Sunday, April 22, 2007

ಕನ್ನಡದಲ್ಲಿ ಕಾಮವಿಲ್ಲ(,) ಬರೀ ಫುಲ್‍ಸ್ಟಾಪ್(.)

ನಮ್ಮ ಕನ್ನಡ ಬಗ್ಗೆ ಗೊತ್ತೊ ಗೊತ್ತಿಲ್ಲದೇ ಒಂದು ಮಡಿವಂತಿಕೆಯನ್ನು ಮಾಡಿಕೊಂಡಿದ್ದೇವೆ, ಅಂದರೆ ಅದರ ಫಲವಾಗಿಯೇ
ನಮ್ಮ ಕನ್ನಡ ಕೇವಲ ಪ್ರಫುಲ್ಲ ಸಾಹಿತ್ಯಕ್ಕೆ ಸೀಮಿತ, ಪದ್ಯ-ಕಥೆ-ಕಾದಂಬರಿಗೆ ಬಿಟ್ಟರೆ ಬೇರೆ ಎನು ಬರೆಯಲು ಆಗುವದಿಲ್ಲ ಎಂಬ ಒಂದು ಬಂಧನದಲ್ಲಿ ಸಿಲುಕಿದ್ದೆವೆ. ಅದಕ್ಕೆ ನೋಡಿ ಕನ್ನಡ ಬಗ್ಗೆ ಹೇಳಿ ಅಂದರೆ ನಾವು ಮೊದಲು ಹೇಳುವುದು ನಮಗೆ ೭ ಜ್ಞಾನಪೀಠ ಬಂದಿವೆ, ಇಲ್ಲಾ ನಮ್ಮ ಕನ್ನಡ ರಾಜ್ಯೊತ್ಸವದ flex ಬ್ಯಾನರ್‍ಗಳಲ್ಲಿ ಆ ೭ ಜನರ ಭಾವಚಿತ್ರ ಹಾಕಿ ಸಂತೋಷ ಪಡುವುದೇ ನಮ್ಮ ಮಹತರ ಸಾಧನೆ ಎಂದು ಬೀಗುತ್ತೆವೆ.
ನನಗೆ ಪ್ರಶ್ನೆ ಬರುವುದು ನಮ್ಮ ಕಾಮಗಳನ್ನು ( ಕಾಮ ಅಂದರೆ ಕೇವಲ ಗಂಡು-ಹೆಣ್ಣಿನ ನಡುವಿನ ಸಂಬಂಧವಲ್ಲ, ಮನುಷ್ಯನ ಪ್ರತಿಯೊಂದು ಆಸೆಯನ್ನು ನಾನು ಕಾಮವೆಂದು ಪರಿಗಣಿಸಿ, ಮುಂದೆ ಹಾಗೆ ಉಲ್ಲೇಖಿಸುತ್ತೆನೆ) ನಮ್ಮ ಕನ್ನಡದಲ್ಲಿ ತರಲು ನಾವು ಯಾಕೆ ಇಷ್ಟು ಮಡಿವಂತಿಕೆ ಮಾಡುತ್ತ ಇದ್ದೆವೆ ಅಂತ?.

ಈ ನಡುವೆ ಹೆಚ್ಚು ಪ್ರಚಲಿತ ವಿದ್ಯಮಾನವೆಂದರೆ ನಮ್ಮ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಕೊಡಬೇಕೆ ಇಲ್ಲಾ ಬೇಡವೆ ಎನ್ನುವುದು. ಇದು ಇನ್ನೂ ನಮ್ಮಲ್ಲಿ ಪ್ರಶ್ನೆಯಾಗಿ ಉಳಿದಿರುವುದು ನಿಜಕ್ಕೂ ಶೋಚನೀಯ. ನಮ್ಮ ಸಂಸ್ಕೃತಿಗೆ ಇದು ಮಾರಕ ಎಂದು ವಾದಿಸುವ ಜನ ನಿಜಕ್ಕೂ ಆಷಾಡಭೂತಿ ತೋರುತ್ತಿದ್ದಾರೆ. ನಮ್ಮ ಹಳೆ ದೇವಸ್ಥಾನಗಳ ಮೇಲೆ ಕೆತ್ತನೆ ಮಾಡಿರುವ ಶಿಲ್ಪಗಳನ್ನು ನಾವು ಒಮ್ಮೆ ನೋಡಿದರೆ ನಮಗೆ ಆ ಕಾಲದಲ್ಲಿ ಇದ್ದ ಉದಾರತೆ ಮತ್ತು ಜನರ ತಿಳುವಳಿಕೆ ಬಗ್ಗೆ ತಿಳಿಯುತ್ತದೆ. ಒಬ್ಬ ಶಿಲ್ಪಿ ಒಂದು ಕಾಮಸೂತ್ರದ ಹತ್ತು ಹಲವು ಭಂಗಿಗಳನ್ನು ಮನನ ಮಾಡಿ ಕಲ್ಲಿಗೆ ಆ ರೂಪವನ್ನು ಕೋಡಬೇಕಿದ್ದರೆ ಅದು ಖಂಡಿತ ಅವನ ಒಬ್ಬನ ಜ್ಞಾನವಲ್ಲ, ಅದು ಅಂದಿನ ಸಮಾಜದ ವಿದ್ಯಮಾನ.

