Saturday, June 09, 2007

ನೈತಿಕತೆಯನ್ನು ಮರೆತಿರುವ ನಮ್ಮ ಕಂಗ್ಲೀಷ್ ಶಾಲೆಗಳು.


ದುಡ್ದಿದ್ದರೆ ನಮ್ಮ ದೇಶದಲ್ಲಿ ನೋಡಿ ಎನು ಬೇಕಾದರೂ ಆಗುತ್ತವೇ. ಮಾಡಿರುವ ಒಂದು ಅಪರಾಧವನ್ನು ಸಾಮಜಿಕ ಕಳಕಳಿ
ಎಂದು ಬಿತ್ತರಿಸಲಾಗುತ್ತದೆ.ಕನ್ನಡ ವಿಷಯಕ್ಕೆ ಬಂದರೆ ಕಾನೂನು ಪಾಲಿಸಿ ಅದೂ ಇದು ಎಂದು ಬೊಬ್ಬೆ ಹೊಡೆಯುವ ನಮ್ಮ
ಮಾಧ್ಯಮಗಳು , ಪ್ರಕರಣವನ್ನು ಬೇರೆಡೆ ತಿರುಗುಸಿ ಇಲ್ಲಾ ಒಂದಿಬ್ಬರ ಅಮಾಯಕ ತಂದೆ ತಾಯಿಗಳ ಬಾಯಿಯಲ್ಲಿ ಮಾತುಗಳನ್ನು
ತುರುಕಿ ಜನರನ್ನು ವಂಚಿಸುವುದು ನೋಡುತ್ತ ನಗಬೇಕೋ ಇಲ್ಲಾ ಅಳಬೇಕೋ ಎಂದು ತಿಳಿಯದೇ ಇರುವಾಗ,
ದುಡ್ದು ಕೊಟ್ಟರೆ stayfreee ಕೂಡ ಹಾಕಿಕೊಳ್ಳುವದಕ್ಕೆ ಹಿಂಜರಿಯದ ಒಂದು ವರ್ಗ ಕೂಡ ಇದೆ, ಇವರನ್ನು stayfree ವರ್ಗ ಎಂದೇ ಕರೆಯೋಣ. ರಾಜಕರಣೀಗಳು,
ಸಾಹಿತಿಗಳು ಮತ್ತು ಪತ್ರಕರ್ತರ ಇರುವ ಈ ದಂಡು, ವ್ಯವಸ್ತಿತವಾಗಿ ವಿಷಯವನ್ನು ಮೇಲ್ವರ್ಗ-ಕೀಳ್ವರ್ಗ, ಐ.ಟಿ-ಬಿ.ಟಿಯ ಒಂದು ಟಚ್ ಕೊಟ್ತ್ತು
ಮುಖ್ಯ ವಂಚನೆಯನ್ನು ಮರೆಮಾಚುವ ಕೆಲ್ಸಕ್ಕೆ ಸಂಪೂರ್ಣ ಸಾಥ್ ಕೊಡುತ್ತವೆ.
ಮುಖ್ಯ ವಂಚನೆ ಎಂದರೇನು ??
ಈ ಶಾಲೆಗಳು ಸರಕಾರಕ್ಕೇ ಅನೇಕ ವರ್ಶಗಳಿಂದ ಕನ್ನಡ ಮಾಧ್ಯಮಗಳಲ್ಲಿ ಭೊಧನೆ ಮಾಡುತ್ತವೆ ಎಂದು ಮೋಸ ಮಾಡಿ,
ಇಲ್ಲಿ ಅಮಾಯಕ ಜನರಿಗೆ ನಮ್ಮ ಹತ್ತಿರ ಮಾನ್ಯತೆ ಇದೆ, ನಾವು ಪಾಠ ಮಾಡುವದೆಲ್ಲಾ ಸರಕಾರ ಪಠ್ಯಕ್ರಮ ಎಂದು ಬೂಸಿ ಬಿಟ್ಟು,
ಈ ಫೀಸು, ಆ ಫೀಸು, ಬಿಲ್ಡಂಗ್ ಡೊನೆಷನ್ ಎಂದು ಲೂಟಿ ಮಾಡುತ್ತ ಇರುವುದು ನಮ್ಮ stayfree ವರ್ಗಕ್ಕೆ ತಿಳಿದದೇ ಇರುವುದು ಮತ್ತು
