Monday, July 27, 2009

ವಿಕ ಭಟ್ಟರ ಇಬ್ಬಂದಿತನ ...



ನಿನ್ನೆ ವಿಜಯ ಕರ್ನಾಟಕದಲ್ಲಿ ಹುಟ್ಟುಹಬ್ಬದ ಫ್ಲೆಕ್ಸ ಸಂಸ್ಕೃತಿ ಬಗ್ಗೆ ಖಾರವಾಗಿ ಭಟ್ಟರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಹುಟ್ಟುಹಬ್ಬದ ನೆಪದಲ್ಲಿ ಅವರ ರಾಜಕೀಯ ನಾಯಕರ ಚೇಲಾಗಳು ಹಾಕಿಸುವ ಶುಭಾಷಯ ಬ್ಯಾನರ್ ಒಂದು ಕಡೆ ಆದರೆ ಇನ್ನೊಂದು ಕಡೆ ವಿಜಯ ಕರ್ನಾಟಕದ ಪುಟಗಳಲ್ಲಿ ಪೇಜು ಪೇಜು ಉಘೇ ಉಘೇ ಪ್ರಾಯೋಜಿತ ಲೇಖನಗಳು ಮತ್ತು ಭಟ್ಟರು ಯಾರನ್ನು ಬೈದು ಉಗಿದು ಹಾಕಿದ್ದಾರೋ ಅವರದೇ ಹುಟ್ಟುಹಬ್ಬದ ಶುಭಾಯಗಳು ರಾರಾಜಿಸುತ್ತವೆ.
ಆಚೆ ಕಡೆ ಫ್ರೀ ಆಗಿ ಕಾಣುವ ಅವು ಅಸಹ್ಯವಾದರೆ, ಇನ್ನೌ ದುಡ್ಡು ಕೊಟ್ಟೂ ಕೊಂಡುಕೊಳ್ಳುವ ಓದುಗರಿಗೆ ಬೇಡವೆಂದರೂ ಅದು ಪತ್ರಿಕೆಗಳಲ್ಲಿ ಕಣ್ಣಿಗೆ ಬೀಳುವುದು ಪರಮ-ಅಸಹ್ಯವೇ ಸರಿ. ಇನ್ನು ಮುಂದಾದರೂ ಭಟ್ಟರು ಹೇಳುವುದು ಮತ್ತು ಮಾಡುವುದು ಒಂದೇ ಮಾಡಲಿ ...

2 comments:

ಗುಡುಗು ಮಿಂಚು said...

