Thursday, November 09, 2006

ಪುರುಷೊತ್ತಮ

ಪುರುಷೊತ್ತಮ
============
ಬಾಯಲ್ಲಿ ITC ಕಿಂಗು,
ತುಟಿಗಳಿಗೆ ಒಂದು ರಂಗು.


ಕೈಯಲ್ಲಿ ಕೊಡೆ ರಮ್ಮಿನ ಗ್ಲಾಸು,
ಇದೆ ತಾನೇ ಹದಿಹರೆಯದವರ ಕನಸು.


ಜಗಿಯುತ್ತಿದ್ದರೆ ಮಾಣಿಕಚಂಧ,
ಪಸರಿಸುವುದು ಅದರ ಗಂಧ.


ಬೇಸರಕ್ಕೆ ಒಂದೆರೆಡು ಪ್ಯಾಕ್ ಆಟ,
ಮನದ ನೆಮ್ಮದಿಗೆ ಒಂದು ಪಾಠ.


ಬೆನ್ನತ್ತಿದರೆ ಕುದುರೆ ಬಾಲ,
ತೀರುವುದು ಎಲ್ಲಾ ಸಾಲ.


ಇವುಗಳ ಜೊತೆ ಇದ್ದರೆ ಒಬ್ಬಳು ಗರ್ಲಫ್ರೆಂಡು
ಸ್ವರ್ಗಕ್ಕೆ ಕಿಚ್ಚೆಬ್ಬಿಸುವನು ಆ ಗಂಡು

ಶಾಸನ ವಿಧಿಸಿದ ಎಚ್ಚರಿಕೆ
===================
೧) ಸಿಗರೇಟ್ ಸೇವನೆ ಆರೊಗ್ಯಕ್ಕೆ ಹಾನಿಕಾರ.
೨) ಗುಟ್ಕಾ ಸೇವನೆ ಕ್ಯಾನ್ಸರಗೆ ಆಹ್ವಾನ.
೩) ಕುಡಿತದಿಂದ ಸಂಸಾರ ನಾಶ.
೪) ಕುದುರೆ ದಾಸ,ಹೆಂಡತಿ ಮಕ್ಕಳ ಉಪವಾಸ

4 comments:

Sushrutha Dodderi said...

ಸುಂದರ ಮಾರ್ಮಿಕ ಕಿರುಗವನ. ಪ್ರಯಾಸವಿಲ್ಲದೇ ಮೂಡಿಬಂದಿರುವ ಅಂತ್ಯಪ್ರಾಸಗಳು ಕವನವನ್ನು ಚೆಂದವಾಗಿಸಿದೆ.

ಪವ್ವಿ said...

ಧನ್ಯವಾದ ಸುಶ್ರುತ ..

Sushrutha Dodderi said...

ಚುಂ-ಬನವಾಸಿಯ ಕೊಂಡಿಯೊಂದನ್ನು ನನ್ನ ಮೌನಗಾಳದ ತುದಿಗೆ ಸಿಕ್ಕಿಸುತ್ತಿದ್ದೇನೆ: ನೀವು ಆಕ್ಷೇಪಿಸಲಾರಿರಿ ಎಂಬ ಭರವಸೆಯೊಂದಿಗೆ.

Enigma said...

enri bariyodu nillisbitra?