ಒಂದು ವರುಶದ ತನಕ ಬ್ಲಾಗ್ ಮಾಡುವುದು ಬೇಡ ಎಂದುಕೊಂಡಿದ್ದೆ, ಆದರೆ ನಮ್ಮ ರಾಜ್ಯ ಸರಕಾರದ ಕನ್ನಡಿಗರನ್ನು ನಡೆಸುಕೊಳ್ಳುತ್ತ ಇರುವ ರೀತಿ ಮತ್ತು ಆಡಳಿತ ವೈಫಲ್ಯ ಎಲ್ಲವನ್ನು ಸಹಿಸಿಕೊಂಡಿದ್ದೆ, ಆದರೆ ಮೊನ್ನೆ ಮನ ತಡಿಯಲಿಲ್ಲ. ೨ ದಿನಗಳಿಂದ ಕೆ ಎಸ್ ಆರ್ ಟಿ.ಸಿ ಮತ್ತು ಬಿ.ಎಂ.ಟಿ.ಸಿ ಸಂಸ್ಥೆಗಳ ಮುಶ್ಕರ ನಡೆಯುತ್ತಿದೆ, ಕೆಲವು ಮಾನವೀಯ ಬೇಡಿಕೆಗಳನ್ನು ೧೬ ವರುಶಗಳಿಂದ ಕೇಳುತ್ತ ಇರುವ ಸಂಗಟನೆಗಳು ಒಂದೆಡೆಯಾದರೆ ಇನ್ನೊಂದಡೆ ಇದರ ತೊಂದರೆಯನ್ನು ಅನುಭವಿಸುತ್ತ ಇರುವ ಸಾಮಾನ್ಯ ಜನ.
ಇದು ಒಂದು ಆಡಳಿತದಲ್ಲಿ ಸರ್ವೆ ಸಾಮಾನ್ಯ, ಒಂದು ಸಂಸ್ಥೆಯ ನೌಕರರು ೧೬ ವರುಶಗಳ ನಂತರ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದರೆ ಇದು ಒಂದು ರೀತಿ ಸಹನೆಯ ಕಟ್ಟೆ ಒಡೆದು ಜ್ವಾಲಾಮುಖಿ ಸ್ಪೋಟಿಸಿದ ಹಾಗೆ. ಅಲ್ಲಿ ತನಕ ಎಂದರೆ boiling point ತನಕ ಬಿಟ್ಟ್ಟಿರುವುದು ಆಡಳಿತ ಯಂತ್ರದ ದೊಡ್ಡ ವೈಫಲ್ಯ. ಈ ಬೇಡಿಕೆಗಳು ಮಂತ್ರಿಗಳಿಗೆ ಗೊತ್ತಿರಲಿಲ್ಲವೇ, ಇಲ್ಲ ೩೬ ಗಂಟೆಗಳ ಸೇವೆ
ಮಾಡುವುದು ಬೇಡ ಎನ್ನುವ ಬೇಡಿಕೆ ಅಮಾನವೀಯವೇ ?
ಈಶಾನ್ಯ ಭಾರತದ ಜನರು ಗುಳೆ ಹೋದರೆ, ಅವರಕ್ಕಿಂತ ಮುಂಚೆ ನಮ್ಮ ಮಂತ್ರಿ ಮಹೋದಯರು ಹೋಗಿ ಅವರು ಅಂಗಲಾಚಿದ್ದು,
ಸಾಲದಕ್ಕೆ ಅವರ ರಾಜ್ಯಕ್ಕೆ ಬೇಟಿಕೊಟ್ಟು, ದಯವಿಟ್ಟು ಬನ್ನಿಪ್ಪ, ನೀವು ಇಲ್ಲದೆ ನಮ್ಮ ಕರುನಾಡಿನಲ್ಲಿ ಬೆಳ್ಳಿಗ್ಗೆ ಆಗುತ್ತಿಲ್ಲ, ಕೋಳಿ ಕೂಗುತ್ತಿಲ್ಲ ಎಂದು ಬೇಡಿಕೊಂಡಿದ್ದು ನೋಡಿದರೆ, ಆ ಜನರು ಇಲ್ಲದೆ ನಾವು ಬದುಕುವದಕ್ಕೆ ಆಗುವದಿಲ್ಲ ಎನ್ನುವ ಹಾಗೆ ಇದೆ.