ವಿ.ಕ.ಭಟ್ಟರ ಇಬ್ಬಂದಿತನ
ಇದಕ್ಕೆ ನನ್ನ ಪ್ರತಿಕ್ರಿಯೆ. ನಾನೇನೂ ಅವರ ಅಭಿಮಾನಿ ಅಲ್ಲ. ಆದರೆ ತಮ್ಮ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಬೇಕು ಅನ್ನಿಸಿತು.
೧. ಪತ್ರಿಕೆಗಳು ನಡೆಯುವುದೇ ಜಾಹೀರಾತುಗಳಿಂದ. ಹಾಗಾಗಿ ಅವರು ಯಾವುದೇ ಜಾಹೀರಾತನ್ನೂ ಸಹ ಪ್ರಕಟಿಸಲೇ ಬೇಕು.
೨. ವಿ.ಕ.ದಲ್ಲಿ ಪ್ರಕಟವಾಗುವ ಜಾಹೀರಾತುಗಳ ಮೇಲೆ ಸಂಪಾದಕರ (ವಿ.ಭಟ್) ಹಿಡಿತ, ಅಥವಾ ತಿಳುವಳಿಕೆ ಕೂಡಾ ಇರುವುದಿಲ್ಲ. ಅದು ಅವರ ಕೆಲಸ ಕೂಡಾ ಅಲ್ಲ. ವಿ.ಕ. ಪತ್ರಿಕೆ ಟೈಮ್ಸ್ ಸಂಸ್ಥೆಗೆ ಸೇರಿದುದರಿಂದ ಜಾಹೀರಾತುಗಳನ್ನು ಅವರು ಎಷ್ಟು ಬಂದರೂ ಪ್ರಕಟಿಸುತ್ತಾರೆ.
೩. ರಾಜಕಾರಣಿಗಳು ಬ್ಯಾನರ್ ಕಟ್ಟುವುದು ಸಾರ್ವಜನಿಕ ಸ್ಥಳಗಳಲ್ಲಿ. ಇದು ತಪ್ಪು ತಾನೇ?
೪. ಆದರೆ ಯಾವುದೇ ಪತ್ರಿಕೆ ಸಾರ್ವಜನಿಕ ಸ್ವತ್ತಲ್ಲ. ಅದು ಅದರ ಮಾಲಿಕರಿಗೆ ಸೇರಿದ್ದು. ನಾವು ಅದನ್ನು ದುಡ್ಡು ಒಟ್ಟು ಓದುತ್ತೇವೆ. ಇಂದು ಯಾವುದೇ ಪತ್ರಿಕೆಯೂ ಜಾಹೀರಾತುಗಳಿಂದ ಹೊರತಾಗಲು ಸಾಧ್ಯವಿಲ್ಲ. ೧೦ ವರ್ಷದ ಹಿಂದೆಯೇ ಪತ್ರಿಕೆಗಳ ಬೆಲೆ ೩-೫ ರೂವರೆಗೂ ಇತ್ತು. ವಿ.ಕ. ಬಂದ ಕಾರಣ ೧೦ ವರ್ಷದ ನಂತರವೂ ೨.೫೦ - ೩ ರೂ. ಇದೆ. ಇದಕ್ಕೆಲ್ಲಾ ಮುಖ್ಯ ಕಾರಣ ಜಾಹೀರಾತುಗಳು. ಯಾವುದೇ ಪತ್ರಿಕೆಯನ್ನು ನಮಗೆ ಇಷ್ಟ ಆದರೆ ಓದುತ್ತೇವೆ. ಇಲ್ಲಾಂದರೆ ಇಲ್ಲ. ಹಾಗಿರುವಾಗ ಅದರಲ್ಲಿ ಹಾಕಿರುವ ಜಾಹೀರಾತು ಪ್ರಮುಖ ವಿಷಯ ಅಲ್ಲ.
ಇದನ್ನೆಲಾ ಗಮನಿಸಿದಾಗ ವಿ.ಭಟ್ಟರದ್ದು ಇಬ್ಬಂದಿತನ ಅಲ್ಲ ಅನ್ನಿಸುತ್ತೆ ನನಗೆ.
ಶ್ರೀಪತಿ ಮ. ಗೋಗಡಿಗೆ
ORKUT : http://www.orkut.co.in/Main#Profile.aspx?uid=10470517212050062340

ಪವ್ವಿ said...

೧. ಪತ್ರಿಕೆಗಳು ನಡೆಯುವುದೇ ಜಾಹೀರಾತುಗಳಿಂದ. ಹಾಗಾಗಿ ಅವರು ಯಾವುದೇ ಜಾಹೀರಾತನ್ನೂ ಸಹ ಪ್ರಕಟಿಸಲೇ ಬೇಕು.
>> ಹಾಗೆ ಅಂತ ಆಚೆ ಇರಬಾರದು, ಅದು ಕೇವಲ ಪತ್ರಿಕೆಗಳಲ್ಲಿ ಮಾತ್ರ ಬರಬೇಕು, ಆಚೆ ಕಡೆ ಹಾಕಿದರೆ ಪತ್ರಿಕೆಗಳ ಆದಾಯಕ್ಕೆ ದಕ್ಕೆ ಬರುತ್ತದೆ ಎಂದೆ.

