ಹೊಸ ವರುಷದ ಹಾರ್ದಿಕ ಶುಭಾಶಯಗಳು, ೨೦೦೯ ವರುಷ ನಿಮಗೆ ಚೆನ್ನಾಗಿರಲಿ.
Wednesday, December 31, 2008
Tuesday, December 30, 2008
ಉಪಚುನಾವಣೆಯ ಫಲಿತಾಂಶ-2008
ಚುನಾವಣೆಯ ಫಲಿತಾಂಶ ಆಚೆ ಬಂದಿದೆ,
ಕಾರವಾರ ಬಿಟ್ಟರೆ ನಾನು ಅಂದುಕೊಂಡ ಹಾಗೇಯೆ ಫಲಿತಾಂಶ ಬಂದಿದೆ. ಕಾರವಾರದಲ್ಲಿ ಕಾಂಗ್ರೆಸ್ ಗೆಲ್ಲಬಹುದಿತ್ತು,ಆದರೆ ಅದನ್ನು ಹಾಳಿ ಮಾಡಿಕೊಂಡಿದೆ. ಕೊನೆಯ ಕ್ಷಣದಲ್ಲಿ ಅಮ್ಮ-ಮಗ ಒಂದಾಗಿದ್ದು ಬಹಳ ಸಹಾಯ ಮಾಡಿದೆ. ಆದರೆ ತುರುವೆಕೆರೆ ಮಾತ್ರ ಅಚ್ಚರಿ ತಂದಿದೆ, ಕಾಂಗ್ರೆಸ್,ಜೆಡಿಎಸ್ ಮಾಡಿದ್ದ ಅಪಪ್ರಚಾರದಲ್ಲಿ ಸ್ವತ: ಜಗ್ಗೇಶ್ ಕೂಡ ಮತ್ತೆ ಅಲ್ಲಿ ನಿಲ್ಲಲ್ಲು ಬಯಸುತ್ತ ಇರಲಿಲ್ಲ. ಎಲ್ಲೊ ಒಂದು ಕಡೆ ಲಕ್ಷ್ಜೀನಾರಯಣರನ್ನು ಬಲಿ ಕೊಡ್ತಾ ಇದ್ದಾರೆ ಅನಿಸಿದ್ದು ಸಹ ನಿಜಾ.
ಗೆದ್ದೆ ಬಿಟ್ಟಿದ್ದೀವಿ ಅಂತ ಜಗ್ಗೇಶ್ ಮೆರೆಯುತ್ತ ಇದ್ದರೂ, ಸತ್ಯಕ್ಕೆ ಗೆಲುವು ಎಂದರು, ಆದರೆ ಕೊನೆಗೆ ಗೆದ್ದಿದ್ದು ಅಲ್ಲಿ ಜೆಡಿಎಸ್.ಆ ಅಚ್ಚರಿಯನ್ನು
ಪಾಪ ಲಕ್ಷೀನಾರಯಣ ಎದೆ ಒಡೆದುಕೊಂಡಿದ್ದಾರೆ. ಈ ಮಾಧ್ಯಮಗಳು ಕೂಡ ಗೆದ್ದೆ ಬಿಟ್ಟಿದ್ದೀರ ಅಂತ ಸಂದರ್ಶನ ಮಾಡಿ,ಅದರಲ್ಲಿ ಅವರು ಎಲ್ಲರಿಗೂ ಥ್ಯಾಂಕ್ಸ ಹೇಳಿದ್ದು ಆಗಿತ್ತು,ಆದರೆ ವಿಧಿಯ ಬರಹವೇ ಬೇರೆ.
ಮುಂದೆ ಎನಾಗಬಹುದು ??
* ಬಿಜೆಪಿಯನ್ನು ಇನ್ನು ಹಿಡಿಯುವರು ಇರುವದಿಲ್ಲ,ಆಡಿದ್ದೆ ಆಟ.
* ಪಕ್ಶೇತರರಿಗೆ ಸ್ವಲ್ಪ ಬಿಸಿ ತಲುಗಬಹುದು. ಒಂದಿಬ್ಬರ ತಲೆದಂಡ ಆಗಬಹುದು.
* ಕಾಂಗ್ರೆಸ್ನಲ್ಲಿ ದೊಡ್ಡ ಮಟ್ಟಿಗೆ ಸರ್ಜರಿ ಆಗಬಹುದು, ಲೋಕಸಭೆ ಚುನಾವಣೆಗೆ ಹೀಗೆ ಹೋದರೆ ಗೋತಾ..