ತಿಳಿದರೂ ಗೊತ್ತಿಲ್ಲದೇ ಇರುವುದು ಜಾಣಕುರುಡೇ ಸರಿ.
ತಮ್ಮ ಅಕ್ರಮಗಳು ಯಾವಾಗ ಬೆಳಕಿಗೆ ಬಂದವೋ ಆಗ ವಿಷಯವನ್ನು ಮುಚ್ಚಿಡುವ ಪ್ರಯತ್ನ ನಡೆಯುತ್ತ ಬಂದಿದೆ, ಕಾಲಹರಣ ಮಾಡಲು
ಕೋರ್ಟಿಗೆ ಹೋಗಿ ಅವರ ಕೈನಲ್ಲೂ ಚಿಮಾರಿ ಹಾಕಿಸಿಕೊಂಡಿರುವ ಈ ಶಾಲೆಗಳು , ತಮ್ಮ ಕ್ರಮಕ್ಕೆ ಪೋಷಕರೇ ಕಾರಣ ಎಂದು ಗೂಬೆಯನ್ನು
ಅವರ ಮೇಲೆ ಕೂರಿಸುವ ಮತ್ತು ಅವರ ಕೈನಲ್ಲಿ ಪ್ರತಿಭಟನೆ ಮಾಡಿಸುವ ಚಿಲ್ಲರೆ ರಾಜಕರಣ ಮಾಡುತ್ತಿವೆ. ಇವರು ಕಳ್ಳ ಕೆಲಸವನ್ನು ಮಾಡಲು ಹೋರಟಾಗ
ಯಾವ ಪೋಷಕರು ಒತ್ತಾಯ ಮಾಡಿದ್ದರು ಎಂದು ಹೇಳಲಿ ನೋಡೊಣ. ಜನರನ್ನು ಲೂಟಿ ಮಾಡಿ ಡೊನೆಷನ್ ತೆಗೆದುಕೊಳ್ಳುವದನ್ನು ಯಾವ ಪೊಷಕರು
ಹೇಳಿಕೊಟ್ಟರೋ ನಾ ಕಾಣೆ. ಅದೇ ಪೋಷಕರು ನಾಳೇ ಡೊನೆಷನ್ ಇಲ್ಲದೇ ನಡೆಸುತ್ತಾರ ಎನ್ನುವುದು ಯಕ್ಷಪ್ರಶ್ನೆ.
ಒಂದು ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸುವುದು ಯಾಕೆ, ಮುಂದೆ ತಮ್ಮ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆ ಆಗುತ್ತಾರೆ, ಒಂದು ಒಳ್ಳೆಯ
ಮಾನವೀಯ ಮೌಲ್ಯಗಳನ್ನು ಅಭ್ಯಸಿಸುತ್ತಾರೆ ಎನ್ನುವ ಒಂದು ನಂಬಿಕೆ ಮೇಲೆ. ಆದರೆ ಇಲ್ಲಿ ನೋಡಿ ವೈಚಿತ್ರ್ಯ, ಶಾಲೆಯ ಆಡಳಿತವನ್ನು ನೋಡಿ ಮಕ್ಕಳು
ಕಲಿಯುವುದೇ ಬೇರೆ
೧) ಸರಕಾರಕ್ಕೆ ಸುಲಭವಾಗಿ ವಂಚನೆ ಮಾಡಬಹುದು
೨) ದುಡ್ದಿದ್ದರೆ ಸಾಕು, stayfree ವರ್ಗ ನಮ್ಮ ತೆಕ್ಕೆಯಲ್ಲಿ ..