೨. ವಿ.ಕ.ದಲ್ಲಿ ಪ್ರಕಟವಾಗುವ ಜಾಹೀರಾತುಗಳ ಮೇಲೆ ಸಂಪಾದಕರ (ವಿ.ಭಟ್) ಹಿಡಿತ, ಅಥವಾ ತಿಳುವಳಿಕೆ ಕೂಡಾ ಇರುವುದಿಲ್ಲ. ಅದು ಅವರ ಕೆಲಸ ಕೂಡಾ ಅಲ್ಲ. ವಿ.ಕ. ಪತ್ರಿಕೆ ಟೈಮ್ಸ್ ಸಂಸ್ಥೆಗೆ ಸೇರಿದುದರಿಂದ ಜಾಹೀರಾತುಗಳನ್ನು ಅವರು ಎಷ್ಟು ಬಂದರೂ ಪ್ರಕಟಿಸುತ್ತಾರೆ.
>> ಸಂಪಾದಕರು ಪತ್ರಿಕೆಯ ಕೇವಲ ಸಂಪಾದಕೀಯ ಮಾತ್ರಕ್ಕೆ ಸೀಮಿತವಲ್ಲ. ಅವರ ಜವಬ್ದಾರಿ ಎಲ್ಲದರಲ್ಲೂ ಇರುತ್ತದೆ, ಸುದ್ದಿಯನ್ನು ಬಹಳ ಚೆನ್ನಾಗಿ ಫಿಲ್ಟರ್ ಮಾಡುತ್ತಾರೆ, ತಮಗೆ ಬೇಕಾದ ರೀತಿಯಲ್ಲಿ ಪತ್ರಿಕೆಗಳನ್ನು ತರುತ್ತಾರೆ. ಪತ್ರಿಕೆ ಯಾರಿಗೋ ಸೇರಿದ್ದರೆ, ತಮ್ಮ ಕೆಲ್ಸವಲ್ಲ ಅಂತ ಹೇಳುವುದನ್ನು ಒಪ್ಪಿಕೊಳ್ಳಲು ಆಗುವದಿಲ್ಲ ಬಿಡಿ.
ಆದಾಯ ಬಗ್ಗೆ ಮಾತನಾಡುತ್ತ ಹೋದರೆ, ಫ್ಲೆಕ್ಸ,ಬ್ಯಾನರ್ ಇಂದ ಅನೇಕ ಅವಿದ್ಯಾವಂತರಿಗೆ ಕೆಲ್ಸ ಸಿಕ್ಕಿದೆ, ಇಂದು ಅದೂ ಕೂಡ ಉದ್ಯಮ ಆಗಿದೆ. ಅವರಿಗೂ ನೀವು ಹೇಳಿದ ಹಾಗೆ ಯಾರೆ ಮಾಡಿಕೊಡಿ ಎಂದರೂ ಹಾಕುತ್ತಾರೆ.


ಜನಸಾಮನ್ಯನಿಗೆ ಅದು ಹಿಂಸೆ ಆಚೆ ನೋಡಿ ಎಷ್ಟರ ಮಟ್ಟಿಗೆ ಹಿಂಸೆ ಆಗುತ್ತದೆಯೋ,ಅಷ್ಟೆ ದುಡ್ಡುಕೊಟ್ಟು ಪತ್ರಿಕೆಯನ್ನು ಕೊಂಡಾಗ ಪೇಜಗಟ್ಟಲೆ ಜಾಹೀರಾತು ನೋಡಿದಾಗಲೂ ಆಗುತ್ತದೆ.

ಮಾಧ್ಯ್ವಮಗಳಲ್ಲಿ ಜಾಹೀರಾತು ದರ ಕಮ್ಮಿ ಮಾಡಿದರೆ, ಆಚೆ ಕಾಣುವುದು ತಪ್ಪುತ್ತದೆ. ಅಷ್ಟುಕ್ಕೂ ಪ್ರತಿಯೊಬ್ಬರಿಗೂ ಒಂದು ರೀತಿಯಲ್ಲಿ ಸಾರ್ವಜನಿಕರನ್ನು ಮುಟ್ಟುವ ಆಸೆ ಇರುತ್ತದೆ, ಪತ್ರಿಕೆ,ಚಾನೆಲಗಳ ಜಾಹೀರಾತು ದರ ತುಂಬಾ ಆದ ಕಾರಣ ಕಮ್ಮಿ ದುಡ್ಡಿನಲ್ಲಿ ಸಿಗುವ ಒಂದು ಉಪಾಯ ಫ್ಲೆಕ್ಸ.
ದಶಕಗಳಿಂದ ಸಿನೆಮಾ ಪೊಸ್ಟರಗಳ ಬಗ್ಗೆ ಯಾರು ಚಕಾರ ಎತ್ತದೆ ಇರುವುದು, ಈಗ ಶುಭಾಷಯ ಫ್ಲೆಕ್ಸ ಬಗ್ಗೆ ಎತ್ತುತ್ತ ಇರುವುದು ಇಬ್ಬಂದಿತನ ಅಲ್ಲವೇ?.