Tuesday, July 04, 2006

ಕನ್ನಡದ ಬಗ್ಗೆ ಕೀಳರಿಮೆ ಇರುವವರಿಗೆ SHAME SHAME ....

ಮೊನ್ನೆ ಗೆಳೆಯರ ಜೊತೆ ಕಾಫಿ-ಡೇಯಲ್ಲಿ ಕುಳಿತಿದ್ದೆ, ಹಿಂದಿ ಮತ್ತು ಆಂಗ್ಲ ಹಾಡುಗಳಿಗೆ ತಲೆ ಕುಣಿಸುತ್ತ ಹುಡುಗ-ಹುಡುಗಿ ಭೇದವಿಲ್ಲದೆ ಹುಕ್ಕಾ ಮತ್ತು ದಂ ಎಳೆಯುತ್ತಿದ್ದ ಯುವ ಜನಾಂಗವೇ ಅಲ್ಲಿ ನೆಲಸಿತ್ತು. ನಮಗೆ ಬೇಕಾದ ಹಾಡುಗಳನ್ನು ಜ್ಯೂಕ್ ಬಾಕ್ಸ ಇರುವದರಿಂದ ಆ ಹುಡುಗರು ಪಕ್ಕದಲ್ಲಿ ಇರುವ ಹುಡುಗಿಗೆ, ಹಳದಿ ಬಣ್ಣ ಹಾಕಿದ ಆಂಟಿಗೆ ತಮ್ಮ ಹಾಡುಗಳನ್ನು Dedicate ಮಾಡುತ್ತ ಇದ್ದರು, ಆದರೆ ಒಂದೇ ಒಂದು ಕನ್ನಡ ಹಾಡು ಹಾಕಿ ಅಲ್ಲಿನ hep ಜನಾಂಗದ ಮುಂದೆ ಹಳ್ಳಿ ಗಮಾರನಾಗುವ ಗೋಜಿಗೆ ಯಾರು ಹೋಗಲಿಲ್ಲ. ನಮಗೆ ಅನಿಸಿತು ಅಲ್ಲಿ ಮೂಲೆ ಮೂಲೆಯಲ್ಲಿ ಕೆಲ ಕನ್ನಡ ಮಾತನಾಡುವ ಯುವಕ-ಯುವತಿಯರಿಗೆ ಕನ್ನಡ ಹಾಕಲು ಹಿಂಜರಿಕೆ ಇರಬಹುದು, ಹಾಕಿದರೆ ಸ್ವಲ್ಪ ಧೈರ್ಯ ಬರುತ್ತದೆ ಅಂತ ನಾವೇ ೪-೫ ಹಾಡುಗಳನ್ನು ೧೦ ನಿಮಿಷಗಳ ಅಂತರದಲ್ಲಿ ಹಾಕುತ್ತ ಬಂದೆವು. ನಮ್ಮ ಊಹೆಯ ಪ್ರಕಾರ ಆಂಗ್ಲ ಮಾತನಾಡುವ ಹುಡುಗರು
ಮುನಿಸಿಕೊಳ್ಳಬಹುದು ಹಾಗೇ ನಮ್ಮ ಕನ್ನಡ ಹುಡುಗರು ಹಾಡುಗಳನ್ನು enjoi ಮಾಡಬಹುದು ಅಂತ ನಮ್ಮ ಅನಿಸಿಕೆ ಪೊಳ್ಳಾಯಿತು.
ಅದಕ್ಕಿಂತ ನಮಗೆ ಆಶ್ಛರ್ಯವೆನಿಸಿದ್ದು, U2 ಕನ್ನಡ ವಾಹಿನಿಯಲ್ಲಿ VJ ಆಗಿರುವ ಒಂದು ಹುಡುಗಿ ಕನ್ನಡ ಹಾಡು ಬಂದಾಗ ಮುಖ ಸಿಂಡರಿಸಿದ್ದು ನೋಡಿ ನನಗೆ ಬಹಳ ಆಶ್ಚರ್ಯವೆನಿಸಿತು, ಕಾರ್ಯಕ್ರಮದಲ್ಲಿ ಇದು ಮಾಡಿ,ಅದು ಮಾಡಿ ಎಂದು ಬೋಧಿಸುವ ಹುಡುಗಿಯ ಬಣ್ಣ ಬಯಲಾಯಿತು.