೩) ಯಾವುದಕ್ಕೋ ಪರವಾನಿಗೆ ಪಡೆದು , ಇನ್ಯಾವುದೋ ಕೆಲ್ಸ ಮಾಡುವುದು.
ಉಧಾ:- ನಾಳೆ ಶಿವಕಾಶಿಯಲ್ಲಿ ಪಟಾಕಿ ಮಾಡಲು ಪರವಾನಿಗೆ ಪಡೆದು, ಬಾಂಬ್ ಮಾಡಲು ಹೋರಟರೆ ಅದನ್ನು ನಾವು ಸಮರ್ಥನೆ ಮಾಡಬೇಕೆ ??
ಆವಗಲೂ ಕೂಡ ಈ ನಮ್ಮ stayfree ವರ್ಗ ಪಾಪ ತುಂಬಾ ಮಕ್ಕಳ ಭವಿಷ್ಯವಿದೆ ಎಂದು ಸಾಮಾಜಿಕ ಕಳಕಳಿ ತೋರುವುದೇ ??. ಇದು ಬಡವರ ಮೇಲೆ ಮಾಡುತ್ತಿರುವ
ಧಬ್ಬಾಳಿಕೆ ಎಂದು ಬೊಬ್ಬೆ ಹೊಡೆಯುವುದೇ? .
ಅಷ್ತು ಮಕ್ಕಳ ಬಗ್ಗೆ ಕಳಕಳಿ ಇರುವ stayfree ವರ್ಗ ಓದುವ ವಯಸ್ಸಲ್ಲಿ ಕೆಲಸ ಮಾಡುತ್ತಿರುವ ಬಾಲ ಕಾರ್ಮಿಕರ ಬಗ್ಗೆ ದನಿ ಎತ್ತಲ್ಲಿ. ಅವರನ್ನು ಪಾಪಕೂಪದಿಂದ ಬಿಡುಗಡೆಗೊಳಿಸಿ
ಶಾಲೆಗೆ ಸೇರಿಸಲಿ , ಅದನ್ನು ಬಿಟ್ಟು ದುಡ್ದಿಗೆ ಜೋತು ಬಿದ್ದು ನಂದೆಲ್ಲಿ ಇಡಲಿ ನಾರಾಯಣ ಮೂರ್ತಿ ಎಂದು ಬಾಯಿಗೆ ಬಂದ ಹಾಗೆ ಮಾತನಾಡುವುದು. ಅಕ್ರಮವನ್ನು ಸಕ್ರಮ ಮಾಡಲು
ಹೋಗುವುದು ಅವರಿಗೆ ಸರಿ ಕಾಣುವದಿಲ್ಲ. ಸ್ವಲ್ಪ ಸಾಮಾಜಿಕ ಖಳ-ಖಳಿ ತೋರುವ ಬದಲು, ಸಾಮಾಜಿಕ ಬದ್ಧತೆ ತೋರಿಸಲಿ ಸಾಕು.

1 comment:

Anonymous said...

ನಿಮ್ಮ ಲಾಜಿಕ್ ಸರಿಯಾಗಿದೆ, ಆದರೆ ಕನ್ನಡ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ನಾವು ಯೋಚಿಸಬೇಕು ಮತ್ತು ಸರಕಾರ ಅದರ ಬಗ್ಗೆ ಗಮನ ಹರಿಸಬೇಕು.

ಒಂದು ರೀತಿಯಲ್ಲಿ ಹಿಂದಿನ ಸರಕಾರಗಳೇ ಕಾರಣ, ಸರಕಾರಿ ಶಾಲೆಗಳನ್ನು ತಿಪ್ಪೆ ಮಾಡಿ, ಜನರನ್ನು ಭಯಬೀತರನ್ನಾಗಿ ಮಾಡಿ, ಕಾನ್ವೆಂಟ್ ಸೇರುವ ಹಾಗೆ ಮಾಡಿದ್ದೆ ಅದರ ಸಾಧನೆ.