* ಜೆಡಿಎಸ್ ಆರಕ್ಕೆ ಎರುವದಿಲ್ಲ, ಮೂರಕ್ಕೆ ಇರುವದಿಲ್ಲ.
* ಸಿದ್ದುಗೆ ಗುದ್ದುಕೊಟ್ಟು ಆಚೆ ಹಾಕಬಹುದು, ಹೊಸ ಪಕ್ಷ ಮಾಡಬಹುದು ಇಲ್ಲ,ಬಿಜೆಪಿ ಸೇರಬಹುದು.
Friday, December 26, 2008
ಬುದ್ದಿಜೀವಿಗಳ ಜೋಕುಗಳು..
೧)
ತಾವು ನಯಾ ಪೈಸೆ ಕೆಲ್ಸ ಮಾಡದೇ ಕನ್ನಡ ಚಿಂತಕರು ಎಂದು ಕರೆದುಕೊಳ್ಳುವ ಬುದ್ದೀಜೀವಿಗಳ, ಸಾಹಿತಿಗಳ, ಜ್ಞ್ನಾನಪೀಠಿಗಳ ಗುಂಪು ನಮ್ಮಲ್ಲಿ ಸಾಕಷ್ಟಿವೆ, ಕನ್ನಡಕ್ಕೆ ಹೋರಾಡುವ ಸಂಘಟನೆಯ ಸೈನಾನಿಗಳನ್ನು ಆಡಿಕೊಳ್ಳುವುದು, ಕಾಲೆಳೆಯುವುದೇ ಇವರ ಕೆಲ್ಸ... ಇವರು ಒಮ್ಮೆ ಒಂದು ಕೊಳದಿಂದ ಮೀನನ್ನು ಎತ್ತಿ ನೆಲಕ್ಕೆ ಹಾಕುತ್ತ ಇರುತ್ತಾರೆ
ಇದನ್ನು ಕನ್ನಡ ಸಾಮನ್ಯ ಜನ, ಸ್ವಾಮಿ ಎನು ಮಾಡುತ್ತ ಇದ್ದೀರಾ ಅಂತ ಕೇಳ್ತಾರೆ ??
ಅಯ್ಯೋ ಬುದ್ದು..ನಾನು ಮೀನನ್ನು ನೀರಿನಲ್ಲಿ ಮುಳುಗಿ ಸಾಯುವದರಿಂದ ತಪ್ಪಿಸುತ್ತ ಇದ್ದೇನೆ ಎನ್ನುತ್ತಾರೆ. ಇವರಿಗೆ ಕನ್ನಡ ಉಳಿಸಿ ಎಂದರೆ ಎನೂ ಮಾಡುತ್ತಾರೆ ??
೨)
ಒಮ್ಮೆ ಈ ಬುದ್ದಿಜೀವಿಗಳು ಒಬ್ಬನನ್ನು ಹಿಡಿದುಕೊಂಡಿರುತ್ತಾರೆ, ಅವನು ಬಿಡ್ರಪ್ಪೊ ಬಿಡಿ ಅಂತ ಬೊಂಬಡಾ ಹೋಡಿಯುತ್ತ ಇರುತ್ತಾನೆ. ಅದನ್ನು ನೋಡಿದ ಕನ್ನಡ ಸಾಮನ್ಯ ಜನ, ಸ್ವಾಮಿ ಎನು ಮಾಡುತ್ತ ಇದ್ದೀರಾ ಅಂತ ಕೇಳುತ್ತಾರೆ..
ಅದಕ್ಕೆ ಅವರು, ನೋಡಪ್ಪ ಇವನಿಗೆ ಒಂದು ಕೋಟ್ ಹೊಲೆದಿದ್ದೇವೆ,ಆದರೆ ಅದು ಇವನ ಅಳತೆಗೆ ಸರಿ ಹೋಗುತ್ತ ಇಲ್ಲ. ಅದಕ್ಕೆ ಇವನ ದೇಹವನ್ನು ಕತ್ತರಿಸುತ್ತ ಇದ್ದೇವೆ ಅನ್ನುತ್ತಾರೆ...
ಇವರಿಗೆ ಕನ್ನಡ ಬಗ್ಗೆ ಚಿಂತನೆ ಮಾಡಿ ಎಂದರೆ .... ಇವರು ಕಂಡಿರುವ ಚೌಕಾಸಿ ಕನಸಿಗೆ ಹೊಂದಿಸಲು ಕನ್ನಡವನ್ನು ಬಲಿಕೊಡುತ್ತರೆ ಅಷ್ಟೆ.
