಮೇಲೆ ಚಿಕ್ಕ ಚಿಕ್ಕ ಪುಸ್ತಕಗಳನ್ನು ಸರಕಾರ ಮುದ್ರಿಸಿ ಎಲ್ಲ ಶಾಲೆಗಳಲ್ಲೂ ಹಂಚಬೇಕು.
೭) ಬೆಂಗಳೂರಿನಲ್ಲಿ ಮುಂದಿನ ಸಮ್ಮೇಳನ ಮಾಡಲು ಸರ್ಕಾರ ಬಿಡ್ ಸಲ್ಲಿಸಬೇಕು. ಮುಂದಿನ ವಿಶ್ವ ತಮಿಳು ಸಮಾವೇಶ ನಡೆಸಲು ಇಗಲೇ ತಯಾರಿ ಆರಂಭಿಸಬೇಕು.
೮) ೨ ನೇ ಅಧಿಕೃತ ಭಾಷೆಯಾಗಿ ತಮಿಳನ್ನು ಬಿಬಿಎಂಪಿಯಲ್ಲಿ ಸ್ಥಾನ ಕೊಡಬೇಕು. ಮತ್ತು ಎಲ್ಲಾ ಬಿಬಿಎಂಪಿಯ ಕಾರ್ಯಕ್ರಮಗಳನ್ನು, ಸುತ್ತೊಲೆಗಳನ್ನು ತಮಿಳ್ ಮಕ್ಕಳಗೆ ಓದಲು ಅನಕೂಲ ಮಾಡಿಕೊಡಬೇಕು.
೯) ಮುಚ್ಚುತ್ತಿರುವ ಸರ್ಕಾರಿ ಶಾಲೆಗಳನ್ನು ಪಿಪಿಪಿ ಮಾದರಿಯಲ್ಲಿ ತಮಿಳುನಾಡು ಸರ್ಕಾರದ ಜೊತೆ ಸೇರಿ ಅದನ್ನು INTER NATIONAL TAMIL SCHOOL ಮಾಡಿ ನೆಲದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು.
೧೦) ಈ ಕಾರ್ಯಕ್ರಮವನ್ನು ಸನ್ ಅವರ ಉದಯದಲ್ಲಿ ಅಲ್ಲದೇ ನಮ್ಮ ಕನ್ನಡ ಕಸ್ತೂರಿ, ಚಂದನದಲ್ಲೂ ನೇರ ಪ್ರಸಾರ ಮಾಡಿಸಬೇಕು.
೧೧) ಶ್ರೀಲಂಕಾದಲ್ಲಿ ತಮಿಳ್ ಹೋರಾಟ ಗಮನಿಸಿ, ಪ್ರಭಾಕರನ್ ಪುತ್ಥಳಿಯನ್ನು ಬೆಂಗಳೂರಿನ ಮೆಜಸ್ತೀಕನ ರೈಲ್ವೇ ನಿಲ್ದಾಣದ ಎದುರು ಅನಾವರಣ ಗೊಳ್ಳಿಸಬೇಕು. ( ಈಗಿರುವ ಕಿತ್ತೂರು ಚೆನ್ನಮ್ಮ ಪ್ರತಿಮೆಯನ್ನು ತಮಿಳುನಾಡಿನಲ್ಲಿ ಅನಾವರಣಗೊಳಿಸುತ್ತೆವೆ ಎಂದು ಹೇಳಿ....)
೧೨) ಕೇವಲ ಕನ್ನಡ ಚಿತ್ರಕ್ಕೆ ಇರುವ ಸಬ್ಸಿಡಿಯನ್ನು ತಮಿಳು ಚಿತ್ರಗಳಿಗೂ ವಿಸ್ತರಿಸಬೇಕು, ಹೆಚ್ಚಾಗಿ ತಮಿಳು ಚಿತ್ರ ನೋಡುವ ಸ್ಲಂ ಮತ್ತು ಬಡವರಿಗೆ ಹೆಚ್ಚಿನ ಅನಕೂಲ ಆಗುತ್ತದೆ.
ಇದಕ್ಕೆ ವಿರೋಧ ಪಡಿಸುವರನ್ನು ಶಿಕ್ಷೆಗೆ ಗುರಿಮಾಡಬೇಕು, ೩೦೭,೩೦೨ ಕೇಸ್ ಜಡಿಯಬೇಕು ಎಂದು ಹೇಳಬೇಕಾಗಿಲ್ಲ ಅಲ್ಲವೇ ??
5 comments:
ಸೂಪರ್ ...
ಹೆಂಗೆ ತಮಿಳನಾಡಿನ ಹಾಲೂ ಸಿಗೋಹಾಗೆ, ಅಲ್ಲಿನ ಆಲ್ಕೋಹಾಲ್ ಕೂಡ ಸಿಗಬೇಕು. ಇಲ್ಲಿನ ನೈಟಿಗೆ ಅಲ್ಲಿನ ನೈಂಟಿ ಸೂಪರ್ ಕಾಂಬೀನೇಷನ್
ತಿರುವಳ್ಳುವವರ್ ಪ್ರತಿಮೆ ಸಮಯದಲ್ಲಿ ಮಾತಾಡಿದ್ದ ಗಣ್ಯರು ನಿವು ಕೊಟ್ಟ ಬೇಡಿಕೆ ಕೇಳಿ ಎನ್ ಹೇಳುತ್ತಾರೆ ಗೊತ್ತ ?
"ತಮಿಳು ಹಾಗೂ ಕನ್ನಡ ಒಂದೆ ತಾಯಿಯ ಮಕ್ಕಳು, ಇದರಿಂದ ಹೊಸ ಶಕೆ ಆರಂಭವಾಗಿದೆ. ಮೇಲೆ ತಿಳಿಸಿರುವ ನಿಲುವುಗಳನ್ನು ಸರ್ಕಾರ ತೆಗೆದುಕೊಂಡರೆ ಅದು ಸ್ವಾಹತರ್ಹ ಕ್ರಮವಾಗುತ್ತದೆ"
- ಚಿದಾನಂದ ಮೂರ್ತಿ
"ನಾನು ಆರ್ ಬಿ ಎನ್ ಎಂ ಎಸ್ ಶಾಲೆಯಲ್ಲಿ ಓದಿದವ, ಇಲ್ಲಿನ ತಮಿಳರ ಜೊತೆ ಆಡಿ ಬೆಳೆದೆ, ನನ್ನ ಬೆಳವಣಿಗೆಗೆ ತಮಿಳು ಭಾಷೆಯ ಮಹತ್ವದ ಪಾತ್ರ ಇದೆ, ನಾವು ತಮಿಳಿನಲ್ಲೇ ಓಟು ಕೇಳುವುದು. ಸೌಹರ್ದತೆಗೆ ಮೇಲೆ ತಿಳಿಸಿರುವ ಕ್ರಮಗಳು ಬಹಳ ಚೆನ್ನಾಗಿ ಸಹಾಯ ಮಾಡೊತ್ತೆ, ವಿಶ್ವ ತಮಿಳ್ ಸಮ್ಮೇಳನವನ್ನು ಇಲ್ಲೇ ಆರ್ ಬಿ ಎನ್ ಎಂ ಎಸ್ ಕ್ರೀಡಾಂಗಣದಲ್ಲಿ ಮಾಡಬೇಕು."
- ಶ್ರೀ ರೋಷನ್ ಬೇಗ್
"ನಾವೆಲ್ಲರೂ ಭಾರತೀಯರು, ಬೆಂಗಳೂರು ಭಾರತದಲ್ಲೇ ಇದೆ. ವೇದ ಭಗವದ್ಗೀತೆಯಂತೆ ಇರುವ ತಿರುಕ್ಕುರಳ್ ಓದಲು ಅನಕೂಲ ಮಾಡಿಕೊಡುವ ತಮಿಳು ಶಿಕ್ಷಣ ಮೆಚ್ಚತಕ್ಕದ್ದು."
- ಶ್ರೀ ಸಿದ್ದರಾಮಯ್ಯ
"ಬೆಂಗಳೂರಿನಲ್ಲಿ ಜಾತಿ, ಭಾಷೆಯ ಮಿತಿ ಬೇಡ. ಅವರನ್ನು ನಮ್ಮವರಾಗಿಸಿಕೊಂಡು ಹೋಗುವ ಮೇಲಿನ ಬೇಡಿಕೆಗಳು ನ್ಯಾಯಸಮ್ಮತವಾಗಿದೆ. ಇದಕ್ಕೆ ಕಾರಣಕಾರರಾದ ಶ್ರೀ ಮುಖ್ಯಮಂತ್ರಿಗಳಿಗೆ ಜೈ.."
- ಪಿಸಿ ಮೋಹನ್
wonder-kannu,
Very nice. bahala chennagi vishleshane madidhirra !!
sinri,
hahhaha ...
Ishtondu vyangya bekagitha antha nanna anisike..
guchi,
kannadigaru mattu tamilaru saudharateyinda irabeku andre ivella agabeku antha nanna anisike. ee maathannu bekidre namma tambigalada tamilara jothe keli, avaru idannu oppadiddare neevu helida vyangya andukolluve.
Post a Comment