ಇದೆ ಅಕ್ಕರೆ ಮತ್ತು ಎನು ಬೇಡ ಮಂತ್ರಿಯ ಕೆಲ್ಸವನ್ನು ಬೆಂಗಳೂರಿನಲ್ಲಿ ಕಸ ಸಮಸ್ಯೆ ಆದಾಗ ಇಲ್ಲ ಬಿ.ಎಂ,ಟಿಸಿ ಮುಶ್ಕರದಲ್ಲಿ ತೋರಿಸಿದ್ದರೆ ಕನ್ನಡಿಗರಿಗೆ ಇಂದು ಸಮಸ್ಯೆ ಆಗುತ್ತ ಇರಲಿಲ್ಲ. ಮಂತ್ರಿಯಗಿರಿ ಎನ್ನುವುದು ಆಯಾ ವಿಭಾಗಕ್ಕೆ ರಾಜ ಇದ್ದ ಹಾಗೆ,
ಎಲ್ಲಾ ಚೆನ್ನಾಗಿ ನಡೆದು, ಒಳ್ಳೆ ಹೆಸರು ಬಂದರೆ ಇಲ್ಲ ಪ್ರಶಸ್ತಿ ಬಂದರೆ ದಿಲ್ಲಿಗೆ ಹೋಗಿ ತೆಗೆದುಕೊಳ್ಳುವದಕ್ಕೆ ಆಗುವ ಮಂತ್ರಿಗೆ
ಇದು ನಡೆಯುತ್ತದೆ ಎನ್ನುವ ಚಿಕ್ಕ ಕಲ್ಪನೆ ಇಲ್ಲವೇ. ಇಲಾಖೆಯಲ್ಲಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಗೊತ್ತಿಲ್ಲವೇ ?
ಸಂಧಾನಕ್ಕೆ ತಾವು ಇಳಿಯದೇ ಅಧಿಕಾರಿಗಳನ್ನು ಚೂ ಬಿಟ್ಟು, ಪರಿಸ್ಥಿತಿ ಮಿತಿಮೀರಿ ಹೋಗುವ ಹಾಗೆ ಮಾಡಿದ್ದು ಯಾವ ಪರಿಯ
ಆಡಳಿತ. ದೂರದ ಊರಿಗೆ ಹೋಗಿ ಅಲ್ಲಿ ಬೇಟಿ ಮಾಡಲು ಆಗುತ್ತದೆ ಎಂದರೆ ತಮ್ಮ ಇಲಾಖೆಯವರನ್ನು ಬೇಟಿ ಮಾಡುವುದು
EGO ಪ್ರಶ್ನೆ ಆಗುತ್ತದೆ.
ಕನ್ನಡಿಗರು ಕನ್ನಡ ನೆಲದಲ್ಲೇ ತಬ್ಬಲಿ ಎನ್ನುವುದು ಕೆಲವು ೪ ವರುಶಗಳಿಂದ ಹೆಚ್ಚು ಗೊತ್ತಾಗುತ್ತಿದೆ.
೧. ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸುವಕ್ಕಿಂತ ಬೇರೆ ರಾಜ್ಯದ ಜನರ ಸಮಸ್ಯೆಯೆ ಹೆಚ್ಚು.
೨. ಕನ್ನಡಿಗರು ಹಸಿವಿನಿಂದ ಗುಳೆ ಹೋದರೆ ಅದು ಚಟ, ಅದೇ ಬೇರೆ ರಾಜ್ಯದವರು ಅವರ ಮನೆಗೆ ಹೋದರೆ ಅದು ದೇಶದ ಸಮಸ್ಯೆ.
೩. ಕನ್ನಡಿಗರು ಬರ ಹಸಿವಿನಿಂದ ಒದ್ದಾಡುತ್ತ ಇದ್ದರೂ, ಅಧಿಕಾರಕ್ಕೆ ಯಾರು ಬರಬೇಕು ಎನ್ನುವದರಲ್ಲೇ ನಮ್ಮ ಸರಕಾರ ಬಿಜಿ.

೫. ಕನ್ನಡ/ಕರ್ನಾಟಕ/ಕನ್ನಡಿಗರ ಸಮಸ್ಯೆಗಳಿಗೆ ಸಂಸತ್ತಿನಲ್ಲಿ ದನಿ ಎತ್ತದಿರುವುದು.
೬. ಅವ್ಯಹಿತವಾಗಿ ಹಿಂದಿ ಹೇರಿಕೆಗೆ ಪ್ರೋತ್ಸಾಹ ಕೊಡುವುದು.
ಒಟ್ಟಿನಲ್ಲಿ ಮೂಡುವ ಪ್ರಶ್ನೆ ಒಂದೇ, ಕನ್ನಡ ನೆಲದಲ್ಲಿ ಕನ್ನಡಿಗನಾಗಿ ಹುಟ್ಟಿದ್ದೇ ತಪ್ಪಾ ?
WE ARE WITH YOU ಅಂತ ಕನ್ನಡಿಗರಿಗೂ ಹೇಳುವ ದಿನಗಳು ಬರುವುದು ಯಾವಾಗ ??