೩)
ಒಮ್ಮೆ ನಮ್ಮ ಜ್ಞಾನಪೀಠಿ ಎನೋ ದೀಪದ ಕೆಳಕ್ಕೆ ಹುಡುಕುತ್ತ ಇರುತ್ತಾರೆ, ಅವರಿಗೆ ಸಹಾಯ ಮಾಡೊಣ ಅಂತ ನಮ್ಮ ಕನ್ನಡ ಹೈದ ಹೋಗಿ..
ಸ್ವಾಮಿ ಎನು ಹುಡುಕುತ್ತ ಇದ್ದೀರಾ ಅಂತ ಕೇಳುತ್ತಾನೆ..
ಅದಕ್ಕೆ ಜ್ಞಾನಪೀಠಿ " ನನ್ನ ಕೀ(ಚಾವಿ) ಕಳೆದು ಹೋಗಿದೆ, ಹುಡುಕುತ್ತ ಇದ್ದೇನೆ" ಅನ್ನುತ್ತಾನೆ.
ಹೈದ ಅದಕ್ಕೆ "ಎಲ್ಲಿ ಕಳೆದುಕೊಂಡಿರಿ ಅಂತ ಕೇಳುತ್ತಾನೆ..
ಜ್ಞಾನಪೀಠಿ .. ಒ..ನಮ್ಮ ಮನೆ ಹತ್ತಿರ ಕಳೆದುಕೊಂಡೆ ಎನ್ನುತ್ತಾನೆ.
ಹೈದ ಅದಕ್ಕೆ ಯಾಕೆ ಇಲ್ಲಿ ಹುಡುಕುತ್ತ ಇದ್ದೀರಾ ಮತ್ತೆ ಅಂತ ಪ್ರಶ್ನೆ ಮಾಡಿದಾಗ
ಜ್ಞಾನಪೀಠಿ :- ಇಲ್ಲಿ ಬೆಳಕು ಇತ್ತು ಅದಕ್ಕೆ ಎನ್ನುತ್ತಾರೆ.
ಕನ್ನಡ ಹೀಗೆ ಆಗಬೇಕು, ಹಾಗೆ ಆಗಬೇಕು ಎಂದು ಇವರು ಹುಡುಕುವ ಕೆಲ್ಸಗಳು ಕೂಡ ಅಷ್ಟೆ.
Thursday, December 25, 2008
೨೦೦೮ ರ ಉಪಚುನಾವಣೆಯ ನನ್ನ ಬೆಟ್
ಮದ್ದೂರು, ಜೆ.ಡಿ.ಎಸ್;
ಮಧುಗಿರಿ, ಜೆ.ಡಿ.ಎಸ್;
ತುರುವೇಕೆರೆ, ಜೆ.ಡಿ.ಎಸ್;
ಅರಭಾವಿ, ಬಿ.ಜೆ.ಪಿ ;
ಹುಕ್ಕೇರಿ, ಬಿ.ಜೆ.ಪಿ;
ದೇವದುರ್ಗ, ಬಿ.ಜೆ.ಪಿ;
ದೊಡ್ಡ ಬಳ್ಳಾಪುರ, ಬಿ.ಜೆ.ಪಿ
ಕಾರವಾರ,ಕಾಂಗ್ರೆಸ್;
೨೦೦೮ ರ ಉಪಚುನಾವಣೆಯಲ್ಲಿ ಇದು ಹೀಗೆ ಆಗಬಹುದು ಎಂಬುದು ಎಂದು ನನ್ನ ಅಭಿಮತ, ದೊಡ್ಡಬಳ್ಳಾಪುರ,ಮದ್ದೂರು ೫೦-೫೦ ಇದೆ ಅನಿಸೊತ್ತೆ. ಒಟ್ಟಿನಲ್ಲಿ ಜೆಡಿಎಸ್ ೩-೪, ಬಿಜೆಪಿ ೪-೫, ಕಾಂಗ್ರೆಸ್ ೦-೧ ಸ್ಥಾನ ಗೆಲ್ಲಬಹುದು.
೨೦೦೮ ರ ನನ್ನ ಮೆಚ್ಚಿನ ಹಾಡುಗಳು
೨೦೦೮ರಲ್ಲಿ ನಾನು ೧೦ ಸಲಕ್ಕೂ ಕೇಳಿದ ಹಾಡುಗಳ ಪಟ್ಟಿ ಇಲ್ಲಿದೆ, ಇದರಲ್ಲಿ ನಂಬರ್ ೧, ೨ ಇಲ್ಲಾ. ನನ್ನ ಮೆಚ್ಚುಗೆ ಆದ ಹಾಡುಗಳ ಪಟ್ಟಿ ಇಲ್ಲಿದೆ ಅಷ್ಟೇ..
ಜೊತೆ ಜೊತೆಯಲಿ - ವಂಶಿ
ಆಗಲಿ ಸಂಗಮ- ಸಂಗಮ
ಒಂದೊಂದೆ ಬಚ್ಚಿಟ್ಟ ಮಾತು- ಇಂತಿ ನಿನ್ನ ಪ್ರೀತಿಯ
ನನ್ನುಸಿರು ಇರುವ-ನನ್ನುಸಿರು
ಹಿಂಗ್ಯಾಕೆ ಹಿಂಗ್ಯಾಕೆ -ಪಟ್ರೆ ಲವ್ಸ ಪದ್ಮ
ಹೇ ಹುಡುಗಿ -- -ಪಟ್ರೆ ಲವ್ಸ ಪದ್ಮ
ಸೆರೆಯಾದೆನು- ಸತ್ಯ ಇನ್ ಲವ್
ಬಾ ಮಳೆಯೇ - ಆಕ್ಸಿಡೆಂಟ್
ಅರೆರೆ ಎನೊ ಆಗುತಿದೆ- ವೆಂಕಿ
ಸುಮ್ ಸುಮ್ನೆ ಯಾಕೊ - ಗೂಳಿ
ಮುಂಗಾರು ಮಳೆ ಬಿದ್ದು ಬಿದ್ದು- ಕಾಮಣ್ಣನ ಮಕ್ಕಳು
ಹುಚ್ಚ ಅನ್ನು - ದಿಮಾಕು
ಕಣ್ ಕಣ್ಣ ಸಲಿಗೆ- ನವಗ್ರಹ
ಮಳೆಯೇ ಮಳೆಯೇ- ಆತ್ಮೀಯ
ಐ ಲವ್ ಯೂ - ಮೊಗ್ಗಿನ ಮನಸ್ಸು
ತರ ತರ ಒಂದ್ ತರ - ಬಿಂದಾಸ್
ನಿನ್ನ ನೋಡಲೆಂತೊ - ಮುಸ್ಸಂಜೆ ಮಾತು
ಗುಬ್ಬಚ್ಚಿ ಗೂಡಿನಲ್ಲಿ - ಬಿಂದಾಸ್
ಕದ್ದಳು ಮನಸ್ಸನ್ನ - ಮುಸ್ಸಂಜೆ ಮಾತು
ಮೊಡದ ಒಳಗೆ-ಪಯಣ
ನಿನ್ನ ಪೂಜೆಗೆ ಬಂದೆ ಮಾದೇಶ್ವರ- ಸೈಕೊ
ಮೊದಲ ಸಲ- ಅಂತೂ ಇಂತೂ ಪ್ರೀತಿ ಬಂತು
ಖುಷಿಯಾಗಿದೆ - ತಾಜ್ ಮಹಲ್
ಸಂಗಾತಿ- ಸಂಗಾತಿ
ಮಾತಿನಲ್ಲಿ ಹೇಳಲಾರೆನು - ಬೊಂಬಾಟ್
ನನಗೂ ನಿನಗೂ - ಅರಮನೆ
ಮನಸ್ಸು ರಂಗಾಗಿದೆ - ಸ್ಲಂಬಾಲ
ಚಿತ್ರಾನ್ನ - ಬುದ್ದಿವಂತ
ಜಿಂಕೆ ಮರೀನಾ - ನಂದ ಲವ್ಸ ನಂದಿತಾ
ಪ್ರೀತಿ ಬಂದೈತೆ -ನಂದ ಲವ್ಸ ನಂದಿತಾ
ನನ್ನ ಚೆಲುವೆ- ಚೈತ್ರದ ಚಂದ್ರಮ್ಮ
ಐತಲಕಡಿ- ಗಜ
ಚೋರಿ ಚೋರಿ- ಮಸ್ತ್ ಮಜಾ ಮಾಡಿ
ಯಾರೋ ಕಟ್ಟಿದ್ದು - ಮಾದೇಶ
ನನಗೂ ಗೆಳೆಯ ಬೇಕು- ಮೊಗ್ಗಿನ ಮನಸ್ಸು
ಮಾಯವಾಗಿದೆ ಮನಸು - ಹಾಗೆ ಸುಮ್ಮನೆ
ಭುವನಂ ಗಗನಂ- ವಂಶಿ
ಕಣ್ಣಲ್ಲೇ ಗುಂಡಿಕ್ಕೆ - ಗಂಗೆ ಬಾರೆ ತುಂಗೆ ಬಾರೆ