ತೆಲುಗುವಿನಲ್ಲಿ ಒಂದು ಗಾದೆ ಇದೆ, "ಬಚ್ಚಿಟ್ಟರೆ ಹಳಸಿ ಹೋಗುತ್ತದೆ" ಅಂತ, ಇದು ನಮ್ಮ ಇಂದಿನ ಸಮಾಜಕ್ಕೆ ನೈಜ ಕನ್ನಡಿ ಆಗಿದೆ. ನಾವು ನಮ್ಮ ಯುವ ಪೀಳಿಗೆ ಬಗ್ಗೆ ವಿಷಯವನ್ನು ಹಂಚಿಕೊಳ್ಳುದೇ ಇದ್ದರೆ ಅವರು ಆ ವಿಷಯಗಳನ್ನು ತಿಳಿದುಕೊಳ್ಳುವದಿಲ್ಲ ಅನ್ನುವ ಮೂಡನಂಬಿಕೆಗೆ ಎನು ಹೇಳಬೇಕು ?. ಇದರಿಂದ ನಮ್ಮ ಸಂಸ್ಕ್ರುತಿಯನ್ನು ರಕ್ಷಣೆ ಮಾಡುತ್ತ ಇದ್ದೇವೆ ಎಂದು ಪ್ರತಿಪಾದಿಸುವ ಜನ ಒಮ್ಮೆ ಇತರ ವಿಷಯಗಳ ಬಗ್ಗೆ ಗಮನ ಹರಿಸಬೇಕು.
ಅಂತರ್ಜಾಲದಲ್ಲಿ ದಿನಾ ದಿನಾ ಹೊಚ್ಚ ಹೊಸ update ಕೊಡುವ ಡೆಬೊನೆರ್ ಬ್ಲಾಗ/xboards.us ಒಂದು ಸಾಕು ನಮ್ಮ ಯುವಜನಾಂಗಕ್ಕೆ. ಇಂಥಾ ಬ್ಮಾಗ ಮತ್ತು websites ಇರುವ ತನಕ ನಮ್ಮ ಜನರಿಗೆ ಕಳಪೆ ಸರಕು ಸಿಗುವದರಲ್ಲಿ ಮೋಸವಿಲ್ಲ.
ಇದು ಬರೀ ಪಟ್ಟಕ್ಕೆ ಸೀಮಿತ ಎಂದು ನೀವು ಭಾವಿಸಿದ್ದರೆ, ಅದು ನಮ್ಮ ಜನರ ignorance ಪರಮಾವಧಿ. ಚಿಕ್ಕ ಚಿಕ್ಕ ಊರಿನಲ್ಲಿ
cyber cafe ನಲ್ಲಿ ಕುಳಿತ ಪ್ರೇಮಿಗಳು ONLINE TUTION ತೆಗೆದುಕೊಳ್ಳುವುದು ಇಂತಹ ಕಳಪೆ ವೆಬೆಸೈಟ್‍ಗಳಿಂದ.