ಯಾಕೆ ಇಷ್ಟು ಕೀಳರಿಮೆ ?? ನಮ್ಮ ಮಾತೃಭಾಷೆಯ ಬಗ್ಗೆ ಯಾಕೆ ಹೀಗೆ ತಿರಸ್ಕಾರ ತೊರುತ್ತ ಇದ್ದೆವೆ ? ಪ್ರಶ್ನೆಗಳು ನನ್ನನ್ನು ಕಾಡುತ್ತ ಇತ್ತು. ಆ ನಿಟ್ಟಿನಲ್ಲಿ ಒಂದು ಪುಸ್ತಕ ಒದುವಾಗ ಒಂದು ಸುಂದರ ಶ್ಲೋಕ ನೆನಪಿಗೆ ಬಂತು.

"ಮಾತೃಭಾಷಂ ಪರಿತ್ಯಜ್ಯ
ಯೋsನ್ಯಭಾಷಮುಪಾಸತೇ
ತತ್ರ ಯಾನ್ತಿ ಹಿ ತೇ ದೇಶಾ:
ಯತ್ರ ಸೂರ್ಯೋ ನಾ ಭಾಸತೇ

ಇದು ಸಂಸೃತ ಶ್ಲೋಕ, ಇದರ ಅರ್ಥವಿಷ್ಟೆ
" ಯಾರು ತನ್ನ ತಾಯಿ ಭಾಷೆಯನ್ನು ಮರೆತು ಬೇರೆ ಭಾಷೆಯ ಗುಲಾಮನಾಗುತ್ತಾನೊ ಅವನು ಸೂರ್ಯನಿಲ್ಲದ ಅಂಧಕಾರ ಲೋಕಕ್ಕೆ ಹೋಗುತ್ತಾನೆ".

ನಮ್ಮ ಯುವಜನಾಂಗ ಭಾಷೆ ಕೇವಲ ಒಂದು ವ್ಯವಹಾರಿಕ ಸಂಪರ್ಕ ಅಂತ ಕೇವಲ ಮಾತನಾಡುವದರ ಬದಲು ಅದರ ಮೇಲೆ ಒಂದು ಸಮುದಾಯ ನಿಂತಿದೆ ಎಂಬುದನ್ನು ಮನಗಾಣಬೇಕು.

ಸುಮ್ಮನೆ ನಮ್ಮ ಸಂಸ್ಕೃತಿಗೆ ಪಾಶ್ಚಿಮಾತ್ಯ ಸಂಸ್ಕೃತಿ ಕಾರಣ ಎಂದು ದೂರುವದನ್ನು ಬಿಟ್ಟು ಅವರ ಭಾಷಭಿಮಾನದ ಒಂದು ಅಂಶ ನಮ್ಮ ಯುವ ಜನತೆ ಕಲಿತರೆ ನಮ್ಮ ಭಾಷೆ ಇನ್ನೂ ಶ್ರೀಮಂತವಾಗುತ್ತದೆ. ಸುಮ್ಮನೆ prada,armani ಹಾಕಿಕೊಂಡ ಮಾತ್ರಕ್ಕೆ ನಾವು ಅವರು ಆಗುವದಿಲ್ಲ,

ಮೊದಲ ಮಹಾಯುದ್ದದಲ್ಲಿ ಜರ್ಮನಿ ಫ್ರಾನ್ಸ್ ವಶಪಡಿಸಿಕೊಂಡಾಗ ಜರ್ಮನ್ ಭಾಷೆಯನ್ನು ಆಗಿನ ಕೈಸರ್ ಎಲ್ಲಾ ಕಡೆ ಜರ್ಮನ್ ಭಾಷೆಯನ್ನು ತುರುಕಿದರು, ಕಲಾ ಪ್ರೇಮಿಯಾಗಿದ್ದ ಕೈಸರನ ಹೆಂಡತಿ Auguste Viktoria ಒಮ್ಮೆ ಒಂದು ಕಲಾಶಾಲೆಗೆ ಬೇಟಿಕೊಟ್ಟಳು ಅಲ್ಲಿ ಒಂದು ಹುಡುಗ ಸುಂದರವಾಗಿ ಒಂದು ಚಿತ್ರ ಬಿಡಿಸಿದ್ದ, ಅದನ್ನು ನೋಡಿ ಸಂತೋಷಗೊಂಡು ನಿನಗೆ ಎನು ಬೇಕು ಅಂದರೆ ಆ ಹುಡುಗ ತನ್ನ ಭಾಷೆಯನ್ನು ಮರಳಿ ಪಡೆದ. ಇಂತಹ ಸ್ಪೂರ್ತಿ ಕಥೆಗಳನ್ನು ನಮ್ಮ ಯುವಜನಾಂಗ ಎಕೆ ಮಾದರಿಯಾಗಿ ತೆಗೆದುಕೊಳ್ಳುವದಿಲ್ಲ?

ನಾಚಿಕೆ ಆಗಬೇಕು ಕನ್ನಡ ಬಂದಾಗ ಕೀಳರಿಮೆಯಿಂದ ತಲೆ ತಗ್ಗಿಸುವರಿಗೆ, ಸ್ವಂತ ಮಾತೃಭಾಷೆಯನ್ನು ಪ್ರೇಮಿಸದ ಯಾರು
ಎನೂ ಆಗಲು ಸಾಧ್ಯವಿಲ್ಲ. ಅಂತ ಮಾನಗೇಡಿಗಳಿಗೆ shame shame ...

5 comments:

Anonymous said...

ಕನ್ನಡಕ್ಕೆ ಮೊದಲ ಶತ್ರು ಇಂತಹ ಕಿಳರೆಮೆ ಹೊಂದಿರುವ ಕನ್ನಡಿಗರು. U2 VJಯ ಬಗ್ಗೆ ನಿಜ ಬಣ್ಣ ತಿಳಿದು ಬೇಸರವಾಗಲಿಲ್ಲ. ಯಾಕೆಂದರೆ ಕರ್ನಾಟಕದಲ್ಲಿದ್ದುಕೊಂಡು ತಮಿಳರ ಬಾಲ ಹಿಡಿದುಕೊಂಡಿರೊ ಸಂಘದ ಸದಸ್ಯೆ ಅವಳು.

Anonymous said...

VJ yaru guru ?, naachike aagabeku. avalu on air bamdagaa ugibeku

purOhita said...

ಬಹಳ ಚೆನ್ನಾಗಿ ಬರೆದಿದ್ದೀರಿ. ಆದರೆ ಶ್ಲೋಕದ ಮೂಲ?

ಇದೇ ಅರ್ಥವನ್ನು ಕೊಡುವ ಒಂದು ಶ್ಲೋಕ ಭಗವದ್ಗೀತೆಯಲ್ಲಿದೆ:

ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ |
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ ||

ಇಲ್ಲಿ ಸ್ವಧರ್ಮವೆಂದರೆ ಸ್ವಭಾಷೆಯೆಂದು ಅರ್ಥೈಸಿಕೊಳ್ಳಬೇಕು. ಪರಭಾಷೆಯನ್ನು ಸು-ಅನುಷ್ಠಾನ, ಎಂದರೆ ಚೆನ್ನಾಗಿ ಮಾತಾಡಿ ಅದರಲ್ಲಿ ಪಾಂಡಿತ್ಯವನ್ನು ಪಡೆಯುವುದಕ್ಕಿಂತ ಸ್ವಭಾಷೆಯಲ್ಲಿ ಪಾಂಡಿತ್ಯವಿಲ್ಲದಿದ್ದರೂ ಅದನ್ನೇ ಅನುಷ್ಠಾನ ಮಾಡುವುದು ಶ್ರೇಯಕರ. ಸ್ವಭಾಷೆಯನ್ನಾಡುತ್ತ ನಿಧನಹೊಂದುವುದು ಶ್ರೇಯಕರವು, ಪರಭಾಷೆಯು ಭಯಂಕರವು. ಆ ಪರಭಾಷಾ ಉಪಾಸಕರು ಎಲ್ಲಿಗೂ ತಲುಪುವುದಿಲ್ಲ. ಇಲ್ಲೇ ಮೆರೆದು ನಾಟಕದ ಬೊಂಬೆಗಳಂತೆ ಮತ್ತೆ ನಾಟಕಕ್ಕೆ ಬರುತ್ತಾರೆ.

purOhita said...
This comment has been removed by a blog administrator.
Anveshi said...

ನಿಮ್ಮ Shame Shameಗೆ ನಮ್ಮದೂ Same Same!