Saturday, August 08, 2009
ಶೀರ್ಷಿಕೆ ಇಲ್ಲದ ಕವಿತೆ
ನಾನು ಯಾರು ?
ನಲ್ಲ ಕಾತುರದಲ್ಲಿ, ಆತುರಲ್ಲಿ ಬಾಗಿಲನ್ನು ತಟ್ಟಿದ
ಯಾರದು ಎಂದು ಒಳಗಿನಿಂದ ಮಧುರ ದನಿ
ನಾನು ಎಂದ ನಲ್ಲ.
ಹೋಗಾಚೆ, ಈ ಮನೆಯಲ್ಲಿ ನನಗೆ ನಿನಗೆ ಅಂತ ಇಲ್ಲ
ದು:ಖತಪ್ತನಾಗಿ ಊರುರು ಅಲೆದಾ,ಸುತ್ತಿದ, ಬಳಲಿದ
ಕೊನೆಗೆ ಮತ್ತೆ ಬಂದು ಬಾಗಿಲು ತಟ್ಟಿದ
ಯಾರದು ??
ನಿನ್ನ ಪ್ರೀತಿ ಎಂದ, ಬಾಗಿಲು ತೆರೆಯಿತು.
ಕ್ಷಮೆ
ಸದಾ ನನ್ನ ತಪ್ಪನ್ನೇ ಕೆದಕುತ್ತ ಇರುವೆಯಲ್ಲ,
ನೀನು ಕ್ಷಮಿಸಿದ್ದೀಯಾ, ಮರೆತಿದ್ದೀಯಾ ಅಂತ ಅಂದುಕೊಂಡಿರುವೆ
ಎಂದ ಗಂಡ
ಹೌದು, ಆದರೆ ನೀನು ಕ್ಷಮಿಸಿದ್ದೀನಿ, ಮರೆತಿದ್ದೀನಿ
ಎಂಬುದನ್ನು ಮರೆಯಬಾರದು
ಎಂದು ಹೇಳಿದಳು ಹೆಂಡತಿ.
ಶ್ರೀಮಂತಿಕೆ
ಹಗಲು ರಾತ್ರಿ ದುಡಿಯುವೆ, ಬೆವರು ಹರಿಸುವೆ
ಒಂದು ದಿನ ನಾವು ಶ್ರೀಮಂತರಾಗುತ್ತೆವೆ ಚಿನ್ನ ಎಂದ ಗಂಡ,
ನಾವು ಶ್ರೀಮಂತರೇ, ನಿನಗೆ ನಾನು, ನನಗೆ ನೀನು, ನಮಗೆ ಪ್ರೀತಿ ಇದೆ
ಮುಂದೊಂದು ದಿನ ಅದರ ಜೊತೆ ದುಡ್ಡು ಬರಬಹುದು ಅಷ್ತೆ ಎಂದಳು ಹೆಂಡತಿ
Labels: ಹೆಜ್ಜೆ
hani kavite
1 comment:
ಬೇಂದ್ರೆಯವರ ‘ನಾನು ಬಡವಿ, ಆತ ಬಡವ’ ನೆನಪಿಸಿತು. ಚೆನ್ನಾಗಿದೆ.
Post a Comment