ಅನೇಕ ಕನ್ನಡ ಪತ್ರಿಕೆಗಳಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಒಂದು ಕಾಲಂ ಇರುತ್ತದೆ, ಅದರಲ್ಲಿ ಒಬ್ಬರು ಜನರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ನನ್ನ ಗಮನಕ್ಕೆ ಬಂದ ಮತ್ತು ಹೆಚ್ಚು ಅವಾಂತರಗಳನ್ನು ಮಾಡಿಕೊಂಡು ಪ್ರಶ್ನೆ ಕೇಳುವುವರು ಹೆಚ್ಚು ಚಿಕ್ಕ ಊರಿನವರು. ಇವರಿಗೆ ಲೈಂಗಿಕ ಶಿಕ್ಷಣ ಕೋಡದಿರುವುದೇ ಹೆಚ್ಚು ಅವಘಡಗಳನ್ನು ಮಾಡಿಕೊಂಡು ತಮ್ಮ ಪ್ರಶ್ನೆಗಳನ್ನು ಯಾರ ಹತ್ತಿರ ಹಂಚಿಕೊಳ್ಳಲಾಗದೇ ಪತ್ರಿಕೆಗಳ ಮೊರೆ ಹೋಗುತ್ತಾರೆ. ಇಲ್ಲಿ ನನಗೆ ಅನಿಸುವುದು ನಮ್ಮ ಮನುಷ್ಯನ ಕಾಮಗಳನ್ನು ನಾವು ನಮ್ಮ ಭಾಷೆಯಲ್ಲಿ ಹೇಳದೇ ಇರುವುದೇ ನಮ್ಮ ಜನರಿಗೆ ಮಾಡುತ್ತಿರುವ ಒಂದು ಮೋಸ. ನಾನು ಸರಸಗಾಟಾಗಿ ನಮ್ಮ
ಭಾಷೆಯಲ್ಲಿ ಲೈಂಗಿಕ ವಿಷಯಗಳನ್ನು ಹೇಳುವ ಪುಸ್ತಕ ಇಲ್ಲಾ ಅಂತ ಅಲ್ಲ. ಆದರೆ ಅವುಗಳ ಗುಣಮಟ್ಟವಿಲ್ಲ ಎನ್ನುವುದು ಮತ್ತೆ ಹೆಚ್ಚು ವೈವಿಧ್ಯತೆ ಇಲ್ಲದೇ ಇರುವುದು ಕೊರಗು.

ಇದು ನಮ್ಮ ಮಡಿವಂತಿಕೆಯ ಫಲವಾದರೆ ಮುಂದೆ ನಮಗೆ ಕಾಣಸಿಗುವುದು ಇನ್ನೊಂದು ರೋಗ ಅದು, ನಮ್ಮ ಭಾಷೆಯಲ್ಲಿ ಕೆಲವು ವಿಷಯಗಳ ಹೇಳಲು ಸಾಧ್ಯವಿಲ್ಲ ಎಂದು ನಮ್ಮಲ್ಲಿ ನಾವೇ ಹಾಕಿಕೊಂಡ ಒಂದು ಬಂಧನ. ಮುಖ್ಯವಾಗಿ ಒಂದು ಜ್ಞಾನಹೀ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು ಅಂದರೆ ಆಂಗ್ಲಕ್ಕೆ ಮೊರೆ ಹೋಗಬೇಕು ಎಂದು ನಾವು ಸಮಾಜದಲ್ಲಿ ಬಿತ್ತಿ ನಮ್ಮ ಜನತೆಗೆ ಒಂದು ದೃಷ್ಟಿಯಲ್ಲಿ ಬೇರೆ ಭಾಷೆ ನಮಗಿಂತ ದೊಡ್ಡದು ಎಂಬ ತಪ್ಪು ಗ್ರಹಿಕೆಯನ್ನು ಹಂಚುತ್ತಿದ್ದೆವೆ.
ನಮ್ಮ ಕನ್ನಡ ಜನ ಬಯಸುವ ಎಲ್ಲಾ ಕಾಮಗಳು ಅಂದರೆ ಅವನು ಮೊಬೈಲ್ ತಂತ್ರಜ್ಞಾನ ಹಿಡಿದು ಲೈಂಗಿಕ ಎಲ್ಲಾ ವಿಷಯಗಳು ನಮ್ಮ ಭಾಷೆಯಲ್ಲೇ ಸಿಕ್ಕರೆ ನಮಗೆ ಇರುವ ಅನೇಕ ತಪ್ಪು ಗ್ರಹಿಕೆಗಳನ್ನು ದೂರ ಮಾಡುತ್ತದೆ.

ಇಲ್ಲಿ ಇನ್ನೊಂದು ವಿಷಯ ಹೇಳಬೇಕು.ಎಲ್ಲಾ ಇಲ್ಲ ಅಂತ ಅಲ್ಲ, ಅವು ಇದ್ದರು ಜನರಿಗೆ ಮುಟ್ಟಿಲ್ಲ, ವನಸುಮಗಳಾಗಿ ಯಾರದೊ ಒಬ್ಬರ ಸ್ವತ್ತುಗಳಾಗಿವೆ. ನಾವು ಜುಟ್ಟಿಗೆ ಮಲ್ಲಿಗೆ ಹೂವಿನ ಸಾಹಿತ್ಯಕ್ಕೆ FULLSTOP ಹಾಕಿ, ಹೊಟ್ಟೆಗೆ ಹಿಟ್ಟು ತರುವ ಸಾಹಿತ್ಯಕ್ಕೆ ಕಾಮ(,) ಹಾಕಬೇಕು.






No comments: