Thursday, January 15, 2009

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ



ಕನ್ನಡ ಜನರು ಜಗತ್ತಿನಲ್ಲಿ ಯಾವುದೇ ಜನಾಂಗಕ್ಕೂ ಕಮ್ಮಿ ಇಲ್ಲ, ಎಲ್ಲಾ ರಂಗಗಳಲ್ಲಿ ಸಾಧನೆ ಮಾಡಬೇಕು, ಹಾಗೆ ಸಾಧಿಸಲು ಉತ್ತೇಜನ ನೀಡುವಂತಹ ವಾತಾವರಣ ನಾಡಿನಲ್ಲಿ ಉಂಟಾಗಬೇಕು ಎಂಬ ಆಶಯದೊಂದಿಗೆ ,. ನಮ್ಮ ನಾಡು ಸಮೃದ್ಧಿಯ ಬೀಡಾಗಬೇಕು ಅನ್ನುವ ಗುರಿ ಮುಟ್ಟಲು, ಜಗತ್ತಿನಲ್ಲಿ ಇರುವ ಎಲ್ಲಾ ಕನ್ನಡಿಗರ ಸಹಕಾರದಲ್ಲಿ, ಗುರಿ ಮುಟ್ಟುವ ಹೆಜ್ಜೆಗಳನ್ನು ಇಂದೇ ಗುರುತಿಸಿ, ಆ ದಿಕ್ಕಿನಲ್ಲಿ ನಾಡು-ನುಡಿ-ನಾಡಿಗರನ್ನು ಕೊಂಡೊಯ್ಯಲು ಕರ್ನಾಟಕ ರಕ್ಷಣಾ ವೇದಿಕೆ ಮುಂದಾಗಿದೆ.
ಈ ನಿಟ್ಟಿನಲ್ಲಿ ಜನವರಿ ೧೮ ನೇ ತಾರೀಖು ನಡೆಯುವ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ ಬಹಳ ಒಳ್ಳೆಯ ಕಾರ್ಯಕ್ರಮ. ಬರೀ ಸಮಸ್ಯೆಗಳನ್ನು ಹೇಳಿಕೊಂಡು,
ನಾವು ಉದ್ದಾರ ಆಗೊಲ್ಲ ಅನ್ನೊ ರೀತಿಯಲ್ಲಿ, ಒಂದೆರೆಡು ವರದಿ ಜಾರಿ ಆಗಬೇಕು ಅದರಿಂದಲೇ ಇಡಿ ಕರ್ನಾಟಕದ ಉದ್ದಾರ ಅನ್ನೊ ಮಾತುಗಳನ್ನು ಆಡುವರ ಮಧ್ಯೆ
ಇದು ಎದ್ದು ನಿಲ್ಲುತ್ತದೆ. ಉದ್ಯೋಗ-ಉದ್ದಿಮೆ ಮೇಲೆ ನಡೆಯುವ ವಿಚಾರ ಸಂಕೀರ್ಣ ನಿಜಕ್ಕೂ ಸ್ವಾಗತಾರ್ಹ ಕ್ರಮ, ಯಾಕೆಂದರೆ ಕನ್ನಡ ಹೊಟ್ಟೆಯ ಹಿಟ್ಟಿನ ಭಾಷೆ ಆಗಬೇಕೆಂಬ ವಿಚಾರ ಹೊಸದು ಮತ್ತು ಪ್ರಚಲಿತ, ಇದನ್ನು ಕೈಗೆತ್ತಿಕೊಂಡಿರುವ ವೇದಿಕೆ ವಿಷನ್ ಮತ್ತು ಮಿಷನ್ ಎರಡನ್ನು ಇಟ್ಟುಕೊಂಡು ಕೆಲ್ಸ ಮಾಡುತ್ತಿದೆ.
ಎಲ್ಲ ಕನ್ನಡಿಗರೂ ಇದರಲ್ಲಿ ಪಾಲ್ಗೊಂಡು, ನಮ್ಮ ಬೆಂಬಲ ಕೊಡಬೇಕು..ಎನಂತೀರಿ..ಅನ್ನುವುದು ಎನು ನಮ್ಮ ಮುಂದೆ ಇರುವುದೇ ಎರಡು ಆಯ್ಕೆ
ಉದ್ದಾರ ಆಗು, ಇಲ್ಲ ಕೊರಗುತ್ತ ಸಾಯಿ ಅನ್ನುವದರ ಮಧ್ಯೆ ಯಾವುದನ್ನು ಆಯ್ಕೆ ಮಾಡುತ್ತಿರಿ ನೀವೆ ಹೇಳಿ ?

No comments: